ಕಾನೂನು ಜಾರಿಗಾಗಿ ಮಾಹಿತಿ

ಕಾನೂನು ಜಾರಿ ಮತ್ತು Snap ಕಮ್ಯುನಿಟಿ

Snap ನಲ್ಲಿ, ನಮ್ಮ ವೇದಿಕೆಯು ದುರುಪಯೋಗವಾಗುವುದರಿಂದ Snapchatter‌ ಗಳನ್ನು ರಕ್ಷಿಸುವ ನಮ್ಮ ಬದ್ಧತೆಯನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ. ಅದರ ಭಾಗವಾಗಿ, ನಮ್ಮ ವೇದಿಕೆಯಲ್ಲಿ ಸುರಕ್ಷತೆಯನ್ನು ಉತ್ತೇಜಿಸಲು ನಾವು ಕಾನೂನು ಜಾರಿ ಮತ್ತು ಸರ್ಕಾರಿ ಏಜೆನ್ಸಿ ಗಳೊಂದಿಗೆ ಕೆಲಸ ಮಾಡುತ್ತೇವೆ.

ನಮ್ಮ ಬಳಕೆದಾರರ ಗೌಪ್ಯತೆ ಮತ್ತು ಹಕ್ಕುಗಳನ್ನು ಗೌರವಿಸುವ ಸಂದರ್ಭದಲ್ಲಿ ಕಾನೂನು ಜಾರಿಗೆ ಸಹಾಯ ಮಾಡಲು Snap ಬದ್ಧವಾಗಿದೆ. Snapchat ಖಾತೆಯ ದಾಖಲೆಗಳಿಗಾಗಿ ಕಾನೂನು ವಿನಂತಿಯ ಸಿಂಧುತ್ವವನ್ನು ನಾವು ಸ್ವೀಕರಿಸಿದ ಮತ್ತು ಸ್ಥಾಪಿಸಿದ ನಂತರ, ನಾವು ಅನ್ವಯವಾಗುವ ಕಾನೂನು ಮತ್ತು ಗೌಪ್ಯತೆ ಅವಶ್ಯಕತೆಗಳಿಗೆ ಅನುಸಾರವಾಗಿ ಪ್ರತಿಕ್ರಿಯಿಸುತ್ತೇವೆ.

ಕಾನೂನು ಜಾರಿ ಕುರಿತು ಸಾಮಾನ್ಯ ಮಾಹಿತಿ

Snap ನಿಂದ Snapchat ಖಾತೆಯ ದಾಖಲೆಗಳನ್ನು (ಅಂದರೆ Snapchat ಬಳಕೆದಾರರ ಡೇಟಾವನ್ನು) ವಿನಂತಿಸಲು ಬಯಸುವ ಕಾನೂನು ಜಾರಿ ಮತ್ತು ಸರ್ಕಾರಿ ಅಧಿಕಾರಿಗಳಿಗಾಗಿ ಈ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಒದಗಿಸಲಾಗಿದೆ. ಕಾನೂನು ಜಾರಿ ವಿನಂತಿಗಳಿಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ನೀವು ಕಾನೂನು ಜಾರಿ ಮಾರ್ಗದರ್ಶಿ ಎಂಬಲ್ಲಿ ನೋಡಬಹುದು, ಇಲ್ಲಿ ನೀವು Snapchat ಖಾತೆಯ ದಾಖಲೆಗಳ ಲಭ್ಯತೆಯ ಸಂಭಾವ್ಯತೆ ಮತ್ತು ಡೇಟಾ ಬಹಿರಂಗಪಡಿಸುವಿಕೆಯನ್ನು ಒತ್ತಾಯಿಸಲು ಅಗತ್ಯವಿರುವ ಕಾನೂನು ಪ್ರಕ್ರಿಯೆಯ ಬಗ್ಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ನೋಡಬಹುದು.

ಯುಎಸ್ ಕಾನೂನು ಪ್ರಕ್ರಿಯೆ

ಯುಎಸ್ ಕಂಪನಿಯಾಗಿ ಯಾವುದೇ Snapchat ಖಾತೆಯ ದಾಖಲೆಗಳನ್ನು ಬಹಿರಂಗಪಡಿಸಲು Snap ಗೆ ಕ್ರಮವಾಗಿ ಯುಎಸ್ ಕಾನೂನನ್ನು ಅನುಸರಿಸಲು ಯುಎಸ್ ಕಾನೂನು ಜಾರಿ ಮತ್ತು ಸರ್ಕಾರಿ ಏಜೆನ್ಸಿಗಳಿಗೆ Snap ಅಗತ್ಯಪಡಿಸುತ್ತದೆ.

Snapchat ಖಾತೆಯ ದಾಖಲೆಗಳನ್ನು ಬಹಿರಂಗಪಡಿಸುವ ನಮ್ಮ ಸಾಮರ್ಥ್ಯವು ಸಾಮಾನ್ಯವಾಗಿ ಸ್ಟೋರ್ಡ್ ಕಮ್ಯುನಿಕೇಶನ್ಸ್ ಆಕ್ಟ್ 18 U.S.C. § 2701, et seq. ರಿಂದ ನಿಯಂತ್ರಿಸಲ್ಪಡುತ್ತದೆ. ನ್ಯಾಯಾಲಯದ ಹಾಜರಾತಿ ಹಾಗು ಬೇರೆ ಆಜ್ಞೆ ಮತ್ತು ಶೋಧನಾ ವಾರೆಂಟ್‌ಗಳನ್ನು ಒಳಗೊಂಡು ನಿರ್ದಿಷ್ಟ ವಿಧದ ಕಾನೂನು ಪ್ರಕ್ರಿಯೆಗಳಿಗೆ ಮಾತ್ರ ಪ್ರತಿಕ್ರಿಯೆಯಾಗಿ ನಾವು ನಿಶ್ಚಿತವಾದ Snapchat ಖಾತೆಯ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದು SCA ಕಡ್ಡಾಯಗೊಳಿಸುತ್ತದೆ.

ಯುಯಸ್ ಗೆ ಸೇರದ. ಕಾನೂನು ಪ್ರಕ್ರಿಯೆ

ಯುಯಸ್ ಗೆ ಸೇರದ ವಿನಂತಿಸಲು ಕಾನೂನು ಜಾರಿ ಮತ್ತು ಸರ್ಕಾರಿ ಏಜೆನ್ಸಿಗಳು Snap ಚಾಟ್ ಖಾತೆಯ ದಾಖಲೆಗಳನ್ನು ಸಾಮಾನ್ಯವಾಗಿ ಪರಸ್ಪರ ಕಾನೂನು ನೆರವು ಒಪ್ಪಂದದ ಯಂತ್ರಶಾಸ್ತ್ರ ಅಥವಾ ಲೆಟರ್ಸ್ ರೋಗೇಟರಿ ಪ್ರಕ್ರಿಯೆಗಳನ್ನು ಅವಲಂಬಿಸಬೇಕು. ಯುಯಸ್ ಗೆ ಸೇರದ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸೌಜನ್ಯವಾಗಿರಲು, ನಾವು MLAT ಅಥವಾ ಲೆಟರ್ಸ್ ರೋಗೇಟರಿ ಕಾರ್ಯವಿಧಾನಗಳನ್ನು ಕೈಗೊಳ್ಳುವಾಗ ಸಮರ್ಪಕವಾಗಿ ಸಲ್ಲಿಸಿದ ಸಂರಕ್ಷಣಾ ವಿನಂತಿಗಳನ್ನು ಪರಿಶೀಲಿಸುತ್ತೇವೆ ಮತ್ತು ಅವುಗಳಿಗೆ ಉತ್ತರಿಸುತ್ತೇವೆ.

ಕೇವಲ ಸಬ್‌ಸ್ಕ್ರೈಬರ್ ಮಾಹಿತಿ ಮತ್ತು IP ಡೇಟಾದಂತಹ ಕಂಟೆಂಟ್ ಹೊರತಾದ ಮಾಹಿತಿಯನ್ನು ಕೋರುವ ವಿನಂತಿಸುವ ದೇಶದಲ್ಲಿ ಸಮರ್ಪಕವಾಗಿ ಅಧಿಕೃತಗೊಂಡಿರುವ ಕಾನೂನು ಪ್ರಕ್ರಿಯೆಗೆ ಪ್ರತಿಕ್ರಿಯೆಯಾಗಿ ಯುಯಸ್ ಗೆ ಸೇರದ ಸಂಭಂದಪಟ್ಟ ಕಾನೂನು ಜಾರಿ ಮತ್ತು ಸರ್ಕಾರಿ ಏಜೆನ್ಸಿಗಳಿಗೆ Snap ತನ್ನ ಸ್ವಂತ ವಿವೇಚನೆ ಮೇರೆಗೆ, ಸೀಮಿತ Snapchat ಖಾತೆಯ ದಾಖಲೆಗಳನ್ನು ಒದಗಿಸಬಹುದು.

ತುರ್ತು ಬಹಿರಂಗಪಡಿಸುವಿಕೆಯ ವಿನಂತಿಗಳು

18 U.S.C. §§ 2702(b)(8) ಮತ್ತು 2702(c)(4) ಗೆ ಅನುಗುಣವಾಗಿ, ನಾವು Snapchat ಖಾತೆಯನ್ನು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಲು ಶಕ್ತರಾಗಿದ್ದು, ಅಂತಹ ದಾಖಲೆಗಳನ್ನು ತಕ್ಷಣ ಬಹಿರಂಗಪಡಿಸಲು ಅಗತ್ಯಪಡಿಸುವ ಸನ್ನಿಹಿತ ಮರಣವನ್ನು ಅಥವಾ ದೇಹಕ್ಕೆ ಗಂಭೀರವಾಗಿ ಹಾನಿಯಾಗುವ ಬೆದರಿಕೆಯನ್ನು ತುರ್ತಾಗಿ ಸೂಚಿಸುವ ಸದ್ಭಾವನೆಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ.

Snap ಗೆ ತುರ್ತು ಬಹಿರಂಗಪಡಿಸುವ ವಿನಂತಿಗಳನ್ನು ಸಲ್ಲಿಸುವುದು ಹೇಗೆ ಎಂಬುದಕ್ಕೆ ಸಂಬಂಧಿಸಿದಂತೆ ಕಾನೂನು ಜಾರಿ ಸಂಸ್ಥೆಗಳಿಗೆ ಮಾಹಿತಿಯನ್ನು ನಮ್ಮ ಕಾನೂನು ಜಾರಿ ಮಾರ್ಗದರ್ಶಿಯಲ್ಲಿ ಕಂಡುಕೊಳ್ಳಬಹುದು. Snap ಗೆ ತುರ್ತು ಬಹಿರಂಗಪಡಿಸುವಿಕೆಯ ವಿನಂತಿಗಳನ್ನು ಪ್ರತಿಜ್ಞಾಪೂರ್ವಕ ಕಾನೂನು ಜಾರಿ ಅಧಿಕಾರಿಯಿಂದ ಸಲ್ಲಿಸಲ್ಪಡಬೇಕು ಮತ್ತು ಅಧಿಕೃತ ಕಾನೂನು ಜಾರಿ (ಅಥವಾ ಸರ್ಕಾರಿ) ಇಮೇಲ್ ಡೊಮೇನ್‌ನಿಂದ ಬಂದಿರಬೇಕು.

ಡೇಟಾ ಧಾರಣ ಅವಧಿಗಳು

Snap ಗಳು, ಚಾಟ್‌ಗಳು ಮತ್ತು ಕಥೆಗಳಿಗಾಗಿ ಡೇಟಾ ಧಾರಣ ನೀತಿಗಳ ಕುರಿತು ಪ್ರಸ್ತುತ ಮಾಹಿತಿ ಹಾಗೂ ಇತರ ಉಪಯುಕ್ತ ಮಾಹಿತಿಯನ್ನು ಬೆಂಬಲ ಸೈಟ್‌ನಲ್ಲಿ ನೋಡಬಹುದು.

 

ಸಂರಕ್ಷಣೆ ವಿನಂತಿಗಳು

18 U.S.C. § 2703(f) ಗೆ ಅನುಸಾರವಾಗಿ ಮಾಹಿತಿಯನ್ನು ಸಂರಕ್ಷಿಸಲು ಕಾನೂನು ಜಾರಿ ಸಂಸ್ಥೆಗಳಿಂದ ಔಪಚಾರಿಕ ವಿನಂತಿಗಳನ್ನು ನಾವು ಗೌರವಿಸುತ್ತೇವೆ. ಅಂತಹ ವಿನಂತಿಯನ್ನು ಸ್ವೀಕರಿಸಿದಾಗ, ಯಾವುದೇ ಸೂಕ್ತವಾಗಿ ಗುರುತಿಸಿದ Snapchat ಬಳಕೆದಾರನಿಗೆ(ರಿಗೆ) ಸಂಬಂಧಿಸಿದ ಮತ್ತು ವಿನಂತಿಯಲ್ಲಿ ಸೂಚಿಸಿದ ದಿನಾಂಕ ವ್ಯಾಪ್ತಿಯೊಳಗೆ ಇರುವ ಯಾವುದೇ ಲಭ್ಯವಿರುವ Snapchat ಖಾತೆಯ ದಾಖಲೆಗಳನ್ನು ನಾವು ಉಳಿಸಲು ಪ್ರಯತ್ನಿಸುತ್ತೇವೆ. ಹಾಗೆ ಸಂರಕ್ಷಿಸಿದ ಯಾವುದೇ ರೆಕಾರ್ಡ್‌ಗಳನ್ನು ಒಂದು ಆಫ್‌ಲೈನ್ ಫೈಲ್‌ನಲ್ಲಿ ನಾವು 90 ದಿನಗಳವರೆಗೆ ನಿರ್ವಹಿಸುತ್ತೇವೆ ಮತ್ತು ಔಪಚಾರಿಕ ವಿಸ್ತರಣೆ ವಿನಂತಿಯೊಂದಿಗೆ ಒಂದು ಹೆಚ್ಚುವರಿ 90 ದಿನಗಳ ಅವಧಿಗೆ ಆ ಸಂರಕ್ಷಿಸುವಿಕೆಯನ್ನು ವಿಸ್ತರಿಸುತ್ತೇವೆ. Snapchat ಖಾತೆಯನ್ನು ನಿಖರವಾಗಿ ಪತ್ತೆ ಮಾಡುವ ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಕಾನೂನು ಜಾರಿ ಮಾರ್ಗದರ್ಶಿಯ ಕಲಂ IV ನ್ನು ನೋಡಿ.

