Not Eligible for Recommendation:
Any disturbing or violent content that is prohibited in our Community Guidelines is prohibited anywhere on Snapchat. For content to be eligible for recommendation to a wider audience, it must not contain:
Disturbing or Violent Content
Not Eligible for Recommendation:
Any disturbing or violent content that is prohibited in our Community Guidelines is prohibited anywhere on Snapchat. For content to be eligible for recommendation to a wider audience, it must not contain:
ಮನುಷ್ಯರು ಮತ್ತು ಪ್ರಾಣಿಗಳಿಗೆ ಹಿಂಸೆ ಮಾಡುವ ಗ್ರಾಫಿಕ್ ಅಥವಾ ಅನಪೇಕ್ಷಿತ ಚಿತ್ರಣವನ್ನು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ನಿಷೇಧಿಸುತ್ತವೆ. ಈ ಕಂಟೆಂಟ್ ಮಾರ್ಗಸೂಚಿಗಳು ಕೇವಲ ಹಿಂಸೆಯಷ್ಟೇ ಅಲ್ಲ, ಅದರ ಜೊತೆಗೆ ತೀವ್ರ ಅನಾರೋಗ್ಯ, ಗಾಯ ಅಥವಾ ಸಾವಿನ ಗ್ರಾಫಿಕ್ ಅಥವಾ ಅನಪೇಕ್ಷಿತ ಚಿತ್ರಣವನ್ನು ಕೂಡ ನಿಷೇಧಿಸುತ್ತವೆ. ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ವೈದ್ಯಕೀಯ ಅಥವಾ ಸೌಂದರ್ಯವರ್ಧಕ ಕಾರ್ಯವಿಧಾನಗಳನ್ನು ಚಿತ್ರಿಸುವ ಕಂಟೆಂಟ್ ಅನ್ನು ನಿಷೇಧಿಸುವುದಿಲ್ಲ (ಉದಾಹರಣೆಗೆ, ಮೊಡವೆ ಒಡೆಯುವುದು, ಕಿವಿ ಸ್ವಚ್ಛಗೊಳಿಸುವುದು, ಲೈಪೋಸಕ್ಷನ್ ಇತ್ಯಾದಿ), ಆದರೆ ಅದು ಗ್ರಾಫಿಕ್ ಚಿತ್ರಣವನ್ನು ಬಿಂಬಿಸುತ್ತಿದ್ದರೆ ಶಿಫಾರಸಿಗೆ ಕಂಟೆಂಟ್ ಅರ್ಹವಾಗಿರುವುದಿಲ್ಲ. ಈ ಸನ್ನಿವೇಶದಲ್ಲಿ "ಗ್ರಾಫಿಕ್" ಅನ್ನುವುದು ರಸಿಕೆ, ರಕ್ತ, ಮೂತ್ರ, ಮಲ, ಪಿತ್ತ, ಸೋಂಕು, ಕೊಳೆತ ಮುಂತಾದ ದೇಹದ ಸ್ರಾವಗಳು ಅಥವಾ ತ್ಯಾಜ್ಯದ ನೈಜ-ಬದುಕಿನ ಚಿತ್ರಣವನ್ನು ಒಳಗೊಂಡಿದೆ. ಚರ್ಮ ಅಥವಾ ಕಣ್ಣುಗಳ ಬಳಿ ಹರಿತವಾದ ವಸ್ತುಗಳು ಅಥವಾ ಬಾಯಿಯ ಸಮೀಪ ಹುಳದಂತಹ, ಉದ್ದೇಶಪೂರ್ವಕವಾಗಿ ಭಾವನಾತ್ಮಕವಾಗಿ ಶಾಂತಿಗೆಡಿಸುವ ಮಾನವ ದೇಹದ ಚಿತ್ರಣದ ವರ್ಧನೆಯನ್ನು ನಾವು ನಿರಾಕರಿಸುತ್ತೇವೆ. ಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ತೋರಿಸುವ ಕಂಟೆಂಟ್ ಅನ್ನು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ನಿಷೇಧಿಸುತ್ತವೆ, ಮುಂದುವರಿದು, ಈ ಕಂಟೆಂಟ್ ಮಾರ್ಗಸೂಚಿಗಳು ಪ್ರಾಣಿಯ ತೀವ್ರ ದುಃಸ್ಥಿತಿ (ಉದಾಹರಣೆಗೆ ತೆರೆದ ಗಾಯಗಳು, ಸೊರಗಿದ ದೇಹ, ಮುರಿದ ಅಥವಾ ಕ್ಷಯಿಸುತ್ತಿರುವ ದೇಹದ ಭಾಗಗಳು) ಅಥವಾ ಸಾವಿನ ಚಿತ್ರಣವನ್ನು ನಿಷೇಧಿಸುತ್ತವೆ.
ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಹಿಂಸೆಯನ್ನು ಬೆಂಬಲಿಸುವುದು ಅಥವಾ ಯಾರ ವಿರುದ್ಧವಾದರೂ ಹಿಂಸೆಯನ್ನು ಪ್ರೋತ್ಸಾಹಿಸುವುದನ್ನು ನಿಷೇಧಿಸುತ್ತವೆ. ಈ ಕಂಟೆಂಟ್ ಮಾರ್ಗಸೂಚಿಗಳು ಹಿಂಸೆಗೆ ಅಸ್ಪಷ್ಟವಾದ ಬೆಂಬಲ ಅಥವಾ ಮೌನ ಅನುಮೋದನೆಯನ್ನು ಕೂಡ ನಿಷೇಧಿಸುತ್ತವೆ.
ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಸ್ವಯಂ-ಗಾಯ ಮಾಡಿಕೊಳ್ಳುವಿಕೆ, ಆತ್ಮಹತ್ಯ ಅಥವಾ ತಿನ್ನುವ ಅಸ್ವಸ್ಥತೆಗಳ ಪ್ರಚಾರ ಮಾಡುವುದನ್ನು ನಿಷೇಧಿಸುತ್ತವೆ. ಈ ಕಂಟೆಂಟ್ ಮಾರ್ಗಸೂಚಿಗಳು ಸಾಮಾನ್ಯವಾಗಿ ವ್ಯಾಪ್ತಿಗೆ ಬಾರದ ಕಂಟೆಂಟ್‌ನ ವರ್ಧನೆಯನ್ನು ಕೂಡ ನಿರಾಕರಿಸುತ್ತವೆ (ಉದಾಹರಣೆಗೆ, ತಮಾಷೆಯಾಗಿ "ನಿನ್ನ ಖಾತೆ ಅಳಿಸು ಮತ್ತು ಸಾಯಿ" ಎಂದು ಹೇಳುವುದು ಅಥವಾ ಯಾವುದೇ "ಅನಾರೋಗ್ಯಕರ ದೇಹದಂಡನೆ" ಅಥವಾ "ತಿನ್ನುವ ಗೀಳಿನ" ಕಂಟೆಂಟ್).
ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಲ್ಲಿ ನಿಷೇಧಿಸಲಾಗಿದೆ. ಗಾಯ, ಅಸ್ವಾಸ್ಥ್ಯ, ಸಾವು, ಹಾನಿ ಅಥವಾ ಸ್ವತ್ತು ನಷ್ಟಕ್ಕೆ ಕಾರಣವಾಗಬಹುದಾದ ಸ್ಟಂಟ್‌ಗಳು ಅಥವಾ "ಸವಾಲುಗಳು" ಮುಂತಾದವುಗಳಂತಹ ವೃತ್ತಿಪರರಲ್ಲದವರು ಮಾಡಿದ ಅಪಾಯಕಾರಿ ಚಟುವಟಿಕೆಗಳ ಚಿತ್ರಣವನ್ನು ಬಿಂಬಿಸುವ ಕಂಟೆಂಟ್‌ನ ವರ್ಧನೆಯನ್ನು ಈ ಕಂಟೆಂಟ್ ಮಾರ್ಗಸೂಚಿಗಳು ನಿಷೇಧಿಸುತ್ತವೆ.
ನೆಮ್ಮದಿಗೆಡಿಸುವ ಘಟನೆಗಳ. ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಶಾಂತಿಗೆಡಿಸುವ ಘಟನೆಗಳ ಕುರಿತ ಕಂಟೆಂಟ್ ಅನ್ನು ನಿಷೇಧಿಸುವುದಿಲ್ಲ ಆದರೆ ಸುದ್ದಿಯೋಗ್ಯವಲ್ಲದ ಹಿಂಸಾತ್ಮಕ ಅಥವಾ ಲೈಂಗಿಕ ಅಪರಾಧಗಳು ಅಥವಾ ಅಪ್ರಾಪ್ತರನ್ನು ಒಳಗೊಂಡಿರುವ ಅಪರಾಧಗಳ ಮೇಲೆ ಗಮನ ಕೇಂದ್ರೀಕರಿಸುವ ಕಂಟೆಂಟ್‌ನ ವರ್ಧನೆಯನ್ನು ಈ ಕಂಟೆಂಟ್ ಮಾರ್ಗಸೂಚಿಗಳು ನಿರಾಕರಿಸುತ್ತವೆ. ಕಂಟೆಂಟ್ "ಸುದ್ದಿಯೋಗ್ಯ" ಎಂದು ಪರಿಗಣಿಸಲ್ಪಡುವುದಕ್ಕಾಗಿ, ಅದು ಸಕಾಲಿಕವಾಗಿರಬೇಕು ಮತ್ತು ಅದು ಪ್ರಮುಖ ವ್ಯಕ್ತಿ, ಗುಂಪು ಅಥವಾ ಸಾರ್ವಜನಿಕ ಹಿತಾಸಕ್ತಿಯ ವಿಷಯವನ್ನು ಒಳಗೊಂಡಿರಬೇಕು.
ಸಂವೇದನಾಶೀಲ:
ಈ ಕೆಳಗಿನವು ಶಿಫಾರಸಿಗಾಗಿ ಅರ್ಹವಾಗಿವೆ, ಆದರೆ Snapchatter ಗಳ ವಯಸ್ಸು, ಸ್ಥಳ, ಆದ್ಯತೆಗಳು ಅಥವಾ ಇತರ ಮಾನದಂಡಗಳನ್ನು ಆಧರಿಸಿ ಅವರಲ್ಲಿ ಕೆಲವರಿಗೆ ಅದರ ಗೋಚರತೆಯನ್ನು ಮಿತಿಗೊಳಿಸಲು ನಾವು ಆಯ್ಕೆ ಮಾಡಬಹುದು.
ಸಾವು ಅಥವಾ ಅಂಗಚ್ಛೇದದ ಗ್ರಾಫಿಕ್ ಚಿತ್ರಣ ಇಲ್ಲದಿರುವ, ರಾಷ್ಟ್ರೀಯ ಸುದ್ದಿ, ಶಿಕ್ಷಣ ಅಥವಾ ಸಾರ್ವಜನಿಕ ಚರ್ಚೆಯ ಸನ್ನಿವೇಶದ ಹಿಂಸೆ. ಲೈಂಗಿಕ ಅಥವಾ ಹಿಂಸಾತ್ಮಕ ಅಪರಾಧಗಳಂತಹ ಶಾಂತಿಗೆಡಿಸುವ ಘಟನೆಗಳು ಸಕಾಲಿಕವಾಗಿದ್ದಾಗ ಮತ್ತು ಪ್ರಮುಖ ವ್ಯಕ್ತಿ, ಗುಂಪು ಅಥವಾ ಸಾರ್ವಜನಿಕ ಹಿತಾಸಕ್ತಿಯ ವಿಷಯವನ್ನು ಒಳಗೊಂಡಿದ್ದಾಗ ಸುದ್ದಿಯೋಗ್ಯವಾಗಿರಬಹುದು
ತಿನ್ನುವ ಅಸ್ವಾಸ್ಥ್ಯಗಳು ಸೇರಿದಂತೆ.
Procedures, medical settings or equipment. This includes preserved body organs in educational or newsworthy contexts.
