ಡಿಸೆಂಬರ್ 1, 2025
ಡಿಸೆಂಬರ್ 1, 2025
Snap ನ ಸುರಕ್ಷತಾ ಪ್ರಯತ್ನಗಳ ಕುರಿತು ಒಳನೋಟಗಳನ್ನು ಒದಗಿಸಲು ಈ ಪಾರದರ್ಶಕತೆಯ ವರದಿಯನ್ನು ನಾವು ವರ್ಷಕ್ಕೆ ಎರಡು ಬಾರಿ ಪ್ರಕಟಿಸುತ್ತೇವೆ. ಸುರಕ್ಷತೆ ಮತ್ತು ಪಾರದರ್ಶಕತೆಗೆ ನಮ್ಮ ಬದ್ಧತೆಯ ಭಾಗವಾಗಿ, ನಮ್ಮ ಕಂಟೆಂಡ್ ಮಾಡರೇಷನ್, ಕಾನೂನು ಜಾರಿಯ ನಮ್ಮ ಅಭ್ಯಾಸಗಳು ಮತ್ತು Snapchat ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮದ ಕುರಿತು ಆಳವಾದ ಕಾಳಜಿ ಹೊಂದಿರುವ ಹಲವು ಪಾಲುದಾರರಿಗಾಗಿ ಈ ವರದಿಗಳನ್ನು ಇನ್ನಷ್ಟು ಸಮಗ್ರ ಮತ್ತು ಮಾಹಿತಿಯುಕ್ತವಾಗಿಸಲು ನಾವು ನಿರಂತರ ಪರಿಶ್ರಮಪಡುತ್ತೇವೆ.
ಈ ಪಾರದರ್ಶಕತೆಯ ವರದಿಯು 2025 ರ ಮೊದಲಾರ್ಧವನ್ನು ಒಳಗೊಳ್ಳುತ್ತದೆ (ಜನವರಿ 1 - ಜೂನ್ 30). ಬಳಕೆದಾರರ ವರದಿಗಳು ಮತ್ತು Snap ನಿಂದ ಪೂರ್ವಭಾವಿಯಾಗಿ ಪತ್ತೆ ಮಾಡಿದ ಕುರಿತು ನಾವು ಜಾಗತಿಕ ಡೇಟಾ ಹಂಚಿಕೊಳ್ಳುತ್ತೇವೆ; ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳ ನಿರ್ದಿಷ್ಟ ವಿಭಾಗಗಳಲ್ಲಿ ನಮ್ಮ ಸುರಕ್ಷತಾ ತಂಡಗಳು ಮಾಡಿದ ಕ್ರಮಗಳು; ಕಾನೂನು ಜಾರಿ ಮತ್ತು ಸರ್ಕಾರಗಳ ವಿನಂತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಿದೆವು; ಮತ್ತು ಕೃತಿಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್ ಉಲ್ಲಂಘನೆಯ ನೋಟಿಸ್‌ಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಿದೆವು ಎನ್ನುವ ಕುರಿತು. ಲಿಂಕ್ ಮಾಡಿದ ಪುಟಗಳ ಸರಣಿಯೊಂದಿಗೆ ನಾವು ದೇಶ-ನಿರ್ದಿಷ್ಟ ಒಳನೋಟಗಳನ್ನು ಕೂಡ ಒದಗಿಸುತ್ತೇವೆ.
Snapchat ನಲ್ಲಿ ಹೆಚ್ಚುವರಿ ಸುರಕ್ಷತೆ ಮತ್ತು ಗೌಪ್ಯತೆ ಸಂಪನ್ಮೂಲಗಳನ್ನು ಕಂಡುಕೊಳ್ಳಲು, ಪುಟದ ಕೆಳಗಡೆ ಇರುವ ನಮ್ಮ ಪಾರದರ್ಶಕತೆಯ ವರದಿ ಮಾಡುವಿಕೆ ಕುರಿತ ಟ್ಯಾಬ್ ಅನ್ನು ನೋಡಿ.
ಈ ಪಾರದರ್ಶಕತೆಯ ವರದಿಯ ಅತ್ಯಂತ ನವೀಕೃತ ಆವೃತ್ತಿಯು ಇಂಗ್ಲಿಷ್ ಆವೃತ್ತಿಯಾಗಿದೆ ಎಂಬುದನ್ನು ದಯವಿಟ್ಟು
ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡಗಳು ತೆಗೆದುಕೊಂಡ ಕ್ರಮಗಳ ಅವಲೋಕನ
ಈ ವರದಿಯ ಕೆಳಗಿನ ವಿಭಾಗಗಳಲ್ಲಿ ಇನ್ನಷ್ಟು ವಿವರವಾಗಿ ವಿವರಿಸಿರುವಂತೆ, ನಮ್ಮ ಸುರಕ್ಷತಾ ತಂಡಗಳು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಪೂರ್ವಭಾವಿಯಾಗಿ (ಸ್ವಯಂಚಾಲಿತ ಪತ್ತೆ ಸಾಧನಗಳ ಬಳಕೆಯ ಮೂಲಕ) ಮತ್ತು ಪ್ರತಿಕ್ರಿಯಾತ್ಮಕವಾಗಿ (ವರದಿಗಳಿಗೆ ಪ್ರತಿಕ್ರಿಯೆಯಾಗಿ) ಜಾರಿಗೊಳಿಸುತ್ತವೆ. ಈ ವರದಿ ಮಾಡುವಿಕೆ ಆವರ್ತನದಲ್ಲಿ (H1 2025), ನಮ್ಮ ಸುರಕ್ಷತಾ ತಂಡಗಳು ಈ ಕೆಳಗಿನ ಸಂಖ್ಯೆಯ ಶಿಸ್ತುಕ್ರಮಗಳನ್ನು ಜಾರಿಗೊಳಿಸಿವೆ:
ಕ್ರಮ ಜಾರಿಗೊಳಿಸುವಿಕೆಗಳ ಒಟ್ಟು ಸಂಖ್ಯೆ
ಕ್ರಮ ಜಾರಿಗೊಳಿಸಲ್ಪಟ್ಟಿರುವ ಅನನ್ಯ ಖಾತೆಗಳ ಒಟ್ಟು ಸಂಖ್ಯೆ
96,74,414
57,94,201
