ಗುಣಮಟ್ಟ
ನಿಷೇಧಿಸಲಾಗಿದೆ, ನಾವು ನಿಷೇಧಿಸುತ್ತೇವೆ:
ಸೂಕ್ಷ್ಮ ವೈಯಕ್ತಿಕ ಮಾಹಿತಿಯ ಕುರಿತು ಪ್ರಶ್ನೆಗಳನ್ನು ಕೇಳಬಹುದಾದ ಪೋಲ್‌ಗಳು
ಇದು ಬಳಕೆದಾರರ ಜನಾಂಗೀಯ ಅಥವಾ ಜನಾಂಗೀಯ ಮೂಲಗಳು, ರಾಜಕೀಯ ಅಭಿಪ್ರಾಯಗಳು, ಧಾರ್ಮಿಕ ಅಥವಾ ತಾತ್ವಿಕ ನಂಬಿಕೆಗಳು, ಟ್ರೇಡ್-ಯೂನಿಯನ್ ಸದಸ್ಯತ್ವ, ವೈಯಕ್ತಿಕ ಆರೋಗ್ಯ ಅಥವಾ ಲೈಂಗಿಕ ಜೀವನವನ್ನು ಒಳಗೊಂಡಿರುತ್ತದೆ ಆದರೆ ಅದಕ್ಕೆ ಸೀಮಿತವಾಗಿಲ್ಲ.
ಶಿಫಾರಸಿಗೆ ಅರ್ಹವಾಗಿಲ್ಲ:
ಉದ್ಯಮದ ಉತ್ತಮ ಪದ್ಧತಿಗಳನ್ನು ಹೊಂದಿರುವ ರೀತಿಯಲ್ಲಿ ಎಲ್ಲ ಕಂಟೆಂಟ್ ಅನ್ನು ಉತ್ಪಾದಿಸಬೇಕು. ಈ ಕೆಳಗಿನವು ಶಿಫಾರಸುಗಳಿಗಾಗಿ ಅರ್ಹವಾಗಿಲ್ಲ:
ಕಳಪೆ ದರ್ಜೆಯ ವೀಡಿಯೊ ಗುಣಮಟ್ಟ
ಉದಾಹರಣೆಗೆ ಅಸ್ಪಷ್ಟವಾದ ಕಡಿಮೆ ರೆಸಲ್ಯೂಶನ್ ಅಥವಾ ಅತಿಯಾಗಿ ಪಿಕ್ಸೆಲೇಟ್ ಮಾಡಲಾದ ಚಿತ್ರಣಗಳು, ಬಳಕೆದಾರರು ತಮ್ಮ ಪರದೆಯನ್ನು ಲಂಬದಿಂದ ಅಡ್ಡವಾಗಿ ತಿರುಗಿಸುವುದನ್ನು ಅಗತ್ಯವಾಗಿಸುವ ತಪ್ಪಾದ ಓರಿಯಂಟೇಶನ್, ತಪ್ಪಾಗಿ ಆಡಿಯೊ ಇಲ್ಲದಿರುವ ವೀಡಿಯೊಗಳು ಇತ್ಯಾದಿ.
ಫ್ಲ್ಯಾಶ್‌ಗಳು ಅಥವಾ ಸ್ಟ್ರೋಬ್‌ಗಳು
ಬೆಳಕಿನ ಸೂಕ್ಷ್ಮತೆ ಹೊಂದಿರುವ ಬಳಕೆದಾರರಿಗೆ ಯಾವುದೇ ಎಚ್ಚರಿಕೆ ನೀಡದೆ.
ಅಸ್ಪಷ್ಟ ಅಥವಾ ಗ್ರಹಿಸಲಾಗದ ಪಾಲುದಾರ ಟೈಲ್ ಪಠ್ಯ
ಇದು ಕ್ಯಾಪಿಟಲೈಸೇಶನ್, ವಿರಾಮಚಿಹ್ನೆ, ಚಿಹ್ನೆಗಳು ಅಥವಾ ಇಮೋಜಿಗಳೊಂದಿಗೆ ಓದಲು ಕಷ್ಟವಾಗುವ ಸಮಸ್ಯೆಗಳನ್ನು ಹೊಂದಿರುವ ಲೋಗೋಗಳು ಅಥವಾ ಹೆಡ್‌ಲೈನ್ಸ್‌ಗಳಿಗೆ ಅನ್ವಯಿಸುತ್ತದೆ.
ಆಫ್-ಪ್ಲ್ಯಾಟ್‌ಫಾರ್ಮ್ ಲಿಂಕ್‌ಗಳು
ಇತರ ಸಂದೇಶ ಕಳುಹಿಸುವಿಕೆ ಸೇವೆಗಳು, ಸಾಮಾಜಿಕ ಮಾಧ್ಯಮ ಪ್ಲ್ಯಾಟ್‌ಫಾರ್ಮ್ಸ್ ಅಥವಾ ಕ್ಲೌಡ್ ಸಂಗ್ರಹಣೆ ಸರ್ವರ್‌ಗಳಿಗೆ (URL ಗಳು, QR ಕೋಡ್‌ಗಳು, ಇತ್ಯಾದಿ.) ನಿಮ್ಮ ಸ್ವಂತ ಕಥೆ ಅಥವಾ ಪ್ರೊಫೈಲ್‌ನಲ್ಲಿ ಇತರ ಸಾಮಾಜಿಕ ಪ್ಲ್ಯಾಟ್‌ಫಾರ್ಮ್ಸ್ ಲಿಂಕ್ ಮಾಡಲು ನೀವು ಮುಕ್ತರಾಗಿದ್ದೀರಿ, ಆದರೆ ಅದು ಪ್ರಮೋಷನ್‌ಗೆ ಅರ್ಹವಾಗಿರುವುದಿಲ್ಲ. (ಗಮನಿಸಿ: Discover ನಲ್ಲಿ, ಬಳಕೆದಾರರ ಕಥೆಯಲ್ಲಿನ Snap ಗಳಲ್ಲಿ ಕೆಲವು ವಿಶ್ವಾಸಾರ್ಹ URL ಗಳಿಗೆ ನಾವು ವಿನಾಯಿತಿ ನೀಡುತ್ತೇವೆ, ಆದರೆ ಆ Snap ಗಳು ಟೈಲ್ಸ್‌ನಂತೆ ವೈಶಿಷ್ಟ್ಯಗೊಳಿಸಲು ಅರ್ಹವಾಗಿರುವುದಿಲ್ಲ.)
