ಜೂನ್ 20, 2023
ಜೂನ್ 20, 2023
Snap ನ ಸುರಕ್ಷತಾ ಪ್ರಯತ್ನಗಳಲ್ಲಿ ಮತ್ತು ನಮ್ಮ ವೇದಿಕೆಯಲ್ಲಿ ವರದಿ ಮಾಡಿದ ಸ್ವರೂಪ ಮತ್ತು ಸಂಪುಟದಲ್ಲಿನ ಒಳನೋಟವನ್ನು ಒದಗಿಸಲು, ನಾವು ವರ್ಷಕ್ಕೆ ಎರಡು ಬಾರಿ ಪಾರದರ್ಶಕತೆಯ ವರದಿಗಳನ್ನು ಪ್ರಕಟಿಸುತ್ತೇವೆ. ನಮ್ಮ ವಿಷಯ ನಿಯಂತ್ರಣ ಮತ್ತು ಕಾನೂನು ಜಾರಿ ಅಭ್ಯಾಸಗಳ ಕುರಿತು ಆಳವಾಗಿ ಕಾಳಜಿ ವಹಿಸುವ ಹಲವು ಪಾಲುದಾರರಿಗಾಗಿ ಹಾಗೂ ನಮ್ಮ ಸಮುದಾಯದ ಯೋಗಕ್ಷೇಮಕ್ಕಾಗಿ, ಈ ವರದಿಗಳನ್ನು ಇನ್ನಷ್ಟು ಸಮಗ್ರ ಮತ್ತು ಮಾಹಿತಿಯುಕ್ತವಾಗಿಸುವುದನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ.
ಈ ವರದಿಯು 2022 ರ ದ್ವಿತೀಯಾರ್ಧದ ವರದಿಯನ್ನು ಒಳಗೊಂಡಿದೆ (ಜುಲೈ 1 - ಡಿಸೆಂಬರ್ 31). ನಮ್ಮ ಹಿಂದಿನ ವರದಿಗಳಂತೆ, ನಾವು ಸ್ವೀಕರಿಸಿದ ಮತ್ತು ನಿರ್ದಿಷ್ಟ ವರ್ಗಗಳ ಉಲ್ಲಂಘನೆಗಳ ವಿರುದ್ಧ ಕ್ರಮ ಜಾರಿಗೊಳಿಸಲಾದ ಅಪ್ಲಿಕೇಶನ್‍ನಲ್ಲಿನ ವಿಷಯ ಮತ್ತು ಖಾತೆ ಮಟ್ಟದ ವರದಿಗಳ ಜಾಗತಿಕ ಸಂಖ್ಯೆಯ ಕುರಿತು; ಕಾನೂನು ಜಾರಿ ಮತ್ತು ಸರ್ಕಾರಗಳ ವಿನಂತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಿದ್ದೇವೆ ಎಂಬ ಕುರಿತು; ಮತ್ತು ನಮ್ಮ ಜಾರಿ ಕ್ರಮಗಳ ಮಾಹಿತಿಯನ್ನು ಪ್ರತಿ ದೇಶದ ಪ್ರಕಾರವಾಗಿ ವಿಭಾಗಿಸಲಾಗಿದೆ ಎನ್ನುವ ಬಗ್ಗೆ ನಾವು ಮಾಹಿತಿ ಹಂಚಿಕೊಳ್ಳುತ್ತೇವೆ. ಇದು Snapchat ಕಂಟೆಂಟ್‌ನ ಉಲ್ಲಂಘನಾತ್ಮಕ ವೀಕ್ಷಣಾ ದರ, ಸಂಭಾವ್ಯ ಟ್ರೇಡ್‌ಮಾರ್ಕ್ ಉಲ್ಲಂಘನೆಗಳು ಮತ್ತು ವೇದಿಕೆಯಲ್ಲಿನ ಸುಳ್ಳು ಮಾಹಿತಿಯ ಘಟನೆಗಳು ಒಳಗೊಂಡಂತೆ, ಈ ವರದಿಗೆ ಇತ್ತೀಚಿನ ಸೇರ್ಪಡೆಗಳನ್ನೂ ಇದು ಸೆರೆಹಿಡಿಯುತ್ತದೆ.
