ನಾವು ಸ್ಥಿರ, ಉತ್ತಮ ಗುಣಮಟ್ಟದ ವಿಷಯ ನಿರ್ಮಾಣಕ್ಕೆ ಪ್ರತಿಫಲವನ್ನು ನೀಡಲು ಬಯಸುತ್ತೇವೆ. ನಮ್ಮ ಶಿಫಾರಸಿಗೆ ಅರ್ಹತೆ ಪಡೆಯಲು ಅನುಸರಿಸಬೇಕಾದ ವಿಷಯ ಮಾರ್ಗಸೂಚಿಗಳನ್ನು ಓದುವ ಮೂಲಕ ನೀವು ವಿಷಯ ಗುಣಮಟ್ಟಕ್ಕೆ ನಮ್ಮ ಮಾನದಂಡಗಳ ಕುರಿತ ವಿವರಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ. "ಶಿಫಾರಸಿಗೆ ಅರ್ಹವಲ್ಲದ" ವಿಷಯವನ್ನು ನೀವು ಪ್ರಾಥಮಿಕವಾಗಿ ಅಥವಾ ನಿರಂತರವಾಗಿ ಪ್ರಕಟಿಸಿದರೆ, ನೀವು Snapchat ನಲ್ಲಿ ವಿಷಯಗಳಿಂದ ಹಣಗಳಿಸಲು ಉತ್ತಮ ಅಭ್ಯರ್ಥಿಯಾಗಿರುವುದಿಲ್ಲ.
ಶಿಫಾರಸಿಗೆ ಅರ್ಹತೆ ಪಡೆಯಲು ಅನುಸರಿಸಬೇಕಾದ ವಿಷಯ ಮಾರ್ಗಸೂಚಿಗಳನ್ನು ನಿರಂತರವಾಗಿ ಅನುಸರಿಸುವುದರ ಜೊತೆಗೆ, ನಗದೀಕರಿಸಿದ ಖಾತೆಗಳು ಸ್ವಂತಿಕೆ ಮತ್ತು ದೃಢೀಕರಣವನ್ನು ಸ್ಥಿರವಾಗಿ ಪ್ರದರ್ಶಿಸಬೇಕು.
ನಗದೀಕರಿಸ ಬಹುದಾದುದು:
ನೀವು ಅಥವಾ ನಿಮ್ಮ ಸಂಸ್ಥೆ ರಚಿಸಿದ ಮೂಲ, ತೊಡಗಿಸಿಕೊಳ್ಳುವ ವಿಷಯವನ್ನು ನೀವು ಪ್ರಕಟಿಸುತ್ತೀರಿ. ನೀವು ಬೇರೆಯವರ ವಿಷಯವನ್ನು ಪೋಸ್ಟ್ ಮಾಡುತ್ತಿದ್ದರೆ, ನೀವು ಅದನ್ನು ಮೌಲ್ಯ ವರ್ಧಿಸುವ, ರೂಪಾಂತರಗೊಳಿಸುವ ರೀತಿಯಲ್ಲಿ ಸೇರಿಸಬೇಕು, ಉದಾಹರಣೆಗೆ:
ಒಂದು ವಿಡಿಯೋಗೆ ಪ್ರತಿಕ್ರಿಯೆ ನೀಡುವುದು (ಉದಾಹರಣೆಗೆ, ಸ್ಪೋರ್ಟ್ಸ್ ರೀಪ್ಲೇಗೆ ನಿಮ್ಮದೇ ಕಾಮೆಂಟರಿಯನ್ನು ಸೇರಿಸುವುದು)
ವಿಮರ್ಶೆಗಳ ಸನ್ನಿವೇಶದಲ್ಲಿ ಕ್ಲಿಪ್‌ಗಳನ್ನು ಬಳಸುವುದು (ಉದಾಹರಣೆಗೆ, ಸೂಕ್ತ ತುಣುಕುಗಳನ್ನು ತೋರಿಸುತ್ತ ಒಂದು ಚಲನಚಿತ್ರದ ಬಗ್ಗೆ ಮಾತನಾಡುವುದು)
ಸೃಜನಾತ್ಮಕವಾಗಿ ಒಂದು ತುಣುಕನ್ನು ಎಡಿಟ್ ಮಾಡುವುದು (ಉದಾಹರಣೆಗೆ, ಹತ್ತು ಉತ್ತಮ ಮದುವೆಯ ಕೇಕ್ ಗಳ ಕುರಿತು ಸಂಗ್ರಹದ ವಿಡಿಯೋ, ಅದನ್ನು ಕೌಂಟ್‌ಡೌನ್ ಪಟ್ಟಿಯ ರೀತಿಯಲ್ಲಿ ನೀಡುವುದು, ಅದಕ್ಕೆ ಸನ್ನಿವೇಶ, ವ್ಯಾಖ್ಯಾನ ಮತ್ತು ಸೃಜನಶೀಲ ಅಂಶಗಳನ್ನು ಸೇರಿಸುವ ಮೂಲಕ ನೀಡುವುದು)