ನಾವು ಉಲ್ಲಂಘನೆಯನ್ನು ಪತ್ತೆಮಾಡಿದ ಸಮಯ (ಒಂದೋ ಪೂರ್ವಭಾವಿಯಾಗಿ ಅಥವಾ ಒಂದು ವರದಿಯನ್ನು ಸ್ವೀಕರಿಸಿದಾಗ) ಮತ್ತು ಸಂಬಂಧಿತ ಕಂಟೆಂಟ್ ಅಥವಾ ಖಾತೆಯ ಮೇಲೆ ನಾವು ಅಂತಿಮ ಕ್ರಮ ತೆಗೆದುಕೊಂಡ ಸಮಯದ ನಡುವಿನ ಸರಾಸರಿ "ಟರ್ನ್‌ಅರೌಂಡ್ ಸಮಯ" ಸೇರಿದಂತೆ, ಸಂಬಂಧಿಸಿದ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳ ಪ್ರತಿ ವಿಧದ ವಿವರವು ಕೆಳಗಿದೆ:
ನೀತಿಗಾಗಿ ಕಾರಣ
ಕ್ರಮ ಜಾರಿಗೊಳಿಸುವಿಕೆಗಳ ಒಟ್ಟು ಸಂಖ್ಯೆ
ಕ್ರಮ ಜಾರಿಗೊಳಿಸಲ್ಪಟ್ಟಿರುವ ಅನನ್ಯ ಖಾತೆಗಳ ಒಟ್ಟು ಸಂಖ್ಯೆ
ಪತ್ತೆಹಚ್ಚುವಿಕೆಯಿಂದ ಅಂತಿಮ ಕ್ರಮದವರೆಗಿನ ಮಧ್ಯಾಂಕ ಪೂರ್ಣಗೊಳಿಸುವಿಕೆ ಸಮಯ (ನಿಮಿಷಗಳು)
ಲೈಂಗಿಕ ವಿಷಯ
54,61,419
32,33,077
1
ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ
10,95,424
7,33,106
5
ಕಿರುಕುಳ ಮತ್ತು ಪೀಡಿಸುವಿಕೆ
7,13,448
5,94,302
3
ಬೆದರಿಕೆಗಳು ಮತ್ತು ಹಿಂಸೆ
1,87,653
1,46,564
3
ಸ್ವಯಂ-ಹಾನಿ ಮತ್ತು ಆತ್ಮಹತ್ಯೆ
47,643
41,216
5
ಸುಳ್ಳು ಮಾಹಿತಿ
2,088
2,004
1
ಸೋಗು ಹಾಕುವಿಕೆ
7,138
6,881
<1
ಸ್ಪ್ಯಾಮ್
2,67,299
1,89,344
1
ಮಾದಕದ್ರವ್ಯಗಳು
10,95,765
7,26,251
7
ಶಸ್ತ್ರಾಸ್ತ್ರಗಳು
2,51,243
1,73,381
1
ಇತರೆ ನಿಯಂತ್ರಿತ ಸರಕುಗಳು
1,83,236
1,26,952
4
ದ್ವೇಷ ಭಾಷಣ
3,43,051
2,84,817
6
ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ
10,970
6,783
2
ಒಟ್ಟು ಶಿಸ್ತುಕ್ರಮ ಜಾರಿಗೊಳಿಸುವಿಕೆಗಳ ಡೇಟಾವು Snapchat ಮೂಲಕ ಸಲ್ಲಿಸಲಾದ ಆ್ಯಪ್‌ನಲ್ಲಿನ ವರದಿಗಳ ವಿಮರ್ಶೆಯ ಬಳಿಕ Snap ತೆಗೆದುಕೊಂಡ ಶಿಸ್ತುಕ್ರಮಗಳನ್ನು ಒಳಗೊಂಡಿದೆ. ಇದು Snap ನ ಸುರಕ್ಷತಾ ತಂಡಗಳು ತೆಗೆದುಕೊಂಡ ಶಿಸ್ತುಕ್ರಮಗಳ ಬಹುಪಾಲನ್ನು ಪ್ರತಿನಿಧಿಸುತ್ತದೆ. ನಮ್ಮ ಬೆಂಬಲ ಸೈಟ್ ಅಥವಾ ಇತರ ಕಾರ್ಯವಿಧಾನಗಳ ಮೂಲಕ (ಉದಾ., ಇಮೇಲ್ ಮೂಲಕ) ಮಾಡಿದ ವರದಿಗಳನ್ನು ಆಧರಿಸಿದ ತನಿಖೆಗಳ ಫಲಿತಾಂಶವಾಗಿ ಅಥವಾ ನಮ್ಮ ಸುರಕ್ಷತಾ ತಂಡಗಳು ತೆಗೆದುಕೊಂಡು ಕೆಲವು ಪೂರ್ವಭಾವಿ ತನಿಖೆಗಳ ಫಲಿತಾಂಶವಾಗಿ ತೆಗೆದುಕೊಂಡ ಬಹುತೇಕ ಶಿಸ್ತುಕ್ರಮಗಳನ್ನು ಈ ಸಂಖ್ಯೆಯು ಹೊರತುಪಡಿಸುತ್ತದೆ. ಈ ಹೊರತುಪಡಿಸಿದ ಶಿಸ್ತುಕ್ರಮಗಳು 2025 ರ ಮೊದಲಾರ್ಧದಲ್ಲಿ ಶಿಸ್ತುಕ್ರಮಗಳ ಪ್ರಮಾಣದಲ್ಲಿ 0.5% ಗಿಂತ ಕಡಿಮೆ ಇವೆ.
ವರದಿ ಮಾಡುವಿಕೆಯ ಅವಧಿಯಲ್ಲಿ, ನಾವು 0.01 ಪ್ರತಿಶತದಷ್ಟು ಉಲ್ಲಂಘನೆ ವೀಕ್ಷಣೆಯ ದರ (VVR) ಕಂಡಿದ್ದೇವೆ, ಅಂದರೆ Snapchat ನಲ್ಲಿ ಪ್ರತಿ 10,000 Snap ಮತ್ತು ಕಥೆ ವೀಕ್ಷಣೆಗಳಲ್ಲಿ, 1 ರಲ್ಲಿ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್ ಕಂಡುಬಂದಿದೆ. ನಾವು “ಗಂಭೀರ ಹಾನಿಗಳು” ಎಂದು ಪರಿಗಣಿಸುವ ಶಿಸ್ತುಕ್ರಮಗಳ ಪೈಕಿ, ನಾವು 0.0003% ಪ್ರತಿಶತ VVR ಕಂಡಿದ್ದೇವೆ. ನೀತಿಯ ಕಾರಣದ ಪ್ರಕಾರ VVR ನ ವಿಂಡಗಣೆ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ಒದಗಿಸಲಾಗಿದೆ.