ನಮ್ಮ ಪಾರದರ್ಶಕತೆಯ ವರದಿಗಳನ್ನು ನಿರಂತರವಾಗಿ ಸುಧಾರಿಸುವ ನಮ್ಮ ನಿರಂತರ ಬದ್ಧತೆಯ ಭಾಗವಾಗಿ, ಈ ಬಿಡುಗಡೆಯೊಂದಿಗೆ ನಾವು ಕೆಲವು ಹೊಸ ಅಂಶಗಳನ್ನು ಪರಿಚಯಿಸುತ್ತಿದ್ದೇವೆ. ನಾವು "ವಿಷಯ ಮತ್ತು ಖಾತೆ ಉಲ್ಲಂಘನೆಗಳ ವಿಶ್ಲೇಷಣೆ" ಎಂಬ ವಿಭಾಗವನ್ನು ಸೇರಿಸಿದ್ದು, ನಮ್ಮ ಹಿಂದಿನ ವರದಿ ಮಾಡುವಿಕೆ ಅವಧಿಗೆ ಸಂಬಂಧಿಸಿ ಇಲ್ಲಿ ನಾವು ಪ್ರಮುಖ ವಿಷಯ ಬದಲಾವಣೆಗಳನ್ನು ಹಂಚಿಕೊಳ್ಳುತ್ತೇವೆ.
ಇದರ ಜೊತೆಗೆ, ಲ್ಯಾಂಡಿಂಗ್ ಪುಟ ಮತ್ತು ನಮ್ಮ ದೇಶದ ಉಪಪುಟಗಳೆರಡರಲ್ಲೂ, ನಮ್ಮ ವಿಷಯ ಮತ್ತು ಖಾತೆ ಉಲ್ಲಂಘನೆಗಳ ಕೋಷ್ಟಕದಲ್ಲಿ ನಾವು ಮಾಹಿತಿಯನ್ನು ಹೇಗೆ ಪ್ರಸ್ತುತಪಡಿಸುತ್ತೇವೆ ಎಂಬುದನ್ನು ನಾವು ನವೀಕರಿಸಿದ್ದೇವೆ. ಈ ಹಿಂದೆ, ನಾವು ಉಲ್ಲಂಘನೆಗಳನ್ನು ಅತಿ ಹೆಚ್ಚಿನಿಂದ ಅತಿ ಕಡಿಮೆ ವಿಷಯ ಜಾರಿಗೊಳಿಸುವಿಕೆಯ ಪ್ರಕಾರ ಅನುಕ್ರಮಗೊಳಿಸಿದೆವು. ಸ್ಥಿರತೆಯನ್ನು ಸುಧಾರಿಸಲು, ಈಗ ನಮ್ಮ ಅನುಕ್ರಮವು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಬಿಂಬಿಸುತ್ತದೆ. Snapchat ಸಮುದಾಯವನ್ನು ಸುರಕ್ಷಿತವಾಗಿ ಇರಿಸುವುದು ಹೇಗೆ ಎಂಬ ಕುರಿತು Snap ಗೆ ಸ್ವತಂತ್ರವಾಗಿ ಅರಿವು ಮೂಡಿಸುವ, ಸವಾಲು ಹಾಕುವ, ಸಮಸ್ಯೆಗಳನ್ನು ವರದಿ ಮಾಡುವ ಮತ್ತು ಸಲಹೆ ನೀಡುವ Snap ನ ಸುರಕ್ಷತಾ ಸಲಹಾ ಮಂಡಳಿಯ ಸಲಹೆಯಂತೆ ಹೀಗೆ ಮಾಡಲಾಗಿದೆ.
ಅಂತಿಮವಾಗಿ, ನಾವು ನಮ್ಮ ಪದಕೋಶದಲ್ಲಿ ನಮ್ಮ ಸಮುದಾಯದ ಮಾರ್ಗಸೂಚಿಗಳ ವಿವರಣೆಗಳಿಗೆ ಲಿಂಕ್‌ಗಳನ್ನು ಪರಿಷ್ಕರಿಸಿದ್ದು, ಅವುಗಳು ನಮ್ಮ ಪ್ಲ್ಯಾಟ್‌ಫೊರ್ಮ್‌ನ ನೀತಿ ಮತ್ತು ಕಾರ್ಯಾಚರಣಾ ಶ್ರಮಗಳಿಗೆ ಸಂಬಂಧಿಸಿದ ಹೆಚ್ಚುವರಿ ಸನ್ನಿವೇಶವನ್ನು ಒದಗಿಸುತ್ತವೆ.
ಆನ್‌ಲೈನ್ ಹಾನಿಗಳ ವಿರುದ್ಧ ಹೋರಾಡಲು ನಮ್ಮ ನೀತಿಗಳು, ಹಾಗೂ ನಮ್ಮ ವರದಿ ನೀಡುವಿಕೆ ಪದ್ಧತಿಗಳ ವಿಕಸನವನ್ನು ಮುಂದುವರಿಸುವ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಪಾರದರ್ಶಕತೆಯ ವರದಿ ಕುರಿತಾದ ನಮ್ಮ ಇತ್ತೀಚಿನ ಸುರಕ್ಷತೆ ಮತ್ತು ಪ್ರಭಾವ ಬ್ಲಾಗ್ ಅನ್ನು ಓದಿ.
Snapchat ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಗಾಗಿ ಹೆಚ್ಚುವರಿ ಸಂಪನ್ಮೂಲಗಳನ್ನು ಕಂಡುಕೊಳ್ಳಲು, ಪುಟದ ಕೆಳಭಾಗದಲ್ಲಿರುವ ನಮ್ಮ ಪಾರದರ್ಶಕತೆ ವರದಿ ನೀಡುವಿಕೆ ಕುರಿತು ಟ್ಯಾಬ್ ಅನ್ನು ನೋಡಿ.
ವಿಷಯ ಮತ್ತು ಖಾತೆ ಉಲ್ಲಂಘನೆಗಳ ಅವಲೋಕನ
ಜುಲೈ 1 - ಡಿಸೆಂಬರ್ 2022 ರವರೆಗೆ, ಜಗತ್ತಿನಾದ್ಯಂತ ನಮ್ಮ ನೀತಿಗಳನ್ನು ಉಲ್ಲಂಘಿಸಿದ ಒಟ್ಟು 63,60,594 ವಿಷಯದ ತುಣುಕುಗಳ ವಿರುದ್ಧ Snap ಕ್ರಮ ಜಾರಿಗೊಳಿಸಿದೆ.
ವರದಿ ಮಾಡುವಿಕೆ ಅವಧಿಯಲ್ಲಿ, 0.03 ಪ್ರತಿಶತದಷ್ಟು ಉಲ್ಲಂಘನಾತ್ಮಕ ವೀಕ್ಷಣಾ ದರ (VVR) ನಮಗೆ ಕಂಡುಬಂತು, ಅಂದರೆ Snapchat ನಲ್ಲಿ ಪ್ರತಿ 10,000 Snap ಮತ್ತು ಕಥೆ ವೀಕ್ಷಣೆಗಳಲ್ಲಿ 3 ನಮ್ಮ ನೀತಿಗಳನ್ನು ಉಲ್ಲಂಘಿಸುವ ವಿಷಯವನ್ನು ಒಳಗೊಂಡಿದ್ದವು.
**ಸುಳ್ಳು ಮಾಹಿತಿಯ ವಿರುದ್ಧ ಸರಿಯಾಗಿ ಮತ್ತು ಸ್ಥಿರವಾಗಿ ಶಿಸ್ತುಕ್ರಮ ಜಾರಿಗೊಳಿಸುವುದು ಕ್ರಿಯಾತ್ಮಕ ಪ್ರಕ್ರಿಯೆಯಾಗಿದ್ದು ಇದಕ್ಕೆ ನವೀಕೃತವಾಗಿರುವ ಸನ್ನಿವೇಶ ಮತ್ತು ಸೂಕ್ತ ಕಾರ್ಯಶ್ರದ್ಧೆ ಅಗತ್ಯವಿರುತ್ತದೆ. ಈ ವರ್ಗದಲ್ಲಿ ನಮ್ಮ ಪ್ರತಿನಿಧಿಗಳ ಕ್ರಮ ಜಾರಿಗೊಳಿಸುವಿಕೆಯ ನಿಖರತೆಯನ್ನು ನಿರಂತರವಾಗಿ ಸುಧಾರಿಸಲು ನಾವು ಶ್ರಮಿಸುತ್ತಿರುವಂತೆ, H1 2022 ರಿಂದಲೂ ಸುಳ್ಳು ಮಾಹಿತಿಯ ವಿರುದ್ಧ ಕ್ರಮ ಜಾರಿಗೊಳಿಸುವಿಕೆಯ ಅಂಕಿಅಂಶಾತ್ಮಕವಾಗಿ ಗಮನಾರ್ಹ ಭಾಗದ ಕಠಿಣ ಗುಣಮಟ್ಟ-ಭರವಸೆಯ ವಿಮರ್ಶೆಯನ್ನು ಆಧರಿಸಿ ಅಂದಾಜಿಸಿದ "ಕ್ರಮ ಜಾರಿಗೊಳಿಸಿದ ವಿಷಯ" ಮತ್ತು "ಕ್ರಮ ಜಾರಿಗೊಳಿಸಿದ ವಿಶಿಷ್ಟ ಖಾತೆಗಳು" ವರ್ಗಗಳಲ್ಲಿ ಅಂಕಿಅಂಶಗಳನ್ನು ವರದಿ ಮಾಡುವುದನ್ನು ನಾವು ಆರಿಸಿಕೊಂಡಿದ್ದೇವೆ. ನಿರ್ದಿಷ್ಟವಾಗಿ, ಪ್ರತಿ ದೇಶದ ಸುಳ್ಳು ಮಾಹಿತಿಯ ವಿರುದ್ಧದ ಕ್ರಮ ಜಾರಿಗೊಳಿಸುವಿಕೆಯ ಅಂಕಿಅಂಶಾತ್ಮಕವಾಗಿ ಗಮನಾರ್ಹವಾದ ಭಾಗವನ್ನು ನಾವು ಮಾದರಿಯಾಗಿ ತೆಗೆದುಕೊಳ್ಳುತ್ತೇವೆ ಮತ್ತು ಕ್ರಮ ಜಾರಿಗೊಳಿಸುವಿಕೆ ನಿರ್ಧಾರಗಳ ಗುಣಮಟ್ಟವನ್ನು ಪರಿಶೀಲನೆ ಮಾಡುತ್ತೇವೆ. ನಂತರ ಸರಾಸರಿ 95% ಮೌಲ್ಯಗಳ ವಿಶ್ವಾಸ ಅಂತರದ ಜೊತೆಗೆ (+/- 5% ದೋಷದ ಸಾಧ್ಯತೆ) ಕ್ರಮ ಜಾರಿಗೊಳಿಸುವಿಕೆಯ ದರಗಳನ್ನು ಪಡೆದುಕೊಳ್ಳಲು ಆ ಗುಣಮಟ್ಟ-ಪರಿಶೀಲಿಸಿದ ಕ್ರಮ ಜಾರಿಗೊಳಿಸುವಿಕೆಗಳನ್ನು ಬಳಸುತ್ತೇವೆ, ಅದನ್ನು ಪಾರದರ್ಶಕತೆಯ ವರದಿಯಲ್ಲಿ ವರದಿ ಮಾಡಲಾದ ಸುಳ್ಳು ಮಾಹಿತಿಯ ವಿರುದ್ಧ ಕ್ರಮ ಜಾರಿಗೊಳಿಸುವಿಕೆಯನ್ನು ಲೆಕ್ಕಾಚಾರ ಮಾಡಲು ನಾವು ಬಳಸುತ್ತೇವೆ.
ವಿಷಯ ಮತ್ತು ಖಾತೆ ಉಲ್ಲಂಘನೆಗಳ ವಿಶ್ಲೇಷಣೆ
ಈ ಆವರ್ತನದಲ್ಲಿ ಒಟ್ಟು ವಿಷಯ ಮತ್ತು ಖಾತೆ ವರದಿಗಳಲ್ಲಿ ನಾವು 38% ಏರಿಕೆಯನ್ನು ಕಂಡಿದ್ದು, ಇದನ್ನು ಖಾತೆಗಳಿಗಾಗಿ ನಮ್ಮ ಆ್ಯಪ್‌ನಲ್ಲಿನ ವರದಿ ಮಾಡುವಿಕೆ ಪಟ್ಟಿಯಲ್ಲಿ ಒಂದು ನವೀಕರಣಕ್ಕೆ ನಿಯೋಜಿಸಬಹುದಾಗಿದ್ದು, ಇದಕ್ಕೆ ಪ್ರತಿಯಾಗಿ, ವರದಿ ಮಾಡುವಿಕೆಗಾಗಿ Snapchatter ಗಳಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸಿದೆ. ಪರಿಣಾಮವಾಗಿ, ಒಟ್ಟು ಕ್ರಮ ಜಾರಿಗೊಳಿಸಿದ ವಿಷಯದಲ್ಲಿ ನಾವು 12% ಏರಿಕೆಯನ್ನು ಮತ್ತು ಒಟ್ಟು ಕ್ರಮ ಜಾರಿಗೊಳಿಸಿದ ವಿಶಿಷ್ಟ ಖಾತೆಗಳ ಸಂಖ್ಯೆಯಲ್ಲಿ 40% ಏರಿಕೆಯನ್ನು ನಾವು ಕಂಡಿದ್ದೇವೆ. ನಿರ್ದಿಷ್ಟವಾಗಿ, Snapchatter ಗಳು ಕಿರುಕುಳ ಮತ್ತು ಹಿಂಸೆ ಹಾಗೂ ಇತರ ನಿಯಂತ್ರಿತ ಸರಕುಗಳ ವರ್ಗಗಳಲ್ಲಿ ಹೆಚ್ಚು ವಿಷಯ ಮತ್ತು ಖಾತೆಗಳನ್ನು ವರದಿ ಮಾಡಿದ್ದು, ಇವು ವರದಿಗಳಲ್ಲಿ ಅನುಕ್ರಮವಾಗಿ ~300% ಮತ್ತು ~100% ಏರಿಕೆ ಹಾಗೂ ವಿಷಯ ಕ್ರಮ ಜಾರಿಗೊಳಿಸುವಿಕೆಯಲ್ಲಿ ಅನುಕ್ರಮವಾಗಿ ~83% ಮತ್ತು ~86% ಏರಿಕೆಯನ್ನು ಕಂಡಿವೆ. ನಾವು ಸ್ಪ್ಯಾಮ್‌ನ ವರದಿಗಳಲ್ಲಿ ~68% ಏರಿಕೆ ಮತ್ತು ವಿಷಯ ವಿರುದ್ಧ ಕ್ರಮ ಜಾರಿಗೊಳಿಸುವಿಕೆಯಲ್ಲಿ ~88% ಏರಿಕೆಯನ್ನು ಸಹ ಗುರುತಿಸಿದ್ದೇವೆ.
ಮುಂದುವರಿದು, ಹೆಚ್ಚಿನ ಸಂಖ್ಯೆಯ ವಿಷಯ ಮತ್ತು ಖಾತೆ ವರದಿಗಳಿಂದಾಗಿ ವಿಷಯ ಮತ್ತು ಖಾತೆಗಳ ವಿರುದ್ಧ ಕ್ರಮ ಜಾರಿಗೊಳಿಸುವಿಕೆಯ ಪರಿಹಾರ ಕಾರ್ಯ ಪ್ರಾರಂಭಿಸುವ ಸಮಯದಲ್ಲೂ ಕೂಡ ಏರಿಕೆಗೆ ಕಾರಣವಾಯಿತು. ಎಲ್ಲ ವಿಷಯ ಮತ್ತು ಖಾತೆಗಳಿಗಾಗಿ ಸರಾಸರಿ ಪರಿಹಾರ ಕಾರ್ಯ ಪ್ರಾರಂಭಿಸುವ ಸಮಯವು ಎಲ್ಲ ವರ್ಗಗಳಿಗೆ ಈಗಲೂ 1 ಗಂಟೆಗಿಂತ ಕಡಿಮೆ ಇದೆ.
