Snap Values
ಪಾರದರ್ಶಕತಾ ವರದಿ
1 ಜುಲೈ 2024 – 31 ಡಿಸೆಂಬರ್ 2024

ಬಿಡುಗಡೆ ಮಾಡಲಾದ ದಿನಾಂಕ:

20 ಜೂನ್ 2025

ಪರಿಷ್ಕರಿಸಲಾದ ದಿನಾಂಕ:

1 ಜುಲೈ 2025

Snap ನ ಸುರಕ್ಷತಾ ಪ್ರಯತ್ನಗಳ ಕುರಿತು ಒಳನೋಟಗಳನ್ನು ಒದಗಿಸಲು ಈ ಪಾರದರ್ಶಕತೆಯ ವರದಿಯನ್ನು ನಾವು ವರ್ಷಕ್ಕೆ ಎರಡು ಬಾರಿ ಪ್ರಕಟಿಸುತ್ತೇವೆ. ಸುರಕ್ಷತೆ ಮತ್ತು ಪಾರದರ್ಶಕತೆಗೆ ನಮ್ಮ ಬದ್ಧತೆಯ ಭಾಗವಾಗಿ, ನಮ್ಮ ಕಂಟೆಂಟ್ ಮಾಡರೇಷನ್, ಕಾನೂನು ಜಾರಿಗೊಳಿಸುವಿಕೆ ಅಭ್ಯಾಸಗಳು ಹಾಗೂ Snapchat ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮದ ಕುರಿತು ತೀವ್ರ ಕಾಳಜಿ ಹೊಂದಿರುವ ಹಲವು ಪಾಲುದಾರರಿಗಾಗಿ ಈ ವರದಿಗಳನ್ನು ಹೆಚ್ಚು ಸಮಗ್ರ ಮತ್ತು ಮಾಹಿತಿಯುಕ್ತವಾಗಿಸಲು ನಾವು ನಿರಂತರವಾಗಿ ಶ್ರಮಿಸುತ್ತೇವೆ. 

ಈ ಪಾರದರ್ಶಕತೆಯ ವರದಿಯು 2024 ರ ದ್ವಿತೀಯಾರ್ಧವನ್ನು ಒಳಗೊಂಡಿದೆ (ಜುಲೈ 1 - ಡಿಸೆಂಬರ್ 31). ಬಳಕೆದಾರರ ವರದಿಗಳು ಮತ್ತು Snap ನಿಂದ ಪೂರ್ವಭಾವಿಯಾಗಿ ಪತ್ತೆ ಮಾಡಿದ ಕುರಿತು ನಾವು ಜಾಗತಿಕ ಡೇಟಾ ಹಂಚಿಕೊಳ್ಳುತ್ತೇವೆ; ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳ ನಿರ್ದಿಷ್ಟ ವಿಭಾಗಗಳಲ್ಲಿ ನಮ್ಮ ಸುರಕ್ಷತಾ ತಂಡಗಳು ಮಾಡಿದ ಕ್ರಮಗಳು; ಕಾನೂನು ಜಾರಿ ಮತ್ತು ಸರ್ಕಾರಗಳ ವಿನಂತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಿದೆವು; ಮತ್ತು ಕೃತಿಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್ ಉಲ್ಲಂಘನೆಯ ನೋಟಿಸ್‌ಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಿದೆವು ಎನ್ನುವ ಕುರಿತು. ಲಿಂಕ್ ಮಾಡಿದ ಪುಟಗಳ ಸರಣಿಯೊಂದಿಗೆ ನಾವು ದೇಶ-ನಿರ್ದಿಷ್ಟ ಒಳನೋಟಗಳನ್ನು ಕೂಡ ಒದಗಿಸುತ್ತೇವೆ.

Snapchat ನಲ್ಲಿ ಹೆಚ್ಚುವರಿ ಸುರಕ್ಷತೆ ಮತ್ತು ಗೌಪ್ಯತೆ ಸಂಪನ್ಮೂಲಗಳನ್ನು ಕಂಡುಕೊಳ್ಳಲು, ಪುಟದ ಕೆಳಗಡೆ ಇರುವ ನಮ್ಮ ಪಾರದರ್ಶಕತೆಯ ವರದಿ ಮಾಡುವಿಕೆ ಕುರಿತ ಟ್ಯಾಬ್ ಅನ್ನು ನೋಡಿ.

ಈ ಪಾರದರ್ಶಕತೆಯ ವರದಿಯ ಅತ್ಯಂತ ನವೀಕೃತ ಆವೃತ್ತಿಯು ಇಂಗ್ಲಿಷ್ ಆವೃತ್ತಿಯಾಗಿದೆ ಎಂಬುದನ್ನು ದಯವಿಟ್ಟು

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡಗಳು ತೆಗೆದುಕೊಂಡ ಕ್ರಮಗಳ ಅವಲೋಕನ

ಈ ವರದಿಯ ಕೆಳಗಿನ ವಿಭಾಗಗಳಲ್ಲಿ ಇನ್ನಷ್ಟು ವಿವರವಾಗಿ ವಿವರಿಸಿರುವಂತೆ, ನಮ್ಮ ಸುರಕ್ಷತಾ ತಂಡಗಳು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಪೂರ್ವಭಾವಿಯಾಗಿ (ಸ್ವಯಂಚಾಲಿತ ಪತ್ತೆ ಸಾಧನಗಳ ಬಳಕೆಯ ಮೂಲಕ) ಮತ್ತು ಪ್ರತಿಕ್ರಿಯಾತ್ಮಕವಾಗಿ (ವರದಿಗಳಿಗೆ ಪ್ರತಿಕ್ರಿಯೆಯಾಗಿ) ಜಾರಿಗೊಳಿಸುತ್ತವೆ. ಈ ವರದಿ ಅವಧಿಯಲ್ಲಿ (H2 2024), ನಮ್ಮ ಸುರಕ್ಷತಾ ತಂಡಗಳು ಈ ಕೆಳಗಿನ ಸಂಖ್ಯೆಯ ಕ್ರಮಗಳನ್ನು ತೆಗೆದುಕೊಂಡಿವೆ:

