logoSnap Values
ಪಾರದರ್ಶಕತೆಯ ವರದಿ
1 ಜನವರಿ 2024 – 30 ಜೂನ್ 2024

ಬಿಡುಗಡೆ ಮಾಡಲಾದ ದಿನಾಂಕ:

ಡಿಸೆಂಬರ್ 05, 2024

ಪರಿಷ್ಕರಿಸಲಾದ ದಿನಾಂಕ:

ಮೇ 19, 2026

Snap ನ ಸುರಕ್ಷತಾ ಪ್ರಯತ್ನಗಳ ಕುರಿತು ಒಳನೋಟಗಳನ್ನು ಒದಗಿಸಲು ಈ ಪಾರದರ್ಶಕತೆಯ ವರದಿಯನ್ನು ನಾವು ವರ್ಷಕ್ಕೆ ಎರಡು ಬಾರಿ ಪ್ರಕಟಿಸುತ್ತೇವೆ. ಈ ಪ್ರಯತ್ನಗಳಿಗೆ ನಾವು ಬದ್ಧರಾಗಿದ್ದೇವೆ ಮತ್ತು ನಮ್ಮ ಕಂಟೆಂಟ್ ಮಾಡರೇಷನ್, ಕಾನೂನು ಜಾರಿಗೊಳಿಸುವಿಕೆ ಅಭ್ಯಾಸಗಳು ಹಾಗೂ Snapchat ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮದ ಕುರಿತು ತೀವ್ರ ಕಾಳಜಿ ಹೊಂದಿರುವ ಹಲವು ಪಾಲುದಾರರಿಗಾಗಿ ಈ ವರದಿಗಳನ್ನು ಹೆಚ್ಚು ಸಮಗ್ರ ಮತ್ತು ಮಾಹಿತಿಯುಕ್ತವಾಗಿಸಲು ನಾವು ನಿರಂತರವಾಗಿ ಶ್ರಮಿಸುತ್ತೇವೆ. 

ಈ ಪಾರದರ್ಶಕತೆಯ ವರದಿಯು 2024 ರ ಪ್ರಥಮಾರ್ಧವನ್ನು ಒಳಗೊಳ್ಳುತ್ತದೆ (ಜನವರಿ 1 - ಜನವರಿ 30). ನಮ್ಮ ಹಿಂದಿನ ವರದಿಗಳ ರೀತಿಯಲ್ಲಿ, ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡಗಳು ಸ್ವೀಕರಿಸಿರುವ ಆ್ಯಪ್‌ನಲ್ಲಿನ ಕಂಟೆಂಟ್ ಮತ್ತು ಖಾತೆ-ಮಟ್ಟದ ವರದಿಗಳ ಜಾಗತಿಕ ಪ್ರಮಾಣ ಹಾಗೂ ಕಮ್ಯನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳ ನಿರ್ದಿಷ್ಟ ವರ್ಗಗಳಾದ್ಯಂತ ಜಾರಿಗೊಳಿಸಿದ ಕ್ರಮಗಳ ಕುರಿತು; ಕಾನೂನು ಜಾರಿ ಸಂಸ್ಥೆಗಳು ಮತ್ತು ಸರ್ಕಾರಗಳ ವಿನಂತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಿದೆವು ಎನ್ನುವ ಕುರಿತು; ಮತ್ತು ಕೃತಿಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್ ಉಲ್ಲಂಘನೆಯ ನೋಟಿಸ್‌ಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಿದೆವು ಎನ್ನುವ ಕುರಿತು ನಾವು ಡೇಟಾವನ್ನು ಹಂಚಿಕೊಳ್ಳುತ್ತೇವೆ. ಈ ಪುಟದ ಕೆಳಗೆ ಲಿಂಕ್ ಮಾಡಿರುವ ಫೈಲ್‌ಗಳಲ್ಲಿ ದೇಶ-ನಿರ್ದಿಷ್ಟವಾದ ಒಳನೋಟಗಳನ್ನು ಕೂಡ ನಾವು ಒದಗಿಸುತ್ತೇವೆ.

ನಮ್ಮ ಪಾರದರ್ಶಕತೆಯ ವರದಿಯನ್ನು ನಿರಂತರವಾಗಿ ಸುಧಾರಿಸುವ ನಮ್ಮ ಚಾಲ್ತಿಯಲ್ಲಿರುವ ಬದ್ಧತೆಯ ಭಾಗವಾಗಿ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ವಿಶಾಲ ಶ್ರೇಣಿಯ ಉಲ್ಲಂಘನೆಗಳನ್ನು ಪತ್ತೆಮಾಡಲು ಮತ್ತು ಅವುಗಳ ವಿರುದ್ಧ ಕ್ರಮ ಜಾರಿಗೊಳಿಸಲು ನಮ್ಮ ಪೂರ್ವಭಾವಿ ಪ್ರಯತ್ನಗಳನ್ನು ಹೈಲೈಟ್ ಮಾಡುವ ನಮ್ಮ ಹೊಸ ಡೇಟಾವನ್ನು ಕೂಡ ನಾವು ಪರಿಚಯಿಸುತ್ತಿದ್ದೇವೆ. ಈ ಡೇಟಾವನ್ನು ನಾವು ಈ ವರದಿಯೊಳಗೆ ಜಾಗತಿಕ ಮತ್ತು ದೇಶ ಎರಡೂ ಮಟ್ಟಗಳಲ್ಲಿ ಸೇರಿಸಿದ್ದೇವೆ ಮತ್ತು ಮುಂದಿನ ದಿನಗಳಲ್ಲೂ ಹಾಗೆಯೇ ಮಾಡುತ್ತೇವೆ. ನಮ್ಮ ಹಿಂದಿನ ವರದಿಗಳಲ್ಲಿನ ಒಂದು ಶೀರ್ಷಿಕೆ ದೋಷವನ್ನು ಕೂಡ ನಾವು ಸರಿಪಡಿಸಿದ್ದೇವೆ: ಹಿಂದೆ ನಾವು "ಕ್ರಮ ಜಾರಿಗೊಳಿಸಲಾದ ಒಟ್ಟು ಕಂಟೆಂಟ್" ಎಂದು ಉಲ್ಲೇಖಿಸಿದ್ದನ್ನು ಸಂಬಂಧಿಸಿದ ಕಾಲಂಗಳಲ್ಲಿ ಒದಗಿಸಿರುವ ಡೇಟಾವು ಕಂಟೆಂಟ್-ಮಟ್ಟ ಮತ್ತು ಖಾತೆ-ಮಟ್ಟ ಎರಡಕ್ಕೂ ಸಂಬಂಧಿಸಿದ ಜಾರಿಗೊಳಿಸಲಾದ ಕ್ರಮಗಳನ್ನು ಒಳಗೊಂಡಿದೆ ಎಂಬುದನ್ನು ಬಿಂಬಿಸಲು "ಒಟ್ಟು ಕ್ರಮ ಜಾರಿಗೊಳಿಸುವಿಕೆಗಳು" ಎಂದು ಉಲ್ಲೇಖಿಸಿದ್ದೇವೆ.

ಸಂಭಾವ್ಯ ಆನ್‌ಲೈನ್ ಹಾನಿಗಳ ವಿರುದ್ಧ ಹೋರಾಡುವುದಕ್ಕಾಗಿನ ನಮ್ಮ ನೀತಿಗಳು ಮತ್ತು ನಮ್ಮ ವರದಿ ಮಾಡುವಿಕೆಯ ಅಭ್ಯಾಸಗಳನ್ನು ವಿಕನಸಗೊಳಿಸುವುದನ್ನು ಮುಂದುವರಿಸುವ ಯೋಜನೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಪಾರದರ್ಶಕತೆಯ ವರದಿಯ ಕುರಿತಾದ ನಮ್ಮ ಇತ್ತೀಚಿನ ಸುರಕ್ಷತೆ ಮತ್ತು ಇಂಪ್ಯಾಕ್ಟ್ ಬ್ಲಾಗ್ ಅನ್ನು ಓದಿ. Snapchat ನಲ್ಲಿ ಹೆಚ್ಚುವರಿ ಸುರಕ್ಷತೆ ಮತ್ತು ಗೌಪ್ಯತೆ ಸಂಪನ್ಮೂಲಗಳನ್ನು ಕಂಡುಕೊಳ್ಳಲು, ಪುಟದ ಕೆಳಗಡೆ ಇರುವ ನಮ್ಮ ಪಾರದರ್ಶಕತೆಯ ವರದಿ ಮಾಡುವಿಕೆ ಕುರಿತ ಟ್ಯಾಬ್ ಅನ್ನು ನೋಡಿ.

ಈ ಪಾರದರ್ಶಕತೆಯ ವರದಿಯ ಅತ್ಯಂತ ಇತ್ತೀಚಿನ ನವೀಕೃತ ಆವೃತ್ತಿಯನ್ನು EN-US ಭಾಷೆಯಲ್ಲಿ ಕಾಣಬಹುದು ಎನ್ನುವುದನ್ನು ದಯವಿಟ್ಟು ಗಮನಿಸಿ.

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡಗಳು ತೆಗೆದುಕೊಂಡ ಕ್ರಮಗಳ ಅವಲೋಕನ

ಈ ವರದಿಯ ಕೆಳಗಿನ ವಿಭಾಗಗಳಲ್ಲಿ ವಿವರಿಸಿರುವಂತೆ ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡಗಳು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಪೂರ್ವಭಾವಿಯಾಗಿ (ಸ್ವಯಂಚಾಲಿತ ಟೂಲ್‌ಗಳ ಬಳಕೆಯ ಮೂಲಕ) ಮತ್ತು ಪ್ರತಿಕ್ರಿಯಾತ್ಮಕವಾಗಿ (ವರದಿಗಳಿಗೆ ಪ್ರತಿಕ್ರಿಯೆಯಾಗಿ) ಜಾರಿಗೊಳಿಸುತ್ತವೆ. ಈ ವರದಿ ಮಾಡುವಿಕೆಯ ಆವರ್ತನದಲ್ಲಿ (H1 2024), ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡದವರು ಈ ಕೆಳಗಿನ ಜಾರಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ: 

ನಾವು ಉಲ್ಲಂಘನೆಯನ್ನು ಪತ್ತೆಮಾಡಿದ ಸಮಯ (ಒಂದೋ ಪೂರ್ವಭಾವಿಯಾಗಿ ಅಥವಾ ಒಂದು ವರದಿಯನ್ನು ಸ್ವೀಕರಿಸಿದಾಗ) ಮತ್ತು ಸಂಬಂಧಿತ ಕಂಟೆಂಟ್ ಅಥವಾ ಖಾತೆಯ ಮೇಲೆ ನಾವು ಅಂತಿಮ ಕ್ರಮ ತೆಗೆದುಕೊಂಡ ಸಮಯದ ನಡುವಿನ ಸರಾಸರಿ ಟರ್ನ್‌ಅರೌಂಡ್ ಸಮಯ ಸೇರಿದಂತೆ, ಸಂಬಂಧಿಸಿದ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳ ಪ್ರತಿ ವಿಧದ ವಿವರವು ಕೆಳಗಿದೆ:

ವರದಿ ಮಾಡುವಿಕೆಯ ಅವಧಿಯಲ್ಲಿ, ನಮಗೆ 0.01 ಪ್ರತಿಶತದಷ್ಟು ಉಲ್ಲಂಘನಾತ್ಮಕ ವೀಕ್ಷಣೆಯ ದರ (VVR) ಕಂಡುಬಂದಿದೆ, ಅಂದರೆ Snapchat ನಲ್ಲಿ ಪ್ರತಿ 10,000 Snap ಮತ್ತು ಕಥೆ ವೀಕ್ಷಣೆಗಳಲ್ಲಿ, 1 ರಲ್ಲಿ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್ ಕಂಡುಬಂದಿದೆ.

ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡಗಳಿಗೆ ವರದಿ ಮಾಡಲಾದ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳು

ಜನವರಿ 1 ರಿಂದ ಜೂನ್ 30, 2024 ರವರೆಗೆ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳ ಆ್ಯಪ್‌ನಲ್ಲಿನ ವರದಿಗಳಿಗೆ ಪ್ರತಿಕ್ರಿಯೆಯಾಗಿ, Snap ನ ವಿಶ್ವಾಸ ಮತ್ತು ಸುರಕ್ಷತಾ ತಂಡಗಳು 38,42,507 ವಿಶಿಷ್ಟ ಖಾತೆಗಳ ವಿರುದ್ಧ ಕ್ರಮ ಜಾರಿಗೊಳಿಸುವಿಕೆ ಸೇರಿದಂತೆ ಜಾಗತಿಕವಾಗಿ ಒಟ್ಟು 62,23,618 ಕ್ರಮ ಜಾರಿಗೊಳಿಸಿವೆ. ಆ ವರದಿಗಳಿಗೆ ಪ್ರತಿಕ್ರಿಯೆಯಾಗಿ ಕ್ರಮ ಜಾರಿಗೊಳಿಸಲು ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡಗಳು ತೆಗೆದುಕೊಂಡ ಸರಾಸರಿ ಟರ್ನ್‌ಅರೌಂಡ್ ಸಮಯವು ~24 ನಿಮಿಷಗಳಾಗಿತ್ತು. ಪ್ರತಿ ವರದಿ ಮಾಡುವಿಕೆಯ ವರ್ಗದ ವಿವರವನ್ನು ಕೆಳಗೆ ಒದಗಿಸಲಾಗಿದೆ. 

ವಿಶ್ಲೇಷಣೆ

ಹಿಂದಿನ ಆರು ತಿಂಗಳುಗಳ ಹೋಲಿಕೆಯಲ್ಲಿ, H1 2024 ನಲ್ಲಿ ನಮ್ಮ ಒಟ್ಟಾರೆ ವರದಿ ಮಾಡುವಿಕೆಯ ಪ್ರಮಾಣಗಳು ಬಹಳಷ್ಟು ಮಟ್ಟಿಗೆ ಸ್ಥಿರವಾಗಿದ್ದವು. ಈ ಆವರ್ತನದಲ್ಲಿ, ಕ್ರಮ ಜಾರಿಗೊಳಿಸುವಿಕೆಗಳು ಮತ್ತು ಕ್ರಮ ಜಾರಿಗೊಳಿಸಲಾದ ಒಟ್ಟು ವಿಶಷ್ಟ ಖಾತೆಗಳಲ್ಲಿ ಅಂದಾಜು 16% ಏರಿಕೆಯನ್ನು ನಾವು ಗಮನಿಸಿದೆವು.

ಕಳೆದ 12 ತಿಂಗಳುಗಳಲ್ಲಿ, ಬಳಕೆದಾರರಿಗಾಗಿ ಹೊಸ ವರದಿ ಮಾಡುವಿಕೆ ಕಾರ್ಯವಿಧಾನಗಳನ್ನು Snap ಪರಿಚಯಿಸಿದ್ದು, ಇದು ನಮ್ಮ ವರದಿ ಮಾಡಿದ ಮತ್ತು ಕ್ರಮ ಜಾರಿಗೊಳಿಸಿದ ಪ್ರಮಾಣಗಳಿಗೆ ಹಾಗೂ ಈ ವರದಿ ಮಾಡುವಿಕೆಯ ಅವಧಿಯಲ್ಲಿ (H1 2024) ಟರ್ನ್‌ಅರೌಂಡ್ ಸಮಯಗಳಲ್ಲಿ ಏರಿಕೆಗೆ ಕಾರಣವಾಗಿದೆ. ನಿರ್ದಿಷ್ಟವಾಗಿ:

  • ಗುಂಪು ಚಾಟ್ ವರದಿ ಮಾಡುವಿಕೆ: ಅಕ್ಟೋಬರ್ 13, 2023 ರಂದು ನಾವು ಗುಂಪು ಚಾಟ್ ವರದಿ ಮಾಡುವಿಕೆಯನ್ನು ಪರಿಚಯಿಸಿದ್ದು, ಇದು ಬಹು ಜನರ ಚಾಟ್‌ನಲ್ಲಿ ಸಂಭವಿಸುವ ನಿಂದನೆಯನ್ನು ವರದಿ ಮಾಡಲು ಬಳಕೆದಾರರಿಗೆ ಅವಕಾಶ ಕಲ್ಪಿಸುತ್ತದೆ. ಈ ಬದಲಾವಣೆಯು ವರದಿ ಮಾಡುವಿಕೆಯ ವರ್ಗಗಳಾದ್ಯಂತ ನಮ್ಮ ಮಾಪನಗಳ ಸರಿದೂಗಿಸುವಿಕೆ (ಏಕೆಂದರೆ ಕೆಲವು ಸಂಭಾವ್ಯ ಹಾನಿಗಳು ಚಾಟ್ ಸನ್ನಿವೇಶದಲ್ಲಿ ಸಂಭವಿಸುವ ಸಾದ್ಯತೆ ಹೆಚ್ಚಿದೆ) ಮತ್ತು ಏರಿಕೆಯಾದ ವರದಿಗೆ ಸಂಬಂಧಿಸಿದ ಕ್ರಮ ಕೈಗೊಳ್ಳುವಿಕೆಯ ಮೇಲೆ ಪರಿಣಾಮ ಬೀರಿತು. 

  • ಖಾತೆ ವರದಿ ಮಾಡುವಿಕೆ ವರ್ಧನೆಗಳು: ದುಷ್ಕರ್ಮಿಗಳಿಂದ ಕಾರ್ಯಾಚರಿಸಲಾಗುತ್ತಿದೆ ಎಂಬ ಸಂದೇಹವಿರುವ ಖಾತೆಯ ಬಗ್ಗೆ ವರದಿ ಮಾಡುವಾಗ ಚಾಟ್ ಸಾಕ್ಷ್ಯವನ್ನು ಸಲ್ಲಿಸಲು ಒಂದು ಆಯ್ಕೆಯನ್ನು ಬಳಕೆದಾರರಿಗೆ ಒದಗಿಸುವ ನಮ್ಮ ಖಾತೆ ವರದಿ ಮಾಡುವಿಕೆಯ ವೈಶಿಷ್ಟ್ಯವನ್ನು ಕೂಡ ನಾವು ವಿಕಸನಗೊಳಿಸಿದ್ದೇವೆ. ಖಾತೆ ವರದಿಗಳನ್ನು ಮೌಲ್ಯಮಾಪನ ಮಾಡಲು ನಮಗೆ ಹೆಚ್ಚಿನ ಸಾಕ್ಷ್ಯ ಮತ್ತು ಸನ್ನಿವೇಶವನ್ನು ಒದಗಿಸುವ ಈ ಬದಲಾವಣೆಯನ್ನು ಫೆಬ್ರುವರಿ 29, 2024 ರಲ್ಲಿ ಆರಂಭಿಸಲಾಗಿದೆ. 


ಚಾಟ್ ವರದಿಗಳು ಮತ್ತು ವಿಶೇಷವಾಗಿ ಗುಂಪು ಚಾಟ್ ವರದಿಗಳು ಅತ್ಯಂತ ಸಂಕೀರ್ಣವಾಗಿರುತ್ತವೆ ಮತ್ತು ವಿಮರ್ಶಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ, ಇದು ಒಟ್ಟಾರೆ ಟರ್ನ್‌ಅರೌಂಡ್ ಸಮಯದ ಏರಿಕೆಗೆ ಕಾರಣವಾಗುತ್ತದೆ. 

ಮೇಲೆ ವಿವರಿಸಿರುವ ಎರಡು ಬದಲಾವಣೆಗಳಿಂದ ಮತ್ತು ವಿಸ್ತಾರವಾದ ಪರಿಸರವ್ಯವಸ್ಥೆಯಲ್ಲಿನ ಪರಿವರ್ತನೆಗಳಿಂದ ಶಂಕಿತ ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆ (CSEA), ಕಿರುಕುಳ ಮತ್ತು ಬೆದರಿಸುವಿಕೆ ಹಾಗೂ ದ್ವೇಷ ಭಾಷಣಗಳ ಮೇಲೆ ನಿರ್ದಿಷ್ಟ ಪರಿಣಾಮವಾಗಿದೆ. ನಿರ್ದಿಷ್ಟವಾಗಿ:

  • CSEA: H1 2024 ರಲ್ಲಿ CSEA-ಸಂಬಂಧಿತ ವರದಿಗಳು ಮತ್ತು ಕ್ರಮ ಜಾರಿಗೊಳಿಸುವಿಕೆಯಲ್ಲಿ ಏರಿಕೆಯನ್ನು ನಾವು ಗಮನಿಸಿದ್ದೇವೆ. ನಿರ್ದಿಷ್ಟವಾಗಿ, ಬಳಕೆದಾರರಿಂದ ಆ್ಯಪ್‌ನಲ್ಲಿನ ವರದಿಗಳಲ್ಲಿ ನಾವು 64% ಏರಿಕೆಯನ್ನು, ಒಟ್ಟು ಕ್ರಮ ಜಾರಿಗೊಳಿಸುವಿಕೆಗಳಲ್ಲಿ 82% ಏರಿಕೆಯನ್ನು ಮತ್ತು ಕ್ರಮ ಜಾರಿಗೊಳಿಸಲಾದ ಒಟ್ಟು ವಿಶಿಷ್ಟ ಖಾತೆಗಳಲ್ಲಿ 108% ಏರಿಕೆಯನ್ನು ಕಂಡಿದ್ದೇವೆ. ಈ ಏರಿಕೆಗಳು ಬಹುಮಟ್ಟಿಗೆ ಗುಂಪು ಚಾಟ್ ಮತ್ತು ಖಾತೆ ವರದಿ ಮಾಡುವಿಕೆ ಕಾರ್ಯವೈಶಿಷ್ಟ್ಯಗಳ ಪರಿಚಯಿಸುವಿಕೆಯಿಂದ ಪ್ರೇರಿತವಾಗಿವೆ. ಈ ಮಾಡರೇಷನ್ ಸರದಿಯ ಸಂವೇದನಾಶೀಲ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಅತಿ ಹೆಚ್ಚು ತರಬೇತಿ ಹೊಂದಿರುವ ಏಜೆಂಟರ ಆಯ್ದ ತಂಡಕ್ಕೆ ಸಂಭಾವ್ಯ CSEA-ಸಂಬಂಧಿತ ಉಲ್ಲಂಘನೆಗಳ ವರದಿಗಳ ವಿಮರ್ಶೆಯನ್ನು ನಿಯೋಜಿಸಲಾಗಿದೆ. ನಮ್ಮ ತಂಡವು ಹೊಸ ತರಬೇತಿಯನ್ನು ಅಳವಡಿಸಿಕೊಳ್ಳುವ ಜೊತೆಗೆ ಹೆಚ್ಚುವರಿ ವರದಿಗಳು ಬರುತ್ತಿರುವುದರಿಂದ ಟರ್ನ್‌ಅರೌಂಡ್ ಸಮಯದಲ್ಲಿ ಏರಿಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ, ಟರ್ನ್‌ಅರೌಂಡ್ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಮತ್ತು ಸಂಭಾವ್ಯ CSEA ಯ ವರದಿಗಳಿಗೆ ನಿಖರವಾಗಿ ಕ್ರಮ ಜಾರಿಗೊಳಿಸಲು ನಮ್ಮ ಜಾಗತಿಕ ಪೂರೈಕೆದಾರರ ತಂಡಗಳ ಗಾತ್ರವನ್ನು ನಾವು ಗಮನಾರ್ಹವಾಗಿ ಏರಿಕೆ ಮಾಡಿದ್ದೇವೆ. ನಮ್ಮ H2 2024 ಪಾರದರ್ಶಕತೆಯ ವರದಿಯು ವಾಸ್ತವಿಕವಾಗಿ ಸುಧಾರಿತ ಟರ್ನ್‌ಅರೌಂಡ್ ಸಮಯದೊಂಧಿಗೆ ನಮ್ಮ ಪ್ರಯತ್ನಗಳ ಫಲವನ್ನು ಬಿಂಬಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. 

  • ಕಿರುಕುಳ ಮತ್ತು ಬೆದರಿಸುವಿಕೆ: ವರದಿಗಳನ್ನು ಆಧರಿಸಿ, ಕಿರುಕುಳ ಮತ್ತು ಬೆದರಿಸುವಿಕೆಯು ಚಾಟ್‌ಗಳಲ್ಲಿ ಮತ್ತು ನಿರ್ದಿಷ್ಟವಾಗಿ ಗುಂಪು ಚಾಟ್‌ಗಳಲ್ಲಿ ಅಸಮಾನವಾಗಿ ನಡೆಯುತ್ತದೆ ಎಂಬುದನ್ನು ನಾವು ಗಮನಿಸಿದ್ದೇವೆ. ಗುಂಪು ಚಾಟ್ ವರದಿ ಮಾಡುವಿಕೆ ಮತ್ತು ಖಾತೆ ವರದಿ ಮಾಡುವಿಕೆಗಾಗಿ ನಾವು ಪರಿಚಯಿಸಿರುವ ಸುಧಾರಣೆಗಳು ಈ ವರದಿ ಮಾಡುವಿಕೆಯ ವರ್ಗದಲ್ಲಿ ವರದಿಗಳನ್ನು ಮೌಲ್ಯಮಾಪನ ಮಾಡುವಾಗ ಹೆಚ್ಚು ಸಮಗ್ರ ಕ್ರಮಗಳನ್ನು ತೆಗೆದುಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಮುಂದುವರಿದು, ಈ ಅವಧಿಯವರೆಗೆ, ಕಿರುಕುಳ ಮತ್ತು ಬೆದರಿಸುವಿಕೆಯ ವರದಿಯನ್ನು ಸಲ್ಲಿಸುವಾಗ ಬಳಕೆದಾರರು ಕಾಮೆಂಟ್ ಸೇರಿಸುವುದನ್ನು ನಾವು ಅಗತ್ಯಪಡಿಸಿದ್ದೇವೆ. ಪ್ರತಿ ವರದಿಯ ಸನ್ನಿವೇಶವನ್ನು ಗ್ರಹಿಸಲು ಈ ಕಾಮೆಂಟ್ ಅನ್ನು ನಾವು ವಿಮರ್ಶಿಸುತ್ತೇವೆ. ಒಟ್ಟಾರೆಯಾಗಿ, ಸಂಬಂಧಿಸಿದ ವರದಿಗಳ ಒಟ್ಟು ಕ್ರಮ ಜಾರಿಗೊಳಿಸುವಿಕೆಯಲ್ಲಿ (+91%), ಕ್ರಮ ಜಾರಿಗೊಳಿಸಲಾದ ಒಟ್ಟು ವಿಶಿಷ್ಟ ಖಾತೆಗಳು (+82%) ಮತ್ತು ಟರ್ನ್‌ಅರೌಂಡ್ ಸಮಯದಲ್ಲಿ (+245 ನಿಮಿಷಗಳು) ವಾಸ್ತವಿಕ ಏರಿಕೆಗಳಿಗೆ ಈ ಬದಲಾವಣೆಗಳು ಕಾರಣವಾಗಿವೆ. 

  • ದ್ವೇಷ ಭಾಷಣ: H1 2024 ರಲ್ಲಿ, ದ್ವೇಷ ಭಾಷಣಕ್ಕಾಗಿ ವರದಿ ಮಾಡಲಾದ ಕಂಟೆಂಟ್, ಒಟ್ಟು ಕ್ರಮ ಜಾರಿಗೊಳಿಸುವಿಕೆಗಳು ಮತ್ತು ಟರ್ನ್‌ಅರೌಂಡ್ ಸಮಯದಲ್ಲಿ ನಾವು ಏರಿಕೆಯನ್ನು ಗಮನಿಸಿದ್ದೇವೆ. ನಿರ್ದಿಷ್ಟವಾಗಿ, ಆ್ಯಪ್‌ನಲ್ಲಿನ ವರದಿಗಳಲ್ಲಿ 61% ಏರಿಕೆ, ಒಟ್ಟು ಕ್ರಮ ಜಾರಿಗೊಳಿಸುವಿಕೆಯಲ್ಲಿ 127% ಏರಿಕೆ ಮತ್ತು ಕ್ರಮ ಜಾರಿಗೊಳಿಸಲಾದ ಒಟ್ಟು ವಿಶಿಷ್ಟ ಖಾತೆಗಳಲ್ಲಿ 125% ಏರಿಕೆಯನ್ನು ನಾವು ಕಂಡಿದ್ದೇವೆ. ನಮ್ಮ ಚಾಟ್ ವರದಿ ಮಾಡುವಿಕೆಯ ಕಾರ್ಯವಿಧಾನಗಳಲ್ಲಿ ಸುಧಾರಣೆಗಾಗಿ (ಈ ಹಿಂದೆ ಚರ್ಚಿಸಿದಂತೆ) ಇದು ಬಾಕಿಯಾಗಿತ್ತು ಮತ್ತು ಭೌಗೋಳಿಕ ರಾಜಕೀಯ ಪರಿಸರದಿಂದ, ನಿರ್ದಿಷ್ಟವಾಗಿ ಇಸ್ರೇಲ್-ಹಮಾಸ್ ಸಂಘರ್ಷದಿಂದ ಇನ್ನಷ್ಟು ಹದಗೆಟ್ಟಿತು. 

ಈ ವರದಿ ಮಾಡುವಿಕೆಯ ಅವಧಿಯಲ್ಲಿ, ಶಂಕಿತ ಸ್ಪ್ಯಾಮ್ ಮತ್ತು ನಿಂದನೆಯ ವರದಿಗಳ ಪ್ರತಿಕ್ರಿಯೆಯಲ್ಲಿ ಒಟ್ಟು ಕ್ರಮ ಜಾರಿಗೊಳಿಸುವಿಕೆಯಲ್ಲಿ ~65% ಇಳಿಕೆ ಮತ್ತು ಕ್ರಮ ಜಾರಿಗೊಳಿಸಲಾದ ಒಟ್ಟು ವಿಶಿಷ್ಟ ಖಾತೆಗಳಲ್ಲಿ ~60% ಇಳಿಕೆಯನ್ನು ಕಂಡಿದ್ದು, ಇದು ನಮ್ಮ ಪೂರ್ವಭಾವಿ ಪತ್ತೆ ಮತ್ತು ಕ್ರಮ ಜಾರಿಗೊಳಿಸುವಿಕೆ ಟೂಲ್‌ಗಳಲ್ಲಿ ಸುಧಾರಣೆಯನ್ನು ಬಿಂಬಿಸುತ್ತದೆ. ಸ್ವಯಂ ಹಾನಿ ಮತ್ತು ಆತ್ಮಹತ್ಯೆಗೆ ಸಂಬಂಧಿಸಿದ ಕಂಟೆಂಟ್ ವರದಿಗಳಿಗೆ ಪ್ರತಿಕ್ರಿಯೆಯಾಗಿ ಒಟ್ಟು ಕ್ರಮ ಜಾರಿಗೊಳಿಸುವಿಕೆಯಲ್ಲಿ ಅದೇ ರೀತಿಯ ಇಳಿಕೆಯನ್ನು (~80% ಇಳಿಕೆ) ನಾವು ಕಂಡಿದ್ದು, ಇದು ನಮ್ಮ ಅಪ್‌ಡೇಟ್ ಮಾಡಿರುವ ಸಂತ್ರಸ್ತ ಕೇಂದ್ರಿತ ವಿಧಾನವನ್ನು ಪ್ರತಿಬಿಂಬಿಸುತ್ತದೆ, ಇದರ ಪ್ರಕಾರ ಸೂಕ್ತ ಪ್ರಕರಣಗಳಲ್ಲಿ ನಮ್ಮ ವಿಶ್ವಾಸ ಮತ್ತು ಸುರಕ್ಷತೆಯ ತಂಡದವರು, ಸಂಬಂಧಿಸಿದ ಬಳಕೆದಾರರ ವಿರುದ್ಧ ಕ್ರಮ ಜಾರಿಗೊಳಿಸುವ ಬದಲಾಗಿ ಸ್ವ-ಸಹಾಯ ಸಂಪನ್ಮೂಲಗಳನ್ನು ಕಳುಹಿಸುತ್ತಾರೆ. ಶಿಶುವೈದ್ಯಕೀಯ ಪ್ರೊಫೆಸರ್ ಮತ್ತು ಪ್ರತಿಕ್ರಿಯಾಶೀಲ ಮಾಧ್ಯಮ ಮತ್ತು ಇಂಟರ್‌ನೆಟ್ ಸಂಬಂಧಿತ ಅಸ್ವಾಸ್ಥ್ಯದಲ್ಲಿ ಪರಿಣಿತಿ ಹೊಂದಿರುವ ವೈದ್ಯರು ಸೇರಿರುವ ನಮ್ಮ ಸುರಕ್ಷತಾ ಸಲಹಾ ಮಂಡಳಿಯ ಸದಸ್ಯರು ಈ ವಿಧಾನಕ್ಕಾಗಿ ಮಾಹಿತಿ ನೀಡಿದ್ದಾರೆ.