
ಸುರಕ್ಷತಾ ಕಳವಳವೊಂದನ್ನು ವರದಿ ಮಾಡಿ
ನಿಮಗೆ ಅಹಿತಕರವಾದದ್ದು ಕಂಡುಬಂದಾಗ ನಮ್ಮನ್ನು ಸಂಪರ್ಕಿಸುವುದು Snapchat ನಲ್ಲಿ ಸಂಭಾವ್ಯತಃ ಹಾನಿಕರವಾದ ಕಂಟೆಂಟ್ ಮತ್ತು ಚಟುವಟಿಕೆಯನ್ನು ಮಿತಿಗೊಳಿಸಲು ಸಹಾಯ ಮಾಡಲು ನೀವು ಮಾಡಬಹುದಾದ ಪ್ರಮುಖ ಕಾರ್ಯಗಳ ಪೈಕಿ ಒಂದಾಗಿದೆ. ನೀವು ಮಾಡಬೇಕಾದುದು ಇಷ್ಟೇ, ಕಂಟೆಂಟ್‌ನ ತುಣುಕು ಅಥವಾ ಚಾಟ್ ಸಂದೇಶವನ್ನು ಒತ್ತಿ ಹಿಡಿದುಕೊಳ್ಳಿ, ಒಂದು ಮೆನು ಕಾಣಿಸಿಕೊಳ್ಳುತ್ತದೆ. ನಂತರ, ಆಯ್ಕೆಗಳ ಪಟ್ಟಿಯನ್ನು ನೋಡಲು “ವರದಿ ಮಾಡಿ” ಅನ್ನು ಟ್ಯಾಪ್ ಮಾಡಿ. ನಂತರ ಕೆಲವು ಮಾಹಿತಿಯನ್ನು ಒದಗಿಸುವಂತೆ ನಿಮಗೆ ಸೂಚಿಸಲಾಗುತ್ತದೆ. ಸಾಮಾನ್ಯವಾಗಿ, ಆ್ಯಪ್‌ನಲ್ಲಿ ನೀವು ಒಂದು ಮಾಧ್ಯಮದ ತುಣುಕನ್ನು ವರದಿ ಮಾಡಿದರೆ, ಅದರ ಒಂದು ಪ್ರತಿಯನ್ನು ಸ್ವಯಂಚಾಲಿತವಾಗಿ ನಿಮ್ಮ ವರದಿಯೊಂದಿಗೆ ಸೇರಿಸಲಾಗುತ್ತದೆ. ನೀವು ಚಾಟ್ ಸಂದೇಶವನ್ನು ವರದಿ ಮಾಡಿದಾಗ, ಹಿಂದಿನ ಕೆಲವು ಸಂದೇಶಗಳನ್ನು ಕೂಡ ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ, ಇದರಿಂದಾಗಿ ಏನಾಯಿತು ಎನ್ನುವ ಕುರಿತು ನಾವು ಒಂದಿಷ್ಟು ಸನ್ನಿವೇಶವನ್ನು ಹೊಂದಿರುತ್ತೇವೆ.
Snapchat ನಲ್ಲಿ ಅಥವಾ ನಮ್ಮ ಬೆಂಬಲ ಸೈಟ್ ಮೂಲಕ ಮಾಡಲಾದ ವರದಿಗಳನ್ನು ವಿಮರ್ಶಿಸಲು ನಮ್ಮ ಸುರಕ್ಷತಾ ತಂಡಗಳು 24/7 ಕೆಲಸ ಮಾಡುತ್ತವೆ ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಅಥವಾ ನಮ್ಮ ಸೇವೆಯ ನಿಯಮಗಳು ಸೇರಿದಂತೆ, ನಮ್ಮ ನೀತಿಗಳನ್ನು ಉಲ್ಲಂಘಿಸುವ ವರದಿ ಮಾಡಲಾದ ಕಂಟೆಂಟ್ ಮತ್ತು ಖಾತೆಗಳ ವಿರುದ್ಧ ಅವರು ಕ್ರಮ ಕೈಗೊಳ್ಳುತ್ತಾರೆ. ವರದಿ ಮಾಡುವಿಕೆಯು ಗೌಪ್ಯವಾಗಿರುತ್ತದೆ ಮತ್ತು ನೀವು ವರದಿ ಮಾಡಿರುವ ಖಾತೆದಾರರಿಗೆ ಅವರನ್ನು ಯಾರು ವರದಿ ಮಾಡಿದ್ದಾರೆ ಎಂದು ಹೇಳುವುದಿಲ್ಲ ಎಂಬುದನ್ನು ನೆನಪಿಡುವುದು ಮುಖ್ಯವಾಗಿದೆ. ಕಾನೂನುಬಾಹಿರ ಅಥವಾ ಅಪಾಯಕಾರಿ ಎಂದು ನಿಮಗೆ ತೋರುವ ಯಾವುದೇ ವಿಷಯ ಕಂಡುಬಂದರೆ ಅಥವಾ ಯಾರಾದರೂ ಹಾನಿ ಅಥವಾ ಸ್ವಯಂ-ಹಾನಿಯ ಅಪಾಯದಲ್ಲಿದ್ದಾರೆ ಎಂದು ಭಾವಿಸಲು ನಿಮ್ಮಲ್ಲಿ ಕಾರಣವಿದ್ದರೆ, ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳನ್ನು ತಕ್ಷಣವೇ ಸಂಪರ್ಕಿಸಿ ಮತ್ತು ನಂತರ ಅದನ್ನು Snapchat ಗೆ ಕೂಡ ವರದಿ ಮಾಡಿ.
Snapchat ನಲ್ಲಿ ಯಾವ ಕಂಟೆಂಟ್ ಅನ್ನು ನಿಷೇಧಿಸಲಾಗಿದೆ ಎಂದು ತಿಳಿದುಕೊಳ್ಳಲು ನೀವು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ಸೇವೆಯ ನಿಯಮಗಳನ್ನು ಓದಬಹುದು. ಉತ್ತಮ ವ್ಯಾವಹಾರಿಕ ನಿಯಮ: ನೀವು ಹೇಳುತ್ತಿರುವ ವಿಷಯವು ಯಾರಿಗಾದರೂ ಅಸುರಕ್ಷಿತ ಅಥವಾ ನಕಾರಾತ್ಮಕ ಅನುಭವವನ್ನು ಉಂಟುಮಾಡಬಹುದಾದರೆ, ಅದನ್ನು ಹೇಳದಿರುವುದೇ ಉತ್ತಮ.
ಜೊತೆಗೆ, ನಿಮಗೆ ಇಷ್ಟವಿಲ್ಲದ ಒಂದು ವಿಷಯವನ್ನು ನೀವು Snapchat ನಲ್ಲಿ ನೋಡಿದ್ದು, ಆದರೆ ಅದು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸದಿರಬಹುದಾದರೆ, ನೀವು ಅನ್‌ಸಬ್‌ಸ್ಕ್ರೈಬ್ ಮಾಡಲು, ಕಂಟೆಂಟ್ ಅನ್ನು ಮರೆಮಾಡಲು ಅಥವಾ ಬಳಕೆದಾರರನ್ನು ಅನ್‌ಫ್ರೆಂಡ್ ಮಾಡಲು ಅಥವಾ ಬ್ಲಾಕ್ ಮಾಡಲು ನಿರ್ಧರಿಸಬಹುದು.
Snapchat ನಲ್ಲಿ ವರದಿ ಮಾಡುವಿಕೆಯು ಗೌಪ್ಯವಾಗಿದೆಯೇ?
ಹೌದು. ನೀವು ಒಂದು ವರದಿಯನ್ನು ಮಾಡಿದಾಗ ನಾವು ಇತರ Snapchatter ಗಳಿಗೆ (ವರದಿ ಮಾಡಲಾದ ಖಾತೆದಾರರು ಸೇರಿದಂತೆ) ತಿಳಿಸುವುದಿಲ್ಲ. ವರದಿ ಮಾಡಿದ ಖಾತೆದಾರರ ಕಂಟೆಂಟ್ ಅನ್ನು ತೆಗೆದುಹಾಕಿದರೆ ಅಥವಾ ಅವರ ಖಾತೆಯ ವಿರುದ್ಧ ಕ್ರಮ ತೆಗೆದುಕೊಂಡರೆ ನಾವು ಸಾಮಾನ್ಯವಾಗಿ ಅಪ್ಲಿಕೇಶನ್‌ನಲ್ಲಿ ಮತ್ತು/ಅಥವಾ ಇಮೇಲ್ ಮೂಲಕ ಅವರಿಗೆ ತಿಳಿಸುತ್ತೇವೆ, ಆದರೆ ಅವರು ನಮ್ಮ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದರೂ ಸಹ, ನಿಮ್ಮ ವರದಿಯ ಬಗ್ಗೆ ಅವರಿಗೆ ತಿಳಿಸುವುದು ನಮ್ಮ ನೀತಿಯಲ್ಲ.
ನಾನು ಅನಾಮಧೇಯನಾಗಿ ವರದಿಯನ್ನು ಸಲ್ಲಿಸಬಹುದೇ?
ಹೌದು. ನಮ್ಮ ಬೆಂಬಲ ಸೈಟ್‌ನಲ್ಲಿ ಲಭ್ಯವಿರುವ ವರದಿ ಮಾಡುವಿಕೆ ಫಾರ್ಮ್ ನಿಮ್ಮ ಹೆಸರನ್ನು ಒದಗಿಸುವ ಆಯ್ಕೆಯನ್ನು ಒದಗಿಸುತ್ತದೆ, ಆದರೆ ಅದಕ್ಕೆ ಆ ಮಾಹಿತಿಯ ಅಗತ್ಯವಿಲ್ಲ. ನೀವು ನಿಮ್ಮ Snapchat ಬಳಕೆದಾರ ಹೆಸರು ಅಥವಾ ಯಾರ ಪರವಾಗಿ ನೀವು ವರದಿ ಮಾಡುತ್ತಿದ್ದೀರೋ ಆ ಖಾತೆಯ ಬಳಕೆದಾರ ಹೆಸರು ಅಥವಾ ನೀವು ವರದಿ ಮಾಡುತ್ತಿರುವ ಖಾತೆಯೊಂದಿಗೆ ಸಂವಹನ ನಡೆಸಿರುವ ಖಾತೆಯ ಬಳಕೆದಾರ ಹೆಸರನ್ನು ಒದಗಿಸುವಂತೆಯೂ ಸಹ ಫಾರ್ಮ್‌ನಲ್ಲಿ ವಿನಂತಿಸಲಾಗಿದೆ, ಆದರೆ ನೀವು ಬಳಕೆದಾರ ಹೆಸರನ್ನು ಒದಗಿಸಲು ಬಯಸದಿದ್ದರೆ, ನೀವು "ಯಾವುದೂ ಇಲ್ಲ" ಎಂದು ಬರೆಯಬಹುದು. ಬಳಕೆದಾರ ಹೆಸರನ್ನು ಒದಗಿಸದೆ ಇರುವುದು ನಿಮ್ಮ ವರದಿಯನ್ನು ತನಿಖೆ ಮಾಡುವ ನಮ್ಮ ಸಾಮರ್ಥ್ಯವನ್ನು ಮಿತಿಗೊಳಿಸಬಹುದು ಎಂಬುದನ್ನು ದಯವಿಟ್ಟು ಗಮನಿಸಿ.
ನೀವು ಒಂದು ಇಮೇಲ್ ವಿಳಾಸವನ್ನು ಒದಗಿಸಬೇಕಾಗುತ್ತದೆ, ಇದರಿಂದ ನಿಮ್ಮ ವರದಿಯ ಕುರಿತಾಗಿ ನಾವು ನಿಮ್ಮನ್ನು ಸಂಪರ್ಕಿಸಬಹುದು. ಅನಾಮಧೇಯವಾಗಿ ವರದಿ ಮಾಡುವ ಆಯ್ಕೆಯು ಆ್ಯಪ್‌ನಲ್ಲಿ ವ್ಯಾಪಕವಾಗಿ ಲಭ್ಯವಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಅನಾಮಧೇಯವಾಗಿ ನೀವು ವರದಿ ಮಾಡಲು ಆಯ್ಕೆ ಮಾಡುತ್ತೀರೇ ಇಲ್ಲವೇ ಎಂಬುದನ್ನು ಪರಿಗಣಿಸದೆ, ನಿಮ್ಮ ವರದಿ ಮಾಡುವಿಕೆಯು ಗೌಪ್ಯವಾಗಿರುತ್ತದೆ (ಮೇಲೆ "Snapchat ನಲ್ಲಿ ವರದಿ ಮಾಡುವಿಕೆಯು ಗೌಪ್ಯವಾಗಿದೆಯೇ?" ನೋಡಿ).
ನನ್ನ ವರದಿಯ ಕುರಿತು Snap ನನ್ನೊಂದಿಗೆ ಹೇಗೆ ಸಂವಹನ ನಡೆಸುತ್ತದೆ?
ನೀವು Snapchat ನಲ್ಲಿ ಒಂದು ಸುರಕ್ಷತಾ ಕಳವಳವನ್ನು ವರದಿ ಮಾಡಿದಾಗ, ನಿಮ್ಮ ವರದಿಯನ್ನು ಸಲ್ಲಿಸಲಾಗಿದೆ ಎಂಬ ದೃಢೀಕರಣವನ್ನು ನೀವು ಸ್ವೀಕರಿಸುತ್ತೀರಿ. ನಿಮ್ಮ Snapchat ಖಾತೆಯಲ್ಲಿನ ಇಮೇಲ್ ವಿಳಾಸದಲ್ಲಿ ಅಥವಾ ನೀವು ನಮ್ಮ ಬೆಂಬಲ ಸೈಟ್ ಮೂಲಕ ನಿಮ್ಮ ವರದಿಯನ್ನು ಸಲ್ಲಿಸಿದ್ದರೆ ನೀವು ಒದಗಿಸಿದ ಇಮೇಲ್ ವಿಳಾಸದಲ್ಲಿ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ. Snapchatter ಗಳು ನನ್ನ ವರದಿಗಳು ವೈಶಿಷ್ಟ್ಯದ ಮೂಲಕ ತಮ್ಮ ಇತ್ತೀಚಿನ ವರದಿಗಳ ಸ್ಥಿತಿಯನ್ನು ಕೂಡ ಪರಿಶೀಲಿಸಬಹುದು.
ನಾನು ಸಲ್ಲಿಸಿದ ವರದಿಯನ್ನು ಯಾರು ವಿಮರ್ಶಿಸುತ್ತಾರೆ?
ನಮ್ಮ ಸುರಕ್ಷತಾ ತಂಡಗಳು ಮತ್ತು ಸಿಸ್ಟಂಗಳು ನೀವು ಸಲ್ಲಿಸಿದ ವರದಿಯನ್ನು ವಿಮರ್ಶಿಸಲು 24/7 ಕೆಲಸ ಮಾಡುತ್ತವೆ.
ಒಂದು ವರದಿಯನ್ನು ವಿಮರ್ಶಿಸಲು ಮತ್ತು ನಿರ್ಧಾರ ತೆಗೆದುಕೊಳ್ಳಲು Snap ನ ಸುರಕ್ಷತಾ ತಂಡಗಳಿಗೆ ಎಷ್ಟು ಸಮಯ ಬೇಕಾಗುತ್ತದೆ?
ನಮ್ಮ ವಿಮರ್ಶೆಯು ಸಾಮಾನ್ಯವಾಗಿ ಕೆಲವೇ ಗಂಟೆಗಳಲ್ಲಿ ನಡೆಯುತ್ತದೆ, ಆದರೆ ಕೆಲವು ಪ್ರಕರಣಗಳಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳಬಹುದು.
Snap ನ ವಿಮರ್ಶೆಯ ಸಂಭಾವ್ಯ ಫಲಿತಾಂಶಗಳು ಯಾವುವು?
ವರದಿ ಮಾಡಲಾದ ಕಂಟೆಂಟ್ ಅಥವಾ ಖಾತೆಯು Snapchat ನ ಕಮ್ಯುನಿಟಿ ಮಾರ್ಗಸೂಚಿಗಳನ್ನು ಅಥವಾ ಸೇವೆಯ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ನಾವು ದೃಢೀಕರಿಸಿದರೆ, ಆಗ ನಾವು ಕಂಟೆಂಟ್ ಅನ್ನು ತೆಗೆದುಹಾಕಬಹುದು. ಕೆಲವು ಪ್ರಕರಣಗಳಲ್ಲಿ, ನಾವು ಖಾತೆಯನ್ನು ಲಾಕ್ ಮಾಡಬಹುದು ಅಥವಾ ಅಳಿಸಬಹುದು ಮತ್ತು ಸೂಕ್ತವಾಗಿದ್ದಲ್ಲಿ ಅಪರಾಧಿಯ ಕುರಿತು ಕಾನೂನು ಜಾರಿ ಅಧಿಕಾರಿಗಳಿಗೆ ವರದಿ ಮಾಡಬಹುದು. ಕೆಲವು ಸಾರ್ವಜನಿಕ ಕಂಟೆಂಟ್‌ಗಾಗಿ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಅಥವಾ ಸೇವೆಯ ನಿಯಮಗಳ ಉಲ್ಲಂಘನೆಯನ್ನು ದೃಢೀಕರಿಸದೆ ಇದ್ದರೆ, ಬದಲಾಗಿ ನಮ್ಮ ಕಂಟೆಂಟ್ ಮಾರ್ಗಸೂಚಿಗಳ ಉಲ್ಲಂಘನೆಯನ್ನು ಗುರುತಿಸಿದರೆ, ಕಂಟೆಂಟ್ ಅನ್ನು ತೆಗೆದುಹಾಕುವುದು, ವಿತರಣೆಯನ್ನು ಮಿತಿಗೊಳಿಸುವುದು, ಅಮಾನತುಗೊಳಿಸುವುದು, ಅದನ್ನು ಪ್ರಚಾರ ಮಾಡದೆ ಇರುವುದು ಅಥವಾ ಅದರ ಲಭ್ಯತೆಯನ್ನು ನಿರ್ದಿಷ್ಟ ವಯಸ್ಸಿನವರಿಗೆ ನಿರ್ಬಂಧಿಸುವುದು ಸೇರಿದಂತೆ ಅದರ ವಿರುದ್ಧ ನಾವು ಕ್ರಮ ಕೈಗೊಳ್ಳಬಹುದು. Snapchat ನಲ್ಲಿ ಶಿಸ್ತುಕ್ರಮದ ಕುರಿತು ಹೆಚ್ಚುವರಿ ಮಾಹಿತಿ ಇಲ್ಲಿ ಲಭ್ಯವಿದೆ.
ನಮ್ಮ ನೀತಿಗಳು ಅಥವಾ ಸೇವೆಯ ನಿಯಮಗಳ ಉಲ್ಲಂಘನೆಯನ್ನು ನಾವು ಗುರುತಿಸದೆ ಇದ್ದರೆ, ಆಗ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ.
ಈ ಎರಡೂ ಸಂದರ್ಭಗಳಲ್ಲೂ, ನಮ್ಮ ನಿರ್ಧಾರವನ್ನು ನಾವು ನಿಮಗೆ ತಿಳಿಸುತ್ತೇವೆ.
ನಾನು Snapchat ನಲ್ಲಿ ಒಂದು ವಿಷಯವನ್ನು ವರದಿ ಮಾಡಿದ್ದೇನೆ ಆದರೆ ಅದನ್ನು ತೆಗೆದುಹಾಕಿಲ್ಲ. ಇದಕ್ಕೆ ಕಾರಣವೇನು?
ವರದಿ ಮಾಡಲಾದ ಎಲ್ಲ ಕಂಟೆಂಟ್ ಅನ್ನು ತೆಗೆದುಹಾಕುವುದಿಲ್ಲ. ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಅಥವಾ ಸೇವೆಯ ನಿಯಮಗಳು ಸೇರಿದಂತೆ, ನಮ್ಮ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ನಾವು ತೆಗೆದುಹಾಕುತ್ತೇವೆ. ನಿಮಗೆ ಇಷ್ಟವಾಗದ ಆದರೆ ನಮ್ಮ ನೀತಿಗಳು ಅಥವಾ ಸೇವೆಯ ನಿಯಮಗಳ ಅನುಸಾರ ಅನುಮತಿಸಲಾಗಿರುವ ಕಂಟೆಂಟ್ ಅನ್ನು ನೀವು ನೋಡಿದರೆ, ಕಂಟೆಂಟ್ ಅನ್ನು ಮರೆಮಾಡುವ ಅಥವಾ ಕಳುಹಿಸುವವರನ್ನು ನಿರ್ಬಂಧಿಸುವ ಅಥವಾ ತೆಗೆದುಹಾಕುವ ಮೂಲಕ ನೀವು ಅದನ್ನು ನೋಡುವುದನ್ನು ತಪ್ಪಿಸಬಹುದು.