ಯುಯಸ್ ಗೆ ಸೇರದ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸೌಜನ್ಯವಾಗಿರಲು, Snap ತನ್ನ ವಿವೇಚನೆ ಮೇರೆಗೆ, MLAT ಅಥವಾ ಲೆಟರ್ಸ್ ರೊಗೇಟರಿ ಪ್ರಕ್ರಿಯೆ ನಡೆಸುತ್ತಿರುವಾಗ ಲಭ್ಯವಿರುವ Snapchat ಖಾತೆಯ ದಾಖಲೆಗಳನ್ನು ಒಂದು ವರ್ಷದವರೆಗೆ ಸಂರಕ್ಷಿಸಬಹುದು. ಔಪಚಾರಿಕ ವಿಸ್ತರಣೆ ವಿನಂತಿಯೊಂದಿಗೆ, ತನ್ನ ವಿವೇಚನೆ ಮೇರೆಗೆ Snap ಅಂತಹ ಸಂರಕ್ಷಿಸುವಿಕೆಯನ್ನು ಒಂದು ಹೆಚ್ಚುವರಿ ಆರು ತಿಂಗಳಿಗೆ ವಿಸ್ತರಿಸಬಹುದು.

ಮಕ್ಕಳ ಸುರಕ್ಷತೆಯ ಕಳವಳಗಳು

ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಮಕ್ಕಳ ಶೋಷಣೆಯ ವಿಷಯದ ಬಗ್ಗೆ ನಮಗೆ ಅರಿವು ಮೂಡಿಸಿದ ನಿದರ್ಶನಗಳಲ್ಲಿ, ನಮ್ಮ ಟ್ರಸ್ಟ್ ಮತ್ತು ಸುರಕ್ಷತಾ ತಂಡವು ಆರೋಪಗಳನ್ನು ಪರಿಶೀಲಿಸುತ್ತದೆ ಮತ್ತು ಸೂಕ್ತವಾದರೆ, ಅಂತಹ ಸಂದರ್ಭಗಳನ್ನು ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ (NCMEC) ವರದಿ ಮಾಡುತ್ತದೆ. NCMEC ನಂತರ ಆ ವರದಿಗಳನ್ನು ವಿಮರ್ಶಿಸುತ್ತದೆ ಮತ್ತು ಎರಡೂ ಜಾಗತಿಕ ಕಾನೂನು ಜಾರಿ ಏಜೆನ್ಸಿಗಳೊಂದಿಗೆ ಸಮನ್ವಯಗೊಳಿಸುತ್ತದೆ.

ಬಳಕೆದಾರರ ಸಮ್ಮತಿ

ಕೇವಲ ಬಳಕೆದಾರರ ಸಮ್ಮತಿ ಆಧರಿಸಿ Snap ಬೇರೆ ಬಳಕೆದಾರರ ಡೇಟಾವನ್ನು ಬಹಿರಂಗಪಡಿಸುವುದಿಲ್ಲ. ತಮ್ಮ ಸ್ವಂತ ಡೇಟಾವನ್ನು ಡೌನ್‌ಲೋಡ್ ಮಾಡಲು ಕೋರುವ ಬಳಕೆದಾರರು ನಮ್ಮ ಬೆಂಬಲ ಸೈಟ್‌ನಲ್ಲಿ ಹೆಚ್ಚುವರಿ ಮಾಹಿತಿಯನ್ನು ನೋಡಬಹುದು.

