25, ಏಪ್ರಿಲ್, 2024
29 ಆಗಸ್ಟ್, 2024
ನಮ್ಮ ಯುರೋಪಿಯನ್ ಒಕ್ಕೂಟದ (EU) ಪಾರದರ್ಶಕತೆಯ ಪುಟಕ್ಕೆ ಸ್ವಾಗತ, ಇಲ್ಲಿ ನಾವು ಡಿಜಿಟಲ್ ಸೇವೆಗಳ ಕಾಯ್ದೆ (DSA), ಆಡಿಯೊವಿಷುವಲ್ ಮಾಧ್ಯಮ ಸೇವೆಗಳ ಆದೇಶ (AVMSD) ಮತ್ತು ಭಯೋತ್ಪಾದನಾ ವಿಷಯದ ಆನ್‌ಲೈನ್ ನಿಯಂತ್ರಣ (TCO) ಗಳಿಂದ ಅಗತ್ಯಪಡಿಸಿರುವ EU ನಿರ್ದಿಷ್ಟವಾದ ಮಾಹಿತಿಯನ್ನು ಪ್ರಕಟಿಸುತ್ತೇವೆ. ಈ ಪಾರದರ್ಶಕತೆ ವರದಿಗಳ ಅತ್ಯಂತ ನವೀಕೃತ ಆವೃತ್ತಿಗಳು en-US ಸ್ಥಳೀಯ ಪ್ರತಿಯಲ್ಲಿ ಕಾಣಬಹುದಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.
DSAಯ ಉದ್ದೇಶಗಳಿಗಾಗಿ, Snap Group Limited ತನ್ನ ಕಾನೂನಾತ್ಮಕ ಪ್ರತಿನಿಧಿಯನ್ನಾಗಿ Snap B.V. ಯನ್ನು ನೇಮಿಸಿದೆ. DSA ಗಾಗಿ ನೀವು ಪ್ರತಿನಿಧಿಯನ್ನು dsa-enquiries [at] snapchat.com ನಲ್ಲಿ, AVMSD ಮತ್ತು DMA ಗಾಗಿ vsp-enquiries [at] snapchat.com ನಲ್ಲಿ, TCO ಗಾಗಿ tco-enquiries [at] snapchat.com ನಲ್ಲಿ, [ಇಲ್ಲಿ] ನಮ್ಮ ಬೆಂಬಲ ಸೈಟ್ ಮೂಲಕ ಅಥವಾ ಇಲ್ಲಿ ಸಂಪರ್ಕಿಸಬಹುದು:
Snap B.V.
Keizersgracht 165, 1016 DP
Amsterdam, The Netherlands
ನೀವೊಂದು ಕಾನೂನು ಜಾರಿ ಸಂಸ್ಥೆ ಆಗಿದ್ದರೆ, ದಯವಿಟ್ಟು ಇಲ್ಲಿ ವಿವರಿಸಲಾಗಿರುವ ಹಂತಗಳನ್ನು ಅನುಸರಿಸಿ.
ನಮ್ಮನ್ನು ಸಂಪರ್ಕಿಸುವಾಗ, ದಯವಿಟ್ಟು ಆಂಗ್ಲ ಅಥವಾ ಡಚ್‌ನಲ್ಲಿ ಸಂವಹನ ಮಾಡಿ.
DSAಗಾಗಿ, ನಾವು ಯುರೋಪಿಯನ್ ಆಯೋಗ ಮತ್ತು ನೆದರ್ಲ್ಯಾಂಡ್ಸ್ ಗ್ರಾಹಕರ ಮತ್ತು ಮಾರುಕಟ್ಟೆಗಳ ಪ್ರಾಧಿಕಾರ (ACM)ದಿಂದ ನಿಯಂತ್ರಿಸಲ್ಪಡುತ್ತೇವೆ. AVMSD ಮತ್ತು DMA ಗಾಗಿ, ಡಚ್ ಮಾಧ್ಯಮ ಪ್ರಾಧಿಕಾರ (CvdM) ನಮ್ಮನ್ನು ನಿಯಂತ್ರಿಸುತ್ತದೆ. TCO ಗಾಗಿ, ಆನ್‌ಲೈನ್ ಭಯೋತ್ಪಾದನಾ ವಿಷಯ ಮತ್ತು ಮಕ್ಕಳ ಲೈಂಗಿಕ ಶೋಷಣೆಯ ಸಾಮಗ್ರಿಯ (ATKM) ತಡೆಗಾಗಿ ನಾವು ನೆದರ್‌ಲ್ಯಾಂಡ್ಸ್ ಪ್ರಾಧಿಕಾರದಿಂದ ನಿರ್ಬಂಧಿಸಲ್ಪಟ್ಟಿದ್ದೇವೆ.
DSA ಯ ಅನುಚ್ಛೇಧ 15, 24 ಮತ್ತು 42 ಗಳ ಪ್ರಕಾರ, "ಆನ್‌ಲೈನ್ ವೇದಿಕೆಗಳು" ಎಂದು ಪರಿಗಣಿಸಲಾಗಿರುವ Snapchat ನ ಸೇವೆಗಳು, ಅಂದರೆ, ಸ್ಪಾಟ್‌ಲೈಟ್
, foryou, ಸಾರ್ವಜನಿಕ ಪ್ರೊಫೈಲ್‌ಗಳು, ಮ್ಯಾಪ್‌ಗಳು, ಲೆನ್ಸ್‌ಗಳು ಮತ್ತು ಜಾಹೀರಾತುಗಳಿಗಾಗಿ ಸೂಚಿಸಲ್ಪಟ್ಟಿರುವ Snap ನ ವಿಷಯಗಳ ನಿಯಂತ್ರಣ ಕುರಿತು ಮಾಹಿತಿಯನ್ನು ಒಳಗೊಂಡ ವರದಿಗಳನ್ನು Snap ಪ್ರಕಟಿಸಬೇಕಾಗುತ್ತದೆ. ಈ ವರದಿಯನ್ನು 25 ಅಕ್ಟೋಬರ್ 2023 ರಿಂದ ಪ್ರತಿ 6 ತಿಂಗಳುಗಳಿಗೊಮ್ಮೆ ಪ್ರಕಟಿಸಬೇಕಾಗುತ್ತದೆ.
Snap ನ ಸುರಕ್ಷತಾ ಪ್ರಯತ್ನಗಳು ಮತ್ತು ನಮ್ಮ ವೇದಿಕೆಯಲ್ಲಿ ವರದಿ ಮಾಡಲಾಗುವ ವಿಷಯಗಳ ಸ್ವರೂಪ ಮತ್ತು ಪ್ರಮಾಣದ ಕುರಿತು ಒಳನೋಟಗಳನ್ನು ಒದಗಿಸಲು Snap ವರ್ಷಕ್ಕೆ ಎರಡು ಬಾರಿ ಪಾರದರ್ಶಕತಾ ವರದಿಗಳನ್ನು ಪ್ರಕಟಿಸುತ್ತದೆ. H2 2023 (ಜುಲೈ 1- ಡಿಸೆಂಬರ್ 31) ಗಾಗಿ ನಮ್ಮ ಇತ್ತೀಚಿನ ವರದಿಯನ್ನು ಇಲ್ಲಿ ನೋಡಬಹುದು (1 ಆಗಸ್ಟ್ 2024 ರ ಪ್ರಕಾರ ನಮ್ಮ ಸರಾಸರಿ ಮಾಸಿಕ ಸಕ್ರಿಯ ಸ್ವೀಕೃತಿದಾರರ ನವೀಕರಿಸಿದ ಅಂಕಿಅಂಶಗಳ ಜೊತೆಗೆ -- ಪುಟದ ಕೆಳಭಾಗವನ್ನು ನೋಡಿ). ಡಿಜಿಟಲ್ ಸೇವೆಗಳ ಕಾಯಿದೆಗೆ ನಿರ್ದಿಷ್ಟವಾಗಿರುವ ಮಾಪನಾಂಕಗಳನ್ನು ಈ ಪುಟದಲ್ಲಿ ಕಾಣಬಹುದು.
31 ಡಿಸೆಂಬರ್ 2023 ರಂತೆ, EU ನಲ್ಲಿ Snapchat ಆ್ಯಪ್‌ನ 9.09 ಕೋಟಿ ಸರಾಸರಿ ಮಾಸಿಕ ಸಕ್ರಿಯ ಸ್ವೀಕೃತದಾರರನ್ನು("AMAR") ಹೊಂದಿದ್ದೇವೆ. ಅಂದರೆ, ಕಳೆದ 6 ತಿಂಗಳಿನಲ್ಲಿ ಸರಾಸರಿಯಾಗಿ, EU ನಲ್ಲಿನ 9.09 ಕೋಟಿ ನೋಂದಾಯಿತ ಬಳಕೆದಾರರು ಯಾವುದೇ ನಿರ್ದಿಷ್ಟ ತಿಂಗಳಿನಲ್ಲಿ Snapchat ಆ್ಯಪ್ ಅನ್ನು ಕನಿಷ್ಟ ಒಂದು ಬಾರಿಯಾದರೂ ತೆರೆದಿದ್ದಾರೆ.
