ನಮ್ಮ ಯುರೋಪಿಯನ್ ಒಕ್ಕೂಟದ (EU) ಪಾರದರ್ಶಕತೆಯ ಪುಟಕ್ಕೆ ಸ್ವಾಗತ, ಇಲ್ಲಿ ನಾವು ಡಿಜಿಟಲ್ ಸೇವೆಗಳ ಕಾಯ್ದೆ (DSA), ಶ್ರವಣ ದೃಶ್ಯ ಮಾಧ್ಯಮ ಸೇವೆಗಳ ನಿರ್ದೇಶನ (AVMSD), ಡಚ್ ಮಾಧ್ಯಮ ಕಾಯ್ದೆ (DMA) ಮತ್ತು ಭಯೋತ್ಪಾದನಾ ವಿಷಯದ ಆನ್ಲೈನ್ ನಿಯಂತ್ರಣ (TCO) ಗಳಿಂದ ಅಗತ್ಯಪಡಿಸಲಾಗಿರುವ EU ನಿರ್ದಿಷ್ಟವಾದ ಮಾಹಿತಿಯನ್ನು ಪ್ರಕಟಿಸುತ್ತೇವೆ. ಈ ಪಾರದರ್ಶಕತೆ ವರದಿಗಳ ಅತ್ಯಂತ ನವೀಕೃತ ಆವೃತ್ತಿಗಳನ್ನು en-US ಸ್ಥಳೀಯ ಪ್ರತಿಯಲ್ಲಿ ಕಾಣಬಹುದಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.
Snap Group Limited, DSA ಯ ಉದ್ದೇಶಗಳಿಗಾಗಿ Snap B.V. ಅನ್ನು ತನ್ನ ಕಾನೂನಾತ್ಮಕ ಪ್ರತಿನಿಧಿಯನ್ನಾಗಿ ನೇಮಿಸಿದೆ. DSA ಗಾಗಿ ನೀವು ನಮ್ಮ ಪ್ರತಿನಿಧಿಯನ್ನು dsa-enquiries [at] snapchat.com ನಲ್ಲಿ, AVMSD ಮತ್ತು DMA ಗಾಗಿ vsp-enquiries [at] snapchat.com ನಲ್ಲಿ, TCO ಗಾಗಿ tco-enquiries [at] snapchat.com ನಲ್ಲಿ, ನಮ್ಮ ಬೆಂಬಲ ಜಾಲತಾಣದ ಮೂಲಕ [ಇಲ್ಲಿ] ಅಥವಾ ಇಲ್ಲಿ ಸಂಪರ್ಕಿಸಬಹುದು:
Snap B.V.
Keizersgracht 165, 1016 DP
Amsterdam, The Netherlands
ನೀವೊಂದು ಕಾನೂನು ಜಾರಿ ಸಂಸ್ಥೆ ಆಗಿದ್ದರೆ, ದಯವಿಟ್ಟು ಇಲ್ಲಿ ವಿವರಿಸಲಾಗಿರುವ ಹಂತಗಳನ್ನು ಅನುಸರಿಸಿ.
ನಮ್ಮನ್ನು ಸಂಪರ್ಕಿಸುವಾಗ, ದಯವಿಟ್ಟು ಆಂಗ್ಲ ಅಥವಾ ಡಚ್ ಭಾಷೆಗಳಲ್ಲಿ ಸಂವಹನ ಮಾಡಿ.
DSA ಗಾಗಿ, ನಾವು ಯುರೋಪಿಯನ್ ಆಯೋಗದಿಂದ ಮತ್ತು ನೆದರ್ಲ್ಯಾಂಡ್ಸ್ ಗ್ರಾಹಕರ ಮತ್ತು ಮಾರುಕಟ್ಟೆಗಳ ಪ್ರಾಧಿಕಾರ (ACM) ದಿಂದ ನಿಯಂತ್ರಿಸಲ್ಪಡುತ್ತೇವೆ. AVMSD ಮತ್ತು DMA ಗಾಗಿ, ಡಚ್ ಮಾಧ್ಯಮ ಪ್ರಾಧಿಕಾರವು (CvdM) ನಮ್ಮನ್ನು ನಿಯಂತ್ರಿಸುತ್ತದೆ. TCO ಗಾಗಿ, ನಾವು ಆನ್ಲೈನ್ ಭಯೋತ್ಪಾದನಾ ವಿಷಯ ಮತ್ತು ಮಕ್ಕಳ ಲೈಂಗಿಕ ಶೋಷಣೆಯ ಸಾಮಗ್ರಿಯ ತಡೆಗಾಗಿ ನೆದರ್ಲ್ಯಾಂಡ್ಸ್ ಪ್ರಾಧಿಕಾರ (ATKM) ದಿಂದ ನಿಯಂತ್ರಿಸಲ್ಪಡುತ್ತೇವೆ.