ಬಳಕೆದಾರ ಸೂಚನೆ ನೀತಿ

ತಮ್ಮ ದಾಖಲೆಗಳ ಬಹಿರಂಗಪಡಿಸುವಿಕೆಯ ಬಯಸಿ ಕಾನೂನು ಪ್ರಕ್ರಿಯೆಯನ್ನು ಸ್ವೀಕರಿಸಿದಾಗ ಸಂಭಂದಪಟ್ಟ ಬಳಕೆದಾರರಿಗೆ ಈ ಕೋರಿಕೆಯ ಬಗ್ಗೆ ತಿಳಿಸುವುದು Snap ನ ನೀತಿಯಾಗಿರುತ್ತದೆ. ಈ ನೀತಿಗೆ ಎರಡು ವಿನಾಯಿತಿಗಳನ್ನು ನಾವು ಗುರುತಿಸುತ್ತೇವೆ. ಮೊದಲನೆಯದಾಗಿ, ನಾವು ಇತರೆ ಕಾನೂನು ಪ್ರಾಧಿಕಾರದಿಂದ ಅಥವಾ ನ್ಯಾಯಾಲಯದ 18 U.S.C. § 2705(b) ಅಡಿಯಲ್ಲಿ ಹೊರಡಿಸಲಾದ ಆದೇಶದಿಂದ ಸೂಚನೆಯನ್ನು ನೀಡುವುದು ನಿಷೇಧಿತವಾಗಿರುವಲ್ಲಿ ಕಾನೂನು ಪ್ರಕ್ರಿಯೆಯ ಬಗ್ಗೆ ಬಳಕೆದಾರರಿಗೆ ತಿಳಿಸುವುದಿಲ್ಲ. ಎರಡನೆಯದಾಗಿ, ಉದಾಹರಣೆಗೆ ಮಕ್ಕಳ ಶೋಷಣೆ, ಮಾರಕ ಮಾದಕಪದಾರ್ಥಗಳ ಮಾರಾಟ ಅಥವಾ ಸನ್ನಿಹಿತ ಸಾವು ಅಥವಾ ಗಂಭೀರ ದೈಹಿಕ ಹಾನಿಯ ಅಪಾಯವನ್ನು ಒಳಗೊಂಡ ಪ್ರಕರಣಗಳಂತಹ ಒಂದು ಅಸಾಧಾರಣ ಸನ್ನಿವೇಶ ಇದೆ ಎಂದು ನಮ್ಮ ಸ್ವಂತ ವಿವೇಚನೆ ಮೇರೆಗೆ ನಂಬುವಲ್ಲಿ, ಬಳಕೆದಾರರ ಸೂಚನೆಯನ್ನು ವರ್ಜಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.

ಪ್ರಮಾಣ

U.S. ಕಾನೂನು ಜಾರಿ ಸಂಸ್ಥೆಗೆ ಮಾಡಿದ ದಾಖಲೆಗಳ ಬಹಿರಂಗಪಡಿಸುವಿಕೆಯನ್ನು ಸಹಿ ಮಾಡಿದ ದೃಢೀಕರಣದ ಪ್ರಮಾಣಪತ್ರದೊಂದಿಗೆ ಜೊತೆಗೂಡಿಸಲಾಗುತ್ತದೆ, ಇದು ದಾಖಲೆಗಳ ಪಾಲಕರ ಪ್ರಮಾಣದ ಅಗತ್ಯವನ್ನು ನಿವಾರಿಸುತ್ತದೆ. ದಾಖಲೆಗಳ ಪಾಲಕರಿಂದ ಪ್ರಮಾಣವನ್ನು ಒದಗಿಸಲು ಈಗಲೂ ಅವಶ್ಯಕವಿದೆ ಎಂದು ನೀವು ಭಾವಿಸಿದರೆ, ಕ್ಯಾಲಿಫೋರ್ನಿಯಾ ದಂಡ ಸಂಹಿತೆ, § 1334, ಮತ್ತು ಅನುಕ್ರಮವಾದ ಕ್ರಿಮಿನಲ್ ವಿಚಾರಣೆಗಳಲ್ಲಿ ಒಂದು ದೇಶವಿಲ್ಲದ ಸಾಕ್ಷಿಯ ಹಾಜರಾತಿಯನ್ನು ಖಚಿತಪಡಿಸಲು ಏಕರೂಪ ಕಾಯ್ದೆ ಅನುಸಾರವಾದ ದೇಶದ ಎಲ್ಲ ಉಪವಿಭಾಗಗಳ ಹೊಂದಿಸುವಿಕೆಯನ್ನು ನಾವು ಅಗತ್ಯವಾಗಿಸುತ್ತೇವೆ.

ತಜ್ಞ ಸಾಕ್ಷಿಯ ಪ್ರಮಾಣ ಅಥವಾ ಯುನೈಟೆಡ್ ಸ್ಟೇಟ್ಸ್ ಹೊರಗೆ ಪ್ರಮಾಣವನ್ನು ಒದಗಿಸಲು Snap ಗೆ ಸಾಧ್ಯವಿಲ್ಲ.

ವಿನಂತಿಗಳನ್ನು ಸಲ್ಲಿಸುವುದು ಹೇಗೆ

ಕಾನೂನು ಜಾರಿ ಅಧಿಕಾರಿಗಳು Snap Inc ಗೆ ತಮ್ಮ ವಿನಂತಿಯನ್ನು ಮಾಡಬೇಕು. ದಯವಿಟ್ಟು ವಿನಂತಿಸಿದ Snapchat ಖಾತೆಯ Snapchat ಬಳಕೆದಾರ ಹೆಸರನ್ನು ಗುರುತಿಸುವ ಬಗ್ಗೆ ಖಚಿತವಾಗಿರಿ. ಬಳಕೆದಾರ ಹೆಸರನ್ನು ಪತ್ತೆ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, — ವಿವಿಧ ಪ್ರಮಾಣದ ಯಶಸ್ಸಿನೊಂದಿಗೆ — ನಾವು ಫೋನ್ ಸಂಖ್ಯೆ, ಇಮೇಲ್ ವಿಳಾಸ ಅಥವಾ ಹೆಕ್ಸಾಡೆಸಿಮಲ್ ಬಳಕೆದಾರ ID ಯೊಂದಿಗೆ ಖಾತೆ ಕಂಡುಹಿಡಿಯಲು ಪ್ರಯತ್ನಿಸಬಹುದು. Snapchat ಖಾತೆಯನ್ನು ನಿಖರವಾಗಿ ಪತ್ತೆ ಮಾಡುವ ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಕಾನೂನು ಜಾರಿ ಮಾರ್ಗದರ್ಶಿಯ ಕಲಂ IV ನ್ನು ನೋಡಿ.