ಈ ಅನುಪಾತವು ಈ ಕೆಳಗಿನಂತೆ ಸದಸ್ಯ ರಾಷ್ಟ್ರವಾರು ವಿಂಗಡಣೆಯನ್ನು ಒದಗಿಸುತ್ತದೆ:
ಈ ಅಂಕಿಅಂಶಗಳನ್ನು ಪ್ರಸ್ತುತ DSA ನಿಯಮಗಳನ್ನು ಪೂರೈಸುವ ಸಲುವಾಗಿ ಲೆಕ್ಕಾಚಾರ ಮಾಡಲಾಗಿದೆ ಮತ್ತು DSA ಉದ್ದೇಶಗಳಿಗಾಗಿ ಮಾತ್ರ ಅವಲಂಬಿಸಬೇಕು. ಕಾಲ ಕಳೆದಂತೆ, ನಾವು ಬದಲಾಗುವ ಆಂತರಿಕ ನೀತಿ, ನಿಯಂತ್ರಕರ ಮಾರ್ಗದರ್ಶನ ಮತ್ತು ತಂತ್ರಜ್ಞಾನಗಳ ಫಲವಾಗಿ, ಈ ಅನುಪಾತದ ಲೆಕ್ಕಾಚಾರ ಮಾಡುವ ವಿಧಾನವನ್ನು ಬದಲಾಯಿಸಿದ್ದೇವೆ, ಹಾಗೂ ಈ ಅಂಕಿಅಂಶಗಳನ್ನು ಸಮಯಾವಧಿಗಳ ನಡುವೆ ತುಲನೆ ಮಾಡಲೆಂದು ಉದ್ದೇಶಿಸಲಾಗಿಲ್ಲ. ಇದು ನಾವು ಇತರ ಉದ್ದೇಶಗಳಿಗಾಗಿ ಪ್ರಕಟಿಸುವ ಇತರ ಸಕ್ರಿಯ ಬಳಕೆದಾರರ ಅಂಕಿಅಂಶಗಳಿಗಾಗಿ ಬಳಸುವ ಲೆಕ್ಕಾಚಾರಗಳಿಗಿಂತ ಕೂಡ ಭಿನ್ನವಾಗಿರಬಹುದು.
ತೆಗೆದುಹಾಕಲು ವಿನಂತಿಗಳು
ಈ ಅವಧಿಯಲ್ಲಿ DSA ವಿಧಿ 9 ರ ಅನುಸಾರ, EU ಸದಸ್ಯ ರಾಷ್ಟ್ರಗಳಿಂದ ನಾವು 0 ತೆಗೆದುಹಾಕುವ ವಿನಂತಿಗಳನ್ನು ಸ್ವೀಕರಿಸಿದ್ದೇವೆ.
ಮಾಹಿತಿ ವಿನಂತಿಗಳು
ಈ ಅವಧಿಯಲ್ಲಿ EU ಸದಸ್ಯ ರಾಷ್ಟ್ರಗಳಿಂದ ನಾವು ಈ ಕೆಳಗಿನ ಮಾಹಿತಿ ವಿನಂತಿಗಳನ್ನು ಸ್ವೀಕರಿಸಿದ್ದೇವೆ:
ಮಾಹಿತಿ ವಿನಂತಿ ಸ್ವೀಕೃತಿಯ ಅಧಿಕಾರಿಗಳಿಗೆ ಮಾಹಿತಿ ನೀಡಲು ತೆಗೆದುಕೊಂಡ ಸರಾಸರಿ ಟರ್ನ್ಅರೌಂಡ್ ಸಮಯ 0 ನಿಮಿಷಗಳಾಗಿವೆ — ನಾವು ಸ್ವೀಕೃತಿಯನ್ನು ದೃಢೀಕರಿಸುವ ಸ್ವಯಂಚಾಲಿತ ಪ್ರತಿಕ್ರಿಯೆಯನ್ನು ಒದಗಿಸುತ್ತೇವೆ. ಮಾಹಿತಿ ವಿನಂತಿಗಳಿಗೆ ಪ್ರತಿಕ್ರಿಯೆ ಒದಗಿಸಲು ಸರಾಸರಿ ಟರ್ನ್ಅರೌಂಡ್ ಸಮಯ ~10 ದಿನಗಳಾಗಿವೆ. ಒಂದು IR ಗೆ Snap ವಿನಂತಿಯನ್ನು ಸ್ವೀಕರಿಸಿದಾಗಿನಿಂದ ವಿನಂತಿಯನ್ನು ಸಂಪೂರ್ಣವಾಗಿ ಪರಿಹರಿಸಲಾಗಿದೆ ಎಂದು Snap ಭಾವಿಸುವವರೆಗಿನ ಸಮಯಾವಧಿಯನ್ನು ಈ ಮಾಪನವು ಬಿಂಬಿಸುತ್ತದೆ. ಕೆಲವು ಪ್ರಕರಣಗಳಲ್ಲಿ, ಈ ಪ್ರಕ್ರಿಯೆಯ ಅವಧಿಯು ಕಾನೂನು ಜಾರಿ ಸಂಸ್ಥೆಗಳ ವಿನಂತಿಯನ್ನು ಪ್ರಕ್ರಿಯೆಗೊಳಿಸಲು ಅಗತ್ಯವಿರುವ ಸ್ಪಷ್ಟೀಕರಣಕ್ಕಾಗಿ Snap ನಿಂದ ಯಾವುದೇ ವಿನಂತಿಗಳಿಗೆ ಅವರು ಪ್ರತಿಸ್ಪಂದಿಸುವ ವೇಗದ ಮೇಲೆ ಭಾಗಶಃ ಅವಲಂಬಿತವಾಗಿರುತ್ತದೆ.
Snapchat ನಲ್ಲಿರುವ ಎಲ್ಲ ಕಂಟೆಂಟ್ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ಸೇವೆಯ ನಿಯಮಗಳು ಹಾಗೂ ಬೆಂಬಲಿಸುವ ನಿಯಮಗಳು, ಮಾರ್ಗಸೂಚಿಗಳು ಮತ್ತು ಎಕ್ಸ್‌ಪ್ಲೇನರ್‌ಗಳ ಪಾಲನೆ ಮಾಡಬೇಕು. ಪೂರ್ವಭಾವಿ ಪತ್ತೆ ಕಾರ್ಯವಿಧಾನಗಳು ಮತ್ತು ಅಕ್ರಮ ಅಥವಾ ಉಲ್ಲಂಘಿಸುವ ಕಂಟೆಂಟ್ ಅಥವಾ ಖಾತೆಗಳ ವರದಿಗಳು ವಿಮರ್ಶೆಯ ಅಗತ್ಯವನ್ನು ಸೃಷ್ಟಿಸುತ್ತವೆ, ಈ ಸಂದರ್ಭ, ನಮ್ಮ ಟೂಲಿಂಗ್ ಸಿಸ್ಟಂಗಳು ವಿನಂತಿಯನ್ನು ಪ್ರಕ್ರಿಯೆಗೊಳಿಸುತ್ತವೆ, ಸಂಬಂಧಿಸಿದ ಮೆಟಾಡೇಟಾವನ್ನು ಸಂಗ್ರಹಿಸುತ್ತವೆ ಮತ್ತು ಪರಿಣಾಮಕಾರಿ ಹಾಗೂ ದಕ್ಷ ವಿಮರ್ಶೆ ಕಾರ್ಯವಿಧಾನಗಳನ್ನು ಸೌಲಭ್ಯಗೊಳಿಸಲು ವಿನ್ಯಾಸಗೊಳಿಸಲಾಗಿರುವ ವ್ಯವಸ್ಥಿತ ಬಳಕೆದಾರ ಇಂಟರ್‌ಫೇಸ್ ಮೂಲಕ ನಮ್ಮ ಮಾಡರೇಷನ್ ತಂಡಕ್ಕೆ ಸಂಬಂಧಿಸಿದ ಕಂಟೆಂಟ್ ಅನ್ನು ಕಳುಹಿಸುತ್ತವೆ. ಒಬ್ಬ ಬಳಕೆದಾರ ನಮ್ಮ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಮಾನವರ ವಿಮರ್ಶೆ ಅಥವಾ ಸ್ವಯಂಚಾಲಿತ ವಿಧಾನಗಳ ಮೂಲಕ ನಮ್ಮ ಮಾಡರೇಷನ್ ತಂಡಗಳು ನಿರ್ಧರಿಸಿದಾಗ, ನಾವು ಉಲ್ಲಂಘಿಸುವ ಕಂಟೆಂಟ್ ಅಥವಾ ಖಾತೆಯನ್ನು ತೆಗೆದುಹಾಕಬಹುದು, ಸಂಬಂಧಿಸಿದ ಖಾತೆಯ ಗೋಚರತೆಯನ್ನು ಸಮಾಪ್ತಿಗೊಳಿಸಬಹುದು ಅಥವಾ ಮಿತಿಗೊಳಿಸಬಹುದು, ಮತ್ತು/ಅಥವಾ ನಮ್ಮ Snapchat ಮಾಡರೇಷನ್, ಕ್ರಮ ಜಾರಿಗೊಳಿಸುವಿಕೆ ಮತ್ತು ಮನವಿಗಳ ಎಕ್ಸ್‌ಪ್ಲೇನರ್‌ನಲ್ಲಿ ವಿವರಿಸಿರುವಂತೆ ಕಾನೂನು ಜಾರಿ ಸಂಸ್ಥೆಯ ಗಮನಕ್ಕೆ ತರಬಹುದು. ಕಮ್ಯನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ನಮ್ಮ ಸುರಕ್ಷತಾ ತಂಡದಿಂದ ಲಾಕ್ ಮಾಡಲಾಗಿರುವ ಖಾತೆಗಳ ಬಳಕೆದಾರರು ಲಾಕ್ ಮಾಡಿದ ಖಾತೆಯ ಮನವಿಯನ್ನು ಸಲ್ಲಿಸಬಹುದು ಮತ್ತು ಬಳಕೆದಾರರು ಕೆಲವು ಕಂಟೆಂಟ್ ವಿರುದ್ಧದ ಕ್ರಮ ಜಾರಿಗೊಳಿಸುವಿಕೆ ವಿರುದ್ಧ ಮನವಿ ಸಲ್ಲಿಸಬಹುದು.