ಚರ್ಮವು ಸೀಳಿಲ್ಲದ ಸನ್ನಿವೇಶ.
ಚರ್ಮದ ಮೇಲಿರುವ ಹಜ್ಜೆಯ ಸೂಜಿಗಳು ಅಥವಾ ಪ್ರಗತಿಯಲ್ಲಿರುವ ಚುಚ್ಚುವಿಕೆ.
ಸಾವು ಅಥವಾ ರಕ್ತಸಿಕ್ತ ಹಿಂಸೆಯ ಗ್ರಾಫಿಕ್ ಚಿತ್ರಣವಿಲ್ಲದೆ.
ಜೇಡಗಳು, ಕೀಟಗಳು ಅಥವಾ ಹಾವುಗಳಂತಹವು.
ಕಾಲ್ಪನಿಕ ಆದರೆ ನೈಜ ಮತ್ತು ಸಂಭಾವ್ಯತಃ ನೆಮ್ಮದಿಗೆಡಿಸುವ ಚಿತ್ರಣ. ಇದು ಮನರಂಜನೆಯ ಸನ್ನಿವೇಶದಲ್ಲಿನ ಹಿಂಸೆಯನ್ನು ಸಹ ಒಳಗೊಂಡಿದೆ (ಉದಾಹರಣೆಗೆ, ಒಂದು ಸಿನಿಮಾ, ವೀಡಿಯೊ ಗೇಮ್ ಅಥವಾ ಹಾಸ್ಯ ಕಿರು ನಾಟಕದಲ್ಲಿ). ಇದು ಭಯಾನಕ ಥೀಮ್ ಹೊಂದಿರುವ ವಿಷಯವನ್ನು ಕೂಡ ಒಳಗೊಂಡಿದೆ (ಉದಾಹರಣೆಗೆ, ವಿಶೇಷ ಎಫೆಕ್ಟ್‌ನ ಮೇಕಪ್, ಉಡುಗೆಗಳು, ಪರಿಕರಗಳು). ಇದು ಭಾವನಾತ್ಮಕ ಪ್ರತಿಕ್ರಿಯೆಯನ್ನು ಪ್ರಚೋದಿಸುವುದಕ್ಕಾಗಿ ಇರುವ ಚಿತ್ರಣಗಳನ್ನೂ ಒಳಗೊಂಡಿದೆ (ಉದಾಹರಣೆಗೆ, ಟ್ರೈಪೊಫೋಬಿಯಾ ಪ್ರಚೋದಿಸಲು ರಂಧ್ರವುಳ್ಳ ವಸ್ತುಗಳು, ಚರ್ಮ ಕೀಳುವುದನ್ನು ಬಿಂಬಿಸುವುದಕ್ಕಾಗಿ ಅಂಟು ಅಥವಾ ಹೇನುಗಳನ್ನು ಬಿಂಬಿಸುವುದಕ್ಕಾಗಿ ಬೀಜಗಳು).
ಅದು ಒಬ್ಬ ವ್ಯಕ್ತಿಯತ್ತ ನಿರ್ದೇಶಿತವಾಗಿಲ್ಲದಿರುವಾಗ, ಒಂದು ಗುಂಪಿಗೆ ಅವಮಾನಕರವಾಗಿಲ್ಲದಿರುವಾಗ ಮತ್ತು ಲೈಂಗಿಕವಾಗಿ ಸುಸ್ಪಷ್ಟ ಸನ್ನಿವೇಶದಲ್ಲಿ ಇಲ್ಲದಿರುವಾಗ. ಸಹಜ ಹತಾಶೆಯನ್ನು ವ್ಯಕ್ತಪಡಿಸಲು ಸಾಮಾನ್ಯವಾಗಿ ಬಳಸಲಾಗುವ ಬೈಗುಳಗಳಿಗೆ ಇದು ಅನ್ವಯಿಸುತ್ತದೆ (ಉದಾಹರಣೆಗೆ, “ಸೂ***” ಮತ್ತು “ಅ***”).
False or Deceptive Information