Snapchat ನಲ್ಲಿ ಹದಿಹರೆಯದವರಿಗೆ ಹೆಚ್ಚುವರಿ ರಕ್ಷಣೆಗಳು

Snapchat ಅನ್ನು ನಮ್ಮ ಸಮುದಾಯಕ್ಕೆ ಸುರಕ್ಷಿತ ಮತ್ತು ಮೋಜಿನ ವಾತಾವರಣವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ಪ್ರಾರಂಭದಿಂದಲೂ ನಮ್ಮ ಸೇವೆಯಲ್ಲಿ ಗೌಪ್ಯತೆ ಮತ್ತು ಸುರಕ್ಷತೆ ವೈಶಿಷ್ಟ್ಯಗಳನ್ನು ನಿರ್ಮಿಸಿದ್ದೇವೆ.

ಹದಿಹರೆಯದವರಿಗಾಗಿ ಪ್ರಬಲ ಡಿಫಾಲ್ಟ್ ಸೆಟ್ಟಿಂಗ್‌ಗಳು

ಸುರಕ್ಷತೆ ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳನ್ನು ಡಿಫಾಲ್ಟ್ ಆಗಿ ಆನ್ ಆಗಿರಿಸುವ ಮೂಲಕ, Snapchat ನಲ್ಲಿ ಹದಿಹರೆಯವರಿಗೆ (13-17) ಹೆಚ್ಚುವರಿ ರಕ್ಷಣೆಯ ಪದರವನ್ನು ಒದಗಿಸುತ್ತೇವೆ. 

ಹದಿಹರೆಯದವರ ಖಾತೆಗಳು ಡಿಫಾಲ್ಟ್ ಆಗಿ ಖಾಸಗಿಯಾಗಿರುತ್ತವೆ

ಎಲ್ಲ Snapchat ಖಾತೆಗಳ ರೀತಿಯಲ್ಲಿ, ಹದಿಹರೆಯದವರ ಖಾತೆಗಳು ಡಿಫಾಲ್ಟ್ ಆಗಿ ಖಾಸಗಿಯಾಗಿರುತ್ತವೆ. ಅಂದರೆ, ಸ್ನೇಹಿತರ ಪಟ್ಟಿಗಳು ಖಾಸಗಿಯಾಗಿರುತ್ತವೆ ಮತ್ತು ಪರಸ್ಪರ ಸ್ವೀಕರಿಸಿರುವ ಸ್ನೇಹಿತರೊಂದಿಗೆ ಅಥವಾ ಈಗಾಗಲೇ ತಮ್ಮ ಸಂಪರ್ಕಗಳಲ್ಲಿ ಸಂಖ್ಯೆಗಳನ್ನು ಉಳಿಸಿಕೊಂಡಿರುವ ಜನರ ಜೊತೆಗೆ ಮಾತ್ರ Snapchatter ಗಳು ಸಂವಹನ ನಡೆಸಬಹುದು. 

ಪರಸ್ಪರರನ್ನು ಟ್ಯಾಗ್ ಮಾಡಲು Snapchatter ಗಳು ಸ್ನೇಹಿತರಾಗಿರಬೇಕಾಗುತ್ತದೆ

Snapchatter ಗಳು ಈಗಾಗಲೇ ಸ್ನೇಹಿತರಾಗಿದ್ದರೆ (ಅಥವಾ ಸಾರ್ವಜನಿಕ ಪ್ರೊಫೈಲ್‌ಗಳನ್ನು ಹೊಂದಿರುವವರ ಫಾಲೋವರ್‌ಗಳಾಗಿದ್ದರೆ) ಮಾತ್ರ ಪರಸ್ಪರರನ್ನು Snap ಗಳು, ಕಥೆಗಳು ಅಥವಾ ಸ್ಪಾಟ್‌ಲೈಟ್ ವೀಡಿಯೊಗಳಲ್ಲಿ ಟ್ಯಾಗ್ ಮಾಡಬಹುದು.

ಸಾರ್ವಜನಿಕ ಪ್ರೊಫೈಲ್‌ಗಳು: ಡಿಫಾಲ್ಟ್ ಆಗಿ ಆಫ್ ಆಗಿರುತ್ತವೆ, ಹಿರಿಯ ಹದಿಹರೆಯದವರಿಗೆ ಮಾತ್ರ ಲಭ್ಯವಿರುತ್ತವೆ 

ಕೆಲವು ಹಿರಿಯ ಹದಿಹರೆಯದವರು (16-17 ವಯಸ್ಸಿನವರು), ಆಯ್ಕೆ ಮಾಡಿಕೊಂಡಲ್ಲಿ, ವಿಚಾರಪೂರ್ಣ ರಕ್ಷಣೆಗಳ ಜೊತೆಗೆ, ಅವರಿಗೆ Snapchat ನಲ್ಲಿ ಹೆಚ್ಚು ವಿಶಾಲವಾಗಿ ಕಂಟೆಂಟ್ ಹಂಚಿಕೊಳ್ಳಲು ಅವಕಾಶ ಕಲ್ಪಿಸುವ ಪ್ರಾಸ್ತಾವಿಕ ಅನುಭವವಾದ ಸಾರ್ವಜನಿಕ ಪ್ರೊಫೈಲ್‌ಗಳಿಗೆ ಪ್ರವೇಶ ಹೊಂದಿದ್ದು, ಈ ಬಳಕೆದಾರರಿಗೆ ಈ ವೈಶಿಷ್ಟ್ಯವು ಡಿಫಾಲ್ಟ್ ಆಗಿ ಆಫ್ ಆಗಿರುತ್ತದೆ. ಸಾರ್ವಜನಿಕ ಪ್ರೊಫೈಲ್‌ಗಳ ಮೂಲಕ, ಈ ಹಿರಿಯ ಹದಿಹರೆಯದವರು ಸಾರ್ವಜನಿಕ ಕಥೆಗೆ ಪೋಸ್ಟ್ ಮಾಡುವ ಮೂಲಕ ಅಥವಾ ಸ್ಪಾಟ್‌ಲೈಟ್‌ಗೆ ವೀಡಿಯೊ ಸಲ್ಲಿಸುವ ಮೂಲಕ ತಮ್ಮ Snap ಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು. ಈ Snap ಗಳನ್ನು ಅವರ ಸಾರ್ವಜನಿಕ ಪ್ರೊಫೈಲ್‌ನಲ್ಲಿ ಉಳಿಸಬಹುದಾಗಿದ್ದು, ಇದರಿಂದ ತಮ್ಮ ಮೆಚ್ಚಿನ ಪೋಸ್ಟ್‌ಗಳನ್ನು ಅವರು ಪ್ರದರ್ಶಿಸಬಹುದು. 

ಕಂಟೆಂಟ್ ಅನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಈ ಆಯ್ಕೆಯನ್ನು ಹೊಂದಿರುವ ಹಿರಿಯ ಹದಿಹರೆಯದವರು ಪೋಸ್ಟ್ ಮಾಡುವಾಗ, ಪ್ರತಿ ಪೋಸ್ಟ್ ಅನ್ನು ಸಾರ್ವಜನಿಕಗೊಳಿಸಬೇಕೇ ಅಥವಾ ಖಾಸಗಿಯಾಗಿ ಇರಿಸಬೇಕೇ ಎಂದು ನಿರ್ಧರಿಸಬಹುದು. ಇದರ ಜೊತೆಗೆ, ಎಲ್ಲ Snapchatter ಗಳ ರೀತಿಯಲ್ಲಿ, ಉದ್ದೇಶಪೂರ್ವಕ ಪೋಸ್ಟಿಂಗ್ ಆಯ್ಕೆಗಳ ಜೊತೆಗೆ ಅವರು ರಚಿಸುವ ಪ್ರತಿ ಕಂಟೆಂಟ್ ತುಣುಕಿನ ಮೇಲೆ ಅವರು ನಿಯಂತ್ರಣ ಹೊಂದಿದ್ದು, ಇದು Snap ಗಳನ್ನು ಎಲ್ಲಿ ಹಂಚಿಕೊಳ್ಳಲಾಗುತ್ತದೆ, ಅವುಗಳನ್ನು ಯಾರು ನೋಡಬಹುದು ಮತ್ತು ಅವುಗಳನ್ನು ಅವರ ಪ್ರೊಫೈಲ್‌ಗೆ ಉಳಿಸಲಾಗುತ್ತದೆಯೇ ಎಂದು ನಿರ್ಧರಿಸಲು ಅವರಿಗೆ ಅವಕಾಶ ಕಲ್ಪಿಸುತ್ತದೆ. 

ಕಿರಿಯ ಹದಿಹರೆಯದವರು (13-15 ವಯಸ್ಸಿನವರು) ಸಾರ್ವಜನಿಕ ಪ್ರೊಫೈಲ್‌ಗಳಿಗೆ ಪ್ರವೇಶ ಹೊಂದಿರುವುದಿಲ್ಲ.

ಡಿಫಾಲ್ಟ್ ಆಗಿ ವಯೋ ಸೂಕ್ತ ಕಂಟೆಂಟ್

Snapchat ನಲ್ಲಿ ಮಾಡರೇಟ್ ಮಾಡದೆ ಇರುವ ಕಂಟೆಂಟ್ ವಿಶಾಲವಾಗಿ ವಿತರಣೆಯಾಗುವ ಸಾಮರ್ಥ್ಯವನ್ನು ನಾವು ಮಿತಿಗೊಳಿಸುತ್ತೇವೆ. ಈ ಮಾಡರೇಷನ್‌ ಭಾಗವಾಗಿ, ವಿಶಾಲ ಪ್ರೇಕ್ಷಕರಿಗೆ ಅದನ್ನು ಪ್ರಸಾರ ಮಾಡುವುದಕ್ಕೆ ಮೊದಲು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಜೊತೆಗೆ ಈ ಸಾರ್ವಜನಿಕ ಕಂಟೆಂಟ್ ಅನ್ನು ವಿಮರ್ಶಿಸಲು ನಾವು ಪತ್ತೆಮಾಡುವಿಕೆ ಟೂಲ್‌ಗಳು ಮತ್ತು ಹೆಚ್ಚುವರಿ ಪ್ರಕ್ರಿಯೆಗಳನ್ನು ಬಳಸುತ್ತೇವೆ.  

ಹದಿಹರೆಯದವರಿಗೆ ವಯೋ-ಸೂಕ್ತ ಅನುಭವವನ್ನು ಒದಗಿಸಲು ನಾವು ಹೆಚ್ಚುವರಿ ರಕ್ಷಣೆಗಳನ್ನು ಹೊಂದಿದ್ದೇವೆ. ಉದಾಹರಣೆಗೆ, ಕೆಲವರಿಗೆ ಸೂಕ್ತ ಅನ್ನಿಸದಿರಬಹುದಾದ ಬಳಕೆದಾರರು ರಚಿಸಿದ ಸಾರ್ವಜನಿಕ ಕಂಟೆಂಟ್ ಅನ್ನು ಗುರುತಿಸಲು ನಾವು ಮಾನವ ವಿಮರ್ಶೆ ಮತ್ತು ಮೆಷಿನ್ ಲರ್ನಿಂಗ್‌ನ ಸಂಯೋಜನೆಯನ್ನು ಬಳಸುತ್ತೇವೆ, ಇದರಿಂದಾಗಿ ಹದಿಹರೆಯದವರ ಖಾತೆಗಳಿಗೆ ಶಿಫಾರಸು ಮಾಡಲು ಅದು ಅರ್ಹವಾಗಿರುವುದಿಲ್ಲ. 

ವಯೋ-ಸೂಕ್ತವಲ್ಲದ ಕಂಟೆಂಟ್ ಅನ್ನು ಮಾರಾಟ ಮಾಡಲು ಪ್ರಯತ್ನಿಸುವ ಸಾರ್ವಜನಿಕ ಪ್ರೊಫೈಲ್‌ಗಳನ್ನು ಹುಡುಕಲು ನಾವು ಪ್ರಬಲ ಸಕ್ರಿಯ ಪತ್ತೆ ಟೂಲ್‌ಗಳನ್ನು ಕೂಡ ಬಳಸುತ್ತೇವೆ ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಅನುಸಾರ ಅಂತಹ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಪ್ರಯತ್ನಿಸುತ್ತೇವೆ. 

ಸ್ಥಳ ಹಂಚಿಕೊಳ್ಳುವಿಕೆ: ಡಿಫಾಲ್ಟ್ ಆಗಿ ಆಫ್ ಆಗಿರುತ್ತದೆ

Snap ಮ್ಯಾಪ್‌ನಲ್ಲಿ ಸ್ಥಳ ಹಂಚಿಕೊಳ್ಳುವಿಕೆಯು ಎಲ್ಲ Snapchatter ಗಳಿಗೆ ಡಿಫಾಲ್ಟ್ ಆಗಿ ಆಫ್ ಆಗಿರುತ್ತದೆ. ತಮ್ಮ ನಿಖರ ಸ್ಥಳವನ್ನು ಹಂಚಿಕೊಳ್ಳಲು ಬಯಸುವ Snapchatter ಗಳು Snapchat ನಲ್ಲಿ ತಮ್ಮ ಸ್ನೇಹಿತರೊಂದಿಗೆ ಮಾತ್ರ ಆ ಸ್ಥಳವನ್ನು ಹಂಚಿಕೊಳ್ಳಬಹುದು ಮತ್ತು ತಮ್ಮ ಸೆಟ್ಟಿಂಗ್‌ಗಳನ್ನು ಹೊಂದಾಣಿಕೆ ಮಾಡುವ ಮೂಲಕ Snap ಮ್ಯಾಪ್‌ನಲ್ಲಿ ಆ ಸ್ನೇಹಿತರಲ್ಲಿ ಯಾರು ತಮ್ಮ ಸ್ಥಳವನ್ನು ನೋಡಬಹುದು ಎಂಬುದನ್ನು ಆಯ್ಕೆ ಮಾಡಬಹುದು. Snapchat ನಲ್ಲಿ ನಿಮ್ಮ ಸ್ನೇಹಿತರಲ್ಲದಿರುವ ಜನರೊಂದಿಗೆ ಸ್ಥಳವನ್ನು ಹಂಚಿಕೊಳ್ಳಲು ಯಾವುದೇ ಆಯ್ಕೆಯಿಲ್ಲ. 

ಕಂಟೆಂಟ್ ಮತ್ತು ಜಾಹೀರಾತು

ನೈಜ ಸ್ನೇಹಿತರ ಕಂಟೆಂಟ್ ಜೊತೆ ತೊಡಗಿಕೊಳ್ಳುವಿಕೆ

ಹಿರಿಯ ಹದಿಹರೆಯದವರು (16-17 ವಯಸ್ಸಿನವರು) ಅವರನ್ನು ಅನುಸರಿಸುವವರಿಂದ ತಮ್ಮ ಸಾರ್ವಜನಿಕ ಕಥೆಗಳಲ್ಲಿ ಕಥೆ ಪ್ರತ್ಯುತ್ತರಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ, ಆದರೆ ಆ ಪ್ರತ್ಯುತ್ತರಗಳಿಂದ ಚಾಟ್ ಸಂಭಾಷಣೆಯಲ್ಲಿ ತೊಡಗಲು ಸಾಧ್ಯವಾಗುವುದಿಲ್ಲ. Snapchat ನಲ್ಲಿ ಕ್ರಿಯೇಟರ್‌ಗಳನ್ನು ತಲುಪುವುದಕ್ಕೆ ಮೊದಲು ಪ್ರತ್ಯುತ್ತರಗಳನ್ನು ಫಿಲ್ಟರ್ ಮಾಡಲಾಗುತ್ತದೆ – ಮತ್ತು ಸಾರ್ವಜನಿಕ ಪ್ರೊಫೈಲ್ ಹೊಂದಿರುವ ಹಿರಿಯ ಹದಿಹರೆಯದವರಿಗೆ ಆ ಫಿಲ್ಟರಿಂಗ್ ಇನ್ನಷ್ಟು ಕಟ್ಟುನಿಟ್ಟಾಗಿರುತ್ತದೆ. ಒಟ್ಟಾರೆಯಾಗಿ ಪ್ರತ್ಯುತ್ತರಗಳನ್ನು ಆಫ್ ಮಾಡುವ ಅಥವಾ ಸಂವಹನಗಳನ್ನು ಗೌರವಯುತ ಮತ್ತು ವಿನೋದಮಯವಾಗಿ ಇರಿಸಲು ಸುಲಭವಾಗಿಸುವುದಕ್ಕಾಗಿ ವಿವಿಧ ಪದಗಳನ್ನು ನಿರ್ಬಂಧಿಸುವ ಆಯ್ಕೆಯನ್ನು ಕೂಡ Snapchatter ಗಳು ಹೊಂದಿದ್ದಾರೆ. ಮತ್ತು ಹದಿಹರೆಯದವರನ್ನು ಸುರಕ್ಷಿತವಾಗಿ ಇರಿಸಲು, ಸಾರ್ವಜನಿಕ ಕಂಟೆಂಟ್ ಹದಿಹರೆಯದವರ ಪ್ರಸ್ತುತ ಸ್ನೇಹಿತರ ಜಾಲದ ಭಾಗವಾಗಿಲ್ಲದ ವಯಸ್ಕರಿಂದ ಅನಪೇಕ್ಷಿತ ಚಾಟ್‌ಗಳಿಗೆ ದಾರಿಮಾಡಿಕೊಡುವುದನ್ನು ತಡೆಯಲು ನಾವು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಂಡಿದ್ದೇವೆ

ಹದಿಹರೆಯದವರ ಸಾರ್ವಜನಿಕ ಕಂಟೆಂಟ್‌ನ ಸೀಮಿತ ವಿತರಣೆ 

ಹಿರಿಯ ಹದಿಹರೆಯದವರು ಪೋಸ್ಟ್ ಮಾಡುವ ಸಾರ್ವಜನಿಕ ಕಥೆಗಳನ್ನು ಈಗಾಗಲೇ ಅವರ ಸ್ನೇಹಿತರು ಅಥವಾ ಫಾಲೋವರ್‌ಗಳಾಗಿರುವ Snapchatter ಗಳಿಗೆ ಹಾಗೂ ಅವರು ಪರಸ್ಪರ ಸ್ನೇಹಿತರನ್ನು ಹೊಂದಿರುವ ಇತರ Snapchatter ಗಳಿಗೆ ಮಾತ್ರ ಶಿಫಾರಸು ಮಾಡಲಾಗುತ್ತದೆ. Snapchatter ಗಳಿಗೆ ಪ್ರಸ್ತುತವಾಗಿರುವ ಕಂಟೆಂಟ್‌ನೊಂದಿಗೆ ವೈಯಕ್ತಿಕಗೊಳಿಸಿದ ವೀಕ್ಷಣೆಯ ಅನುಭವವನ್ನು ಅವರು ಕಂಡುಕೊಳ್ಳುವ ನಮ್ಮ ಆ್ಯಪ್‌ನ ವಿಭಾಗದಲ್ಲಿ ಸೇರಿಸದೆ ಇರುವುದು ಸೇರಿದಂತೆ, ವಿಶಾಲ ಸಮುದಾಯಕ್ಕೆ ಈ ಸಾರ್ವಜನಿಕ ಕಥೆಗಳನ್ನು ವಿತರಣೆ ಮಾಡುವುದಿಲ್ಲ.

ಸಾಮಾಜಿಕ ತುಲನೆಯ ಮಾಪನಗಳ ಬದಲಾಗಿ ಸೃಜನಶೀಲತೆ 

ಹದಿಹರೆಯದ Snapchatter ಗಳು ತಮ್ಮ ಕಥೆಗಳು ಅಥವಾ ಸ್ಪಾಟ್‌ಲೈಟ್‌ಗಳನ್ನು ಎಷ್ಟು ಜನರು "ಮೆಚ್ಚಿನದಾಗಿಸಿದರು" ಎಂಬುದನ್ನು ಕಾಣುವುದಿಲ್ಲ, ಈ ಮೂಲಕ ಸಾರ್ವಜನಿಕ ಅನುಮೋದನೆಯ ಮಾಪನಗಳನ್ನು ಸಂಗ್ರಹಿಸುವ ಒತ್ತಡದ ಬದಲಾಗಿ ಅವರು ಸೃಜನಶೀಲತೆಯ ಮೇಲೆ ಗಮನಹರಿಸಬಹುದು. 

ಪೂರ್ವಭಾವಿ ಕಂಟೆಂಟ್ ವಿಮರ್ಶೆ

ಹಿರಿಯ ಹದಿಹರೆಯದವರಿಗೆ Snapchat ನ ಕಂಟೆಂಟ್ ಮಾರ್ಗಸೂಚಿಗಳಿಗೆ ಪರಿಚಯದ ಅಗತ್ಯವಿರಬಹುದು ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಸಮಗ್ರವಾಗಿ ಆಲೋಚಿಸದೆ ಇರುವ ಕಂಟೆಂಟ್ ಅನ್ನು ಪೋಸ್ಟ್ ಮಾಡದಂತೆ Snapchatter ಗಳನ್ನು ರಕ್ಷಿಸಲು ನಾವು ಬಯಸುತ್ತೇವೆ. ಮಾನವ ಮತ್ತು ಮೆಷಿನ್ ವಿಮರ್ಶೆಗಳನ್ನು ಬಳಸಿಕೊಂಡು ಸ್ಪಾಟ್‌ಲೈಟ್‌ ವೀಡಿಯೊಗಳನ್ನು ನಾವು ಸಕ್ರಿಯವಾಗಿ ಮಾಡರೇಟ್ ಮಾಡುವ ಮೂಲಕ ಈ ವಿಧದ ಕಂಟೆಂಟ್ ಅನ್ನು ವಿಶಾಲವಾಗಿ ಶಿಫಾರಸು ಮಾಡುವುದಕ್ಕೆ ಮೊದಲು ಅದನ್ನು ನಾವು ಪ್ರಯತ್ನಿಸುತ್ತೇವೆ ಮತ್ತು ಮಾಡರೇಟ್ ಮಾಡುತ್ತೇವೆ.

ವಯೋ ಸೂಕ್ತ ಜಾಹೀರಾತು

ನಮ್ಮ ಜಾಹೀರಾತು ನೀತಿಗಳನ್ನು ಉಲ್ಲಂಘಿಸುವ ಜಾಹೀರಾತುಗಳನ್ನು ಗುರುತಿಸಲು ಮತ್ತು ನಿರ್ಬಂಧಿಸಲು Snapchat ನಲ್ಲಿ ಜಾಹೀರಾತುಗಳನ್ನು ವರ್ಗ ಮತ್ತು ಸ್ಥಳ-ನಿರ್ದಿಷ್ಟ ವಿಮರ್ಶೆಗೆ ಒಳಪಡಿಸಲಾಗುತ್ತದೆ ಮತ್ತು ಹದಿಹರೆಯದವರಿಗಾಗಿ ಜಾಹೀರಾತುಗಳಿಗೆ ಕಂಟೆಂಟ್ ಹಾಗೂ ಗುರಿಯಾಗಿಸುವಿಕೆ ಎರಡಕ್ಕೂ ಹೆಚ್ಚುವರಿ ನಿರ್ಬಂಧಗಳು ಅನ್ವಯಿಸುತ್ತವೆ. ಉದಾಹರಣೆಗೆ, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಾನೂನುಬದ್ಧ ಪ್ರಾಪ್ತ ವಯಸ್ಸಿಗಿಂತ ಕಡಿಮೆ ವಯಸ್ಸಿನವರಿಗೆ ಜೂಜು ಅಥವಾ ಮದ್ಯದ ಜಾಹೀರಾತುಗಳನ್ನು ತೋರಿಸದಂತೆ ತಡೆಯಲು ನಾವು ನಿರ್ಬಂಧಗಳನ್ನು ಹೊಂದಿದ್ದೇವೆ. ನಮ್ಮ ಜಾಹೀರಾತು ನೀಡುವಿಕೆ ಅಭ್ಯಾಸಗಳಿಗೆ ನಿರ್ದಿಷ್ಟವಾದ ಹೆಚ್ಚುವರಿ ಮಾಹಿತಿಯನ್ನು ನಾವು ಇಲ್ಲಿ ಒದಗಿಸಿದ್ದೇವೆ.

ಅನಪೇಕ್ಷಿತ ಸ್ನೇಹ ಮತ್ತು ಸಂಪರ್ಕದ ವಿರುದ್ಧ ರಕ್ಷಣೆಗಳು

Snapchat ನಲ್ಲಿ ಹದಿಹರೆಯರವರು ತಮ್ಮ ನೈಜ ಸ್ನೇಹಿತರನ್ನು ಹುಡುಕಲು ಮತ್ತು ಅವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗಬೇಕು ಮತ್ತು Snapchat ನಲ್ಲಿ ಹದಿಹರೆಯದವರನ್ನು ಕಂಡುಕೊಳ್ಳಲು ಅಪರಿಚಿತರಿಗೆ ಕಷ್ಟವಾಗಬೇಕು ಎಂದು ನಾವು ಬಯಸುತ್ತೇವೆ. ಅನೇಕ ಪರಸ್ಪರ ಸಾಮಾನ್ಯ ಸಂಪರ್ಕಗಳನ್ನು ಹೊಂದಿರುವುದು ಅಥವಾ ಪರಸ್ಪರ ಅಸ್ತಿತ್ವದಲ್ಲಿರುವ ಫೋನ್ ಸಂಪರ್ಕವಾಗಿರುವುದು, ಮುಂತಾದ ಇತರ ಬಳಕೆದಾರನೊಂದಿಗಿನ ಅಸ್ತಿತ್ವದಲ್ಲಿರುವ ಸಂಪರ್ಕದ ಸೂಚನೆಗಳ ಹೊರತಾಗಿ ಹುಡುಕಾಟ ಫಲಿತಾಂಶಗಳಲ್ಲಿ ಹದಿಹರೆಯದವರು ಕಾಣಿಸಿಕೊಳ್ಳದಂತೆ ನಿರ್ಬಂಧಿಸುವ ಮೂಲಕ ನಾವು ಇದನ್ನು ಮಾಡುತ್ತೇವೆ. 

ತಮ್ಮ ನೈಜ ಜಗತ್ತಿನ ಸ್ನೇಹಿತರ ಜಾಲದ ಹೊರಗಿನ Snapchatter ಗಳ ಜೊತೆಗೆ ಸಂಪರ್ಕ ಹೊಂದಲು ಹದಿಹರೆಯದವರಿಗೆ ಹೆಚ್ಚು ಕಷ್ಟವಾಗಿಸಲು ಇತರ ಮಾರ್ಗಗಳನ್ನು ನಾವು ನಿರಂತರವಾಗಿ ಅನ್ವೇಷಿಸುತ್ತೇವೆ. 

ನಿರ್ಬಂಧಿಸುವುದು, ಮರೆಮಾಡುವುದು ಅಥವಾ ವರದಿ ಮಾಡುವುದು

ಇನ್ನೊಬ್ಬ Snapchatter ಮತ್ತೊಮ್ಮೆ ಸಂಪರ್ಕಿಸಲು ಪ್ರಯತ್ನಿಸುವುದನ್ನು ಹದಿಹರೆಯದವರು ಬಯಸದಿದ್ದರೆ, ಇನ್ನೊಬ್ಬ Snapchatter ಅನ್ನು ವರದಿ ಮಾಡಲು, ನಿರ್ಬಂಧಿಸಲು ಅಥವಾ ಮರೆಮಾಡಲು ನಾವು ಆ್ಯಪ್‌ನಲ್ಲಿನ ಟೂಲ್‌ಗಳನ್ನು ಒದಗಿಸುತ್ತೇವೆ. 

ಚಾಟ್‌ನಲ್ಲಿನ ಎಚ್ಚರಿಕೆಗಳು 

ಈಗಾಗಲೇ ಪರಸ್ಪರ ಸ್ನೇಹಿತರನ್ನು ಹೊಂದಿಲ್ಲದಿರುವ ಅಥವಾ ತಮ್ಮ ಸಂಪರ್ಕಗಳಲ್ಲಿ ಇಲ್ಲದಿರುವ ಒಬ್ಬರಿಗೆ ಹದಿಹರೆಯದವರು ಸಂದೇಶವನ್ನು ಕಳುಹಿಸಿದರೆ ಅಥವಾ ಅವರಿಂದ ಸಂದೇಶ ಸ್ವೀಕರಿಸಿದರೆ, ಅವರು ಆ್ಯಪ್‌ನಲ್ಲಿನ ಎಚ್ಚರಿಕೆಯನ್ನು ನೋಡುತ್ತಾರೆ. ಸಂಪರ್ಕವನ್ನು ಅನುಮತಿಸಲು ಬಯಸುವುದನ್ನು ಜಾಗರೂಕತೆಯಿಂದ ಪರಿಗಣಿಸುವಂತೆ ಹದಿಹರೆಯದವರಿಗೆ ಸಂದೇಶವು ಎಚ್ಚರಿಕೆ ನೀಡುತ್ತದೆ ಮತ್ತು ವಿಶ್ವಾಸ ಹೊಂದಿರುವ ಜನರೊಂದಿಗೆ ಮಾತ್ರ ಸಂಪರ್ಕ ಹೊಂದುವಂತೆ ಅವರಿಗೆ ಜ್ಞಾಪಿಸುತ್ತದೆ. 

ಪೋಷಕರ ಪರಿಕರಗಳು ಮತ್ತು ಸಂಪನ್ಮೂಲಗಳು

ಕೌಟುಂಬಿಕ ಕೇಂದ್ರ

Snapchat ನಕುಟುಂಬ ಕೇಂದ್ರವು ನಮ್ಮ ಪೋಷಕರ ನಿಯಂತ್ರಣಗಳ ಗುಂಪನ್ನು ಒದಗಿಸುತ್ತದೆ, ಅದು ದಾಖಲಾದ ಆರೈಕೆದಾರರಿಗೆ ಮತ್ತು ಹದಿಹರೆಯದವರಿಗೆ Snapchat ಅನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಹೆಚ್ಚು ನಿರ್ದಿಷ್ಟವಾಗಿ, ಕುಟುಂಬ ಕೇಂದ್ರವು ಪೋಷಕರಿಗೆ ಸಾಮರ್ಥ್ಯವನ್ನು ನೀಡುತ್ತದೆ:

  • ಕಳೆದ ಏಳು ದಿನಗಳಲ್ಲಿ ಅವರ ಹದಿಹರೆಯದವರು ಯಾವ Snapchat ಸ್ನೇಹಿತರು ಅಥವಾ ಗುಂಪುಗಳೊಂದಿಗೆ ಚಾಟ್ ಮಾಡಿದ್ದಾರೆ ಎಂಬುದನ್ನು ನೋಡಿ, ಅವರ ಸಂಭಾಷಣೆಗಳ ನೈಜ ವಿಷಯಗಳನ್ನು ಬಹಿರಂಗಪಡಿಸದೆ ಅವರ ಗೌಪ್ಯತೆಯನ್ನು ಇನ್ನೂ ರಕ್ಷಿಸುತ್ತದೆ;

  • ಹದಿಹರೆಯದವರ ಅಸ್ತಿತ್ವದಲ್ಲಿರುವ ಸ್ನೇಹಿತರ ಸಂಪೂರ್ಣ ಪಟ್ಟಿಯನ್ನು ನೋಡಿ ಮತ್ತು ಹದಿಹರೆಯದವರು ಸೇರಿಸಿದ ಹೊಸ ಸ್ನೇಹಿತರನ್ನು ಸುಲಭವಾಗಿ ವೀಕ್ಷಿಸಿ, ಅವರ ಹೊಸ ಸಂಪರ್ಕಗಳು ಯಾರೆಂಬುದರ ಕುರಿತು ಸಂಭಾಷಣೆಗಳನ್ನು ಪ್ರಾರಂಭಿಸಲು ಸುಲಭವಾಗುತ್ತದೆ;

  • ಕಥೆಗಳು ಮತ್ತು ಸ್ಪಾಟ್‌ಲೈಟ್‌ನಲ್ಲಿ ಸೂಕ್ಷ್ಮ ಕಂಟೆಂಟ್ ಅನ್ನು ವೀಕ್ಷಿಸಲು ಅವರ ಹದಿಹರೆಯದವರ ಸಾಮರ್ಥ್ಯವನ್ನು ಕಟ್ಟುನಿಟ್ಟಾದ ಸೆಟ್ಟಿಂಗ್‌ಗೆ ಮಿತಿಗೊಳಿಸಿ. ಗಮನಿಸಿ: 18+ Snapchatter ಗಳಿಗೆ ಹೋಲಿಸಿದರೆ ಹದಿಹರೆಯದವರು ಈಗಾಗಲೇ ಕಥೆಗಳು/ಸ್ಪಾಟ್‌ಲೈಟ್‌ನಲ್ಲಿ ಫಿಲ್ಟರ್ ಮಾಡಲಾದ ಕಂಟೆಂಟ್ ಅನ್ನು ಸ್ವೀಕರಿಸುತ್ತಾರೆ;

  • ಹದಿಹರೆಯದವರಿಗೆ ಪ್ರತಿಕ್ರಿಯಿಸದಂತೆ My AI, ನಮ್ಮ AI-ಚಾಲಿತ ಚಾಟ್‌ಬಾಟ್ ಅನ್ನು ನಿಷ್ಕ್ರಿಯಗೊಳಿಸಿ;

  • ಹದಿಹರೆಯದವರು ತಮ್ಮ ಲೈವ್ ಸ್ಥಳವನ್ನು ಹಂಚಿಕೊಳ್ಳಲು ವಿನಂತಿಯನ್ನು ಕಳುಹಿಸಿ;

  • ಹದಿಹರೆಯದವರ ಜನ್ಮದಿನದ ಸೆಟ್ಟಿಂಗ್‌ಗಳನ್ನು ವೀಕ್ಷಿಸಿ; ಮತ್ತು

  • ಪೋಷಕರು ನೇರವಾಗಿ ನಮ್ಮ 24/7 ವಿಶ್ವಾಸ ಮತ್ತು ಸುರಕ್ಷತೆ ತಂಡಕ್ಕೆ ಕಾಳಜಿ ವಹಿಸಬಹುದಾದ ಯಾವುದೇ ಖಾತೆಗಳನ್ನು ಸುಲಭವಾಗಿ ಮತ್ತು ಗೌಪ್ಯವಾಗಿ ವರದಿ ಮಾಡಬಹುದು.

ನಾವು ನಿರಂತರವಾಗಿ ಕುಟುಂಬ ಕೇಂದ್ರಕ್ಕೆ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಿದ್ದೇವೆ, ಆದ್ದರಿಂದ ದಯವಿಟ್ಟು ಇತ್ತೀಚಿನ ಸೆಟ್ಟಿಂಗ್‌ಗಳಿಗಾಗಿ ಕುಟುಂಬ ಕೇಂದ್ರವನ್ನು ಪರಿಶೀಲಿಸಿ.

ಪೋಷಕರಿಗೆ ಸಂಪನ್ಮೂಲಗಳು

Snapchat ಗೆ ನಮ್ಮ ಪೋಷಕರ ಮಾರ್ಗದರ್ಶಿಯಂತಹ, ಪೋಷಕರು Snapchat ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನಾವು ಹಲವಾರು ಸಂಪನ್ಮೂಲಗಳನ್ನು ಹೊಂದಿದ್ದೇವೆ. ಮತ್ತು ನಮ್ಮ YouTube ಸರಣಿಯು Snapchat ನ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳಲು ಪೋಷಕರಿಗೆ ಸಹಾಯ ಮಾಡುತ್ತದೆ ಮತ್ತು ಹದಿಹರೆಯದವರಿಗೆ Snapchat ಅನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡಲು ನಾವು ಹೊಂದಿರುವ ರಕ್ಷಣೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹರೆಯದವರಿಗೆ ನೀಡುವ ನಿರ್ದಿಷ್ಟ ಸುರಕ್ಷತಾ ರಕ್ಷಣೆಗಳ ಕುರಿತು ಇಲ್ಲಿ ತಿಳಿಯಿರಿ.

ಹದಿಹರೆಯದವರಿಗಾಗಿ ಭದ್ರತಾ ತಪಾಸಣೆಗಳು

ಹದಿಹರೆಯದವರು ಸೇರಿದಂತೆ ಎಲ್ಲ Snapchatter ಗಳಿಗೆ ತಮ್ಮ ಗೌಪ್ಯತೆ ಸೆಟ್ಟಿಂಗ್‌ಗಳು ಮತ್ತು ಖಾತೆ ಭದ್ರತೆಯನ್ನು ಪರಿಶೀಲಿಸುವಂತೆ ನಾವು ನಿಯಮಿತ ಜ್ಞಾಪನೆಗಳನ್ನು ಕಳುಹಿಸುತ್ತೇವೆ. Snap ಮ್ಯಾಪ್ ಗೌಪ್ಯತೆ ಮತ್ತು ಸುರಕ್ಷತಾ ಜ್ಞಾಪನೆ ಬೆಂಬಲ ಪುಟವು ಹದಿಹರೆಯದವರು ಸ್ಥಳ ಹಂಚಿಕೊಳ್ಳುವಿಕೆಯನ್ನು ಹೇಗೆ ಸಕ್ರಿಯ ಮತ್ತು ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ಹಾಗೂ ಹಂಚಿಕೊಳ್ಳುವಾಗ ಅವರು ಪರಿಗಣಿಸಬೇಕಾದ ಪ್ರಮುಖ ಗೌಪ್ಯತೆ ಮತ್ತು ಸುರಕ್ಷತೆ ಸಲಹೆಗಳನ್ನು ವಿವರಿಸುತ್ತದೆ.

ಎಲ್ಲ Snapchatter ಗಳು ಎರಡು-ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸುವಂತೆ ಮತ್ತು ತಮ್ಮ ಇಮೇಲ್ ಹಾಗೂ ಫೋನ್ ಸಂಖ್ಯೆಯನ್ನು ಪರಿಶೀಲಿಸಲು ಕೂಡ ನಾವು ಶಿಫಾರಸು ಮಾಡುತ್ತೇವೆ. ಈ ಹೆಚ್ಚುವರಿ ರಕ್ಷಣೆಗಳನ್ನು ಸಕ್ರಿಯಗೊಳಿಸುವುದರಿಂದ ಅವರ ಖಾತೆಗಳಿಗೆ ವಂಚಕರು ಅತಿಕ್ರಮ ಪ್ರವೇಶ ಮಾಡುವುದನ್ನು ಕಠಿಣವಾಗಿಸುತ್ತದೆ.