ಕಂಟೆಂಟ್ ಮತ್ತು ಖಾತೆ ಸೂಚನೆಗಳು (DSA ವಿಧಿ 15.1(b))
ಬಳಕೆದಾರರು ಮತ್ತು ಬಳಕೆದಾರರಲ್ಲದವರು DSA ವಿಧಿ 16 ರ ಅನುಸಾರ ಕಾನೂನುಬಾಹಿರ ಎಂದು ಪರಿಗಣಿಸಿರುವುದು ಸೇರಿದಂತೆ, ಪ್ಲ್ಯಾಟ್‌ಫಾರ್ಮ್‌ನಲ್ಲಿ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ಸೇವೆಯ ನಿಯಮಗಳನ್ನು ಉಲ್ಲಂಘಿಸುವ ಕಂಟೆಂಟ್ ಮತ್ತು ಖಾತೆಗಳ ಕುರಿತು Snap ಗೆ ತಿಳಿಸಲು ಅವಕಾಶ ಕಲ್ಪಿಸುವುದಕ್ಕಾಗಿ Snap ಕಾರ್ಯವಿಧಾನಗಳನ್ನು ರೂಪಿಸಿದೆ. ಈ ವರದಿ ಮಾಡುವಿಕೆ ಕಾರ್ಯವಿಧಾನಗಳು ಸ್ವತಃ ಆ್ಯಪ್‌ನಲ್ಲಿ (ಅಂದರೆ ಕಂಟೆಂಟ್ ತುಣುಕಿನಿಂದ ನೇರವಾಗಿ) ಮತ್ತು ನಮ್ಮ ವೆಬ್‌ಸೈಟ್‌ನಲ್ಲಿ ಲಭ್ಯ ಇವೆ.
ಸಂಬಂಧಿಸಿದ ಅವಧಿಯಲ್ಲಿ, EU ನಲ್ಲಿ ನಾವು ಈ ಕೆಳಗಿನ ಕಂಟೆಂಟ್ ಮತ್ತು ಖಾತೆ ಸೂಚನೆಗಳನ್ನು ಸ್ವೀಕರಿಸಿದ್ದೇವೆ:
In H2’23, we handled 664,896 notices solely via automated means. All of these were enforced against our Community Guidelines because our Community Guidelines encapsulate illegal content.
In addition to user-generated content and accounts, we moderate advertisements if they violate our platform policies. Below are the total ads that were reported and removed in the EU.
ವಿಶ್ವಾಸಾರ್ಹ ಫ್ಲ್ಯಾಗ್ ಮಾಡುವವರ ಸೂಚನೆಗಳು (ವಿಧಿ 15.1(b))
ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿಯ (H2 2023) ಅವಧಿಗಾಗಿ, DSA ಅಡಿಯಲ್ಲಿ ಔಪಚಾರಿಕವಾಗಿ ನೇಮಕಾತಿ ಮಾಡಿದ ವಿಶ್ವಾಸಾರ್ಹ ಫ್ಲ್ಯಾಗ್ ಮಾಡುವವರು ಇರಲಿಲ್ಲ. ಇದರ ಪರಿಣಾಮವಾಗಿ, ಅಂತಹ ವಿಶ್ವಾಸಾರ್ಹ ಫ್ಲ್ಯಾಗ್ ಮಾಡುವವರು ಸಲ್ಲಿಸಿದ ಸೂಚನೆಗಳ ಸಂಖ್ಯೆ ಈ ಅವಧಿಯಲ್ಲಿ ಸೊನ್ನೆ (0) ಆಗಿದೆ.
ಪೂರ್ವಭಾವಿ ಕಂಟೆಂಟ್ ಮಾಡರೇಷನ್ (ವಿಧಿ 15.1(c))
ಸಂಬಂಧಿಸಿದ ಅವಧಿಯಲ್ಲಿ, Snap ತನ್ನ ಸ್ವಂತ ಉಪಕ್ರಮದ ಮೇರೆಗೆ ಕಂಟೆಂಟ್ ಮಾಡರೇಷನ್ ಮಾಡಿದ ಬಳಿಕ EU ನಲ್ಲಿ ಈ ಕೆಳಗಿನ ಕಂಟೆಂಟ್ ಮತ್ತು ಖಾತೆಗಳ ವಿರುದ್ಧ ಶಿಸ್ತುಕ್ರಮ ಜಾರಿಗೊಳಿಸಿದೆ:
Snap ನ ಎಲ್ಲ ಸ್ವಂತ-ಉಪಕ್ರಮದ ಮಾಡರೇಷನ್ ಪ್ರಯತ್ನಗಳು ಮಾನವರು ಅಥವಾ ಆಟೊಮೇಶನ್ ಅನ್ನು ಬಳಸಿಕೊಂಡಿವೆ. ನಮ್ಮ ಸಾರ್ವಜನಿಕ ವಿಷಯ ವೇದಿಕೆಗಳಲ್ಲಿ, ವ್ಯಾಪಕ ಪ್ರೇಕ್ಷಕರಿಗೆ ವಿತರಣೆಗೆ ಅರ್ಹವಾಗುವುದಕ್ಕೆ ಮುನ್ನ ಕಂಟೆಂಟ್ ಸಾಮಾನ್ಯವಾಗಿ ಸ್ವಯಂ ಮಾಡರೇಷನ್ ಮತ್ತು ಮಾನವರ ವಿಮರ್ಶೆ ಎರಡರ ಮೂಲಕವೂ ಹಾದುಹೋಗುತ್ತದೆ. ಸ್ವಯಂಚಾಲಿತ ಟೂಲ್‌ಗಳಿಗೆ ಸಂಬಂಧಿಸಿದಂತೆ, ಇವುಗಳು ಸೇರಿವೆ:
ಮೆಷಿನ್ ಲರ್ನಿಂಗ್ ಬಳಸಿಕೊಂಡು ಅಕ್ರಮ ಮತ್ತು ಉಲ್ಲಂಘಿಸುವ ಕಂಟೆಂಟ್‌ನ ಪೂರ್ವಭಾವಿ ಪತ್ತೆಮಾಡುವಿಕೆ;
ಹ್ಯಾಶ್-ಮ್ಯಾಚಿಂಗ್ ಟೂಲ್‌ಗಳು (ಉದಾಹರಣೆಗೆ PhotoDNA ಮತ್ತು Google ನ CSAI ಮ್ಯಾಚ್);
ಇಮೋಜಿಗಳು ಸೇರಿದಂತೆ, ಗುರುತಿಸಲಾದ ಮತ್ತು ನಿಯಮಿತವಾಗಿ ಅಪ್‌ಡೇಟ್ ಮಾಡಲಾಗುವ ನಿಂದನೆಯ ಪ್ರಮುಖ ಪದಗಳ ಪಟ್ಟಿಯನ್ನು ಆಧರಿಸಿ ಕಂಟೆಂಟ್ ಅನ್ನು ತಿರಸ್ಕರಿಸಲು ನಿಂದನೆಯ ಭಾಷೆಯ ಪತ್ತೆ
ಮೇಲ್ಮನವಿಗಳು (ವಿಧಿ 15.1(d))
ಸಂಬಂಧಿಸಿದ ಅವಧಿಯ ಸಂದರ್ಭ, Snap ತನ್ನ ಆಂತರಿಕ ದೂರು ನಿರ್ವಹಣೆ ವ್ಯವಸ್ಥೆಗಳ ಮೂಲಕ EU ನಲ್ಲಿ ಈ ಕೆಳಗಿನ ಕಂಟೆಂಟ್ ಮತ್ತು ಖಾತೆ ಮೇಲ್ಮನವಿಗಳನ್ನು ಪ್ರಕ್ರಿಯೆಗೊಳಿಸಿತು:
* ಮಕ್ಕಳ ಲೈಂಗಿಕ ಶೋಷಣೆಯನ್ನು ನಿಲ್ಲಿಸುವುದು ಅಗ್ರ ಆದ್ಯತೆಯಾಗಿದೆ. ಇದಕ್ಕಾಗಿ Snap ಗಣನೀಯ ಪ್ರಮಾಣದ ಸಂಪನ್ಮೂಲಗಳನ್ನು ತೆಗೆದಿರಿಸಿದೆ ಮತ್ತು ಅಂತಹ ನಡವಳಿಕೆಯ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. CSE ದೂರುಗಳನ್ನು ಪರಿಶೀಲಿಸಲು ವಿಶೇಷ ತರಬೇತಿ ಅಗತ್ಯವಿದೆ ಮತ್ತು ವಿಷಯದ ಗ್ರಾಫಿಕ್ ಸ್ವರೂಪದಿಂದಾಗಿ ಈ ಪರಿಶೀಲನೆಗಳನ್ನು ನಿರ್ವಹಿಸುವ ಏಜೆಂಟರ ತಂಡವು ಚಿಕ್ಕದಾಗಿದೆ. 2023 ರ ಶರತ್ಕಾಲದಲ್ಲಿ, ಕೆಲವು CSE ಕ್ರಮ ಜಾರಿಗೊಳಿಸುವಿಕೆಗಳ ಸ್ಥಿರತೆಯ ಮೇಲೆ ಪರಿಣಾಮ ಬೀರಿದ ನೀತಿ ಬದಲಾವಣೆಗಳನ್ನು Snap ಅನುಷ್ಠಾನಗೊಳಿಸಿತು ಮತ್ತು ಏಜೆಂಟರಿಗೆ ಮರುತರಬೇತಿ ನೀಡುವ ಮೂಲಕ ಹಾಗೂ ಕಟ್ಟುನಿಟ್ಟಿನ ಗುಣಮಟ್ಟ ಭರವಸೆಯ ಮೂಲಕ ನಾವು ಈ ಅಸ್ಥಿರತೆಗಳನ್ನು ಬಗೆಹರಿಸಿದ್ದೇವೆ. ಮುಂದಿನ ಪಾರದರ್ಶಕತೆಯ ವರದಿಯು CSE ಮೇಲ್ಮನವಿಗಳಿಗೆ ಪ್ರತಿಕ್ರಿಯೆ ಸಮಯವನ್ನು ಸುಧಾರಿಸುವ ಮತ್ತು ಆರಂಭಿಕ ಜಾರಿಗಳ ನಿಖರತೆಯನ್ನು ಸುಧಾರಿಸುವ ಪ್ರಗತಿಯನ್ನು ಬಹಿರಂಗಪಡಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ಕಂಟೆಂಟ್ ಮಾಡರೇಷನ್‌ಗಾಗಿ ಸ್ವಯಂಚಾಲಿತ ವಿಧಾನಗಳು (ವಿಧಿ 15.1(e))
ನಮ್ಮ ಸಾರ್ವಜನಿಕ ವಿಷಯ ವೇದಿಕೆಗಳಲ್ಲಿ, ವ್ಯಾಪಕ ಪ್ರೇಕ್ಷಕರಿಗೆ ವಿತರಣೆಗೆ ಅರ್ಹವಾಗುವುದಕ್ಕೆ ಮುನ್ನ ಕಂಟೆಂಟ್ ಸಾಮಾನ್ಯವಾಗಿ ಸ್ವಯಂ ಮಾಡರೇಷನ್ ಮತ್ತು ಮಾನವರ ವಿಮರ್ಶೆ ಎರಡರ ಮೂಲಕವೂ ಹಾದುಹೋಗುತ್ತದೆ. ಸ್ವಯಂಚಾಲಿತ ಟೂಲ್‌ಗಳಿಗೆ ಸಂಬಂಧಿಸಿದಂತೆ, ಇವುಗಳು ಸೇರಿವೆ:
ಮೆಷಿನ್ ಲರ್ನಿಂಗ್ ಬಳಸಿಕೊಂಡು ಅಕ್ರಮ ಮತ್ತು ಉಲ್ಲಂಘಿಸುವ ಕಂಟೆಂಟ್‌ನ ಪೂರ್ವಭಾವಿ ಪತ್ತೆಮಾಡುವಿಕೆ;
ಹ್ಯಾಶ್ ಮ್ಯಾಚಿಂಗ್ ಟೂಲ್‌ಗಳು (ಉದಾಹರಣೆಗೆ PhotoDNA ಮತ್ತು Google ನ CSAI Match);
ನಿಂದನೆಯ ಭಾಷೆಯ ಪತ್ತೆ: ಇಮೋಜಿಗಳು ಸೇರಿದಂತೆ, ನಿಂದನೆಯ ಕೀ ವರ್ಡ್‌ಗಳ ಗುರುತಿಸಲಾದ ಮತ್ತು ನಿಯಮಿತವಾಗಿ ಅಪ್‌ಡೇಟ್ ಮಾಡಲಾಗುವ ಪಟ್ಟಿಯನ್ನು ಆಧರಿಸಿ ಕಂಟೆಂಟ್ ತಿರಸ್ಕರಿಸಲು ನಿಂದನೆಯ ಭಾಷೆಯ ಪತ್ತೆ.
ಎಲ್ಲ ಹಾನಿಗಳಿಗಾಗಿ ಸ್ವಯಂಚಾಲಿತ ಮಾಡರೇಷನ್ ತಂತ್ರಜ್ಞಾನಗಳ ನಿಖರತೆ ಅಂದಾಜು 96.61% ಆಗಿತ್ತು ಮತ್ತು ದೋಷದ ದರ ಅಂದಾಜು 3.39% ಆಗಿತ್ತು.
ಸ್ವಯಂಚಾಲಿತ ಮತ್ತು ಮಾನವ ಮಾಡರೇಟರ್‌ರ ಪಕ್ಷಪಾತ ಮತ್ತು ಸರ್ಕಾರಗಳು, ರಾಜಕೀಯ ಕ್ಷೇತ್ರಗಳು ಅಥವಾ ಸುಸಂಘಟಿತ ವ್ಯಕ್ತಿಗಳು ಸೇರಿದಂತೆ ನಿಂದನೀಯ ವರದಿಗಳಿಂದ ಉಂಟಾಗಬಹುದಾದ ಅಭಿವ್ಯಕ್ತಿ ಮತ್ತು ಸಭೆ ಸೇರುವ ಸ್ವಾತಂತ್ರ್ಯದ ಅಪಾಯಗಳು ಸೇರಿದಂತೆ ವಿಷಯ ಮಿತಗೊಳಿಸುವಿಕೆಗೆ ಸಂಬಂಧಿಸಿದ ಅಪಾಯಗಳಿವೆ ಎಂದು ನಾವು ಗುರುತಿಸುತ್ತೇವೆ. ಸಾಮಾನ್ಯವಾಗಿ Snapchat, ನಿರ್ದಿಷ್ಟವಾಗಿ ನಮ್ಮ ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಅಥವಾ ಚಳವಳಿಯ ವಿಷಯಕ್ಕಾಗಿನ ಸ್ಥಳವಲ್ಲ.
ಅದೇನೇ ಇದ್ದರೂ, ಈ ಅಪಾಯಗಳ ವಿರುದ್ಧ ರಕ್ಷಣೆ ನೀಡಲು, Snap ಪರೀಕ್ಷೆ ಮಾಡುವಿಕೆ ಮತ್ತು ತರಬೇತಿ ನೀಡುವಿಕೆಯನ್ನು ಹೊಂದಿದೆ ಮತ್ತು ಕಾನೂನು ಜಾರಿ ಸಂಸ್ಥೆ ಮತ್ತು ಸರ್ಕಾರಿ ಅಧಿಕಾರಿಗಳಿಂದ ಸೇರಿದಂತೆ ಅಕ್ರಮ ಅಥವಾ ಉಲ್ಲಂಘಿಸುವ ವಿಷಯದ ವರದಿಗಳನ್ನು ನಿಭಾಯಿಸುವುದಕ್ಕಾಗಿ ಸದೃಢವಾದ, ಸ್ಥಿರವಾದ ಕಾರ್ಯವಿಧಾನಗಳನ್ನು ಹೊಂದಿದೆ. ನಮ್ಮ ವಿಷಯ ಮಾಡರೇಷನ್ ಆಲ್ಗಾರಿದಂಗಳನ್ನು ನಾವು ನಿರಂತರವಾಗಿ ಮೌಲ್ಯಮಾಪನ ಮಾಡುತ್ತೇವೆ ಮತ್ತು ವಿಕಸನಗೊಳಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಭಾವ್ಯ ಹಾನಿಗಳನ್ನು ಪತ್ತೆಮಾಡುವುದು ಕಷ್ಟಕರವಾಗಿದ್ದರೂ ಸಹ, ಯಾವುದೇ ಗಮನಾರ್ಹವಾದ ಸಮಸ್ಯೆಗಳ ಕುರಿತು ನಮಗೆ ತಿಳಿದುಬಂದಿಲ್ಲ ಮತ್ತು ತಪ್ಪುಗಳು ನಡೆದಲ್ಲಿ ಅವುಗಳನ್ನು ವರದಿ ಮಾಡಲು ನಮ್ಮ ಬಳಕೆದಾರರಿಗೆ ನಾವು ಅವಕಾಶ ಒದಗಿಸುತ್ತೇವೆ.
ನಮ್ಮ ನೀತಿಗಳು ಮತ್ತು ವ್ಯವಸ್ಥೆಗಳು ಸ್ಥಿರ ಮತ್ತು ನ್ಯಾಯೋಚಿತ ಕ್ರಮ ಜಾರಿಗೊಳಿಸುವಿಕೆಯನ್ನು ಪ್ರೋತ್ಸಾಹಿಸುತ್ತವೆ ಮತ್ತು ಮೇಲೆ ವಿವರಿಸಿರುವಂತೆ, ಪ್ರತಿಯೊಬ್ಬ Snapchatter ನ ಹಕ್ಕುಗಳನ್ನು ರಕ್ಷಿಸುವ ಜೊತೆಗೆ ನಮ್ಮ ಸಮುದಾಯದ ಹಿತಾಸಕ್ತಿಗಳನ್ನು ಸುರಕ್ಷಿತವಾಗಿರಿಸುವ ಗುರಿ ಹೊಂದಿರುವ ಸೂಚನೆ ಮತ್ತು ದೂರುಗಳ ಪ್ರಕ್ರಿಯೆಗಳ ಮೂಲಕ ಕ್ರಮ ಜಾರಿಯ ಫಲಿತಾಂಶಗಳನ್ನು ಅರ್ಥಪೂರ್ಣವಾಗಿ ಪ್ರತಿವಾದಿಸಲು Snapchatter ಗಳಿಗೆ ಅವಕಾಶ ಒದಗಿಸುತ್ತವೆ.
ನಮ್ಮ ಕ್ರಮ ಜಾರಿಗೊಳಿಸುವಿಕೆ ನೀತಿಗಳು ಮತ್ತು ಪ್ರಕ್ರಿಯೆಗಳನ್ನು ಸುಧಾರಿಸಲು ನಾವು ನಿರಂತರ ಶ್ರಮಿಸುತ್ತೇವೆ ಮತ್ತು Snapchat ನಲ್ಲಿ ಸಂಭಾವ್ಯತಃ ಹಾನಿಕಾರಕ ಮತ್ತು ಕಾನೂನುಬಾಹಿರ ವಿಷಯ ಹಾಗೂ ಚಟುವಟಿಕೆಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಾಕಷ್ಟು ಪರಿಶ್ರಮಪಟ್ಟಿದ್ದೇವೆ. ಇದು ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿಯಲ್ಲಿ ತೋರಿಸಿರುವ ನಮ್ಮ ವರದಿ ಮಾಡುವಿಕೆ ಮತ್ತು ಕ್ರಮ ಜಾರಿಗೊಳಿಸುವಿಕೆ ಅಂಕಿಅಂಶಗಳ ಮೇಲ್ಮುಖ ಪ್ರವೃತ್ತಿಯಲ್ಲಿ ಮತ್ತು ಒಟ್ಟಾರೆಯಾಗಿ Snapchat ನಲ್ಲಿ ಇಳಿಕೆಯಾಗುತ್ತಿರುವ ಉಲ್ಲಂಘನೆಗಳ ವ್ಯಾಪಕತೆಯ ದರದಲ್ಲಿ ಬಿಂಬಿತವಾಗಿದೆ.
ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿಯ (H2 2023) ಅವಧಿಗಾಗಿ, DSA ಅಡಿಯಲ್ಲಿ ಅಧಿಕೃತವಾಗಿ ನೇಮಕ ಮಾಡಿದ ಯಾವುದೇ ನ್ಯಾಯಾಲಯದ ಹೊರಗಿನ ವಿವಾದ ಇತ್ಯರ್ಥ ಆಯೋಗಗಳು ಇಲ್ಲ. ಇದರ ಪರಿಣಾಮವಾಗಿ, ಈ ಅವಧಿಯಲ್ಲಿ ಅಂತಹ ಆಯೋಗಗಳಿಗೆ ಸಲ್ಲಿಸಿದ ವಿವಾದಗಳ ಸಂಖ್ಯೆ ಸೊನ್ನೆ (0) ಆಗಿದೆ ಮತ್ತು ಫಲಿತಾಂಶಗಳು, ಇತ್ಯರ್ಥಗಳಿಗಾಗಿ ಸರಾಸರಿ ವಿಚಾರಣೆಯ ಅವಧಿ ಹಾಗೂ ಆಯೋಗದ ನಿರ್ಧಾರಗಳನ್ನು ನಾವು ಅನುಷ್ಠಾನಗೊಳಿಸಿದ ವಿವಾದಗಳ ಪ್ರಮಾಣವನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ.
H2 2023 ಅವಧಿಯಲ್ಲಿ, ಲೇಖನ 23 ರ ಅನುಸಾರ ಜಾರಿಗೊಳಿಸಿದ ಯಾವುದೇ ಖಾತೆ ಅಮಾನತುಗಳನ್ನು ನಾವು ಹೊಂದಿಲ್ಲ. ಸ್ಪಷ್ಟರೂಪದಲ್ಲಿ ನಿರಾಧಾರವಾಗಿರುವ ಸೂಚನೆಗಳು ಅಥವಾ ದೂರುಗಳನ್ನು ಬಳಕೆದಾರ ಖಾತೆಗಳು ಪದೇಪದೆ ಸಲ್ಲಿಸುವ ಸಾಧ್ಯತೆಯನ್ನು ಮಿತಿಗೊಳಿಸುವ ಕಾರ್ಯವಿಧಾನಗಳನ್ನು Snap ನ ವಿಶ್ವಾಸ ಮತ್ತು ಸುರಕ್ಷತೆ ತಂಡವು ಹೊಂದಿದೆ. ಈ ಕಾರ್ಯವಿಧಾನಗಳು, ನಕಲು ವರದಿ ಸೃಷ್ಟಿಯನ್ನು ನಿರ್ಬಂಧಿಸುವುದನ್ನು ಮತ್ತು ಸ್ಪಷ್ಟರೂಪದಲ್ಲಿ ನಿರಾಧಾರವಾಗಿರುವ ವರದಿಗಳನ್ನು ಪದೇಪದೆ ಸಲ್ಲಿಸಿರುವ ಬಳಕೆದಾರರು ಹಾಗೆ ಮಾಡುವುದನ್ನು ಮುಂದುವರಿಸದಂತೆ ತಡೆಯುವ ಇಮೇಲ್ ಫಿಲ್ಟರ್‌ಗಳ ಬಳಕೆಯನ್ನು ಒಳಗೊಂಡಿವೆ. ನಮ್ಮ Snapchat ಮಾಡರೇಷನ್, ಕ್ರಮ ಜಾರಿಗೊಳಿಸುವಿಕೆ ಮತ್ತು ಮೇಲ್ಮನವಿಗಳ ವಿವರಣೆಯಲ್ಲಿ ವಿವರಿಸಿರುವಂತೆ ಖಾತೆಗಳ ವಿರುದ್ಧ ಸೂಕ್ತ ಕ್ರಮ ಜಾರಿಗೊಳಿಸುವಿಕೆ ಕ್ರಮವನ್ನು Snap ತೆಗೆದುಕೊಳ್ಳುತ್ತದೆ ಮತ್ತು Snap ನ ಖಾತೆ ವಿರುದ್ಧದ ಕ್ರಮ ಜಾರಿಗೊಳಿಸುವಿಕೆಯ ಮಟ್ಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಮ್ಮ ಪಾರದರ್ಶಕತೆಯ ವರದಿಯಲ್ಲಿ (H2 2023) ನೋಡಬಹುದು. ಅಂತಹ ಕ್ರಮಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತದೆ ಮತ್ತು ಪುನರಾವರ್ತಿಸಲಾಗುತ್ತದೆ.
ನಮ್ಮ ಕಂಟೆಂಟ್ ಮಾಡರೇಷನ್ ತಂಡವು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತದೆ, ಈ ಮೂಲಕ 24/7 Snapchatter ಗಳನ್ನು ಸುರಕ್ಷಿತವಾಗಿ ಇರಿಸಲು ನಮಗೆ ಸಹಾಯ ಮಾಡುತ್ತದೆ. ಕೆಳಗೆ, 31 ಡಿಸೆಂಬರ್ 2023 ರವರೆಗಿನ ಮಾಡರೇಟರ್‌ಗಳ ಭಾಷೆ ವಿಶೇಷತೆಗಳ ಪ್ರಕಾರ ನಮ್ಮ ಮಾನವ ಮಾಡರೇಷನ್ ಸಂಪನ್ಮೂಲಗಳ (ಕೆಲವು ಮಾಡರೇಟರ್‌ಗಳು ಹಲವು ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದಾರೆ ಎನ್ನುವುದನ್ನು ಗಮನದಲ್ಲಿಡಿ) ವಿವರಗಳನ್ನು ನೀವು ನೋಡಬಹುದು:
ಮೇಲಿನ ಕೋಷ್ಟಕವು ಡಿಸೆಂಬರ್ 31, 2023 ರ ಪ್ರಕಾರ EU ಸದಸ್ಯ ರಾಷ್ಟ್ರದ ಭಾಷೆಗಳನ್ನು ಬೆಂಬಲಿಸುವ ಎಲ್ಲ ಮಾಡರೇಟರ್‌ಗಳನ್ನು ಒಳಗೊಂಡಿದೆ. ನಮಗೆ ಹೆಚ್ಚುವರಿ ಭಾಷಾ ಸೇವೆಗಳ ನೆರವಿನ ಅಗತ್ಯವಿರುವಂತಹ ಸಂದರ್ಭಗಳಲ್ಲಿ, ನಾವು ಅನುವಾದ ಸೇವೆಗಳನ್ನು ಬಳಸುತ್ತೇವೆ.
ನಿಯಂತ್ರಕರನ್ನು ಪ್ರಮಾಣಿತ ಉದ್ಯೋಗ ವಿವರಣೆಯನ್ನು ಬಳಸಿಕೊಂಡು ನೇಮಕ ಮಾಡಲಾಗುತ್ತದೆ, ಅದು ಭಾಷೆಯ ಅಗತ್ಯವನ್ನು ಒಳಗೊಂಡಿರುತ್ತದೆ (ಅಗತ್ಯವನ್ನು ಅವಲಂಬಿಸಿ). ಪ್ರವೇಶ-ಮಟ್ಟದ ಹುದ್ದೆಗಳಿಗಾಗಿ ಭಾಷಾ ಪರಿಣತಿಯ ಅಗತ್ಯತೆಯ ಪ್ರಕಾರ ಅಭ್ಯರ್ಥಿಯು ಸಂಬಂಧಿತ ಭಾಷೆಯಲ್ಲಿ ಸ್ಫುಟವಾಗಿ ಬರೆಯುವ ಮತ್ತು ಮಾತನಾಡುವ ಕೌಶಲ್ಯಗಳನ್ನು ಪ್ರದರ್ಶಿಸಲು ಸಾಧ್ಯವಾಗಬೇಕು ಹಾಗೂ ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು. ಅಭ್ಯರ್ಥಿಗಳನ್ನು ಪರಿಗಣಿಸಬೇಕಾದಲ್ಲಿ ಅವರು ಶೈಕ್ಷಣಿಕ ಮತ್ತು ಹಿನ್ನೆಲೆಯ ಅಗತ್ಯಗಳನ್ನು ಪೂರೈಸಬೇಕು. ಅಭ್ಯರ್ಥಿಗಳು ತಾವು ಬೆಂಬಲಿಸಲಿರುವ ಕಂಟೆಂಟ್ ಮಾಡರೇಷನ್‌ನ ದೇಶ ಅಥವಾ ಪ್ರದೇಶದಲ್ಲಿನ ಪ್ರಸ್ತುತ ಈವೆಂಟ್‌ಗಳ ತಿಳುವಳಿಕೆಯನ್ನು ಕೂಡ ಪ್ರದರ್ಶಿಸಬೇಕಾಗುತ್ತದೆ.