ಸಾಮಾಜಿಕ ಜಲತಾಣದಿಂದ ವಿಷಯವನ್ನು ತೋರಿಸುವುದು 1) ಮೂಲ ರಚನೆಕಾರರಿಗೆ ಸರಿಯಾದ ರೀತಿಯಲ್ಲಿ ಗೌರವ ತೋರ್ಪಡಿಸುವುದು ಮತ್ತು 2) ಸುದ್ದಿಯೋಗ್ಯವಾದ ಪ್ರಸ್ತುತ ಘಟನೆಗಳು, ಪ್ರವೃತ್ತಿಗಳು ಅಥವಾ ಸಾರ್ವಜನಿಕ ಪ್ರವಚನಗಳಿಗೆ ಅದರ ಪ್ರಸ್ತುತತೆಯ ಬಗ್ಗೆ ಮೂಲ ವ್ಯಾಖ್ಯಾನದೊಂದಿಗೆ ಪ್ರಸ್ತುತಪಡಿಸುವುದು
Snapchatter ಗಳು ಮತ್ತು ಜಾಹೀರಾತುಗಳ ಜೊತೆಗೆ ನಂಬಿಕೆ ನಿರ್ಮಾಣವಾಗುವ ಅಧಿಕೃತ ವಿಷಯವನ್ನು ನೀವು ಪ್ರಕಟಿಸುತ್ತೀರಿ. ನೀವು ಯಾವುದೇ ಕಾರಣಕ್ಕೂ ದಾರಿತಪ್ಪಿಸಬಾರದು. ನಿಮ್ಮ ಟೈಲ್‌ಗಳು ಅಥವಾ ಪರಿಚಯಗಳು ನಿಮ್ಮ ವಿಷಯಗಳ ಉಳಿದ ನಿರೀಕ್ಷೆಗಳನ್ನು ರೂಪಿಸುವ ರೀತಿಯಲ್ಲಿರಬೇಕು.
ನಗದೀಕರಿಸಲು ಸಾಧ್ಯವಿಲ್ಲ:
ನೀವು ಪ್ರಾಥಮಿಕವಾಗಿ ಅಥವಾ ಆಗಾಗ ನಿಮ್ಮದೇ ಅಲ್ಲದ ವಿಷಯವನ್ನು ಪ್ರಕಟಿಸುತ್ತೀರಿ, ಹಾಗೂ ಅದನ್ನು ಅರ್ಥಪೂರ್ಣವಾದ ರೀತಿಯಲ್ಲಿ ಪ್ರಕಟಿಸುವುದಿಲ್ಲ, ಅಂದರೆ:
ಟಿವಿ ಶೋಗಳಿಂದ, ಮೂವಿಗಳಿಂದ, ಮ್ಯೂಜಿಕ್ ವಿಡಿಯೋಗಳಿಂದ ಪಡೆದುಕೊಂಡ ಕ್ಲಿಪ್ಸ್ ಅಥವಾ ಜೋಡಿಸಿದ ತುಣುಕುಗಳು
ಇತರ ಜನರ ಸೋಷಿಯಲ್ ಮೀಡಿಯಾ ಪೋಸ್ಟ್ ಗಳನ್ನು ಪುನಃ ಪ್ರಕಟಿಸುವುದು
ನೀವು ಒಂದೇ ವಿಷಯವನ್ನು ಪದೆ ಪದೆ ಪೋಸ್ಟ್ ಮಾಡುತ್ತಿದ್ದಲ್ಲಿ ಅಥವಾ ನಕಲು ಆಗಿರುವ ವಿಷಯ ಅಥವಾ ಮನರಂಜನೆಯನ್ನು ಅಥವಾ ಮಾಹಿತಿ ನೀಡುವುದನ್ನು ಹೊರತು ಪಡಿಸಿ ನೋಡುವಿಕೆಯನ್ನು ಹೆಚ್ಚಿಸುವ ಸಲುವಾಗಿಯೇ ನಿರ್ಮಿಸಲಾದ ವಿಷಯಗಳು, ಉದಾಹರಣೆಗೆ:
ಒಂದೇ ಟೈಲ್ ಚಿತ್ರವನ್ನು ಪದೇ ಪದೇ ಬಳಸುವುದು
ಅತ್ಯಂತ ಕನಿಷ್ಟ ವ್ಯತ್ಯಾಸವಿರುವ Snap ಗಳನ್ನು ಪೋಸ್ಟ್ ಮಾಡುವುದು, ಅಂದರೆ ಪದೇ ಪದೇ ತಲೆಯಾಡಿಸುವುದು ಮತ್ತು ಎಲ್ಲೋ ಬರೆದಿರುವ ಉಲ್ಲೇಖಗಳನ್ನು ತೋರಿಸುವುದು.