ಪ್ರಕಟಿಸಿರುವುದು: 28 ಫೆಬ್ರವರಿ 2025
ಕೊನೆಯದಾಗಿ ಅಪ್ಡೇಟ್ ಮಾಡಿರುವುದು: 23 ಏಪ್ರಿಲ್ 2025 (ಆವೃತ್ತಿ 2.0)
ವರದಿ ಮಾಡುವಿಕೆ ಆವರ್ತನ: 1 ಜುಲೈ 2024 - 31 ಡಿಸೆಂಬರ್ 2024
ಯುರೋಪಿಯನ್ ಒಕ್ಕೂಟದ (EU) ಡಿಜಿಟಲ್ ಸೇವೆಗಳ ಕಾಯ್ದೆಯ (ನಿಯಂತ್ರಣ (EU) 2022/2065) (“DSA”) ಅನುಚ್ಛೇದಗಳು 15, 24 ಮತ್ತು 42 ರಲ್ಲಿ ಒದಗಿಸಲಾದ ಪಾರದರ್ಶಕತೆ ವರದಿ ಮಾಡುವಿಕೆ ಅಗತ್ಯಗಳಿಗೆ ಅನುಗುಣವಾಗಿ ನಾವು ಈ ವರದಿಯನ್ನು ಪ್ರಕಟಿಸುತ್ತೇವೆ. ಬೇರೆ ರೀತಿಯಲ್ಲಿ ಗುರುತಿಸಿರುವುದನ್ನು ಹೊರತುಪಡಿಸಿ, ಈ ವರದಿಯಲ್ಲಿ ಇರುವ ಮಾಹಿತಿಯು 1 ಜುಲೈ 2024 ರಿಂದ 31 ಡಿಸೆಂಬರ್ 2024 (H2 2024) ರವರೆಗಿನ ವರದಿ ಮಾಡುವಿಕೆ ಅವಧಿಗಾಗಿ ಇದೆ.
1 ಜನವರಿ 2025 ರ ಪ್ರಕಾರ, EU ನಲ್ಲಿ ನಮ್ಮ Snapchat ಆ್ಯಪ್ನ 93.7 ಮಿಲಿಯನ್ ಸರಾಸರಿ ಮಾಸಿಕ ಸಕ್ರಿಯ ಸ್ವೀಕೃತಿದಾರರನ್ನು ("AMAR") ನಾವು ಹೊಂದಿದ್ದೇವೆ. ಅಂದರೆ, 30 ಡಿಸೆಂಬರ್ 2024 ಕ್ಕೆ ಕೊನೆಗೊಳ್ಳುವ 6-ತಿಂಗಳುಗಳ ಅವಧಿಯಲ್ಲಿ, EU ನಲ್ಲಿ 93.7 ಮಿಲಿಯನ್ ನೋಂದಾಯಿತ ಬಳಕೆದಾರರು ನಿರ್ದಿಷ್ಟ ತಿಂಗಳಿನ ಸಂದರ್ಭ ಸರಾಸರಿ ಕನಿಷ್ಠ ಒಂದು ಬಾರಿಯಾದರೂ Snapchat ಆ್ಯಪ್ ಅನ್ನು ತೆರೆದಿದ್ದಾರೆ.