ಖಾತೆಗಳ ಪ್ರಮೋಷನ್
ಇತರ ಸಂದೇಶ ಕಳುಹಿಸುವಿಕೆ ಸೇವೆಗಳು ಅಥವಾ ಸಾಮಾಜಿಕ ಮಾಧ್ಯಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ. ಉದಾಹರಣೆಗೆ, ಬೇರೆ ಸಾಮಾಜಿಕ ಮಾಧ್ಯಮ ಅಥವಾ ಮೆಸೇಜಿಂಗ್ ಆಪ್‌ನ ಹೆಸರು ಅಥವಾ ಲೋಗೊ ಜೊತೆ ಜೋಡಿಸಲಾದ ಒಂದು ಬಳಕೆದಾರರ ಹೆಸರು. (ಗಮನಿಸಿ: ಒಂದು Snap ನಲ್ಲಿನ ಕಂಟೆಂಟ್‌ನಲ್ಲಿ ಮೂಲ ಸೃಷ್ಟಿಕರ್ತರನ್ನು ಉಲ್ಲೇಖಿಸಿದಾಗ ಮತ್ತು ಮೂಲ, ಪರಿವರ್ತಕ ಕಾಮೆಂಟರಿಯನ್ನು ಸೇರಿಸಿದಾಗ ನಾವು ವಿನಾಯಿತಿ ನೀಡುತ್ತೇವೆ).
ಮೂಲವಲ್ಲದ ವಿಷಯ
ನೀವು ರಚಿಸಿಲ್ಲದ ಮತ್ತು ನೀವು ಸೃಜನಶೀಲ ರೀತಿಯಲ್ಲಿ ಬದಲಾಯಿಸಿಲ್ಲದ ವಿಷಯವನ್ನು ಪೋಸ್ಟ್ ಮಾಡುವುದು (ವ್ಯಾಖ್ಯಾನ, ಪ್ರತಿಕ್ರಿಯೆಗಳು, ಮುಂತಾದ ರೀತಿಗಳ ಮೂಲಕ)
ಬೇರೆ ಯೋರದ್ದೋ ವಿಷಯವನ್ನು ಮರು-ಪೋಸ್ಟ್ ಮಾಡುವುದಕ್ಕಾಗಿ ಕಡಿಮೆ ಶ್ರಮದ "ಪ್ರಿತಿಕ್ರಿಯೆ" ರೂಪದ ವಿಷಯವನ್ನು ಕುಂಟುನೆವನ್ನಾಗಿ ಬಳಸುವುದು
ಕನಿಷ್ಠ ಸೃಜನಾತ್ಮಕ ವ್ಯತ್ಯಾಸಗಳೊಂದಿಗೆ ಒಂದೇ ವಿಷಯವನ್ನು ಪದೇ ಪದೇ ಪೋಸ್ಟ್ ಮಾಡುವುದು, ಅದು ನಿಮ್ಮದೇ ಆಗಿರಲಿ ಅಥವಾ ಬೇರೆಯವರದ್ದಾಗಿರಲಿ
ಸಂವೇದನಾಶೀಲ:
ಕೆಳಗಿನವುಗಳು ಸೀಮಿತ ಮೇಲ್ಮೈಗಳಲ್ಲಿ (Discover ನಂತಹ) ಮಾತ್ರ ಶಿಫಾರಸು ಮಾಡಲು ಅರ್ಹವಾಗಿವೆ, ಆದರೆ ಸ್ಪಾಟ್‌ಲೈಟ್‌ನಲ್ಲಿ ಅಥವಾ ನಕ್ಷೆಯಲ್ಲಿ ಅಲ್ಲ:
ಆಫ್-ಪ್ಲ್ಯಾಟ್‌ಫಾರ್ಮ್ ಲಿಂಕ್‌ಗಳು
ಈ ಕೆಳಗಿನವುಗಳಲ್ಲದ ಗಮ್ಯಸ್ಥಾನಗಳಿಗೆ (URL ಗಳು, QR ಕೋಡ್‌ಗಳು, ಇತ್ಯಾದಿ.): ಇತರ ಸಂದೇಶ ಕಳುಹಿಸುವಿಕೆ ಸೇವೆಗಳು, ಇತರ ಸಾಮಾಜಿಕ ಮಾಧ್ಯಮ ಪ್ಲ್ಯಾಟ್‌ಫಾರ್ಮ್‌ಗಳು ಅಥವಾ ಕ್ಲೌಡ್ ಸಂಗ್ರಹಣೆ ಸರ್ವರ್‌ಗಳು.
ಸಾರ್ವಜನಿಕ ಹಿತಾಸಕ್ತಿಯ ಕಂಟೆಂಟ್