ಜನರನ್ನು ದಿಕ್ಕುತಪ್ಪಿಸುವ ಅಧಿಕೃತವಲ್ಲದ ವಿಷಯವನ್ನು ನೀವು ಪ್ರಕಟಿಸುತ್ತೀರಿ (ವಿಷಯ ರಾಜಕೀಯ, ಆರೋಗ್ಯ ಅಥವಾ ಆಘಾತಕಾರಿ ಘಟನೆಗಳಷ್ಟು "ಗಂಭೀರವಲ್ಲದಿದ್ದರೂ"). ನೋಡುಗರನ್ನು ತೊಡಗಿಸಿಕೊಳ್ಳಲು ಇರುವ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಿಲ್ಲದಂತೆ ಇರುವುದುದು, ಉದಾಹರಣೆಗೆ:
ಸಮಂಜಸವಲ್ಲದ ಟೈಲ್ ಚಿತ್ರ (ಉದಾಹರಣೆಗೆ, ಕಥೆಯಲ್ಲಿ ಯಾವುದೇ ಹಂತದಲ್ಲಿಯೂ ಬಾರದ ಸೇಲಬ್ರಿಟಿಯ ಚಿತ್ರ)
ಆಘಾತಕಾರಿ ಟೈಲ್ (ಉದಾಹರಣೆಗೆ, ಮೊದಲ ನೋಟದಲ್ಲಿ ಗುಪ್ತಾಂಗದಂತೆ ಕಾಣಿಸುವ ಚಿತ್ರಗಳು)
ಆಧಾರರಹಿತ ವದಂತಿ (ಉದಾಹರಣೆಗೆ, ಒಬ್ಬ ನಟನಿಗೆ ಮುಂಬರುವ ಚಿತ್ರದಲ್ಲಿ ಒಂದು ನಿರ್ದಿಷ್ಟ ಪಾತ್ರ ಮಾಡಬಹುದಾದ ಕುರಿತ ಊಹಾಪೋಹ)
ಹಿಂದೆ ಯಾವತ್ತೋ ಆಗಿಹೋದ ಘಟನೆಯನ್ನು ಪ್ರಸ್ತುತ ಘಟನೆಯಂತೆ ತೋರಿಸುವುದು (ಉದಾಹರಣೆಗೆ, ಯಾವತ್ತೋ ಆದ ಜನಪ್ರಿಯರೊಬ್ಬರ ಬಂಧನವನ್ನು ಈಗ ನಡೆದಿದೆ ಎಂದು ತೋರಿಸುವುದು)
ತಿರುಚಿದ ಮಾಧ್ಯಮ ಚಿತ್ರಗಳು (ಉದಾಹರಣೆಗೆ, ಯಾರದೋ ದೇಹಕ್ಕೆ ಯಾರದೋ ಮುಖವನ್ನು ಅಂಟಿಸುವುದು ಅಥವಾ ಹಾವನ್ನು ಬಸ್ಸಿನಷ್ಟು ದೊಡ್ಡಾಗಿ ಚಿತ್ರಿಸುವುದು.)