ಏಪ್ರಿಲ್ 25, 2024
ಏಪ್ರಿಲ್ 25, 2024
Snap ನ ಸುರಕ್ಷತಾ ಕ್ರಮಗಳ ಕುರಿತು ಹಾಗೂ ನಮ್ಮ ವೇದಿಕೆಯಲ್ಲಿ ವರದಿ ಮಾಡಲಾದ ವಿಷಯದ ಸ್ವರೂಪ ಮತ್ತು ಪ್ರಮಾಣದ ಕುರಿತು ಇನ್ನಷ್ಟು ಒಳನೋಟಗಳನ್ನು ಒದಗಿಸಲು, ನಾವು ಈ ಪಾರದರ್ಶಕತೆಯ ವರದಿಯನ್ನು ವರ್ಷಕ್ಕೆ ಎರಡು ಸಲ ಪ್ರಕಟಿಸುತ್ತೇವೆ. ನಮ್ಮ ಸಮುದಾಯದ ಹಾಗೂ ನಮ್ಮ ವಿಷಯ ನಿಯಂತ್ರಣ ಮತ್ತು ಕಾನೂನು ಜಾರಿಗೊಳಿಸುವಿಕೆ ಅಭ್ಯಾಸಗಳ ಕುರಿತು ಆಳವಾಗಿ ಕಾಳಜಿ ಮಾಡುವ ಹಲವು ಪಾಲುದಾರರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಈ ವರದಿಗಳನ್ನು ಹೆಚ್ಚು ಸಮಗ್ರ ಮತ್ತು ಮಾಹಿತಿಯುಕ್ತವಾಗಿಸುವುದನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ.
ಈ ಪಾರದರ್ಶಕತೆಯ ವರದಿಯು 2023 ರ ದ್ವಿತೀಯಾರ್ಧವನ್ನು ಒಳಗೊಳ್ಳುತ್ತದೆ (ಜುಲೈ 1 - ಡಿಸೆಂಬರ್ 31). ನಮ್ಮ ಹಿಂದಿನ ವರದಿಗಳಂತೆಯೇ, ನೀತಿ ಉಲ್ಲಂಘನೆಗಳ ನಿರ್ದಿಷ್ಟ ವಿಭಾಗಗಳಾದ್ಯಂತ ನಾವು ಸ್ವೀಕರಿಸಿದ ಮತ್ತು ಕ್ರಮ ಜಾರಿಗೊಳಿಸಿದ ಆ್ಯಪ್‌ನಲ್ಲಿನ ವಿಷಯ ಮತ್ತು ಖಾತೆ ಮಟ್ಟದ ವರದಿಗಳ ಜಾಗತಿಕ ಸಂಖ್ಯೆಯ ಬಗ್ಗೆ; ಕಾನೂನು ಜಾರಿ ಸಂಸ್ಥೆಗಳು ಮತ್ತು ಸರ್ಕಾರಗಳ ವಿನಂತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಿದೆವು ಎನ್ನುವ ಕುರಿತು; ಮತ್ತು ದೇಶದ ಪ್ರಕಾರ ವಿಂಗಡಿಸಲಾದ ನಮ್ಮ ಶಿಸ್ತು ಕ್ರಮಗಳ ಕುರಿತು ನಾವು ವಿಷಯವನ್ನು ಹಂಚಿಕೊಳ್ಳುತ್ತೇವೆ.
ನಮ್ಮ ಪಾರದರ್ಶಕತೆಯ ವರದಿಯನ್ನು ನಿರಂತರವಾಗಿ ಸುಧಾರಿಸುವ ನಮ್ಮ ನಿರಂತರ ಬದ್ಧತೆಯ ಭಾಗವಾಗಿ, ಈ ಬಿಡುಗಡೆಯೊಂದಿಗೆ ನಾವು ಕೆಲವು ಹೊಸ ಅಂಶಗಳನ್ನು ಪರಿಚಯಿಸುತ್ತಿದ್ದೇವೆ.
