ನಮ್ಮ ಪಾರದರ್ಶಕತೆಯ ವರದಿಯಲ್ಲಿ ಚರ್ಚಿಸಲಾಗಿರುವ ಸಾಮಾನ್ಯವಾಗಿ ಬಳಸುವ ಪದಗಳು, ನೀತಿಗಳು ಮತ್ತು ಕಾರ್ಯಾಚರಣೆಯ ಅಭ್ಯಾಸಗಳ ವ್ಯಾಖ್ಯಾನಗಳನ್ನು ಕೆಳಗೆ ಸೇರಿಸಿದ್ದೇವೆ.
ಲೈಂಗಿಕ ವಿಷಯ: ಲೈಂಗಿಕ ನಗ್ನತೆ, ಅಶ್ಲೀಲತೆ ಅಥವಾ ವಾಣಿಜ್ಯಕ ಲೈಂಗಿಕ ಸೇವೆಗಳ ಪ್ರಚಾರ ಅಥವಾ ವಿತರಣೆಯನ್ನು ಉಲ್ಲೇಖಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಲೈಂಗಿಕ ಕಂಟೆಂಟ್‌ಗಳ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ. ಗಮನಿಸಿ, ನಮ್ಮ ಪಾರದರ್ಶಕತೆ ವರದಿಗಳ ಉದ್ದೇಶಗಳಿಗಾಗಿ, ನಾವು ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆಗೆ ಸಂಬಂಧಿಸಿದ ಡೇಟಾವನ್ನು ಇತರ ರೀತಿಯ ಲೈಂಗಿಕ ಕಂಟೆಂಟ್‌ಗಳಿಂದ ಪ್ರತ್ಯೇಕವಾಗಿ ವ್ಯಾಖ್ಯಾನಿಸುತ್ತೇವೆ ಮತ್ತು ಅನುಸರಿಸಿತ್ತೇವೆ.
ಕಿರುಕುಳ ಮತ್ತು ಬೆದರಿಸುವಿಕೆ: ಮೌಖಿಕ ನಿಂದನೆಯಂತಹ ಸಾಮಾನ್ಯ ವ್ಯಕ್ತಿಗೆ ಭಾವನಾತ್ಮಕ ಯಾತನೆಗೆ ಕಾರಣವಾಗಬಹುದಾದ ಯಾವುದೇ ಅನಪೇಕ್ಷಿತ ನಡವಳಿಕೆಯನ್ನು ಉಲ್ಲೇಖಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕಿರುಕುಳ ಮತ್ತು ನಿಂದೆಯ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ.
ಬೆದರಿಕೆಗಳು ಮತ್ತು ಹಿಂಸೆ: ಗಂಭೀರ ದೈಹಿಕ ಅಥವಾ ಭಾವನಾತ್ಮಕ ಹಾನಿಯನ್ನುಂಟುಮಾಡುವ ಉದ್ದೇಶವನ್ನು ವ್ಯಕ್ತಪಡಿಸುವ ಕಂಟೆಂಟ್ ಅನ್ನು ಉಲ್ಲೇಖಿಸುತ್ತದೆ. ಹಿಂಸಾಚಾರ ಅಂದರೆ ಮಾನವ ಹಿಂಸೆ, ಪ್ರಾಣಿಗಳ ನಿಂದನೆ, ಕ್ರೂರತೆ ಅಥವಾ ವಿಷದ ಚಿತ್ರಣವನ್ನು ಪ್ರಚೋದಿಸಲು, ವೈಭವೀಕರಿಸಲು ಅಥವಾ ನಿರೂಪಿಸಲು ಪ್ರಯತ್ನಿಸುವ ಯಾವುದೇ ವಿಷಯಗಳನ್ನು ಉಲ್ಲೇಖಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಬೆದರಿಕೆಗಳು, ಹಿಂಸೆ ಮತ್ತು ಹಾನಿ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ.
ಸ್ವಯಂ ಹಾನಿ ಮತ್ತು ಆತ್ಮಹತ್ಯೆ: ಸ್ವಯಂ ಗಾಯ ಮಾಡಿಕೊಳ್ಳುವಿಕೆ, ಆತ್ಮಹತ್ಯೆ ಅಥವಾ ತಿನ್ನುವ ಅಸ್ವಾಸ್ಥ್ಯಗಳ ಪ್ರಚಾರ ಸೇರಿದಂತೆ, ಸ್ವಯಂ ಹಾನಿಯ ವೈಭವೀಕರಣವನ್ನು ಉಲ್ಲೇಖಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ಬೆದರಿಕೆಗಳು, ಹಿಂಸೆ ಮತ್ತು ಹಾನಿಯ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ.
