ಆಸ್ಟ್ರೇಲಿಯಾ
ಬಿಡುಗಡೆ ಮಾಡಿರುವುದು: 15 ಡಿಸೆಂಬರ್ 2023
ಅಪ್‌ಡೇಟ್ ಮಾಡಿರುವುದು: 15 ಡಿಸೆಂಬರ್ 2023
Snapchat ನಲ್ಲಿ ಆನ್‌ಲೈನ್ ಸುರಕ್ಷತೆ
Snapchat ನಲ್ಲಿ ನಾವು ಸೃಜನಶೀಲತೆ ಮತ್ತು ಅಭಿವ್ಯಕ್ತಿಗಾಗಿ ಸುರಕ್ಷಿತ, ವಿನೋದಮಯ ವಾತಾವರಣವನ್ನು ಒದಗಿಸಲು ಶ್ರಮಿಸುತ್ತೇವೆ. ನಮ್ಮ ವೇದಿಕೆಯಾದ್ಯಂತ, ನಮ್ಮ ಸಮುದಾಯದ ಗೌಪ್ಯತೆಯ ಹಿತಾಸಕ್ತಿಗಳನ್ನು ಗೌರವಿಸುವುದರೊಂದಿಗೆ ಸುರಕ್ಷತೆಯನ್ನು ಸುಧಾರಿಸಲು ನಾವು ಬದ್ಧರಾಗಿದ್ದೇವೆ. ಈ ಕೆಳಗಿನವುಗಳ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಿ:
ನಮ್ಮ ಸೇವೆಯ ನಿಯಮಗಳು, ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ಗೌಪ್ಯತೆ ನೀತಿ ಸೇರಿದಂತೆ ನಮ್ಮ ಸುರಕ್ಷತೆ ಮತ್ತು ಗೌಪ್ಯತೆ ನೀತಿಗಳು,
Snapchat ನಲ್ಲಿ ಆ್ಯಪ್ ಒಳಗೆ ಅಥವಾ ವೆಬ್ನಲ್ಲಿ ನಮ್ಮ Snapchat ಬೆಂಬಲ ಸೈಟ್ ಮೂಲಕ ಒಂದು ಸುರಕ್ಷತಾ ಕಳವಳವನ್ನು ವರದಿ ಮಾಡುವುದುಹೇಗೆ,
ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳಿಗಾಗಿ ಸೂಕ್ತ ದಂಡನೆಗಳನ್ನು ನಾವು ಹೇಗೆ ನಿರ್ಧರಿಸುತ್ತೇವೆ ಹಾಗೂ Snapchat ನಲ್ಲಿ ಸಂಬಂಧಿಸಿದ ಖಾತೆ ಅಥವಾ ವಿಷಯ ಕುರಿತ ನಮ್ಮ ಒಂದು ನಿರ್ಧಾರದ ವಿರುದ್ಧ ಹೇಗೆ ಮೇಲ್ಮನವಿ ಸಲ್ಲಿಸಬಹುದು ಎಂಬುದು ಸೇರಿದಂತೆ, ನಿಯಂತ್ರಣ, ಜಾರಿಗೊಳಿಸುವಿಕೆ ಮತ್ತು ಮೇಲ್ಮನವಿಗಳಿಗೆ ನಮ್ಮ ವಿಧಾನ,
ಕೌನ್ಸೆಲಿಂಗ್ ಮತ್ತು ಬೆಂಬಲ ಪಡೆಯಲು ಆಸ್ಟ್ರೇಲಿಯನ್ ಮತ್ತು ಜಾಗತಿಕ ಬಳಕೆದಾರರಿಗೆ ಲಭ್ಯವಿರುವ ಇತರ ಸುರಕ್ಷತಾ ಸಂಪನ್ಮೂಲಗಳು.
Snap ನ ಸುರಕ್ಷತಾ ನೀತಿಗಳು ಮತ್ತು ಅಭ್ಯಾಸಗಳ ಕುರಿತು ನೀವು ಹೊಂದಿರಬಹುದಾದ ಯಾವುದೇ ಪ್ರಶ್ನೆಗಳು, ಕಳವಳಗಳು ಅಥವಾ ದೂರುಗಳೊಂದಿಗೆ ನೀವು ಯಾವಾಗಲೂ ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು.
ಪೋಷಕರು ಮತ್ತು ಹದಿಹರೆಯದವರ ಕಾಳಜಿ ವಹಿಸುವವರಿಗಾಗಿ ಮಾಹಿತಿ
13+ ವಯಸ್ಸಿನ ವ್ಯಕ್ತಿಗಳು ಮಾತ್ರ Snapchat ಅಕೌಂಟ್ ರಚಿಸಬಹುದು. ಒಂದು ಖಾತೆ 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಂಬಂಧಿಸಿದೆ ಎಂದು ನಾವು ನಿರ್ಧರಿಸಿದರೆ, ಅದನ್ನು ಸಮಾಪ್ತಿಗೊಳಿಸಲು ನಾವು ಕ್ರಮ ಕೈಗೊಳ್ಳುತ್ತೇವೆ.
ನಮ್ಮ Snapchat ಗೆ ಪೋಷಕರ ಮಾರ್ಗದರ್ಶಿಯು ಪೋಷಕರು ಮತ್ತು ಹದಿಹರೆಯದವರ (13-17 ವರ್ಷದ ವಯಸ್ಕರು) ಕಾಳಜಿ ಮಾಡುವವರಿಗಾಗಿ ಮಾಹಿತಿ, ಟೂಲ್‌ಗಳು ಮತ್ತು ಇತರ ಸಂಪನ್ಮೂಲಗಳನ್ನು ಒದಗಿಸುತ್ತದೆ. ಇದು Snapchat ಗೆ ಒಂದು ಪರಿಚಯವನ್ನು, ಹದಿಹರೆಯದವರ ಸುರಕ್ಷತೆಯನ್ನು ರಕ್ಷಿಸಲು ನಾವು ವಿಧಿಸಿರುವ ಸುರಕ್ಷತಾ ಕ್ರಮಗಳ ಅವಲೋಕನವನ್ನು, ನಮ್ಮ ಪೋಷಕರ ನಿಯಂತ್ರಣ ಟೂಲ್‌ಗಳ ಗುಚ್ಛವಾದ ಕೌಟುಂಬಿಕ ಕೇಂದ್ರಕ್ಕೆ ಮಾರ್ಗದರ್ಶಿಯನ್ನು ಮತ್ತು ಇತರ ಸಂಪನ್ಮೂಲಗಳನ್ನು ಒದಗಿಸುತ್ತದೆ.
ಇ-ಸುರಕ್ಷತಾ ಆಯೋಗ
ಇ-ಸುರಕ್ಷತಾ ಆಯೋಗವು ಆಸ್ಟ್ರೇಲಿಯಾದ ಆನ್‌ಲೈನ್ ಸುರಕ್ಷತಾ ನಿಯಂತ್ರಕರಾಗಿದ್ದಾರೆ. ಎಲ್ಲ ಆಸ್ಟ್ರೇಲಿಯನ್ನರನ್ನು ಆನ್‌ಲೈನ್ ಹಾನಿಗಳಿಂದ ಸುರಕ್ಷಿತವಾಗಿರಿಸಲು ಮತ್ತು ಹೆಚ್ಚು ಸುರಕ್ಷಿತ, ಸಕಾರಾತ್ಮಕ ಆನ್‌ಲೈನ್ ಅನುಭವಗಳನ್ನು ಪ್ರೋತ್ಸಾಹಿಸಲು ಸಹಾಯ ಮಾಡುವುದು ಅದರ ಘೋಷಿತ ಉದ್ದೇಶವಾಗಿದೆ. ಆಸ್ಟ್ರೇಲಿಯಾದ ಸರ್ಕಾರಿ ಶಾಸನ, ನಿರ್ದಿಷ್ಟವಾಗಿ ಆನ್‌ಲೈನ್ ಸುರಕ್ಷತಾ ಕಾಯ್ದೆ 2021 ರ ಅಡಿಯಲ್ಲಿ ಅದಕ್ಕೆ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ ಈ ಆದೇಶವನ್ನು ಅದು ಜಾರಿಗೊಳಿಸುತ್ತದೆ. ಇತರ ವಿಷಯಗಳ ಜೊತೆಗೆ, ವಯಸ್ಕರರ ಸೈಬರ್ ದೌರ್ಜನ್ಯ, ಮಕ್ಕಳ ಸೈಬರ್ ಬೆದರಿಸುವಿಕೆ ಮತ್ತು ಚಿತ್ರ ಆಧರಿತ ದೌರ್ಜನ್ಯ ಸೇರಿದಂತೆ, ಹಾನಿಕಾರಕ ಆನ್‌ಲೈನ್ ಕಂಟೆಂಟ್ ಅನ್ನು ವರದಿ ಮಾಡಲು ಆಸ್ಟ್ರೇಲಿಯನ್ನರಿಗೆ ಅವಕಾಶ ಕಲ್ಪಿಸುವ ಹಲವು ನಿಯಂತ್ರಕ ಸ್ಕೀಮ್‌ಗಳನ್ನು ಆಸ್ಟ್ರೇಲಿಯಾದ ಇ-ಸುರಕ್ಷತಾ ಆಯೋಗವು ನಡೆಸುತ್ತದೆ.
ಇ-ಸುರಕ್ಷತಾ ಆಯುಕ್ತದ ಪಾತ್ರ ಮತ್ತು ಕಾರ್ಯವೈಶಿಷ್ಟ್ಯಗಳ ಕುರಿತು ಇನ್ನಷ್ಟು ಮಾಹಿತಿಗಾಗಿ ಅಥವಾ ಇ-ಸುರಕ್ಷತಾ ಆಯುಕ್ತರು ಪ್ರಕಟಿಸಿದ ಟೂಲ್‌ಗಳು ಮತ್ತು ಸಂಪನ್ಮೂಲಗಳನ್ನು ಆ್ಯಕ್ಸೆಸ್ ಮಾಡಲು, ನೀವು ಈ ಪುಟಕ್ಕೆ ಭೇಟಿ ನೀಡಬಹುದು. ಇ-ಸುರಕ್ಷತಾ ಆಯೋಗಕ್ಕೆ ದೂರು ಸಲ್ಲಿಸುವುದು ಹೇಗೆ ಎಂಬ ಮಾಹಿತಿಗಾಗಿ ದಯವಿಟ್ಟು ಈ ಪುಟಕ್ಕೆ ಭೇಟಿ ನೀಡಿ.
ಇ-ಸುರಕ್ಷತಾ ಆಯೋಗದ ವೆಬ್‌ಸೈಟ್ ಸೇರಿದಂತೆ, ತೃತೀಯ-ಪಕ್ಷದ ವೆಬ್‌ಸೈಟ್‌ನ ಕಂಟೆಂಟ್‌ಗಳಿಗೆ ನಾವು ಜವಾಬ್ದಾರರಲ್ಲ.