ಮೊದಲನೆಯದಾಗಿ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ ಹಾಗೂ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ (CSEA) ಎರಡಕ್ಕೂ ಸಂಬಂಧಿಸಿದ ವಿಷಯ ಮತ್ತು ಖಾತೆ ವಿರುದ್ಧದ ವರದಿಗಳು ಮತ್ತು ಕ್ರಮ ಜಾರಿಗೊಳಿಸುವಿಕೆಗಳನ್ನು ಸೇರಿಸಲು ನಮ್ಮ ಮುಖ್ಯ ಕೋಷ್ಟಕವನ್ನು ನಾವು ವಿಸ್ತರಿಸಿದ್ದೇವೆ. ಹಿಂದಿನ ವರದಿಗಳಲ್ಲಿ, ಆ ಉಲ್ಲಂಘನೆಗಳಿಗೆ ಪ್ರತಿಕ್ರಿಯೆಯಾಗಿ ಮಾಡಿದ ಖಾತೆ ಅಳಿಸುವಿಕೆಗಳನ್ನು ನಾವು ಪ್ರತ್ಯೇಕ ವಿಭಾಗಗಳಲ್ಲಿ ಒತ್ತಿ ಹೇಳಿದ್ದೇವೆ. ಪ್ರತ್ಯೇಕ ವಿಭಾಗದಲ್ಲಿ, CSEA ವಿರುದ್ಧದ ನಮ್ಮ ಪೂರ್ವಭಾವಿ ಮತ್ತು ಪ್ರತಿಕ್ರಿಯಾತ್ಮಕ ಪ್ರಯತ್ನಗಳ ಕುರಿತು ಹಾಗೂ NCMEC ಗೆ ನಮ್ಮ ವರದಿಗಳ ಕುರಿತು ನಾವು ವಿವರಿಸುವುದನ್ನು ಮುಂದುವರಿಸುತ್ತೇವೆ.
ಎರಡನೆಯದಾಗಿ, ಕಮ್ಯುನಿಟಿ ಮಾರ್ಗಸೂಚಿಗಳ ಕ್ರಮ ಜಾರಿಗೊಳಿಸುವಿಕೆಗಳ ಪ್ರಕಾರ ಒಟ್ಟು ಮೇಲ್ಮನವಿಗಳು ಮತ್ತು ಮರುತನಿಖೆಗಳನ್ನು ವಿವರಿಸುವ ಮೇಲ್ಮನವಿಗಳ ಕುರಿತ ವಿಸ್ತೃತ ಮಾಹಿತಿಯನ್ನು ನಾವು ಒದಗಿಸಿದ್ದೇವೆ.
ಅಂತಿಮವಾಗಿ, ನಾವು ನಮ್ಮ ಐರೋಪ್ಯ ಒಕ್ಕೂಟ ವಿಭಾಗವನ್ನು ವಿಸ್ತರಿಸಿದ್ದು, Snap ನ EU ಚಟುವಟಿಕೆಗಳಿಗೆ ಹೆಚ್ಚಿಸಿದ ಒಳನೋಟಗಳನ್ನು ಒದಗಿಸಿದ್ದೇವೆ. ನಿರ್ದಿಷ್ಟವಾಗಿ, ನಮ್ಮ ಇತ್ತೀಚಿನ DSA ಪಾರದರ್ಶಕತೆಯ ವರದಿಯನ್ನು ಮತ್ತು ನಮ್ಮ CSEA ಮಾಧ್ಯಮ ಪರಿಶೀಲನೆಗೆ ಸಂಬಂಧಿಸಿದ ಹೆಚ್ಚುವರಿ ಮಾಪನಗಳನ್ನು ನಾವು ಪ್ರಕಟಿಸುತ್ತಿದ್ದೇವೆ.
ಆನ್‌ಲೈನ್ ಹಾನಿಗಳ ವಿರುದ್ಧ ಹೋರಾಡುವುದಕ್ಕಾಗಿನ ನಮ್ಮ ನೀತಿಗಳ ಕುರಿತು ಮತ್ತು ನಮ್ಮ ವರದಿ ಮಾಡುವಿಕೆ ಅಭ್ಯಾಸಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುವ ಯೋಜನೆಗಳ ಕುರಿತು ಇನ್ನಷ್ಟು ಮಾಹಿತಿಗಾಗಿ, ಈ ಪಾರದರ್ಶಕತೆಯ ವರದಿ ಕುರಿತ ನಮ್ಮ ಇತ್ತೀಚಿನ ಸುರಕ್ಷತೆ ಮತ್ತು ಪ್ರಭಾವ ಬ್ಲಾಗ್ ಅನ್ನು ದಯವಿಟ್ಟು ಓದಿ. Snapchat ನಲ್ಲಿ ಹೆಚ್ಚುವರಿ ಸುರಕ್ಷತೆ ಮತ್ತು ಗೌಪ್ಯತೆ ಸಂಪನ್ಮೂಲಗಳನ್ನು ಕಂಡುಕೊಳ್ಳಲು, ಪುಟದ ಕೆಳಗಡೆ ಇರುವ ನಮ್ಮ ಪಾರದರ್ಶಕತೆಯ ವರದಿ ಮಾಡುವಿಕೆಯ ಬಗ್ಗೆ ಟ್ಯಾಬ್ ಅನ್ನು ನೋಡಿ.
ಈ ಪಾರದರ್ಶಕತೆಯ ವರದಿಯ ಇತ್ತೀಚಿನ ನವೀಕೃತ ಆವೃತ್ತಿಯನ್ನು en-US ಭಾಷೆಯಲ್ಲಿ ಕಾಣಬಹುದು ಎನ್ನುವುದನ್ನು ದಯವಿಟ್ಟು ಗಮನಿಸಿ.
ವಿಷಯ ಮತ್ತು ಖಾತೆ ಉಲ್ಲಂಘನೆಗಳ ಅವಲೋಕನ
ಜುಲೈ 1 - ಡಿಸೆಂಬರ್ 31, 2023 ರವರೆಗೆ, ನಮಗೆ ವರದಿ ಮಾಡಲಾದ ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ, ಜಾಗತಿಕ ಮಟ್ಟದಲ್ಲಿನ 53,76,714 ವಿಷಯ ತುಣುಕುಗಳ ವಿರುದ್ಧ Snap ಕ್ರಮ ಜಾರಿಗೊಳಿಸಿದೆ.
ವರದಿ ಮಾಡುವಿಕೆಯ ಅವಧಿಯಲ್ಲಿ, ನಾವು 0.01 ಪ್ರತಿಶತದಷ್ಟು ಉಲ್ಲಂಘನೆ ವೀಕ್ಷಣೆಯ ದರ (VVR) ಕಂಡಿದ್ದೇವೆ, ಅಂದರೆ Snapchat ನಲ್ಲಿ ಪ್ರತಿ 10,000 Snap ಮತ್ತು ಕಥೆ ವೀಕ್ಷಣೆಗಳಲ್ಲಿ, 1 ರಲ್ಲಿ ನಮ್ಮ ನೀತಿಗಳನ್ನು ಉಲ್ಲಂಘಿಸುವ ವಿಷಯ ಕಂಡುಬಂದಿದೆ. ವರದಿ ಮಾಡಿದ ವಿಷಯ ವಿರುದ್ಧ ಕ್ರಮ ಜಾರಿಗೊಳಿಸಲು ಸರಾಸರಿ ಸಮಯವು ~10 ನಿಮಿಷಗಳಾಗಿದ್ದವು.
ವಿಷಯ ಮತ್ತು ಖಾತೆ ಉಲ್ಲಂಘನೆಗಳ ವಿಶ್ಲೇಷಣೆ
ನಮ್ಮ ಒಟ್ಟಾರೆ ವರದಿ ಮಾಡುವಿಕೆ ಮತ್ತು ಕ್ರಮ ಜಾರಿಗೊಳಿಸುವಿಕೆ ದರಗಳು ಬಹುತೇಕ ಹಿಂದಿನ ಆರು ತಿಂಗಳುಗಳಿಗೆ ಸಮಾನವಾಗಿದ್ದವು. ಈ ಆವರ್ತನದಲ್ಲಿ, ಒಟ್ಟು ವಿಷಯ ಮತ್ತು ಖಾತೆ ವರದಿಗಳಲ್ಲಿ ನಾವು ಅಂದಾಜು 10% ಏರಿಕೆಯನ್ನು ಕಂಡಿದ್ದೇವೆ.
ಇಸ್ರೇಲ್-ಹಮಸ್ ಸಂಘರ್ಷವು ಈ ಅವಧಿಯಲ್ಲಿ ಆರಂಭವಾಯಿತು ಮತ್ತು ಇದರ ಪರಿಣಾಮವಾಗಿ ಉಲ್ಲಂಘನೆಯ ವಿಷಯದಲ್ಲಿ ಏರಿಕೆಯನ್ನು ನಾವು ಗಮನಿಸಿದ್ದೇವೆ. ದ್ವೇಷ ಭಾಷಣಕ್ಕೆ ಸಂಬಂಧಿಸಿದ ಒಟ್ಟು ವರದಿಗಳು ~61% ರಷ್ಟು ಹೆಚ್ಚಾಗಿದ್ದು, ಇದೇ ವೇಳೆ ದ್ವೇಷ ಭಾಷಣಗಳ ವಿರುದ್ಧ ಒಟ್ಟು ವಿಷಯ ಕ್ರಮ ಜಾರಿಗೊಳಿಸುವಿಕೆಯಲ್ಲಿ ~97% ರಷ್ಟು ಏರಿಕೆಯಾಗಿದೆ ಮತ್ತು ವಿಶಿಷ್ಠ ಖಾತೆ ಕ್ರಮ ಜಾರಿಗೊಳಿಸುವಿಕೆ ~124% ರಷ್ಟು ಏರಿಕೆಯಾಗಿದೆ. ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದದ ವರದಿಗಳು ಮತ್ತು ಕ್ರಮ ಜಾರಿಗೊಳಿಸುವಿಕೆಗಳು ಕೂಡ ಹೆಚ್ಚಾಗಿವೆ, ಆದರೆ ಅವು ನಮ್ಮ ವೇದಿಕೆಯಲ್ಲಿ ಜಾರಿಗೆ ತರಲಾದ ಒಟ್ಟು ವಿಷಯಗಳ ಪೈಕಿ ಶೇಕಡಾ 0.1ಕ್ಕಿಂತ ಕಡಿಮೆ. Snapchat ಅನ್ನು ಸುರಕ್ಷಿತವಾಗಿ ಇರಿಸುವ ಸಲುವಾಗಿ ಜಾಗತಿಕ ಸಂಘರ್ಷಗಳು ಉದ್ಭವಿಸಿದಂತೆ ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡಗಳು ಎಚ್ಚರಿಕೆಯಿಂದಲೇ ಮುಂದುವರಿತ್ತವೆ. ನಮ್ಮ ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ ನೀತಿಯ ಉಲ್ಲಂಘನೆಗಳಿಗಾಗಿ ಒಟ್ಟು ವರದಿಗಳು, ಕ್ರಮ ಜಾರಿಗೊಳಿಸಲಾದ ವಿಷಯ ಮತ್ತು ಕ್ರಮ ಜಾರಿಗೊಳಿಸಲಾದ ವಿಶಿಷ್ಠ ಖಾತೆಗಳಿಗೆ ಸಂಬಂಧಿಸಿ ಜಾಗತಿಕ ಮತ್ತು ದೇಶದ-ಮಟ್ಟದ ಇನ್ನಷ್ಟು ಮಾಹಿತಿಯನ್ನು ಒಳಗೊಳ್ಳಲು ನಾವು ನಮ್ಮ ಪಾರದರ್ಶಕತೆಯ ವರದಿಯನ್ನು ಕೂಡ ವಿಸ್ತರಿಸಿದ್ದೇವೆ.
ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ವಿರುದ್ಧ ಹೋರಾಡುವುದು
ನಮ್ಮ ಸಮುದಾಯದ ಯಾವುದೇ ಸದಸ್ಯರ, ವಿಶೇಷವಾಗಿ ಅಪ್ರಾಪ್ತವಯಸ್ಕರ ಲೈಂಗಿಕ ಶೋಷಣೆಯು ಕಾನೂನುಬಾಹಿರವಾಗಿದೆ, ಅಸಹ್ಯಕರವಾಗಿದೆ ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಿಂದ ನಿಷೇಧಿಸಲ್ಪಟ್ಟಿದೆ. ನಮ್ಮ ವೇದಿಕೆಯಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯವನ್ನು (CSEA) ತಡೆಗಟ್ಟುವುದು, ಪತ್ತೆಹಚ್ಚುವುದು ಮತ್ತು ನಿರ್ಮೂಲನೆ ಮಾಡುವುದು ನಮಗೆ ಪ್ರಮುಖ ಆದ್ಯತೆಯಾಗಿದೆ, ಹಾಗೂ ಇವುಗಳನ್ನು ಮತ್ತು ಇತರ ರೀತಿಯ ಅಪರಾಧಗಳನ್ನು ಎದುರಿಸಲು ನಾವು ನಮ್ಮ ಸಾಮರ್ಥ್ಯಗಳನ್ನು ನಿರಂತರವಾಗಿ ವಿಕಸನಗೊಳಿಸುತ್ತೇವೆ.
ಕ್ರಮವಾಗಿ ಮಕ್ಕಳ ಲೈಂಗಿಕ ದೌರ್ಜನ್ಯದ ತಿಳಿದಿರುವ ಕಾನೂನುಬಾಹಿರ ಚಿತ್ರಗಳು ಮತ್ತು ವೀಡಿಯೊಗಳನ್ನು ಗುರುತಿಸಲು ಮತ್ತು ಕಾನೂನಿನ ಅನುಸಾರ, ಅವುಗಳ ಕುರಿತು U.S. ಕಾಣೆಯಾದ ಮತ್ತು ಶೋಷಣೆಗೊಳಗಾದ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ (NCMEC) ವರದಿ ಮಾಡಲು, PhotoDNA ದೃಢವಾದ ಹ್ಯಾಶ್-ಹೊಂದಿಸುವ ಮತ್ತು Google ನ ಮಕ್ಕಳ ಲೈಂಗಿಕ ಶೋಷಣೆ ಚಿತ್ರಣ (CSAI) ಹೊಂದಾಣಿಕೆಯಂತಹ ಸಕ್ರಿಯ ತಂತ್ರಜ್ಞಾನದ ಪತ್ತೆಮಾಡುವಿಕೆ ಸಾಧನಗಳನ್ನು ನಾವು ಬಳಸುತ್ತೇವೆ. ನಂತರ NCMEC, ಅಗತ್ಯಕ್ಕೆ ಅನುಸಾರ ದೇಶೀಯ ಅಥವಾ ಅಂತರರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ನಡೆಸುತ್ತದೆ.
2023 ರ ದ್ವಿತೀಯಾರ್ಧದಲ್ಲಿ, ವರದಿಯಾದ ಒಟ್ಟು ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ಉಲ್ಲಂಘನೆಗಳ ಪೈಕಿ 59% ಅನ್ನು ನಾವು ಪೂರ್ವಭಾವಿಯಾಗಿ ಪತ್ತೆ ಮಾಡಿದೆವು ಮತ್ತು ಅವುಗಳ ವಿರುದ್ಧ ಕ್ರಮ ಕೈಗೊಂಡೆವು. ಇದು ವರದಿ ಮಾಡುವಿಕೆಗಾಗಿ Snapchatter ಗಳ ಆಯ್ಕೆಗಳಲ್ಲಿ ವರ್ಧನೆಗಳಿಂದಾಗಿ ಹಿಂದಿನ ಅವಧಿಯಿಂದ 39% ಒಟ್ಟು ಇಳಿಕೆಯನ್ನು ಬಿಂಬಿಸುವುದರೊಂದಿಗೆ, Snapchat ನಲ್ಲಿ ಕಳುಹಿಸಿದ ಸಂಭಾವ್ಯ CSEA ಯ ನಮ್ಮ ಗೋಚರತೆಯನ್ನು ಹೆಚ್ಚಿಸುತ್ತದೆ.
*NCMEC ಗೆ ಪ್ರತಿ ಸಲ್ಲಿಕೆಯು ಬಹು ವಿಷಯದ ತುಣುಕುಗಳನ್ನು ಒಳಗೊಂಡಿರಬಹುದು ಎಂಬುದನ್ನು ಗಮನಿಸಿ. NCMEC ಗೆ ಸಲ್ಲಿಸಿದ ಮೀಡಿಯಾದ ಒಟ್ಟು ಪ್ರತ್ಯೇಕ ತುಣುಕುಗಳು ನಮ್ಮ ಜಾರಿಗೊಳಿಸಿದ ಒಟ್ಟು ವಿಷಯಕ್ಕೆ ಸಮನಾಗಿರುತ್ತದೆ. ಈ ಸಂಖ್ಯೆಯಿಂದ ಹಿಂತೆಗೆದುಕೊಂಡ NCMEC ಸಲ್ಲಿಕೆಗಳನ್ನು ಸಹ ನಾವು ಹೊರತುಪಡಿಸಿದ್ದೇವೆ.
ಸ್ವಯಂ-ಹಾನಿ ಮತ್ತು ಆತ್ಮಹತ್ಯೆ ವಿಷಯ
Snapchatter ಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನಾವು ತೀವ್ರ ಕಾಳಜಿ ವಹಿಸುತ್ತೇವೆ, ಅದು Snapchat ಅನ್ನು ವಿಭಿನ್ನವಾಗಿ ನಿರ್ಮಿಸುವ ನಮ್ಮ ನಿರ್ಧಾರವನ್ನು ರೂಪಿಸುವುದನ್ನು ಮುಂದುವರಿಸುತ್ತದೆ. ನೈಜ ಸ್ನೇಹಿತರ ನಡುವೆ ಮತ್ತು ಅವರಲ್ಲಿ ಸಂವಹನಗಳಿಗಾಗಿ ವಿನ್ಯಾಸಗೊಳಿಸಲಾಗಿರುವ ವೇದಿಕೆಯಾಗಿ, ಕಷ್ಟಕರ ಸಂದರ್ಭಗಳಲ್ಲಿ ಪರಸ್ಪರ ಸಹಾಯ ಮಾಡುವುದಕ್ಕಾಗಿ ಸ್ನೇಹಿತರನ್ನು ಸಬಲೀಕರಿಸಲು Snapchat ವಿಶಿಷ್ಟ ಪಾತ್ರ ವಹಿಸಬಲ್ಲದು ಎಂದು ನಾವು ನಂಬಿದ್ದೇವೆ.
ಸಂಕಟದಲ್ಲಿರುವ Snapchatter ಗಳ ಬಗ್ಗೆ ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡಕ್ಕೆ ತಿಳಿದಾಗ, ಅವರು ಸ್ವಯಂ-ಹಾನಿ ತಡೆಗಟ್ಟುವಿಕೆ ಮತ್ತು ಬೆಂಬಲ ಸಂಪನ್ಮೂಲಗಳನ್ನು ಒದಗಿಸಬಹುದು ಮತ್ತು ಸೂಕ್ತವಾಗಿರುವಾಗ ತುರ್ತು ಪ್ರತಿಕ್ರಿಯೆ ಸಿಬ್ಬಂದಿಗೆ ಸೂಚನೆ ನೀಡಬಹುದು. ನಾವು ಹಂಚಿಕೊಳ್ಳುವ ಸಂಪನ್ಮೂಲಗಳು ನಮ್ಮ ಸುರಕ್ಷತಾ ಸಂಪನ್ಮೂಲಗಳ ಜಾಗತಿಕ ಪಟ್ಟಿಯಲ್ಲಿ ಲಭ್ಯ ಇವೆ ಮತ್ತು ಎಲ್ಲ Snapchatter ಗಳಿಗೆ ಸಾರ್ವಜನಿಕವಾಗಿ ಲಭ್ಯ ಇವೆ.
