Snap Values
ಪಾರದರ್ಶಕತಾ ವರದಿ
ಜನವರಿ 1, 2023 – ಜೂನ್ 30, 2023

ಬಿಡುಗಡೆ ಮಾಡಲಾದ ದಿನಾಂಕ:

ಅಕ್ಟೋಬರ್ 25, 2023

ಪರಿಷ್ಕರಿಸಲಾದ ದಿನಾಂಕ:

ಡಿಸೆಂಬರ್ 13, 2023

Snap ನ ಸುರಕ್ಷತಾ ಪ್ರಯತ್ನಗಳಲ್ಲಿ ಮತ್ತು ನಮ್ಮ ವೇದಿಕೆಯಲ್ಲಿ ವರದಿ ಮಾಡಿದ ಸ್ವರೂಪ ಮತ್ತು ಸಂಪುಟದಲ್ಲಿನ ಒಳನೋಟವನ್ನು ಒದಗಿಸಲು, ನಾವು ವರ್ಷಕ್ಕೆ ಎರಡು ಬಾರಿ ಪಾರದರ್ಶಕತೆಯ ವರದಿಗಳನ್ನು ಪ್ರಕಟಿಸುತ್ತೇವೆ. ನಮ್ಮ ಕಂಟೆಂಟ್ ಮಾಡರೇಷನ್ ಮತ್ತು ಕಾನೂನು ಜಾರಿ ಅಭ್ಯಾಸಗಳ ಕುರಿತು ತೀವ್ರ ಕಾಳಜಿ ವಹಿಸುವ ಹಲವು ಪಾಲುದಾರರಿಗಾಗಿ ಹಾಗೂ ನಮ್ಮ ಸಮುದಾಯದ ಯೋಗಕ್ಷೇಮಕ್ಕಾಗಿ, ಈ ವರದಿಗಳನ್ನು ಇನ್ನಷ್ಟು ಸಮಗ್ರ ಮತ್ತು ಮಾಹಿತಿಯುಕ್ತವಾಗಿಸುವುದನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. 

ಈ ಪಾರದರ್ಶಕತೆ ವರದಿಯು 2023 ರ ಮೊದಲಾರ್ಧವನ್ನು (ಜನವರಿ 1 - ಜೂನ್ 30) ಒಳಗೊಳ್ಳುತ್ತದೆ. ನಮ್ಮ ಹಿಂದಿನ ವರದಿಗಳಂತೆಯೇ, ನೀತಿ ಉಲ್ಲಂಘನೆಗಳ ನಿರ್ದಿಷ್ಟ ವರ್ಗಗಳಾದ್ಯಂತ ನಾವು ಸ್ವೀಕರಿಸಿದ ಮತ್ತು ಕ್ರಮ ಜಾರಿಗೊಳಿಸಿದ ಆ್ಯಪ್‌ನಲ್ಲಿನ ಕಂಟೆಂಟ್ ಮತ್ತು ಖಾತೆ ಮಟ್ಟದ ವರದಿಗಳ ಜಾಗತಿಕ ಸಂಖ್ಯೆಯ ಬಗ್ಗೆ; ಕಾನೂನು ಜಾರಿ ಸಂಸ್ಥೆಗಳು ಮತ್ತು ಸರ್ಕಾರಗಳ ವಿನಂತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಿದೆವು ಎನ್ನುವ ಕುರಿತು; ಮತ್ತು ದೇಶದ ಪ್ರಕಾರ ವಿಂಗಡಿಸಲಾದ ನಮ್ಮ ಶಿಸ್ತು ಕ್ರಮಗಳ ಕುರಿತು ನಾವು ವಿಷಯವನ್ನು ಹಂಚಿಕೊಳ್ಳುತ್ತೇವೆ.

ನಮ್ಮ ಪಾರದರ್ಶಕತೆಯ ವರದಿಯನ್ನು ನಿರಂತರವಾಗಿ ಸುಧಾರಿಸುವ ನಮ್ಮ ನಿರಂತರ ಬದ್ಧತೆಯ ಭಾಗವಾಗಿ, ಈ ಬಿಡುಗಡೆಯೊಂದಿಗೆ ನಾವು ಹೊಸ ಅಂಶಗಳನ್ನು ಪರಿಚಯಿಸುತ್ತಿದ್ದೇವೆ.  ನಮ್ಮ ಜಾಹೀರಾತು ಅಭ್ಯಾಸಗಳು ಮತ್ತು ಮಾಡರೇಷನ್ ಕುರಿತು ಹಾಗೂ ಕಂಟೆಂಟ್ ಮತ್ತು ಖಾತೆ ಮೇಲ್ಮನವಿಗಳ ಕುರಿತು ನಾವು ಹೆಚ್ಚುವರಿ ಡೇಟಾ ಪಾಯಿಂಟ್‌ಗಳನ್ನು ಸೇರಿಸಿದ್ದೇವೆ. EU ಡಿಜಿಟಲ್ ಸೇವೆಗಳ ಕಾಯ್ದೆಯ ಅನುಸಾರವಾಗಿ, EU ಸದಸ್ಯ ರಾಷ್ಟ್ರಗಳಲ್ಲಿ ನಮ್ಮ ಕಾರ್ಯಾಚರಣೆಗಳಿಗಾಗಿ ನಾವು ಹೊಸ ಸಂದರ್ಭೋಚಿತ ಮಾಹಿತಿಯನ್ನು ಸೇರಿಸಿದ್ದೇವೆ, ಉದಾಹರಣೆಗೆ ಪ್ರದೇಶದಲ್ಲಿ ಕಂಟೆಂಟ್ ಮಾಡರೇಟರ್‌ಗಳು ಮತ್ತು ಮಾಸಿಕ ಸಕ್ರಿಯ ಬಳಕೆದಾರರ (MAUs) ಸಂಖ್ಯೆ. ಈ ಮಾಹಿತಿಯಲ್ಲಿ ಬಹಳಷ್ಟನ್ನು ವರದಿಯುದ್ದಕ್ಕೂ ಮತ್ತು ನಮ್ಮ ಪಾರದರ್ಶಕತೆಯ ಕೇಂದ್ರದ ಮೀಸಲಾದ ಯುರೋಪಿಯನ್ ಒಕ್ಕೂಟ ಪುಟದಲ್ಲಿ ಕಾಣಬಹುದು.

ಅಂತಿಮವಾಗಿ, ನಾವು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಎಕ್ಸ್‌ಪ್ಲೇನರ್‌ಗಳಿಗೆ ಲಿಂಕ್‌ಗಳ ಜೊತೆಗೆ ಪದಕೋಶವನ್ನು ಅಪ್‌ಡೇಟ್ ಮಾಡಿದ್ದು, ಇದು ನಮ್ಮ ಪ್ಲ್ಯಾಟ್‌ಫಾರ್ಮ್ ನೀತಿ ಮತ್ತು ಕಾರ್ಯಾಚರಣೆಯ ಪ್ರಯತ್ನಗಳ ಕುರಿತು ಹೆಚ್ಚುವರಿ ಸನ್ನಿವೇಶವನ್ನು ಒದಗಿಸುತ್ತದೆ. 

ಆನ್‌ನೈಲ್ ಹಾನಿಗಳ ವಿರುದ್ಧ ಹೋರಾಡಲು ನಮ್ಮ ನೀತಿಗಳು ಮತ್ತು ನಮ್ಮ ವರದಿ ಮಾಡುವಿಕೆ ಅಭ್ಯಾಸಗಳನ್ನು ವಿಕಸಿತಗೊಳಿಸಲು ಮುಂದುವರಿಸುವ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಪಾರದರ್ಶಕತೆಯ ವರದಿಯ ಕುರಿತ ನಮ್ಮ ಇತ್ತೀಚಿನ ಸುರಕ್ಷತೆ & ಪ್ರಭಾವ ಬ್ಲಾಗ್ ಓದಿ. 

Snapchat ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಗಾಗಿ ಹೆಚ್ಚುವರಿ ಸಂಪನ್ಮೂಲಗಳನ್ನು ಕಂಡುಕೊಳ್ಳಲು, ಪುಟದ ಕೆಳಭಾಗದಲ್ಲಿರುವ ನಮ್ಮ ಪಾರದರ್ಶಕತೆ ವರದಿ ಮಾಡುವಿಕೆ ಕುರಿತು ಟ್ಯಾಬ್ ಅನ್ನು ನೋಡಿ.

ಈ ಪಾರದರ್ಶಕತೆಯ ವರದಿಯ ಇತ್ತೀಚಿನ ನವೀಕೃತ ಆವೃತ್ತಿಯನ್ನು en-US ಭಾಷೆಯಲ್ಲಿ ಕಾಣಬಹುದು ಎನ್ನುವುದನ್ನು ದಯವಿಟ್ಟು ಗಮನಿಸಿ.

ವಿಷಯ ಮತ್ತು ಖಾತೆ ಉಲ್ಲಂಘನೆಗಳ ಅವಲೋಕನ

ಜನವರಿ 1 - ಜೂನ್ 30, 2023 ರವರೆಗೆ, ನಮ್ಮ ನೀತಿಗಳನ್ನು ಉಲ್ಲಂಘಿಸಿದ 62,16,118 ಕಂಟೆಂಟ್ ತುಣುಕುಗಳ ವಿರುದ್ಧ Snap ಜಾಗತಿಕವಾಗಿ ಶಿಸ್ತುಕ್ರಮ ಜಾರಿಗೊಳಿಸಿದೆ.

ವರದಿ ಮಾಡುವಿಕೆ ಅವಧಿಯಲ್ಲಿ, ನಾವು 0.02 ಪ್ರತಿಶತದಷ್ಟು ಉಲ್ಲಂಘನಾತ್ಮಕ ವೀಕ್ಷಣಾ ದರವನ್ನು (VVR) ಕಂಡಿದ್ದೇವೆ, ಅಂದರೆ Snapchat ನಲ್ಲಿ ಪ್ರತಿ 10,000 Snap ಮತ್ತು ಕಥೆ ವೀಕ್ಷಣೆಗಳ ಪೈಕಿ, 2 ರಲ್ಲಿ ನಮ್ಮ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಇತ್ತು.

**ಸುಳ್ಳು ಮಾಹಿತಿಯ ವಿರುದ್ಧ ಸರಿಯಾಗಿ ಮತ್ತು ಸ್ಥಿರವಾಗಿ ಶಿಸ್ತುಕ್ರಮ ಜಾರಿಗೊಳಿಸುವುದು ಕ್ರಿಯಾತ್ಮಕ ಪ್ರಕ್ರಿಯೆಯಾಗಿದ್ದು ಇದಕ್ಕೆ ನವೀಕೃತವಾಗಿರುವ ಸನ್ನಿವೇಶ ಮತ್ತು ಸೂಕ್ತ ಕಾರ್ಯಶ್ರದ್ಧೆ ಅಗತ್ಯವಿರುತ್ತದೆ.  ಈ ವರ್ಗದಲ್ಲಿ ನಮ್ಮ ಪ್ರತಿನಿಧಿಗಳ ಶಿಸ್ತುಕ್ರಮ ಜಾರಿಗೊಳಿಸುವಿಕೆಯ ನಿಖರತೆಯನ್ನು ನಿರಂತರವಾಗಿ ಸುಧಾರಿಸಲು ನಾವು ಶ್ರಮಿಸುತ್ತಿರುವಂತೆ, H1 2022 ರಿಂದಲೂ ಸುಳ್ಳು ಮಾಹಿತಿಯ ವಿರುದ್ಧ ಶಿಸ್ತುಕ್ರಮ ಜಾರಿಗೊಳಿಸುವಿಕೆಯ ಅಂಕಿಅಂಶಾತ್ಮಕವಾಗಿ ಗಮನಾರ್ಹ ಭಾಗದ ಕಠಿಣ ಗುಣಮಟ್ಟ-ಭರವಸೆಯ ವಿಮರ್ಶೆಯನ್ನು ಆಧರಿಸಿ ಅಂದಾಜಿಸಿದ "ಶಿಸ್ತುಕ್ರಮ ಜಾರಿಗೊಳಿಸಿದ ಕಂಟೆಂಟ್" ಮತ್ತು "ಶಿಸ್ತುಕ್ರಮ ಜಾರಿಗೊಳಿಸಿದ ವಿಶಿಷ್ಟ ಖಾತೆಗಳು" ವರ್ಗಗಳಲ್ಲಿ ಅಂಕಿಅಂಶಗಳನ್ನು ವರದಿ ಮಾಡುವುದನ್ನು ನಾವು ಆರಿಸಿಕೊಂಡಿದ್ದೇವೆ. ನಿರ್ದಿಷ್ಟವಾಗಿ, ಪ್ರತಿ ದೇಶದ ಸುಳ್ಳು ಮಾಹಿತಿಯ ವಿರುದ್ಧದ ಶಿಸ್ತುಕ್ರಮ ಜಾರಿಗೊಳಿಸುವಿಕೆಯ ಅಂಕಿಅಂಶಾತ್ಮಕವಾಗಿ ಗಮನಾರ್ಹವಾದ ಭಾಗವನ್ನು ನಾವು ಮಾದರಿಯಾಗಿ ತೆಗೆದುಕೊಳ್ಳುತ್ತೇವೆ ಮತ್ತು ಶಿಸ್ತುಕ್ರಮ ಜಾರಿಗೊಳಿಸುವಿಕೆ ನಿರ್ಧಾರಗಳ ಗುಣಮಟ್ಟವನ್ನು ಪರಿಶೀಲನೆ ಮಾಡುತ್ತೇವೆ. ನಂತರ ನಾವು ಸರಾಸರಿ 95% ಮೌಲ್ಯಗಳ ವಿಶ್ವಾಸ ಅಂತರದ ಜೊತೆಗೆ (+/- 5% ದೋಷದ ಸಾಧ್ಯತೆ) ಶಿಸ್ತುಕ್ರಮ ಜಾರಿಗೊಳಿಸುವಿಕೆಯ ದರಗಳನ್ನು ಪಡೆದುಕೊಳ್ಳಲು ಆ ಗುಣಮಟ್ಟ-ಪರಿಶೀಲಿಸಿದ ಶಿಸ್ತುಕ್ರಮ ಜಾರಿಗೊಳಿಸುವಿಕೆಗಳನ್ನು ಬಳಸುತ್ತೇವೆ, ಅದನ್ನು ಪಾರದರ್ಶಕತೆಯ ವರದಿಯಲ್ಲಿ ವರದಿ ಮಾಡಲಾದ ಸುಳ್ಳು ಮಾಹಿತಿಯ ವಿರುದ್ಧ ಶಿಸ್ತುಕ್ರಮ ಜಾರಿಗೊಳಿಸುವಿಕೆಯನ್ನು ಲೆಕ್ಕಾಚಾರ ಮಾಡಲು ನಾವು ಬಳಸುತ್ತೇವೆ. 

ವಿಷಯ ಮತ್ತು ಖಾತೆ ಉಲ್ಲಂಘನೆಗಳ ವಿಶ್ಲೇಷಣೆ

ಪ್ರಮುಖ ಕೆಟಗರಿಗಳಲ್ಲಿ ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ನಮ್ಮ ಒಟ್ಟಾರೆ ವರದಿ ಮಾಡುವಿಕೆ ಮತ್ತು ಶಿಸ್ತುಕ್ರಮ ಜಾರಿಗೊಳಿಸುವಿಕೆ ದರಗಳು ಹಿಂದಿನ ಆರು ತಿಂಗಳುಗಳಿಗೆ ಬಹುತೇಕ ಸಮಾನವಾಗಿದ್ದವು. ಈ ಆವರ್ತನದಲ್ಲಿ ನಾವು ಒಟ್ಟು ಕಂಟೆಂಟ್ ಮತ್ತು ಖಾತೆ ವರದಿಗಳು ಮತ್ತು ಜಾರಿಗೊಳಿಸಲಾದ ಶಿಸ್ತುಕ್ರಮಗಳಲ್ಲಿ ಅಂದಾಜು 3% ಇಳಿಕೆಯನ್ನು ಕಂಡಿದ್ದೇವೆ.

ಅತ್ಯಂತ ಗಮನಾರ್ಹ ಏರಿಳಿತಗಳಿದ್ದ ಕೆಟಗರಿಗಳು ಕಿರುಕುಳ ಮತ್ತು ಬೆದರಿಸುವಿಕೆ, ಸ್ಪ್ಯಾಮ್, ಶಸ್ತ್ರಾಸ್ತ್ರಗಳು ಮತ್ತು ಸುಳ್ಳು ಮಾಹಿತಿ ಆಗಿದ್ದವು. ಕಿರುಕುಳ ಮತ್ತು ಬೆದರಿಸುವಿಕೆಗಳು ಒಟ್ಟು ವರದಿಗಳಲ್ಲಿ ~56% ಏರಿಕೆ ಕಂಡಿವೆ ಮತ್ತು ಆನಂತರದ ಕಂಟೆಂಟ್ ಮತ್ತು ವಿಶಿಷ್ಟ ಖಾತೆ ವಿರುದ್ಧ ಜಾರಿಗೊಳಿಸಿದ ಶಿಸ್ತುಕ್ರಮಗಳಲ್ಲಿ ~39% ಏರಿಕೆ ಕಂಡಿವೆ. ಶಿಸ್ತುಕ್ರಮಗಳಲ್ಲಿನ ಈ ಏರಿಕೆಗಳು ಟರ್ನ್‌ಅರೌಂಡ್ ಸಮಯದಲ್ಲಿ ~46% ಇಳಿಕೆಯನ್ನು ಹೊಂದಿದ್ದು, ಈ ರೀತಿಯ ಉಲ್ಲಂಘಿಸುವ ಕಂಟೆಂಟ್‌ನ ವಿರುದ್ಧ ಶಿಸ್ತುಕ್ರಮ ಜಾರಿಗೊಳಿಸುವಲ್ಲಿ ನಮ್ಮ ತಂಡದ ಕಾರ್ಯಾಚರಣೆಯ ದಕ್ಷತೆಯನ್ನು ಎತ್ತಿ ತೋರಿಸುತ್ತವೆ. ಅದೇ ರೀತಿ, ಸ್ಪ್ಯಾಮ್‌ಗಾಗಿ ಒಟ್ಟು ವರದಿಗಳಲ್ಲಿ ನಾವು ~65% ಏರಿಕೆ ಕಂಡಿದ್ದು, ಕಂಟೆಂಟ್ ವಿರುದ್ಧ ಜಾರಿಗೊಳಿಸಿದ ಶಿಸ್ತುಕ್ರಮಗಳಲ್ಲಿ ~110% ಏರಿಕೆ ಹಾಗೂ ವಿಶಿಷ್ಟ ಖಾತೆಗಳ ವಿರುದ್ಧ ಜಾರಿಗೊಳಿಸಿದ ಶಿಸ್ತುಕ್ರಮದಲ್ಲಿ ~80% ಏರಿಕೆಯನ್ನು ಕಂಡಿದ್ದೇವೆ, ಇದೇ ವೇಳೆ ನಮ್ಮ ತಂಡಗಳು ಟರ್ನ್‌ಅರೌಂಡ್ ಸಮಯವನ್ನು ಕೂಡ ~80% ನಷ್ಟು ಕಡಿಮೆ ಮಾಡಿವೆ. ನಮ್ಮ ಶಸ್ತ್ರಾಸ್ತ್ರಗಳ ಕೆಟಗರಿಯು ಒಟ್ಟು ವರದಿಗಳಲ್ಲಿ ~13% ಇಳಿಕೆಯನ್ನು ಕಂಡಿದೆ ಮತ್ತು ಕಂಟೆಂಟ್ ವಿರುದ್ಧ ಜಾರಿಗೊಳಿಸಿದ ಶಿಸ್ತುಕ್ರಮಗಳಲ್ಲಿ ~51% ಇಳಿಕೆ ಹಾಗೂ ವಿಶಿಷ್ಟ ಖಾತೆಗಳ ವಿರುದ್ಧ ಜಾರಿಗೊಳಿಸಿದ ಶಿಸ್ತುಕ್ರಮದಲ್ಲಿ ~53% ಇಳಿಕೆಯನ್ನು ಕಂಡಿವೆ. ಕೊನೆಯದಾಗಿ, ನಮ್ಮ ಸುಳ್ಳು ಮಾಹಿತಿಯ ಕೆಟಗರಿಯು ಒಟ್ಟು ವರದಿಗಳಲ್ಲಿ ~14% ಏರಿಕೆಯನ್ನು ಕಂಡಿದೆ, ಆದರೆ ಕಂಟೆಂಟ್ ವಿರುದ್ಧ ಜಾರಿಗೊಳಿಸಿದ ಶಿಸ್ತುಕ್ರಮಗಳಲ್ಲಿ ~78% ಇಳಿಕೆ ಮತ್ತು ವಿಶಿಷ್ಟ ಖಾತೆಗಳ ವಿರುದ್ಧ ಜಾರಿಗೊಳಿಸಿದ ಶಿಸ್ತುಕ್ರಮದಲ್ಲಿ ~74% ಇಳಿಕೆ ಕಂಡುಬಂದಿದೆ. ಪ್ಲ್ಯಾಟ್‌ಫಾರ್ಮ್‌ನಲ್ಲಿ ನಮ್ಮ ಮಾಡರೇಷನ್ ತಂಡಗಳು ಸುಳ್ಳು ಮಾಹಿತಿಯನ್ನು ನಿಖರವಾಗಿ ಪತ್ತೆಮಾಡುತ್ತಿವೆ ಮತ್ತು ಅದರ ವಿರುದ್ಧ ಕ್ರಮ ಕೈಗೊಳ್ಳುತ್ತಿವೆ ಎಂದು ಖಚಿತಪಡಿಸಿಕೊಳ್ಳಲು, ಸುಳ್ಳು ಮಾಹಿತಿಯ ವರದಿಗಳಿಗೆ ನಾವು ಅನ್ವಯಿಸುತ್ತಿರುವ ನಿರಂತರ ಗುಣಮಟ್ಟ ಭರವಸೆ (QA) ಪ್ರಕ್ರಿಯೆ ಮತ್ತು ಸಂಪನ್ಮೂಲಗಳಿಂದ ಇದು ಸಾಧ್ಯವಾಗಿದೆ.

ಒಟ್ಟಾರೆಯಾಗಿ, ಸಾಮಾನ್ಯವಾಗಿ ನಾವು ಕಳೆದ ವರ್ಷದ ರೀತಿಯ ಅಂಕಿಅಂಶಗಳನ್ನು ಕಂಡಿದ್ದರೂ ಸಹ, ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಸಂಭಾವ್ಯ ಉಲ್ಲಂಘನೆಗಳು ಕಾಣಿಸಿಕೊಂಡಾಗ ನಮ್ಮ ಸಮುದಾಯವು ಸಕ್ರಿಯವಾಗಿ ಮತ್ತು ನಿಖರವಾಗಿ ವರದಿ ಮಾಡಲು ಬಳಸುವ ಟೂಲ್‌ಗಳನ್ನು ಸುಧಾರಿಸುವುದನ್ನು ಮುಂದುವರಿಸುವುದು ಮುಖ್ಯವಾಗಿದೆ ಎಂದು ನಾವು ನಂಬಿದ್ದೇವೆ.

ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ವಿರುದ್ಧ ಹೋರಾಡುವುದು

ನಮ್ಮ ಕಮ್ಯುನಿಟಿಯ ಯಾವುದೇ ಸದಸ್ಯರ, ವಿಶೇಷವಾಗಿ ಅಪ್ರಾಪ್ತ ವಯಸ್ಕರ ಲೈಂಗಿಕ ಶೋಷಣೆಯು ಕಾನೂನುಬಾಹಿರವಾಗಿದೆ, ಅಸಹ್ಯಕರವಾಗಿದೆ ಮತ್ತು ನಮ್ಮ ಕಮ್ಯುನಿಟಿಯ ಮಾರ್ಗಸೂಚಿಗಳಿಂದ ನಿಷೇಧಿಸಲಾಗಿದೆ. ನಮ್ಮ ವೇದಿಕೆಯಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯವನ್ನು (CSEAI) ತಡೆಗಟ್ಟುವುದು, ಪತ್ತೆಹಚ್ಚುವುದು ಮತ್ತು ನಿರ್ಮೂಲನೆ ಮಾಡುವುದು ನಮಗೆ ಪ್ರಮುಖ ಆದ್ಯತೆಯಾಗಿದೆ, ಹಾಗೂ ಇವುಗಳನ್ನು ಮತ್ತು ಇತರ ರೀತಿಯ ಅಪರಾಧಗಳನ್ನು ಎದುರಿಸಲು ನಾವು ನಮ್ಮ ಸಾಮರ್ಥ್ಯಗಳನ್ನು ನಿರಂತರವಾಗಿ ವಿಕಸನಗೊಳಿಸುತ್ತೇವೆ.

ಕ್ರಮವಾಗಿ ಮಕ್ಕಳ ಲೈಂಗಿಕ ದೌರ್ಜನ್ಯದ ತಿಳಿದಿರುವ ಕಾನೂನುಬಾಹಿರ ಚಿತ್ರಗಳು ಮತ್ತು ವೀಡಿಯೊಗಳನ್ನು ಗುರುತಿಸಲು ಮತ್ತು ಕಾನೂನಿನ ಅನುಸಾರ, ಅವುಗಳ ಕುರಿತು U.S. ಕಾಣೆಯಾದ ಮತ್ತು ಶೋಷಣೆಗೊಳಗಾದ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ (NCMEC) ವರದಿ ಮಾಡಲು, PhotoDNA ದೃಢವಾದ ಹ್ಯಾಶ್-ಹೊಂದಾಣಿಕೆ ಮತ್ತು Google ನ ಮಕ್ಕಳ ಲೈಂಗಿಕ ಶೋಷಣೆ ಚಿತ್ರಣ (CSAI) ಹೊಂದಾಣಿಕೆಯಂತಹ ಸಕ್ರಿಯ ತಂತ್ರಜ್ಞಾನದ ಪತ್ತೆಮಾಡುವಿಕೆ ಸಾಧನಗಳನ್ನು ನಾವು ಬಳಸುತ್ತೇವೆ. ನಂತರ NCMEC, ಅಗತ್ಯಕ್ಕೆ ಅನುಸಾರ ದೇಶೀಯ ಅಥವಾ ಅಂತರರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ನಡೆಸುತ್ತದೆ.

2023 ರ ಮೊದಲಾರ್ಧದಲ್ಲಿ, ಇಲ್ಲಿ ವರದಿ ಮಾಡಲಾದ ಒಟ್ಟು ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ಉಲ್ಲಂಘನೆಗಳಲ್ಲಿ 98 ಪ್ರತಿಶತವನ್ನು ನಾವು ಪೂರ್ವಭಾವಿಯಾಗಿ ಪತ್ತೆ ಮಾಡಿದೆವು ಮತ್ತು ಅವುಗಳ ವಿರುದ್ಧ ಕ್ರಮ ಕೈಗೊಂಡೆವು — ಇದು ಹಿಂದಿನ ಅವಧಿಗಿಂತ 4% ಏರಿಕೆಯಾಗಿದೆ.

**NCMEC ಗೆ ಪ್ರತಿ ಸಲ್ಲಿಕೆಯು ಹಲವು ವಿಷಯದ ತುಣುಕುಗಳನ್ನು ಒಳಗೊಂಡಿರಬಹುದು ಎಂಬುದನ್ನು ಗಮನಿಸಿ. NCMEC ಗೆ ಸಲ್ಲಿಸಿದ ಮಾಧ್ಯಮದ ಒಟ್ಟು ಪ್ರತ್ಯೇಕ ತುಣುಕುಗಳು ನಮ್ಮ ಜಾರಿಗೊಳಿಸಿದ ಒಟ್ಟು ವಿಷಯಕ್ಕೆ ಸಮನಾಗಿರುತ್ತದೆ.

ಭಯೋತ್ಪಾದಕ ಮತ್ತು ಹಿಂಸಾತ್ಮಕ ತೀವ್ರವಾದಿ ಕಂಟೆಂಟ್

ಜನವರಿ 1 2023 - ಜೂನ್ 30, 2023 ರ ವರದಿ ಮಾಡುವಿಕೆ ಅವಧಿಯಲ್ಲಿ, ಭಯೋತ್ಪಾದಕ ಮತ್ತು ಹಿಂಸಾತ್ಮಕ ತೀವ್ರವಾದ ಕಂಟೆಂಟ್ ನಿಷೇಧಿಸುವ ನಮ್ಮ ನೀತಿಯ ಉಲ್ಲಂಘನೆಗಳಿಗಾಗಿ ನಾವು 18 ಖಾತೆಗಳನ್ನು ತೆಗೆದುಹಾಕಿದ್ದೇವೆ.

Snap ನಲ್ಲಿ, ನಾವು ಬಹು ಚಾನೆಲ್‌ಗಳ ಮೂಲಕ ವರದಿ ಮಾಡಲಾದ ಭಯೋತ್ಪಾದಕ ಮತ್ತು ಹಿಂಸಾತ್ಮಕ ಉಗ್ರವಾದದ ವಿಷಯವನ್ನು ತೆಗೆದುಹಾಕುತ್ತೇವೆ. ನಮ್ಮ ಆ್ಯಪ್‌ನಲ್ಲಿನ ವರದಿ ಮಾಡುವಿಕೆ ಮೆನು ಮೂಲಕ ಭಯೋತ್ಪಾದಕ ಮತ್ತು ಹಿಂಸಾತ್ಮಕ ತೀವ್ರವಾದದ ಕಂಟೆಂಟ್ ಅನ್ನು ವರದಿ ಮಾಡಲು ನಾವು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ ಮತ್ತು Snap ನಲ್ಲಿ ಕಾಣಿಸಿಕೊಳ್ಳಬಹುದಾದ ಭಯೋತ್ಪಾದಕ ಮತ್ತು ಹಿಂಸಾತ್ಮಕ ತೀವ್ರವಾದದ ಕಂಟೆಂಟ್ ಅನ್ನು ಬಗೆಹರಿಸಲು ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಾವು ನಿಕಟವಾಗಿ ಕೆಲಸ ಮಾಡುತ್ತೇವೆ.

ಸ್ವಯಂ-ಹಾನಿ ಮತ್ತು ಆತ್ಮಹತ್ಯೆ ವಿಷಯ

Snapchatter ಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನಾವು ಆಳವಾಗಿ ಕಾಳಜಿ ವಹಿಸುತ್ತೇವೆ, ಅದು Snapchat ಅನ್ನು ವಿಭಿನ್ನವಾಗಿ ನಿರ್ಮಿಸಲು ನಮ್ಮ ನಿರ್ಧಾರಗಳನ್ನು ರೂಪಿಸುತ್ತದೆ – ಮತ್ತು ರೂಪಿಸುವುದನ್ನು ಮುಂದುವರಿಸುತ್ತದೆ. ನಿಜವಾದ ಸ್ನೇಹಿತರ ನಡುವಿನ ಸಂವಹನಕ್ಕಾಗಿ ವಿನ್ಯಾಸಗೊಳಿಸಲಾದ ವೇದಿಕೆಯಾಗಿ, ಕಷ್ಟದ ಸಮಯಗಳಲ್ಲಿ ಪರಸ್ಪರ ಸಹಾಯ ಮಾಡಲು ಸ್ನೇಹಿತರನ್ನು ಸಬಲಗೊಳಿಸುವಲ್ಲಿ Snapchat ಅನನ್ಯ ಪಾತ್ರವನ್ನು ವಹಿಸುತ್ತದೆ ಎಂದು ನಾವು ನಂಬುತ್ತೇವೆ.

ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡವು ತೊಂದರೆಯಲ್ಲಿರುವ Snapchatter ಅನ್ನು ಗುರುತಿಸಿದಾಗ, ಸ್ವಯಂ-ಹಾನಿ ತಡೆಗಟ್ಟುವಿಕೆ ಮತ್ತು ಬೆಂಬಲ ಸಂಪನ್ಮೂಲಗಳನ್ನು ಕಳಿಸಬಹುದು ಮತ್ತು ಸೂಕ್ತವಾಗಿರುವಾಗ ತುರ್ತು ಪ್ರತಿಕ್ರಿಯೆ ಸಿಬ್ಬಂದಿಗೆ ಸೂಚನೆ ನೀಡಬಹುದು. ನಾವು ಹಂಚಿಕೊಳ್ಳುವ ಸಂಪನ್ಮೂಲಗಳು ನಮ್ಮ ಸುರಕ್ಷತಾ ಸಂಪನ್ಮೂಲಗಳ ಜಾಗತಿಕ ಪಟ್ಟಿಯಲ್ಲಿ ಲಭ್ಯ ಇವೆ ಮತ್ತು ಇವು ಎಲ್ಲ Snapchatter ಗಳಿಗೆ ಸಾರ್ವಜನಿಕವಾಗಿ ಲಭ್ಯ ಇವೆ.

ಮೇಲ್ಮನವಿಗಳು

ಈ ವರದಿಯ ಅನುಸಾರ, ನಮ್ಮ ನೀತಿಗಳ ಉಲ್ಲಂಘನೆಗಾಗಿ ಖಾತೆಗಳನ್ನು ಲಾಕ್ ಮಾಡಲಾಗಿರುವ ಬಳಕೆದಾರರಿಂದ ಮೇಲ್ಮನವಿಗಳ ಸಂಖ್ಯೆಯ ಕುರಿತು ನಾವು ವರದಿ ಮಾಡಲು ಆರಂಭಿಸುತ್ತಿದ್ದೇವೆ. ನಮ್ಮ ಮಾಡರೇಟರ್‌ಗಳು ತಪ್ಪಾಗಿ ಲಾಕ್ ಮಾಡಲಾಗಿದೆ ಎಂದು ನಿರ್ಧರಿಸುವ ಖಾತೆಗಳನ್ನು ಮಾತ್ರ ನಾವು ಮರುಸ್ಥಾಪಿಸುತ್ತೇವೆ. ಈ ಅವಧಿಯಲ್ಲಿ, ಮಾದಕಪದಾರ್ಥ ಕಂಟೆಂಟ್‌ಗೆ ಸಂಬಂಧಿಸಿದ ಮೇಲ್ಮನವಿಗಳ ಕುರಿತು ನಾವು ವರದಿ ಮಾಡುತ್ತಿದ್ದೇವೆ.  ನಮ್ಮ ಮುಂದಿನ ವರದಿಯಲ್ಲಿ, ನಮ್ಮ ನೀತಿಗಳ ಇತರ ಉಲ್ಲಂಘನೆಗಳಿಂದ ಉದ್ಭವಿಸುವ ಮೇಲ್ಮನವಿಗಳಿಗೆ ಸಂಬಂಧಿಸಿದ ಇನ್ನಷ್ಟು ಡೇಟಾ ಬಿಡುಗಡೆ ಮಾಡಲು ನಾವು ಎದುರು ನೋಡುತ್ತಿದ್ದೇವೆ.

ಜಾಹೀರಾತುಗಳ ಮಾಡರೇಷನ್

ಎಲ್ಲ ಜಾಹೀರಾತುಗಳು ನಮ್ಮ ಪ್ಲ್ಯಾಟ್‌ಫಾರ್ಮ್ ನೀತಿಗಳೊಂದಿಗೆ ಸಂಪೂರ್ಣ ಅನುಸರಣೆ ಹೊಂದಿವೆ ಎಂದು ದೃಢವಾಗಿ ಖಚಿತಪಡಿಸಿಕೊಳ್ಳಲು Snap ಬದ್ಧವಾಗಿದೆ. ನಮ್ಮ ಎಲ್ಲ ಬಳಕೆದಾರರಿಗೆ ಸುರಕ್ಷಿತ ಮತ್ತು ಆನಂದದಾಯಕ ವಾತಾವರಣವನ್ನು ನಿರ್ಮಿಸುವ, ಜವಾಬ್ದಾರಿಯುತ ಮತ್ತು ಗೌರವಯುತ ಜಾಹೀರಾತು ನೀಡುವಿಕೆಯ ವಿಧಾನದಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ನಮ್ಮ ಜಾಹೀರಾತು ಮಾಡರೇಷನ್ ಕುರಿತು ಕೆಳಗೆ ನಾವು ಒಳನೋಟಗಳನ್ನು ಸೇರಿಸಿದ್ದೇವೆ. ಮೋಸಗೊಳಿಸುವ ಕಂಟೆಂಟ್, ವಯಸ್ಕರ ಕಂಟೆಂಟ್, ಹಿಂಸಾತ್ಮಕ ಅಥವಾ ನೆಮ್ಮದಿಗೆಡಿಸುವ ಕಂಟೆಂಟ್, ದ್ವೇಷ ಭಾಷಣ ಮತ್ತು ಬೌದ್ಧಿಕ ಆಸ್ತಿಯ ಉಲ್ಲಂಘನೆಯ ಕಂಟೆಂಟ್ ಸೇರಿದಂತೆ Snap ನ ಜಾಹೀರಾತು ನೀತಿಗಳಲ್ಲಿ ವಿವರಿಸಲಾಗಿರುವ ವಿವಿಧ ಕಾರಣಗಳಿಗಾಗಿ Snapchat ನಲ್ಲಿನ ಜಾಹೀರಾತುಗಳನ್ನು ತೆಗೆದುಹಾಕಬಹುದಾಗಿದೆ ಎಂಬುದನ್ನು ಗಮನಿಸಿ. ಹೆಚ್ಚುವರಿಯಾಗಿ, ಈ ಪಾರದರ್ಶಕತೆಯ ವರದಿಯ ನ್ಯಾವಿಗೇಶನ್ ಬಾರ್‌ನಲ್ಲಿ ನೀವು Snapchat ನ ಜಾಹೀರಾತುಗಳ ಗ್ಯಾಲರಿಯನ್ನು ನೋಡಬಹುದು. 

ದೇಶದ ಸಮೀಕ್ಷೆ

ಈ ವಿಭಾಗವು ಭೌಗೋಳಿಕ ಪ್ರದೇಶಗಳ ಮಾದರಿಯಲ್ಲಿ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಜಾರಿಯ ಅವಲೋಕನವನ್ನು ಒದಗಿಸುತ್ತದೆ. ನಮ್ಮ ಮಾರ್ಗಸೂಚಿಗಳು ಸ್ಥಳವನ್ನು ಪರಿಗಣಿಸದೆ Snapchat ನಲ್ಲಿನ ಎಲ್ಲಾ ವಿಷಯಗಳಿಗೆ ಮತ್ತು ಎಲ್ಲಾ Snapchatter ಗಳಿಗೆ ಜಗತ್ತಿನಾದ್ಯಂತ ಅನ್ವಯಿಸುತ್ತವೆ.

ಪ್ರತ್ಯೇಕ ದೇಶಗಳಿಗಾಗಿ ಮಾಹಿತಿಯು ಲಗತ್ತಿಸಿರುವ CSV ಫೈಲ್ ಮೂಲಕ ಡೌನ್‌ಲೋಡ್‌ಗೆ ಲಭ್ಯವಿದೆ: