ನವೆಂಬರ್ 29, 2022
ನವೆಂಬರ್ 29, 2022
Snap ನ ಸುರಕ್ಷತಾ ಪ್ರಯತ್ನಗಳಲ್ಲಿ ಮತ್ತು ನಮ್ಮ ವೇದಿಕೆಯಲ್ಲಿ ವರದಿ ಮಾಡಿದ ಸ್ವರೂಪ ಮತ್ತು ಸಂಪುಟದಲ್ಲಿನ ಒಳನೋಟವನ್ನು ಒದಗಿಸಲು, ನಾವು ವರ್ಷಕ್ಕೆ ಎರಡು ಬಾರಿ ಪಾರದರ್ಶಕತೆಯ ವರದಿಗಳನ್ನು ಪ್ರಕಟಿಸುತ್ತೇವೆ. ನಮ್ಮ ಕಂಟೆಂಟ್ ಮಾಡರೇಷನ್ ಮತ್ತು ಕಾನೂನು ಜಾರಿ ಅಭ್ಯಾಸಗಳ ಕುರಿತು ಆಳವಾಗಿ ಕಾಳಜಿ ವಹಿಸುವ ಹಲವು ಪಾಲುದಾರರಿಗೆ ಮತ್ತು ನಮ್ಮ ಸಮುದಾಯದ ಯೋಗಕ್ಷೇಮಕ್ಕಾಗಿ, ಈ ವರದಿಗಳನ್ನು ಇನ್ನಷ್ಟು ಸಮಗ್ರ ಮತ್ತು ಮಾಹಿತಿಯುಕ್ತವಾಗಿಸುವುದನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ.
ಈ ವರದಿಯು 2022 (ಜನವರಿ 1 - ಜೂನ್ 30) ರ ಪ್ರಥಮಾರ್ಧವನ್ನು ಒಳಗೊಂಡಿದೆ. ನಮ್ಮ ಹಿಂದಿನ ವರದಿಗಳಂತೆ, ನಾವು ಸ್ವೀಕರಿಸಿದ ಮತ್ತು ನಿರ್ದಿಷ್ಟ ವರ್ಗಗಳ ಉಲ್ಲಂಘನೆಗಳ ವಿರುದ್ಧ ಜಾರಿಗೊಳಿಸಲಾದ ಅಪ್ಲಿಕೇಶನ್‍ನಲ್ಲಿನ ವಿಷಯ ಮತ್ತು ಖಾತೆ ಮಟ್ಟದ ವರದಿಗಳ ಜಾಗತಿಕ ಸಂಖ್ಯೆಯ ಡೇಟಾವನ್ನು ನಾವು ಹಂಚಿಕೊಳ್ಳುತ್ತೇವೆ; ಕಾನೂನು ಜಾರಿ ಮತ್ತು ಸರ್ಕಾರಗಳ ವಿನಂತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಿದ್ದೇವೆ; ಮತ್ತು ನಮ್ಮ ಜಾರಿ ಕ್ರಮಗಳನ್ನು ದೇಶದಿಂದ ವಿಂಗಡಿಸಲಾಗಿದೆ. ಇದು Snapchat ಕಂಟೆಂಟ್‌ನ ಉಲ್ಲಂಘನಾತ್ಮಕ ವೀಕ್ಷಣಾ ದರ, ಸಂಭಾವ್ಯ ಟ್ರೇಡ್‌ಮಾರ್ಕ್ ಉಲ್ಲಂಘನೆಗಳು ಮತ್ತು ವೇದಿಕೆಯಲ್ಲಿನ ಸುಳ್ಳು ಮಾಹಿತಿಯ ಘಟನೆಗಳು ಒಳಗೊಂಡಂತೆ, ಈ ವರದಿಗೆ ಇತ್ತೀಚಿನ ಸೇರ್ಪಡೆಗಳನ್ನೂ ಇದು ಸೆರೆಹಿಡಿಯುತ್ತದೆ.
ನಮ್ಮ ಪಾರದರ್ಶಕತೆ ವರದಿಗಳನ್ನು ಉತ್ತಮಗೊಳಿಸುವತ್ತ ನಮ್ಮ ಪ್ರಸ್ತುತ ಬದ್ಧತೆಯ ಭಾಗವಾಗಿ, ನಾವು ಈ ವರದಿಗೆ ಹಲವು ಹೊಸ ಅಂಶಗಳನ್ನು ಪರಿಚಯಿಸುತ್ತಿದ್ದೇವೆ. ಈ ಭಾಗಕ್ಕಾಗಿ ಮತ್ತು ಮುಂದಿನ ದಿನಗಳಲ್ಲಿ, ವರದಿಯುದ್ದಕ್ಕೂ ನಾವು ಬಳಸಿದ ಪದಗಳಿಗಾಗಿ ನಾವು ಒಂದು ಪದಕೋಶವನ್ನು ಸೇರಿಸುತ್ತಿದ್ದೇವೆ. ಅಂತಹ ನಿಯಮಗಳ ಸುತ್ತ ಹೆಚ್ಚಿನ ಪಾರದರ್ಶಕತೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ, ಪ್ರತಿ ವರ್ಗದ ಅಡಿಯಲ್ಲಿ ಯಾವ ರೀತಿಯ ಉಲ್ಲಂಘನೆಯ ವಿಷಯವನ್ನು ಸೇರಿಸಲಾಗಿದೆ ಮತ್ತು ಅದರ ವಿರುದ್ಧ ಜಾರಿಗೊಳಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಮೊದಲ ಬಾರಿಗೆ, ದೇಶದ ಮಟ್ಟದಲ್ಲಿ ನಾವು ಸುಳ್ಳು ಮಾಹಿತಿಯನ್ನು ಪ್ರತ್ಯೇಕ ಕೆಟಗರಿಯಾಗಿ ಕೂಡ ಪರಿಚಯಿಸುತ್ತಿದ್ದೇವೆ, ಈ ಮೂಲಕ ಜಾಗತಿಕವಾಗಿ ಸುಳ್ಳು ಮಾಹಿತಿಯನ್ನು ವರದಿ ಮಾಡುವ ನಮ್ಮ ಹಿಂದಿನ ಅಭ್ಯಾಸವನ್ನು ಇನ್ನಷ್ಟು ಬಲಪಡಿಸುತ್ತಿದ್ದೇವೆ.