ಸುಳ್ಳು ಮಾಹಿತಿ: ಹಾನಿಯನ್ನು ಉಂಟುಮಾಡುವ ಅಥವಾ ದುರುದ್ದೇಶಪೂರಿತವಾಗಿರುವ ಸುಳ್ಳು ಅಥವಾ ದಾರಿತಪ್ಪಿಸುವ ವಿಷಯವನ್ನು ಒಳಗೊಂಡಿದೆ, ಉದಾಹರಣೆಗೆ ದುರಂತ ಘಟನೆಗಳ ಅಸ್ತಿತ್ವವನ್ನು ನಿರಾಕರಿಸುವುದು, ಆಧಾರರಹಿತ ವೈದ್ಯಕೀಯ ದಾವೆಗಳು ಅಥವಾ ನಾಗರಿಕ ಪ್ರಕ್ರಿಯೆಗಳ ಸಮಗ್ರತೆಯನ್ನು ಕಡೆಗಣಿಸುವುದು ಅಥವಾ ಜೆನರೇಟಿವ್ AI ಅಥವಾ ವಂಚನೆಯ ಎಡಿಟಿಂಗ್ ಮೂಲಕ ಸೇರಿದಂತೆ ಸುಳ್ಳು ಅಥವಾ ದಾರಿತಪ್ಪಿಸುವ ಉದ್ದೇಶಗಳಿಗಾಗಿ ವಿಷಯವನ್ನು ತಿರುಚುವುದು. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಹಾನಿಕಾರಕ ಸುಳ್ಳು ಅಥವಾ ಮೋಸಗೊಳಿಸುವ ಮಾಹಿತಿ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ.
ಸೋಗುಹಾಕುವಿಕೆ: ಒಂದು ಖಾತೆಯು ಇನ್ನೊಬ್ಬ ವ್ಯಕ್ತಿ ಅಥವಾ ಬ್ರಾಂಡ್ ಜೊತೆಗೆ ಸಂಬಂಧಿಸಿದೆ ಎಂದು ಸೋಗುಹಾಕುತ್ತಿರುವಾಗ ಸಂಭವಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಹಾನಿಕಾರಕ ಸುಳ್ಳು ಅಥವಾ ಮೋಸಗೊಳಿಸುವ ಮಾಹಿತಿ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ.
ಸ್ಪ್ಯಾಮ್: ಸ್ಪ್ಯಾಮ್ ಎಂಬುದು ಕಾನೂನುಬದ್ಧ ಬಳಕೆದಾರರಿಗೆ ಹಾನಿಕಾರಕ ಗೊಂದಲ ಉಂಟುಮಾಡಬಹುದಾದ ಅಥವಾ ಅಪಾಯ ಅಥವಾ ತೊಂದರೆಯನ್ನು ಒಡ್ಡಬಹುದಾದ ಅನಪೇಕ್ಷಿತ ಸಂದೇಶಗಳು ಅಥವಾ ಅಪ್ರಸ್ತುತ ಹಂಚಿಕೊಂಡ ವಿಷಯವನ್ನು ಉಲ್ಲೇಖಿಸುತ್ತವೆ. ಇದು ವಂಚನೆಯ ಘಟನೆಗಳನ್ನು ಕೂಡ ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಹಾನಿಕಾರಕ ಸುಳ್ಳು ಅಥವಾ ಮೋಸಗೊಳಿಸುವ ಮಾಹಿತಿ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ.
ಮಾದಕಪದಾರ್ಥಗಳು: ಕಾನೂನುಬಾಹಿರ ಔಷಧಗಳ ವಿತರಣೆ ಮತ್ತು ಬಳಕೆ (ಖೋಟಾ ಮಾತ್ರೆಗಳು ಸೇರಿದಂತೆ) ಮತ್ತು ಮಾದಕಪದಾರ್ಥಗಳನ್ನು ಒಳಗೊಂಡ ಇತರ ನಿಷೇಧಿತ ಚಟುವಟಿಕೆಯನ್ನು ಉಲ್ಲೇಖಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕಾನೂನುಬಾಹಿರ ಮತ್ತು ನಿಯಂತ್ರಿತ ಚಟುವಟಿಕೆಗಳ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ.
ಶಸ್ತ್ರಾಸ್ತ್ರಗಳು: ಸಾವು, ದೈಹಿಕ ಹಾನಿ ಅಥವಾ ಇತರ ಶಾರೀರಿಕ ಗಾಯ ಮಾಡಲು ವಿನ್ಯಾಸಗೊಳಿಸಲಾಗಿರುವ ಅಥವಾ ಬಳಸುವ ಸಾಧನಗಳನ್ನು ಉಲ್ಲೇಖಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಕಾನೂನುಬಾಹಿರ ಮತ್ತು ನಿಯಂತ್ರಿತ ಚಟುವಟಿಕೆಗಳ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ.
ಇತರ ನಿಯಂತ್ರಿತ ಸರಕುಗಳು: ಕಾನೂನುಬಾಹಿರ ಜೂಜು, ತಂಬಾಕು ಉತ್ಪನ್ನಗಳು ಮತ್ತು ಮದ್ಯ ಸೇರಿದಂತೆ ನಿಯಂತ್ರಿತ ಸರಕುಗಳು ಅಥವಾ ಉದ್ಯಮಗಳ ಪ್ರಚಾರವನ್ನು ಉಲ್ಲೇಖಿಸುತ್ತದೆ. ಈ ವರ್ಗವು ಕಾನೂನುಬಾಹಿರ ಅಥವಾ ಅಪಾಯಕಾರಿ ಚಟುವಟಿಕೆಗಳನ್ನು ಸಹ ಒಳಗೊಂಡಿರುತ್ತದೆ, ಇದು ಅಪರಾಧೀ ನಡವಳಿಕೆಯನ್ನು ಒಳಗೊಂಡಿರುವ ನಡವಳಿಕೆಯನ್ನು ಉತ್ತೇಜಿಸಬಹುದು ಅಥವಾ ಪ್ರೋತ್ಸಾಹಿಸಬಹುದು ಅಥವಾ ಯಾವುದೇ ವ್ಯಕ್ತಿಯ ಜೀವನ, ಸುರಕ್ಷತೆ ಅಥವಾ ಯೋಗಕ್ಷೇಮಕ್ಕೆ ಗಂಭೀರ ಅಪಾಯವನ್ನು ಉಂಟುಮಾಡಬಹುದು
. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕಾನೂನುಬಾಹಿರ ಅಥವಾ ನಿಯಂತ್ರಿತ ಚಟುವಟಿಕೆಗಳ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ.
ದ್ವೇಷ ಭಾಷಣ: ಒಬ್ಬ ವ್ಯಕ್ತಿ ಅಥವಾ ಗುಂಪಿನ ಜನಾಂಗ, ಬಣ್ಣ, ಜಾತಿ, ಕುಲ, ರಾಷ್ಟ್ರೀಯ ಮೂಲ, ಧರ್ಮ, ಲೈಂಗಿಕ ಒಲವು, ಲಿಂಗ ಗುರುತು, ವೈಕಲ್ಯ, ಸೇನಾನಿವೃತ್ತರ ಸ್ಥಾನಮಾನ, ವಲಸೆ ಸ್ಥಾನಮಾನ, ಸಾಮಾಜಿಕ-ಆರ್ಥಿಕ ಸ್ಥಾನಮಾನ, ವಯಸ್ಸು, ತೂಕ ಅಥವಾ ಗರ್ಭಾವಸ್ಥೆಯ ಸ್ಥಾನಮಾನದ ಆಧಾರದಲ್ಲಿ ಅವಹೇಳನ, ಅವಮಾನ ಮಾಡುವ ಅಥವಾ ತಾರತಮ್ಯ ಅಥವಾ ಹಿಂಸೆಯನ್ನು ಪ್ರಚೋದಿಸುವ ವಿಷಯವನ್ನು ಉಲ್ಲೇಖಿಸಿತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ದ್ವೇಷಪೂರಿತ ವಿಷಯ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದದ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ.
ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆ: ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆಯ ಚಿತ್ರಣ (CSEAI) ಮತ್ತು ಯಾವುದೇ ಲೈಂಗಿಕ ಉದ್ದೇಶಕ್ಕಾಗಿ ಅಪ್ರಾಪ್ತ ವಯಸ್ಕರನ್ನು ಗ್ರೂಮಿಂಗ್ ಮಾಡುವುದು ಅಥವಾ ಪ್ರಲೋಭನೆಗೊಳಿಸುವುದು ಸೇರಿದಂತೆ ಯಾವುದೇ ರೀತಿಯ ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆಯನ್ನು ಒಳಗೊಂಡಿರುವ ವಿಷಯವನ್ನು ಉಲ್ಲೇಖಿಸುತ್ತದೆ. ನಾವು ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆಯ ಗುರುತಿಸಲ್ಪಟ್ಟ ಎಲ್ಲಾ ನಿದರ್ಶನಗಳನ್ನು ಪ್ರಾಧಿಕಾರಗಳಿಗೆ ವರದಿ ಮಾಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಲೈಂಗಿಕ ಕಂಟೆಂಟ್ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ.
ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದ: ರಾಜಕೀಯ, ಧಾರ್ಮಿಕ, ಸಾಮಾಜಿಕ, ಜನಾಂಗೀಯ ಅಥವಾ ಪರಿಸರಾತ್ಮಕ ಸ್ವಭಾವದಂತಹ ಸೈದ್ಧಾಂತಿಕ ಗುರಿಗಳನ್ನು ಸಾಧಿಸುವುದಕ್ಕಾಗಿ ಯಾವುದೇ ವ್ಯಕ್ತಿಗಳು ಮತ್ತು/ಅಥವಾ ಗುಂಪುಗಳು ಎಸಗುವಂತಹ ಭಯೋತ್ಪಾದನೆ ಅಥವಾ ಇತರ ಹಿಂಸಾತ್ಮಕ, ಅಪರಾಧೀ ಕೃತ್ಯಗಳನ್ನು ಉತ್ತೇಜಿಸುವ ಅಥವಾ ಬೆಂಬಲಿಸುವ ಕಂಟೆಂಟ್‌ಗಳನ್ನು ಉಲ್ಲೇಖಿಸುತ್ತದೆ. ಇದು ಯಾವುದೇ ವಿದೇಶೀ ಭಯೋತ್ಪಾದಕ ಸಂಘಟನೆ ಅಥವಾ ಹಿಂಸಾತ್ಮಕ ಉಗ್ರವಾದದ ದ್ವೇಷ ಸಾಧಿಸುವ ಗುಂಪನ್ನು ಉತ್ತೇಜಿಸುವ ಅಥವಾ ಬೆಂಬಲಿಸುವ ಯಾವುದೇ ವಿಷಯ, ಹಾಗೂ ಜೊತೆಗೆ ಅಂತಹ ಸಂಸ್ಥೆಗಳಿಗೆ ಅಥವಾ ಹಿಂಸಾತ್ಮಕ ಉಗ್ರಗಾಮಿ ಚಟುವಟಿಕೆಗಳಿಗೆ ನೇಮಕಾತಿಯನ್ನು ಉತ್ತೇಜಿಸುವ ವಿಷಯಗಳನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ನಮ್ಮ ದ್ವೇಷಮಯ ಕಂಟೆಂಟ್, ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ ಕುರಿತ ಎಕ್ಸ್‌ಪ್ಲೇನರ್ ಅನ್ನು ಪರಿಶೀಲಿಸಿ.
ಕಂಟೆಂಟ್ ಮತ್ತು ಖಾತೆ ವರದಿಗಳು: ನಮ್ಮ ಆ್ಯಪ್‌ನಲ್ಲಿನ ವರದಿ ಮಾಡುವಿಕೆ ಟೂಲ್ ಮೆನು ಮೂಲಕ Snap ಗೆ ವರದಿ ಮಾಡಲಾದ ಕಂಟೆಂಟ್ ತುಣುಕುಗಳು ಮತ್ತು ವರದಿ ಮಾಡಲಾದ ಖಾತೆಗಳ ಒಟ್ಟು ಸಂಖ್ಯೆ. ಕಂಟೆಂಟ್‌ನಲ್ಲಿ ಫೋಟೋಗಳು, ವೀಡಿಯೊಗಳು ಮತ್ತು ಚಾಟ್‌ಗಳು ಸೇರಿವೆ ಎಂಬುದನ್ನು ಗಮನಿಸಿ.
