ಕಮ್ಯುನಿಟಿ ಮಾರ್ಗಸೂಚಿಗಳು

ಬೆದರಿಕೆಗಳು, ಹಿಂಸೆ ಮತ್ತು ಹಾನಿ

ಕಮ್ಯುನಿಟಿ ಮಾರ್ಗಸೂಚಿಗಳ ವಿವರಣೆಯ ಸರಣಿ

ನವೀಕರಿಸಲಾಗಿದೆ: ಜನವರಿ 2023

ಅವಲೋಕನ

ನಮ್ಮ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮ Snapchat ನಲ್ಲಿ ಪ್ರಮುಖ ಆದ್ಯತೆಯಾಗಿದೆ ಮತ್ತು ನಾವು ಬೆದರಿಕೆಗಳು, ಹಿಂಸೆ ಮತ್ತು ಹಾನಿಯ ಎಲ್ಲ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಹಿಂಸೆ ಅಥವಾ ಅಪಾಯಕಾರಿ ನಡವಳಿಕೆಯನ್ನು ಪ್ರೋತ್ಸಾಹಿಸುವ ಬೆದರಿಸುವ ಅಥವಾ ಚಿತ್ರಣದ ಮೂಲಕ ಬಿಂಬಿಸುವ ವಿಷಯ ಅಥವಾ ಸ್ವಯಂ ಹಾನಿಯನ್ನು ವೈಭವೀಕರಿಸುವ ಅಥವಾ ಪ್ರೋತ್ಸಾಹಿಸುವ ವಿಷಯಕ್ಕೆ ನಾವು ಅವಕಾಶ ನೀಡುವುದಿಲ್ಲ. ಮಾನವ ಜೀವಕ್ಕೆ ಸನ್ನಿಹಿತವಾದ ಬೆದರಿಕೆಗಳನ್ನು ಕಾನೂನು ಜಾರಿ ಸಂಸ್ಥೆಗೆ ವರದಿ ಮಾಡಬಹುದು.

ನಮ್ಮ ನೀತಿಗಳು ಮತ್ತು ಮಿತಗೊಳಿಸುವಿಕೆ ಅಭ್ಯಾಸಗಳು ಎಲ್ಲ ಬಳಕೆದಾರರಿಗೆ ನಮ್ಮ ವೇದಿಕೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವಾದರೂ, ನಮ್ಮ ಸಮುದಾಯದ ಯೋಗಕ್ಷೇಮವನ್ನು ಬೆಂಬಲಿಸಲು ನೆರವಾಗುವುದಕ್ಕೆ ವೈಶಿಷ್ಟ್ಯಗಳು ಮತ್ತು ಸಂಪನ್ಮೂಲಗಳಲ್ಲಿ ನಾವು ಹೂಡಿಕೆ ಮಾಡುತ್ತೇವೆ. ಸ್ವಯಂ ಹಾನಿ ಅಥವಾ ಭಾವನಾತ್ಮಕ ಯಾತನೆಯನ್ನು ಸೂಚಿಸುವ ಕಂಟೆಂಟ್ ಅನ್ನು ವರದಿ ಮಾಡುವಂತೆ ನಾವು Snapchatter ಗಳನ್ನು ಪ್ರೋತ್ಸಾಹಿಸುತ್ತೇವೆ, ಇದರಿಂದಾಗಿ ನಮ್ಮ ತಂಡಗಳು ಉಪಯುಕ್ತವಾಗಬಹುದಾದ ಮತ್ತು ಸಂಭಾವ್ಯತಃ ತುರ್ತು ಆರೋಗ್ಯ ಪ್ರತಿಕ್ರಿಯಾದಾರರಿಗೆ ಎಚ್ಚರಿಕೆ ನೀಡುವ ಸಂಪನ್ಮೂಲಗಳನ್ನು ಕಳುಹಿಸಬಹುದು.

  • ಹಿಂಸಾತ್ಮಕ ಅಥವಾ ಅಪಾಯಕಾರಿ ನಡವಳಿಕೆಯನ್ನು ಪ್ರೋತ್ಸಾಹಿಸುವುದು ಅಥವಾ ತೊಡಗಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಒಬ್ಬ ವ್ಯಕ್ತಿ, ಜನರ ಗುಂಪು ಅಥವಾ ಒಬ್ಬರ ಸ್ವತ್ತನ್ನು ಹಾನಿ ಮಾಡುವುದಾಗಿ ಬೆದರಿಕೆ ಹಾಕಬೇಡಿ.

  • ಪ್ರಾಣಿಯನ್ನು ಹಿಂಸಿಸುವುದು ಸೇರಿದಂತೆ ಅನುಚಿತವಾದ ಅಥವಾ ಚಿತ್ರಿತ ಹಿಂಸೆಯನ್ನು ಒಳಗೊಂಡ Snap ಗಳಿಗೆ ಅವಕಾಶವಿಲ್ಲ.

  • ಸ್ವಯಂ-ಗಾಯ ಮಾಡಿಕೊಳ್ಳುವಿಕೆ, ಆತ್ಮಹತ್ಯೆ ಅಥವಾ ತಿನ್ನುವ ಕಾಯಿಲೆ ಸೇರಿದಂತೆ, ನಾವು ಸ್ವಯಂ-ಹಾನಿ ಮಾಡಿಕೊಳ್ಳುವಿಕೆಯ ವೈಭವೀಕರಣಕ್ಕೆ ಅವಕಾಶ ನೀಡುವುದಿಲ್ಲ

ನೀವು ಏನನ್ನು ನಿರೀಕ್ಷಿಸಬೇಕು

ಬೆದರಿಕೆಗಳು, ಹಿಂಸೆ ಮತ್ತು ಹಾನಿಗೆ ಸಂಬಂಧಿಸಿದ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ನಮ್ಮ ಸಮುದಾಯದ ಸುರಕ್ಷತೆಯನ್ನು ನಿರ್ಲಕ್ಷಿಸುವ ವಿಷಯವನ್ನು ತೆಗೆದುಹಾಕುವುದಕ್ಕೆ ಬದ್ಧತೆಯನ್ನು ಪ್ರದರ್ಶಿಸುತ್ತವೆ, ಇದೇ ವೇಳೆ ನಮ್ಮ ವೇದಿಕೆಯಲ್ಲಿ ಸಂಕಟದ ತುರ್ತು ಅಭಿವ್ಯಕ್ತಿಗಳ ಕುರಿತು ಗಮನವನ್ನೂ ನೀಡುತ್ತವೆ.

ಸುರಕ್ಷತೆಯನ್ನು ಪ್ರಚಾರ ಮಾಡಲು, ಈ ನಿಯಮಗಳು Snapchat ನಲ್ಲಿ ಬೆದರಿಕೆಗಳನ್ನು ನಿಷೇಧಿಸುತ್ತವೆ, ಇದು ಒಬ್ಬ ವ್ಯಕ್ತಿ, ಜನರ ಗುಂಪು ಅಥವಾ ಅವರ ಆಸ್ತಿಗೆ ಗಂಭೀರ ಭೌತಿಕ ಅಥವಾ ಭಾವನಾತ್ಮಕ ಹಾನಿ ಮಾಡುವ ಉದ್ದೇಶವನ್ನು ಅಭಿವ್ಯಕ್ತಪಡಿಸುವ ಯಾವುದೇ ವಿಷಯವನ್ನು ಒಳಗೊಳ್ಳುತ್ತದೆ. ವಿಷಯವು ಮಾನವ ಜೀವಕ್ಕೆ ತಕ್ಷಣದ ಅಪಾಯವನ್ನು ಸೂಚಿಸಿದಲ್ಲಿ, ಮಧ್ಯಸ್ಥಿಕೆ ವಹಿಸಲು ಅಧಿಕಾರ ಹೊಂದಿರುವ ಕಾನೂನು ಜಾರಿ ಸಂಸ್ಥೆಗಳಿಗೆ ನಮ್ಮ ತಂಡಗಳು ತಿಳಿಸಬಹುದು.

ಜನರು ಅಥವಾ ಪ್ರಾಣಿಗಳ ಮೇಲೆ ಹಿಂಸಾತ್ಮಕ ಅಥವಾ ಹಾನಿಕಾರಕ ನಡವಳಿಕೆಯನ್ನು ವೈಭವೀಕರಿಸುವ ಅಥವಾ ಪ್ರಚೋದಿಸುವ ಅಪಾಯವುಳ್ಳ ವಿಷಯವನ್ನು ಕೂಡ ನಾವು ನಿಷೇಧಿಸುತ್ತೇವೆ--ಇದು ಆತ್ಮಹತ್ಯೆ, ಸ್ವಯಂ ವೈಕಲ್ಯಕ್ಕೆ ಒಳಗಾಗುವಿಕೆ ಅಥವಾ ತಿನ್ನುವ ಕಾಯಿಲೆಗಳಂತಹ ಸ್ವಯಂ ಹಾನಿಯನ್ನು ಪ್ರೋತ್ಸಾಹಿಸುವ ಅಥವಾ ವೈಭವೀಕರಿಸುವ ವಿಷಯವನ್ನು ಒಳಗೊಳ್ಳುತ್ತದೆ.

ಸ್ವಯಂ ಹಾನಿಯ ಅಪಾಯವನ್ನು ಸೂಚಿಸುವ ವಿಷಯವನ್ನು ಬಳಕೆದಾರರು ವರದಿ ಮಾಡಿದಾಗ, ನಮ್ಮ ತಂಡಗಳು ಸಹಾಯಕ ಸಂಪನ್ಮೂಲಗಳನ್ನು ಒದಗಿಸುವ ಮತ್ತು ಸಾಧ್ಯವಿರುವಲ್ಲಿ, ಸಂಭಾವ್ಯತಃ ತುರ್ತು ಸೇವೆಗಳು ಮಧ್ಯಪ್ರವೇಶಿಸುವುದಕ್ಕೆ ಅವಕಾಶಗಳನ್ನು ಗುರುತಿಸುವ ದೃಷ್ಟಿಯೊಂದಿಗೆ ನಮ್ಮ ತಂಡಗಳು ಈ ವರದಿಗಳನ್ನು ಪರಿಶೀಲಿಸುತ್ತವೆ. ನಮ್ಮ ಸುರಕ್ಷತಾ ಸಂಪನ್ಮೂಲಗಳ ಕುರಿತು ಹೆಚ್ಚುವರಿ ಮಾಹಿತಿ ನಮ್ಮ ಗೌಪ್ಯತೆ ಮತ್ತು ಸುರಕ್ಷತೆ ಕೇಂದ್ರದಲ್ಲಿ ಲಭ್ಯವಿದೆ.

ನಮ್ಮ ಸಮುದಾಯದ ಯೋಗಕ್ಷೇಮವನ್ನು ಇನ್ನಷ್ಟು ಬೆಂಬಲಿಸಲು, ಬಳಕೆದಾರರ ಮಾನಸಿಕ ಆರೋಗ್ಯ, ಉದ್ವೇಗ, ಖಿನ್ನತೆ, ಒತ್ತಡ, ಆತ್ಮಹತ್ಯೆಯ ಯೋಜನೆಗಳು, ದುಃಖ ಮತ್ತು ಬೆದರಿಸುವಿಕೆಯಂತಹ ಕೆಲವು ವಿಷಯಗಳನ್ನು ಹುಡುಕಿದಾಗ ತಜ್ಞ ಸ್ಥಳೀಯ ಪಾಲುದಾರರಿಂದ ಸಂಪನ್ಮೂಲಗಳನ್ನು ಪತ್ತೆಮಾಡಲು ನಮ್ಮ Here For You ವೈಶಿಷ್ಟ್ಯವು ಸಹಾಯ ಮಾಡುತ್ತದೆ.

ಪ್ರಮುಖ ಸಂಗತಿ

ಬೆದರಿಕೆಗಳು, ಹಿಂಸೆ ಮತ್ತು ಹಾನಿಗೆ ಪ್ರತಿಸ್ಪಂದಿಸುವ ನಮ್ಮ ವಿಧಾನಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಲಾಗಿದೆ. ಸ್ವಯಂ ಹಾನಿಗೆ ಸಂಬಂಧಿಸಿದಂತೆ, ಸುರಕ್ಷತಾ ಸಂಪನ್ಮೂಲಗಳ ಮೂಲಕ ಅತ್ಯುತ್ತಮ ಮಾರ್ಗಗಳನ್ನು ಕಂಡುಕೊಳ್ಳಲು ನಮ್ಮ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಬೇರೆಯವರು ಅಪಾಯದಲ್ಲಿ ಇರುವಾಗ, ನಮ್ಮ ನೀತಿಗಳ ಜಾರಿ ಹಾಗೂ ಅಗತ್ಯವಿರುವಲ್ಲಿ ಕಾನೂನು ಜಾರಿ ಸಂಸ್ಥೆಯೊಂದಿಗೆ ಸಹಭಾಗಿತ್ವ, ಈ ಎರಡರ ಮೂಲಕವೂ ಸುರಕ್ಷಿತ ಫಲಿತಾಂಶಗಳನ್ನು ಕಂಡುಕೊಳ್ಳಲು ನಾವು ಪರಿಶ್ರಮಪಡುತ್ತೇವೆ.

ನಮ್ಮ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಬೆಂಬಲಿಸಲು ನಮ್ಮ ಕಾರ್ಯವನ್ನು ಮಾಡುವುದು ನಮ್ಮ ಕಂಪನಿಯಾದ್ಯಂತ ಹೆಚ್ಚಿನ ಆದ್ಯತೆಯಾಗಿದೆ. ಈ ಸ್ಥಳದಲ್ಲಿ ನಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು Snap ನ ಗೌಪ್ಯತೆ ಮತ್ತು ಸುರಕ್ಷತೆ ಕೇಂದ್ರಕ್ಕೆ ಭೇಟಿ ನೀಡಿ.

ಮುಂದೆ:

ಹಾನಿಕಾರಕ ಸುಳ್ಳು ಅಥವಾ ವಂಚನೆಯ ಮಾಹಿತಿ

Read Next