ನೀತಿಗಾಗಿ ಕಾರಣ
VVR
ಲೈಂಗಿಕ ವಿಷಯ
0.00482%
ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ
0.00096%
ಕಿರುಕುಳ ಮತ್ತು ಪೀಡಿಸುವಿಕೆ
0.00099%
ಬೆದರಿಕೆಗಳು ಮತ್ತು ಹಿಂಸೆ
0.00176%
ಸ್ವಯಂ-ಹಾನಿ ಮತ್ತು ಆತ್ಮಹತ್ಯೆ
0.00009%
ಸುಳ್ಳು ಮಾಹಿತಿ
0.00002%
ಸೋಗು ಹಾಕುವಿಕೆ
0.00009%
ಸ್ಪ್ಯಾಮ್
0.00060%
ಮಾದಕದ್ರವ್ಯಗಳು
0.00047%
ಶಸ್ತ್ರಾಸ್ತ್ರಗಳು
0.00083%
ಇತರೆ ನಿಯಂತ್ರಿತ ಸರಕುಗಳು
0.00104%
ದ್ವೇಷ ಭಾಷಣ
0.00025%
ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ
0.00002%
ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡಗಳಿಗೆ ವರದಿ ಮಾಡಲಾದ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳು
ಜನವರಿ 1 ರಿಂದ - ಜೂನ್ 30, 2025 ರವರೆಗೆ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳ 1,97,66,324 ಆ್ಯಪ್‌ನಲ್ಲಿನ ವರದಿಗಳಿಗೆ ಪ್ರತಿಕ್ರಿಯೆಯಾಗಿ, Snap ನ ಸುರಕ್ಷತಾ ತಂಡಗಳು 41,04,624 ವಿಶಿಷ್ಠ ಖಾತೆಗಳ ವಿರುದ್ಧ ಶಿಸ್ತುಕ್ರಮಗಳು ಸೇರಿದಂತೆ, ಜಾಗತಿಕವಾಗಿ ಒಟ್ಟು 62,78,446 ಶಿಸ್ತುಕ್ರಮಗಳನ್ನು ಕೈಗೊಂಡಿವೆ. ಈ ಆ್ಯಪ್‌ನಲ್ಲಿನ ವರದಿ ಮಾಡುವಿಕೆ ಪ್ರಮಾಣವು ಬೆಂಬಲ ಸೈಟ್ ಮತ್ತು ಇಮೇಲ್ ವರದಿಗಳನ್ನು ಹೊರತುಪಡಿಸುತ್ತದೆ, ಇವು ಒಟ್ಟು ವರದಿ ಮಾಡುವಿಕೆಯ ಪ್ರಮಾಣದ 1% ಗಿಂತ ಕಡಿಮೆ ಇವೆ. ಆ ವರದಿಗಳಿಗೆ ಪ್ರತಿಕ್ರಿಯೆಯಾಗಿ ಶಿಸ್ತುಕ್ರಮ ಕೈಗೊಳ್ಳಲು ನಮ್ಮ ಸುರಕ್ಷತಾ ತಂಡಗಳು ತೆಗೆದುಕೊಂಡ ಸರಾಸರಿ ಟರ್ನ್‌ಅರೌಂಡ್ ಸಮಯವು ~2 ನಿಮಿಷಗಳಾಗಿದ್ದವು. ಪ್ರತಿ ನೀತಿಯ ವಿಂಗಡಣೆ ವಿವರವನ್ನು ಕೆಳಗೆ ನೀಡಲಾಗಿದೆ. (ಗಮನಿಸಿ: ಹಿಂದಿನ ವರದಿಗಳಲ್ಲಿ, ಇದನ್ನು ಕೆಲವೊಮ್ಮೆ ನಾವು "ವರದಿ ಮಾಡುವಿಕೆ ಕೆಟಗರಿ" ಎಂದು ಉಲ್ಲೇಖಿಸಿದ್ದೇವೆ. ಇನ್ನು ಮುಂದೆ, ನಾವು "ನೀತಿಯ ಕಾರಣ" ಎಂಬ ಪದವನ್ನು ಬಳಸಲಿದ್ದು, ಇದು ಹೆಚ್ಚು ನಿಖರವಾಗಿ ಡೇಟಾದ ಸ್ವರೂಪವನ್ನು ಬಿಂಬಿಸುತ್ತದೆ ಎಂದು ನಾವು ಭಾವಿಸಿದ್ದೇವೆ – ಏಕೆಂದರೆ ವರದಿಯನ್ನು ಸಲ್ಲಿಸಿದ ವ್ಯಕ್ತಿಯು ಗುರುತಿಸಿದ ವರದಿ ಮಾಡುವಿಕೆ ಕೆಟಗರಿಯನ್ನು ಪರಿಗಣಿಸದೆ, ಸೂಕ್ತವಾದ ನೀತಿಯ ಕಾರಣಕ್ಕೆ ಅನುಸಾರವಾಗಿ ಶಿಸ್ತುಕ್ರಮ ಜಾರಿಗೊಳಿಸಲು ನಮ್ಮ ಸುರಕ್ಷತಾ ತಂಡಗಳು ಶ್ರಮಿಸುತ್ತವೆ.)
ವಿಷಯ ಮತ್ತು ಖಾತೆಯ ವರದಿಗಳ ಒಟ್ಟು ಸಂಖ್ಯೆ
ಕ್ರಮ ಜಾರಿಗೊಳಿಸುವಿಕೆಗಳ ಒಟ್ಟು ಸಂಖ್ಯೆ
ಕ್ರಮ ಜಾರಿಗೊಳಿಸಲ್ಪಟ್ಟಿರುವ ಅನನ್ಯ ಖಾತೆಗಳ ಒಟ್ಟು ಸಂಖ್ಯೆ
ಒಟ್ಟು
1,97,66,324
62,78,446
41,04,624
ನೀತಿಗಾಗಿ ಕಾರಣ
ವಿಷಯ ಮತ್ತು ಖಾತೆಯ ವರದಿಗಳ ಒಟ್ಟು ಸಂಖ್ಯೆ
ಕ್ರಮ ಜಾರಿಗೊಳಿಸುವಿಕೆಗಳ ಒಟ್ಟು ಸಂಖ್ಯೆ
Snap ನಿಂದ ಜಾರಿಗೊಳಿಸಲಾದ ಒಟ್ಟು ವರದಿಗಳ ಶೇಕಡಾವಾರು
ಕ್ರಮ ಜಾರಿಗೊಳಿಸಲ್ಪಟ್ಟಿರುವ ಅನನ್ಯ ಖಾತೆಗಳ ಒಟ್ಟು ಸಂಖ್ಯೆ
ಪತ್ತೆಹಚ್ಚುವಿಕೆಯಿಂದ ಅಂತಿಮ ಕ್ರಮದವರೆಗಿನ ಮಧ್ಯಾಂಕ ಪೂರ್ಣಗೊಳಿಸುವಿಕೆ ಸಮಯ (ನಿಮಿಷಗಳು)
