Snap ಗಳು ಮತ್ತು ಚಾಟ್‌ಗಳು
ವೈಯಕ್ತಿಕವಾಗಿ ಅಥವಾ ಫೋನ್‌ನಲ್ಲಿ ಯಾರೊಂದಿಗಾದರೂ ಮಾತನಾಡುವಂತೆಯೇ, Snap ಗಳು ಮತ್ತು ಚಾಟ್‌ಗಳ ಮೂಲಕ ಸಂಭಾಷಣೆ ನಡೆಸುವಿಕೆಯು ನೀವು ಹೇಳಿರುವ ಎಲ್ಲದರ ಶಾಶ್ವತ ದಾಖಲೆಯನ್ನು ಸ್ವಯಂಚಾಲಿತವಾಗಿ ಇರಿಸಿಕೊಳ್ಳದೆ ಆ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿರುವುದನ್ನು ವ್ಯಕ್ತಪಡಿಸಲು ನಿಮಗೆ ಅವಕಾಶ ಕಲ್ಪಿಸುತ್ತದೆ.
ನೀವು Snap ಅನ್ನು ಕಳುಹಿಸುವ ಮೊದಲು ಅದನ್ನು ಉಳಿಸಲು ಸಹ ನೀವು ಆಯ್ಕೆ ಮಾಡಬಹುದು ಮತ್ತು ಸ್ವೀಕರಿಸುವವರು ಸಹ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು. ನೀವು ಚಾಟ್‌ನಲ್ಲಿ ಸಂದೇಶವನ್ನು ಉಳಿಸಲೂಬಹುದು. ಅದನ್ನು ಟ್ಯಾಪ್ ಮಾಡಿ ಅಷ್ಟೇ. ಉಳಿದವುಗಳ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲದೆ, ಮುಖ್ಯವಾಗಿರುವುದನ್ನು ಮಾತ್ರ ಉಳಿಸಲು Snapchat ಸುಲಭವಾಗಿಸುತ್ತದೆ.
ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು Snap ಗಳನ್ನು ಉಳಿಸುವ ಆಯ್ಕೆಯನ್ನು ವಿನ್ಯಾಸಗೊಳಿಸಲಾಗಿದೆ. ನಿಮ್ಮ Snap ಗಳನ್ನು Snapchat ಒಳಗೆ ಉಳಿಸಬಹುದೇ ಎನ್ನುವುದನ್ನು ನೀವು ನಿಯಂತ್ರಿಸುತ್ತೀರಿ. Snap ಉಳಿಸುವುದನ್ನು ಅನುಮತಿಸಲು Snap ಸಮಯವನ್ನು ಸಮಯಮಿತಿ ಇಲ್ಲದ್ದಕ್ಕೆ ಸೆಟ್ ಮಾಡಿ. ಚಾಟ್‌ನಲ್ಲಿ ಉಳಿಸಿರುವ Snap ಗಳು ಸೇರಿದಂತೆ ನೀವು ಕಳುಹಿಸಿದ ಯಾವುದೇ ಸಂದೇಶವನ್ನು ನೀವು ಯಾವಾಗಲಾದರೂ ಅಳಿಸಬಹುದು. ಅನ್‌ಸೇವ್ ಮಾಡಲು ಒತ್ತಿ ಹಿಡಿಯಿರಿ ಅಷ್ಟೇ. ಕಳುಹಿಸುವುದಕ್ಕೆ ಮುನ್ನ ಅಥವಾ ನಂತರ, ನೀವು ಒಂದು Snap ಉಳಿಸಿದಾಗ, ಅದು ನಿಮ್ಮ ನೆನಪುಗಳ ಭಾಗವಾಗಬಹುದು. ನೀವು ನಿಮ್ಮ ಸ್ನೇಹಿತರಿಗೆ ಕಳುಹಿಸುವ ಒಂದು Snap ಅನ್ನು ಅವರು ಉಳಿಸಿದಾಗ, ಅದು ಅವರ ನೆನಪುಗಳ ಭಾಗವಾಗಬಹುದು. ನೆನಪುಗಳ ಕುರಿತು ಇನ್ನಷ್ಟು ವಿವರವಾದ ಮಾಹಿತಿಗಾಗಿ ಕೆಳಗೆ ನೆನಪುಗಳ ವಿಭಾಗವನ್ನು ಪರಿಶೀಲಿಸಿ.
ಧ್ವನಿ ಮತ್ತು ವೀಡಿಯೊ ಚಾಟ್ ನಿಮ್ಮ ಸ್ನೇಹಿತರೊಂದಿಗೆ ಚೆಕ್ ಇನ್ ಮಾಡಲು ಅನುಮತಿಸುತ್ತದೆ. ಒಂದು ವೇಳೆ ನೀವು ಕೇವಲ ಧ್ವನಿ ಸಂದೇಶ ನೀಡಲು ಬಯಸಿದರೆ, ನಾವು ಅದಕ್ಕಾಗಿ ಅನುಕೂಲ ಕಲ್ಪಿಸಿದ್ದೇವೆ, ಧ್ವನಿ ಟಿಪ್ಪಣಿಯನ್ನು ರೆಕಾರ್ಡ್ ಮಾಡಲು ಮೈಕ್ರೋಫೋನ್ ಅನ್ನು ಒತ್ತಿ ಹಿಡಿದುಕೊಳ್ಳಿ ಅಷ್ಟೇ. Snapchatter ಗಳು ನಮ್ಮ ಧ್ವನಿ ಟಿಪ್ಪಣಿ ಪ್ರತಿಲಿಪಿ ವೈಶಿಷ್ಟ್ಯವನ್ನು ಕೂಡ ಬಳಸಬಹುದಾಗಿದ್ದು, ಇದು ಧ್ವನಿ ಸಂದೇಶಗಳ ಪ್ರತಿಲಿಪಿಯನ್ನು ರಚಿಸಲು ಮತ್ತು ಲಭ್ಯವಾಗಿಸಲು ನಮಗೆ ಅವಕಾಶ ಕಲ್ಪಿಸುತ್ತದೆ ಇದರಿಂದಾಗಿ ಅವುಗಳನ್ನು ಓದಬಹುದು.