ಒಟ್ಟು ಕ್ರಮ ಜಾರಿಗೊಳಿಸುವಿಕೆಗಳು

ಕ್ರಮ ಜಾರಿಗೊಳಿಸಲಾದ ಒಟ್ಟು ವಿಶಿಷ್ಟ ಖಾತೆಗಳು

1,00,32,110

56,98,212

ನಾವು ಉಲ್ಲಂಘನೆಯನ್ನು ಪತ್ತೆಮಾಡಿದ ಸಮಯ (ಒಂದೋ ಪೂರ್ವಭಾವಿಯಾಗಿ ಅಥವಾ ಒಂದು ವರದಿಯನ್ನು ಸ್ವೀಕರಿಸಿದಾಗ) ಮತ್ತು ಸಂಬಂಧಿತ ಕಂಟೆಂಟ್ ಅಥವಾ ಖಾತೆಯ ಮೇಲೆ ನಾವು ಅಂತಿಮ ಕ್ರಮ ತೆಗೆದುಕೊಂಡ ಸಮಯದ ನಡುವಿನ ಸರಾಸರಿ ಪ್ರಕ್ರಿಯೆ ಸಮಯ ಸೇರಿದಂತೆ, ಸಂಬಂಧಿಸಿದ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳ ಪ್ರತಿ ವಿಧದ ವಿವರವು ಕೆಳಗಿದೆ:

ನೀತಿಗಾಗಿ ಕಾರಣ

ಒಟ್ಟು ಜಾರಿಗೊಳಿಸುವಿಕೆಗಳು

ಕ್ರಮಕ್ಕೆ ಒಳಗಾದ
ಒಟ್ಟು ವಿಶಿಷ್ಟ ಖಾತೆಗಳು

ಪತ್ತೆಹಚ್ಚುವಿಕೆಯಿಂದ ಅಂತಿಮ ಕ್ರಿಯೆಯವರೆಗಿನ ಮಧ್ಯಾಂಕ ಪೂರ್ಣಗೊಳಿಸುವಿಕೆ ಸಮಯ (ನಿಮಿಷಗಳು)

ಲೈಂಗಿಕ ವಿಷಯ

38,60,331

20,99,512

2

ಮಕ್ಕಳ ಲೈಂಗಿಕ ಶೋಷಣೆ

9,61,359

5,77,682

23

ಕಿರುಕುಳ ಮತ್ತು ಬೆದರಿಕೆ

27,16,966

20,19,439

7

ಬೆದರಿಕೆಗಳು ಮತ್ತು ಹಿಂಸೆ

1,99,920

1,56,578

8

ಸ್ವಯಂ-ಹಾನಿ ಮತ್ತು ಆತ್ಮಹತ್ಯೆ

15,910

14,445

10

ಸುಳ್ಳು ಮಾಹಿತಿ

6,539

6,176

1

ಸೋಗು ಹಾಕುವಿಕೆ

8,798

8,575

2

ಸ್ಪ್ಯಾಮ್

3,57,999

2,48,090

1

ಮಾದಕದ್ರವ್ಯಗಳು

11,13,629

7,18,952

6

ಶಸ್ತ್ರಾಸ್ತ್ರಗಳು

2,11,860

1,36,953

1

ಇತರ ನಿಯಂತ್ರಿತ ಸರಕುಗಳು

2,47,535

1,77,643

8

ದ್ವೇಷ ಭಾಷಣ

3,24,478

2,72,025

27

ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ

6,786

4,010

5

ವರದಿ ಮಾಡುವಿಕೆಯ ಅವಧಿಯಲ್ಲಿ, ನಾವು 0.01 ಪ್ರತಿಶತದಷ್ಟು ಉಲ್ಲಂಘನೆ ವೀಕ್ಷಣೆಯ ದರ (VVR) ಕಂಡಿದ್ದೇವೆ, ಅಂದರೆ Snapchat ನಲ್ಲಿ ಪ್ರತಿ 10,000 Snap ಮತ್ತು ಕಥೆ ವೀಕ್ಷಣೆಗಳಲ್ಲಿ, 1 ರಲ್ಲಿ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್ ಕಂಡುಬಂದಿದೆ.

ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡಗಳಿಗೆ ವರದಿ ಮಾಡಲಾದ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳು

ಜುಲೈ 1 - ಡಿಸೆಂಬರ್ 31, 2024 ರವರೆಗೆ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳ ಕುರಿತು ಆ್ಯಪ್‌ ಒಳಗಿನ ವರದಿಗಳಿಗೆ ಪ್ರತಿಕ್ರಿಯೆಯಾಗಿ Snap ನ ಸುರಕ್ಷತಾ ತಂಡಗಳು 4,075,838 ವಿಶಿಷ್ಟ ಖಾತೆಗಳ ವಿರುದ್ಧ ಕ್ರಮ ಜಾರಿ ಒಳಗೊಂಡಂತೆ ಜಾಗತಿಕವಾಗಿ ಒಟ್ಟು 6,346,508 ಖಾತೆಗಳ ವಿರುದ್ಧ ಕ್ರಮ ತೆಗೆದುಕೊಂಡಿವೆ. ಆ ವರದಿಗಳಿಗೆ ಪ್ರತಿಕ್ರಿಯೆಯಾಗಿ ಕ್ರಮ ಜಾರಿಗೊಳಿಸಲು ನಮ್ಮ ಸುರಕ್ಷತಾ ತಂಡಗಳು ತೆಗೆದುಕೊಂಡ ಪ್ರಕ್ರಿಯೆ ಪೂರ್ಣಗೊಳಿಸುವ ಸರಾಸರಿ ಸಮಯವು ~6 ನಿಮಿಷಗಳಾಗಿತ್ತು. ತಲಾ ವಿಭಾಗದ ವರದಿ ಮಾಡುವಿಕೆಯ ವಿವರವನ್ನು ಕೆಳಗೆ ಒದಗಿಸಲಾಗಿದೆ. 

ಒಟ್ಟು ಕಂಟೆಂಟ್ ಮತ್ತು ಖಾತೆ ವರದಿಗಳು

ಒಟ್ಟು ಜಾರಿಗೊಳಿಸುವಿಕೆಗಳು

ಕ್ರಮ ಜಾರಿಗೊಳಿಸಲಾದ ಒಟ್ಟು ವಿಶಿಷ್ಟ ಖಾತೆಗಳು

1,93,79,848

63,46,508

40,75,838

ನೀತಿಗಾಗಿ ಕಾರಣ

ವಿಷಯ ಮತ್ತು ಖಾತೆ ವರದಿಗಳು

ಒಟ್ಟು ಕ್ರಮ ಜಾರಿಗೊಳಿಸುವಿಕೆಗಳು

Snap ನಿಂದ ಜಾರಿಗೊಳಿಸಲಾದ ಒಟ್ಟು ವರದಿಗಳ %

ಕ್ರಮ ಜಾರಿಗೊಳಿಸಲಾದ ಒಟ್ಟು ವಿಶಿಷ್ಟ ಖಾತೆಗಳು

ಪತ್ತೆಹಚ್ಚುವಿಕೆಯಿಂದ ಅಂತಿಮ ಕ್ರಿಯೆಯವರೆಗಿನ ಮಧ್ಯಾಂಕ ಪೂರ್ಣಗೊಳಿಸುವಿಕೆ ಸಮಯ (ನಿಮಿಷಗಳು)

ಲೈಂಗಿಕ ವಿಷಯ

52,51,375

20,42,044

32.20%

13,87,749

4

ಮಕ್ಕಳ ಲೈಂಗಿಕ ಶೋಷಣೆ

12,24,502

4,69389

7.40%

3,93,384

133

ಕಿರುಕುಳ ಮತ್ತು ಬೆದರಿಕೆ

63,77,555

27,02,024

42.60%

20,09,573

7

ಬೆದರಿಕೆಗಳು ಮತ್ತು ಹಿಂಸೆ

10,00,713

1,56,295

2.50%

1,29,077

8

ಸ್ವಯಂ-ಹಾನಿ ಮತ್ತು ಆತ್ಮಹತ್ಯೆ

3,07,660

15,149

0.20%

13,885

10

ಸುಳ್ಳು ಮಾಹಿತಿ

5,36,886

6,454

0.10%

6,095

1

ಸೋಗು ಹಾಕುವಿಕೆ

6,78,717

8,790

0.10%

8,569

2

ಸ್ಪ್ಯಾಮ್

17,70,216

1,80,849

2.80%

1,40,267

1

ಮಾದಕದ್ರವ್ಯಗಳು

4,18,431

2,44,451

3.90%

1,59,452

23

ಶಸ್ತ್ರಾಸ್ತ್ರಗಳು

2,40,767

6,473

0.10%

5,252

1

ಇತರ ನಿಯಂತ್ರಿತ ಸರಕುಗಳು

6,06,882

1,99,255

3.10%

1,43,560

8

ದ್ವೇಷ ಭಾಷಣ

7,68,705

3,14,134

4.90%

2,63,923

27

ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ

1,97,439

1,201

<0.1%

1,093

4

ಹಿಂದಿನ ವರದಿ ಅವಧಿಗೆ ಹೋಲಿಸಿದರೆ, ನಾವು ಎಲ್ಲಾ ನೀತಿ ವಿಭಾಗಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವ ಸರಾಸರಿ ಸಮಯವನ್ನು ಸಾಧಾರಣ 90% ರಷ್ಟು ಕಡಿಮೆ ಮಾಡಿದ್ದೇವೆ. ಈ ಇಳಿಕೆಯು ನಮ್ಮ ವಿಮರ್ಶೆ ಸಾಮರ್ಥ್ಯವನ್ನು ವಿಸ್ತರಿಸುವ ಹಾಗೂ ಹಾನಿಯ ತೀವ್ರತೆಯ ಆಧಾರದಲ್ಲಿ ವರದಿಗಳ ನಮ್ಮ ಆದ್ಯತೆಗೊಳಿಸುವಿಕೆಯನ್ನು ಸುಧಾರಿಸುವ ಸಂಘಟಿತ ಪ್ರಯತ್ನದ ಫಲವಾಗಿದೆ. ಈ ವರದಿ ಅವಧಿಯಲ್ಲಿ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಬಳಕೆದಾರರ ಖಾತೆಗಳನ್ನು ತಡೆಹಿಡಿಯುವ ಮತ್ತು ಹೆಸರುಗಳನ್ನು ಪ್ರದರ್ಶಿಸುವ ನಮ್ಮ ಪ್ರಯತ್ನಗಳ ವಿಸ್ತರಣೆ, Snapchat ನಲ್ಲಿ ಕಮ್ಯೂನಿಟಿಗಳಿಗೆ ಹೆಚ್ಚು ವರದಿ ಮಾಡುವಿಕೆ ಮತ್ತು ರಕ್ಷಣಾ ಕ್ರಮಗಳನ್ನು ಪರಿಚಯಿಸುವಿಕೆ ಮತ್ತು ವರದಿ ಮಾಡುವಿಕೆಯ ಹೆಚ್ಚುವರಿ ಮಾಧ್ಯಮಗಳಾದ ವಾಯ್ಸ್‌ ನೋಟ್‌ನಂಥ ಆ್ಯಪ್‌ನಲ್ಲಿ ನಮಗೆ ನೇರವಾಗಿ ವರದಿ ಮಾಡುವ ಆಯ್ಕೆಗಳನ್ನು ಪರಿಚಯಿಸುವುದೂ ಸೇರಿದಂತೆ, ಇಲ್ಲಿ ವರದಿ ಮಾಡಲಾದ ಡೇಟಾದ ಮೇಲೆ ಪ್ರಭಾವ ಬೀರಿತು ಎಂಬಂಥ ಹಲವಾರು ಉದ್ದೇಶಿತ ಬದಲಾವಣೆಗಳನ್ನು ನಮ್ಮ ಸುರಕ್ಷತಾ ಪ್ರಯತ್ನಗಳಲ್ಲಿ ಮಾಡಿದ್ದೇವೆ.

ಹಿಂದಿನ ವರದಿ ಅವಧಿಗೆ ಹೋಲಿಸಿದಾಗ, ಈ ಬದಲಾವಣೆಗಳು ಹಾಗೂ ಇತರ ಸುರಕ್ಷತಾ ಪ್ರಯತ್ನಗಳು ಮತ್ತು ಬಾಹ್ಯ ಶಕ್ತಿಗಳು ನಿರ್ದಿಷ್ಟವಾಗಿ ಕೆಲವು ನೀತಿ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿವೆ. ಈ ನೀತಿ ವಿಭಾಗಗಳಲ್ಲಿ ಇವು ಸೇರಿವೆ: ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆ (CSEA) ಶಂಕೆ, ಹಾನಿಕಾರಕ ಸುಳ್ಳು ಮಾಹಿತಿ ಮತ್ತು ಸ್ಪ್ಯಾಮ್‌ಗೆ ಸಂಬಂಧಿಸಿದ ವಿಷಯಗಳು. ನಿರ್ದಿಷ್ಟವಾಗಿ:

