ಪಾರದರ್ಶಕತೆಯ ವರದಿಯಲ್ಲಿ, ನಾವು ಪ್ಲ್ಯಾಟ್‌ಫೊರ್ಮ್‌ನಾದ್ಯಂತ ಕೈಗೊಳ್ಳುವ ಸುರಕ್ಷತಾ ಕ್ರಮಗಳನ್ನು ಒದಗಿಸುತ್ತೇವೆ. ನಮ್ಮ ಸುರಕ್ಷತಾ ತತ್ವಗಳು, ನೀತಿಗಳು ಮತ್ತು ಅಭ್ಯಾಸಗಳ ಕುರಿತು ಹೆಚ್ಚುವರಿ ಮಾಹಿತಿ ಮತ್ತು ಒಳನೋಟಗಳು, ಹಾಗೂ ವಿವಿಧ ಸುರಕ್ಷತಾ ಮತ್ತು ಗೌಪ್ಯತಾ ಸಂಪನ್ಮೂಲಗಳಿಗೆ ಲಿಂಕ್‌ಗಳನ್ನು ಒದಗಿಸುತ್ತೇವೆ.
2015 ರಿಂದ, Snapchat ಬಳಕೆದಾರರ ಖಾತೆ ಮಾಹಿತಿ ಮತ್ತು ಇತರ ಕಾನೂನು ಅಧಿಸೂಚನೆಗಳಿಗಾಗಿ ಸರ್ಕಾರದ ವಿನಂತಿಗಳ ಪ್ರಮಾಣ ಮತ್ತು ಸ್ವರೂಪದ ಕುರಿತು ಒಳನೋಟಗಳನ್ನು ಒದಗಿಸುವ ಪಾರದರ್ಶಕತೆ ವರದಿಗಳನ್ನು ನಾವು ಸಿದ್ಧಪಡಿಸಿದ್ದೇವೆ.
15 ನವೆಂಬರ್ 2015 ರಿಂದ, ಕಾನೂನಾತ್ಮಕ ಪ್ರಕ್ರಿಯೆಯ ಭಾಗವಾಗಿ ಖಾತೆಯ ಮಾಹಿತಿಯನ್ನು ನೀಡುವಂತೆ ವಿನಂತಿಗಳನ್ನು ಪಡೆದಾಗ, ಅಥವಾ ಅಸಾಧಾರಣ ಪರಿಸ್ಥಿತಿಗಳು ಮೂಡಿಬಂದಿರುವುದಾಗಿ ನಾವು ಭಾವಿಸಿದಾಗ (ಉದಾಹರಣೆಗಾಗಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ, ಅಥವಾ ಸಾವು ಅಥವಾ ಗಂಭೀರ ದೈಹಿಕ ಗಾಯದ ಸನ್ನಿಹಿತ ಅಪಾಯಗಳಂತಹ ಸಂದರ್ಭಗಳಲ್ಲಿ), ಕಾನೂನಾತ್ಮಕವಾಗಿ ನಿಷೇಧಿಸಲ್ಪಟ್ಟಂತಹ ನಿರ್ದೇಶನಗಳನ್ನು ಹೊರತುಪಡಿಸಿ, ನಾವು Snapchat ಬಳಕೆದಾರರಿಗೆ ತಿಳಿಸುವುದು ನಮ್ಮ ನೀತಿಯಾಗಿದೆ.