Snap ನ ಕಾನೂನು ಜಾರಿ ಸೇವೆಗಳ ಸೈಟ್‌ಗೆ (LESS) ಪ್ರವೇಶ ಹೊಂದಿರುವ ಕಾನೂನು ಜಾರಿ ಮತ್ತು ಸರ್ಕಾರಿ ಏಜೆನ್ಸಿಗಳು LESS ಪೋರ್ಟಲ್ ಮೂಲಕ ಇಲ್ಲಿ ಕಾನೂನು ಪ್ರಕ್ರಿಯೆ ಮತ್ತು ಸಂರಕ್ಷಣೆ ವಿನಂತಿಗಳನ್ನು Snap ಗೆ ಸಲ್ಲಿಸಬೇಕು: less.snapchat.com. LESS ನಲ್ಲಿ, ವಿನಂತಿಗಳನ್ನು ಸಲ್ಲಿಸುವ ಮತ್ತು ಸಲ್ಲಿಕೆಗಳ ಸ್ಥಿತಿಯನ್ನು ಪರಿಶೀಲಿಸುವ ಉದ್ದೇಶಕ್ಕಾಗಿ ಕಾನೂನು ಜಾರಿ ಮತ್ತು ಸರ್ಕಾರಿ ಏಜೆನ್ಸಿಗಳ ಸದಸ್ಯರು ಒಂದು ಖಾತೆಯನ್ನು ರಚಿಸಬಹುದು.

ನಾವು ಸಂರಕ್ಷಣೆ ವಿನಂತಿಗಳು, ಕಾನೂನು ಪ್ರಕ್ರಿಯೆಯ ಸೇವೆ ಮತ್ತು ಕಾನೂನು ಜಾರಿ ಸಂಸ್ಥೆಯಿಂದ ಸಾಮಾನ್ಯ ಪ್ರಶ್ನೆಗಳನ್ನು lawenforcement@snapchat.com ನಲ್ಲಿ ಇಮೇಲ್ ಮೂಲಕ ಕೂಡ ಸ್ವೀಕರಿಸುತ್ತೇವೆ.

ಈ ವಿಧಾನದ ಮೂಲಕ ಕಾನೂನು ಜಾರಿ ವಿನಂತಿಗಳ ಸ್ವೀಕೃತಿ ಕೇವಲ ಅನುಕೂಲಕ್ಕಾಗಿ ಮಾತ್ರ ಮತ್ತು Snap ಅಥವಾ ಅದರ ಬಳಕೆದಾರರ ಯಾವುದೇ ಆಕ್ಷೇಪಗಳು ಅಥವಾ ಕಾನೂನು ಹಕ್ಕುಗಳನ್ನು ಮನ್ನಾ ಮಾಡುವುದಿಲ್ಲ.

ಸರ್ಕಾರೇತರ ಸಂಸ್ಥೆಗಳಿಂದ ವಿನಂತಿಗಳು

ಮೇಲಿನ ವಿಧಾನಗಳು ಕೇವಲ ಕಾನೂನು ಜಾರಿ ಅಧಿಕಾರಿಗಳಿಗೆ ಮಾತ್ರ ಸೂಕ್ತವಾಗಿವೆ ಎನ್ನುವುದನ್ನು ದಯವಿಟ್ಟು ಗಮನಿಸಿ.

ಕಾನೂನು ಜಾರಿ ಸಂಸ್ಥೆಯೊಂದಿಗೆ ಸಂಬಂಧಿಸಿಲ್ಲದ ಘಟಕದ ಪರವಾಗಿ ನೀವು Snap ಅನ್ನು ಸಂಪರ್ಕಿಸುತ್ತಿದ್ದರೆ ಮತ್ತು ಅಪರಾಧ ತನಿಖೆಯ ಬೇಡಿಕೆಯನ್ನು ಸಲ್ಲಿಸಲು ಬಯಸಿದರೆ, ಅಂತಹ ಕಾನೂನು ಪ್ರಕ್ರಿಯೆಯನ್ನು ವೈಯಕ್ತಿಕವಾಗಿ Snap ಅಥವಾ ನಮ್ಮ ನಿಯೋಜಿತ ತೃತೀಯ-ಪಕ್ಷದ ಏಜೆಂಟ್‌ ಮೇಲೆ (ಕ್ಯಾಲಿಫೋರ್ನಿಯಾದೊಳಗೆ ನೀಡದಿದ್ದರೆ ಅಥವಾ ದೇಶೀಯಗೊಳಿಸದಿದ್ದರೆ) ಸಲ್ಲಿಸಬೇಕು ಎನ್ನುವುದನ್ನು ದಯವಿಟ್ಟು ಗಮನಿಸಿ. ರಾಜ್ಯದ ಹೊರಗಿನ ಅಪರಾಧ ತನಿಖೆಯ ಬೇಡಿಕೆಗಳನ್ನು ಕಾನೂನು ಅಗತ್ಯಪಡಿಸಿರುವಂತೆ ಕ್ಯಾಲಿಫೋರ್ನಿಯಾದಲ್ಲಿ ದೇಶೀಯಗೊಳಿಸಬೇಕು. ಒಂದು ವೇಳೆ ನೀವು ಸಿವಿಲ್ ತನಿಖೆ ಬೇಡಿಕೆಯನ್ನು ಸಲ್ಲಿಸಲು ಬಯಸಿದರೆ, ಅಂತಹ ಕಾನೂನು ಪ್ರಕ್ರಿಯೆಯ ವಿನಂತಿಯನ್ನು ಇಮೇಲ್ ಮೂಲಕ ಸಲ್ಲಿಸುವುದನ್ನು Snap ಸ್ವೀಕರಿಸುವುದಿಲ್ಲ; ಸಿವಿಲ್ ತನಿಖೆ ಬೇಡಿಕೆಗಳನ್ನು ವೈಯಕ್ತಿಕವಾಗಿ Snap ಅಥವಾ ನಮ್ಮ ನಿಯೋಜಿತ ತೃತೀಯ-ಪಕ್ಷದ ಏಜೆಂಟ್‌ ಮೇಲೆ ಸಲ್ಲಿಸಬೇಕು. ರಾಜ್ಯದ ಹೊರಗಿನ ಸಿವಿಲ್ ತನಿಖೆ ಬೇಡಿಕೆಗಳನ್ನು ಕ್ಯಾಲಿಫೋರ್ನಿಯಾದಲ್ಲಿ ಮುಂದಕ್ಕೆ ದೇಶೀಯಗೊಳಿಸಬೇಕು.

ಕಾನೂನು ಜಾರಿ ಮತ್ತು Snap ಕಮ್ಯುನಿಟಿ

ಬಳಕೆದಾರರು, ಪೋಷಕರು ಮತ್ತು ಶಿಕ್ಷಣತಜ್ಞರಿಗಾಗಿ ಮಾರ್ಗದರ್ಶನ

Snap ನಲ್ಲಿ, ನಮ್ಮ ವೇದಿಕೆಯು ದುರುಪಯೋಗವಾಗುವುದರಿಂದ Snapchatter‌ ಗಳನ್ನು ರಕ್ಷಿಸುವ ನಮ್ಮ ಬದ್ಧತೆಯನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ. ಅದರ ಭಾಗವಾಗಿ, ನಮ್ಮ ವೇದಿಕೆಯಲ್ಲಿ ಸುರಕ್ಷತೆಯನ್ನು ಉತ್ತೇಜಿಸಲು ನಾವು ಕಾನೂನು ಜಾರಿ ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತೇವೆ.

ಬಳಕೆದಾರರ ಗೌಪ್ಯತೆ ಕಳವಳಗಳ ಬಗ್ಗೆ ಮಾರ್ಗದರ್ಶನ

ನಮ್ಮ ಬಳಕೆದಾರರ ಗೌಪ್ಯತೆ ಮತ್ತು ಹಕ್ಕುಗಳನ್ನು ಗೌರವಿಸುವಾಗ ಕಾನೂನು ಜಾರಿಗೆ ಸಹಾಯ ಮಾಡಲು Snap ಬದ್ಧವಾಗಿದೆ. Snapchat ಅಕೌಂಟ್ ದಾಖಲೆಗಳಿಗಾಗಿ ಕಾನೂನು ವಿನಂತಿಯ ಸಿಂಧುತ್ವವನ್ನು ನಾವು ಸ್ವೀಕರಿಸಿದ ಮತ್ತು ಸ್ಥಾಪಿಸಿದ ನಂತರ, ನಾವು ಅನ್ವಯವಾಗುವ ಕಾನೂನು ಮತ್ತು ಗೌಪ್ಯತೆ ಅವಶ್ಯಕತೆಗಳಿಗೆ ಅನುಸಾರವಾಗಿ ಪ್ರತಿಕ್ರಿಯಿಸುತ್ತೇವೆ.