ನಮ್ಮ Snapchat ಸಮುದಾಯವನ್ನು ರಕ್ಷಿಸಲು ಸಹಾಯ ಮಾಡುವುದಕ್ಕಾಗಿ ನಮ್ಮ ಮಾಡರೇಷನ್ ತಂಡವು ನಮ್ಮ ನೀತಿಗಳು ಮತ್ತು ಶಿಸ್ತುಕ್ರಮಗಳನ್ನು ಅನ್ವಯಿಸುತ್ತದೆ. ಹಲವು ವಾರಗಳ ಅವಧಿಯಲ್ಲಿ ತರಬೇತಿಯನ್ನು ನಡೆಸಲಾಗುತ್ತದೆ, ಇದರಲ್ಲಿ Snap ನ ನೀತಿಗಳು, ಟೂಲ್‌ಗಳು ಮತ್ತು ಮೇಲ್ಮನವಿ ಕಾರ್ಯವಿಧಾನಗಳ ಕುರಿತು ಹೊಸ ತಂಡದ ಸದಸ್ಯರಿಗೆ ಅರಿವು ನೀಡಲಾಗುತ್ತದೆ. ತರಬೇತಿಯ ಬಳಿಕ, ಪ್ರತಿ ಮಾಡರೇಟರ್ ಕಂಟೆಂಟ್ ವಿಮರ್ಶಿಸುವುದಕ್ಕೆ ಅನುಮತಿ ಪಡೆಯುವ ಮೊದಲು ಪ್ರಮಾಣೀಕರಣ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ನಿರ್ದಿಷ್ಟವಾಗಿ ನಾವು ನೀತಿ-ಅಂಚಿನ ಮತ್ತು ಸಂದರ್ಭ-ಆಧರಿತ ಪ್ರಕರಣಗಳನ್ನು ಎದುರಿಸಿದಾಗ, ನಮ್ಮ ಮಾಡರೇಷನ್ ತಂಡವು ಅವರ ವರ್ಕ್‌ಫ್ಲೋಗಳಿಗೆ ಸಂಬಂಧಿಸಿದ ರಿಫ್ರೆಶರ್ ತರಬೇತಿಯಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ. ಎಲ್ಲಾ ನಿಯಂತ್ರಕರು ಇತ್ತೀಚಿನ ಮಾಹಿತಿಯನ್ನು ಹೊಂದಿದ್ದರೆಂದು ಮತ್ತು ನವೀಕರಿಸಲ್ಪಟ್ಟ ಎಲ್ಲಾ ನೀತಿಗಳನ್ನು ಅನುಸರಿಸುತ್ತಿದ್ದಾರೆಂದು ಖಚಿತಪಡಿಸುವುದಕ್ಕಾಗಿ ನಾವು ಕೌಶಲ್ಯವರ್ಧನಾ ಕಾರ್ಯಕ್ರಮಗಳು, ಪ್ರಮಾಣೀಕರಣ ತರಬೇತಿಗಳು ಮತ್ತು ರಸಪ್ರಶ್ನೆಗಳನ್ನು ಸಹ ಆಯೋಜಿಸುತ್ತೇವೆ. ಅಂತಿಮವಾಗಿ, ಪ್ರಸ್ತುತ ಘಟನೆಗಳ ಆಧಾರದ ಮೇಲೆ ತುರ್ತು ವಿಷಯ ಪ್ರವೃತ್ತಿಗಳು ಹೊರಹೊಮ್ಮಿದಾಗ, ನಾವು ನೀತಿ ಸ್ಪಷ್ಟೀಕರಣಗಳನ್ನು ತ್ವರಿತವಾಗಿ ಪ್ರಸಾರ ಮಾಡುತ್ತೇವೆ ಇದರಿಂದ ತಂಡಗಳು Snap ನ ನೀತಿಗಳ ಪ್ರಕಾರ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ.
ನಮ್ಮ ಕಂಟೆಂಟ್ ಮಾಡರೇಷನ್ ತಂಡಕ್ಕೆ - ಅಂದರೆ Snap ನ "ಡಿಜಿಟಲ್ ಮೊದಲ ಪ್ರತಿಕ್ರಿಯೆದಾರರಿಗೆ" - ಕೆಲಸದಲ್ಲಿನ ಯೋಗಕ್ಷೇಮ ಬೆಂಬಲ ಮತ್ತು ಮಾನಸಿಕ ಆರೋಗ್ಯ ಸೇವೆಗಳಿಗೆ ಸುಲಭ ಆ್ಯಕ್ಸೆಸ್ ಸೇರಿದಂತೆ, ನಾವು ಗಮನಾರ್ಹ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತೇವೆ.
ಹಿನ್ನೆಲೆ
ನಮ್ಮ ಕಮ್ಯುನಿಟಿಯ ಯಾವುದೇ ಸದಸ್ಯರ, ವಿಶೇಷವಾಗಿ ಅಪ್ರಾಪ್ತ ವಯಸ್ಕರ ಲೈಂಗಿಕ ಶೋಷಣೆಯು ಕಾನೂನುಬಾಹಿರವಾಗಿದೆ, ಅಸಹ್ಯಕರವಾಗಿದೆ ಮತ್ತು ನಮ್ಮ ಕಮ್ಯುನಿಟಿಯ ಮಾರ್ಗಸೂಚಿಗಳಿಂದ ನಿಷೇಧಿಸಲಾಗಿದೆ. ನಮ್ಮ ವೇದಿಕೆಯಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯವನ್ನು (CSEA) ತಡೆಗಟ್ಟುವುದು, ಪತ್ತೆಹಚ್ಚುವುದು ಮತ್ತು ನಿರ್ಮೂಲನೆ ಮಾಡುವುದು ನಮಗೆ ಪ್ರಮುಖ ಆದ್ಯತೆಯಾಗಿದೆ, ಹಾಗೂ ಇವುಗಳನ್ನು ಮತ್ತು ಇತರ ರೀತಿಯ ಅಪರಾಧಗಳನ್ನು ಎದುರಿಸಲು ನಾವು ನಮ್ಮ ಸಾಮರ್ಥ್ಯಗಳನ್ನು ನಿರಂತರವಾಗಿ ವಿಕಸನಗೊಳಿಸುತ್ತೇವೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ತಿಳಿದಿರುವ ಅಕ್ರಮ ಚಿತ್ರಗಳು ಮತ್ತು ವೀಡಿಯೋಗಳನ್ನು ಗುರುತಿಸುವುದಕ್ಕಾಗಿ ನಾವು ಕ್ರಮವಾಗಿ PhotoDNA ದೃಢವಾದ ಹ್ಯಾಶ್-ಮ್ಯಾಚಿಂಗ್ ಮತ್ತು Googleನ ಮಕ್ಕಳ ದೌರ್ಜನ್ಯದ ಚಿತ್ರಣಗಳ (CSAI) ಹೊಂದುವಿಕೆಯನ್ನು ಬಳಸುತ್ತೇವೆ, ಹಾಗೂ ಕಾನೂನಿನ ಪ್ರಕಾರ ಅಗತ್ಯವಿರುವಂತೆ ಅವುಗಳನ್ನು ಕಾಣೆಯಾಗಿರುವ ಮತ್ತು ಶೋಷಿತ ಮಕ್ಕಳಿಗಾಗಿ ಅಮೇರಿಕಾದ ರಾಷ್ಟ್ರೀಯ ಕೇಂದ್ರಕ್ಕೆ (NCMEC) ವರದಿ ಮಾಡುತ್ತೇವೆ. ನಂತರ NCMEC, ಅಗತ್ಯಕ್ಕೆ ಅನುಸಾರ ದೇಶೀಯ ಅಥವಾ ಅಂತರರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ನಡೆಸುತ್ತದೆ.
ವರದಿ
ಈ ಕೆಳಗಿನ ದತ್ತಾಂಶವು Snapchat ಗೆ ಬಳಕೆದಾರರ ಕ್ಯಾಮರಾ ರೋಲ್ ಮೂಲಕ ಅಪ್‌ಲೋಡ್ ಮಾಡಿದ ಮಾಧ್ಯಮವನ್ನು PhotoDNA ಅನ್ನು ಬಳಸಿ ಮತ್ತು/ಅಥವಾ CSAI ಹೊಂದುವಿಕೆಯನ್ನು ಬಳಸಿ ಮಾಡಿದ ಸಕ್ರಿಯಾತ್ಮಕ ಕ್ರಮವೀಕ್ಷಣೆಯ ಫಲಿತಾಂಶವನ್ನು ಆಧರಿಸಿದೆ.
ಮಕ್ಕಳ ಲೈಂಗಿಕ ಶೋಷಣೆಯನ್ನು ನಿಲ್ಲಿಸುವುದು ಅಗ್ರ ಆದ್ಯತೆಯಾಗಿದೆ. ಇದಕ್ಕಾಗಿ Snap ಗಣನೀಯ ಪ್ರಮಾಣದ ಸಂಪನ್ಮೂಲಗಳನ್ನು ಮೀಸಲಿಡುತ್ತದೆ ಹಾಗೂ ಅಂತಹ ನಡವಳಿಕೆಯ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. CSE ಮೇಲ್ಮನವಿಗಳನ್ನು ಪರಿಶೀಲಿಸಲು ವಿಶೇಷ ತರಬೇತಿಯ ಅಗತ್ಯವಿದೆ, ಮತ್ತು ವಿಷಯದ ಗ್ರಾಫಿಕ್ ಸ್ವರೂಪದಿಂದಾಗಿ ಈ ವಿಮರ್ಶೆಗಳನ್ನು ನಿರ್ವಹಿಸುವ ಏಜೆಂಟರ ತಂಡವು ಸೀಮಿತವಾಗಿದೆ. 2023 ರ ಶರತ್ಕಾಲದಲ್ಲಿ, Snap ಕೆಲವು CSE ಕ್ರಮ ಜಾರಿಗೊಳಿಸುವಿಕೆಗಳ ಸ್ಥಿರತೆಯ ಮೇಲೆ ಪರಿಣಾಮ ಬೀರಿದ ನೀತಿ ಬದಲಾವಣೆಗಳನ್ನು ಅನುಷ್ಠಾನಗೊಳಿಸಿತು, ಹಾಗೂ ಏಜೆಂಟರಿಗೆ ಮರುತರಬೇತಿ ನೀಡುವ ಮೂಲಕ ಮತ್ತು ಕಟ್ಟುನಿಟ್ಟಿನ ಗುಣಮಟ್ಟ ಭರವಸೆಯ ಮೂಲಕ ನಾವು ಈ ಅಸ್ಥಿರತೆಗಳನ್ನು ಬಗೆಹರಿಸಿದ್ದೇವೆ. ಮುಂದಿನ ಪಾರದರ್ಶಕತೆಯ ವರದಿಯು CSE ಮೇಲ್ಮನವಿಗಳಿಗಾಗಿ ಪ್ರತಿಕ್ರಿಯಾ ಸಮಯಗಳನ್ನು ಸುಧಾರಿಸುವ ಮತ್ತು ಆರಂಭಿಕ ಜಾರಿಗಳ ನಿಖರತೆಯನ್ನು ಸುಧಾರಿಸುವುದರಲ್ಲಿನ ಪ್ರಗತಿಯನ್ನು ಬಹಿರಂಗಪಡಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ವಿಷಯ ನಿಯಂತ್ರಣಕ್ಕೆ ಸಂಬಂಧಿಸಿದ ಸುರಕ್ಷತಾ ಕ್ರಮಗಳು
CSEA ಮಾಧ್ಯಮಗಳ ಪರಿಶೀಲನೆಗಾಗಿ ಅನ್ವಯಿಸಲ್ಪಡುವ ಸುರಕ್ಷತಾ ಕ್ರಮಗಳನ್ನು ನಮ್ಮ DSA ವರದಿಯ ಅಡಿಯಲ್ಲಿ ಮೇಲಿನ "ವಿಷಯ ಮಾಡರೇಶನ್‌ಗೆ ಸಂಬಂಧಿತ ಸುರಕ್ಷತಾ ಕ್ರಮಗಳು" ವಿಭಾಗದಲ್ಲಿ ವಿವರಿಸಲಾಗಿದೆ.