  • CSEA: 2024 ರ ದ್ವಿತೀಯಾರ್ಧದಲ್ಲಿ, CSEA-ಸಂಬಂಧಿತ ವರದಿಗಳಲ್ಲಿ 12% ಇಳಿಕೆಯನ್ನು ನಾವು ಗಮನಿಸಿದ್ದೇವೆ, ಮತ್ತು ವರದಿಯಾದ CSEA ಪ್ರಕರಣಗಳಿಗೆ ಪ್ರತಿಕ್ರಿಯಿಸಲು ನಮ್ಮ ಸರಾಸರಿ ಪ್ರಕ್ರಿಯೆ ಪೂರ್ಣಗೊಳಿಸುವ ಸಮಯವನ್ನು 99% ರಷ್ಟು ಕಡಿಮೆ ಮಾಡಿದ್ದೇವೆ. ನಮ್ಮ ಪೂರ್ವಭಾವಿ ಪತ್ತೆ ಪ್ರಯತ್ನಗಳಲ್ಲಿ ನಡೆದ ನಿರಂತರ ಪ್ರಗತಿಗಳಿಂದ ಈ ಪ್ರವೃತ್ತಿಗಳು ಹೆಚ್ಚಾದವು, ಇದು CSEA ಕಂಟೆಂಟ್‌ ಅನ್ನು ನಮಗೆ ವರದಿ ಮಾಡುವುದಕ್ಕೆ ಮುಂಚಿತವಾಗಿ ಅದನ್ನು ತೆಗೆದುಹಾಕಲು ನಮಗೆ ಅನುವು ಮಾಡಿಕೊಟ್ಟಿತು ಹಾಗೂ CSEA ವರದಿಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪರಿಶೀಲಿಸಲು ಮತ್ತು ಅದರ ಮೇಲೆ ಕ್ರಮ ಕೈಗೊಳ್ಳಲು ನಮ್ಮ ಪ್ರಕ್ರಿಯೆಗಳನ್ನು ಸುಧಾರಿಸಿದವು. ಈ ಸುಧಾರಣೆಗಳ ಜೊತೆಗೆ, ನಮ್ಮ CSEA ಪ್ರಕ್ರಿಯೆ ಪೂರ್ಣಗೊಳಿಸುವ ಸಮಯವು ಇತರ ನೀತಿ ಕ್ಷೇತ್ರಗಳಿಗಿಂತ ಹೆಚ್ಚಾಗಿದೆ ಏಕೆಂದರೆ, ಈ ಕಂಟೆಂಟ್‌ ವಿಶೇಷ ತರಬೇತಿ ಪಡೆದ ಏಜೆಂಟರ ಆಯ್ದ ತಂಡದೊಂದಿಗೆ ಕಂಟೆಂಟ್‌ ಅನ್ನು ಎರಡೆರಡು ಸಲ ವಿಮರ್ಶೆಗೆ ಒಳಪಡಿಸುವ ವಿಶೇಷ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ.

  • ಹಾನಿಕಾರಕ ಸುಳ್ಳು ಮಾಹಿತಿ: ನವೆಂಬರ್ 2024 ರ US ಚುನಾವಣೆ ಸೇರಿದಂತೆ, ಪ್ರಾಥಮಿಕವಾಗಿ ರಾಜಕೀಯ ಘಟನೆಗಳಿಂದ ಪ್ರೇರೇಪಿಸಲ್ಪಟ್ಟ ಹಾನಿಕಾರಕ ಸುಳ್ಳು ಮಾಹಿತಿಗೆ ಸಂಬಂಧಿಸಿದ ವರದಿ ಮಾಡುವಿಕೆ ಪ್ರಮಾಣದಲ್ಲಿ 26% ಹೆಚ್ಚಳವನ್ನು ನಾವು ಗಮನಿಸಿದ್ದೇವೆ.

  • ಸ್ಪ್ಯಾಮ್: ಈ ವರದಿಯ ಅವಧಿಯಲ್ಲಿ, ಶಂಕಿತ ಸ್ಪ್ಯಾಮ್‌ನ ವರದಿಗಳಿಗೆ ಪ್ರತಿಕ್ರಿಯೆಯಾಗಿ ಒಟ್ಟಾರೆ ಕ್ರಮ ತೆಗೆದುಕೊಳ್ಳುವಿಕೆಯಲ್ಲಿ ~50% ಇಳಿಕೆ ಮತ್ತು ವಿಶಿಷ್ಟ ಖಾತೆಗಳ ತಡೆಗಟ್ಟುವಿಕೆಯಲ್ಲಿ ~46% ಇಳಿಕೆಯನ್ನು ನಾವು ಕಂಡಿದ್ದೇವೆ, ಇದು ನಮ್ಮ ಪೂರ್ವಭಾವಿ ಪತ್ತೆ ಮತ್ತು ಕ್ರಮ ಜರುಗಿಸುವ ಸಾಧನಗಳಲ್ಲಿನ ಸುಧಾರಣೆಗಳನ್ನು ಬಿಂಬಿಸುತ್ತದೆ. ಇದು ಖಾತೆ ಸಿಗ್ನಲ್‌ಗಳ ಮೂಲಕ ಸ್ಪ್ಯಾಮ್ ಅನ್ನು ಟಾರ್ಗೆಟ್‌ ಮಾಡುವ, ಮತ್ತು ವೇದಿಕೆಯಲ್ಲಿ ಸ್ಪ್ಯಾಮ್ ಮಾಡುವವರ ಚಟುವಟಿಕೆಯನ್ನು ಶೀಘ್ರದಲ್ಲಿ ತೆಗೆದುಹಾಕುವ ನಮ್ಮ ಪ್ರಯತ್ನಗಳ ಮುಂದುವರಿಕೆಯಾಗಿದೆ. ಕಳೆದ ವರದಿಯ ಅವಧಿಯಲ್ಲಿಯೇ ಈ ಪ್ರಯತ್ನಗಳು ಪ್ರಗತಿಯಲ್ಲಿದ್ದವು, ಈ ಅವಧಿಯಲ್ಲಿ ಸ್ಪ್ಯಾಮ್‌ಗಾಗಿ ಒಟ್ಟು ಕ್ರಮ ಜರುಗಿಸುವಿಕೆಗಳು ಮತ್ತು ಒಟ್ಟು ವಿಶಿಷ್ಟ ಖಾತೆಗಳನ್ನು ತಡೆಗಟ್ಟುವಿಕೆ ಕ್ರಮವಾಗಿ ~65% ಮತ್ತು ~60% ರಷ್ಟು ಇಳಿಕೆಯಾಗಿವೆ.