ಮೇಲ್ಮನವಿಗಳು
ನಮ್ಮ ಹಿಂದಿನ ವರದಿಯಲ್ಲಿ ಮೇಲ್ಮನವಿಗಳ ಕುರಿತು ನಾವು ಮಾಪನಗಳನ್ನು ಪರಿಚಯಿಸಿದೆವು, ಅಲ್ಲಿ ತಮ್ಮ ಖಾತೆಗಳ ವಿರುದ್ಧ ನಮ್ಮ ಆರಂಭಿಕ ನಿಯಂತ್ರಣ ನಿರ್ಧಾರಗಳನ್ನು ಮರುಪರಿಶೀಲಿಸಲು ಬಳಕೆದಾರರು ನಮ್ಮನ್ನು ಎಷ್ಟು ಬಾರಿ ಕೇಳಿದರು ಎಂಬುದನ್ನು ನಾವು ಗಮನಕ್ಕೆ ತಂದೆವು. ಈ ವರದಿಯಲ್ಲಿ, ಖಾತೆ ಮಟ್ಟದ ಉಲ್ಲಂಘನೆಗಳಿಗಾಗಿ ನಮ್ಮ ನೀತಿ ವರ್ಗಗಳ ಪೂರ್ಣ ಶ್ರೇಣಿಯನ್ನು ಸೆರೆಹಿಡಿಯಲು ನಮ್ಮ ಮೇಲ್ಮನವಿಗಳನ್ನು ನಾವು ವಿಸ್ತರಿಸಿದ್ದೇವೆ.
* ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಷಯ ಅಥವಾ ಚಟುವಟಿಕೆಯ ಹರಡುವಿಕೆಯನ್ನು ನಿಲ್ಲಿಸುವುದು ಅಗ್ರ ಆದ್ಯತೆಯಾಗಿದೆ. ಈ ಗುರಿಯ ಕಡೆಗೆ Snap ಗಣನೀಯ ಸಂಪನ್ಮೂಲಗಳನ್ನು ಮೀಸಲಿಡುತ್ತದೆ ಮತ್ತು ಅಂತಹ ನಡವಳಿಕೆಗೆ ಸಂಬಂಧಿಸಿ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. CSE ಮೇಲ್ಮನವಿಗಳನ್ನು ಪರಿಶೀಲಿಸಲು ವಿಶೇಷ ತರಬೇತಿಯ ಅಗತ್ಯವಿದೆ ಮತ್ತು ವಿಷಯದ ಗ್ರಾಫಿಕ್ ಸ್ವರೂಪದಿಂದಾಗಿ ಈ ವಿಮರ್ಶೆಗಳನ್ನು ನಿಭಾಯಿಸುವ ಪ್ರತಿನಿಧಿಗಳ ತಂಡವು ಸೀಮಿತವಾಗಿದೆ. 2023 ರ ಶರತ್ಕಾಲದಲ್ಲಿ, ಕೆಲವು CSE ಕ್ರಮ ಜಾರಿಗೊಳಿಸುವಿಕೆಗಳ ಸ್ಥಿರತೆಯ ಮೇಲೆ ಪರಿಣಾಮ ಬೀರುವಂತಹ ನೀತಿ ಬದಲಾವಣೆಗಳನ್ನು Snap ಅನುಷ್ಠಾನಗೊಳಿಸಿತು; ಪ್ರತಿನಿಧಿ ಮರು-ತರಬೇತಿ ಮತ್ತು ಗುಣಮಟ್ಟ ಭರವಸೆಯ ಮೂಲಕ ನಾವು ಈ ಅಸ್ಥಿರತೆಗಳನ್ನು ಬಗೆಹರಿಸಿದ್ದೇವೆ. Snap ನ ಮುಂದಿನ ಪಾರದರ್ಶಕತೆ ವರದಿಯು CSE ಮೇಲ್ಮನವಿಗಳಿಗಾಗಿ ಪ್ರತಿಕ್ರಿಯಾ ಸಮಯಗಳನ್ನು ಸುಧಾರಿಸುವ ಮತ್ತು ಆರಂಭಿಕ ಕ್ರಮ ಜಾರಿಗೊಳಿಸುವಿಕೆ ಕ್ರಮಗಳ ನಿಖರತೆಯನ್ನು ಸುಧಾರಿಸುವ ನಿಟ್ಟಿನಲ್ಲಿನ ಪ್ರಗತಿಯನ್ನು ಬಹಿರಂಗಪಡಿಸುತ್ತವೆ.
ಜಾಹೀರಾತುಗಳ ಮಾಡರೇಷನ್
ಎಲ್ಲ ಜಾಹೀರಾತುಗಳು ನಮ್ಮ ಜಾಹೀರಾತು ನೀತಿಗಳನ್ನು ಪೂರ್ಣವಾಗಿ ಅನುಸರಣೆ ಮಾಡುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು Snap ಬದ್ಧವಾಗಿದೆ. ನಮ್ಮ ಎಲ್ಲ ಬಳಕೆದಾರರಿಗೆ ಸುರಕ್ಷಿತ ಮತ್ತು ಆನಂದದಾಯಕ ವಾತಾವರಣವನ್ನು ನಿರ್ಮಿಸುವ, ಜವಾಬ್ದಾರಿಯುತ ಮತ್ತು ಗೌರವಯುತ ಜಾಹೀರಾತು ನೀಡುವಿಕೆಯ ವಿಧಾನದಲ್ಲಿ ನಾವು ನಂಬಿಕೆ ಇರಿಸಿದ್ದೇವೆ. Snapchat ನಲ್ಲಿ ಪಾವತಿಸಿದ ಜಾಹೀರಾತುಗಳಿಗಾಗಿ ನಮ್ಮ ಮಾಡರೇಷನ್ ಕುರಿತು ನಾವು ಈ ಕೆಳಗೆ ಒಳನೋಟಗಳನ್ನು ಸೇರಿಸಿದ್ದೇವೆ. ಮೋಸಗೊಳಿಸುವ ಕಂಟೆಂಟ್, ವಯಸ್ಕರ ಕಂಟೆಂಟ್, ಹಿಂಸಾತ್ಮಕ ಅಥವಾ ನೆಮ್ಮದಿಗೆಡಿಸುವ ಕಂಟೆಂಟ್, ದ್ವೇಷ ಭಾಷಣ ಮತ್ತು ಬೌದ್ಧಿಕ ಆಸ್ತಿಯ ಉಲ್ಲಂಘನೆಯ ಕಂಟೆಂಟ್ ಸೇರಿದಂತೆ Snap ನ ಜಾಹೀರಾತು ನೀತಿಗಳಲ್ಲಿ ವಿವರಿಸಲಾಗಿರುವ ವಿವಿಧ ಕಾರಣಗಳಿಗಾಗಿ Snapchat ನಲ್ಲಿನ ಜಾಹೀರಾತುಗಳನ್ನು ತೆಗೆದುಹಾಕಬಹುದಾಗಿದೆ ಎಂಬುದನ್ನು ಗಮನಿಸಿ. ಮುಂದುವರಿದು, ಈ ಪಾರದರ್ಶಕತೆಯ ವರದಿಯ ನ್ಯಾವಿಗೇಶನ್ ಬಾರ್‌ನಲ್ಲಿ ಈಗ ನೀವು Snapchat ನ ಜಾಹೀರಾತುಗಳ ಗ್ಯಾಲರಿಯನ್ನು ನೋಡಬಹುದು.
ಪ್ರಾದೇಶಿಕ ಮತ್ತು ದೇಶದ ಅವಲೋಕನ
ಈ ವಿಭಾಗವು ಭೌಗೋಳಿಕ ಪ್ರದೇಶಗಳ ಮಾದರಿಯಲ್ಲಿ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಜಾರಿಯ ಅವಲೋಕನವನ್ನು ಒದಗಿಸುತ್ತದೆ. ನಮ್ಮ ಮಾರ್ಗಸೂಚಿಗಳು ಸ್ಥಳವನ್ನು ಪರಿಗಣಿಸದೆ Snapchat ನಲ್ಲಿನ ಎಲ್ಲಾ ವಿಷಯಗಳಿಗೆ ಮತ್ತು ಎಲ್ಲಾ Snapchatter ಗಳಿಗೆ ಜಗತ್ತಿನಾದ್ಯಂತ ಅನ್ವಯಿಸುತ್ತವೆ.
ಎಲ್ಲ EU ಸದಸ್ಯ ರಾಷ್ಟ್ರಗಳು ಸೇರಿದಂತೆ, ಪ್ರತ್ಯೇಕ ದೇಶಗಳಿಗಾಗಿ ಮಾಹಿತಿಯು ಲಗತ್ತಿಸಿರುವ CSV ಫೈಲ್ ಮೂಲಕ ಡೌನ್‌ಲೋಡ್‌ಗೆ ಲಭ್ಯವಿದೆ.

