ಪ್ರಕಟಣೆ: 17 ಜೂನ್ 2024
ಕೊನೆಯ ಬಾರಿ ನವೀಕರಿಸಲಾದ ದಿನಾಂಕ: 17 ಜೂನ್ 2024
ಈ ಪಾರದರ್ಶಕತೆಯ ವರದಿಯನ್ನು ಐರೋಪ್ಯ ಸಂಸತ್ತಿನ ಮತ್ತು EU ನ ಮಂತ್ರಿ ಮಂಡಲದ ನಿಯಂತ್ರಣ 2021/784 ರ ಅನುಚ್ಛೇದಗಳು 7(2) ಮತ್ತು 7(3) ಗಳಿಗೆ ಅನುಸಾರವಾಗಿ ಪ್ರಕಟಿಸಲಾಗಿದೆ, ಇದು ಆನ್‌ಲೈನ್‌ನಲ್ಲಿ ಭಯೋತ್ಪಾದಕ ವಿಷಯದ ಪ್ರಸಾರವನ್ನು ಉದ್ದೇಶಿಸುತ್ತದೆ (ನಿಯಂತ್ರಣ). ಇದು 1 ಜನವರಿ - 31 ಡಿಸೆಂಬರ್ 2023 ರ ವರದಿಯ ಅವಧಿಯನ್ನು ಒಳಗೊಂಡಿರುತ್ತದೆ.
ಅನುಚ್ಛೇದ 7(3)(a): ಭಯೋತ್ಪಾದಕ ವಿಷಯದ ಗುರುತಿಸುವಿಕೆ ಮತ್ತು ತೆಗೆದುಹಾಕುವಿಕೆಗೆ ಸಂಬಂಧಿಸಿದ ಅಥವಾ ಭಯೋತ್ಪಾದಕ ವಿಷಯಕ್ಕೆ ಪ್ರವೇಶವನ್ನು ನಿಷ್ಕ್ರಿಯಗೊಳಿಸುವಿಕೆಗೆ ಸಂಬಂಧಿಸಿದಂತೆ ಹೋಸ್ಟಿಂಗ್ ಸೇವಾ ಪೂರೈಕೆದಾರರ ಕ್ರಮಗಳ ಕುರಿತಾದ ಮಾಹಿತಿ
ಅನುಚ್ಛೇದ 7(3)(b): ಈ ಹಿಂದೆ ಭಯೋತ್ಪಾದಕ ವಿಷಯವೆಂದು ಪರಿಗಣಿಸಲ್ಪಟ್ಟ ಕಾರಣದಿಂದ ತೆಗೆದುಹಾಕಲಾದ ಅಥವಾ ಪ್ರವೇಶವನ್ನು ನಿಷ್ಕ್ರಿಯಗೊಳಿಸಲಾದ ವಿಷಯವು ಆನ್‌ಲೈನ್‌ನಲ್ಲಿ ಮರು ಪ್ರಕಟಗೊಳ್ಳುವುದಕ್ಕೆ, ವಿಶೇಷವಾಗಿ ಸ್ವಯಂಚಾಲಿತ ಸಾಧನಗಳನ್ನು ಬಳಸಲ್ಪಟ್ಟಿರುವ ಸನ್ನಿವೇಶಗಳಿಗೆ ಸಂಬಂಧಿಸಿದ ಹೋಸ್ಟಿಂಗ್ ಸೇವಾ ಪೂರೈಕೆದಾರರ ಕ್ರಮಗಳ ಕುರಿತಾದ ಮಾಹಿತಿ
ಭಯೋತ್ಪಾದಕರು, ಭಯೋತ್ಪಾದಕ ಸಂಘಟನೆಗಳು ಮತ್ತು ಹಿಂಸಾತ್ಮಕ ವಿಧ್ವಂಸಕರು Snapchat ಅನ್ನು ಬಳಸದಿರುವಂತೆ ನಿಷೇಧಿಸಲಾಗಿದೆ. ನಮ್ಮ ಸಮುದಾಯದ ಮಾರ್ಗಸೂಚಿಗಳ ಅಡಿಯಲ್ಲಿ ಭಯೋತ್ಪಾದನೆ ಅಥವಾ ಇತರ ಹಿಂಸಾತ್ಮಕ, ಅಪರಾಧೀ ಕೃತ್ಯಗಳನ್ನು ಪ್ರತಿಪಾದಿಸುವ, ಉತ್ತೇಜಿಸುವ, ವೈಭವೀಕರಿಸುವ ಅಥವಾ ಮುನ್ನಡೆಸುವ ವಿಷಯಗಳನ್ನು ನಿಷೇಧಿಸಲಾಗಿದೆ. ಬಳಕೆದಾರರು ನಮ್ಮ ಆ್ಯಪ್‌ನಲ್ಲಿರುವ ವರದಿ ಮಾಡುವ ಪರಿವಿಡಿ ಮತ್ತು ನಮ್ಮ ನೆರವು ಜಾಲತಾಣದ ಮೂಲಕ ನಮ್ಮ ಸಮುದಾಯದ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿಷಯದ ಬಗ್ಗೆ ವರದಿ ಮಾಡಲು ಸಾಧ್ಯವಾಗುತ್ತದೆ. ನಾವು ಸ್ಪಾಟ್‌ಲೈಟ್ ಮತ್ತು Discover ಗಳಂತಹ ಸಾರ್ವಜನಿಕ ಮೇಲ್ಮೈಗಳಲ್ಲಿ ಉಲ್ಲಂಘನಾ ವಿಷಯಗಳನ್ನು ಗುರುತಿಸಲು ಪ್ರಯತ್ನಿಸುವುದಕ್ಕಾಗಿ ಸಕ್ರಿಯಾತ್ಮಕ ಪತ್ತೆಹಚ್ಚುವಿಕೆಯನ್ನು ಸಹ ಬಳಸುತ್ತೇವೆ.
ನಾವು ಉಲ್ಲಂಘನಾತ್ಮಕ ವಿಷಯದ ಬಗ್ಗೆ ಯಾವುದೇ ವಿಧಾನದಲ್ಲಿ ತಿಳಿದುಕೊಂಡರೂ , ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡಗಳು ಯಾಂತ್ರೀಕೃತ ಮತ್ತು ಮಾನವ ನಿಯಂತ್ರಿತ ಉಪಕ್ರಮಗಳ ಸಂಯೋಜನೆಯ ಮೂಲಕ ಗುರುತಿಸಲಾದ ವಿಷಯವನ್ನು ತ್ವರಿತವಾಗಿ ಪರಿಶೀಲಿಸುತ್ತವೆ ಹಾಗೂ ಜಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಜಾರಿ ಕ್ರಮಗಳಲ್ಲಿ ಆ ವಿಷಯದ ತೆಗೆದುಹಾಕುವಿಕೆ, ಎಚ್ಚರಿಕೆ ನೀಡುವಿಕೆ ಅಥವಾ ಉಲ್ಲಂಘಿಸುವ ಖಾತೆಯನ್ನು ನಿರ್ಬಂಧಿಸುವುದು, ಹಾಗೂ, ಅಗತ್ಯವಿದ್ದಲ್ಲಿ, ಆ ಖಾತೆಯ ಕುರಿತು ಮಾಹಿತಿಯನ್ನು ಕಾನೂನು ಜಾರಿ ಪ್ರಾಧಿಕಾರಗಳಿಗೆ ನೀಡುವಂತಹ ಕ್ರಮಗಳು ಒಳಗೊಂಡಿರಬಹುದು. Snapchat ನಲ್ಲಿ ಭಯೋತ್ಪಾದಕ ಅಥವಾ ಇತರ ಹಿಂಸಾತ್ಮಕ ವಿಧ್ವಂಸಕ ವಿಷಯ ಮರು ಪ್ರಕಟಗೊಳ್ಳುವುದನ್ನು ತಡೆಗಟ್ಟಲು, ಕಾನೂನು ಜಾರಿಗೊಳಿಸುವ ಪ್ರಾಧಿಕಾರಗಳೊಂದಿಗೆ ಕಾರ್ಯನಿರ್ವಹಿಸುವ ಜೊತೆಗೆ, ನಾವು ಉಲ್ಲಂಘಿಸುವ ಖಾತೆಯೊಂದಿಗೆ ಸಂಬಂಧಿಸಿದ ಸಾಧನವನ್ನು ನಿರ್ಬಂಧಿಸಲು ಮತ್ತು ಆ ಬಳಕೆದಾರರು ಮತ್ತೊಂದು Snapchat ಖಾತೆಯನ್ನು ರಚಿಸುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.