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ಪತ್ತೆಮಾಡಲು ಮತ್ತು ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಪೂರ್ವಭಾವಿ ಪ್ರಯತ್ನಗಳು

ನಮ್ಮ ಕಮ್ಯುನಿಟಿ ಮಾರ್ಗಸೂಚಿ ಉಲ್ಲಂಘನೆಗಳ ಪೂರ್ವಭಾವಿ ಪತ್ತೆ ಮತ್ತು ಕ್ರಮ ಜಾರಿಗೊಳಿಸುವಿಕೆ


ನಾವು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ಪೂರ್ವಭಾವಿಯಾಗಿ ಪತ್ತೆ ಮಾಡಲು ಮತ್ತು ಕೆಲವು ಪ್ರಕರಣಗಳಲ್ಲಿ, ಕಾನೂನು ಜಾರಿಗೊಳಿಸಲು ಸ್ವಯಂಚಾಲಿತ ಸಾಧನಗಳನ್ನು ಬಳಸುತ್ತೇವೆ. ಈ ಟೂಲ್‌ಗಳು ಹ್ಯಾಶ್-ಮ್ಯಾಚಿಂಗ್‌ ತಂತ್ರಜ್ಞಾನ (PhotoDNA ಮತ್ತು Google ನ ಮಕ್ಕಳ ಲೈಂಗಿಕ ದೌರ್ಜನ್ಯ ಚಿತ್ರಣ (CSAI) ಹೊಂದಿಕೆ ಸೇರಿದಂತೆ), Google ನ ವಿಷಯ ಸುರಕ್ಷತಾ API ಗಳು ಮತ್ತು ಕೆಲವೊಮ್ಮೆ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯನ್ನು ಬಳಸಿಕೊಂಡು ನಿಂದನೆ ಪಠ್ಯ ಮತ್ತು ಮಾಧ್ಯಮವನ್ನು ಪತ್ತೆ ಹಚ್ಚಲು ವಿನ್ಯಾಸಗೊಳಿಸಲಾದ ಇತರ ಕಸ್ಟಮ್ ತಂತ್ರಜ್ಞಾನಗಳನ್ನು ಒಳಗೊಂಡಿವೆ. 

2024 ರ ದ್ವಿತೀಯಾರ್ಧದಲ್ಲಿ, ಸ್ವಯಂಚಾಲಿತ ಪತ್ತೆ ಸಾಧನಗಳನ್ನು ಬಳಸಿಕೊಂಡು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ಪೂರ್ವಭಾವಿಯಾಗಿ ಪತ್ತೆ ಮಾಡಿದ ನಂತರ ನಾವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡಿದ್ದೇವೆ:

ಒಟ್ಟು ಕ್ರಮ ಜಾರಿಗೊಳಿಸುವಿಕೆಗಳು

ಕ್ರಮ ಜಾರಿಗೊಳಿಸಲಾದ ಒಟ್ಟು ವಿಶಿಷ್ಟ ಖಾತೆಗಳು

36,85,602

18,45,125

ನೀತಿಗಾಗಿ ಕಾರಣ

ಒಟ್ಟು ಜಾರಿಗೊಳಿಸುವಿಕೆಗಳು

ಕ್ರಮಕ್ಕೆ ಒಳಗಾದ
ಒಟ್ಟು ವಿಶಿಷ್ಟ ಖಾತೆಗಳು

ಪತ್ತೆಹಚ್ಚುವಿಕೆಯಿಂದ ಅಂತಿಮ ಕ್ರಿಯೆಯವರೆಗಿನ ಮಧ್ಯಾಂಕ ಪೂರ್ಣಗೊಳಿಸುವಿಕೆ ಸಮಯ (ನಿಮಿಷಗಳು)

ಲೈಂಗಿಕ ವಿಷಯ

18,18,287

8,28,590

<1

ಮಕ್ಕಳ ಲೈಂಗಿಕ ಶೋಷಣೆ

4,91,970

1,88,877

1

ಕಿರುಕುಳ ಮತ್ತು ಬೆದರಿಕೆ

14,942

11,234

8

ಬೆದರಿಕೆಗಳು ಮತ್ತು ಹಿಂಸೆ

43,625

29,599

9

ಸ್ವಯಂ-ಹಾನಿ ಮತ್ತು ಆತ್ಮಹತ್ಯೆ

761

624

9

ಸುಳ್ಳು ಮಾಹಿತಿ

85

81

10

ಸೋಗು ಹಾಕುವಿಕೆ

8

6

19

ಸ್ಪ್ಯಾಮ್

1,77,150

1,10,551

<1

ಮಾದಕದ್ರವ್ಯಗಳು

8,69,178

5,90,658

5

ಶಸ್ತ್ರಾಸ್ತ್ರಗಳು

2,05,387

1,33,079

<1

ಇತರ ನಿಯಂತ್ರಿತ ಸರಕುಗಳು

48,280

37,028

9

ದ್ವೇಷ ಭಾಷಣ

10,344

8,683

10

ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ

5,585

2,951

21

Combatting Child Sexual Exploitation & Abuse

ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ವಿರುದ್ಧ ಹೋರಾಡುವುದು

ನಮ್ಮ ಸಮುದಾಯದ ಯಾವುದೇ ಸದಸ್ಯರ, ವಿಶೇಷವಾಗಿ ಅಪ್ರಾಪ್ತವಯಸ್ಕರ ಲೈಂಗಿಕ ಶೋಷಣೆಯು ಕಾನೂನುಬಾಹಿರವಾಗಿದೆ, ಅಸಹ್ಯಕರವಾಗಿದೆ ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಿಂದ ನಿಷೇಧಿಸಲ್ಪಟ್ಟಿದೆ. ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯವನ್ನು (CSEA) ನಮ್ಮ ವೇದಿಕೆಯಲ್ಲಿ ತಡೆಗಟ್ಟುವುದು, ಪತ್ತೆ ಹಚ್ಚುವುದು ಮತ್ತು ನಿರ್ಮೂಲನೆ ಮಾಡುವುದು ಸ್ನಾಪ್‌ಗೆ ಟಾಪ್‌ ಆದ್ಯತೆಯಾಗಿದೆ, ಹಾಗೂ ಇವುಗಳು ಮತ್ತು ಇತರ ರೀತಿಯ ಅಪರಾಧಗಳ ವಿರುದ್ಧ ಹೋರಾಡಲು ನಾವು ನಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಬಲಗೊಳಿಸುತ್ತೇವೆ.

CSEA-ಸಂಬಂಧಿತ ವಿಷಯವನ್ನು ಗುರುತಿಸುವುದಕ್ಕೆ ಸಹಾಯ ಮಾಡಲು ನಾವು ಸಕ್ರಿಯ ತಂತ್ರಜ್ಞಾನ ಪತ್ತೆ ಸಾಧನಗಳನ್ನು ಬಳಸುತ್ತೇವೆ. ಈ ಟೂಲ್‌ಗಳು ಹ್ಯಾಶ್-ಮ್ಯಾಚಿಂಗ್‌ ಟೂಲ್‌ಗಳು ( PhotoDNA ಮತ್ತು Googleನ CSEA ಮ್ಯಾಚ್‌ ಸೇರಿದಂತೆ, CSEAನಲ್ಲಿ ಉಲ್ಲೇಖಿಸಿದ ಕಾನೂನು ಬಾಹಿರ ಚಿತ್ರಗಳು ಮತ್ತು ವಿಡಿಯೊಗಳನ್ನು ಗುರುತಿಸುವುದಕ್ಕಾಗಿ) ಮತ್ತು Google ವಿಷಯ ಸುರಕ್ಷತಾ API ಗಳನ್ನು (ಕಾಲ್ಪನಿಕ,"ಹಿಂದೆಂದೂ ಹ್ಯಾಶ್‌ ಮಾಡದ" ಕಾನೂನು ಬಾಹಿರ ಚಿತ್ರಗಳನ್ನು ಗುರುತಿಸುವುದಕ್ಕಾಗಿ) ಒಳಗೊಂಡಿವೆ. ಇದರೊಂದಿಗೆ, ಕೆಲವು ಪ್ರಕರಣಗಳಲ್ಲಿ, ನಾವು ಇತರ ಶಂಕಿತ CSEAಯ ಚಟುವಟಿಕೆಯ ವಿರುದ್ಧ ಕ್ರಮ ಜಾರಿಗೊಳಿಸಲು ನಡವಳಿಕೆಯ ಸಂಕೇತಗಳನ್ನು ಬಳಸುತ್ತೇವೆ. CSEA-ಸಂಬಂಧಿತ ಕಂಟೆಂಟ್ ಅನ್ನು ನಾವು ಕಾನೂನು ಅಗತ್ಯಪಡಿಸಿರುವಂತೆ ಕಾಣೆಯಾದ ಮತ್ತು ಶೋಷಣೆಗೊಳಗಾದ ಮಕ್ಕಳಿಗಾಗಿನ U.S. ರಾಷ್ಟ್ರೀಯ ಕೇಂದ್ರಕ್ಕೆ (NCMEC) ವರದಿ ಮಾಡುತ್ತೇವೆ. ನಂತರ ಅಗತ್ಯಗಳಿಗೆ ಅನುಗುಣವಾಗಿ ರಾಷ್ಟ್ರೀಯ ಕೇಂದ್ರವು, ದೇಶೀಯ ಅಥವಾ ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ನಡೆಸುತ್ತದೆ.

2024 ರ ದ್ವಿತೀಯಾರ್ಧದಲ್ಲಿ, Snapchat ನಲ್ಲಿ CSEA ಪತ್ತೆಯಾದಾಗ ನಾವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡಿದ್ದೇವೆ (ಒಂದೋ ಪೂರ್ವಭಾವಿಯಾಗಿ ಅಥವಾ ಒಂದು ವರದಿಯನ್ನು ಸ್ವೀಕರಿಸಿದಾಗ):


ಕ್ರಮಕ್ಕೆ ಒಳಗಾದ ಒಟ್ಟು ಕಂಟೆಂಟ್

ನಿಷ್ಕ್ರಿಯಗೊಳಿಸಲಾದ ಒಟ್ಟು ಖಾತೆಗಳು

NCMEC ಗೆ ಒಟ್ಟು ಸಲ್ಲಿಕೆಗಳು*

12,28,929

2,42,306

4,17,842

*NCMEC ಗೆ ಪ್ರತಿ ಸಲ್ಲಿಕೆಯು ಬಹು ವಿಷಯದ ತುಣುಕುಗಳನ್ನು ಒಳಗೊಂಡಿರಬಹುದು ಎಂಬುದನ್ನು ಗಮನಿಸಿ. NCMEC ಗೆ ಸಲ್ಲಿಸಿದ ಮೀಡಿಯಾದ ಒಟ್ಟು ಪ್ರತ್ಯೇಕ ತುಣುಕುಗಳು ನಮ್ಮ ಜಾರಿಗೊಳಿಸಿದ ಒಟ್ಟು ವಿಷಯಕ್ಕೆ ಸಮನಾಗಿರುತ್ತದೆ.

ಅಗತ್ಯವಿರುವ Snapchatter ಗಳಿಗೆ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಒದಗಿಸಲು ನಮ್ಮ ಪ್ರಯತ್ನಗಳು

ಅಗತ್ಯವಿರುವ Snapchatter ಗಳಿಗೆ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಒದಗಿಸುವ ಮೂಲಕ ಕಠಿಣ ಸಂದರ್ಭದಲ್ಲಿ ಪರಸ್ಪರ ಸಹಾಯ ಮಾಡಲು Snapchat ಸ್ನೇಹಿತರಿಗೆ ಅಧಿಕಾರ ನೀಡುತ್ತದೆ. 

ಬಳಕೆದಾರರು ಮಾನಸಿಕ ಆರೋಗ್ಯ, ಆತಂಕ, ಖಿನ್ನತೆ, ಒತ್ತಡ, ಆತ್ಮಹತ್ಯೆಯ ಆಲೋಚನೆಗಳು, ದುಃಖ ಮತ್ತು ಬೆದರಿಕೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಹುಡುಕಿದಾಗ, ನಮ್ಮ Here For You ಹುಡುಕಾಟ ಸಾಧನವು ತಜ್ಞರಿಂದ ಸಂಪನ್ಮೂಲಗಳನ್ನು ಒದಗಿಸುತ್ತದೆ. ಸಂಕಟದಲ್ಲಿರುವವರಿಗೆ ಬೆಂಬಲ ನೀಡುವ ಪ್ರಯತ್ನವಾಗಿ, ಫೈನಾನ್ಶಿಯಲ್ ಸೆಕ್ಸ್‌ಟಾರ್ಷನ್ ಮತ್ತು ಇತರ ಲೈಂಗಿಕ ಅಪಾಯಗಳು ಮತ್ತು ಹಾನಿಗಳಿಗೆ ಮೀಸಲಾದ ಒಂದು ಪುಟವನ್ನು ಕೂಡ ನಾವು ಅಭಿವೃದ್ಧಿಪಡಿಸಿದ್ದೇವೆ. ನಮ್ಮ ಸುರಕ್ಷತಾ ಸಂಪನ್ಮೂಲಗಳ ಜಾಗತಿಕ ಪಟ್ಟಿಯು ಎಲ್ಲ Snapchatter ಗಳಿಗೆ, ನಮ್ಮ ಗೌಪ್ಯತೆ, ಸುರಕ್ಷತೆ ಮತ್ತು ನೀತಿ ಹಬ್‌ನಲ್ಲಿ ಸಾರ್ವಜನಿಕವಾಗಿ ಲಭ್ಯವಿದೆ. 
ಓರ್ವ Snapchatter ಸಂಕಟದಲ್ಲಿರುವ ಬಗ್ಗೆ ನಮ್ಮ ಸುರಕ್ಷತಾ ತಂಡಗಳು ತಿಳಿದಾಗ, ಸ್ವಯಂ-ಹಾನಿಯ ತಡೆಗಟ್ಟುವಿಕೆ ಮತ್ತು ಬೆಂಬಲ ಸಂಪನ್ಮೂಲಗಳನ್ನು ಒದಗಿಸಲು ಮತ್ತು ಅಗತ್ಯಗಳಿಗೆ ಅನುಗುಣವಾಗಿ ತುರ್ತು ಸೇವೆಗಳಿಗೆ ಸೂಚನೆ ನೀಡಲು ಸಜ್ಜಾಗಿರುತ್ತಾರೆ. ನಾವು ಹಂಚಿಕೊಳ್ಳುವ ಸಂಪನ್ಮೂಲಗಳು ನಮ್ಮ ಸುರಕ್ಷತಾ ಸಂಪನ್ಮೂಲಗಳ ಜಾಗತಿಕ ಪಟ್ಟಿಯಲ್ಲಿ ಲಭ್ಯ ಇವೆ ಮತ್ತು ಇವು ಎಲ್ಲ Snapchatter ಗಳಿಗೆ ಸಾರ್ವಜನಿಕವಾಗಿ ಲಭ್ಯ ಇವೆ.

