Snap Values
ಐರೋಪ್ಯ ಒಕ್ಕೂಟ
ಜನವರಿ 1, 2023 – ಜೂನ್ 30, 2023

ಬಿಡುಗಡೆ ಮಾಡಲಾದ ದಿನಾಂಕ:

25 ಅಕ್ಟೋಬರ್‌ 2023

ಪರಿಷ್ಕರಿಸಲಾದ ದಿನಾಂಕ:

07 ಫೆಬ್ರವರಿ, 2024

ನಮ್ಮ ಯುರೋಪಿಯನ್ ಒಕ್ಕೂಟ (EU) ಪಾರದರ್ಶಕತೆಯ ಪುಟಕ್ಕೆ ಸ್ವಾಗತ, ಇಲ್ಲಿ ನಾವು EU ಡಿಜಿಟಲ್ ಸೇವೆಗಳ ಕಾಯ್ದೆ (DSA), ಆಡಿಯೊ ವಿಷುವಲ್ ಮೀಡಿಯಾ ಸೇವೆಯ ನಿರ್ದೇಶನ (AVMSD) ಮತ್ತು ಡಚ್ ಮೀಡಿಯಾ ಕಾಯ್ದೆಯಿಂದ (DMA) ಅಗತ್ಯಪಡಿಸಲಾಗಿರುವ EU ನಿರ್ದಿಷ್ಟ ಮಾಹಿತಿಯನ್ನು ಪ್ರಕಟಿಸುತ್ತೇವೆ.  

ಸರಾಸರಿ ಮಾಸಿಕ ಸಕ್ರಿಯ ಸ್ವೀಕೃತಿದಾರರು 

1 ಆಗಸ್ಟ್ 2023 ರ ಪ್ರಕಾರ, EU ನಲ್ಲಿ ನಮ್ಮ Snapchat ಆ್ಯಪ್‌ನ 102 ದಶಲಕ್ಷ ಸರಾಸರಿ ಮಾಸಿಕ ಸಕ್ರಿಯ ಸ್ವೀಕೃತಿದಾರರನ್ನು (“AMAR”) ನಾವು ಹೊಂದಿದ್ದೇವೆ. ಅಂದರೆ, ಕಳೆದ 6 ತಿಂಗಳಿನಲ್ಲಿ ಸಾಧಾರಣ, EU ನಲ್ಲಿನ 10.2 ಕೋಟಿ ನೋಂದಾಯಿತ ಬಳಕೆದಾರರು ನಿರ್ದಿಷ್ಟ ತಿಂಗಳಿನಲ್ಲಿ ಕನಿಷ್ಟ ಒಂದು ಬಾರಿ Snapchat ಆ್ಯಪ್ ತೆರೆದಿದ್ದಾರೆ.

ಈ ಅನುಪಾತವು ಈ ಕೆಳಗಿನಂತೆ ಸದಸ್ಯ ರಾಷ್ಟ್ರವಾರು ವಿಂಗಡಣೆಯನ್ನು ಒದಗಿಸುತ್ತದೆ:

ಈ ಅಂಕಿಅಂಶಗಳನ್ನು ಪ್ರಸ್ತುತ DSA ನಿಯಮಗಳನ್ನು ಪೂರೈಸುವ ಸಲುವಾಗಿ ಲೆಕ್ಕಾಚಾರ ಮಾಡಲಾಗಿದೆ ಮತ್ತು DSA ಉದ್ದೇಶಗಳಿಗಾಗಿ ಮಾತ್ರ ಅವಲಂಬಿಸಬೇಕು. ಬದಲಾಗುವ ನಿಯಂತ್ರಕ ಮಾರ್ಗದರ್ಶಿ ಮತ್ತು ತಂತ್ರಜ್ಞಾನಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಸೇರಿದಂತೆ, ಕಾಲಕ್ರಮೇಣ ಈ ಅಂಕಿಅಂಶವನ್ನು ನಾವು ಹೇಗೆ ಲೆಕ್ಕಾಚಾರ ಮಾಡುತ್ತೇವೆ ಎನ್ನುವುದನ್ನು ನಾವು ಬದಲಾಯಿಸಬಹುದು. ಇದು ನಾವು ಇತರ ಉದ್ದೇಶಗಳಿಗಾಗಿ ಪ್ರಕಟಿಸುವ ಇತರ ಸಕ್ರಿಯ ಬಳಕೆದಾರರ ಅಂಕಿಅಂಶಗಳಿಗಾಗಿ ಬಳಸುವ ಲೆಕ್ಕಾಚಾರಗಳಿಗಿಂತ ಕೂಡ ಭಿನ್ನವಾಗಿರಬಹುದು.

ಕಾನೂನಾತ್ಮಕ ಪ್ರತಿನಿಧಿ 

Snap Group Limited, Snap B.V. ಅನ್ನು ಕಾನೂನು ಪ್ರತಿನಿಧಿಯಾಗಿ ನೇಮಕ ಮಾಡಿದೆ. ನೀವು ಈ ಪ್ರತಿನಿಧಿಯನ್ನು DSA ಗಾಗಿ dsa-enquiries [at] snapchat.com ಎಂಬಲ್ಲಿ, AVMSD ಮತ್ತು DMA ಗಳಿಗಾಗಿ vsp-enquiries [at] snapchat.com ಎಂಬಲ್ಲಿ, ನಮ್ಮ ಗ್ರಾಹಕ ಸೇವಾ ಸೈಟ್ ಮೂಲಕ [ಇಲ್ಲಿ], ಅಥವಾ ಇಲ್ಲಿ ಸಂಪರ್ಕಿಸಬಹುದು:

Snap B.V.
Keizersgracht 165, 1016 DP
Amsterdam, The Netherlands

ನೀವು ಕಾನೂನು ಜಾರಿ ಸಂಸ್ಥೆ ಆಗಿದ್ದರೆ, ದಯವಿಟ್ಟು ಇಲ್ಲಿ ವಿವರಿಸಿರುವ ಹಂತಗಳನ್ನು ಅನುಸರಿಸಿ.

ನಿಯಂತ್ರಕ ಪ್ರಾಧಿಕಾರಗಳು

DSA ಗಾಗಿ ನಾವು ಯುರೋಪಿಯನ್ ಕಮಿಷನ್‌ ಮತ್ತು ನೆದರ್‌ಲ್ಯಾಂಡ್ಸ್ ಅಥಾರಿಟಿ ಫಾರ್ ಕಂಸ್ಯೂಮರ್ಸ್ ಆ್ಯಂಡ್ ಮಾರ್ಕೆಟ್ಸ್ (ACM) ನಿಂದ ನಿಯಂತ್ರಿಸಲ್ಪಡುತ್ತೇವೆ. 

AVMSD ಮತ್ತು DMA ಗಾಗಿ, ಡಚ್ ಮೀಡಿಯಾ ಅಥಾರಿಟಿಯಿಂದ (CvdM) ನಾವು ನಿಯಂತ್ರಿಸಲ್ಪಡುತ್ತೇವೆ.

DSA ಪಾರದರ್ಶಕತೆಯ ವರದಿ

DSA ಯ ಕಲಂ 15, 24 ಮತ್ತು 42 ರ ಪ್ರಕಾರ, "ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ಸ್" ಎಂದು ಪರಿಗಣಿಸಲಾಗಿರುವ Snapchat ನ ಸೇವೆಗಳಿಗಾಗಿ ಅಂದರೆ, ಸ್ಪಾಟ್‌ಲೈಟ್, ಫಾರ್ ಯೂ, ಸಾರ್ವಜನಿಕ ಪ್ರೊಫೈಲ್‌ಗಳು, ಮ್ಯಾಪ್ಸ್, ಲೆನ್ಸ್‌ಗಳು ಮತ್ತು ಜಾಹೀರಾತು ನೀಡುವಿಕೆಗಾಗಿ Snap ನ ಕಂಟೆಂಟ್ ಮಾಡರೇಷನ್‌ಗೆ ಸಂಬಂಧಿಸಿ ಸೂಚಿಸಿದ ಮಾಹಿತಿಯನ್ನು ಒಳಗೊಂಡ ವರದಿಗಳನ್ನು Snap ಪ್ರಕಟಿಸಬೇಕಾಗುತ್ತದೆ. ಈ ವರದಿಯನ್ನು 25 ಅಕ್ಟೋಬರ್ 2023 ರಿಂದ ಪ್ರತಿ 6 ತಿಂಗಳುಗಳಿಗೊಮ್ಮೆ ಪ್ರಕಟಿಸಬೇಕಾಗುತ್ತದೆ.

Snap ನ ಸುರಕ್ಷತಾ ಪ್ರಯತ್ನಗಳು ಮತ್ತು ನಮ್ಮ ವೇದಿಕೆಯಲ್ಲಿ ವರದಿ ಮಾಡಲಾಗುವ ವಿಷಯಗಳ ಸ್ವರೂಪ ಮತ್ತು ಪ್ರಮಾಣದ ಕುರಿತು ಒಳನೋಟಗಳನ್ನು ಒದಗಿಸಲು Snap ವರ್ಷಕ್ಕೆ ಎರಡು ಬಾರಿ ಪಾರದರ್ಶಕತಾ ವರದಿಗಳನ್ನು ಪ್ರಕಟಿಸುತ್ತದೆ. H1 2023 ಕ್ಕಾಗಿ (ಜನವರಿ 1 - ಜೂನ್ 30) ನಮ್ಮ ಇತ್ತೀಚಿನ ವರದಿಯನ್ನು ಇಲ್ಲಿ ನೋಡಬಹುದು. ಆ ವರದಿಯು ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿದೆ:

  • ಸರ್ಕಾರಿ ವಿನಂತಿಗಳು, ಮಾಹಿತಿ ಮತ್ತು ಕಂಟೆಂಟ್ ತೆಗೆದುಹಾಕುವಿಕೆ ವಿನಂತಿಗಳನ್ನು ಒಳಗೊಂಡಂತೆ;

  • ಕಂಟೆಂಟ್ ಉಲ್ಲಂಘನೆಗಳು, ಇದು ಅಕ್ರಮ ಕಂಟೆಂಟ್‌ಗೆ ತೆಗೆದುಕೊಂಡ ಕ್ರಮ ಮತ್ತು ಸರಾಸರಿ ಪ್ರತಿಕ್ರಿಯೆ ಸಮಯವನ್ನು ಒಳಗೊಂಡಿದೆ;