ನೀವು ಮತ್ತು ನಿಮ್ಮ ಸ್ನೇಹಿತರ ನಡುವಿನ ವಾಯ್ಸ್ ಮತ್ತು ವೀಡಿಯೊ ಚಾಟ್‌ಗಳು ಸೇರಿದಂತೆ, Snap ಗಳು ಮತ್ತು ಚಾಟ್‌ಗಳು ಖಾಸಗಿಯಾಗಿವೆ ಮತ್ತು ಪೂರ್ವನಿಯೋಜಿತವಾಗಿ ಅಳಿಸಲ್ಪಡುತ್ತವೆ — ಇದರ ಅರ್ಥ ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಲು, ಶಿಫಾರಸುಗಳನ್ನು ಮಾಡಲು ಅಥವಾ ನಿಮಗೆ ಜಾಹೀರಾತುಗಳನ್ನು ತೋರಿಸಲು ಅವುಗಳ ಕಂಟೆಂಟ್ ಅನ್ನು ನಾವು ಸ್ಕ್ಯಾನ್ ಮಾಡುವುದಿಲ್ಲ. ಅಂದರೆ ಸೀಮಿತ ಸುರಕ್ಷತಾ-ಸಂಬಂಧಿತ ಪರಿಸ್ಥಿತಿಗಳಲ್ಲಿ (ಉದಾಹರಣೆಗೆ, ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫ್ಲ್ಯಾಗ್ ಮಾಡಿರುವ ಕಂಟೆಂಟ್‌ನ ವರದಿಯನ್ನು ನಾವು ಸ್ವೀಕರಿಸಿದರೆ ಅಥವಾ ಸ್ಪ್ಯಾಮರ್‌ಗಳು ನಿಮಗೆ ಮಾಲ್‌ವೇರ್ ಅಥವಾ ಇತರ ಹಾನಿಕಾರಕ ಕಂಟೆಂಟ್ ಕಳುಹಿಸದಂತೆ ತಡೆಯಲು ಸಹಾಯ ಮಾಡುವುದಕ್ಕಾಗಿ) ಅಥವಾ ನೀವು ನಮ್ಮನ್ನು ಕೇಳದ ಹೊರತು (ಉದಾಹರಣೆಗೆ ನೀವು ನಮ್ಮ ವಾಯ್ಸ್ ಚಾಟ್ ಪ್ರತಿಲಿಪಿ ವೈಶಿಷ್ಟ್ಯವನ್ನು ಬಳಸಿದರೆ) ನೀವು ಏನನ್ನು ಚಾಟ್ ಮಾಡುತ್ತಿದ್ದೀರಿ ಅಥವಾ Snap ಮಾಡುತ್ತಿದ್ದೀರಿ ಎನ್ನುವುದು ನಮಗೆ ತಿಳಿದಿರುವುದಿಲ್ಲ.
ವೆಬ್‌ಗಾಗಿ Snapchat
ವೆಬ್‌ಗಾಗಿ Snapchat ನಿಮ್ಮ ಕಂಪ್ಯೂಟರ್‌ನ ಅನುಕೂಲದಿಂದ Snapchat ಆ್ಯಪ್ ಅನ್ನು ಅನುಭವಿಸಲು ನಿಮಗೆ ಅವಕಾಶ ಕಲ್ಪಿಸುತ್ತದೆ. ಪ್ರಾರಂಭಿಸಲು, ನಿಮ್ಮ Snapchat ರುಜುವಾತುಗಳೊಂದಿಗೆ ಸೈನ್ ಇನ್ ಮಾಡಿ. ಸೈನ್ ಇನ್ ಮಾಡಿದ ಬಳಿಕ, ಅದು ನೀವೇ ಆಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು, ನಾವು ನಿಮ್ಮ Snapchat ಆ್ಯಪ್‌ಗೆ ಪುಶ್ ಅಧಿಸೂಚನೆಯನ್ನು ಕಳುಹಿಸಬಹುದು.
ಒಮ್ಮೆ ನೀವು ಚಲಾಯಿಸಲು ಪ್ರಾರಂಭಿಸಿದಾಗ, Snapchat ಆ್ಯಪ್ ಅನುಭವವನ್ನೇ Snapchat ವೆಬ್ ಸಹಾ ಹೋಲುತ್ತದೆ ಎಂದು ನೀವು ಗಮನಿಸಬಹುದು, ಆದರೆ ಕೆಲವು ವ್ಯತ್ಯಾಸಗಳನ್ನು ನೀವು ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ಉದಾಹರಣೆಗೆ, ವೆಬ್‌ಗಾಗಿ Snapchat ನಲ್ಲಿ ನೀವು ಯಾರಿಗಾದರೂ ಕರೆ ಮಾಡುತ್ತಿದ್ದರೆ, ಆಯ್ದ ಲೆನ್ಸ್‌ಗಳಿಗೆ ಮಾತ್ರ ನೀವು ಪ್ರವೇಶವನ್ನು ಹೊಂದಿರುತ್ತೀರಿ ಮತ್ತು ಎಲ್ಲಾ ಕ್ರಿಯೇಟಿವ್ ಟೂಲ್ಸ್ ನಿಮಗೆ ಲಭ್ಯವಿರುವುದಿಲ್ಲ. ಅನುಸರಿಸಲು ನೀವು ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಬಹುದು ಮತ್ತು ಇನ್ನಷ್ಟು ತಿಳಿದುಕೊಳ್ಳಲು ಕೆಳಗಿನ ಸಂಪನ್ಮೂಲಗಳನ್ನು ಪರಿಶೀಲಿಸಿ!
Gen AI ✨
Generative AI is a type of technology that learns from large amounts of data and is designed to create new content – like text, images or visuals, and videos. Generative AI is part of the Snapchat experience and we are committed to its responsible development. We are constantly working on new ways to enhance our features with the use of generative AI to make Snapchat more interactive and personalized to you. For example, by offering generative AI Lenses that take you back to the 90s or imagine your next summer job. Many features are powered with generative AI, including My Selfies, AI Lenses, My AI (discussed in more detail below), Dreams, AI Snaps, and more
We may indicate that a feature or a piece of content is powered by generative AI by including a sparkle icon ✨, adding specific disclaimers, or tool tips. When you export or save your visual content, we add a Snap Ghost with sparkles ✨ to indicate that the visual was generated by AI.
We are constantly improving our technology. In order to do that, we may use the content and feedback you submit and the generated content to improve the quality and safety of our products and features. This includes improving the underlying machine learning models and algorithms that make our generative AI features work and may include both automated and manual (i.e., human) review or labeling of the content and any feedback you submit.
To make Snapchat’s generative AI features safe and meaningful for all users, please adhere to our Community Guidelines and our dos and don’ts of generative AI on Snapchat.
