Snapchat ಸುರಕ್ಷತಾ ಕೇಂದ್ರ

ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕ್ಷಣಗಳನ್ನು ಹಂಚಿಕೊಳ್ಳಲು Snapchat ವೇಗವಾದ, ಮೋಜಿನ ಮಾರ್ಗವಾಗಿದೆ. ನಮ್ಮ ಸಮುದಾಯದ ಹೆಚ್ಚಿನವರು ಪ್ರತಿದಿನ Snapchat ಬಳಸುತ್ತಾರೆ, ಆದ್ದರಿಂದ ಪೋಷಕರು ಮತ್ತು ಶಿಕ್ಷಕರು ನಿಯಮಿತವಾಗಿ ನಮ್ಮನ್ನು ಸಲಹೆ ಕೇಳುವುದರಲ್ಲಿ ಆಶ್ಚರ್ಯವೇನಿಲ್ಲ. ನಾವು ನಿಮ್ಮ ಕಳವಳಗಳನ್ನು ಹಂಚಿಕೊಳ್ಳುತ್ತೇವೆ ಮತ್ತು ಸೃಜನಶೀಲತೆ ಮತ್ತು ಅಭಿವ್ಯಕ್ತಿಗೆ ಸುರಕ್ಷಿತ, ಮೋಜಿನ ವಾತಾವರಣವನ್ನು ಒದಗಿಸಲು ಬಯಸುತ್ತೇವೆ.

ವರದಿ ಮಾಡುವುದು ಸುಲಭ!

ಆ್ಯಪ್‌ನಲ್ಲಿ ವರದಿ ಮಾಡುವಿಕೆ

ಅನುಚಿತ ಕಂಟೆಂಟ್ ಅನ್ನು ನೀವು ಸುಲಭವಾಗಿ ಆ್ಯಪ್‌ನೊಳಗೇ ವರದಿ ಮಾಡಬಹುದು! Snap ಅನ್ನು ಒತ್ತಿ ಮತ್ತು ಹಿಡಿದಿರಿ, ನಂತರ 'Snap ವರದಿ ಮಾಡಿ' ಬಟನ್ ಟ್ಯಾಪ್ ಮಾಡಿ. ಏನು ನಡೆಯುತ್ತಿದೆ ಎಂದು ನಮಗೆ ತಿಳಿಸಿ — ನಾವು ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ! ಆ್ಯಪ್‌ನಲ್ಲಿ ನಿಂದನೆಯನ್ನು ವರದಿ ಮಾಡುವುದರ ಕುರಿತು ಇನ್ನಷ್ಟು ತಿಳಿದುಕೊಳ್ಳಿ ಮತ್ತು ನಮ್ಮ Snapchat ವರದಿ ಮಾಡುವಿಕೆ ಕುರಿತ ತ್ವರಿತ ಮಾರ್ಗದರ್ಶಿಯನ್ನು ಡೌನ್‌ಲೋಡ್ ಮಾಡಿ.

ಸುರಕ್ಷತೆಯು ಒಂದು ಹಂಚಿತ ಜವಾಬ್ದಾರಿ

ಮೊದಲಿನಿಂದಲೂ, Snapchat ಜನರು ತಮ್ಮ ಕ್ಯಾಮೆರಾದೊಂದಿಗೆ ತಮ್ಮನ್ನು ತಾವು ವ್ಯಕ್ತಪಡಿಸಲು ಅಧಿಕಾರ ನೀಡುವ ಬಗ್ಗೆಯಾಗಿದೆ. ನಿಮಗೆ ತಿಳಿದಿರುವ ಪ್ರತಿಯೊಬ್ಬರನ್ನು ಸ್ವಯಂಚಾಲಿತವಾಗಿ ಸ್ನೇಹಿತರನ್ನಾಗಿ ಮಾಡುವ ಅಥವಾ ಹೆಚ್ಚು ಜನಪ್ರಿಯವಾಗಿರುವುದನ್ನು ಮಾತ್ರ ನೀವು ನೋಡುವಂತಹ ಸಾಮಾಜಿಕ ನೆಟ್‌ವರ್ಕ್ ಅನ್ನು ಸೃಷ್ಟಿಸಿಲು ನಾವು ಬಯಸಿರಲಿಲ್ಲ. ಬದಲಾಗಿ, ಜನರು, ಪ್ರಕಾಶಕರು ಮತ್ತು ಬ್ರಾಂಡ್‌ಗಳು ತಮ್ಮ ಕಥೆ ಹೇಳುವುದನ್ನು ಸುಲಭಗೊಳಿಸಲು ನಾವು ಬಯಸಿದ್ದೆವು — ತಮ್ಮದೇ ರೀತಿಯಲ್ಲಿ!

Snapchat ವೈಯಕ್ತಿಕ ಸಂವಹನಕ್ಕಾಗಿದೆ, ಪ್ರಸಾರಕ್ಕಾಗಿ ಅಲ್ಲ.

Snap ಗಳನ್ನು ತ್ವರಿತ ಮತ್ತು ಸುಲಭ ಸಂವಹನಕ್ಕಾಗಿ ಮಾಡಲಾಗಿದೆ, ಆದ ಕಾರಣ ಅವು ಡೀಫಾಲ್ಟ್ ಆಗಿ ಅಳಿಸಲ್ಪಡುತ್ತವೆ! ನೀವು ನೇರವಾಗಿ ಕಳುಹಿಸುವ ಅಥವಾ ಸಾರ್ವಜನಿಕವಾಗಿ ನಿಮ್ಮ ಕಥೆಗೆ ಪೋಸ್ಟ್ ಮಾಡಲು ಆಯ್ಕೆ ಮಾಡುವ ವಿಷಯಗಳನ್ನು ಮಾತ್ರ ಸ್ನೇಹಿತರು ನೋಡುತ್ತಾರೆ.

ಸುರಕ್ಷತೆ ಪಾಲುದಾರಿಕೆಗಳಿಗೆ ವಿಧಾನ.

ನಮ್ಮ ಸಮುದಾಯದ ಸುರಕ್ಷತೆ ಮತ್ತು ಕ್ಷೇಮಕ್ಕೆ Snap ಆಳವಾಗಿ ಬದ್ಧವಾಗಿದೆ ಮತ್ತು ನಮ್ಮ ತಂಡಗಳು, ಉತ್ಪನ್ನಗಳು, ನೀತಿಗಳು ಮತ್ತು ಪಾಲುದಾರಿಕೆಗಳು Snapchat ಬಳಕೆದಾರರನ್ನು ಸುರಕ್ಷಿತವಾಗಿ ಮತ್ತು ತಿಳುವಳಿಕೆಯಿಂದ ಇರಿಸುವ ವಿನ್ಯಾಸ ತತ್ವಗಳ ಮೂಲಕ ಸುರಕ್ಷತೆಯನ್ನು ಅನ್ವಯಿಸುತ್ತವೆ.

ನಮ್ಮ ವೇದಿಕೆಯನ್ನು ಸುರಕ್ಷಿತವಾಗಿರಿಸಲು ನೇರವಾಗಿ ಕೆಲಸ ಮಾಡುವ ವಿಷಯ ಆಂತರಿಕ ಮಧ್ಯವರ್ತಿಗಳ ತಂಡಕ್ಕೆ ಹೆಚ್ಚುವರಿಯಾಗಿ, ಅಗತ್ಯವಿರುವ Snapchat ಬಳಕೆದಾರರಿಗೆ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಒದಗಿಸಲು ನಾವು ಉದ್ಯಮ ತಜ್ಞರು ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತೇವೆ.

ನಂಬಿಕೆಯ ಫ್ಲಾಗರ್ ಪ್ರೊಗ್ರಾಮ್.

ನಮ್ಮ ನಂಬಿಕೆಯ ಫ್ಲಾಗರ್ ಪ್ರೊಗ್ರಾಮ್ ಅನ್ನು ಲಾಭರಹಿತ, ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ), ಆಯ್ದ ಸರ್ಕಾರಿ ಸಂಸ್ಥೆಗಳು ಮತ್ತು ಆ Snapchat ಸಮುದಾಯವನ್ನು ಬೆಂಬಲಿಸುವ ಸುರಕ್ಷತಾ ಪಾಲುದಾರರಿಗೆ ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿಷಯವನ್ನು ವರದಿ ಮಾಡಲು ಸಹಾಯ ಮಾಡಲು ಅಭಿವೃದ್ಧಿಪಡಿಸಲಾಗಿದೆ.

ಸುರಕ್ಷತಾ ಸಲಹಾ ಮಂಡಳಿ.

ನಮ್ಮ ಸುರಕ್ಷತಾ ಸಲಹಾ ಮಂಡಳಿ ಸದಸ್ಯರು Snapchat ಸಮುದಾಯವನ್ನು ಸುರಕ್ಷಿತವಾಗಿ ಇರಿಸುವುದು ಹೇಗೆ ಎನ್ನುವ ಕುರಿತು Snap ಗೆ ತಿಳುವಳಿಕೆ ನೀಡುತ್ತಾರೆ, ಸವಾಲು ಹಾಕುತ್ತಾರೆ, ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾರೆ ಮತ್ತು ಸಲಹೆ ನೀಡುತ್ತಾರೆ.

ನಮ್ಮ ಪಾಲುದಾರಿಕೆಗಳ ಮೂಲಕ, ಜನರು ಬಿಕ್ಕಟ್ಟಿನಲ್ಲಿರುವುದಕ್ಕೆ ಸಂಬಂಧಿಸಿದ ಪದಗಳನ್ನು ಟೈಪ್ ಮಾಡಿದಾಗ ತೋರಿಸಲಾಗುವ ಸ್ಥಳೀಯಗೊಳಿಸಿದ ಸಂಪನ್ಮೂಲಗಳು ಮತ್ತು ವಿಷಯವನ್ನು ಒಳಗೊಂಡ ಹಾಗೂ ಡೇಟಾ ಗೌಪ್ಯತೆ, ಭದ್ರತೆ ಮತ್ತು ಆನ್‌ಲೈನ್ ಸುರಕ್ಷತೆಯಂತಹ ಸಮಸ್ಯೆಗಳ ಕುರಿತು Snapchatter ಗಳಿಗೆ ಅರಿವು ಮೂಡಿಸುವ ಗುರಿಹೊಂದಿರುವ ನಮ್ಮ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ಸುರಕ್ಷತಾ ಸ್ನ್ಯಾಪ್‌ಶಾಟ್ ಅನ್ನು ಪ್ರಾರಂಭಿಸುವ, ವೈಯಕ್ತಿಕ ವಿಭಾಗ Here for You ನಂತಹ, ಸಂಪನ್ಮೂಲಗಳನ್ನು ಸೃಷ್ಟಿಸಲು ನಮಗೆ ಸಾಧ್ಯವಾಗಿದೆ. ನಮ್ಮ ಯೋಗಕ್ಷೇಮ ಸಂಪನ್ಮೂಲಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮ Snapchat ಯೋಗಕ್ಷೇಮ ಸಂಪನ್ಮೂಲಗಳಿಗೆ ತ್ವರಿತ ಮಾರ್ಗದರ್ಶಿಯನ್ನು ಡೌನ್‌ಲೋಡ್ ಮಾಡಿ!

ಡಿಜಿಟಲ್ ಯೋಗಕ್ಷೇಮ ಸೂಚ್ಯಂಕ ಮತ್ತು ಸಂಶೋಧನೆ

ಹದಿಹರೆಯದವರು ಮತ್ತು ಯುವ ವಯಸ್ಕರು ಆನ್‌ಲೈನ್‌ನಲ್ಲಿ ಹೇಗೆ ಸಾಗುತ್ತಿದ್ದಾರೆ ಎಂಬುದರ ಕುರಿತು ಒಳನೋಟವನ್ನು ನೀಡಲು, Snap Gen Z ಯ ಡಿಜಿಟಲ್ ಯೋಗಕ್ಷೇಮದ ಕುರಿತು ಸಂಶೋಧನೆ ನಡೆಸಿತು. ನಾಲ್ಕು ದಶಕಗಳಿಗೂ ಹೆಚ್ಚಿನ ವ್ಯಕ್ತಿನಿಷ್ಠ ಯೋಗಕ್ಷೇಮ ಸಂಶೋಧನೆಯ ಮೇಲೆ ನಡೆದ ಅಧ್ಯಯನವು, Gen Z ಯ ಆನ್‌ಲೈನ್ ಮಾನಸಿಕ ಯೋಗಕ್ಷೇಮದ ಅಳತೆಯಾದ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕವನ್ನು (DWBI) ತಯಾರಿಸಲು ಆನ್‌ಲೈನ್ ಪರಿಸರಕ್ಕೆ ಅಳವಡಿಸಿಕೊಂಡಿತು. 2022 ರಲ್ಲಿ, ನಾವು ಹದಿಹರೆಯದವರು (13-17 ವರ್ಷ ವಯಸ್ಸಿನವರು), ಯುವ ವಯಸ್ಕರು (18-24 ವರ್ಷ ವಯಸ್ಸಿನವರು) ಮತ್ತು 13 ರಿಂದ 19 ವರ್ಷ ವಯಸ್ಸಿನ ಹದಿಹರೆಯದವರ ಪೋಷಕರನ್ನು ಆರು ದೇಶಗಳಲ್ಲಿ ಸಮೀಕ್ಷೆ ಮಾಡಿದ್ದೇವೆ: ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, ಯುಕೆ ಮತ್ತು ಯು.ಎಸ್. ವಿವಿಧ ಆನ್‌ಲೈನ್ ಅಪಾಯಗಳಿಗೆ ಅವರು ಒಡ್ಡಿಕೊಳ್ಳುವ ಬಗ್ಗೆ ನಾವು ಕೇಳಿದ್ದೇವೆ ಮತ್ತು ಆ ಫಲಿತಾಂಶಗಳು ಮತ್ತು ಇತರ ವರ್ತನೆಯ ಪ್ರತಿಕ್ರಿಯೆಗಳಿಂದ, ಪ್ರತಿ ದೇಶಕ್ಕೆ DWBI ಮತ್ತು ಎಲ್ಲಾ ಆರರಲ್ಲಿ ಸಂಯೋಜಿತ ಓದುವಿಕೆಯನ್ನು ರೂಪಿಸಿದ್ದೇವೆ. ಆರು ಭೌಗೋಳಿಕತೆಗಳಿಗೆ 2022 ರ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕವು 62 ರಷ್ಟಿದೆ. ಡಿಜಿಟಲ್ ಯೋಗಕ್ಷೇಮ ಸೂಚ್ಯಂಕ ಮತ್ತು ಸಂಶೋಧನಾ ಸಂಶೋಧನೆಗಳ ಕುರಿತು ಇನ್ನಷ್ಟು ಓದಲು, ದಯವಿಟ್ಟು ನಮ್ಮ DWBI ಪುಟ ಕ್ಕೆ ಭೇಟಿ ನೀಡಿ.

ಸುರಕ್ಷಿತವಾಗಿರಲು ಸಲಹೆಗಳು

ಕಾಲಕ್ರಮೇಣ Snapchat ಬೆಳೆದಂತೆ, ನಿಮ್ಮ ಗೌಪ್ಯತೆ ಮತ್ತು ಸುರಕ್ಷತೆಯು ಯಾವಾಗಲೂ ಮನಸ್ಸಿನಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ನೀವು ಹೆಚ್ಚು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನೀವು ತೆಗೆದುಕೊಳ್ಳಬಹುದಾದ ಕೆಲವು ಕ್ರಮಗಳು ಇಲ್ಲಿವೆ!

Snapchat ಶಿಷ್ಟಾಚಾರ

ಇತರ Snapchatter ಗಳ ಬಗ್ಗೆ ದಯಾಳುವಾಗಿರಿ ಮತ್ತು ಗೌರವದಿಂದಿರಿ. ನೀವು ಏನನ್ನು Snap ಮಾಡುವಿರೋ ಅದರ ಬಗ್ಗೆ ಚಿಂತಿಸಿರಿ, ಮತ್ತು ಜನರು ಸ್ವೀಕರಿಸಲು ಬಯಸದ ಯಾವುದನ್ನೂ ಕಳುಹಿಸಬೇಡಿ.

Snap ಗಳು ಡೀಫಾಲ್ಟ್ ಆಗಿ ಅಳಿಸಲ್ಪಡುತ್ತವೆ, ಆದರೆ...

Snap ಗಳನ್ನು ಡೀಫಾಲ್ಟ್ ಆಗಿ ಅಳಿಸಲ್ಪಡುವಂತೆ ವಿನ್ಯಾಸಗೊಳಿಸಲಾಗಿದ್ದರೂ ಸಹ, ಸ್ನೇಹಿತರು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು ಅಥವಾ ಇನ್ನೊಂದು ಸಾಧನದಿಂದ ಚಿತ್ರ ತೆಗೆದುಕೊಳ್ಳಬಹುದು ಎನ್ನುವುದನ್ನು ನೆನಪಿಡಿ.

ಗೌಪ್ಯತೆ ಸೆಟ್ಟಿಂಗ್‌ಗಳು

ನಿಮಗೆ ಯಾರು Snap ಗಳನ್ನು ಕಳುಹಿಸಬಹುದು ಎನ್ನುವುದನ್ನು ಆಯ್ಕೆ ಮಾಡಲು ಅಥವಾ Snap ಮ್ಯಾಪ್‌ನಲ್ಲಿ ನಿಮ್ಮ ಸ್ಥಳ ಮತ್ತು ಕಥೆಗಳನ್ನು ನೋಡಲು ನಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೋಡಿ.

ಸ್ನೇಹಿತರು

ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು Snapchat ಅನ್ನು ರಚಿಸಲಾಗಿದೆ, ಆದ್ದರಿಂದ ನೈಜ ಬದುಕಿನಲ್ಲಿ ನಿಮಗೆ ಪರಿಚಯವಿಲ್ಲದ ಯಾರೊಂದಿಗೂ ಸ್ನೇಹ ಬೆಳೆಸದಂತೆ ನಾವು ಸಲಹೆ ನೀಡುತ್ತೇವೆ.

ಸಮುದಾಯ ಮಾರ್ಗಸೂಚಿಗಳು

ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಓದಿ ಮತ್ತು ಅನುಸರಿಸಿ, ಮತ್ತು ಅವುಗಳನ್ನು ಅನುಸರಿಸಲು ನಿಮ್ಮ ಸ್ನೇಹಿತರಿಗೂ ಸಹಾಯ ಮಾಡಿ!

ಸುರಕ್ಷತಾ ಕಳವಳಗಳನ್ನು ವರದಿ ಮಾಡಿ

ಏನಾದರೂ ಅಸಂತೋಷ ಉಂಟುಮಾಡುವುದನ್ನು ನೀವು ಗಮನಿಸಿದರೆ ಅಥವಾ ಅನುಚಿತವಾದ ಅಥವಾ ನಿಮಗೆ ಅಹಿತಕರ ಅನ್ನಿಸುವ ಏನನ್ನಾದರೂ ಮಾಡುವಂತೆ ಯಾರಾದರೂ ನಿಮ್ಮನ್ನು ಕೇಳಿದರೆ, ದಯವಿಟ್ಟು Snap ಅನ್ನು ನಮಗೆ ವರದಿ ಮಾಡಿ — ಮತ್ತು ಅದರ ಕುರಿತು ನಿಮ್ಮ ಪೋಷಕರೊಂದಿಗೆ ಅಥವಾ ವಿಶ್ವಾಸಾರ್ಹ ವಯಸ್ಕರೊಂದಿಗೆ ಮಾತನಾಡಿ.

ಬೆದರಿಕೆ

ಒಂದು ವೇಳೆ ಯಾರಾದರೂ ನಿಮಗೆ ಬೆದರಿಕೆ ಹಾಕುತ್ತಿದ್ದರೆ ಅಥವಾ ಕಿರುಕುಳ ನೀಡುತ್ತಿದ್ದರೆ, Snap ಅನ್ನು ನಮಗೆ ವರದಿ ಮಾಡಿ — ಮತ್ತು ಅದರ ಕುರಿತು ನಿಮ್ಮ ಪೋಷಕ ಅಥವಾ ವಿಶ್ವಾಸಾರ್ಹ ವಯಸ್ಕರೊಂದಿಗೆ ಮಾತನಾಡಿ. ನೀವು ಯಾವಾಗಲೂ ಆ ವ್ಯಕ್ತಿಯನ್ನು ನಿರ್ಬಂಧಿಸಬಹುದು ಮತ್ತು ಬೆದರಿಕೆ ನಡೆಯುತ್ತಿರುವಲ್ಲಿ ಯಾವುದೇ ಗುಂಪು ಚಾಟ್‌ನಿಂದ ನಿರ್ಗಮಿಸಬಹುದು.

  • ಹೆಚ್ಚುವರಿ ಸಹಾಯ: US ನಲ್ಲಿ Snapchatter ಗಳಿಗೆ ಹೆಚ್ಚುವರಿ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸಲು Crisis Text Line ಜೊತೆಗೂ ಸಹಾ Snapchat ಪಾಲುದಾರಿಕೆಯನ್ನು ಹೊಂದಿದೆ. Crisis Text Line ‌ನಲ್ಲಿ ನೇರ, ತರಬೇತಿ ಪಡೆದ ಬಿಕ್ಕಟ್ಟು ಸಲಹೆಗಾರರೊಂದಿಗೆ ಚಾಟ್ ಮಾಡಲು 741741 ಗೆ KIND ಎಂದು ಸಂದೇಶವನ್ನು ಕಳುಹಿಸಿ. ಈ ಸೇವೆಯು ಉಚಿತವಾಗಿದೆ ಮತ್ತು 24/7 ಲಭ್ಯವಿದೆ!

ಪಾಸ್‌ವರ್ಡ್ ಭದ್ರತೆ

ನಿಮ್ಮ ಪಾಸ್‌ವರ್ಡ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಿ ಮತ್ತು ಅದನ್ನು ಯಾವುದೇ ಸಂದರ್ಭಗಳಲ್ಲಿ, ಇತರ ಜನರು, ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳೊಂದಿಗೆ ಹಂಚಿಕೊಳ್ಳಬೇಡಿ. ನೀವು ಬಳಸುವ ಪ್ರತಿಯೊಂದು ಸೇವೆಗೂ ಬೇರೆ ಪಾಸ್‌ವರ್ಡ್ ಬಳಸುವಂತೆ ನಾವು ಸಲಹೆ ನೀಡುತ್ತೇವೆ.

ಸುರಕ್ಷತಾ ಸ್ನ್ಯಾಪ್‌ಶಾಟ್‌ಗೆ ಸಬ್‌ಸ್ಕ್ರೈಬ್ ಮಾಡಿ

ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ಮತ್ತು Snapchatter ಗಳಿಗೆ ಸುರಕ್ಷತೆ ಮತ್ತು ಗೌಪ್ಯತೆ ಸಲಹೆಗಳು ಹಾಗೂ ತಂತ್ರಗಳ ಕುರಿತು ಅರಿವು ಮೂಡಿಸಲು ಈ Discover ಚಾನೆಲ್ ರಚಿಸಲಾಗಿದೆ.

ನಿಮ್ಮ Discover ಕಂಟೆಂಟ್ ನಿರ್ವಹಿಸಿ

Discover ನಲ್ಲಿ, ವಿಶ್ವಾದ್ಯಂತ ನಡೆಯುತ್ತಿರುವ ಸಂಗತಿಗಳ ಕುರಿತು ತಿಳಿದುಕೊಳ್ಳಲು ನೀವು ಸ್ನೇಹಿತರ ಕಥೆಗಳು, ಪ್ರಕಾಶಕರ ಕಥೆಗಳು, ಶೋಗಳು, ಮತ್ತು Snap ಮ್ಯಾಪ್ ಅನ್ನು ನೋಡಬಹುದು! ನೀವು ಯಾವ Discover ವಿಷಯವನ್ನು ನೋಡಲು ಬಯಸುತ್ತೀರಿ ಎಂಬುದನ್ನು ಸಹ ನೀವು ನಿರ್ಧರಿಸಬಹುದು.

  • ಸಬ್‌ಸ್ಕ್ರಿಪ್ಶನ್‌ಗಳು: ಸ್ನೇಹಿತರ ವಿಭಾಗದ ಕೆಳಗಡೆ, ಪ್ರಕಾಶಕರು, ಕ್ರಿಯೇಟರ್‌ಗಳು ಮತ್ತು ನೀವು ಸಬ್‌ಸ್ಕ್ರೈಬ್ ಮಾಡಿರುವ ಇತರ ಚಾನೆಲ್‌ಗಳಿಂದ ನಿಮ್ಮ ಮೆಚ್ಚಿನ ಕಂಟೆಂಟ್ ಅನ್ನು ನೀವು ಕಾಣುತ್ತೀರಿ. ಯಾವ ಕಥೆಯನ್ನು ಇತ್ತೀಚೆಗೆ ನವೀಕರಿಸಲಾಗಿದೆ ಎಂಬುದರ ಮೂಲಕ ಇವುಗಳನ್ನು ವಿಂಗಡಿಸಲಾಗಿದೆ.

  • Discover: ಇಲ್ಲಿ ನೀವು ಇನ್ನೂ ಸಬ್‌ಸ್ಕ್ರೈಬ್ ಮಾಡಿಲ್ಲದ ಪ್ರಕಾಶಕರು ಮತ್ತು ಕ್ರಿಯೇಟರ್‌ಗಳಿಂದ ಶಿಫಾರಸು ಮಾಡಿದ ಬೆಳೆಯುತ್ತಿರುವ ಪಟ್ಟಿಯನ್ನು — ಹಾಗೂ ಪ್ರಾಯೋಜಿತ ಕಥೆಗಳು ಮತ್ತು ವಿಶ್ವಾದ್ಯಂತದ ನಮ್ಮ ಸಮುದಾಯದಿಂದ ಕಥೆಗಳನ್ನು ನೀವು ಕಾಣುತ್ತೀರಿ. ಒಂದು ವೇಳೆ ನೀವು ನೋಡುವ ಕೆಲವು ಸ್ಟೋರಿಯನ್ನು ನೀವು ನಿಜವಾಗಿಯೂ ಇಷ್ಟಪಡದಿದ್ದರೆ, ನೀವು ಯಾವಾಗಲೂ ಅದನ್ನು ಹೋಲ್ಡ್ ಡೌನ್ ಮಾಡಬಹುದು ಮತ್ತು ಆ ಸ್ಟೋರಿಯನ್ನು ಮರೆಮಾಡಲು 'ಮರೆಮಾಡಿ' ಟ್ಯಾಪ್ ಮಾಡಿ.

  • Discover ನಲ್ಲಿ ಕಥೆಗಳನ್ನು ಮರೆಮಾಡುವುದು: ನೀವು ನೋಡಲು ಬಯಸದೆ ಇರುವ ಯಾವುದೇ ಕಥೆಯನ್ನು ನೀವು ಯಾವಾಗಲೂ ಮರೆಮಾಡಬಹುದು. ಸ್ಟೋರಿಯನ್ನು ಒತ್ತಿ ಮತ್ತು ಹಿಡಿದಿರಿ ಹಾಗೂ 'ಮರೆಮಾಡಿ' ಟ್ಯಾಪ್ ಮಾಡಿ.

  • ಡಿಸ್ಕವರ್‌ನಲ್ಲಿ ಸ್ಟೋರಿಗಳನ್ನು ವರದಿ ಮಾಡುವುದು: ಡಿಸ್ಕವರ್‌ನಲ್ಲಿ ನೀವು ಅಸಮಂಜಸವಾದದ್ದನ್ನು ಕಂಡರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ! ಸೂಕ್ತವಲ್ಲದ Snap ಅನ್ನು ಒತ್ತಿ ಮತ್ತು ಹಿಡಿದುಕೊಳ್ಳಿ ಮತ್ತು ಅದನ್ನು ವರದಿ ಮಾಡಲು 'Snap ವರದಿ ಮಾಡಿ' ಬಟನ್ ಟ್ಯಾಪ್ ಮಾಡಿ.

ಕನಿಷ್ಟ ವಯಸ್ಸು

ವ್ಯಕ್ತಿಗಳು 13 ಕ್ಕಿಂತ ಹೆಚ್ಚು ವಯಸ್ಸಿನವರಾಗಿರಬೇಕು ಎಂಬುದನ್ನು Snapchat ಅಗತ್ಯಪಡಿಸುತ್ತದೆ ಮತ್ತು ಒಂದು ಖಾತೆ 13 ಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಂಬಂಧಿಸಿದೆ ಎಂದು ನಾವು ನಿರ್ಧರಿಸಿದರೆ, ಅದನ್ನು ಕೊನೆಗೊಳಿಸಲು ನಾವು ಕ್ರಮ ಕೈಗೊಳ್ಳುತ್ತೇವೆ.