  • ಮೇಲ್ಮನವಿಗಳು, ನಮ್ಮ ಆಂತರಿಕ ದೂರು ನಿರ್ವಹಣೆ ಪ್ರಕ್ರಿಯೆಯ ಮೂಲಕ ಸ್ವೀಕರಿಸಲಾಗುತ್ತದೆ ಮತ್ತು ನಿರ್ವಹಿಸಲಾಗುತ್ತದೆ;

ಆ ವಿಭಾಗಗಳು DSA ಯ ಕಲಂ 15.1(a), (b) ಮತ್ತು (d) ಅಗತ್ಯಪಡಿಸಿದ ಮಾಹಿತಿಗೆ ಪ್ರಸ್ತುತವಾಗಿವೆ. DSA ಯ ಜಾರಿಗೂ ಮುಂಚಿನದಾಗಿರುವ, H1 2023 ಅನ್ನು ಇತ್ತೀಚಿನ ವರದಿಯು ಒಳಗೊಳ್ಳುವುದರಿಂದ ಅವು ಇನ್ನೂ ಪೂರ್ಣ ಡೇಟಾ ಸೆಟ್ ಅನ್ನು ಒಳಗೊಂಡಿಲ್ಲ ಎನ್ನುವುದನ್ನು ಗಮನಿಸಿ. 

H1 2023 ಗಾಗಿ ನಮ್ಮ ಪಾರದರ್ಶಕತೆಯ ವರದಿಯಲ್ಲಿ ಒಳಗೊಳ್ಳದ ಆಯಾಮಗಳ ಕುರಿತ ಒಂದಿಷ್ಟು ಹೆಚ್ಚುವರಿ ಮಾಹಿತಿಯನ್ನು ನಾವು ಕೆಳಗೆ ನೀಡಿದ್ದೇವೆ:

ಕಂಟೆಂಟ್ ಮಾಡರೇಷನ್ (ಕಲಂ 15.1(c) ಮತ್ತು (e), ಕಲಂ 42.2)

Snapchat ನಲ್ಲಿರುವ ಎಲ್ಲ ಕಂಟೆಂಟ್ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ಸೇವೆಯ ನಿಯಮಗಳು, ಹಾಗೂ ಪೂರಕ ನಿಯಮಗಳು, ಮಾರ್ಗಸೂಚಿಗಳು ಮತ್ತು ಎಕ್ಸ್‌ಪ್ಲೇನರ್‌ಗಳ ಪಾಲನೆ ಮಾಡಬೇಕು. ಪೂರ್ವಭಾವಿ ಪತ್ತೆ ಕಾರ್ಯವಿಧಾನಗಳು ಮತ್ತು ಅಕ್ರಮ ಅಥವಾ ಉಲ್ಲಂಘಿಸುವ ಕಂಟೆಂಟ್ ಅಥವಾ ಖಾತೆಗಳ ವರದಿಗಳು ವಿಮರ್ಶೆಯ ಅಗತ್ಯವನ್ನು ಸೃಷ್ಟಿಸುತ್ತವೆ, ಈ ಸಂದರ್ಭ, ನಮ್ಮ ಟೂಲಿಂಗ್ ಸಿಸ್ಟಂಗಳು ವಿನಂತಿಯನ್ನು ಪ್ರಕ್ರಿಯೆಗೊಳಿಸುತ್ತವೆ, ಸಂಬಂಧಿಸಿದ ಮೆಟಾಡೇಟಾವನ್ನು ಸಂಗ್ರಹಿಸುತ್ತವೆ ಮತ್ತು ಪರಿಣಾಮಕಾರಿ ಹಾಗೂ ದಕ್ಷ ವಿಮರ್ಶೆ ಕಾರ್ಯವಿಧಾನಗಳನ್ನು ಸೌಲಭ್ಯಗೊಳಿಸಲು ವಿನ್ಯಾಸಗೊಳಿಸಲಾಗಿರುವ ವ್ಯವಸ್ಥಿತ ಬಳಕೆದಾರ ಇಂಟರ್‌ಫೇಸ್ ಮೂಲಕ ನಮ್ಮ ಮಾಡರೇಷನ್ ತಂಡಕ್ಕೆ ಸಂಬಂಧಿಸಿದ ಕಂಟೆಂಟ್ ಅನ್ನು ಕಳುಹಿಸುತ್ತವೆ. ಒಬ್ಬ ಬಳಕೆದಾರ ನಮ್ಮ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಮಾನವರ ವಿಮರ್ಶೆ ಅಥವಾ ಸ್ವಯಂಚಾಲಿತ ವಿಧಾನಗಳ ಮೂಲಕ ನಮ್ಮ ಮಾಡರೇಷನ್ ತಂಡಗಳು ನಿರ್ಧರಿಸಿದಾಗ, ನಾವು ಉಲ್ಲಂಘಿಸುವ ಕಂಟೆಂಟ್ ಅಥವಾ ಖಾತೆಯನ್ನು ತೆಗೆದುಹಾಕಬಹುದು, ಸಂಬಂಧಿಸಿದ ಖಾತೆಯ ಗೋಚರತೆಯನ್ನು ಸಮಾಪ್ತಿಗೊಳಿಸಬಹುದು ಅಥವಾ ಮಿತಿಗೊಳಿಸಬಹುದು, ಮತ್ತು/ಅಥವಾ ನಮ್ಮ Snapchat ಮಾಡರೇಷನ್, ಕ್ರಮ ಜಾರಿಗೊಳಿಸುವಿಕೆ ಮತ್ತು ಮನವಿಗಳ ಎಕ್ಸ್‌ಪ್ಲೇನರ್‌ನಲ್ಲಿ ವಿವರಿಸಿರುವಂತೆ ಕಾನೂನು ಜಾರಿ ಸಂಸ್ಥೆಯ ಗಮನಕ್ಕೆ ತರಬಹುದು.  ಕಮ್ಯನಿಟಿ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ನಮ್ಮ ಸುರಕ್ಷತಾ ತಂಡದಿಂದ ಲಾಕ್ ಮಾಡಲಾಗಿರುವ ಖಾತೆಗಳ ಬಳಕೆದಾರರು ಲಾಕ್ ಮಾಡಿದ ಖಾತೆಯ ಮನವಿಯನ್ನು ಸಲ್ಲಿಸಬಹುದು ಮತ್ತು ಬಳಕೆದಾರರು ಕೆಲವು ಕಂಟೆಂಟ್ ವಿರುದ್ಧದ ಕ್ರಮ ಜಾರಿಗೊಳಿಸುವಿಕೆ ವಿರುದ್ಧ ಮನವಿ ಸಲ್ಲಿಸಬಹುದು.

ಸ್ವಯಂಚಾಲಿತ ಕಂಟೆಂಟ್ ಮಾಡರೇಷನ್ ಟೂಲ್‌ಗಳು

ನಮ್ಮ ಸಾರ್ವಜನಿಕ ವಿಷಯ ವೇದಿಕೆಗಳಲ್ಲಿ, ವ್ಯಾಪಕ ಪ್ರೇಕ್ಷಕರಿಗೆ ವಿತರಣೆಗೆ ಅರ್ಹವಾಗುವುದಕ್ಕೆ ಮುನ್ನ ಕಂಟೆಂಟ್ ಸಾಮಾನ್ಯವಾಗಿ ಸ್ವಯಂ ಮಾಡರೇಷನ್ ಮತ್ತು ಮಾನವರ ವಿಮರ್ಶೆ ಎರಡರ ಮೂಲಕವೂ ಹಾದುಹೋಗುತ್ತದೆ. ಸ್ವಯಂಚಾಲಿತ ಟೂಲ್‌ಗಳಿಗೆ ಸಂಬಂಧಿಸಿದಂತೆ, ಇವುಗಳು ಸೇರಿವೆ:

  • ಮೆಷಿನ್ ಲರ್ನಿಂಗ್ ಬಳಸಿಕೊಂಡು ಅಕ್ರಮ ಮತ್ತು ಉಲ್ಲಂಘಿಸುವ ಕಂಟೆಂಟ್‌ನ ಪೂರ್ವಭಾವಿ ಪತ್ತೆಮಾಡುವಿಕೆ;

  • ಹ್ಯಾಶ್ ಮ್ಯಾಚಿಂಗ್ ಟೂಲ್‌ಗಳು (ಉದಾಹರಣೆಗೆ PhotoDNA ಮತ್ತು Google ನ CSAI Match);

  • ನಿಂದನೆಯ ಭಾಷೆಯ ಪತ್ತೆ: ಇಮೋಜಿಗಳು ಸೇರಿದಂತೆ, ನಿಂದನೆಯ ಕೀ ವರ್ಡ್‌ಗಳ ಗುರುತಿಸಲಾದ ಮತ್ತು ನಿಯಮಿತವಾಗಿ ಅಪ್‌ಡೇಟ್ ಮಾಡಲಾಗುವ ಪಟ್ಟಿಯನ್ನು ಆಧರಿಸಿ ಕಂಟೆಂಟ್ ತಿರಸ್ಕರಿಸಲು ನಿಂದನೆಯ ಭಾಷೆಯ ಪತ್ತೆ.

ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿ (H1 2023) ಅವಧಿಗಾಗಿ, ಈ ಸ್ವಯಂಚಾಲಿತ ವ್ಯವಸ್ಥೆಗಳಿಗಾಗಿ ಔಪಚಾರಿಕ ಸೂಚಕಗಳು / ದೋಷದ ಪ್ರಮಾಣವನ್ನು ತಾಳೆ ನೋಡುವ ಅಗತ್ಯವಿರಲಿಲ್ಲ. ಅದಾಗ್ಯೂ, ಸಮಸ್ಯೆಗಳಿಗಾಗಿ ನಾವು ಈ ವ್ಯವಸ್ಥೆಗಳ ಮೇಲೆ ನಿರಂತರ ನಿಗಾ ಇರಿಸುತ್ತೇವೆ ಮತ್ತು ನಿಖರತೆಗಾಗಿ ನಮ್ಮ ಮಾನವರ ಮಾಡರೇಷನ್ ನಿರ್ಧಾರಗಳನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡಲಾಗುತ್ತದೆ.


ಮಾನವ ಮಾಡರೇಷನ್

ನಮ್ಮ ಕಂಟೆಂಟ್ ಮಾಡರೇಷನ್ ತಂಡವು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತದೆ, ಈ ಮೂಲಕ 24/7 Snapchatter ಗಳನ್ನು ಸುರಕ್ಷಿತವಾಗಿ ಇರಿಸಲು ನಮಗೆ ಸಹಾಯ ಮಾಡುತ್ತದೆ. ಕೆಳಗೆ, ಆಗಸ್ಟ್ 2023 ವರೆಗಿನ ಮಾಡರೇಟರ್‌ಗಳ ಭಾಷೆ ವಿಶಿಷ್ಟತೆಗಳ ಪ್ರಕಾರ ನಮ್ಮ ಮಾನವ ಮಾಡರೇಷನ್ ಸಂಪನ್ಮೂಲಗಳ ವಿವರಗಳನ್ನು ನೀವು ಕಾಣುತ್ತೀರಿ (ಕೆಲವು ಮಾಡರೇಟರ್‌ಗಳು ಹಲವು ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದಾರೆ ಎನ್ನುವುದನ್ನು ಗಮನಿಸಿ):

ಭಾಷೆ/ದೇಶದ ಪ್ರಕಾರ ನಾವು ಒಳಬರುವ ಪ್ರಮಾಣದ ಟ್ರೆಂಡ್‌ಗಳು ಅಥವಾ ಸಲ್ಲಿಕೆಗಳನ್ನು ಕಾಣುತ್ತಿರುವಂತೆ ಈ ಮೇಲಿನ ಸಂಖ್ಯೆಗಳು ಆಗಾಗ್ಗೆ ಏರಿಳಿಕೆಯಾಗುತ್ತವೆ. ನಮಗೆ ಹೆಚ್ಚುವರಿ ಭಾಷಾ ಸೇವೆಗಳ ನೆರವಿನ ಅಗತ್ಯವಿರುವಂತಹ ಸಂದರ್ಭಗಳಲ್ಲಿ, ನಾವು ಅನುವಾದ ಸೇವೆಗಳನ್ನು ಬಳಸುತ್ತೇವೆ.

ನಿಯಂತ್ರಕರನ್ನು ಪ್ರಮಾಣಿತ ಉದ್ಯೋಗ ವಿವರಣೆಯನ್ನು ಬಳಸಿಕೊಂಡು ನೇಮಕ ಮಾಡಲಾಗುತ್ತದೆ, ಅದು ಭಾಷೆಯ ಅಗತ್ಯವನ್ನು ಒಳಗೊಂಡಿರುತ್ತದೆ (ಅಗತ್ಯವನ್ನು ಅವಲಂಬಿಸಿ). ಪ್ರವೇಶ-ಮಟ್ಟದ ಹುದ್ದೆಗಳಿಗಾಗಿ ಭಾಷಾ ಪರಿಣತಿಯ ಅಗತ್ಯತೆಯ ಪ್ರಕಾರ ಅಭ್ಯರ್ಥಿಯು ಸಂಬಂಧಿತ ಭಾಷೆಯಲ್ಲಿ ಸ್ಫುಟವಾಗಿ ಬರೆಯುವ ಮತ್ತು ಮಾತನಾಡುವ ಕೌಶಲ್ಯಗಳನ್ನು ಪ್ರದರ್ಶಿಸಲು ಸಾಧ್ಯವಾಗಬೇಕು ಹಾಗೂ ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು. ಅಭ್ಯರ್ತಿಗಳನ್ನು ಪರಿಗಣಿಸಬೇಕಾದರೆ ಅವರು ಶೈಕ್ಷಣಿಕ ಮತ್ತು ಹಿನ್ನೆಲೆ ಅಗತ್ಯಗಳನ್ನು ಕೂಡ ಪೂರೈಸಬೇಕು. ಅಭ್ಯರ್ಥಿಗಳು ತಾವು ವಿಷಯ ನಿಯಂತ್ರಣ ನಿರ್ವಹಿಸುವಂತಹ ದೇಶ ಅಥವಾ ಪ್ರದೇಶದ ಪ್ರಸಕ್ತ ವಿದ್ಯಮಾನಗಳ ಅರಿವನ್ನು ಕೂಡ ಪ್ರದರ್ಶಿಸಬೇಕಾಗುತ್ತದೆ.

ನಮ್ಮ Snapchat ಸಮುದಾಯವನ್ನು ರಕ್ಷಿಸಲು ಸಹಾಯ ಮಾಡುವುದಕ್ಕಾಗಿ ನಮ್ಮ ಮಾಡರೇಷನ್ ತಂಡವು ನಮ್ಮ ನೀತಿಗಳು ಮತ್ತು ಶಿಸ್ತುಕ್ರಮಗಳನ್ನು ಅನ್ವಯಿಸುತ್ತದೆ. ಹಲವು ವಾರಗಳ ಅವಧಿಯಲ್ಲಿ ತರಬೇತಿಯನ್ನು ನಡೆಸಲಾಗುತ್ತದೆ, ಇದರಲ್ಲಿ Snap ನ ನೀತಿಗಳು, ಟೂಲ್‌ಗಳು ಮತ್ತು ಮೇಲ್ಮನವಿ ಕಾರ್ಯವಿಧಾನಗಳ ಕುರಿತು ಹೊಸ ತಂಡದ ಸದಸ್ಯರಿಗೆ ಅರಿವು ನೀಡಲಾಗುತ್ತದೆ. ತರಬೇತಿಯ ಬಳಿಕ, ಪ್ರತಿ ಮಾಡರೇಟರ್ ಕಂಟೆಂಟ್ ವಿಮರ್ಶಿಸುವುದಕ್ಕೆ ಅನುಮತಿ ಪಡೆಯುವ ಮೊದಲು ಪ್ರಮಾಣೀಕರಣ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ನಿರ್ದಿಷ್ಟವಾಗಿ ನಾವು ನೀತಿ-ಅಂಚಿನ ಮತ್ತು ಸಂದರ್ಭ-ಆಧರಿತ ಪ್ರಕರಣಗಳನ್ನು ಎದುರಿಸಿದಾಗ, ನಮ್ಮ ಮಾಡರೇಷನ್ ತಂಡವು ಅವರ ವರ್ಕ್‌ಫ್ಲೋಗಳಿಗೆ ಸಂಬಂಧಿಸಿದ ರಿಫ್ರೆಶರ್ ತರಬೇತಿಯಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ. ಎಲ್ಲಾ ನಿಯಂತ್ರಕರು ಇತ್ತೀಚಿನ ಮಾಹಿತಿಯನ್ನು ಹೊಂದಿದ್ದರೆಂದು ಮತ್ತು ನವೀಕರಿಸಲ್ಪಟ್ಟ ಎಲ್ಲಾ ನೀತಿಗಳನ್ನು ಅನುಸರಿಸುತ್ತಿದ್ದಾರೆಂದು ಖಚಿತಪಡಿಸುವುದಕ್ಕಾಗಿ ನಾವು ಕೌಶಲ್ಯವರ್ಧನಾ ಕಾರ್ಯಕ್ರಮಗಳು, ಪ್ರಮಾಣೀಕರಣ ತರಬೇತಿಗಳು ಮತ್ತು ರಸಪ್ರಶ್ನೆಗಳನ್ನು ಸಹ ಆಯೋಜಿಸುತ್ತೇವೆ. ಅಂತಿಮವಾಗಿ, ಪ್ರಸ್ತುತ ಘಟನೆಗಳ ಆಧಾರದ ಮೇಲೆ ತುರ್ತು ವಿಷಯ ಪ್ರವೃತ್ತಿಗಳು ಹೊರಹೊಮ್ಮಿದಾಗ, ನಾವು ನೀತಿ ಸ್ಪಷ್ಟೀಕರಣಗಳನ್ನು ತ್ವರಿತವಾಗಿ ಪ್ರಸಾರ ಮಾಡುತ್ತೇವೆ ಇದರಿಂದ ತಂಡಗಳು Snap ನ ನೀತಿಗಳ ಪ್ರಕಾರ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ.

ನಮ್ಮ ಕಂಟೆಂಟ್ ಮಾಡರೇಷನ್ ತಂಡಕ್ಕೆ - ಅಂದರೆ Snap ನ "ಡಿಜಿಟಲ್ ಮೊದಲ ಪ್ರತಿಕ್ರಿಯೆದಾರರಿಗೆ" - ಕೆಲಸದಲ್ಲಿನ ಯೋಗಕ್ಷೇಮ ಬೆಂಬಲ ಮತ್ತು ಮಾನಸಿಕ ಆರೋಗ್ಯ ಸೇವೆಗಳಿಗೆ ಸುಲಭ ಆ್ಯಕ್ಸೆಸ್ ಸೇರಿದಂತೆ, ನಾವು ಗಮನಾರ್ಹ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತೇವೆ. 


ಕಂಟೆಂಟ್ ಮಾಡರೇಷನ್ ಸುರಕ್ಷತಾ ಕ್ರಮಗಳು

ಸ್ವಯಂಚಾಲಿತ ಮತ್ತು ಮಾನವ ಮಾಡರೇಟರ್‌ರ ಪಕ್ಷಪಾತ ಮತ್ತು ಸರ್ಕಾರಗಳು, ರಾಜಕೀಯ ಕ್ಷೇತ್ರಗಳು ಅಥವಾ ಸುಸಂಘಟಿತ ವ್ಯಕ್ತಿಗಳು ಸೇರಿದಂತೆ ನಿಂದನೀಯ ವರದಿಗಳಿಂದ ಉಂಟಾಗಬಹುದಾದ ಅಭಿವ್ಯಕ್ತಿ ಮತ್ತು ಸಭೆ ಸೇರುವ ಸ್ವಾತಂತ್ರ್ಯದ ಅಪಾಯಗಳು ಸೇರಿದಂತೆ ವಿಷಯ ಮಿತಗೊಳಿಸುವಿಕೆಗೆ ಸಂಬಂಧಿಸಿದ ಅಪಾಯಗಳಿವೆ ಎಂದು ನಾವು ಗುರುತಿಸುತ್ತೇವೆ. ಸಾಮಾನ್ಯವಾಗಿ Snapchat, ನಿರ್ದಿಷ್ಟವಾಗಿ ನಮ್ಮ ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಅಥವಾ ಚಳವಳಿಯ ವಿಷಯಕ್ಕಾಗಿನ ಸ್ಥಳವಲ್ಲ. 

ಅದೇನೇ ಇದ್ದರೂ, ಈ ಅಪಾಯಗಳ ವಿರುದ್ಧ ರಕ್ಷಣೆ ನೀಡಲು, Snap ಪರೀಕ್ಷೆ ಮಾಡುವಿಕೆ ಮತ್ತು ತರಬೇತಿ ನೀಡುವಿಕೆಯನ್ನು ಹೊಂದಿದೆ ಮತ್ತು ಕಾನೂನು ಜಾರಿ ಸಂಸ್ಥೆ ಮತ್ತು ಸರ್ಕಾರಿ ಅಧಿಕಾರಿಗಳಿಂದ ಸೇರಿದಂತೆ ಅಕ್ರಮ ಅಥವಾ ಉಲ್ಲಂಘಿಸುವ ವಿಷಯದ ವರದಿಗಳನ್ನು ನಿಭಾಯಿಸುವುದಕ್ಕಾಗಿ ಸದೃಢವಾದ, ಸ್ಥಿರವಾದ ಕಾರ್ಯವಿಧಾನಗಳನ್ನು ಹೊಂದಿದೆ. ನಮ್ಮ ವಿಷಯ ಮಾಡರೇಷನ್ ಆಲ್ಗಾರಿದಂಗಳನ್ನು ನಾವು ನಿರಂತರವಾಗಿ ಮೌಲ್ಯಮಾಪನ ಮಾಡುತ್ತೇವೆ ಮತ್ತು ವಿಕಸನಗೊಳಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಭಾವ್ಯ ಹಾನಿಗಳನ್ನು ಪತ್ತೆಮಾಡುವುದು ಕಷ್ಟಕರವಾಗಿದ್ದರೂ ಸಹ, ಯಾವುದೇ ಗಮನಾರ್ಹವಾದ ಸಮಸ್ಯೆಗಳ ಕುರಿತು ನಮಗೆ ತಿಳಿದುಬಂದಿಲ್ಲ ಮತ್ತು ತಪ್ಪುಗಳು ನಡೆದಲ್ಲಿ ಅವುಗಳನ್ನು ವರದಿ ಮಾಡಲು ನಮ್ಮ ಬಳಕೆದಾರರಿಗೆ ನಾವು ಅವಕಾಶ ಒದಗಿಸುತ್ತೇವೆ. 

ನಮ್ಮ ನೀತಿಗಳು ಮತ್ತು ವ್ಯವಸ್ಥೆಗಳು ಸ್ಥಿರ ಮತ್ತು ನ್ಯಾಯೋಚಿತ ಕ್ರಮ ಜಾರಿಗೊಳಿಸುವಿಕೆಯನ್ನು ಪ್ರೋತ್ಸಾಹಿಸುತ್ತವೆ ಮತ್ತು ಮೇಲೆ ವಿವರಿಸಿರುವಂತೆ, ಪ್ರತಿಯೊಬ್ಬ Snapchatter ನ ಹಕ್ಕುಗಳನ್ನು ರಕ್ಷಿಸುವ ಜೊತೆಗೆ ನಮ್ಮ ಸಮುದಾಯದ ಹಿತಾಸಕ್ತಿಗಳನ್ನು ಸುರಕ್ಷಿತವಾಗಿರಿಸುವ ಗುರಿ ಹೊಂದಿರುವ ಸೂಚನೆ ಮತ್ತು ದೂರುಗಳ ಪ್ರಕ್ರಿಯೆಗಳ ಮೂಲಕ ಕ್ರಮ ಜಾರಿಯ ಫಲಿತಾಂಶಗಳನ್ನು ಅರ್ಥಪೂರ್ಣವಾಗಿ ಪ್ರತಿವಾದಿಸಲು Snapchatter ಗಳಿಗೆ ಅವಕಾಶ ಒದಗಿಸುತ್ತವೆ.

ನಮ್ಮ ಕ್ರಮ ಜಾರಿಗೊಳಿಸುವಿಕೆ ನೀತಿಗಳು ಮತ್ತು ಪ್ರಕ್ರಿಯೆಗಳನ್ನು ಸುಧಾರಿಸಲು ನಾವು ನಿರಂತರ ಶ್ರಮಿಸುತ್ತೇವೆ ಮತ್ತು Snapchat ನಲ್ಲಿ ಸಂಭಾವ್ಯತಃ ಹಾನಿಕಾರಕ ಮತ್ತು ಕಾನೂನುಬಾಹಿರ ವಿಷಯ ಹಾಗೂ ಚಟುವಟಿಕೆಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಾಕಷ್ಟು ಪರಿಶ್ರಮಪಟ್ಟಿದ್ದೇವೆ. ಇದು ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿಯಲ್ಲಿ ತೋರಿಸಿರುವ ನಮ್ಮ ವರದಿ ಮಾಡುವಿಕೆ ಮತ್ತು ಕ್ರಮ ಜಾರಿಗೊಳಿಸುವಿಕೆ ಅಂಕಿಅಂಶಗಳ ಮೇಲ್ಮುಖ ಪ್ರವೃತ್ತಿಯಲ್ಲಿ ಮತ್ತು ಒಟ್ಟಾರೆಯಾಗಿ Snapchat ನಲ್ಲಿ ಇಳಿಕೆಯಾಗುತ್ತಿರುವ ಉಲ್ಲಂಘನೆಗಳ ವ್ಯಾಪಕತೆಯ ದರದಲ್ಲಿ ಬಿಂಬಿತವಾಗಿದೆ.


ವಿಶ್ವಾಸಾರ್ಹ ಫ್ಲ್ಯಾಗ್ ಮಾಡುವವರ ಸೂಚನೆಗಳು (ವಿಧಿ 15.1(b))

ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿ (H1 2023) ಅವಧಿಗಾಗಿ, DSA ಅಡಿಯಲ್ಲಿ ಅಧಿಕೃತವಾಗಿ ನೇಮಕ ಮಾಡಲಾದ ಯಾವುದೇ ವಿಶ್ವಾಸಾರ್ಹ ಫ್ಲ್ಯಾಗ್ ಮಾಡುವವರು ಇಲ್ಲ. ಇದರ ಪರಿಣಾಮವಾಗಿ, ಅಂತಹ ವಿಶ್ವಾಸಾರ್ಹ ಫ್ಲ್ಯಾಗ್ ಮಾಡುವವರು ಸಲ್ಲಿಸಿದ ಸೂಚನೆಗಳ ಸಂಖ್ಯೆ ಈ ಅವಧಿಯಲ್ಲಿ ಸೊನ್ನೆ (0) ಆಗಿದೆ.


ನ್ಯಾಯಾಲಯದ ಹೊರಗಿನ ವಿವಾದಗಳು (ಆರ್ಟಿಕಲ್ 24.1(a))

ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿ (H1 2023) ಅವಧಿಗಾಗಿ, DSA ಅಡಿಯಲ್ಲಿ ಔಪಚಾರಿಕವಾಗಿ ನೇಮಕ ಮಾಡಲಾದ ನ್ಯಾಯಾಲಯದ ಹೊರಗಿನ ವಿವಾದ ಇತ್ಯರ್ಥದ ಆಯೋಗಗಳು ಇಲ್ಲ. ಇದರ ಪರಿಣಾಮವಾಗಿ, ಈ ಅವಧಿಯಲ್ಲಿ ಅಂತಹ ಆಯೋಗಗಳಿಗೆ ಸಲ್ಲಿಸಲಾದ ವಿವಾದಗಳ ಸಂಖ್ಯೆ ಸೊನ್ನೆ (0) ಆಗಿತ್ತು.


ವಿಧಿ 23 (ವಿಧ 24.1(b)) ಅನುಸಾರ ಖಾತೆ ಅಮಾನತುಗಳು

ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿ (H1 2023) ಅವಧಿಗಾಗಿ, ಸ್ಪಷ್ಟವಾಗಿ ಅಕ್ರಮ ಕಂಟೆಂಟ್, ಆಧಾರರಹಿತ ಸೂಚನೆಗಳು ಅಥವಾ ಆಧಾರರಹಿತ ದೂರುಗಳಿಗಾಗಿ DSA ವಿಧಿ 23 ರ ಅನುಸಾರವಾಗಿ ಖಾತೆಗಳನ್ನು ಅಮಾನತುಗೊಳಿಸಬೇಕಾದ ಅಗತ್ಯವಿರಲಿಲ್ಲ. ಇದರ ಪರಿಣಾಮವಾಗಿ, ಅಂತಹ ಅಮಾನತುಗಳ ಸಂಖ್ಯೆ ಸೊನ್ನೆ (0) ಆಗಿತ್ತು. ಅದಾಗ್ಯೂ, ನಮ್ಮ Snapchat ಮಾಡರೇಷನ್, ಕ್ರಮ ಜಾರಿಗೊಳಿಸುವಿಕೆ ಮತ್ತು ಮೇಲ್ಮನವಿಗಳ ವಿವರಣೆಯಲ್ಲಿ ವಿವರಿಸಿರುವಂತೆ ಖಾತೆಗಳ ವಿರುದ್ಧ ಸೂಕ್ತ ಕ್ರಮ ಜಾರಿಗೊಳಿಸುವಿಕೆ ಕ್ರಮವನ್ನು Snap ತೆಗೆದುಕೊಳ್ಳುತ್ತದೆ ಮತ್ತು Snap ನ ಖಾತೆ ವಿರುದ್ಧದ ಕ್ರಮ ಜಾರಿಗೊಳಿಸುವಿಕೆಯ ಮಟ್ಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಮ್ಮ ಪಾರದರ್ಶಕತೆಯ ವರದಿಯಲ್ಲಿ (H2 2023) ನೋಡಬಹುದು.