2020 ರಲ್ಲಿ, ನಮ್ಮ ಸೇವೆಯ ನಿಯಮಗಳು ಅಥವಾ ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಾಗಿ Snapchat ನಲ್ಲಿ ವರದಿ ಮಾಡಲಾಗಿರುವ ಖಾತೆಗಳ ಪ್ರಮಾಣ ಮತ್ತು ಸ್ವರೂಪಗಳಿಗೆ ಸಂಬಂಧಿಸಿದ ಒಳನೋಟಗಳನ್ನು ಒದಗಿಸಲು ನಾವು ನಮ್ಮ ಪಾರದರ್ಶಕತೆ ವರದಿಯನ್ನು ಸುಧಾರಣೆ ಮಾಡಿದ್ದೇವೆ. ಡೌನ್‌ಲೋಡ್ ಮಾಡಬಹುದಾದ CSV ರೂಪದಲ್ಲಿ ಎಲ್ಲ ದೇಶಗಳಿಗೆ ಲಭ್ಯವಿರುವ, ದೇಶಗಳ ಮಟ್ಟದ ಅಂಕಿಅಂಶಗಳನ್ನು ಕೂಡ ನಾವು ಸೇರಿಸಿದ್ದೇವೆ. 2021 ರಲ್ಲಿ, ನಾವು ಸುಳ್ಳು ಮಾಹಿತಿಯ ವರದಿಗಳು, ಟ್ರೇಡ್‌ಮಾರ್ಕ್ ಸೂಚನೆಗಳು ಮತ್ತು ಉಲ್ಲಂಘನಾತ್ಮಕ ವೀಕ್ಷಣಾ ದರದ ಕುರಿತಾದ ಡೇಟಾವನ್ನು ಸೇರಿಸಲು ನಮ್ಮ ಪಾರದರ್ಶಕತಾ ವರದಿನೀಡುವಿಕೆಯ ವ್ಯಾಪ್ತಿಯನ್ನು ವಿಸ್ತರಿಸಿದೆವು. 2022 ರಲ್ಲಿ, ನಾವು ಮಾದಕಪದಾರ್ಥಗಳು, ಶಸ್ತ್ರಾಸ್ತ್ರಗಳು ಹಾಗೂ ಆತ್ಮಹತ್ಯೆ ಮತ್ತು ಸ್ವಯಂ-ಹಾನಿಯ ಕುರಿತು ನಮ್ಮ ಉದಾರ ಪರಿಷ್ಕರಣ ಕ್ರಮಗಳ ಕುರಿತು ಹೆಚ್ಚುವರಿ ಒಳನೋಟಗಳನ್ನು ಒದಗಿಸಿದೆವು.
2023 ರಲ್ಲಿ, ನಾವು ಅನ್ವಯವಾಗುವ ಕಾನೂನಾತ್ಮಕ ಅಗತ್ಯಗಳಿಗೆ ಅನುಸಾರವಾಗಿ ಕೆಲವು ಭೌಗೋಳಿಕ ಪ್ರದೇಶಗಳ ಮೇಲೆ ಕೇಂದ್ರೀಕರಿಸುವ ಹೆಚ್ಚುವರಿ ಪಾರದರ್ಶಕತಾ ವರದಿಗಳನ್ನು ಪ್ರಕಟಿಸಲು ಆರಂಭಿಸಿದೆವು. ಆಸ್ಟ್ರೇಲಿಯಾ, ಕ್ಯಾಲಿಫೋರ್ನಿಯಾ ಮತ್ತು ಐರೋಪ್ಯ ಒಕ್ಕೂಟಕ್ಕಾಗಿ ನಮ್ಮ ಮೀಸಲಾದ ಪುಟಗಳು ನಮ್ಮ ಜಾಗತಿಕ ಪಾರದರ್ಶಕತಾ ವರದಿಯಲ್ಲಿ ನಾವು ಒದಗಿಸುವ ಮಾಹಿತಿಗೆ ಪೂರಕವಾಗಿರುತ್ತವೆ.
2024 ರಲ್ಲಿ, ನಾವು ನಮ್ಮ ಸಕ್ರಿಯಾತ್ಮಕ ಸುರಕ್ಷತಾ ಪ್ರಯತ್ನಗಳ ಕುರಿತು ಹೆಚ್ಚುವರಿ ಡೇಟಾ ಮತ್ತು ಒಳನೋಟಗಳನ್ನು ಸೇರಿಸಲು ನಮ್ಮ ಜಾಗತಿಕ ಪಾರದರ್ಶಕತಾ ವರದಿಯನ್ನು ಪರಿಷ್ಕರಿಸಿದೆವು.
ಜಾಗತಿಕ ಕಾನೂನಾತ್ಮಕ ಅಗತ್ಯಗಳಿಗೆ ಅನುಸಾರವಾಗಿ ನಮ್ಮ ಪಾರದರ್ಶಕತಾ ವರದಿ ಮಾಡುವಿಕೆ ಅಭ್ಯಾಸಗಳನ್ನು ಇನ್ನಷ್ಟು ವರ್ಧಿಸಲು ನಾವು ನಿರಂತರವಾಗಿ ಶ್ರಮಿಸುತ್ತೇವೆ.
Snap ಸುರಕ್ಷತೆ ಮತ್ತು ಗೌಪ್ಯತೆ, ನಮ್ಮ ನೀತಿಗಳು ಮತ್ತು ಸಂಬಂಧಿತ ಸಾಧನಗಳಿಗೆ ಸಂಬಂಧಿಸಿದಂತೆ Snapchatter ಗಳು ಮತ್ತು ಬಾಹ್ಯ ಪಾಲುದಾರರಿಗೆ ಸಹಾಯಕಾರಿ ಸಂಪನ್ಮೂಲಗಳನ್ನು ಒದಗಿಸಲು ಬದ್ಧವಾಗಿದೆ. ಈ ಸಂಪನ್ಮೂಲಗಳು ನಮ್ಮ ಗೌಪ್ಯತೆ, ಸುರಕ್ಷತೆ ಮತ್ತು ನೀತಿ ಕೇಂದ್ರದಲ್ಲಿ ಲಭ್ಯವಿರುವವು. ಇವುಗಳಲ್ಲಿನ ಕೆಲವು ಮತ್ತು ಹೆಚ್ಚುವರಿ ಸಂಪನ್ಮೂಲಗಳ ಪ್ರಮುಖಾಂಶಗಳನ್ನು ನಾವು ಈ ಕೆಳಗೆ ಒದಗಿಸಿದ್ದೇವೆ.
Snap 13+ ವಯಸ್ಸಿನ ಬಳಕೆದಾರರಿಗಾಗಿ ಇರುವ ವೇದಿಕೆಯಾಗಿರುವುದರಿಂದ, ಈ ವೇದಿಕೆಯನ್ನು ಸುರಕ್ಷಿತವಾಗಿ ಇರಿಸುವುದು ಹೇಗೆ ಎನ್ನುವ ಕುರಿತು ಎಲ್ಲ ಬಳಕೆದಾರರಿಗೆ ತಿಳಿಸುವುದು ಮತ್ತು ಎಲ್ಲರನ್ನೂ ತೊಡಗಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ನಾವು ನಂಬಿದ್ದೇವೆ. ನಮ್ಮ ಕೌಟುಂಬಿಕ ಸುರಕ್ಷತಾ ಕೇಂದ್ರ ಮತ್ತು ಕೌಟುಂಬಿಕ ಕೇಂದ್ರ, ಪೋಷಕರಿಗಾಗಿ Snap ನ ಆ್ಯಪ್‌ನಲ್ಲಿನ ಸಾಧನಗಳಂತಹ ಹಲವಾರು ಸಂಪನ್ಮೂಲಗಳೊಂದಿಗೆ, ನಾವು ಬಳಕೆದಾರರು ಮತ್ತು ಅವರ ಕುಟುಂಬಗಳು Snapchat ನಲ್ಲಿ ಸುರಕ್ಷಿತವಾಗಿರುವ ವಿಧಾನಗಳ ಕುರಿತು ಸಂವಹನ ಮಾಡಲು ಮತ್ತು ಅರ್ಥಮಾಡಿಸಲು ಅಗತ್ಯವಿರುವ ಸಾಧನಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ.
ನಮ್ಮ ಸಮುದಾಯ ಮಾರ್ಗಸೂಚಿಗಳು ನಮ್ಮ ಸುರಕ್ಷತಾ ತತ್ವಗಳ ಅಡಿಪಾಯವನ್ನು ರೂಪಿಸುತ್ತವೆ ಮತ್ತು Snapchat ನ ಜವಾಬ್ದಾರಿಯುತ ಬಳಕೆಯ ಬಗ್ಗೆ ಬಳಕೆದಾರರಿಗೆ ತಿಳಿಸಲು ಉದ್ದೇಶಿಸಲಾಗಿದೆ. Snapchat ಅನ್ನು ಸುರಕ್ಷಿತವಾಗಿರಿಸುವುದಕ್ಕೆ ಸಹಾಯ ಮಾಡಲು ಸಕ್ರಿಯವಾಗಿ ಕೆಲಸ ಮಾಡುವ ಒಂದು ಮಾರ್ಗವಾಗಿ ನಾವು ನಮ್ಮ ಮಾರ್ಗಸೂಚಿಗಳನ್ನು ವಾಡಿಕೆಯಂತೆ ಮೌಲ್ಯಮಾಪನ ಮಾಡುತ್ತೇವೆ.
ಸುರಕ್ಷತಾ ಕಳವಳವನ್ನು ವರದಿ ಮಾಡುವುದು
Snapchat ಅನ್ನು ಸುರಕ್ಷಿತವಾಗಿರಿಸಲು ಸುರಕ್ಷತಾ ತಂಡಗಳು ಮತ್ತು ಸುಧಾರಿತ AI 24/7 ಕಾರ್ಯನಿರ್ವಹಿಸುತ್ತಿರುವಾಗ, ನಾವು ಕಳವಳಗಳನ್ನು ವರದಿ ಮಾಡಲು ನಮ್ಮ ಬಳಕೆದಾರರನ್ನು ಅವಲಂಬಿಸುತ್ತೇವೆ. ಹಾಗೆ ಮಾಡುವುದಕ್ಕಾಗಿ, ನಮ್ಮ ನೀತಿಗಳನ್ನು ಉಲ್ಲಂಘಿಸುವ ವಿಷಯ ಮತ್ತು ವ್ಯಕ್ತಿಗಳನ್ನು ವರದಿ ಮಾಡಲು ನಾವು ಆ್ಯಪ್‌ನಲ್ಲಿ ಮತ್ತು ಆನ್‌ಲೈನ್‌ನಲ್ಲಿ ಸಾಧನಗಳನ್ನು ಒದಗಿಸುತ್ತೇವೆ.
Here for Youನಿಮಗಾಗಿ ಇಲ್ಲಿದ್ದೇವೆ
Snap ನಲ್ಲಿ ನಮ್ಮ ಬಳಕೆದಾರರ ಯೋಗಕ್ಷೇಮ ಮತ್ತು ಸುರಕ್ಷತೆ ನಮಗೆ ಅತ್ಯಂತ ಆದ್ಯತೆಯ ವಿಷಯವಾಗಿದೆ. ನಮ್ಮ ಬಳಕೆದಾರರಿಗೆ ಆಕರ್ಷಕ ಮತ್ತು ಅತ್ಯಂತ ಗಮನ ನೀಡುವಿಕೆಯ ಸಂಪನ್ಮೂಲಗಳನ್ನು ಒದಗಿಸಲು, ನಾವು ನಿಮಗಾಗಿ ಇಲ್ಲಿದ್ದೇವೆ ಯಂಥ ಆ್ಯಪ್‌ನಲ್ಲಿನ ಟೂಲ್‌ಗಳನ್ನು ಅಭಿವೃದ್ಧಿಪಡಿಸಿದ್ದು ಇದು ಮಾನಸಿಕ ಆರೋಗ್ಯ ಸಮಸ್ಯೆ ಅಥವಾ ಭಾವನಾತ್ಮಕ ಬಿಕ್ಕಟ್ಟು ಎದುರಿಸುತ್ತಿರುವ Snapchat ಬಳಕೆದಾರರಿಗೆ ಸಕ್ರಿಯ ಆ್ಯಪ್‌ನಲ್ಲಿನ ಬೆಂಬಲವನ್ನು ಒದಗಿಸುತ್ತದೆ.
Snap ನಲ್ಲಿ, ನಾವು ನಿಮ್ಮ ಗೌಪ್ಯತೆಗೆ ಆದ್ಯತೆ ನೀಡುತ್ತೇವೆ. ನೀವು Snapchat ಅಥವಾ ನಮ್ಮ ಯಾವುದೇ ಉತ್ಪನ್ನಗಳನ್ನು ಬಳಸುವಾಗಲೆಲ್ಲಾ ನಿಮ್ಮ ನಂಬಿಕೆಯನ್ನು ಗಳಿಸಲು ನಾವು ಪ್ರಯತ್ನಿಸುತ್ತೇವೆ — ಅದಕ್ಕಾಗಿಯೇ ನಾವು ನಿಮ್ಮ ಮಾಹಿತಿಯನ್ನು ಇತರ ತಂತ್ರಜ್ಞಾನ ಕಂಪನಿಗಳಿಗಿಂತ ವಿಭಿನ್ನವಾಗಿ ಪರಿಗಣಿಸುತ್ತೇವೆ. ನಮ್ಮ ಉತ್ಪನ್ನಗಳು ನಿರಂತರವಾಗಿ ವಿಕಸನಗೊಳ್ಳುತ್ತಿದ್ದರೂ ಸಹ, ನಮ್ಮ ಗೌಪ್ಯತೆಯ ತತ್ವಗಳು ಮತ್ತು ಬಳಕೆದಾರರ ಗೌಪ್ಯತೆಗೆ ಬಲವಾದ ಬದ್ಧತೆಯು ಬದಲಾಗದೆ ಉಳಿಯುತ್ತದೆ.
ವಾರ್ಷಿಕ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕದ (DWBI) ಮೂಲಕ ಪೀಳಿಗೆ Z ನ ಡಿಜಿಟಲ್ ಯೋಗಕ್ಷೇಮವನ್ನು ಮೌಲ್ಯಮಾಪನ ಮಾಡುವ ಮತ್ತು ವರ್ಧಿಸುವ ನಮ್ಮ ಬದ್ಧತೆಯಲ್ಲಿ ನಾವು ದೃಢವಾಗಿ ನಿರತರಾಗಿದ್ದೇವೆ. 2022 ರಲ್ಲಿ ಆರಂಭಿಸಲಾದ ಈ ಸಮಗ್ರ ಅಧ್ಯಯನವು—ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, UK, ಮತ್ತು US—ಈ ಆರು ದೇಶಗಳಾದ್ಯಂತದ ಹದಿಹರೆಯದವರು, ಯುವ ವಯಸ್ಕರು ಮತ್ತು ಅವರ ಪೋಷಕರ ಆನ್‌ಲೈನ್ ಯೋಗಕ್ಷೇಮಗಳನ್ನು ಅಳೆಯಲು ಅವರನ್ನೊಳಗೊಂಡ ಸಮೀಕ್ಷೆಗಳನ್ನು ನಡೆಸುತ್ತದೆ. DWBI PERNA ಮಾದರಿಯನ್ನು ಬಳಸುತ್ತದೆ, ಇದು—ಸಕಾರಾತ್ಮಕ ಭಾವನೆ, ತೊಡಗಿಸಿಕೊಳ್ಳುವಿಕೆ, ಸಂಬಂಧಗಳು, ನಕಾರಾತ್ಮಕ ಭಾವನೆ ಮತ್ತು ಸಾಧನೆಗಳು—ಇವುಗಳನ್ನೊಳಗೊಂಡಂತಹ ಐದು ವರ್ಗಗಳಾದ್ಯಂತ 20 ಭಾವನಾತ್ಮಕ ಹೇಳಿಕೆಗಳನ್ನು ಒಳಗೊಂಡಿರುತ್ತದೆ. ಈ ಸಂಶೋಧನೆಯನ್ನು ನಿರಂತರವಾಗಿ ಮೂಲಕ, Snap ಯುವಜನರ ಆನ್‌ಲೈನ್ ಅನುಭವಗಳ ಕುರಿತು ಮೌಲ್ಯಯುತ ಒಳನೋಟಗಳನ್ನು ಒದಗಿಸುವ ಹಾಗೂ ಸುರಕ್ಷಿತ ಮತ್ತು ಹೆಚ್ಚು ಬೆಂಬಲಿಸುವ ಡಿಜಿಟಲ್ ವಾತಾವರಣವನ್ನು ಉತ್ತೇಜಿಸುವ ಸಾಧನಗಳು ಮತ್ತು ಸಂಪನ್ಮೂಲಗಳ ಅಭಿವೃದ್ಧಿಗಳ ಕುರಿತಾದ ಮಾಹಿತಿಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ನಾವು ಪೂರ್ವಭಾವಿ ಪತ್ತೆ ವ್ಯವಸ್ಥೆಗಳು, NCMEC ನ "ಟೇಕ್ ಇಟ್ ಡೌನ್" ಉಪಕ್ರಮದೊಂದಿಗಿನ ಪಾಲುದಾರಿಕೆಗಳು, ಆ್ಯಪ್‌ನಲ್ಲಿನ ವರ್ಧಿತ ವರದಿ ಮಾಡುವಿಕೆ ಸಾಧನಗಳು ಮತ್ತು ಶೈಕ್ಷಣಿಕ ಸಂಪನ್ಮೂಲಗಳ ಮೂಲಕ ಹಣಕಾಸಿನ ಲೈಂಗಿಕ ಶೋಷಣೆಯನ್ನು ಸಕ್ರಿಯವಾಗಿ ಸದೆಬಡಿಯುವ ಗುರಿಯನ್ನು ಹೊಂದಿದ್ದೇವೆ. ಅಪರಾಧವೆಸಗುವ ಖಾತೆಗಳನ್ನು ತ್ವರಿತವಾಗಿ ತೆಗೆದುಹಾಕಲಾಗುತ್ತದೆ ಹಾಗೂ ಅಗತ್ಯವಿದ್ದಾಗ ಪ್ರಾಧಿಧಿಕಾರಗಳಿಗೆ ವರದಿ ಮಾಡಲಾಗುತ್ತದೆ.
Snapchat ಹೇಗೆ ಕಾರ್ಯನಿರ್ವಹಿಸುತ್ತದೆ, ಹದಿಹರೆಯದವರಿಗೆ ನಾವು ನೀಡುವ ಪ್ರಮುಖ ರಕ್ಷಣೆಗಳು, ನಮ್ಮ ಪೋಷಕರ ನಿಯಂತ್ರಣಗಳನ್ನು ಹೇಗೆ ಬಳಸುವುದು ಮತ್ತು ಸಾಮಾನ್ಯಕ್ಕೆ ಉತ್ತರಿಸಲು ಪೋಷಕರು ಮತ್ತು ಆರೈಕೆದಾರರಿಗೆ ಈ ಮಾರ್ಗದರ್ಶಿಯು ಸಹಾಯ ಮಾಡುತ್ತದೆ.
Snap ನಿಂದ Snapchat ಖಾತೆ ದಾಖಲೆಗಳನ್ನು (ಅಂದರೆ, Snapchat ಬಳಕೆದಾರರ ಡೇಟಾ) ಬಯಸುವ ಕಾನೂನು ಜಾರಿ ಅಧಿಕಾರಿಗಳಿಗೆ ಈ ಮಾರ್ಗದರ್ಶಿಯು ಮಾಹಿತಿಯನ್ನು ಒದಗಿಸುತ್ತದೆ.
ಏಪ್ರಿಲ್ 2021 ರಲ್ಲಿ ಪ್ರಾರಂಭಿಸಲಾದ ನಮ್ಮ ಬ್ಲಾಗ್, ನಮ್ಮ Snapchat ಸಮುದಾಯದ ಸುರಕ್ಷತೆ, ಗೌಪ್ಯತೆ ಮತ್ತು ಯೋಗಕ್ಷೇಮವನ್ನು ಬೆಂಬಲಿಸಲು ನಾವು ಹೇಗೆ ಕೆಲಸ ಮಾಡುತ್ತೇವೆ ಎಂಬುದರ ಕುರಿತು ಆಸಕ್ತಿ ಹೊಂದಿರುವ ಅನೇಕ ಪಾಲುದಾರು ಮತ್ತು ಸಮರ್ಥಕರಿಗೆ ಸಹಾಯಕಾರಿ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ.