Privacy, Safety, and Policy Hub

ಸುರಕ್ಷತಾ ಕಳವಳವನ್ನು ವರದಿ ಮಾಡಿ

ಒಂದು ವೇಳೆ ನೀವು ಎಂದಾದರೂ ಕಿರುಕುಳ, ಬೆದರಿಸುವಿಕೆ ಅಥವಾ ಇನ್ಯಾವುದೇ ಸುರಕ್ಷತಾ ಕಳವಳವನ್ನು ಅನುಭವಿಸಿದರೆ, ನೀವು ಅದನ್ನು ಯಾವಾಗ ಬೇಕಾದರೂ ನಮಗೆ ವರದಿ ಮಾಡಬಹುದು. ನಾವು ಒಟ್ಟಾಗಿ Snapchat ಅನ್ನು ಸುರಕ್ಷಿತ ಸ್ಥಳ ಮತ್ತು ಹೆಚ್ಚು ಪ್ರಬಲ ಸಮುದಾಯವನ್ನಾಗಿ ಮಾಡಬಹುದು. ವರದಿ ಮಾಡುವಿಕೆಗೆ ಸಂಬಂಧಿಸಿದ ಮಿಥ್ಯಗಳ ಅಸಲಿಯತ್ತನ್ನು ತಿಳಿಯಲು ವರದಿ ಮಾಡುವಿಕೆ ಕುರಿತ ನಮ್ಮ ಸುರಕ್ಷತಾ ಸ್ನ್ಯಾಪ್‌ಶಾಟ್ ಸಂಚಿಕೆಯನ್ನು ವೀಕ್ಷಿಸಿ!

Snapchat ನಲ್ಲಿ ಯಾವುದೇ ಒಂದು ಕಥೆಯನ್ನು ವರದಿ ಮಾಡಲು, ಆಕ್ಷೇಪಾರ್ಹ Snap ಅನ್ನು ಒತ್ತಿ ಹಿಡಿದುಕೊಳ್ಳಿ ಹಾಗೂ ನಡೆಯುತ್ತಿರುವುದರ ಕುರಿತು ನಮಗೆ ತಿಳಿಸಲು 'Snap ಅನ್ನು ವರದಿ ಮಾಡಿ' ಟ್ಯಾಪ್ ಮಾಡಿ.

ನಿಮಗೆ ಯಾರೇ ಬೇರೊಬ್ಬರು ಕಳುಹಿಸಿದ Snap ಅನ್ನು ವರದಿ ಮಾಡಲು, ಆಕ್ಷೇಪಾರ್ಹ Snap ಅನ್ನು ಒತ್ತಿ ಹಿಡಿದುಕೊಳ್ಳಿ ಹಾಗೂ 'ವರದಿ ಮಾಡಿ' ಟ್ಯಾಪ್ ಮಾಡುವ ಮೂಲಕ ನಡೆಯುತ್ತಿರುವುದರ ಕುರಿತು ನಮಗೆ ತಿಳಿಸಿ.

ಯಾವುದೇ Snapchat ಖಾತೆಯನ್ನು ವರದಿ ಮಾಡಲು, ಆ Snapchatter ನ ಹೆಸರನ್ನು ಒತ್ತಿ ಹಿಡಿದುಕೊಳ್ಳಿ ಹಾಗೂ “ಇನ್ನಷ್ಟು” ಆಯ್ಕೆಯನ್ನು ಒತ್ತಿ (ಅಥವಾ ⚙ ಬಟನ್ ಅನ್ನು ಟ್ಯಾಪ್ ಮಾಡಿ). ಖಾತೆಯನ್ನು ವರದಿ ಮಾಡಲು ಹಾಗೂ ನಡೆಯುತ್ತಿರುವುದರ ಕುರಿತು ನಮಗೆ ತಿಳಿಸಲು ‘ವರದಿ ಮಾಡಿ’ ಆಯ್ಕೆ ಮಾಡಿ.

ವೆಬ್‌ನಲ್ಲಿರುವ ಯಾವುದೇ ಕಥೆಯನ್ನು ನಿಮ್ಮ ಕಂಪ್ಯೂಟರ್‌ನಿಂದ ವರದಿ ಮಾಡಲು, ವೀಡಿಯೋದ ಮೇಲಿರುವ ⋮ ಬಟನ್ ಅನ್ನು ಕ್ಲಿಕ್ ಮಾಡಿ, ನಂತರ ‘ವರದಿ ಮಾಡಿ’ ಕ್ಲಿಕ್ ಮಾಡಿ. ವೆಬ್‌ನಲ್ಲಿರುವ ಯಾವುದೇ ಕಥೆಯನ್ನು ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ವರದಿ ಮಾಡಲು, ವರದಿ ಮಾಡಬೇಕಾದ ವೀಡಿಯೋದ ಮೇಲಿರುವ ⋮ ಬಟನ್ ಅನ್ನು ಟ್ಯಾಪ್ ಮಾಡಿ ವರದಿ ಮಾಡುವ ಮೂಲಕ ನಡೆಯುತ್ತಿರುವುದರ ಕುರಿತು ನಮಗೆ ತಿಳಿಸಿ.

Discover ನಲ್ಲಿ ಏನನ್ನಾದರೂ ಮರೆಮಾಡಲು, Discover ಪರದೆಯಲ್ಲಿನ ಯಾವುದೇ ಒಂದು ಟೈಲ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ‘ಮರೆಮಾಡಿ’ ಅಥವಾ ʼಅನ್‌ಸಬ್‌ಸ್ಕ್ರೈಬ್ ಮಾಡಿʼ ಅನ್ನು ಟ್ಯಾಪ್ ಮಾಡಿ. ಆಗ ನಿಮಗೆ ನಿಮ್ಮ Discover ಪರದೆಯಲ್ಲಿ ಅಂತಹ Snap ಗಳು ಕಾಣುವುದು ಕಡಿಮೆ ಆಗಬೇಕು.

ಗಮನಿಸಿ: ನಿಮಗೆ ಆ್ಯಪ್‌ನ ಒಳಗೆ ಯಾವುದೇ ಸುರಕ್ಷತಾ ಕಳವಳವನ್ನು ವರದಿ ಮಾಡಲು ಸಾಧ್ಯವಾಗದಿದ್ದರೆ, ನೀವು Snapchat ಸಪೋರ್ಟ್ ಸೈಟ್‌ನಲ್ಲಿಯೇ ನೇರವಾಗಿ ನಿಮಗೆ ಎದುರಾಗುವ ಯಾವುದೇ ಸಮಸ್ಯೆಯನ್ನು ವರದಿ ಮಾಡಬಹುದು. ವರದಿ ನೀಡುವಿಕೆಯ ಕುರಿತು ಸಮಗ್ರ ಮಾರ್ಗದರ್ಶಿಗಾಗಿ, ನಮ್ಮ
ಅನ್ನು ಡೌನ್‌ಲೋಡ್‌ ಮಾಡಿ Snapchat ವರದಿ ಮಾಡುವಿಕೆಗೆ ತ್ವರಿತ-ಮಾರ್ಗದರ್ಶಿ
!