ಒಟ್ಟಾರೆಯಾಗಿ, ಎಲ್ಲ ವರ್ಗಗಳಾದ್ಯಂತ ನಾವು ಸಾಮಾನ್ಯ ಏರಿಕೆಯನ್ನು ಕಂಡಿದ್ದರೂ, ವೇದಿಕೆಯಲ್ಲಿ ಕಾಣಿಸಿದಂತೆ ಉಲ್ಲಂಘನೆಗಳನ್ನು ಸಕ್ರಿಯವಾಗಿ ಮತ್ತು ನಿಖರವಾಗಿ ವರದಿ ಮಾಡಲು ನಮ್ಮ ಸಮುದಾಯ ಬಳಸುವ ಉಪಕರಣಗಳನ್ನು ನಿರಂತರವಾಗಿ ಸುಧಾರಿಸುವುದು ಮುಖ್ಯ ಎಂದು ನಾವು ನಂಬಿದ್ದೇವೆ
ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ವಿರುದ್ಧ ಹೋರಾಡುವುದು
ನಮ್ಮ ಕಮ್ಯುನಿಟಿಯ ಯಾವುದೇ ಸದಸ್ಯರ, ವಿಶೇಷವಾಗಿ ಅಪ್ರಾಪ್ತ ವಯಸ್ಕರ ಲೈಂಗಿಕ ಶೋಷಣೆಯು ಕಾನೂನುಬಾಹಿರವಾಗಿದೆ, ಅಸಹ್ಯಕರವಾಗಿದೆ ಮತ್ತು ನಮ್ಮ ಕಮ್ಯುನಿಟಿಯ ಮಾರ್ಗಸೂಚಿಗಳಿಂದ ನಿಷೇಧಿಸಲಾಗಿದೆ. ನಮ್ಮ ವೇದಿಕೆಯಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯವನ್ನು (CSEAI) ತಡೆಗಟ್ಟುವುದು, ಪತ್ತೆಹಚ್ಚುವುದು ಮತ್ತು ನಿರ್ಮೂಲನೆ ಮಾಡುವುದು ನಮಗೆ ಪ್ರಮುಖ ಆದ್ಯತೆಯಾಗಿದೆ, ಹಾಗೂ ಇವುಗಳನ್ನು ಮತ್ತು ಇತರ ರೀತಿಯ ಅಪರಾಧಗಳನ್ನು ಎದುರಿಸಲು ನಾವು ನಮ್ಮ ಸಾಮರ್ಥ್ಯಗಳನ್ನು ನಿರಂತರವಾಗಿ ವಿಕಸನಗೊಳಿಸುತ್ತೇವೆ.
ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡವು, ಕ್ರಮವಾಗಿ ಮಕ್ಕಳ ಲೈಂಗಿಕ ದೌರ್ಜನ್ಯದ ತಿಳಿದಿರುವ ಕಾನೂನುಬಾಹಿರ ಚಿತ್ರಗಳು ಮತ್ತು ವೀಡಿಯೊಗಳನ್ನು ಗುರುತಿಸಲು ಮತ್ತು ಕಾನೂನಿನ ಅನುಸಾರ, ಅವುಗಳ ಕುರಿತು U.S. ಕಾಣೆಯಾದ ಮತ್ತು ಶೋಷಣೆಗೊಳಗಾದ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ (NCMEC) ವರದಿ ಮಾಡಲು, PhotoDNA ದೃಢವಾದ ಹ್ಯಾಶ್-ಹೊಂದಾಣಿಕೆ ಮತ್ತು Google ನ ಮಕ್ಕಳ ಲೈಂಗಿಕ ಶೋಷಣೆ ಚಿತ್ರಣ (CSAI) ಹೊಂದಾಣಿಕೆಯಂತಹ ಸಕ್ರಿಯ ತಂತ್ರಜ್ಞಾನದ ಪತ್ತೆಮಾಡುವಿಕೆ ಸಾಧನಗಳನ್ನು ಬಳಸುತ್ತವೆ. ನಂತರ NCMEC, ಅಗತ್ಯಕ್ಕೆ ಅನುಸಾರ ದೇಶೀಯ ಅಥವಾ ಅಂತರರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ನಡೆಸುತ್ತದೆ.
2022 ರ ದ್ವಿತೀಯಾರ್ಧದಲ್ಲಿ, ಇಲ್ಲಿ ವರದಿ ಮಾಡಲಾದ ಒಟ್ಟು ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ಉಲ್ಲಂಘನೆಗಳಲ್ಲಿ ಶೇಕಡ 94 ರಷ್ಟನ್ನು ನಾವು ಪೂರ್ವಭಾವಿಯಾಗಿ ಪತ್ತೆಮಾಡಿದ್ದೇವೆ ಮತ್ತು ಅವುಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ.
**NCMEC ಗೆ ಪ್ರತಿ ಸಲ್ಲಿಕೆಯು ಹಲವು ವಿಷಯದ ತುಣುಕುಗಳನ್ನು ಒಳಗೊಂಡಿರಬಹುದು ಎಂಬುದನ್ನು ಗಮನಿಸಿ. NCMEC ಗೆ ಸಲ್ಲಿಸಿದ ಮಾಧ್ಯಮದ ಒಟ್ಟು ಪ್ರತ್ಯೇಕ ತುಣುಕುಗಳು ನಮ್ಮ ಜಾರಿಗೊಳಿಸಿದ ಒಟ್ಟು ವಿಷಯಕ್ಕೆ ಸಮನಾಗಿರುತ್ತದೆ.
ಭಯೋತ್ಪಾದಕ ಮತ್ತು ಹಿಂಸಾತ್ಮಕ ತೀವ್ರವಾದಿ ಕಂಟೆಂಟ್
ವರದಿ ಮಾಡುವ ಅವಧಿಯಲ್ಲಿ, ಭಯೋತ್ಪಾದಕ ಮತ್ತು ಹಿಂಸೆ ವಿಧ್ವಂಸಕ ವಿಷಯವನ್ನು ನಿಷೇಧಿಸುವ ನಮ್ಮ ನೀತಿಯ ಉಲ್ಲಂಘನೆಗಾಗಿ ನಾವು 132 ಖಾತೆಗಳನ್ನು ತೆಗೆದುಹಾಕಿದ್ದೇವೆ.
Snap ನಲ್ಲಿ, ನಾವು ಬಹು ಚಾನೆಲ್‌ಗಳ ಮೂಲಕ ವರದಿ ಮಾಡಲಾದ ಭಯೋತ್ಪಾದಕ ಮತ್ತು ಹಿಂಸಾತ್ಮಕ ಉಗ್ರವಾದದ ವಿಷಯವನ್ನು ತೆಗೆದುಹಾಕುತ್ತೇವೆ. ನಮ್ಮ ಅಪ್ಲಿಕೇಶನ್‍ನಲ್ಲಿ ವರದಿ ಮಾಡುವ ಪಟ್ಟಿ ಮೂಲಕ ಭಯೋತ್ಪಾದಕ ಮತ್ತು ಹಿಂಸಾತ್ಮಕ ತೀವ್ರವಾದಿ ವಿಷಯವನ್ನು ವರದಿ ಮಾಡಲು ಬಳಕೆದಾರರಿಗೆ ಪ್ರೋತ್ಸಾಹಿಸುವುದು ಅವುಗಳಲ್ಲಿ ಸೇರಿವೆ ಮತ್ತು Snap ನಲ್ಲಿ ಕಾಣಿಸಿಕೊಳ್ಳಬಹುದಾದ ಭಯೋತ್ಪಾದಕ ಮತ್ತು ಹಿಂಸಾತ್ಮಕ ತೀವ್ರವಾದಿ ವಿಷಯವನ್ನು ಪರಿಹರಿಸಲು ನಾವು ಕಾನೂನು ಜಾರಿ ಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ.
ಸ್ವಯಂ-ಹಾನಿ ಮತ್ತು ಆತ್ಮಹತ್ಯೆ ವಿಷಯ
Snapchatter ಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನಾವು ಆಳವಾಗಿ ಕಾಳಜಿ ವಹಿಸುತ್ತೇವೆ, ಅದು Snapchat ಅನ್ನು ವಿಭಿನ್ನವಾಗಿ ನಿರ್ಮಿಸಲು ನಮ್ಮ ನಿರ್ಧಾರಗಳನ್ನು ರೂಪಿಸುತ್ತದೆ – ಮತ್ತು ರೂಪಿಸುವುದನ್ನು ಮುಂದುವರಿಸುತ್ತದೆ. ನಿಜವಾದ ಸ್ನೇಹಿತರ ನಡುವಿನ ಸಂವಹನಕ್ಕಾಗಿ ವಿನ್ಯಾಸಗೊಳಿಸಲಾದ ವೇದಿಕೆಯಾಗಿ, ಕಷ್ಟದ ಸಮಯಗಳಲ್ಲಿ ಪರಸ್ಪರ ಸಹಾಯ ಮಾಡಲು ಸ್ನೇಹಿತರನ್ನು ಸಬಲಗೊಳಿಸುವಲ್ಲಿ Snapchat ಅನನ್ಯ ಪಾತ್ರವನ್ನು ವಹಿಸುತ್ತದೆ ಎಂದು ನಾವು ನಂಬುತ್ತೇವೆ.
ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡವು ತೊಂದರೆಯಲ್ಲಿರುವ Snapchatter ಅನ್ನು ಗುರುತಿಸಿದಾಗ, ಸ್ವಯಂ-ಹಾನಿ ತಡೆಗಟ್ಟುವಿಕೆ ಮತ್ತು ಬೆಂಬಲ ಸಂಪನ್ಮೂಲಗಳನ್ನು ಕಳಿಸಬಹುದು ಮತ್ತು ಸೂಕ್ತವಾಗಿರುವಾಗ ತುರ್ತು ಪ್ರತಿಕ್ರಿಯೆ ಸಿಬ್ಬಂದಿಗೆ ಸೂಚನೆ ನೀಡಬಹುದು. ನಾವು ಹಂಚಿಕೊಳ್ಳುವ ಸಂಪನ್ಮೂಲಗಳು ನಮ್ಮ ಸುರಕ್ಷತಾ ಸಂಪನ್ಮೂಲಗಳ ಜಾಗತಿಕ ಪಟ್ಟಿಯಲ್ಲಿ ಲಭ್ಯ ಇವೆ ಮತ್ತು ಇವು ಎಲ್ಲ Snapchatter ಗಳಿಗೆ ಸಾರ್ವಜನಿಕವಾಗಿ ಲಭ್ಯ ಇವೆ.
ದೇಶದ ಸಮೀಕ್ಷೆ
ಈ ವಿಭಾಗವು ಭೌಗೋಳಿಕ ಪ್ರದೇಶಗಳ ಮಾದರಿಯಲ್ಲಿ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಜಾರಿಯ ಅವಲೋಕನವನ್ನು ಒದಗಿಸುತ್ತದೆ. ನಮ್ಮ ಮಾರ್ಗಸೂಚಿಗಳು ಸ್ಥಳವನ್ನು ಪರಿಗಣಿಸದೆ Snapchat ನಲ್ಲಿನ ಎಲ್ಲಾ ವಿಷಯಗಳಿಗೆ ಮತ್ತು ಎಲ್ಲಾ Snapchatter ಗಳಿಗೆ ಜಗತ್ತಿನಾದ್ಯಂತ ಅನ್ವಯಿಸುತ್ತವೆ.
ಪ್ರತ್ಯೇಕ ದೇಶಗಳಿಗಾಗಿ ಮಾಹಿತಿಯು ಲಗತ್ತಿಸಿರುವ CSV ಫೈಲ್ ಮೂಲಕ ಡೌನ್‌ಲೋಡ್‌ಗೆ ಲಭ್ಯವಿದೆ:

