ಕ್ರಮ ಜಾರಿಗೊಳಿಸುವಿಕೆ (ಕ್ರಮ ಜಾರಿಗೊಳಿಸಿರುವುದು): ಒಂದು ವಿಷಯದ ತುಣುಕು ಅಥವಾ ಖಾತೆಯ ವಿರುದ್ಧ ತೆಗೆದುಕೊಳ್ಳಲಾದ ಕ್ರಮ (ಉದಾ. ಅಳಿಸುವಿಕೆ, ಎಚ್ಚರಿಕೆ ನೀಡುವುದು, ಲಾಕ್ ಮಾಡುವುದು). ಕಂಟೆಂಟ್ ಫೋಟೋಗಳು, ವೀಡಿಯೊಗಳು ಮತ್ತು ಚಾಟ್‌ಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ಗಮನಿಸಿ. ವರದಿ ಮಾಡಲ್ಪಡುವ ವಿಷಯಗಳ ಉಲ್ಲಂಘನೆಗಳ ಕುರಿತು ಮಾನವ ಪ್ರತಿನಿಧಿಗಳು ಅಥವಾ ಯಾಂತ್ರೀಕೃತ ವ್ಯವಸ್ಥೆಗಳು (ಹೆಚ್ಚಿನ ನಿಖರವಾದ ಯಾಂತ್ರೀಕತೆಯು ಸಾಧ್ಯವಿರುವಲ್ಲಿ) ಕ್ರಮ ಕೈಗೊಳ್ಳಬಹುದು.
ಕ್ರಮ ಜಾರಿಗೊಳಿಸಿದ ಒಟ್ಟು ವಿಷಯ: Snapchat ನಲ್ಲಿ ಕ್ರಮ ಜಾರಿಗೊಳಿಸಲಾದ ವಿಷಯದ ಒಟ್ಟು ತುಣುಕುಗಳು (ಉದಾ., Snap ಗಳು, ಕಥೆಗಳು).
ಜಾರಿಕ್ರಮಗಳು ಕೈಗೊಳ್ಳಲ್ಪಟ್ಟಂತಹ ಒಟ್ಟು ಅನನ್ಯ ಖಾತೆಗಳು: Snapchat ನಲ್ಲಿ ಜಾರಿಕ್ರಮಗಳು ಕೈಗೊಳ್ಳಲ್ಪಟ್ಟಂತಹ ಅನನ್ಯ ಖಾತೆಗಳ ಒಟ್ಟು ಸಂಖ್ಯೆ. ಉದಾಹರಣೆಗಾಗಿ, ವಿವಿಧ ಕಾರಣಗಳಿಗಾಗಿ ಒಂದೇ ಖಾತೆಯ ವಿರುದ್ಧ ಹಲವು ಶಿಸ್ತುಕ್ರಮ ಜಾರಿಗೊಳಿಸಿದ್ದರೆ (ಉದಾಹರಣೆಗಾಗಿ ತಪ್ಪು ಮಾಹಿತಿಯನ್ನು ಪೋಸ್ಟ್ ಮಾಡಿದ್ದಕ್ಕಾಗಿ ಯಾವುದೇ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದ್ದರೆ ಹಾಗೂ ನಂತರ ಇನ್ನೊಬ್ಬ ಬಳಕೆದಾರರಿಗೆ ಕಿರುಕುಳ ನೀಡಿದ್ದಕ್ಕಾಗಿ ಅವರ ಖಾತೆಯನ್ನು ಲಾಕ್ ಮಾಡಲಾಗಿದ್ದರೆ), ಈ ಮಾಪನಾಂಕದಲ್ಲಿ ಕೇವಲ ಒಂದು ಖಾತೆಯ ವಿರುದ್ಧ ಮಾತ್ರ ಶಿಸ್ತುಕ್ರಮ ಜಾರಿಗೊಳಿಸಿರುವುದಾಗಿ ಲೆಕ್ಕಹಾಕಲಾಗುತ್ತದೆ. ಅದಾಗ್ಯೂ, "ಸುಳ್ಳು ಮಾಹಿತಿ"ಗಾಗಿ ಒಂದು ವಿಶಿಷ್ಟ ಖಾತೆ ಕ್ರಮ ಜಾರಿಗೊಳಿಸುವಿಕೆ ಮತ್ತು "ಕಿರುಕುಳ ಮತ್ತು ಬೆದರಿಸುವಿಕೆ"ಗಾಗಿ ಒಂದು ವಿಶಿಷ್ಟ ಖಾತೆ ಕ್ರಮ ಜಾರಿಗೊಳಿಸುವಿಕೆಯ ಜೊತೆಗೆ ಎರಡೂ ಶಿಸ್ತುಕ್ರಮ ಜಾರಿಗೊಳಿಸುವಿಕೆಗಳನ್ನು ನಮ್ಮ "ವಿಷಯ ಮತ್ತು ಖಾತೆ ಉಲ್ಲಂಘನೆಗಳ ಅವಲೋಕನ" ದಲ್ಲಿ ಸೇರಿಸಲಾಗುತ್ತದೆ.
Snap ನಿಂದ ಕ್ರಮ ಜಾರಿಗೊಳಿಸಲಾದ ಒಟ್ಟು ವರದಿಗಳ %: ಈ ಮೌಲ್ಯವು ಒಂದು ನೀತಿಯ ಕಾರಣದೊಳಗೆ ಕ್ರಮ ಜಾರಿಗೊಳಿಸಲಾದ ಒಟ್ಟು ವಿಷಯದ ತುಣುಕುಗಳು ಮತ್ತು ಖಾತೆಗಳ ಸಂಖ್ಯೆಯನ್ನು ಎಲ್ಲ ನೀತಿಯ ಕಾರಣಗಳಾದ್ಯಂತ ಕ್ರಮ ಜಾರಿಗೊಳಿಸಲಾದ ವಿಷಯ ಒಟ್ಟು ತುಣುಕುಗಳು ಮತ್ತು ಖಾತೆಗಳಿಂದ ಭಾಗಿಸಿದಾಗ ಸಿಗುವ ಪ್ರತಿಶತವನ್ನು ತೋರಿಸುತ್ತದೆ.
ಜಾರಿಕ್ರಮ ಕೈಗೊಳ್ಳುವಿಕೆ ಅವಧಿ: ನಮ್ಮ ಸುರಕ್ಷತಾ ತಂಡಗಳು ಯಾವುದೇ ವರದಿಯನ್ನು ಪಡೆದ ಸಮಯದಿಂದ(ಮಾಮೂಲಿಯಾಗಿ ವರದಿ ಪಡೆದ ಸಮಯ) ಅಂತಿಮ ಜಾರಿಕ್ರಮ ಕೈಗೊಂಡಂತಹ ವೇಳೆಯ ಸಮಯದ ಮುದ್ರೆಯವರೆಗಿನ ಸಮಯಾವಧಿಯಾಗಿರುತ್ತದೆ. ಒಂದು ವೇಳೆ ಹಲವು ವಿಮರ್ಶೆಯ ಸುತ್ತುಗಳು ಸಂಭವಿಸಿದರೆ, ಕೊನೆಯದಾಗಿ ತೆಗೆದುಕೊಂಡ ಕ್ರಮದ ಸಮಯವನ್ನು ಪರಿಗಣಿಸಿ ಸಮಯವನ್ನು ಲೆಕ್ಕಾಚಾರ ಮಾಡಲಾಗುತ್ತದೆ.
ಉಲ್ಲಂಘನೆಯ ವೀಕ್ಷಣಾ ದರ (VVR): VVR ಎಂಬುದು ಉಲ್ಲಂಘನೆಯ ವಿಷಯ ಒಳಗೊಂಡಿರುವ ಕಥೆ ಮತ್ತು Snap ನೋಟಗಳಿಗೆ ಪ್ರತಿಯಾಗಿ Snapchat ಆದ್ಯಂತ ಎಲ್ಲ ಕಥೆ ಮತ್ತು Snap ನೋಟಗಳ ಅನುಪಾತವಾಗಿದೆ. (Snap ಎಂಬುದು Snapchat ಕ್ಯಾಮರಾದೊಂದಿಗೆ ತೆಗೆದುಕೊಂಡ ಫೋಟೋ ಅಥವಾ ವೀಡಿಯೊ ಆಗಿದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಬಹುದು.) ಉದಾಹರಣೆಗಾಗಿ, ನಮ್ಮ VVR 0.03% ಆಗಿದ್ದರೆ, Snapchat ನಲ್ಲಿನ ಪ್ರತಿ 10,000 Snap ಗಳು ಮತ್ತು ಕಥೆಗಳ ವೀಕ್ಷಣೆಗಳಲ್ಲಿ 3 ನಿರ್ದರ್ಶನಗಳು ನಮ್ಮ ನೀತಿಗಳನ್ನು ಉಲ್ಲಂಘಿಸುವ ವಿಷಯಗಳನ್ನು ಒಳಗೊಂಡಿದ್ದವು ಎಂದರ್ಥ. Snapchat ನಲ್ಲಿ ಎಷ್ಟು ಶೇಕಡಾ Snap ಮತ್ತು ಕಥೆಗಳ ವೀಕ್ಷಣೆಗಳು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿಷಯಗಳನ್ನು ಹೊಂದಿರುತ್ತವೆ (ಅದು ವರದಿಯಾಗಿದ್ದಲ್ಲಿ ಅಥವಾ ಪೂರ್ವಭಾವಿಯಾಗಿ ಜಾರಿಗೊಳಿಸಲಾಗಿದ್ದಲ್ಲಿಯೂ ಸಹ) ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಮಾಪನಾಂಕವು ನಮಗೆ ಅನುಮತಿಸುತ್ತದೆ.
ಮೇಲ್ಮನವಿ: ಒಂದು ಖಾತೆ ಲಾಕ್ ಮಾಡುವ ಕ್ರಮ ಜಾರಿಗೊಳಿಸುವಿಕೆ ನಿರ್ಧಾರವನ್ನು ಮರು-ವಿಮರ್ಶೆ ಮಾಡುವಂತೆ ಬಳಕೆದಾರ ನಮಗೆ ವಿನಂತಿ ಸಲ್ಲಿಸಿದಾಗ ಒಂದು ಮೇಲ್ಮನವಿ ಸಂಭವಿಸುತ್ತದೆ , ಕಮ್ಯುನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ಆಧರಿಸಿ ಖಾತೆಯನ್ನು ಲಾಕ್ ಮಾಡಿದ್ದರೆ ಇದು ಲಭ್ಯವಿರುತ್ತದೆ. ಉದಾಹರಣೆಗಾಗಿ, ನಮ್ಮ ಕಿರುಕುಳ ನೀತಿಯನ್ನು ಉಲ್ಲಂಘಿಸಿದ ಖಾತೆಯನ್ನು ನಾವು ತೆಗೆದುಹಾಕಬಹುದು. ಬಳಕೆದಾರರು ನಮ್ಮ ಮೌಲ್ಯಮಾಪನವನ್ನು ಒಪ್ಪದಿರಬಹುದು ಹಾಗೂ ನಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮೇಲ್ಮನವಿಯನ್ನು ಸಲ್ಲಿಸಬಹುದು.
ಮರುಸ್ಥಾಪನೆ: ಮರುಸ್ಥಾಪನೆ ಅಂದರೆ ಮೇಲ್ಮನವಿಗೆ ಪ್ರತಿಕ್ರಿಯೆಯಾಗಿ ಮಾಡಲ್ಪಟ್ಟ ಮೂಲ ನಿಯಂತ್ರಣ ನಿರ್ಧಾರದ ಹಿಮ್ಮುಖಗೊಳಿಸುವಿಕೆಯಾಗಿರುತ್ತದೆ. ಮೇಲ್ಮನವಿಯನ್ನು ಸ್ವೀಕರಿಸಿದ ನಂತರ, ನಾವು ಜಾರಿಗೊಳಿಸಿದ ಕ್ರಮವು ಸರಿಯಾಗಿತ್ತೇ ಎಂಬುದನ್ನು ಪರಿಶೀಲಿಸುತ್ತೇವೆ ಮತ್ತು ಮೌಲ್ಯಮಾಪನ ಮಾಡುತ್ತೇವೆ. ನಮ್ಮ ವೇದಿಕೆ ನೀತಿಗಳ ಮಾರ್ಗಸೂಚಿಗಳಲ್ಲಿ ಆ ವಿಷಯ ಅಥವಾ ಖಾತೆಯ ವಿರುದ್ಧ ಜಾರಿಕ್ರಮ ಕೈಗೊಳ್ಳುವಲ್ಲಿ ನಾವು ತಪ್ಪು ಮಾಡಿದ್ದೇವೆ ಎಂದು ನಾವು ನಿರ್ಧರಿಸಿದರೆ, ನಾವು ಮೇಲ್ಮನವಿ ಸಲ್ಲಿಸಲ್ಪಟ್ಟಂತಹ ವಿಷಯ ಅಥವಾ ಖಾತೆಯನ್ನು ನಮ್ಮ ವೇದಿಕೆಗೆ ಮರುಸ್ಥಾಪಿಸುತ್ತೇವೆ.