ಹೆಚ್ಚುವರಿಯಾಗಿ, ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆ ಚಿತ್ರಣವನ್ನು (CSEAI) ಎದುರಿಸಲು ನಮ್ಮ ಪ್ರಯತ್ನಗಳ ಕುರಿತು ಹೆಚ್ಚಿನ ಒಳನೋಟವನ್ನು ನಾವು ಒದಗಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ, ತೆಗೆದುಹಾಕುವ ಮೂಲಕ ನಾವು ಕ್ರಮ ಜಾರಿಗೊಳಿಸಿದ ಒಟ್ಟು CSEAI ಕಂಟೆಂಟ್ ಹಾಗೂ ಕಾಣೆಯಾದ ಮತ್ತು ದೌರ್ಜನ್ಯಕ್ಕೊಳಗಾದ ಮಕ್ಕಳಿಗಾಗಿನ U.S. ರಾಷ್ಟ್ರೀಯ ಕೇಂದ್ರಕ್ಕೆ (NCMEC) ನಾವು ಮಾಡಿದ ಒಟ್ಟು CSEAI ವರದಿಗಳ* ಸಂಖ್ಯೆ (ಅಂದರೆ "ಸೈಬರ್‌ಟಿಪ್‌ಗಳು") ಕುರಿತು ನಾವು ಒಳನೋಟಗಳನ್ನು ಹಂಚಿಕೊಳ್ಳಲಿದ್ದೇವೆ.
ಆನ್‌ಲೈನ್ ಹಾನಿಗಳ ವಿರುದ್ಧ ಹೋರಾಡುವುದಕ್ಕಾಗಿನ ನಮ್ಮ ನೀತಿಗಳ ಕುರಿತು ಮತ್ತು ನಮ್ಮ ವರದಿ ಮಾಡುವಿಕೆ ಅಭ್ಯಾಸಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುವ ಯೋಜನೆಗಳ ಕುರಿತು ಇನ್ನಷ್ಟು ಮಾಹಿತಿಗಾಗಿ, ಈ ಪಾರದರ್ಶಕತೆಯ ವರದಿ ಕುರಿತ ನಮ್ಮ ಇತ್ತೀಚಿನ ಸುರಕ್ಷತೆ ಮತ್ತು ಪ್ರಭಾವ ಬ್ಲಾಗ್ ಅನ್ನು ದಯವಿಟ್ಟು ಓದಿ.
Snapchat ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಗಾಗಿ ಹೆಚ್ಚುವರಿ ಸಂಪನ್ಮೂಲಗಳನ್ನು ಕಂಡುಕೊಳ್ಳಲು, ಪುಟದ ಕೆಳಭಾಗದಲ್ಲಿರುವ ನಮ್ಮ ಪಾರದರ್ಶಕತೆ ವರದಿ ಮಾಡುವಿಕೆ ಕುರಿತು ಟ್ಯಾಬ್ ಅನ್ನು ನೋಡಿ.
ವಿಷಯ ಮತ್ತು ಖಾತೆ ಉಲ್ಲಂಘನೆಗಳ ಅವಲೋಕನ
ಜನವರಿ 1 - ಜೂನ್ 30, 2022 ರಿಂದ, ನಮ್ಮ ನೀತಿಗಳನ್ನು ಉಲ್ಲಂಘಿಸುವ ಜಾಗತಿಕವಾಗಿ 56,88,970 ವಿಷಯಗಳ ವಿರುದ್ಧ ನಾವು ಕ್ರಮ ಜಾರಿಗೊಳಿಸಿದ್ದೇವೆ. ಜಾರಿಗೊಳಿಸಿದ ಕ್ರಮಗಳು ಆಕ್ಷೇಪಾರ್ಹ ವಿಷಯವನ್ನುು ತೆಗೆದುಹಾಕುವುದು ಅಥವಾ ಪ್ರಶ್ನಾರ್ಹ ಖಾತೆಯನ್ನು ಸಮಾಪ್ತಿಗೊಳಿಸುವುದನ್ನು ಒಳಗೊಂಡಿರುತ್ತದೆ.
ವರದಿ ಮಾಡುವಿಕೆ ಅವಧಿಯಲ್ಲಿ, 0.04 ಪ್ರತಿಶತದಷ್ಟು ಉಲ್ಲಂಘನಾತ್ಮಕ ವೀಕ್ಷಣಾ ದರ (VVR) ನಮಗೆ ಕಂಡುಬಂತು, ಅಂದರೆ Snapchat ನಲ್ಲಿ ಪ್ರತಿ 10,000 Snap ಮತ್ತು ಕಥೆ ವೀಕ್ಷಣೆಗಳಲ್ಲಿ 4 ನಮ್ಮ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ಒಳಗೊಂಡಿರುತ್ತದೆ.