My AI
My AI ಅನ್ನುವುದು ಜನರೇಟಿವ್ AI ತಂತ್ರಜ್ಞಾನವನ್ನು ಆಧರಿಸಿ ನಿರ್ಮಿಸಿರುವ ಚಾಟ್‌ಬಾಟ್ ಆಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ. ನೀವು My AI ಜೊತೆಗೆ ನೇರವಾಗಿ ಚಾಟ್ ಮಾಡಬಹುದು ಅಥವಾ ಸಂಭಾಷಣೆಯಲ್ಲಿ My AI ಅನ್ನು @ ಉಲ್ಲೇಖ ಮಾಡಬಹುದು. ಜನರೇಟಿವ್ AI ಒಂದು ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನವಾಗಿದ್ದು ಪಕ್ಷಪಾತದಿಂದ ಕೂಡಿದ, ತಪ್ಪಾದ, ಹಾನಿಕರವಾದ ಅಥವಾ ದಾರಿತಪ್ಪಿಸುವ ಪ್ರತಿಕ್ರಿಯೆಗಳನ್ನು ಒದಗಿಸಬಹುದು. ಹಾಗಾಗಿ, ಅದರ ಸಲಹೆಯ ಮೇಲೆ ನೀವು ಅವಲಂಬಿತವಾಗಬಾರದು, ನೀವು ಯಾವುದೇ ಗೌಪ್ಯ ಅಥವಾ ಸೂಕ್ಷ್ಮ ಮಾಹಿತಿಯನ್ನು ಕೂಡ ಹಂಚಿಕೊಳ್ಳಬಾರದು — ನೀವು ಹಾಗೆ ಮಾಡಿದರೆ, ಅದನ್ನು My AI ಬಳಸುತ್ತದೆ.
My AI ಜೊತೆಗಿನ ನಿಮ್ಮ ಸಂಭಾಷಣೆಗಳು ನಿಮ್ಮ ಸ್ನೇಹಿತರ ಜೊತೆಗಿನ ಚಾಟ್‌ಗಳು ಮತ್ತು Snap ಗಳಿಗಿಂತ ಭಿನ್ನವಾಗಿ ಕೆಲಸ ಮಾಡುತ್ತವೆ — ಆ್ಯಪ್‌ನಲ್ಲಿ ಕಂಟೆಂಟ್ ಅಳಿಸುವ ತನಕ ಅಥವಾ ನಿಮ್ಮ ಖಾತೆಯನ್ನು ಅಳಿಸುವ ತನಕ ನೀವು My AI ಗೆ ಕಳುಹಿಸುವ ಮತ್ತು ಅದರಿಂದ ಸ್ವೀಕರಿಸುವ ಕಂಟೆಂಟ್ ಅನ್ನು (ಉದಾಹರಣೆಗೆ Snap ಗಳು ಮತ್ತು ಚಾಟ್‌ಗಳಂತಹವು) ನಾವು ಉಳಿಸಿಕೊಳ್ಳುತ್ತೇವೆ. ನೀವು My AI ಜೊತೆಗೆ ಸಂವಹನ ನಡೆಸಿದಾಗ, My AI ನ ಸುರಕ್ಷತೆ ಮತ್ತು ಭದ್ರತೆಯನ್ನು ವರ್ಧಿಸಲು ಮತ್ತು ಜಾಹೀರಾತುಗಳು ಸೇರಿದಂತೆ ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಲು ಸೇರಿದಂತೆ, Snap ನ ಉತ್ಪನ್ನಗಳನ್ನು ಸುಧಾರಿಸಲು ನೀವು ಹಂಚಿಕೊಳ್ಳುವ ಕಂಟೆಂಟ್ ಮತ್ತು ನಿಮ್ಮ ಸ್ಥಳವನ್ನು(ನಿಮ್ಮ ಸ್ಥಳ ಹಂಚಿಕೆಯನ್ನು ಸಕ್ರಿಯಗೊಳಿಸಿದ್ದಲ್ಲಿ) ನಾವು ಬಳಸುತ್ತೇವೆ.
My AI ಅದರ ಪ್ರತಿಕ್ರಿಯೆಗಳಲ್ಲಿ ನಿಮ್ಮ ಸ್ಥಳವನ್ನು ಅಥವಾ My AI ಗಾಗಿ ನೀವು ಹೊಂದಿಸುವ ಬಯೋ ಅನ್ನು ಕೂಡ ಉಲ್ಲೇಖಿಸಬಹುದು (ನೀವು My AI ಅನ್ನು @ ಉಲ್ಲೇಖ ಮಾಡುವ ಸಂಭಾಷಣೆಗಳಲ್ಲಿ ಸೇರಿದಂತೆ).
ನೀವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನೀವು My AI ಜೊತೆಗೆ ಚಾಟ್ ಮಾಡಿದ್ದೀರಾ ಎನ್ನುವುದನ್ನು ನೋಡಲು ಹಾಗೂ My AI ಗೆ ನಿಮ್ಮ ಪ್ರವೇಶವನ್ನು ಆನ್ ಅಥವಾ ಆಫ್ ಮಾಡಲು, ನಿಮ್ಮ ಪೋಷಕ ಅಥವಾ ಪಾಲಕರಂತಹ — ವಿಶ್ವಾಸಾರ್ಹ ವಯಸ್ಕರು — ಕೌಟುಂಬಿಕ ಕೇಂದ್ರವನ್ನು ಬಳಸಬಹುದು. ವಿಶ್ವಾಸಾರ್ಹ ವಯಸ್ಕರು My AI ಜೊತೆಗಿನ ನಿಮ್ಮ ಚಾಟ್‌ಗಳ ಕಂಟೆಂಟ್ ಅನ್ನು ನೋಡಲಾರರು.
My AI ಅನ್ನು ಒದಗಿಸಲು, ನಾವು ನಮ್ಮ ಸೇವಾ ಪೂರೈಕೆದಾರರು ಮತ್ತು ಜಾಹೀರಾತು ನೀಡುವಿಕೆ ಪಾಲುದಾರರೊಂದಿಗೆ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.
My AI ಸುಧಾರಣೆ ಮಾಡಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. My AI ನಿಂದ ಯಾವುದೇ ಪ್ರತಿಕ್ರಿಯೆಗಳು ನಿಮಗೆ ಇಷ್ಟವಾಗದಿದ್ದರೆ, ದಯವಿಟ್ಟು ನಮಗೆ ತಿಳಿಸಿ.
ಇನ್ನಷ್ಟು ತಿಳಿಯಲು ಕೆಳಗಿನ ಸಂಪನ್ಮೂಲಗಳನ್ನು ಪರಿಶೀಲಿಸಿ!
ಕಥೆಗಳು
ನಿಮ್ಮ ಆದ್ಯತೆಯ ಪ್ರೇಕ್ಷಕರೊಂದಿಗೆ ನಿಮ್ಮ ಕ್ಷಣಗಳನ್ನು ಹಂಚಿಕೊಳ್ಳಲು ನಿಮಗೆ ಅವಕಾಶ ಕಲ್ಪಿಸುವುದಕ್ಕೆ Snapchat ನಲ್ಲಿ ಕೆಲವು ಭಿನ್ನ ರೀತಿಯ ಕಥೆಗಳಿವೆ. ಪ್ರಸ್ತುತ, ಈ ಕೆಳಗಿನ ಕಥೆ ವಿಧಗಳನ್ನು ನಾವು ಒದಗಿಸುತ್ತೇವೆ:
ಖಾಸಗಿ ಕಥೆ. ನೀವು ಕೆಲವೇ ಸ್ನೇಹಿತರೊಂದಿಗೆ ಮಾತ್ರ ಒಂದು ಕಥೆ ಹಂಚಿಕೊಳ್ಳಲು ಬಯಸಿದರೆ, ನೀವು ಖಾಸಗಿ ಕಥೆ ಆಯ್ಕೆಯನ್ನು ಆರಿಸಬಹುದು.
BFF ಕಥೆ. ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಮಾತ್ರ ನಿಮ್ಮ ಕಥೆ ಹಂಚಿಕೊಳ್ಳಲು ನೀವು ಬಯಸಿದರೆ, ನೀವು BFF ಕಥೆ ಸ್ವರೂಪವನ್ನು ಆಯ್ಕೆ ಮಾಡಬಹುದು.
ನನ್ನ ಕಥೆ - ಸ್ನೇಹಿತರು. ನನ್ನ ಕಥೆ - ಸ್ನೇಹಿತರು: ನಿಮ್ಮ ಎಲ್ಲ ಸ್ನೇಹಿತರೊಂದಿಗೆ ಒಂದು ಕಥೆ ಹಂಚಿಕೊಳ್ಳಲು ನಿಮಗೆ ಅವಕಾಶ ಕಲ್ಪಿಸುತ್ತದೆ. ನೀವು ಸೆಟ್ಟಿಂಗ್‌ಗಳಲ್ಲಿ 'ನನ್ನ ಕಥೆ'ಯ ವೀಕ್ಷಣೆಯನ್ನು 'ಸ್ನೇಹಿತರು'ಇಂದ 'ಎಲ್ಲರಿಗೂ'ಗೆ ಹೊಂದಿಸಿದರೆ, ನಿಮ್ಮ 'ನನ್ನ ಕಥೆ'ಯನ್ನು ಸಾರ್ವಜನಿಕ ಎಂದು ಪರಿಗಣಿಸಲಾಗುತ್ತದೆ ಮತ್ತು ಎಲ್ಲರಿಗೂ ಕಾಣಿಸಬಹುದು.
ಹಂಚಿಕೊಂಡ ಕಥೆಗಳು. ಹಂಚಿಕೊಂಡ ಕಥೆಗಳು ನೀವು ಮತ್ತು ಇತರ Snapchatter ಗಳ ಗುಂಪಿನ ನಡುವಿನ ಕಥೆಗಳಾಗಿವೆ.
ಕಮ್ಯುನಿಟಿ ಕಥೆಗಳು. ನೀವು Snapchat ನಲ್ಲಿ ಒಂದು ಸಮುದಾಯದ ಭಾಗವಾಗಿದ್ದರೆ, ನೀವು ಕಮ್ಯುನಿಟಿ ಕಥೆಗೆ ಸಲ್ಲಿಸಬಹುದು. ಈ ಕಂಟೆಂಟ್ ಅನ್ನು ಕೂಡ ಸಾರ್ವಜನಿಕ ಎಂದು ಪರಿಗಣಿಸಲಾಗುತ್ತದೆ ಮತ್ತು ಸಮುದಾಯದ ಸದಸ್ಯರು ನೋಡಬಹುದು.
ನನ್ನ ಕಥೆ - ಸಾರ್ವಜನಿಕ. ನಿಮ್ಮ ಕಥೆ ಸಾರ್ವಜನಿಕವಾಗಬೇಕು ಮತ್ತು ವ್ಯಾಪಕವಾದ ಪ್ರೇಕ್ಷಕರನ್ನು ತಲುಪಬೇಕು ಎಂದು ನೀವು ಬಯಸುವುದಾದರೆ, ನೀವು ನಿಮ್ಮ ಕಥೆಯನ್ನು 'ನನ್ನ ಕಥೆ ಸಾರ್ವಜನಿಕ'ಕ್ಕೆ ಸಲ್ಲಿಸಬಹುದು ಮತ್ತು ಅದು Discover ನಂತಹ ಆ್ಯಪ್‌ನ ಇತರ ಭಾಗಗಳಲ್ಲಿ ಪ್ರದರ್ಶಿತವಾಗಬಹುದು.
Snap ಮ್ಯಾಪ್. Snap ಮ್ಯಾಪ್‌ಗೆ ಸಲ್ಲಿಸಿದ ಕಥೆಗಳು ಸಾರ್ವಜನಿಕವಾಗಿರುತ್ತವೆ ಮತ್ತು Snap ಮ್ಯಾಪ್‌ನಲ್ಲಿ ಮತ್ತು Snapchat ಹೊರಗೆ ಪ್ರದರ್ಶಿಸಲು ಅರ್ಹವಾಗಿರುತ್ತವೆ.
ನೀವು ಸೆಟ್ಟಿಂಗ್‌ಗಳನ್ನು ಬದಲಾಯಿಸದ ಹೊರತು, ನಿಮ್ಮ ಸಾರ್ವಜನಿಕ ಪ್ರೊಫೈಲ್‌ಗೆ ಕಥೆಯನ್ನು ಉಳಿಸದ ಹೊರತು ಅಥವಾ ನೀವು ಅಥವಾ ಒಬ್ಬ ಸ್ನೇಹಿತ/ತೆ ಅದನ್ನು ಚಾಟ್‌ನಲ್ಲಿ ಉಳಿಸದ ಹೊರತು, ಬಹುತೇಕ ಕಥೆಗಳನ್ನು 24 ಗಂಟೆಗಳ ಬಳಿಕ ಅಳಿಸಲು ಹೊಂದಿಸಲಾಗಿರುತ್ತದೆ. ನೀವು ಕಥೆ ಪೋಸ್ಟ್ ಮಾಡಿದಾಗ, ನಿಮ್ಮ ಸ್ನೇಹಿತರು ಮತ್ತು ಇತರರು ಅದರೊಂದಿಗೆ ಸಂವಾದ ನಡೆಸಬಹುದು. ಉದಾಹರಣೆಗೆ, ನೀವು ಬಳಸಿದ ಅದೇ ಲೆನ್ಸ್ ಅನ್ನು ಅವರು ಬಳಸಬಹುದು, Snap ಅನ್ನು ರೀಮಿಕ್ಸ್ ಮಾಡಬಹುದು ಅಥವಾ ಸ್ನೇಹಿತರು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದು.
ನೆನಪಿಡಿ: ಯಾರು ಬೇಕಿದ್ದರೂ ಕಥೆಯ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು ಅಥವಾ ರೆಕಾರ್ಡ್ ಮಾಡಬಹುದು!
ಪ್ರೊಫೈಲ್‌ಗಳು
ನೀವು ಅತ್ಯಂತ ಕಾಳಜಿ ವಹಿಸುವ ಮಾಹಿತಿ ಮತ್ತು Snapchat ವೈಶಿಷ್ಟ್ಯಗಳನ್ನು ಕಂಡುಕೊಳ್ಳಲು ಪ್ರೊಫೈಲ್‌ಗಳು ಸುಲಭವಾಗಿಸುತ್ತವೆ. Snapchat ನಲ್ಲಿ ನನ್ನ ಪ್ರೊಫೈಲ್, ಸ್ನೇಹದ ಪ್ರೊಫೈಲ್‌ಗಳು, ಗುಂಪು ಪ್ರೊಫೈಲ್‌ಗಳು ಮತ್ತು ಸಾರ್ವಜನಿಕ ಪ್ರೊಫೈಲ್‌ಗಳು ಸೇರಿದಂತೆ ವಿವಿಧ ಬಗೆಯ ಪ್ರೊಫೈಲ್‌ಗಳಿವೆ.
ನನ್ನ ಪ್ರೊಫೈಲ್ Snapchat ನ ನಿಮ್ಮ Bitmoji, ಮ್ಯಾಪ್‌ನಲ್ಲಿನ ಸ್ಥಳ, ಸ್ನೇಹಿತರ ಮಾಹಿತಿ ಮತ್ತು ಹೆಚ್ಚಿನ ಮಾಹಿತಿಯನ್ನು ಒಳಗೊಂಡಿದೆ. ಸ್ನೇಹದ ಪ್ರೊಫೈಲ್ ಪ್ರತಿ ಸ್ನೇಹಕ್ಕೆ ವಿಶಿಷ್ಟವಾಗಿದ್ದು, ಇಲ್ಲಿ ನೀವು ಉಳಿಸಿದ Snap ಗಳು ಮತ್ತು ಚಾಟ್‌ಗಳನ್ನು, ನಿಮ್ಮ ಸ್ನೇಹಿತರ Bitmoji ಮತ್ತು ಮ್ಯಾಪ್‌ನಲ್ಲಿ ಸ್ಥಳದಂತಹ (ಅವರು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರೆ) ನಿಮ್ಮ ಸ್ನೇಹಿತರ Snapchat ಮಾಹಿತಿಯನ್ನು ಕಂಡುಕೊಳ್ಳಬಹುದು ಮತ್ತು ಇಲ್ಲಿ ನೀವು ನಿಮ್ಮ ಸ್ನೇಹವನ್ನು ನಿರ್ವಹಿಸಬಹುದು, ಸ್ನೇಹಿತರನ್ನು ವರದಿ ಮಾಡಬಹುದು, ನಿರ್ಬಂಧಿಸಬಹುದು ಅಥವಾ ತೆಗೆದುಹಾಕಲೂಬಹುದು. ಗುಂಪಿನ ಪ್ರೊಫೈಲ್‌ಗಳು ಗುಂಪು ಚಾಟ್‌ನಲ್ಲಿ ನಿಮ್ಮ ಉಳಿಸಿದ Snap ಗಳು ಮತ್ತು ಚಾಟ್‌ಗಳನ್ನು ಮತ್ತು ನಿಮ್ಮ ಸ್ನೇಹಿತರ Snapchat ಮಾಹಿತಿಯನ್ನು ಪ್ರದರ್ಶಿಸುತ್ತವೆ.
ಸಾರ್ವಜನಿಕ ಕಥೆಗಳು Snapchat ನಲ್ಲಿ Snapchatter ಗಳನ್ನು ಕಂಡುಹಿಡಿಯಲು ಅವಕಾಶ ಕಲ್ಪಿಸುತ್ತವೆ. ಬಹುತೇಕ ಪ್ರದೇಶಗಳಲ್ಲಿ, ನೀವು 18 ಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ನೀವು ಸಾರ್ವಜನಿಕ ಪ್ರೊಫೈಲ್‌ಗೆ ಅರ್ಹರಾಗಿರುತ್ತೀರಿ. ಸಾರ್ವಜನಿಕ ಪ್ರೊಫೈಲ್ ಬಳಸುವಾಗ, ನೀವು ನಿಮ್ಮ ನೆಚ್ಚಿನ ಸಾರ್ವಜನಿಕ ಕಥೆಗಳು, ಸ್ಪಾಟ್‌ಲೈಟ್‌ಗಳು, ಲೆನ್ಸ್‌ಗಳು ಮತ್ತು ಇತರ ಮಾಹಿತಿಯನ್ನು ಪ್ರದರ್ಶಿಸಬಹುದು. ಇತರ Snapchatter ಗಳಿಗೆ ನಿಮ್ಮ ಸಾರ್ವಜನಿಕ ಪ್ರೊಫೈಲ್ ಅನುಸರಿಸಲು ಸಾಧ್ಯವಾಗುತ್ತದೆ. ನಿಮ್ಮ ಫಾಲೋವರ್ ಎಣಿಕೆಯನ್ನು ಪೂರ್ವನಿಯೋಜಿತವಾಗಿ ಆಫ್ ಮಾಡಲಾಗುತ್ತದೆ, ಆದರೆ ನೀವು ಬಯಸಿದರೆ ಅದನ್ನು ಸೆಟ್ಟಿಂಗ್‌ಗಳಲ್ಲಿ ಆನ್ ಮಾಡಬಹುದು.
ಸ್ಪಾಟ್‌ಲೈಟ್
ಸ್ಪಾಟ್‌ಲೈಟ್ ನಿಮಗೆ Snapchat ಜಗತ್ತನ್ನು ಒಂದೇ ಸ್ಥಳದಲ್ಲಿ ಅನ್ವೇಷಿಸಲು ಅನುಮತಿಸುತ್ತದೆ ಮತ್ತು ಹೆಚ್ಚು ಮನರಂಜನೆಯ Snap ಗಳನ್ನು ಯಾರೇ ಸೃಷ್ಟಿಸಿದರೂ ಅದರ ಮೇಲೆ ಬೆಳಕು ಚೆಲ್ಲುತ್ತದೆ!
ಸ್ಪಾಟ್‌ಲೈಟ್‌ಗೆ ಸಲ್ಲಿಸಿದ Snap ಗಳು ಮತ್ತು ಕಾಮೆಂಟ್‌ಗಳು ಸಾರ್ವಜನಿಕವಾಗಿರುತ್ತವೆ ಮತ್ತು Snapchat ನಲ್ಲಿ ಮತ್ತು ಹೊರಗೆ ಎರಡೂ ಕಡೆ ಅವುಗಳನ್ನು ಹಂಚಿಕೊಳ್ಳಲು ಅಥವಾ ಸ್ಪಾಟ್‌ಲೈಟ್ Snap ಗಳನ್ನು 'ರೀಮಿಕ್ಸ್' ಮಾಡಲೂ ಸಹ ಇತರ Snapchatter ಗಳಿಗೆ ಸಾಧ್ಯವಾಗಬಹುದು. ಉದಾಹರಣೆಗೆ, ನಿಮ್ಮ ವಿನೋದದ ನೃತ್ಯದ Snap ಅನ್ನು ಅವರು ತೆಗೆದುಕೊಳ್ಳಬಹುದು ಮತ್ತು ಅದರ ಮೇಲೆ ಒಂದು ಪ್ರತಿಕ್ರಿಯೆಯನ್ನು ಲೇಯರ್ ಮಾಡಬಹುದು. ನೀವು ಸಲ್ಲಿಸಿದ ಸ್ಪಾಟ್‌ಲೈಟ್ Snap ಗಳ ಅವಲೋಕನವನ್ನು ನಿಯಂತ್ರಿಸಲು ಮತ್ತು ನೋಡಲು ನಿಮ್ಮ ಪ್ರೊಫೈಲ್‌ನಲ್ಲಿ ನಿಮಗೆ ಸಾಧ್ಯವಾಗುತ್ತದೆ. ನೀವು ಸ್ಪಾಟ್‌ಲೈಟ್ ಕಂಟೆಂಟ್ ಅನ್ನು ಮೆಚ್ಚಿನದಾಗಿ ಕೂಡ ಮಾಡಬಹುದು ಮತ್ತು ಹಾಗೆ ಮಾಡಿದಾಗ, ನಾವು ಅದನ್ನು ಮೆಚ್ಚಿನವುಗಳ ಪಟ್ಟಿಗೆ ಸೇರಿಸುತ್ತೇವೆ ಮತ್ತು ನಿಮ್ಮ ಸ್ಪಾಟ್‌ಲೈಟ್ ಅನುಭವವನ್ನು ವೈಯಕ್ತಿಕಗೊಳಿಸಲು ಅದನ್ನು ಬಳಸುತ್ತೇವೆ.
ನೀವು ಸ್ಪಾಟ್‌ಲೈಟ್‌ನಲ್ಲಿ ಕಂಟೆಂಟ್ ಅನ್ನು ಅನ್ವೇಷಿಸಿದಂತೆ ಮತ್ತು ಅದರೊಂದಿಗೆ ತೊಡಗಿಕೊಂಡಂತೆ, ನಾವು ನಿಮ್ಮ ಸ್ಪಾಟ್‌ಲೈಟ್ ಅನುಭವವನ್ನು ತಕ್ಕುದಾಗಿಸುತ್ತೇವೆ ಮತ್ತು ನೀವು ಇಷ್ಟಪಡಬಹುದು ಎಂದು ನಾವು ಭಾವಿಸುವ ಇನ್ನಷ್ಟು ಕಂಟೆಂಟ್ ಅನ್ನು ನಿಮಗೆ ತೋರಿಸುತ್ತೇವೆ. ಉದಾಹರಣೆಗೆ, ನೃತ್ಯ ಸವಾಲುಗಳನ್ನು ವೀಕ್ಷಿಸುವುದು ನಿಮ್ಮ ಅಚ್ಚುಮೆಚ್ಚಿನದಾಗಿದ್ದರೆ, ನಾವು ನಿಮಗೆ ಇನ್ನಷ್ಟು ನೃತ್ಯ-ಸಂಬಂಧಿತ ಕಂಟೆಂಟ್ ಅನ್ನು ತೋರಿಸುತ್ತೇವೆ. ನೀವು ಒಂದು ಸ್ಪಾಟ್‌ಲೈಟ್ Snap ಅನ್ನು ಹಂಚಿಕೊಂಡಿರಿ, ಶಿಫಾರಸು ಮಾಡಿದಿರಿ ಅಥವಾ ಕಾಮೆಂಟ್ ಮಾಡಿದಿರಿ ಎನ್ನುವುದನ್ನು ನಾವು ನಿಮ್ಮ ಸ್ನೇಹಿತರಿಗೂ ತಿಳಿಸಬಹುದು.
ನೀವು Spotlight ಗೆ Snap ಗಳನ್ನು ಸಲ್ಲಿಸಿದಾಗ, ನಮ್ಮ ಸಮುದಾಯ ಮಾರ್ಗಸೂಚಿಗಳು, ಸ್ಪಾಟ್‌ಲೈಟ್ ನಿಯಮಗಳು ಮತ್ತು ಸ್ಪಾಟ್‌ಲೈಟ್ ಮಾರ್ಗಸೂಚಿಗಳ ಜೊತೆಗೆ ಅನುಸರಣೆ ಮಾಡುವಂತೆ ನಾವು ನಿಮ್ಮನ್ನು ಕೇಳುತ್ತೇವೆ. ನೀವು ಅಳಿಸುವ ತನಕ ನಿಮ್ಮ ಸ್ಪಾಟ್‌ಲೈಟ್ ಸಲ್ಲಿಕೆಗಳನ್ನು ನಮ್ಮ ಸರ್ವರ್‌ಗಳಲ್ಲಿ ಉಳಿಸಲಾಗುತ್ತದೆ ಮತ್ತು ದೀರ್ಘಾವಧಿಯವರೆಗೆ Snapchat ನಲ್ಲಿ ಕಾಣಿಸಬಹುದು. ನೀವು ಸ್ಪಾಟ್‌ಲೈಟ್‌ಗೆ ಸಲ್ಲಿಸಿದ ಒಂದು Snap ಅನ್ನು ನೀವು ತೆಗೆದುಹಾಕಲು ಬಯಸಿದರೆ, ನಿಮ್ಮ ಪ್ರೊಫೈಲ್‌ಗೆ ಹೋಗುವ ಮೂಲಕ ನೀವು ಹಾಗೆ ಮಾಡಬಹುದು.
ನೆನಪುಗಳು
ನೀವು ಉಳಿಸಿದ Snap ಗಳತ್ತ ಹಿಂತಿರುಗಿ ನೋಡಲು ಮತ್ತು ಎಡಿಟ್ ಮಾಡಿ ಅವುಗಳನ್ನು ಮರುಕಳುಹಿಸಲು ಕೂಡ ನೆನಪುಗಳು ಸುಲಭವಾಗಿಸುತ್ತವೆ! ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸುವ ಸಲುವಾಗಿ ನೆನಪುಗಳಿಗೆ (ಹಾಗೂ ನೀವು ನಿಮ್ಮ ಸಾಧನದ ಕ್ಯಾಮೆರಾ ರೋಲ್ ಗೆ ನಮಗೆ ಪ್ರವೇಶ ಒದಗಿಸಿದ್ದರೆ, ಅದರಲ್ಲಿ ಕೂಡ) ಉಳಿಸಿದ ಕಂಟೆಂಟ್‌ಗೆ Snapchat ನ ಮಾಂತ್ರಿಕತೆಯನ್ನು ನಾವು ಸೇರಿಸುತ್ತೇವೆ. ಕಂಟೆಂಟ್ ಆಧರಿಸಿದ ಲೇಬಲ್‌ಗಳನ್ನು ಸೇರಿಸುವ ಮೂಲಕ ನಾವು ಇದನ್ನು ಮಾಡುತ್ತೇವೆ, ಇದರಿಂದಾಗಿ ಅದನ್ನು ನೀವು ಸುಲಭವಾಗಿ ಹುಡುಕಬಹುದು ಮತ್ತು ನೀವು ಯಾವ ವಿಧದ ಕಂಟೆಂಟ್‌ನಲ್ಲಿ ಆಸಕ್ತರಾಗಿದ್ದೀರಿ ಎಂದು ನಮಗೆ ಮಾಹಿತಿ ನೀಡಬಹುದು ಇದರಿಂದಾಗಿ ನೆನಪುಗಳಲ್ಲಿ ಅಥವಾ ಸ್ಪಾಟ್‌ಲೈಟ್‌ನಂತಹ, ನಮ್ಮ ಸೇವೆಗಳ ಇತರ ಭಾಗಗಳಲ್ಲಿ ನಾವು ಅದೇ ರೀತಿಯ ಕಂಟೆಂಟ್ ಅನ್ನು ಹುಡುಕಬಹುದು. ಉದಾಹರಣೆಗೆ, ನೆನಪುಗಳಲ್ಲಿ ನೀವು ನಿಮ್ಮ ನಾಯಿಯ ಬಹಳಷ್ಟು Snap ಗಳನ್ನು ಉಳಿಸಿದರೆ ಒಂದು ನಾಯಿಯಿದೆ ಎಂಬುದನ್ನು ನಾವು ಗುರುತಿಸಬಹುದು ಮತ್ತು ಮುದ್ದಾದ ನಾಯಿ ಆಟಿಕೆಗಳ ಕುರಿತು ಸ್ಪಾಟ್‌ಲೈಟ್ Snap ಗಳು ಅಥವಾ ಜಾಹೀರಾತುಗಳನ್ನು ನಿಮಗೆ ತೋರಿಸುವ ಮೂಲಕ ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಬಹುದು!
ಹೊಸ ಟ್ವಿಸ್ಟ್‌ನೊಂದಿಗೆ — ಉದಾಹರಣೆಗೆ ಒಂದು ವಿನೋದದ ಲೆನ್ಸ್‌ನೊಂದಿಗೆ! — ನಿಮ್ಮ ಸ್ನೇಹಿತರ ಜೊತೆಗೆ ನಿಮ್ಮ ನೆನಪುಗಳು ಮತ್ತು ಕ್ಯಾಮೆರಾ ರೋಲ್ ಹಂಚಿಕೊಳ್ಳಲು ಕೂಡ ನಾವು ವಿಧಾನಗಳನ್ನು ಸೂಚಿಸಬಹುದು, ಆದರೆ ಯಾವಾಗ ಮತ್ತು ಎಲ್ಲಿ ಹಂಚಿಕೊಳ್ಳಬೇಕು ಎನ್ನುವುದನ್ನು ನೀವು ನಿರ್ಧರಿಸುತ್ತೀರಿ. ನಿಮ್ಮ ಎಲ್ಲ ನೆನಪುಗಳ ಮೂಲಕ ನ್ಯಾವಿಗೇಟ್ ಮಾಡಲು ಕೂಡ ನಾವು ನಿಮಗೆ ಸಹಾಯ ಮಾಡುತ್ತೇವೆ, ಉದಾಹರಣೆಗೆ ನಿರ್ದಿಷ್ಟ ಸಮಯ ಅಥವಾ ಸ್ಥಳದ ಸುತ್ತ ಅವುಗಳನ್ನು ಗುಂಪುಗೂಡಿಸುವ ಮೂಲಕ, ಇದರಿಂದಾಗಿ ನಿಮ್ಮ ನೆಚ್ಚಿನ ನೆನಪುಗಳನ್ನು ಒಳಗೊಂಡಿರುವ ಕಥೆಗಳು ಅಥವಾ ಸ್ಪಾಟ್‌ಲೈಟ್ Snap ಗಳನ್ನು ನೀವು ಸುಲಭವಾಗಿ ಸೃಷ್ಟಿಸಬಹುದು.
ನೆನಪುಗಳನ್ನು ಆನ್‌ಲೈನ್‌ನಲ್ಲಿ ಬ್ಯಾಕಪ್ ಮಾಡುವುದು ಅವುಗಳು ಕಳೆದುಹೋಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ, ಆದರೆ ಅದರರ್ಥ ನೀವು ನಿಮ್ಮ ಗೌಪ್ಯತೆ ಅಥವಾ ಸುರಕ್ಷತೆಯನ್ನು ತ್ಯಾಗ ಮಾಡಬೇಕು ಎಂದಲ್ಲ. ಹಾಗಾಗಿಯೇ ನಾವು "ನನ್ನ ಕಣ್ಣುಗಳಿಗೆ ಮಾತ್ರ" ಅನ್ನು ಮಾಡಿದ್ದೇವೆ, ಇದು ನಿಮ್ಮ Snap ಗಳನ್ನು ಸುರಕ್ಷಿತವಾಗಿ ಮತ್ತು ಎನ್‌ಕ್ರಿಪ್ಟ್ ಮಾಡಿ ಇರಿಸುತ್ತದೆ ಮತ್ತು ನೀವು ಆಯ್ಕೆ ಮಾಡಿದ ಪಾಸ್‌ವರ್ಡ್‌ನಿಂದ ರಕ್ಷಿಸಲು ಅನುವು ಮಾಡಿಕೊಡುತ್ತದೆ. ಆ ರೀತಿಯಲ್ಲಿ, ಯಾರಾದರೂ ನಿಮ್ಮ ಸಾಧನವನ್ನು ಕದ್ದರೆ ಮತ್ತು ಯಾವುದೇ ರೀತಿಯಲ್ಲಿ ನಿಮ್ಮ Snapchat ಗೆ ಲಾಗಿನ್ ಆದರೆ, ಆ ಖಾಸಗಿ Snap ಗಳು ಆಗಲೂ ಸುರಕ್ಷಿತವಾಗಿರುತ್ತವೆ. ನನ್ನ ಕಣ್ಣುಗಳಿಗೆ ಮಾತ್ರ ಎಂಬುದರಲ್ಲಿ ಉಳಿಸಿದ ಬಳಿಕ ಪಾಸ್‌ವರ್ಡ್ ಇಲ್ಲದೆ, ಯಾರೂ ಕೂಡ ಈ ವಿಷಯಗಳನ್ನು ನೋಡಲಾಗದು — ನಾವೂ ಕೂಡ! ಆದರೂ ಜಾಗರೂಕರಾಗಿರಿ, ಏಕೆಂದರೆ, ಒಂದು ವೇಳೆ ನೀವು ನಿಮ್ಮ ಪಾಸ್‌ವರ್ಡ್ ಅನ್ನು ಮರೆತರೆ, ಎನ್‌ಕ್ರಿಪ್ಟ್ ಮಾಡಿದ Snap ಗಳನ್ನು ಮರುಪಡೆಯಲು ಯಾವುದೇ ಮಾರ್ಗವಿಲ್ಲ.
ಹೆಚ್ಚುವರಿಯಾಗಿ, ನೆನಪುಗಳಲ್ಲಿ ನೀವು ಮತ್ತು ನಿಮ್ಮ ಸ್ನೇಹಿತರೊಂದಿಗೆ AI ರಚಿಸಿದ ಭಾವಚಿತ್ರಗಳನ್ನು ಕೂಡ ನೀವು ನೋಡಬಹುದು. ಈ ಭಾವಚಿತ್ರಗಳನ್ನು ಸೃಷ್ಟಿಸಲು ನೀವು ಅಪ್‌ಲೋಡ್ ಮಾಡುವ ಸೆಲ್ಫೀಗಳನ್ನು ನಿಮ್ಮ ಮತ್ತು ನಿಮ್ಮ ಸ್ನೇಹಿತರ ಆಸಕ್ತಿಕರ ಚಿತ್ರಗಳನ್ನು ಸೃಷ್ಟಿಸಲು ಜನರೇಟಿವ್ AI ಸಹಾಯದೊಂದಿಗೆ ಬಳಸಲಾಗುತ್ತದೆ.
ಲೆನ್ಸ್‌ಗಳು
ಲೆನ್ಸ್‌ಗಳು ನಿಮಗೆ ನಾಯಿಮರಿಯ ಕಿವಿಗಳನ್ನು ಹೇಗೆ ನೀಡುತ್ತವೆ ಮತ್ತು ನಿಮ್ಮ ಕೂದಲಿನ ಬಣ್ಣವನ್ನು ಹೇಗೆ ಬದಲಾಯಿಸುತ್ತವೆ ಎಂದು ಎಂದಾದರೂ ಆಶ್ಚರ್ಯಪಟ್ಟಿದ್ದೀರಾ?
ಲೆನ್ಸ್‌ಗಳ ಹಿಂದಿನ ಕೆಲವು ಮ್ಯಾಜಿಕ್‌ಗೆ "ವಸ್ತು ಗುರುತಿಸುವಿಕೆ" ಕಾರಣವಾಗಿದೆ. ವಸ್ತು ಗುರುತಿಸುವಿಕೆ ಎನ್ನುವುದು ಒಂದು ಆಲ್ಗಾರಿದಂ ಆಗಿದ್ದು, ಒಂದು ಚಿತ್ರದಲ್ಲಿ ಯಾವ ವಸ್ತುಗಳಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಕಂಪ್ಯೂಟರ್‌ಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಸಂದರ್ಭದಲ್ಲಿ, ಇದು ಮೂಗನ್ನು ಮೂಗು ಅಥವಾ ಕಣ್ಣನ್ನು ಕಣ್ಣು ಎಂದು ನಮಗೆ ತಿಳಿಸುತ್ತದೆ.
ಆದರೆ, ವಸ್ತು ಪತ್ತೆ ಅನ್ನುವುದು ನಿಮ್ಮ ಮುಖವನ್ನು ಗುರುತಿಸುವಂತೆ ಅಲ್ಲ. ಯಾವುದು ಮುಖ ಮತ್ತು ಯಾವುದು ಮುಖವಲ್ಲ ಎಂದು ಲೆನ್ಸ್‌ಗಳು ಹೇಳಬಲ್ಲವಾದರೂ, ನಿರ್ದಿಷ್ಟ ಮುಖಗಳನ್ನು ಅವು ಗುರುತಿಸಲಾರವು!
ವಿನೋದಮಯ ಅನುಭವಗಳನ್ನು ಸೃಷ್ಟಿಸಲು ಮತ್ತು ನಿಮ್ಮ ಚಿತ್ರ ಹಾಗೂ ಅನುಭವವನ್ನು ವಿಶೇಷವಾದುದಕ್ಕೆ ಪರಿವರ್ತಿಸಲು ನಮ್ಮ ಹಲವು ಲೆನ್ಸ್‌ಗಳು ಜನರೇಟಿವ್ AI ಮೇಲೆ ಅವಲಂಬಿತವಾಗಿವೆ.