ಲೈಂಗಿಕ ವಿಷಯ
73,15,730
37,78,370
60.2%
24,63,464
1
ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ
16,27,097
6,95,679
11.1%
5,77,736
10
ಕಿರುಕುಳ ಮತ್ತು ಬೆದರಿಸುವಿಕೆ
41,03,797
7,00,731
11.2%
5,84,762
3
ಬೆದರಿಕೆಗಳು ಮತ್ತು ಹಿಂಸೆ
9,97,346
1,47,162
2.3%
1,20,397
2
ಸ್ವಯಂ-ಹಾನಿ ಮತ್ತು ಆತ್ಮಹತ್ಯೆ
3,50,775
41,150
0.7%
36,657
3
ಸುಳ್ಳು ಮಾಹಿತಿ
6,06,979
2,027
0.0%
1,960
1
ಸೋಗು ಹಾಕುವಿಕೆ
7,45,874
7,086
0.1%
6,837
<1
ಸ್ಪ್ಯಾಮ್
17,09,559
1,22,499
2.0%
94,837
1
ಮಾದಕದ್ರವ್ಯಗಳು
4,81,830
2,62,962
4.2%
1,76,799
5
ಶಸ್ತ್ರಾಸ್ತ್ರಗಳು
2,71,586
39,366
0.6%
32,316
1
ಇತರೆ ನಿಯಂತ್ರಿತ ಸರಕುಗಳು
5,30,449
1,43,098
2.3%
98,023
3
ದ್ವೇಷ ಭಾಷಣ
8,17,262
3,37,263
5.4%
2,80,682
6
ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ
2,08,040
1,053
0.0%
912
2
2025 ರ ಮೊದಲಾರ್ಧದಲ್ಲಿ, ಎಲ್ಲ ನೀತಿ ವರ್ಗಗಳಾದ್ಯಂತ ನಾವು ಸರಾಸರಿ ಟರ್ನ್‌ಅರೌಂಡ್ ಸಮಯವನ್ನು ಕಡಿಮೆ ಮಾಡುವುದನ್ನು ಮುಂದುವರಿಸಿದ್ದು, ಹಿಂದಿನ ವರದಿ ಮಾಡುವಿಕೆ ಅವಧಿಯ ಹೋಲಿಕೆಯಲ್ಲಿ ಅವುಗಳನ್ನು ಸರಾಸರಿ 75% ಗಿಂತ ಕಡಿಮೆಗೊಳಿಸಿ 2 ನಿಮಿಷಕ್ಕೆ ಇಳಿಸಿದ್ದೇವೆ. ಈ ಇಳಿಕೆಯು ಹಾನಿ ಮತ್ತು ಸ್ವಯಂಚಾಲಿತ ವಿಮರ್ಶೆಯ ತೀವ್ರತೆಯನ್ನು ಆಧರಿಸಿದ ವಿಮರ್ಶೆಗಾಗಿ ವರದಿಗಳ ನಮ್ಮ ಆದ್ಯತೆಯನ್ನು ಸುಧಾರಿಸುವ ನಿರಂತರ ಗಂಭೀರ ಪ್ರಯತ್ನದ ಕಾರಣದಿಂದ ಬಹುತೇಕ ಸಾಧ್ಯವಾಗಿದೆ.
ವರದಿ ಮಾಡುವಿಕೆ ಅವಧಿಯಲ್ಲಿ ನಮ್ಮ ಸುರಕ್ಷತಾ ಪ್ರಯತ್ನಗಳಿಗೆ ನಾವು ಹಲವಾರು ಗುರಿಯಾಗಿಸಿದ ಬದಲಾವಣೆಗಳನ್ನು ಕೂಡ ಮಾಡಿದ್ದು, ಅದು ಶಸ್ತ್ರಾಸ್ತ್ರಗಳನ್ನು ಒಳಗೊಂಡ ಕಾನೂನುಬಾಹಿರ ಚಟುವಟಿಕೆಯ ವಿರುದ್ಧ ನಮ್ಮ ನೀತಿಗಳನ್ನು ಬಲಪಡಿಸುವುದು ಸೇರಿದಂತೆ, ಇಲ್ಲಿ ವರದಿ ಮಾಡಲಾದ ಡೇಟಾದ ಮೇಲೆ ಪ್ರಭಾವವನ್ನು ಬೀರಿದೆ. ಮಕ್ಕಳ ಲೈಂಗಿಕ ಶೋಷಣೆ ವಿಭಾಗದಲ್ಲಿ ನಾವು ವರದಿಗಳು ಮತ್ತು ಅನುಷ್ಠಾನ ಕ್ರಮಗಳಲ್ಲಿ ಏರಿಕೆಯನ್ನು ಗಮನಿಸಿದ್ದೇವೆ. ಇದಕ್ಕೆ ಮುಖ್ಯ ಕಾರಣ, ಅಪ್ರಾಪ್ತರನ್ನು ಒಳಗೊಂಡ ಲೈಂಗಿಕ ರೂಪಾಂತರಿತ ಅಥವಾ ಸಂವೇದನಾಶೀಲ ವಿಷಯಗಳಲ್ಲಿ ಏರಿಕೆ — ಇವು ನಮ್ಮ ನೀತಿಗಳನ್ನು ಉಲ್ಲಂಘಿಸುತ್ತವೆ, ಆದರೆ ಇದು U.S. ನಲ್ಲಿ ಕಾನೂನುಬಾಹಿರವಲ್ಲ ಹಾಗೂ U.S. ಕಾಣೆಯಾದ ಮತ್ತು ಶೋಷಣೆಗೊಳಗಾದ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ (NCMEC) ವರದಿ ಮಾಡುವ ವರ್ಗಕ್ಕೂ ಒಳಪಡುವುದಿಲ್ಲ. ಲೈಂಗಿಕ ಕಂಟೆಂಟ್‌ಗೆ ಸಂಬಂಧಿಸಿದ ಪ್ರಮಾಣದಲ್ಲಿನ ಹೆಚ್ಚಳವು (ಮತ್ತು ಕಿರುಕುಳಕ್ಕೆ ಸಂಬಂಧಿಸಿದ ಪ್ರಮಾಣದಲ್ಲಿನ ಇಳಿಕೆಯು), ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಕಂಟೆಂಟ್ ಅನ್ನು ಕಿರುಕುಳದಿಂದ ಲೈಂಗಿಕ ವಿಷಯಕ್ಕೆ ನಾವು ಮರುವರ್ಗೀಕರಿಸಿರುವ ಕಾರಣದಿಂದ ಉಂಟಾಗಿದೆ.
ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ಪತ್ತೆಮಾಡಲು ಮತ್ತು ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಪೂರ್ವಭಾವಿ ಪ್ರಯತ್ನಗಳು
ನಾವು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ಪೂರ್ವಭಾವಿಯಾಗಿ ಪತ್ತೆ ಮಾಡಲು ಮತ್ತು ಕೆಲವು ಪ್ರಕರಣಗಳಲ್ಲಿ, ಕಾನೂನು ಜಾರಿಗೊಳಿಸಲು ಸ್ವಯಂಚಾಲಿತ ಸಾಧನಗಳನ್ನು ಬಳಸುತ್ತೇವೆ. ಈ ಟೂಲ್‌ಗಳಲ್ಲಿ ಹ್ಯಾಶ್-ಮ್ಯಾಚಿಂಗ್ ತಂತ್ರಜ್ಞಾನ (PhotoDNA ಮತ್ತು Google ನ ಮಕ್ಕಳ ಲೈಂಗಿಕ ಶೋಷಣೆ ಚಿತ್ರಣ (CSAI) ಸೇರಿದಂತೆ), ಕಾನೂನುಬಾಹಿರ ಮತ್ತು ಉಲ್ಲಂಘನಾತ್ಮಕ ಪಠ್ಯ ಮತ್ತು ಮೀಡಿಯಾವನ್ನು ಪತ್ತೆಮಾಡಲು ವಿನ್ಯಾಸಗೊಳಿಸಲಾಗಿರುವ Google ನ ಕಂಟೆಂಟ್ ಸುರಕ್ಷತಾ API ಮತ್ತು ಇತರ ಸ್ವಾಮ್ಯದ ತಂತ್ರಜ್ಞಾನಗಳು ಸೇರಿದ್ದು, ಕೆಲವೊಮ್ಮೆ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಅನ್ನು ಬಳಸಿಕೊಳ್ಳಲಾಗುತ್ತದೆ. ಬಳಕೆದಾರರ ನಡವಳಿಕೆ ಬದಲಾವಣೆಗಳು, ನಮ್ಮ ಪತ್ತೆಮಾಡುವಿಕೆ ಸಾಮರ್ಥ್ಯಗಳಿಗೆ ಸುಧಾರಣೆಗಳು ಮತ್ತು ನಮ್ಮ ನೀತಿಗಳಿಗೆ ಬದಲಾವಣೆಗಳ ಫಲಿತಾಂಶವಾಗಿ ನಮ್ಮ ಪೂರ್ವಭಾವಿ ಪತ್ತೆಮಾಡುವಿಕೆ ಸಂಖ್ಯೆಗಳು ನಿಯಮಿತವಾಗಿ ಏರಿಳಿಕೆಯಾಗುತ್ತವೆ.
2025 ರ ಮೊದಲಾರ್ಧದಲ್ಲಿ, ಸ್ವಯಂಚಾಲಿತ ಪತ್ತೆಮಾಡುವಿಕೆ ಟೂಲ್‌ಗಳನ್ನು ಬಳಸಿಕೊಂಡು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ಪೂರ್ವಭಾವಿಯಾಗಿ ಪತ್ತೆಮಾಡಿದ ನಂತರ ನಾವು ಈ ಕೆಳಗಿನ ಶಿಸ್ತುಕ್ರಮಗಳನ್ನು ತೆಗೆದುಕೊಂಡಿದ್ದೇವೆ:
ಕ್ರಮ ಜಾರಿಗೊಳಿಸುವಿಕೆಗಳ ಒಟ್ಟು ಸಂಖ್ಯೆ
ಕ್ರಮ ಜಾರಿಗೊಳಿಸಲ್ಪಟ್ಟಿರುವ ಅನನ್ಯ ಖಾತೆಗಳ ಒಟ್ಟು ಸಂಖ್ಯೆ
ಒಟ್ಟು
33,95,968
17,09,224
ನೀತಿಗಾಗಿ ಕಾರಣ
ಕ್ರಮ ಜಾರಿಗೊಳಿಸುವಿಕೆಗಳ ಒಟ್ಟು ಸಂಖ್ಯೆ
ಕ್ರಮ ಜಾರಿಗೊಳಿಸಲ್ಪಟ್ಟಿರುವ ಅನನ್ಯ ಖಾತೆಗಳ ಒಟ್ಟು ಸಂಖ್ಯೆ
ಪತ್ತೆಹಚ್ಚುವಿಕೆಯಿಂದ ಅಂತಿಮ ಕ್ರಮದವರೆಗಿನ ಮಧ್ಯಾಂಕ ಪೂರ್ಣಗೊಳಿಸುವಿಕೆ ಸಮಯ (ನಿಮಿಷಗಳು)
ಲೈಂಗಿಕ ವಿಷಯ
16,83,045
8,87,059
0
ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ
3,99,756
1,62,017
2
ಕಿರುಕುಳ ಮತ್ತು ಪೀಡಿಸುವಿಕೆ
12,716
10,412
8
ಬೆದರಿಕೆಗಳು ಮತ್ತು ಹಿಂಸೆ
40,489
27,662
6
ಸ್ವಯಂ-ಹಾನಿ ಮತ್ತು ಆತ್ಮಹತ್ಯೆ
6,493
4,638
7
ಸುಳ್ಳು ಮಾಹಿತಿ
61
44
20
ಸೋಗು ಹಾಕುವಿಕೆ
52
44
34
ಸ್ಪ್ಯಾಮ್
1,44,800
96,500
0
ಮಾದಕದ್ರವ್ಯಗಳು
8,32,803
5,78,738
7
ಶಸ್ತ್ರಾಸ್ತ್ರಗಳು
2,11,877
1,44,455
0
ಇತರೆ ನಿಯಂತ್ರಿತ ಸರಕುಗಳು
40,139
31,408
8
ದ್ವೇಷ ಭಾಷಣ
5,788
4,518
6
ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ
9,917
5,899
5
ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ವಿರುದ್ಧ ಹೋರಾಡುವುದು
ನಮ್ಮ ಸಮುದಾಯದ ಯಾವುದೇ ಸದಸ್ಯರ, ವಿಶೇಷವಾಗಿ ಅಪ್ರಾಪ್ತವಯಸ್ಕರ ಲೈಂಗಿಕ ಶೋಷಣೆಯು ಕಾನೂನುಬಾಹಿರವಾಗಿದೆ, ಅಸಹ್ಯಕರವಾಗಿದೆ ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಿಂದ ನಿಷೇಧಿಸಲ್ಪಟ್ಟಿದೆ. ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯವನ್ನು (CSEA) ನಮ್ಮ ವೇದಿಕೆಯಲ್ಲಿ ತಡೆಗಟ್ಟುವುದು, ಪತ್ತೆ ಹಚ್ಚುವುದು ಮತ್ತು ನಿರ್ಮೂಲನೆ ಮಾಡುವುದು ಸ್ನಾಪ್‌ಗೆ ಟಾಪ್ ಆದ್ಯತೆಯಾಗಿದೆ, ಹಾಗೂ ಇವುಗಳು ಮತ್ತು ಇತರ ರೀತಿಯ ಅಪರಾಧಗಳ ವಿರುದ್ಧ ಹೋರಾಡಲು ನಾವು ನಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಬಲಗೊಳಿಸುತ್ತೇವೆ.
CSEA-ಸಂಬಂಧಿತ ವಿಷಯವನ್ನು ಗುರುತಿಸುವುದಕ್ಕೆ ಸಹಾಯ ಮಾಡಲು ನಾವು ಸಕ್ರಿಯ ತಂತ್ರಜ್ಞಾನ ಪತ್ತೆ ಸಾಧನಗಳನ್ನು ಬಳಸುತ್ತೇವೆ. ಈ ಟೂಲ್‌ಗಳಲ್ಲಿ ಹ್ಯಾಶ್-ಮ್ಯಾಚಿಂಗ್ ಟೂಲ್‌ಗಳು (ತಿಳಿದಿರುವ ಕಾನೂನುಬಾಹಿರ ಚಿತ್ರಗಳು ಮತ್ತು CSEA ಯ ವೀಡಿಯೊಗಳನ್ನು ಗುರುತಿಸುವುದಕ್ಕಾಗಿ ಅನುಕ್ರಮವಾಗಿ PhotoDNA ಮತ್ತು Google ನ CSAI ಹೋಲಿಕೆ ಸೇರಿದಂತೆ) ಮತ್ತು Google ನ ಕಂಟೆಂಟ್ ಸುರಕ್ಷತೆ API (ನೂತನ "ಹಿಂದೆಂದೂ ಹ್ಯಾಶ್ ಮಾಡಿಲ್ಲದಿರುವ" ಕಾನೂನುಬಾಹಿರ ಚಿತ್ರಣವನ್ನು ಗುರುತಿಸುವುದಕ್ಕಾಗಿ) ಸೇರಿವೆ. ಇದರೊಂದಿಗೆ, ಕೆಲವು ಪ್ರಕರಣಗಳಲ್ಲಿ, ನಾವು ಇತರ ಶಂಕಿತ CSEAಯ ಚಟುವಟಿಕೆಯ ವಿರುದ್ಧ ಕ್ರಮ ಜಾರಿಗೊಳಿಸಲು ನಡವಳಿಕೆಯ ಸಂಕೇತಗಳನ್ನು ಬಳಸುತ್ತೇವೆ. CSEA-ಸಂಬಂಧಿತ ಕಂಟೆಂಟ್ ಅನ್ನು ನಾವು ಕಾನೂನು ಅಗತ್ಯಪಡಿಸಿರುವಂತೆ ಕಾಣೆಯಾದ ಮತ್ತು ಶೋಷಣೆಗೊಳಗಾದ ಮಕ್ಕಳಿಗಾಗಿನ U.S. ರಾಷ್ಟ್ರೀಯ ಕೇಂದ್ರಕ್ಕೆ (NCMEC) ವರದಿ ಮಾಡುತ್ತೇವೆ. ನಂತರ ಅಗತ್ಯಗಳಿಗೆ ಅನುಗುಣವಾಗಿ ರಾಷ್ಟ್ರೀಯ ಕೇಂದ್ರವು, ದೇಶೀಯ ಅಥವಾ ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ನಡೆಸುತ್ತದೆ.
2025 ರ ಮೊದಲಾರ್ಧದಲ್ಲಿ, Snapchat ನಲ್ಲಿ CSEA ಅನ್ನು ಗುರುತಿಸಿದಾಗ ನಾವು ಈ ಕೆಳಗಿನ ಕ್ರಮಗಳನ್ನು ಕೈಗೊಂಡೆವು (ಒಂದೋ ಪೂರ್ವಭಾವಿಯಾಗಿ ಅಥವಾ ವರದಿಯನ್ನು ಸ್ವೀಕರಿಸಿದಾಗ):
ಕ್ರಮಕ್ಕೆ ಒಳಗಾದ ಒಟ್ಟು ಕಂಟೆಂಟ್
ನಿಷ್ಕ್ರಿಯಗೊಳಿಸಲಾದ ಒಟ್ಟು ಖಾತೆಗಳು
NCMEC ಗೆ ಒಟ್ಟು ಸಲ್ಲಿಕೆಗಳು*
9,94,337
1,87,387
3,21,587
*NCMEC ಗೆ ಪ್ರತಿ ಸಲ್ಲಿಕೆಯು ಬಹು ವಿಷಯದ ತುಣುಕುಗಳನ್ನು ಒಳಗೊಂಡಿರಬಹುದು ಎಂಬುದನ್ನು ಗಮನಿಸಿ. NCMEC ಗೆ ಸಲ್ಲಿಸಿದ ಮೀಡಿಯಾದ ಒಟ್ಟು ಪ್ರತ್ಯೇಕ ತುಣುಕುಗಳು ನಮ್ಮ ಜಾರಿಗೊಳಿಸಿದ ಒಟ್ಟು ವಿಷಯಕ್ಕೆ ಸಮನಾಗಿರುತ್ತದೆ.
ಅಗತ್ಯವಿರುವ Snapchatter ಗಳಿಗೆ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಒದಗಿಸಲು ನಮ್ಮ ಪ್ರಯತ್ನಗಳು
ಅಗತ್ಯವಿರುವ Snapchatter ಗಳಿಗೆ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಒದಗಿಸುವ ಮೂಲಕ ಕಠಿಣ ಸಂದರ್ಭದಲ್ಲಿ ಪರಸ್ಪರ ಸಹಾಯ ಮಾಡಲು Snapchat ಸ್ನೇಹಿತರಿಗೆ ಅಧಿಕಾರ ನೀಡುತ್ತದೆ.
ಬಳಕೆದಾರರು ಮಾನಸಿಕ ಆರೋಗ್ಯ, ಆತಂಕ, ಖಿನ್ನತೆ, ಒತ್ತಡ, ಆತ್ಮಹತ್ಯೆಯ ಆಲೋಚನೆಗಳು, ದುಃಖ ಮತ್ತು ಬೆದರಿಕೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಹುಡುಕಿದಾಗ, ನಮ್ಮ Here For You ಹುಡುಕಾಟ ಸಾಧನವು ತಜ್ಞರಿಂದ ಸಂಪನ್ಮೂಲಗಳನ್ನು ಒದಗಿಸುತ್ತದೆ. ಸಂಕಟದಲ್ಲಿ ಇರುವವರನ್ನು ಬೆಂಬಲಿಸುವ ಪ್ರಯತ್ನವಾಗಿ, ಆರ್ಥಿಕವಾಗಿ ಪ್ರೇರಿತವಾಗಿರುವ ಲೈಂಗಿಕ ಸುಲಿಗೆ ಮತ್ತು ಇತರ ಲೈಂಗಿಕ ಅಪಾಯಗಳು ಮತ್ತು ಹಾನಿಗಳ ವಿರುದ್ಧ ಹೋರಾಡಲು ಮೀಸಲಾದ ಒಂದು ಪುಟವನ್ನು ಕೂಡ ನಾವು ಅಭಿವೃದ್ಧಿಪಡಿಸಿದ್ದೇವೆ.
ಸಂಕಟದಲ್ಲಿರುವ Snapchatter ಕುರಿತು ನಮ್ಮ ಸುರಕ್ಷತಾ ತಂಡಗಳಿಗೆ ತಿಳಿದಾಗ, ಸ್ವಯಂ ಹಾನಿ ತಡೆಗಟ್ಟುವಿಕೆ ಮತ್ತು ಬೆಂಬಲ ಸಂಪನ್ಮೂಲಗಳನ್ನು ಒದಗಿಸಲು ಹಾಗೂ ಅಗತ್ಯವಿರುವಂತೆ ತುರ್ತು ಸೇವೆಗಳಿಗೆ ತಿಳಿಸಲು ಅವುಗಳನ್ನು ಸಜ್ಜುಗೊಳಿಸಲಾಗಿದೆ. ನಾವು ಹಂಚಿಕೊಳ್ಳುವ ಸಂಪನ್ಮೂಲಗಳು ನಮ್ಮ ಸುರಕ್ಷತಾ ಸಂಪನ್ಮೂಲಗಳ ಜಾಗತಿಕ ಪಟ್ಟಿಯಲ್ಲಿ ಲಭ್ಯವಿದ್ದು, ಇದು ನಮ್ಮ ಸುರಕ್ಷತೆ ಮತ್ತು ಗೌಪ್ಯತೆ ಹಬ್‌ನಲ್ಲಿ ಎಲ್ಲ Snapchatter ಗಳಿಗೆ ಸಾರ್ವಜನಿಕವಾಗಿ ಲಭ್ಯವಿದೆ.
ಆತ್ಮಹತ್ಯೆ ಸಂಪನ್ಮೂಲಗಳನ್ನು ಒಟ್ಟು ಎಷ್ಟು ಬಾರಿ ಹಂಚಿಕೊಳ್ಳಲಾಗಿದೆ
36,162
ಮೇಲ್ಮನವಿಗಳು
2025 ರ ಮೊದಲಾರ್ಧದಲ್ಲಿ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳಿಗಾಗಿ ತಮ್ಮ ಖಾತೆಯನ್ನು ಲಾಕ್ ಮಾಡುವ ನಮ್ಮ ನಿರ್ಧಾರವನ್ನು ಪರಾಮರ್ಶಿಸುವಂತೆ ವಿನಂತಿಸಿ ಬಳಕೆದಾರರಿಂದ ನಾವು ಸ್ವೀಕರಿಸಿದ ಮೇಲ್ಮನವಿಗಳ ಕುರಿತ ಮಾಹಿತಿಯನ್ನು ಕೆಳಗೆ ಒದಗಿಸಿದ್ದೇವೆ:
ನೀತಿಗಾಗಿ ಕಾರಣ
ಒಟ್ಟು ಮೇಲ್ಮನವಿಗಳು
ಒಟ್ಟು ಮರುಸ್ಥಾಪನೆಗಳು
ಎತ್ತಿಹಿಡಿದ ಒಟ್ಟು ನಿರ್ಧಾರಗಳು
ಮೇಲ್ಮನವಿಗಳನ್ನು ಪ್ರಕ್ರಿಯೆಗೊಳಿಸಲು ಸರಾಸರಿ ಟರ್ನ್‌ಅರೌಂಡ್ ಸಮಯ (ದಿನಗಳು)
ಒಟ್ಟು
4,37,855
22,142
4,15,494
1
ಲೈಂಗಿಕ ವಿಷಯ
1,34,358
6,175
1,28,035
1
ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ*
89,493
4,179
85,314
<1
ಕಿರುಕುಳ ಮತ್ತು ಪೀಡಿಸುವಿಕೆ
42,779
281
42,496
1
ಬೆದರಿಕೆಗಳು ಮತ್ತು ಹಿಂಸೆ
3,987
77
3,909
1
ಸ್ವಯಂ-ಹಾನಿ ಮತ್ತು ಆತ್ಮಹತ್ಯೆ
145
2
143
1
ಸುಳ್ಳು ಮಾಹಿತಿ
4
0
4
1
ಸೋಗು ಹಾಕುವಿಕೆ
1,063
33
1,030
<1
ಸ್ಪ್ಯಾಮ್
13,730
3,140
10,590
1
ಮಾದಕದ್ರವ್ಯಗಳು
1,28,222
7,749
1,20,409
1
ಶಸ್ತ್ರಾಸ್ತ್ರಗಳು
10,941
314
10,626
1
ಇತರೆ ನಿಯಂತ್ರಿತ ಸರಕುಗಳು
9,719
124
9,593
1
ದ್ವೇಷ ಭಾಷಣ
3,310
67
3,242
1
ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ
104
1
103
1
ಪ್ರಾದೇಶಿಕ ಮತ್ತು ದೇಶದ ಅವಲೋಕನ
ಈ ವಿಭಾಗವು ಭೌಗೋಳಿಕ ಪ್ರದೇಶಗಳ ಮಾದರಿಯಲ್ಲಿ ಪೂರ್ವಭಾವಿಯಾಗಿ ಮತ್ತು ಆ್ಯಪ್‌ನಲ್ಲಿನ ಉಲ್ಲಂಘನೆಗಳ ವರದಿಗಳಿಗೆ ಪ್ರತಿಯಾಗಿ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ನಮ್ಮ ಸುರಕ್ಷತಾ ತಂಡಗಳು ತೆಗೆದುಕೊಂಡ ಕ್ರಮಗಳ ಒಂದು ಅವಲೋಕನವನ್ನು ಒದಗಿಸುತ್ತದೆ. ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು Snapchat ನಲ್ಲಿರುವ ಎಲ್ಲ ಕಂಟೆಂಟ್‌ಗೆ—ಮತ್ತು ಜಗತ್ತಿನಾದ್ಯಂತದ ಎಲ್ಲ Snapchatter ಗಳಿಗೆ—ಸ್ಥಳವನ್ನು ಲೆಕ್ಕಿಸದೆ ಅನ್ವಯಿಸುತ್ತವೆ.
ಎಲ್ಲ EU ಸದಸ್ಯ ರಾಷ್ಟ್ರಗಳು ಸೇರಿದಂತೆ, ಪ್ರತ್ಯೇಕ ದೇಶಗಳಿಗಾಗಿ ಮಾಹಿತಿಯು ಲಗತ್ತಿಸಿರುವ CSV ಫೈಲ್ ಮೂಲಕ ಡೌನ್‌ಲೋಡ್‌ಗೆ ಲಭ್ಯವಿದೆ.
ಪ್ರದೇಶ
ಕ್ರಮ ಜಾರಿಗೊಳಿಸುವಿಕೆಗಳ ಒಟ್ಟು ಸಂಖ್ಯೆ
ಕ್ರಮ ಜಾರಿಗೊಳಿಸಲ್ಪಟ್ಟಿರುವ ಅನನ್ಯ ಖಾತೆಗಳ ಒಟ್ಟು ಸಂಖ್ಯೆ
ಉತ್ತರ ಅಮೆರಿಕಾ
34,68,315
20,46,888
ಯುರೋಪ್
28,15,474
18,10,223
ಪ್ರಪಂಚದ ಉಳಿದ ಪ್ರದೇಶಗಳು
33,90,625
19,37,090
ಒಟ್ಟು
96,74,414
57,94,201
ಪ್ರದೇಶ
ವಿಷಯ ಮತ್ತು ಖಾತೆ ವರದಿಗಳು
ಕ್ರಮ ಜಾರಿಗೊಳಿಸುವಿಕೆಗಳ ಒಟ್ಟು ಸಂಖ್ಯೆ
ಕ್ರಮ ಜಾರಿಗೊಳಿಸಲ್ಪಟ್ಟಿರುವ ಅನನ್ಯ ಖಾತೆಗಳ ಒಟ್ಟು ಸಂಖ್ಯೆ
ಉತ್ತರ ಅಮೆರಿಕಾ
57,62,412
21,25,819
13,59,763
ಯುರೋಪ್
59,61,962
21,44,828
14,40,907
ಪ್ರಪಂಚದ ಉಳಿದ ಪ್ರದೇಶಗಳು
80,41,950
20,07,799
13,16,070
ಒಟ್ಟು
1,97,66,324
62,78,446
41,16,740
ಪ್ರದೇಶ
ಕ್ರಮ ಜಾರಿಗೊಳಿಸುವಿಕೆಗಳ ಒಟ್ಟು ಸಂಖ್ಯೆ
ಕ್ರಮ ಜಾರಿಗೊಳಿಸಲ್ಪಟ್ಟಿರುವ ಅನನ್ಯ ಖಾತೆಗಳ ಒಟ್ಟು ಸಂಖ್ಯೆ
ಉತ್ತರ ಅಮೆರಿಕಾ
13,42,496
7,85,067
ಯುರೋಪ್
6,70,646
4,22,012
ಪ್ರಪಂಚದ ಉಳಿದ ಪ್ರದೇಶಗಳು
13,82,826
6,96,364
ಒಟ್ಟು
33,95,968
17,09,224
ಜಾಹೀರಾತುಗಳ ಮಾಡರೇಷನ್
ಎಲ್ಲ ಜಾಹೀರಾತುಗಳು ನಮ್ಮ ಜಾಹೀರಾತು ನೀತಿಗಳನ್ನು ಪೂರ್ಣವಾಗಿ ಅನುಸರಣೆ ಮಾಡುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು Snap ಬದ್ಧವಾಗಿದೆ. ನಾವು ಎಲ್ಲಾ Snapchatter ಗಳಿಗೆ ಸುರಕ್ಷಿತ ಅನುಭವವನ್ನು ಸೃಷ್ಟಿಸುವಿಕೆಯನ್ನು ಪ್ರಚಾರ ಮಾಡಲು ಜವಾಬ್ದಾರಿಯುತ ವಿಧಾನವನ್ನು ನಂಬುತ್ತೇವೆ. ಎಲ್ಲ ಜಾಹೀರಾತುಗಳು ನಮ್ಮ ವಿಮರ್ಶೆ ಮತ್ತು ಅನುಮೋದನೆಗೆ ಒಳಪಟ್ಟಿರುತ್ತವೆ. ಇದರ ಜೊತೆಗೆ, ನಾವು ಗಂಭೀರವಾಗಿ ಪರಿಗಣಿಸುವ ಬಳಕೆದಾರರ ಫೀಡ್‌ಬ್ಯಾಕ್‌ಗೆ ಪ್ರತಿಕ್ರಿಯೆಯ ರೂಪದಲ್ಲಿ ಸೇರಿದಂತೆ, ಜಾಹೀರಾತುಗಳನ್ನು ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.
Snapchat ನಲ್ಲಿ ಪ್ರಕಟಿಸಿದ ಬಳಿಕ ನಮಗೆ ವರದಿ ಮಾಡಲಾದ ಪಾವತಿಸಿದ ಜಾಹೀರಾತುಗಳಿಗಾಗಿ ನಮ್ಮ ಮಾಡರೇಷನ್‌ಗೆ ಒಳನೋಟಗಳನ್ನು ನಾವು ಕೆಳಗೆ ಸೇರಿಸಿದ್ದೇವೆ. ಮೋಸಗೊಳಿಸುವ ಕಂಟೆಂಟ್, ವಯಸ್ಕರ ಕಂಟೆಂಟ್, ಹಿಂಸಾತ್ಮಕ ಅಥವಾ ನೆಮ್ಮದಿಗೆಡಿಸುವ ಕಂಟೆಂಟ್, ದ್ವೇಷ ಭಾಷಣ ಮತ್ತು ಬೌದ್ಧಿಕ ಆಸ್ತಿಯ ಉಲ್ಲಂಘನೆಯ ಕಂಟೆಂಟ್ ಸೇರಿದಂತೆ Snap ನ ಜಾಹೀರಾತು ನೀತಿಗಳಲ್ಲಿ ವಿವರಿಸಲಾಗಿರುವ ವಿವಿಧ ಕಾರಣಗಳಿಗಾಗಿ Snapchat ನಲ್ಲಿನ ಜಾಹೀರಾತುಗಳನ್ನು ತೆಗೆದುಹಾಕಬಹುದಾಗಿದೆ ಎಂಬುದನ್ನು ಗಮನಿಸಿ. ಹೆಚ್ಚುವರಿಯಾಗಿ, values.snap.com ನಲ್ಲಿ "ಪಾರದರ್ಶಕತೆ" ಟ್ಯಾಬ್ ಅಡಿಯಲ್ಲಿ ನೀವು Snapchat ನ ಜಾಹೀರಾತುಗಳ ಗ್ಯಾಲರಿ ಅನ್ನು ನೋಡಬಹುದು.
ವರದಿ ಮಾಡಲಾದ ಒಟ್ಟು ಜಾಹೀರಾತುಗಳು
ತೆಗೆದುಹಾಕಲಾದ ಒಟ್ಟು ಜಾಹೀರಾತುಗಳು
67,789
16,410

