ಭಯೋತ್ಪಾದಕ ವಿಷಯಗಳನ್ನು ಗುರುತಿಸಲು ಮತ್ತು ತೆಗೆದುಹಾಕಲು ನಾವು ತೆಗೆದುಕೊಳ್ಳುವ ಕ್ರಮಗಳ ಕುರಿತಾದ ಹೆಚ್ಚುವರಿ ವಿವರಗಳು ನಮ್ಮ ದ್ವೇಷಪೂರಿತ ವಿಷಯ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದದ ಕುರಿತು ವಿವರಣಾ ಮಾಹಿತಿ ಹಾಗೂ ಮಿತಗೊಳಿಸುವಿಕೆ, ಜಾರಿಗೊಳಿಸುವಿಕೆ ಮತ್ತು ಮೇಲ್ಮನವಿಗಳ ಕುರಿತು ವಿವರಣಾ ಮಾಹಿತಿ ಗಳಲ್ಲಿ ಕಾಣಬಹುದಾಗಿದೆ.
ಅನುಚ್ಛೇದ 7(3)(c): ಅನುಚ್ಛೇದ 3(7) ರ ಮೊದಲ ಉಪಕಂಡಿಕೆಗೆ ಅನುಸಾರವಾಗಿ ಮತ್ತು ಅನುಚ್ಛೇದ 3(8) ರ ಮೊದಲ ಉಪಕಂಡಿಕೆಗೆ ಅನುಸಾರವಾಗಿ, ತೆಗೆದುಹಾಕುವುದಕ್ಕಾಗಿ ಆದೇಶಗಳನ್ನು ನೀಡಲಾದ ನಂತರ ಅಥವಾ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲಾದ ನಂತರ ತೆಗೆದುಹಾಕಲಾಗಿರುವ ಭಯೋತ್ಪಾದಕ ವಿಷಯಗಳ ಸಂಖ್ಯೆ ಅಥವಾ ಪ್ರವೇಶವನ್ನು ತೆಗೆದುಹಾಕಲಾಗಿರುವ ಅಂತಹ ಭಯೋತ್ಪಾದಕ ವಿಷಯಗಳ ಸಂಖ್ಯೆ, ಹಾಗೂ ತೆಗೆದುಹಾಕುವುದಕ್ಕಾಗಿ ಆದೇಶಗಳನ್ನು ನೀಡಲಾದ ನಂತರ ಅಥವಾ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲಾದ ನಂತರ ತೆಗೆದುಹಾಕಲಾಗಿಲ್ಲದ ಭಯೋತ್ಪಾದಕ ವಿಷಯಗಳ ಸಂಖ್ಯೆ ಅಥವಾ ಪ್ರವೇಶವನ್ನು ತೆಗೆದುಹಾಕಲಾಗಿಲ್ಲದ ಅಂತಹ ಭಯೋತ್ಪಾದಕ ವಿಷಯಗಳ ಸಂಖ್ಯೆ, ಹಾಗೂ ಜೊತೆಗೆ ಅದಕ್ಕಾಗಿ ಕಾರಣಗಳು
ವರದಿ ಮಾಡುವ ಅವಧಿಯಲ್ಲಿ Snap ಯಾವುದೇ ವಿಷಯದ ತೆಗೆದುಹಾಕುವಿಕೆ ಆದೇಶಗಳನ್ನು ಪಡೆಯಲಿಲ್ಲ, ಹಾಗೂ ಅದರೊಂದಿಗೆ, ನಮಗೆ ನಿಬಂಧನೆಯ ಅನುಚ್ಛೇದ 5 ರ ಅನುಸಾರವಾಗಿ ಯಾವುದೇ ನಿರ್ದಿಷ್ಟ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿರಲಿಲ್ಲ. ಅಂತೆಯೇ, ನಾವು ನಿಯಂತ್ರಣದ ಅಡಿಯಲ್ಲಿ ಯಾವುದೇ ಜಾರಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿರಲಿಲ್ಲ.
ಈ ಕೆಳಗಿನ ಕೋಷ್ಟಕವು ಬಳಕೆದಾರರ ವರದಿಗಳ ಆಧಾರದ ಮೇಲೆ ಹಾಗೂ ಸಕ್ರಿಯಾತ್ಮಕ ಪತ್ತೆಹಚ್ಚುವಿಕೆಯ ಆಧಾರದ ಮೇಲೆ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದದ ವಿಷಯಕ್ಕೆ ಸಂಬಂಧಿಸಿದ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ವಿಷಯ ಮತ್ತು ಖಾತೆಗಳ ವಿರುದ್ಧ EU ನಲ್ಲಿ ಮತ್ತು ವಿಶ್ವದ ಬೇರೆಡೆಗಳಲ್ಲಿಯೂ ತೆಗೆದುಕೊಳ್ಳಲ್ಪಟ್ಟ ಜಾರಿಗೊಳಿಸುವ ಕ್ರಮಗಳನ್ನು ವಿವರಿಸುತ್ತದೆ
ಅನುಚ್ಛೇದ 7(3)(d): ಅನುಚ್ಛೇದ 10 ಪ್ರಕಾರ ಹೋಸ್ಟಿಂಗ್ ಸೇವಾ ಪೂರೈಕೆದಾರರಿಂದ ನಿರ್ವಹಿಸಲ್ಪಡುವ ದೂರುಗಳ ಸಂಖ್ಯೆ ಮತ್ತು ಫಲಿತಾಂಶಗಳು
ಅನುಚ್ಛೇದ 7(3)(g): ವಿಷಯದ ಪೂರೈಕೆದಾರರು ನೀಡಿದ ದೂರಿನ ನಂತರ ಹೋಸ್ಟಿಂಗ್ ಸೇವಾ ಪೂರೈಕೆದಾರರು ಮರುಸ್ಥಾಪಿಸಿದ ವಿಷಯದ ಅಥವಾ ಆ ವಿಷಯಕ್ಕೆ ಪ್ರವೇಶವನ್ನು ಮರುಸ್ಥಾಪಿಸಿದ ಪ್ರಕರಣಗಳ ಸಂಖ್ಯೆ
ವರದಿ ಮಾಡುವ ಅವಧಿಯಲ್ಲಿ ಮೇಲೆ ತಿಳಿಸಲಾದಂತೆ ನಾವು ಯಾವುದೇ ಜಾರಿ ಕ್ರಮಗಳನ್ನು ಹೊಂದಿರಲಿಲ್ಲವಾದ್ದರಿಂದ, ನಾವು ನಿಬಂಧನೆಯ ಅನುಚ್ಛೇದ 10 ರ ಅನುಸಾರವಾಗಿ ಯಾವುದೇ ದೂರುಗಳನ್ನು ನಿರ್ವಹಿಸಲಿಲ್ಲ ಹಾಗೂ ಯಾವುದೇ ಸಂಬಂಧಿತ ಮರುಸ್ಥಾಪನೆಗಳನ್ನು ಹೊಂದಿರಲಿಲ್ಲ.
ಈ ಕೆಳಗಿನ ಕೋಷ್ಟಕವು ನಮ್ಮ ಸಮುದಾಯದ ಮಾರ್ಗಸೂಚಿಗಳ ಅಡಿಯಲ್ಲಿ ಜಾರಿಗೊಳಿಸಲಾದ ಭಯೋತ್ಪಾದಕ ಮತ್ತು ಹಿಂಸಾತ್ಮಕ ಉಗ್ರವಾದದ ವಿಷಯಗಳಿಗೆ ಸಂಬಂಧಿಸಿದಂತೆ EU ನಲ್ಲಿ ಮತ್ತು ವಿಶ್ವದಾದ್ಯಂತವೂ ಸೇರಿ ಮಾಡಲ್ಪಟ್ಟಂತಹ ಮೇಲ್ಮನವಿಗಳು ಮತ್ತು ಮರುಸ್ಥಾಪನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿರುತ್ತದೆ.
Article 7(3)(e): the number and the outcome of administrative or judicial review proceedings brought by the hosting service provider
Article 7(3)(f): the number of cases in which the hosting service provider was required to reinstate content or access thereto as a result of administrative or judicial review proceedings
As we had no enforcement actions required under the Regulation during the reporting period, as noted above, we had no associated administrative or judicial review proceedings, and we were not required to reinstate content as a result of any such proceedings.
1 ಆಗಸ್ಟ್ 2024 ರಂತೆ, EU ನಲ್ಲಿ ನಮ್ಮ Snapchat ಆ್ಯಪ್‌ನ 9.24 ಕೋಟಿ ಸರಾಸರಿ ಮಾಸಿಕ ಸಕ್ರಿಯ ಸ್ವೀಕೃತಿದಾರರನ್ನು (“AMAR”) ಹೊಂದಿದ್ದೇವೆ. ಅಂದರೆ, ಕಳೆದ 6 ತಿಂಗಳುಗಳಲ್ಲಿ ಸರಾಸರಿ, EU ನಲ್ಲಿನ 9.24 ಕೋಟಿ ನೋಂದಾಯಿತ ಬಳಕೆದಾರರು ಒಂದು ನಿರ್ದಿಷ್ಟ ತಿಂಗಳಿನಲ್ಲಿ ಕನಿಷ್ಟ ಒಂದು ಬಾರಿಯಾದರೂ Snapchat ಆ್ಯಪ್ ಅನ್ನು ತೆರೆದಿದ್ದಾರೆ.
ಈ ಅನುಪಾತವು ಈ ಕೆಳಗಿನಂತೆ ಸದಸ್ಯ ರಾಷ್ಟ್ರವಾರು ವಿಂಗಡಣೆಯನ್ನು ಒದಗಿಸುತ್ತದೆ: