ಶಿಫಾರಸು ಅರ್ಹತೆ

ಕಿರುಕುಳ ಮತ್ತು ಬೆದರಿಸುವಿಕೆ

ಶಿಫಾರಸಿಗೆ ಅರ್ಹವಾಗಿಲ್ಲ:

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಲ್ಲಿ ನಿಷೇಧಿತವಾಗಿರುವ ಯಾವುದೇ ಕಿರುಕುಳ ಅಥವಾ ಬೆದರಿಸುವ ತಂತ್ರಗಳನ್ನು ಖಾಸಗಿ ವಿಷಯ ಅಥವಾ Snapchatter ಗಳ ಕಥೆ ಸೇರಿದಂತೆ Snapchat ನ ಎಲ್ಲೆಡೆಯೂ ನಿಷೇಧಿಸಲಾಗಿದೆ. ಹೆಚ್ಚಿನ ಪ್ರೇಕ್ಷಕರಿಗೆ ಶಿಫಾರಸು ಮಾಡುವುದಕ್ಕಾಗಿ ಅರ್ಹವಾಗಲು ವಿಷಯವು ಈ ಕೆಳಗಿನ ಅಂಶಗಳನ್ನು ಹೊಂದಿರಬಾರದು:

ಒಬ್ಬರನ್ನು ಮುಜುಗರಕ್ಕೀಡು ಮಾಡಲು ಅಥವಾ ಅವಮಾನಿಸಲು ಅಸ್ಪಷ್ಟ ಪ್ರಯತ್ನಗಳು

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಎಲ್ಲ ಸ್ವರೂಪದ ಕಿರುಕುಳ ಮತ್ತು ಬೆದರಿಸುವಿಕೆಯನ್ನು ನಿಷೇಧಿಸುತ್ತವೆ, ಆದರೆ ಮುಜುಗರಗೊಳಿಸುವ ಇರಾದೆ ನಿರ್ದಿಷ್ಟವಾಗಿಲ್ಲದ ಅಸ್ಪಷ್ಟ ಪ್ರಕರಣಗಳಲ್ಲಿ (ಉದಾಹರಣೆಗೆ, ವ್ಯಕ್ತಿಯು ಕ್ಯಾಮೆರಾದ ಎದುರು ಅಣಕಕ್ಕೆ ಒಳಗಾಗಲು ಇಷ್ಟಪಡುತ್ತಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲದ "ಕಟುಟೀಕೆ" ಯ Snap) ಈ ವಿಷಯ ಮಾರ್ಗಸೂಚಿಗಳು ಕಟ್ಟುನಿಟ್ಟಾದ ಮಾನದಂಡವನ್ನು ಅನ್ವಯಿಸುತ್ತವೆ. ಇದು ಕೀಳು ಮತ್ತು ಅವಮಾನಿಸುವ ಭಾಷೆಗೂ ವಿಸ್ತರಿಸುತ್ತದೆ. ಇದು ಒಬ್ಬರು ಸಾರ್ವಜನಿಕ ವ್ಯಕ್ತಿಯಾಗಿದ್ದರೂ ಸಹ, ಅವರ ಮೇಲ್ನೋಟವನ್ನು ಆಧರಿಸಿ ಅಣಕಿಸುವುದನ್ನು ಕೂಡ ಒಳಗೊಂಡಿದೆ.

  • ಗಮನಿಸಿ: ಪ್ರಸಿದ್ಧ ವಯಸ್ಕರು ಅಥವಾ ಸಂಸ್ಥೆಗಳ ಮಾತುಗಳು ಅಥವಾ ವರ್ತನೆಗಳನ್ನು ಟೀಕಿಸುವುದು ಅಥವಾ ವ್ಯಂಗ್ಯ ಮಾಡುವುದನ್ನು ಕಿರುಕುಳ ಅಥವಾ ಬೆದರಿಸುವಿಕೆ ಎಂದು ಪರಿಗಣಿಸಲಾಗುವುದಿಲ್ಲ. Snapchat ನ ಎಲ್ಲೆಡೆಯೂ ಯಾವುದೇ ಬಗೆಯ
    ಲೈಂಗಿಕ ಕಿರುಕುಳವನ್ನು (ಮೇಲೆ “ಲೈಂಗಿಕ ವಿಷಯ” ನೋಡಿ) ನಿಷೇಧಿಸಲಾಗಿದೆ.

ಗೌಪ್ಯತೆಯ ಅತಿಕ್ರಮಣ

ಹಂಚಿಕೊಳ್ಳಬಾರದ ಖಾಸಗಿ ಮಾಹಿತಿಯ ವಿಧಗಳನ್ನು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ವಿವರಿಸುತ್ತವೆ. ಮುಂದುವರಿದು, ಈ ವಿಷಯ ಮಾರ್ಗಸೂಚಿಗಳು ಈ ಕೆಳಗಿನ ಸಂದರ್ಭಗಳನ್ನು ಹೊರತುಪಡಿಸಿ, ಪ್ರಸಿದ್ಧ ವ್ಯಕ್ತಿಗಳ ಮಕ್ಕಳು ಸೇರಿದಂತೆ, ಮಕ್ಕಳ ಚಿತ್ರಗಳನ್ನು ಹಂಚಿಕೊಳ್ಳುವುದನ್ನು ನಿಷೇಧಿಸುತ್ತವೆ:

  • ಅವರು ಸುದ್ದಿಯೋಗ್ಯ ಕಥೆಗಳ ಕೇಂದ್ರ ಭಾಗವಾಗಿದ್ದರೆ

  • ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ತಮ್ಮ ಪೋಷಕರು ಅಥವಾ ಪಾಲಕರ ಜೊತೆಗಿದ್ದರೆ

  • ಪೋಷಕರು ಅಥವಾ ಕಾನೂನುಬದ್ಧ ಪಾಲಕರ ಸಮ್ಮತಿಯೊಂದಿಗೆ ವಿಷಯವನ್ನು ರಚಿಸಲಾಗಿದ್ದರೆ.

ಯಾರಿಗಾದರೂ ಗಂಭೀರ ಗಾಯ ಅಥವಾ ಸಾವನ್ನು ಹಾರೈಸುವುದು

ಉದಾಹರಣೆಗೆ, "ನನ್ನ ಮಾಜಿ ಸಂಗಾತಿ ಕಾರು ಅಪಘಾತಕ್ಕೀಡಾಗಲಿ ಎಂದು ಬಯಸುತ್ತೇನೆ".

ಬೇರೊಬ್ಬರ ಕಡೆಗೆ ಗುರುಯಾಗಿಸಿದ ಅಶ್ಲೀಲ ಮಾತು

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಅಶ್ಲೀಲತೆಯನ್ನು ಬಳಸುವ ಸ್ವಯಂ-ಅಭಿವ್ಯಕ್ತಿಗೆ ಅವಕಾಶ ನೀಡುತ್ತವೆ, ಆದರೆ ಈ ವಿಷಯ ಮಾರ್ಗಸೂಚಿಗಳು ಒರಟಾದ ಭಾಷೆ ಅಥವಾ ಅಶ್ಲೀಲತೆಯನ್ನು ವ್ಯಕ್ತಿ ಅಥವಾ ಗುಂಪಿಗೆ ನಿರ್ದೇಶಿಸುವುದನ್ನು ನಿಷೇಧಿಸುತ್ತವೆ, ಅದು ಬೀಪ್ ಮಾಡಿದ್ದರೂ ಅಥವಾ ಅಸ್ಪಷ್ಟವಾಗಿದ್ದರೂ ಸಹ ಮತ್ತು ಅದು ದ್ವೇಷದ ಮಾತು ಅಥವಾ ಲೈಂಗಿಕ ಸ್ಪಷ್ಟತೆಯಷ್ಟು ತೀವ್ರವಾಗಿಲ್ಲದಿದ್ದರೂ ಸಹ.

ಕೆಟ್ಟ ಅಥವಾ ಅಪಾಯಕಾರಿ ಕುಚೇಷ್ಟೆಗಳು

ಅದು ತಾವು ತಕ್ಷಣದ ಗಾಯ, ಸಾವು ಅಥವಾ ನಷ್ಟದ ಅಪಾಯಕ್ಕೆ ಸಿಲುಕಬಹುದು ಎಂದು ಸಂತ್ರಸ್ತ ನಂಬುವಂತೆ ಮಾಡಬಹುದು.

ದುರ್ಘಟನೆಗಳು ಅಥವಾ ವಿಷಯಗಳಿಗೆ ಸಂಬಂಧಿಸಿದ ಅಸೂಕ್ಷ್ಮತೆ

ಉದಾಹರಣೆಗೆ, ಆತ್ಮೀಯ ಸಂಗಾತಿಯ ಹಿಂಸಾಚಾರದಿಂದ ಬದುಕುಳಿದ ಸಂತ್ರಸ್ತರನ್ನು ಅಣಕಿಸುವುದು.

ಮುಂದೆ:

ನೆಮ್ಮದಿಗೆಡಿಸುವ ಅಥವಾ ಹಿಂಸಾತ್ಮಕ ವಿಷಯಗಳು

Read Next