ಸುರಕ್ಷತೆಯನ್ನು ಉತ್ತೇಜಿಸುವುದು ಹೇಗೆ

ನಾವು ಅಲ್ಪಕಾಲಿಕತೆಯನ್ನು ಗೌರವಿಸುತ್ತೇವೆ ಎಂಬುದು ನಿಜವಾಗಿದ್ದರೂ, ಮಾನ್ಯವಾಗಿರುವ ಕಾನೂನು ಪ್ರಕ್ರಿಯೆಯ ಮೂಲಕ ಕೆಲವು ಅಕೌಂಟ್ ಮಾಹಿತಿಯನ್ನು ಕಾನೂನು ಜಾರಿಗೊಳಿಸುವ ಮೂಲಕ ಹಿಂಪಡೆಯಬಹುದು. ಕೆಲವೊಮ್ಮೆ, ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಕಾನೂನು ಜಾರಿಗೊಳಿಸುವಿಕೆಗೆ ಸಹಾಯ ಮಾಡಬಹುದು ಮತ್ತು Snap ನ ಸೇವಾ ನಿಯಮಗಳ ಉಲ್ಲಂಘನೆಗಾಗಿ ಅಕೌಂಟ್ ಗಳ ವಿರುದ್ಧ ಕ್ರಮ ಕೈಗೊಳ್ಳಬಹುದು ಎನ್ನುವುದು ಇದರ ಅರ್ಥವಾಗಿದೆ. ಶಾಲೆಯ ಶೂಟಿಂಗ್ ಬೆದರಿಕೆಗಳು, ಬಾಂಬ್ ಬೆದರಿಕೆಗಳು ಮತ್ತು ಕಾಣೆಯಾದ ವ್ಯಕ್ತಿಗಳ ಪ್ರಕರಣಗಳಂತಹ ಸನ್ನಿವೇಶಗಳು ಮತ್ತು ಜೀವಕ್ಕೆ ಸನ್ನಿಹಿತವಾದ ಬೆದರಿಕೆಗಳಿಗೂ ಸಹ ನಾವು ಸಹಾಯ ಮಾಡುತ್ತೇವೆ.

Snap ಗೆ ಹೇಗೆ ವರದಿ ಮಾಡಬಹುದೆಂಬುದನ್ನು ನಿಮ್ಮ ಕಮ್ಯುನಿಟಿಯೊಂದಿಗೆ ಹಂಚಿಕೊಳ್ಳಿ!

  • ಆ್ಯಪ್‌ನಲ್ಲಿ ವರದಿ ಮಾಡುವಿಕೆ: ನೀವು ಸೂಕ್ತವಲ್ಲದ ವಿಷಯವನ್ನು ಆ್ಯಪ್‌ನಲ್ಲಿಯೇ ನಮಗೆ ವರದಿ ಮಾಡಬಹುದು! Snap ಅನ್ನು ಒತ್ತಿ ಮತ್ತು ಹಿಡಿದಿರಿ, ನಂತರ 'Snap ವರದಿ ಮಾಡಿ' ಬಟನ್ ಟ್ಯಾಪ್ ಮಾಡಿ. ಏನು ನಡೆಯುತ್ತಿದೆ ಎಂದು ನಮಗೆ ತಿಳಿಸಿ — ನಾವು ಸಹಾಯ ಮಾಡಲು ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ!

  • ನಮಗೆ ಇ-ಮೇಲ್ ಮಾಡಿ: ನೀವು ನಮ್ಮ ಬೆಂಬಲ ಸೈಟ್ ಮೂಲಕ ಕೂಡ ಒಂದು ವರದಿಯನ್ನು ನಮಗೆ ಇ-ಮೇಲ್ ಮಾಡಬಹುದು.

ಸಹಾಯ ವಿನಂತಿಸುವುದು

ನೀವಾಗಲಿ ನಿಮಗೆ ಪರಿಚಿತರಾಗಲಿ ತಕ್ಷಣದ ಅಪಾಯದಲ್ಲಿದ್ದರೆ, ಸಾಧ್ಯವಾದಷ್ಟು ಬೇಗನೆ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ.

ಪಾರದರ್ಶಕತೆಯ ವರದಿ

Snapchat ಪಾರದರ್ಶಕತೆ ವರದಿಗಳನ್ನು ವರ್ಷಕ್ಕೆ ಎರಡು ಬಾರಿ ಬಿಡುಗಡೆ ಮಾಡಲಾಗುತ್ತದೆ. ಈ ವರದಿಗಳು Snapchatter ಗಳ ಅಕೌಂಟ್ ನ ಮಾಹಿತಿ ಮತ್ತು ಇತರ ಕಾನೂನು ಸೂಚನೆಗಳಿಗಾಗಿ ಸರ್ಕಾರದ ವಿನಂತಿಗಳ ಪ್ರಮಾಣ ಮತ್ತು ಸ್ವರೂಪದ ಬಗ್ಗೆ ಪ್ರಮುಖ ಒಳನೋಟವನ್ನು ನೀಡುತ್ತವೆ.

ಕಾನೂನು ಜಾರಿಯೊಂದಿಗೆ ಸಹಕಾರ