ಆತ್ಮಹತ್ಯೆ ಸಂಪನ್ಮೂಲಗಳನ್ನು ಒಟ್ಟು ಎಷ್ಟು ಬಾರಿ ಹಂಚಿಕೊಳ್ಳಲಾಗಿದೆ

64,094

ಮೇಲ್ಮನವಿಗಳು

2024 ರ ದ್ವಿತೀಯಾರ್ಧದಲ್ಲಿ ಬಳಕೆದಾರರ ಖಾತೆಯನ್ನು ಲಾಕ್ ಮಾಡುವ ನಮ್ಮ ನಿರ್ಧಾರವನ್ನು ಪರಾಮರ್ಶಿಸುವಂತೆ ವಿನಂತಿಸಿ ನಾವು ಸ್ವೀಕರಿಸಿದ ಮೇಲ್ಮನವಿಗಳ ಕುರಿತು ಮಾಹಿತಿಯನ್ನು ನಾವು ಕೆಳಗೆ ಒದಗಿಸುತ್ತೇವೆ:

ನೀತಿಗಾಗಿ ಕಾರಣ

ಒಟ್ಟು ಮೇಲ್ಮನವಿಗಳು

ಒಟ್ಟು ಮರುಸ್ಥಾಪನೆಗಳು

ಎತ್ತಿಹಿಡಿದ ಒಟ್ಟು ನಿರ್ಧಾರಗಳು

ಮೇಲ್ಮನವಿಗಳನ್ನು ಪ್ರಕ್ರಿಯೆಗೊಳಿಸಲು ಸರಾಸರಿ ಟರ್ನ್‌ಅರೌಂಡ್ ಸಮಯ (ದಿನಗಳು)

ಒಟ್ಟು

4,93,782

35,243

4,58,539

5

ಲೈಂಗಿಕ ವಿಷಯ

1,62,363

6,257

1,56,106

4

ಮಕ್ಕಳ ಲೈಂಗಿಕ ಶೋಷಣೆ

1,02,585

15,318

87,267

6

ಕಿರುಕುಳ ಮತ್ತು ಬೆದರಿಕೆ

53,200

442

52,758

7

ಬೆದರಿಕೆಗಳು ಮತ್ತು ಹಿಂಸೆ

4,238

83

4,155

5

ಸ್ವಯಂ-ಹಾನಿ ಮತ್ತು ಆತ್ಮಹತ್ಯೆ

31

1

30

5

ಸುಳ್ಳು ಮಾಹಿತಿ

3

0

3

<1

ಸೋಗು ಹಾಕುವಿಕೆ

847

33

814

7

ಸ್ಪ್ಯಾಮ್

19,533

5,090

14,443

9

ಮಾದಕದ್ರವ್ಯಗಳು

1,33,478

7,598

1,25,880

4

ಶಸ್ತ್ರಾಸ್ತ್ರಗಳು

4,678

136

4,542

6

ಇತರ ನಿಯಂತ್ರಿತ ಸರಕುಗಳು

9,153

168

8,985

6

ದ್ವೇಷ ಭಾಷಣ

3,541

114

3,427

7

ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ

132

3

129

9

ಪ್ರಾದೇಶಿಕ ಮತ್ತು ದೇಶದ ಅವಲೋಕನ

ಈ ವಿಭಾಗವು ಭೌಗೋಳಿಕ ಪ್ರದೇಶಗಳ ಮಾದರಿಯಲ್ಲಿ ಪೂರ್ವಭಾವಿಯಾಗಿ ಮತ್ತು ಆ್ಯಪ್‌ನಲ್ಲಿನ ಉಲ್ಲಂಘನೆಗಳ ವರದಿಗಳಿಗೆ ಪ್ರತಿಯಾಗಿ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ನಮ್ಮ ಸುರಕ್ಷತಾ ತಂಡಗಳು ತೆಗೆದುಕೊಂಡ ಕ್ರಮಗಳ ಒಂದು ಅವಲೋಕನವನ್ನು ಒದಗಿಸುತ್ತದೆ. ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು Snapchat ನಲ್ಲಿರುವ ಎಲ್ಲ ಕಂಟೆಂಟ್‌ಗೆ—ಮತ್ತು ಜಗತ್ತಿನಾದ್ಯಂತದ ಎಲ್ಲ Snapchatter ಗಳಿಗೆ—ಸ್ಥಳವನ್ನು ಲೆಕ್ಕಿಸದೆ ಅನ್ವಯಿಸುತ್ತವೆ.

ಎಲ್ಲ EU ಸದಸ್ಯ ರಾಷ್ಟ್ರಗಳು ಸೇರಿದಂತೆ, ಪ್ರತ್ಯೇಕ ದೇಶಗಳಿಗಾಗಿ ಮಾಹಿತಿಯು ಲಗತ್ತಿಸಿರುವ CSV ಫೈಲ್ ಮೂಲಕ ಡೌನ್‌ಲೋಡ್‌ಗೆ ಲಭ್ಯವಿದೆ.


ನಮ್ಮ ಸಮುದಾಯದ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ನಮ್ಮ ಸುರಕ್ಷತಾ ತಂಡಗಳು ಕೈಗೊಂಡ ಕ್ರಮಗಳ ಅವಲೋಕನ 

ಪ್ರದೇಶ

ಒಟ್ಟು ಕ್ರಮ ಜಾರಿಗೊಳಿಸುವಿಕೆಗಳು

ಕ್ರಮ ಜಾರಿಗೊಳಿಸಲಾದ ಒಟ್ಟು ವಿಶಿಷ್ಟ ಖಾತೆಗಳು

ಉತ್ತರ ಅಮೆರಿಕಾ

38,28,389

21,17,048

ಯುರೋಪ್

28,07,070

17,35,054

ಪ್ರಪಂಚದ ಉಳಿದ ಪ್ರದೇಶಗಳು

33,96,651

18,46,110

ಒಟ್ಟು

1,00,32,110

56,98,212

ನಮ್ಮ ಸುರಕ್ಷತಾ ತಂಡಗಳಿಗೆ ವರದಿ ಮಾಡಲಾದ ಉಲ್ಲಂಘನೆಗಳಿಗೆ ಕಮ್ಯುನಿಟಿ ಮಾರ್ಗಸೂಚಿಗಳು

ಪ್ರದೇಶ

ವಿಷಯ ಮತ್ತು ಖಾತೆ ವರದಿಗಳು

ಒಟ್ಟು ಕ್ರಮ ಜಾರಿಗೊಳಿಸುವಿಕೆಗಳು

ಕ್ರಮ ಜಾರಿಗೊಳಿಸಲಾದ ಒಟ್ಟು ವಿಶಿಷ್ಟ ಖಾತೆಗಳು

ಉತ್ತರ ಅಮೆರಿಕಾ

59,16,815

22,29,465

13,91,304

ಯುರೋಪ್

57,81,317

20,85,109

13,78,883

ಪ್ರಪಂಚದ ಉಳಿದ ಪ್ರದೇಶಗಳು

76,81,716

20,31,934

13,19,934

ಒಟ್ಟು

1,93,79,848

63,46,508

40,90,121

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಪೂರ್ವಭಾವಿ ಪತ್ತೆ ಮತ್ತು ಕ್ರಮ ಜಾರಿಗೊಳಿಸುವಿಕೆ

ಒಟ್ಟು ಕ್ರಮ ಜಾರಿಗೊಳಿಸುವಿಕೆಗಳು

ಕ್ರಮ ಜಾರಿಗೊಳಿಸಲಾದ ಒಟ್ಟು ವಿಶಿಷ್ಟ ಖಾತೆಗಳು

1,598,924

8,37,012

7,21,961

4,17,218

13,64,717

6,13,969

36,85,602

18,68,199

ಜಾಹೀರಾತುಗಳ ಮಾಡರೇಷನ್

ಎಲ್ಲ ಜಾಹೀರಾತುಗಳು ನಮ್ಮ ಜಾಹೀರಾತು ನೀತಿಗಳನ್ನು ಪೂರ್ಣವಾಗಿ ಅನುಸರಣೆ ಮಾಡುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು Snap ಬದ್ಧವಾಗಿದೆ. ನಾವು ಎಲ್ಲಾ Snapchatter ಗಳಿಗೆ ಸುರಕ್ಷಿತ ಅನುಭವವನ್ನು ಸೃಷ್ಟಿಸುವಿಕೆಯನ್ನು ಪ್ರಚಾರ ಮಾಡಲು ಜವಾಬ್ದಾರಿಯುತ ವಿಧಾನವನ್ನು ನಂಬುತ್ತೇವೆ. ಎಲ್ಲ ಜಾಹೀರಾತುಗಳು ನಮ್ಮ ವಿಮರ್ಶೆ ಮತ್ತು ಅನುಮೋದನೆಗೆ ಒಳಪಟ್ಟಿರುತ್ತವೆ. ಇದರ ಜೊತೆಗೆ, ನಾವು ಗಂಭೀರವಾಗಿ ಪರಿಗಣಿಸುವ ಬಳಕೆದಾರರ ಫೀಡ್‌ಬ್ಯಾಕ್‌ಗೆ ಪ್ರತಿಕ್ರಿಯೆಯ ರೂಪದಲ್ಲಿ ಸೇರಿದಂತೆ, ಜಾಹೀರಾತುಗಳನ್ನು ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. 


Snapchat ನಲ್ಲಿ ಪ್ರಕಟಿಸಿದ ಬಳಿಕ ನಮಗೆ ವರದಿ ಮಾಡಲಾದ ಪಾವತಿಸಿದ ಜಾಹೀರಾತುಗಳಿಗಾಗಿ ನಮ್ಮ ಮಾಡರೇಷನ್‌ಗೆ ಒಳನೋಟಗಳನ್ನು ನಾವು ಕೆಳಗೆ ಸೇರಿಸಿದ್ದೇವೆ. ಮೋಸಗೊಳಿಸುವ ಕಂಟೆಂಟ್, ವಯಸ್ಕರ ಕಂಟೆಂಟ್, ಹಿಂಸಾತ್ಮಕ ಅಥವಾ ನೆಮ್ಮದಿಗೆಡಿಸುವ ಕಂಟೆಂಟ್, ದ್ವೇಷ ಭಾಷಣ ಮತ್ತು ಬೌದ್ಧಿಕ ಆಸ್ತಿಯ ಉಲ್ಲಂಘನೆಯ ಕಂಟೆಂಟ್ ಸೇರಿದಂತೆ Snap ನ ಜಾಹೀರಾತು ನೀತಿಗಳಲ್ಲಿ ವಿವರಿಸಲಾಗಿರುವ ವಿವಿಧ ಕಾರಣಗಳಿಗಾಗಿ Snapchat ನಲ್ಲಿನ ಜಾಹೀರಾತುಗಳನ್ನು ತೆಗೆದುಹಾಕಬಹುದಾಗಿದೆ ಎಂಬುದನ್ನು ಗಮನಿಸಿ. ಇದರೊಂದಿಗೆ, ನೀವು ಈಗ Snap‌ನ ಟ್ರಾನ್ಸ್‌ಪರೆನ್ಸಿ ಹಬ್‌ನಲ್ಲಿ Snapchat ನ ಜಾಹೀರಾತುಗಳ ಗ್ಯಾಲರಿಯನ್ನು ಕಾಣಬಹುದು, ಇದನ್ನು ನ್ಯಾವಿಗೇಶನ್ ಬಾರ್ ಮೂಲಕ ನೇರವಾಗಿ ಪ್ರವೇಶಿಸಬಹುದು.

ವರದಿ ಮಾಡಲಾದ ಒಟ್ಟು ಜಾಹೀರಾತುಗಳು

ತೆಗೆದುಹಾಕಲಾದ ಒಟ್ಟು ಜಾಹೀರಾತುಗಳು

43,098

17,833