ಈ ಅನುಪಾತವು ಈ ಕೆಳಗಿನಂತೆ ಸದಸ್ಯ ರಾಷ್ಟ್ರವಾರು ವಿಂಗಡಣೆಯನ್ನು ಒದಗಿಸುತ್ತದೆ:
ಈ ಅಂಕಿಅಂಶಗಳನ್ನು ಪ್ರಸ್ತುತ DSA ಅಗತ್ಯಗಳ ಅನುಸರಣೆಗಾಗಿ ಲೆಕ್ಕಾಚಾರ ಮಾಡಲಾಗಿದೆ ಹಾಗೂ DSA ಉದ್ದೇಶಗಳಿಗಾಗಿ ಮಾತ್ರ ಅವಲಂಬಿಸಬೇಕು. ಕಾಲ ಕಳೆದಂತೆ, ನಾವು ಬದಲಾಗುವ ಆಂತರಿಕ ನೀತಿ, ನಿಯಂತ್ರಕರ ಮಾರ್ಗದರ್ಶನ ಮತ್ತು ತಂತ್ರಜ್ಞಾನಗಳ ಫಲವಾಗಿ, ಈ ಅನುಪಾತದ ಲೆಕ್ಕಾಚಾರ ಮಾಡುವ ವಿಧಾನವನ್ನು ಬದಲಾಯಿಸಿದ್ದೇವೆ, ಹಾಗೂ ಈ ಅಂಕಿಅಂಶಗಳನ್ನು ಸಮಯಾವಧಿಗಳ ನಡುವೆ ತುಲನೆ ಮಾಡಲೆಂದು ಉದ್ದೇಶಿಸಲಾಗಿಲ್ಲ. ಇದು ನಾವು ಇತರ ಉದ್ದೇಶಗಳಿಗಾಗಿ ಪ್ರಕಟಿಸುವ ಇತರ ಸಕ್ರಿಯ ಬಳಕೆದಾರರ ಅಂಕಿಅಂಶಗಳಿಗಾಗಿ ಬಳಸುವ ಲೆಕ್ಕಾಚಾರಗಳಿಗಿಂತ ಕೂಡ ಭಿನ್ನವಾಗಿರಬಹುದು.
ಈ ವರದಿ ಮಾಡುವ ಅವಧಿಯಲ್ಲಿ (H2 2024), ನಾವು DSA ಅನುಚ್ಛೇದ 9 ರ ಅನ್ವಯ ನೀಡಲಾಗಿರುವಂತಹ ಆದೇಶಗಳೂ ಸೇರಿದಂತೆ, EU ಸದಸ್ಯ ರಾಷ್ಟ್ರಗಳ ಪ್ರಾಧಿಕಾರಗಳಿಂದ ನಿರ್ದಿಷ್ಟವಾಗಿ ಗುರುತಿಸಲಾದ ಅಕ್ರಮ ವಿಷಯಗಳ ತುಣುಕುಗಳ ವಿರುದ್ಧ ಕಾರ್ಯನಿರ್ವಹಿಸಲು ಶೂನ್ಯ (0) ಆದೇಶಗಳನ್ನು ಪಡೆದೆವು.
ಈ ಸಂಖ್ಯೆಯು ಶೂನ್ಯ (0) ಆಗಿರುವುದರಿಂದ, ಸಂಬಂಧಿಸಿದ ಕಾನೂನುಬಾಹಿರ ಕಂಟೆಂಟ್ನ ವಿಧಕ್ಕೆ ಅಥವಾ ಆದೇಶವನ್ನು ಜಾರಿ ಮಾಡುವ ಸದಸ್ಯ ರಾಷ್ಟ್ರಕ್ಕೆ ಅಥವಾ ಸ್ವೀಕೃತಿಯನ್ನು ಅಂಗೀಕರಿಸಲು ಅಥವಾ ಆದೇಶಕ್ಕೆ ಸಂಬಂಧಿಸಿದ ಕ್ರಮ ಜಾರಿಗೊಳಿಸಲು ಸರಾಸರಿ ಸಮಯದ ವಿಂಗಡಣೆ ವಿವರವನ್ನು ನಾವು ಒದಗಿಸಲಾಗದು
ಈ ವರದಿ ಮಾಡುವ ಅವಧಿಯಲ್ಲಿ (H2 2024), ನಾವು DSA ಅನುಚ್ಛೇದ 10 ರ ಪ್ರಕಾರ ನೀಡಲಾದಂತಹ ಆದೇಶಗಳನ್ನು ಒಳಗೊಂಡಂತೆ, EU ರಾಷ್ಟ್ರಗಳ ಪ್ರಾಧಿಕಾರಗಳಿಂದ ಬಳಕೆದಾರರ ದತ್ತಾಂಶವನ್ನು ಬಹಿರಂಗಪಡಿಸಲು ಈ ಕೆಳಗಿನ ಆದೇಶಗಳನ್ನು ಪಡೆದೆವು:
ಮಾಹಿತಿಯನ್ನು ಒದಗಿಸಲು ಈ ಆದೇಶಗಳ ಸ್ವೀಕೃತಿಯ ಬಗ್ಗೆ ಸಂಬಂಧಿತ ಪ್ರಾಧಿಕಾರಗಳಿಗೆ ತಿಳಿಸಲು ಮಧ್ಯಸ್ಥ ಸಮಯವು 0 ನಿಮಿಷಗಳಾಗಿತ್ತು — ನಾವು ಸ್ವೀಕೃತಿಯನ್ನು ದೃಢೀಕರಿಸುವ ಸ್ವಯಂಚಾಲಿತ ಪ್ರತಿಕ್ರಿಯೆಯನ್ನು ಒದಗಿಸುತ್ತೇವೆ.
ಮಾಹಿತಿಯನ್ನು ಒದಗಿಸುವುದಕ್ಕಾಗಿ ನೀಡಲಾಗಿದ್ದ ಆದೇಶಗಳನ್ನು ಜಾರಿಗೆ ತರಲು ನೀಡಲಾದ ಸರಾಸರಿ ಸಮಯವು ~12 ದಿನಗಳಾಗಿತ್ತು. ಈ ಮಾಪನಾಂಕವು ಯಾವುದೇ ಆದೇಶವನ್ನು ಪಡೆದಾಗಿನಿಂದ ಹಿಡಿದು ಆ ವಿಷಯವನ್ನು ಸಂಪೂರ್ಣವಾಗಿ ಪರಿಹರಿಸಲಾಗಿದೆಯೆಂದು Snap ನಿಂದ ಪರಿಗಣಿಸಲಾಗುವ ಸಮಯದವರೆಗಿನ ಅವಧಿಯನ್ನು ಪ್ರತಿನಿಧಿಸುತ್ತದೆ, ಹಾಗೂ ಇಂತಹ ಅವಧಿಯು ಪ್ರತ್ಯೇಕ ಸಂದರ್ಭಗಳಲ್ಲಿ ಅಂತಹ ಆದೇಶವನ್ನು ಪ್ರಕ್ರಿಯೆಗೊಳಿಸಲು ಅಗತ್ಯವಿರುವಂತಹ ಸ್ಪಷ್ಟೀಕರಣಕ್ಕಾಗಿ Snap ನಿಂದ ಪಡೆಯುವ ವಿನಂತಿಗಳಿಗೆ ಸಂಬಂಧಿತ ಸದಸ್ಯ ರಾಷ್ಟ್ರದ ಪ್ರಾಧಿಕಾರವು ಪ್ರತಿಕ್ರಿಯಿಸುವ ವೇಗವನ್ನು ಭಾಗಶಃ ಆಧರಿಸಬಹುದು.
ಗಮನಿಸಿ, ನಾವು ಮೇಲಿನ ಆದೇಶಗಳಿಗೆ ಸಂಬಂಧಿತ ಅಕ್ರಮ ವಿಷಯದ ವಿಧಗಳ ಆಧಾರದಲ್ಲಿ ವರ್ಗೀಕರಿಸಲ್ಪಟ್ಟ ಮಾಹಿತಿಯ ವಿಂಗಡಣೆಯನ್ನು ಒದಗಿಸುವುದಿಲ್ಲ, ಏಕೆಂದರೆ ಅಂತಹ ಮಾಹಿತಿಯು ನಮಗೆ ಸಾಮಾನ್ಯವಾಗಿ ಲಭ್ಯವಿರುವುದಿಲ್ಲ.
Snapchat ನಲ್ಲಿನ ಎಲ್ಲ ವಿಷಯವೂ ನಮ್ಮ ಸಮುದಾಯದ ಮಾರ್ಗಸೂಚಿಗಳು ಮತ್ತು ಸೇವಾ ನಿಯಮಗಳನ್ನು ಪಾಲಿಸಬೇಕು. ಕೆಲವು ವಿಷಯಗಳು ಹೆಚ್ಚುವರಿ ಮಾರ್ಗಸೂಚಿಗಳು ಮತ್ತು ನೀತಿಗಳನ್ನೂ ಸಹ ಪಾಲಿಸಬೇಕು. ಉದಾಹರಣೆಗಾಗಿ, ನಮ್ಮ ಸಾರ್ವಜನಿಕ ಪ್ರಸಾರದ ಸಾಧನಗಳಲ್ಲಿ ಹೆಚ್ಚು ವ್ಯಾಪಕ ಪ್ರೇಕ್ಷಕ ಸಮೂಹಕ್ಕೆ ಅಲ್ಗೊರಿಥಂ ಆಧರಿತ ಶಿಫಾರಸಿಗಾಗಿ ಸಲ್ಲಿಸಿದ ವಿಷಯವು ನಮ್ಮ ಶಿಫಾರಸಿಗಾಗಿ ಅರ್ಹತೆ ಪಡೆಯಲು ಅನುಸರಿಸಬೇಕಾದ ವಿಷಯದ ಮಾರ್ಗಸೂಚಿಗಳಲ್ಲಿ ಒದಗಿಸಲಾಗಿರುವ ಹೆಚ್ಚುವರಿ, ಉನ್ನತ ಮಾನದಂಡಗಳನ್ನು ಪೂರೈಸಬೇಕು, ಹಾಗೂ ಜಾಹೀರಾತುಗಳು ನಮ್ಮ ಜಾಹೀರಾತು ನೀತಿಗಳನ್ನು ಅನುಸರಿಸಬೇಕು.
ನಾವು ಈ ನೀತಿಗಳನ್ನು ತಂತ್ರಜ್ಞಾನ ಮತ್ತು ಮಾನವ ವಿಮರ್ಶೆಯನ್ನು ಬಳಸಿಕೊಂಡು ಜಾರಿಗೊಳಿಸುತ್ತೇವೆ. ನಾವು Snapchatter ಗಳಿಗೆ ನೇರವಾಗಿ ಆ್ಯಪ್ನ ಒಳಗೆಯೇ ಅಥವಾ ನಮ್ಮ ಅಂತರ್ಜಾಲ ತಾಣದ ಮೂಲಕ ಅಕ್ರಮ ವಿಷಯ ಮತ್ತು ಚಟುವಟಿಕೆಗಳೂ ಸೇರಿದಂತೆ ಯಾವುದೇ ಉಲ್ಲಂಘನೆಗಳ ಕುರಿತು ವರದಿ ಮಾಡುವುದಕ್ಕಾಗಿ ವ್ಯವಸ್ಥೆಗಳನ್ನು ಸಹ ಒದಗಿಸುತ್ತೇವೆ. ನಾವು ಪೂರ್ವಭಾವಿ ಹಾನಿ-ಪತ್ತೆ ತಂತ್ರಜ್ಞಾನವನ್ನು ಕೂಡ ಬಳಸುತ್ತೇವೆ. ಸಕ್ರಿಯಾತ್ಮಕ ಪತ್ತೆಹಚ್ಚುವಿಕೆ ವ್ಯವಸ್ಥೆಗಳು ಮತ್ತು ವರದಿಗಳು ವಿಮರ್ಶೆಯನ್ನು ಪ್ರೇರೇಪಿಸುತ್ತವೆ, ಹಾಗೂ ಅದರ ಫಲವಾಗಿ ಅವುಗಳು ನಮ್ಮ ನೀತಿಗಳ ಪ್ರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಸ್ವಯಂಚಾಲಿತ ಸಾಧನಗಳು ಮತ್ತು ಮಾನವ ನಿಯಂತ್ರಕರ ಮಿಶ್ರಣವನ್ನು ಬಳಸಿಕೊಳ್ಳುತ್ತವೆ.
ನಾವು H2 2024 ರಲ್ಲಿ ನಮ್ಮ ಕಂಟೆಂಟ್ ಮಾಡರೇಷನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ಒದಗಿಸುತ್ತೇವೆ.
DSA ಆರ್ಟಿಕಲ್ 16 ಗೆ ಅನುಗುಣವಾಗಿ, ಬಳಕೆದಾರರು ಮತ್ತು ಬಳಕೆದಾರರಲ್ಲದವರು ಕಾನೂನುಬಾಹಿರ ವಿಷಯವೆಂದು ಪರಿಗಣಿಸುವ ಮಾಹಿತಿಯ ನಿರ್ದಿಷ್ಟ ವಿಷಯಗಳು Snapchat ನಲ್ಲಿ ಇರುವುದರ ಕುರಿತಾಗಿ Snap ಗೆ ತಿಳಿಸಲು ಅನುವು ಮಾಡಿಕೊಡುವ ಕಾರ್ಯವಿಧಾನಗಳನ್ನು Snap ಜಾರಿಗೆ ತಂದಿದೆ. ಅವರು Snapchat ಆ್ಯಪ್ನ ಮೂಲಕ ನೇರವಾಗಿ ಅಥವಾ ನಮ್ಮ ಅಂತರ್ಜಾಲ ತಾಣದ ಮೂಲಕ ಅಂತಹ ನಿರ್ದಿಷ್ಟ ವಿಷಯಗಳ ತುಣುಕುಗಳು ಅಥವಾ ಖಾತೆಗಳ ಬಗ್ಗೆ ವರದಿ ಮಾಡಬಹುದು.
ಆ್ಯಪ್ನಲ್ಲಿ ಅಥವಾ ನಮ್ಮ ಅಂತರ್ಜಾಲ ತಾಣದ ಮೂಲಕ ಸೂಚನೆಗಳನ್ನು ಸಲ್ಲಿಸುವಾಗ, ವರದಿಗಾರರು ನಮ್ಮ ಸಮುದಾಯದ ಮಾರ್ಗಸೂಚಿಗಳಲ್ಲಿ ಪಟ್ಟಿ ಮಾಡಲಾಗಿರುವ ಉಲ್ಲಂಘನೆಗಳ ವರ್ಗಗಳನ್ನು (ಉದಾ., ದ್ವೇಷಪೂರಿತ ಭಾಷಣ, ಮಾದಕ ದ್ರವ್ಯಗಳ ಬಳಕೆ ಅಥವಾ ಮಾರಾಟ) ಬಿಂಬಿಸುವ ಆಯ್ಕೆಗಳ ಪರಿವಿಡಿಯಿಂದ ನಿರ್ದಿಷ್ಟವಾದ ಒಂದು ವರದಿ ನೀಡುವ ಕಾರಣವನ್ನು ಆಯ್ಕೆ ಮಾಡಬಹುದು. ನಮ್ಮ ಸಮುದಾಯದ ಮಾರ್ಗಸೂಚಿಗಳು EU ನಲ್ಲಿ ಅಕ್ರಮವೆಂದು ಗುರುತಿಸಲಾಗಿರುವ ವಿಷಯ ಮತ್ತು ಚಟುವಟಿಕೆಗಳನ್ನು ನಿಷೇಧಿಸುತ್ತವೆ, ಹಾಗಾಗಿ ವರದಿ ಮಾಡುವ ಕಾರಣಗಳು ಬಹುತೇಕ EU ನಲ್ಲಿ ಅಕ್ರಮ ವಿಷಯಗಳ ನಿರ್ದಿಷ್ಟ ವರ್ಗಗಳನ್ನು ಪ್ರತಿಬಿಂಬಿಸುತ್ತವೆ. ಆದರೆ, EU ನಲ್ಲಿನ ಯಾವುದೇ ವರದಿಗಾರರು ತಾವು ವರದಿ ಮಾಡುವ ವಿಷಯವು ಅಥವಾ ಖಾತೆಯು ನಮ್ಮ ವರದಿ ಮಾಡುವ ಪರಿವಿಡಿಗಳಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿಲ್ಲದಿರುವ ಯಾವುದೇ ಇತರ ಕಾರಣಗಳಿಂದಾಗಿ ಅಕ್ರಮವೆಂದು ಅಭಿಪ್ರಾಯಪಟ್ಟರೆ, ಅವರು ಆ ವಿಷಯವನ್ನು ಅಥವಾ ಖಾತೆಯನ್ನು "ಇತರ ಅಕ್ರಮ ವಿಷಯ" ಎಂದು ವರದಿ ಮಾಡಬಹುದಾಗಿದೆ, ಹಾಗೂ ಅವರು ಅದು ಅಕ್ರಮ ಎಂದು ಅಭಿಪ್ರಾಯಪಡುವುದಕ್ಕಾಗಿ ಕಾರಣವನ್ನು ವಿವರಿಸಲು ಅವಕಾಶ ನೀಡಲಾಗುತ್ತದೆ.
ವರದಿ ಮಾಡುವ ಅವಧಿಯಲ್ಲಿ (H2 2024 ), ನಾವು EU ನಲ್ಲಿನ DSA ಅನುಚ್ಛೇದ 16 ರ ಪ್ರಕಾರ ಸಲ್ಲಿಸಲಾದ ಈ ಕೆಳಗಿನ ನೋಟೀಸ್ಗಳನ್ನು ಪಡೆದಿದ್ದೇವೆ:
ಈ ಕೆಳಗೆ, ನಾವು ಈ ಸೂಚನೆಗಳನ್ನು ಪ್ರಕ್ರಿಯೆಗೊಳಿಸಿದ ವಿಧಾನವನ್ನು ಪ್ರತಿಬಿಂಬಿಸುವ ವಿಂಗಡಣೆಯನ್ನು ಒದಗಿಸಿದ್ದೇವೆ – ಮಾನವ ಪರಿಶೀಲನೆಯನ್ನು ಒಳಗೊಂಡಂತಹ ಪ್ರಕ್ರಿಯೆಯ ಮೂಲಕ ಅಥವಾ ಕೇವಲ ಯಾಂತ್ರೀಕೃತ ವಿಧಾನದ ಮೂಲಕ :
ವಿಮರ್ಶೆಯ ನಂತರ, ವರದಿ ಮಾಡಲಾದ ವಿಷಯ ಅಥವಾ ಖಾತೆಯು ನಮ್ಮ ಸಮುದಾಯದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ ಎಂದು ನಾವು ನಿರ್ಧರಿಸಿದರೆ (ಕಾನೂನುಬಾಹಿರ ಕಾರಣಗಳೂ ಸೇರಿದಂತೆ), ನಾವು (i) ಆ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಬಹುದು, (ii) ಸಂಬಂಧಿತ ಖಾತೆದಾರರಿಗೆ ಎಚ್ಚರಿಕೆ ನೀಡಬಹುದು ಹಾಗೂ ಆ ಖಾತೆಯ ವಿರುದ್ಧ ಸ್ಟ್ರೈಕ್ ಅನ್ನು ಅನ್ವಯಿಸಬಹುದು, ಹಾಗೂ / ಅಥವಾ (iii) ಆ ಸಂಬಂಧಿತ ಖಾತೆಯನ್ನು ಮುಂದೆ ಒದಗಿಸಲಾಗಿರುವ ನಮ್ಮ Snapchat ನ ಮಧ್ಯಸ್ಥಿಕೆ, ಜಾರಿಗೊಳಿಸುವಿಕೆ ಮತ್ತು ಮೇಲ್ಮನವಿಗಳ ವಿವರಣೆಯಲ್ಲಿ ವಿವರಿಸಲಾಗಿರುವ ರೀತಿಯಲ್ಲಿ ನಿರ್ಬಂಧಿಸಬಹುದು.
2024 ರ H2 ನಲ್ಲಿ, ನಾವು EU ನಲ್ಲಿನ DSA ಅನುಚ್ಛೇದ 16 ರ ಪ್ರಕಾರ ಸಲ್ಲಿಸಲಾದ ನೋಟಿಸ್ಗಳನ್ನು ಸ್ವೀಕರಿಸಿದ ನಂತರ ನಾವು ಈ ಕೆಳಗಿನ ಜಾರಿ ಕ್ರಮಗಳನ್ನು ತೆಗೆದುಕೊಂಡೆವು:
H2 2024 ರಲ್ಲಿ, "ಇತರ ಅಕ್ರಮ ವಿಷಯ" ಗಳೆಂದು ಗುರುತಿಸಲಾದ ಎಲ್ಲಾ ವರದಿಗಳನ್ನೂ ಅಂತಿಮವಾಗಿ ನಮ್ಮ ಸಮುದಾಯದ ಮಾರ್ಗಸೂಚಿಗಳ ಅಡಿಯಲ್ಲಿ ಜಾರಿಗೊಳಿಸಲಾಗಿತ್ತು, ಏಕೆಂದರೆ ನಮ್ಮ ಸಮುದಾಯದ ಮಾರ್ಗಸೂಚಿಗಳು ಆಯಾ ವಿಷಯವನ್ನು ಅಥವಾ ಚಟುವಟಿಕೆಯನ್ನು ನಿರ್ಬಂಧಿಸಿದ್ದವು. ಆದ್ದರಿಂದ,ನಾವು ಈ ಜಾರಿಗಳನ್ನು ಮೇಲಿನ ಕೋಷ್ಟಕದಲ್ಲಿ ಸಮುದಾಯ ಮಾರ್ಗಸೂಚಿ ಉಲ್ಲಂಘನೆಯ ಸಂಬಂಧಿತ ವರ್ಗದ ಅಡಿಯಲ್ಲಿ ವರ್ಗೀಕರಿಸಿದ್ದೇವೆ.
ಮೇಲಿನ ಜಾರಿಗೊಳಿಸುವಿಕೆಗಳ ಜೊತೆಗೆ, ನಾವು ಅನ್ವಯವಾಗುವ Snap ನ ಇತರ ನೀತಿಗಳು ಮತ್ತು ಮಾರ್ಗಸೂಚಿಗಳ ಅನುಸಾರವಾಗಿ ನಮಗೆ ಸೂಚಿಲಾಗುವ ವಿಷಯದ ಮೇಲೆ ಕ್ರಮಗಳನ್ನು ಕೈಗೊಳ್ಳಬಹುದು:
ನಮ್ಮ ಸಾರ್ವಜನಿಕ ಪ್ರಸಾರದ ಸಾಧನಗಳಿಗೆ ಸಂಬಂಧಿಸಿದಂತೆ, ವರದಿ ಮಾಡಲಾದ ವಿಷಯವು ನಮ್ಮ ಶಿಫಾರಸುಗಳಿಗೆ ಅರ್ಹತೆಯನ್ನು ಪಡೆಯಲು ವಿಷಯದ ಮಾರ್ಗಸೂಚಿಗಳ ಮಾನದಂಡವನ್ನು ಪೂರೈಸುವುದಿಲ್ಲ ಎಂದು ನಾವು ನಿರ್ಧರಿಸಿದರೆ, ನಾವು ಅಲ್ಗಾರಿದಮ್ನ ಶಿಫಾರಸುಗಾಗಿ ವಿಷಯವನ್ನು ತಿರಸ್ಕರಿಸಬಹುದು ಅಥವಾ ಕೆಲವು ಪ್ರೇಕ್ಷಕರನ್ನು ಹೊರತುಪಡಿಸಲು ವಿಷಯದ ವಿತರಣೆಯನ್ನು ನಾವು ಮಿತಿಗೊಳಿಸಬಹುದು (ವಿಷಯವು ಶಿಫಾರಸಿಗಾಗಿ ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದು, ಸೂಕ್ಷ್ಮ ಅಥವಾ ಸೂಚಕವಾಗಿದ್ದರೆ).
H2 2024 ರಲ್ಲಿ, ನಮಗೆ EU ನಲ್ಲಿ ವರದಿ ಮಾಡಲಾದ Snapchat ನ ಸಾರ್ವಜನಿಕ ಪ್ರಸಾರ ಮೇಲ್ಮೈಗಳಲ್ಲಿನ ವಿಷಯದ ಕುರಿತು ನಾವು ಶಿಫಾರಸಿಗೆ ಅರ್ಹತೆ ಪಡೆಯಲು ಅನುಸರಿಸಬೇಕಾದ ವಿಷಯದ ಮಾರ್ಗಸೂಚಿಗಳಿಗೆ ಅನುಸಾರವಾಗಿ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡೆವು: