ಶಿಫಾರಸು ಅರ್ಹತೆ

ಲೈಂಗಿಕ ವಿಷಯ

ಶಿಫಾರಸಿಗೆ ಅರ್ಹವಾಗಿಲ್ಲ

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಲ್ಲಿ ನಿಷೇಧಿಸಲಾಗಿರುವ ಯಾವುದೇ ಲೈಂಗಿಕ ವಿಷಯವನ್ನು Snapchat ನ ಎಲ್ಲೆಡೆಯೂ ನಿಷೇಧಿಸಲಾಗಿದೆ. ಹೆಚ್ಚಿನ ಪ್ರೇಕ್ಷಕರಿಗೆ ಶಿಫಾರಸು ಮಾಡುವುದಕ್ಕಾಗಿ ಅರ್ಹವಾಗಲು ವಿಷಯವು ಈ ಕೆಳಗಿನ ಅಂಶಗಳನ್ನು ಹೊಂದಿರಬಾರದು:

ನಗ್ನತೆ, ಲೈಂಗಿಕ ವರ್ತನೆಗಳು ಮತ್ತು ಲೈಂಗಿಕ ಸೇವೆಗಳು

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಬಳಕೆದಾರರ ಖಾಸಗಿ ಕಥೆಯಲ್ಲಿ ಸೀಮಿತವಾದ ಅಶ್ಲೀಲವಲ್ಲದ ನಗ್ನತೆಯನ್ನು (ಉದಾಹರಣೆಗೆ, ಎದೆಹಾಲುಣಿಸುವಿಕೆ ಅಥವಾ ವೈದ್ಯಕೀಯ ಪ್ರಕ್ರಿಯೆಗಳ ಸಂದರ್ಭದಲ್ಲಿ) ಅನುಮತಿಸುತ್ತವೆ. ಆದರೆ ವಿಷಯ ಮಾರ್ಗಸೂಚಿಗಳು ಛಾಯಾಚಿತ್ರವಲ್ಲದಿದ್ದರೂ ಅಥವಾ ವಾಸ್ತವಿಕವಲ್ಲದಿದ್ದರೂ ಸಹ ಯಾವುದೇ ಸಂದರ್ಭದಲ್ಲಿ ಎಲ್ಲಾ ನಗ್ನತೆಯನ್ನು ನಿಷೇಧಿಸುತ್ತವೆ (ಉದಾಹರಣೆಗೆ, ವರ್ಣಚಿತ್ರಗಳು ಅಥವಾ AI-ರಚಿತ ಚಿತ್ರಗಳು). ಕಮ್ಯುನಿಟಿ ಮಾರ್ಗಸೂಚಿಗಳು ಲೈಂಗಿಕ ಕ್ರಿಯೆಗಳ ಸ್ಪಷ್ಟ ನಿರೂಪಣೆಯನ್ನು ನಿಷೇಧಿಸುತ್ತವೆ; ನಮ್ಮ ವಿಷಯ ಮಾರ್ಗಸೂಚಿಗಳು ತೊಡಗಿಕೊಂಡಿರುವ ಪ್ರತಿಯೊಬ್ಬರೂ ಸಂಪೂರ್ಣವಾಗಿ ಬಟ್ಟೆಯನ್ನು ಧರಿಸಿದ್ದರೂ ಮತ್ತು ಸನ್ನೆಯನ್ನು ಹಾಸ್ಯ ಅಥವಾ ದೃಶ್ಯ ಸಂಕೇತವಾಗಿ ತೋರಿಸಿದ್ದರೂ ಸಹ ಲೈಂಗಿಕ ಕ್ರಿಯೆಯ ಯಾವುದೇ ಚಿತ್ರಣ ಅಥವಾ ಅನುಕರಣೆಯನ್ನು ನಿಷೇಧಿಸುತ್ತವೆ. ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಯಾವುದೇ ರೀತಿಯ ಲೈಂಗಿಕ ಪ್ರಲೋಭನೆಯನ್ನು ನಿಷೇಧಿಸುತ್ತವೆ; ಈ ವಿಷಯ ಮಾರ್ಗಸೂಚಿಗಳು ಹೆಚ್ಚಿನ-ಜಾರಿಯ ಕಡೆಯಲ್ಲಿ ಇರುತ್ತವೆ (ಉದಾಹರಣೆಗೆ, ಲೈಂಗಿಕ ಪ್ರಲೋಭನೆಯು ಉದ್ದೇಶವಾಗಿದೆಯೇ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೂ ಸಹ, ಪ್ರತ್ಯೇಕ ಖಾತೆ, ವೇದಿಕೆ ಅಥವಾ ಸೈಟ್‌ಗೆ Snapchatter ಗಳನ್ನು ನಿರ್ದೇಶಿಸುವ ಮಧ್ಯಮ ಪ್ರಮಾಣದಲ್ಲಿ ಸೂಚ್ಯವಾಗಿರುವ Snap ನ ವರ್ಧನೆಯನ್ನು ನಿರಾಕರಿಸಲಾಗುತ್ತದೆ).

ಲೈಂಗಿಕ ಕಿರುಕುಳ ಮತ್ತು ಸಮ್ಮತಿಯಿಲ್ಲದ ಲೈಂಗಿಕ ಕಡತ

ಇವುಗಳನ್ನು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಲ್ಲಿ ಪ್ಲಾಟ್‌ಫಾರ್ಮ್‌ನಾದ್ಯಂತ ನಿಷೇಧಿಸಲಾಗಿದೆ. ವಿಷಯ ಮಾರ್ಗಸೂಚಿಗಳು ಸಂವೇದನಾಶೀಲವಲ್ಲದ ಅಥವಾ ಸಂಭಾವ್ಯವಾಗಿ ಅವಹೇಳನಕಾರಿ ಲೈಂಗಿಕ ವಿಷಯವನ್ನು ನಿಷೇಧಿಸುತ್ತವೆ, ಉದಾಹರಣೆಗೆ ಲೈಂಗಿಕ ವಸ್ತುನಿಷ್ಟೀಕರಣ ಮತ್ತು ಕುಶಲ ಮಾಧ್ಯಮವು ಯಾರನ್ನಾದರೂ ಅವರ ಸಮ್ಮತಿಯಿಲ್ಲದೆ ಲೈಂಗಿಕಗೊಳಿಸುವುದು (ಉದಾಹರಣೆಗೆ, ಕೆಲವು ಲೈಂಗಿಕತೆಯ ದೇಹದ ಭಾಗಗಳನ್ನು ಉತ್ಪ್ರೇಕ್ಷಿಸಲು ಸೆಲೆಬ್ರಿಟಿಯ ನೋಟವನ್ನು ತಿದ್ದುವುದು). ನಾವು ಯಾರೊಬ್ಬರ ಲಿಂಗ ಅಥವಾ ಲೈಂಗಿಕತೆಯ ಕುರಿತಾದ ಊಹಾಪೋಹಗಳನ್ನು ಸಹ ನಿಷೇಧಿಸುತ್ತೇವೆ (ಉದಾಹರಣೆಗೆ, "___ ಕ್ಲೋಸೆಟ್‌ನಲ್ಲಿದ್ದಾರೆಯೇ?") ಮತ್ತು ಲೈಂಗಿಕ ಅಪರಾಧಗಳು ಅಥವಾ ಲೈಂಗಿಕ ನಿಷೇಧಗಳನ್ನು ಭಯಾನಕ, ಭಾವೋದ್ರೇಕಗೊಳಿಸುವ ರೀತಿಯಲ್ಲಿ ತೋರಿಸುವುದನ್ನು (ಉದಾಹರಣೆಗೆ, "ತಮ್ಮ ವಿದ್ಯಾರ್ಥಿಗಳನ್ನು ಮದುವೆಯಾದ 10 ಶಿಕ್ಷಕರು") ನಿಷೇಧಿಸಿದ್ದೇವೆ.

ಲೈಂಗಿಕವಾಗಿ ಸುಸ್ಪಷ್ಟ ಭಾಷೆ

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು Snapchatter ಗಳು ವಯಸ್ಕ ವಿಷಯಗಳನ್ನು ಖಾಸಗಿಯಾಗಿ ಅಥವಾ ಅವರ ಕಥೆಗಳಲ್ಲಿ ಚರ್ಚಿಸುವುದನ್ನು ತಡೆಯುವುದಿಲ್ಲವಾದರೂ, ಈ ವಿಷಯ ಮಾರ್ಗಸೂಚಿಗಳು ಲೈಂಗಿಕ ಕ್ರಿಯೆಗಳು, ಜನನಾಂಗಗಳು, ಲೈಂಗಿಕ ಆಟಿಕೆಗಳು, ಲೈಂಗಿಕ ಕಾರ್ಯ ಅಥವಾ ನಿಷಿದ್ಧ ಲೈಂಗಿಕತೆಯನ್ನು (ಉದಾಹರಣೆಗೆ, ಹಾದರ ಅಥವಾ ಮೃಗೀಯತೆ) ವಿವರಿಸುವ ಸ್ಪಷ್ಟ ಭಾಷೆಯನ್ನು ನಿಷೇಧಿಸುತ್ತವೆ. ಇದು ಸುಸ್ಪಷ್ಟ ಲೈಂಗಿಕ ಸನ್ನಿವೇಶಗಳಲ್ಲಿ ಇಮೋಜಿಗಳನ್ನು ಒಳಗೊಳ್ಳುತ್ತದೆ. ಇದು ನಿರ್ದಿಷ್ಟ ಲೈಂಗಿಕ ಕ್ರಿಯೆ ಅಥವಾ ದೇಹದ ಭಾಗಗಳನ್ನು ಉಲ್ಲೇಖಿಸಲು ಸೂಚ್ಯವಾಗಿರುವ ಸುಳಿವುಗಳನ್ನೂ ಒಳಗೊಳ್ಳುತ್ತದೆ.

ಸ್ಪಷ್ಟವಾಗಿ ಸೂಚಿಸುವ ಚಿತ್ರಗಳು

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಸುಸ್ಪಷ್ಟವಲ್ಲದ, ಕಳವಳಕಾರಿ ಚಿತ್ರಣಗಳನ್ನು ಹಂಚಿಕೊಳ್ಳದಂತೆ Snapchatter ಗಳನ್ನು ತಡೆಯುವುದಿಲ್ಲವಾದರೂ, ಈ ವಿಷಯ ಮಾರ್ಗಸೂಚಿಗಳು ಕ್ಯಾಮೆರಾ, ಉಡುಪು, ಭಂಗಿ ಅಥವಾ ಇತರ ಸಾಮಗ್ರಿಗಳ ಮೂಲಕ ಲೈಂಗಿಕವಾಗಿ ಪ್ರಚೋದನಕಾರಿಯಾದ ವಿಧಾನದಲ್ಲಿ ಪದೇಪದೆ ಲೈಂಗಿಕಗೊಳಿಸಿದ ದೇಹದ ಭಾಗಗಳನ್ನು (ಉದಾಹರಣೆಗೆ, ಸ್ತನಗಳು, ಪೃಷ್ಠ, ಜನನಾಂಗದ ಭಾಗ) ಎತ್ತಿ ತೋರಿಸುವ ಚಿತ್ರಗಳನ್ನು ನಿಷೇಧಿಸುತ್ತವೆ. ವ್ಯಕ್ತಿಯು ನಗ್ನವಾಗಿರದಿದ್ದರೂ ಅಥವಾ ವ್ಯಕ್ತಿಯು ನೈಜ ವ್ಯಕ್ತಿಯಲ್ಲದಿದ್ದರೂ ಸಹ (ಅನಿಮೇಶನ್‌ಗಳು ಅಥವಾ ರೇಖಾಚಿತ್ರಗಳಂತಹವು) ಇದು ಅನ್ವಯಿಸುತ್ತದೆ. ಲೈಂಗಿಕಗೊಳಿಸಿದ ದೇಹದ ಭಾಗಗಳ ಪ್ರತ್ಯೇಕಿಸಿದ ಭಾಗಗಳ ಕ್ಲೋಸ್‌ಅಪ್‌ಗಳನ್ನು ಇದು ಒಳಗೊಳ್ಳುತ್ತದೆ. ಲೈಂಗಿಕ ರೀತಿಯಲ್ಲಿ ಭಂಗಿ ನೀಡುವುದು, ಲೈಂಗಿಕ ಕ್ರಿಯೆಗಳನ್ನು ಅಣಕು ಮಾಡುವುದು, ಲೈಂಗಿಕ ಆಟಿಕೆಗಳನ್ನು ಪ್ರದರ್ಶಿಸುವುದು ಅಥವಾ ಲೈಂಗಿಕವಾಗಿ ಪ್ರಚೋದನಾತ್ಮಕವಾದ ವಿಧಾನದಲ್ಲಿ ವಸ್ತುಗಳೊಂದಿಗೆ ಸಂವಹನ ಮಾಡುವಂತಹ ಅಣಕದ ಲೈಂಗಿಕ ಚಟುವಟಿಕೆಯನ್ನು ಕೂಡ ಇದು ಒಳಗೊಳ್ಳುತ್ತದೆ.

ಲೈಂಗಿಕ ಸನ್ನಿವೇಶಗಳಲ್ಲಿ ಅಪ್ರಾಪ್ತ ವಯಸ್ಕರು

ಕಮ್ಯುನಿಟಿ ಮಾರ್ಗಸೂಚಿಗಳು ಮಕ್ಕಳ ಲೈಂಗಿಕ ಶೋಷಣೆಯ ಎಲ್ಲ ಸ್ವರೂಪಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತವೆ. ಮುಂದುವರಿದು, ಈ ವಿಷಯ ಮಾರ್ಗಸೂಚಿಗಳು ಮಕ್ಕಳ ಲೈಂಗಿಕ ಶೋಷಣೆ ಅಥವಾ ನಿಂದನೆಯ ಕಡತಗಳು ಕಾನೂನು ವ್ಯಾಖ್ಯಾನಕ್ಕೆ ಸಿಗದಿರಬಹುದಾದ ಸಾಮಾನ್ಯ ವ್ಯಾಪ್ತಿಯಿಂದ ಹೊರಗಿರುವ ವಿಷಯವನ್ನು ನಿಷೇಧಿಸುತ್ತವೆ. ಅಂದರೆ, ನಿರ್ದಿಷ್ಟ ಘಟನೆಯು ಪ್ರಮುಖ ಸಮಸ್ಯೆಗಳು, ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಅದರ ಪ್ರಸ್ತುತತೆಯ ಕಾರಣದಿಂದ ಸುದ್ದಿಯೋಗ್ಯವಾಗಿರುವ ಹೊರತು, ವಯಸ್ಕರು ಮತ್ತು ಅಪ್ರಾಪ್ತ ವಯಸ್ಕರ ನಡುವಿನ ಪ್ರಣಯ ಅಥವಾ ಲೈಂಗಿಕ ಸಂಬಂಧಗಳ ಬಗ್ಗೆ ನೈಜ ಅಥವಾ ಕಾಲ್ಪನಿಕವಾದ ಯಾವುದೇ ವಿಷಯದ ವರ್ಧನೆಯನ್ನು ನಾವು ನಿರಾಕರಿಸುತ್ತೇವೆ. ಸುದ್ದಿಯೋಗ್ಯ ನಿದರ್ಶನಗಳಲ್ಲಿಯೂ ಸಹ, ಲೈಂಗಿಕ ಸನ್ನಿವೇಶಗಳಲ್ಲಿ ಅಪ್ರಾಪ್ತ ವಯಸ್ಕರ ಕವರೇಜ್ ಅನ್ನು ವೈಭವೀಕರಿಸಬಾರದು, ಸೂಚ್ಯವಾಗಿರಬಾರದು ಅಥವಾ ಶೋಷಣೆ ಮಾಡುವಂತಿರಬಾರದು. ಇದು ಅಪ್ರಾಪ್ತ ವಯಸ್ಕರ ನಡುವಿನ ಲೈಂಗಿಕ ಚಟುವಟಿಕೆಯ ನೈಜ ಅಥವಾ ಕಾಲ್ಪನಿಕ ವಿಷಯವನ್ನು ಸಹ ಒಳಗೊಂಡಿದೆ. ನಾವು ಇವುಗಳನ್ನು ಅನುಮತಿಸುತ್ತೇವೆ:

  • ಹದಿಹರೆಯದವರ ಲೈಂಗಿಕ ಅಥವಾ ಲಿಂಗ ಗುರುತುಗಳು ಅಥವಾ ವಯೋ-ಸೂಕ್ತವಾದ ಪ್ರಣಯ ಸಂಬಂಧಗಳು, ವಿಷಯ ಸೂಚ್ಯ ಅಥವಾ ಸುಸ್ಪಷ್ಟವಾಗಿರದ ಪಕ್ಷದಲ್ಲಿ ಮಾತ್ರ.

  • ಕವರೇಜ್ ಸುದ್ದಿಯೋಗ್ಯವಾಗಿರುವವರೆಗೆ, ಲೈಂಗಿಕ ಅಪರಾಧಗಳು ಅಥವಾ ಲೈಂಗಿಕ ಕಿರುಕುಳದ ಕವರೇಜ್- ಅಂದರೆ, ಇದು ಈಗಾಗಲೇ ಪ್ರಮುಖವಾದ ವಿಷಯ, ವ್ಯಕ್ತಿ ಅಥವಾ ಸಂಸ್ಥೆಗೆ ಸಂಬಂದಿಸಿದ್ದಾದರೆ.

ಸೂಕ್ಷ್ಮತೆ:

ಈ ಕೆಳಗಿನವು ಶಿಫಾರಸಿಗಾಗಿ ಅರ್ಹವಾಗಿವೆ, ಆದರೆ Snapchatter ಗಳ ವಯಸ್ಸು, ಸ್ಥಳ, ಆದ್ಯತೆಗಳು ಅಥವಾ ಇತರ ಮಾನದಂಡಗಳನ್ನು ಆಧರಿಸಿ ಅವರಲ್ಲಿ ಕೆಲವರಿಗೆ ಅದರ ಗೋಚರತೆಯನ್ನು ಮಿತಿಗೊಳಿಸಲು ನಾವು ಆಯ್ಕೆ ಮಾಡಬಹುದು.

ದೇಹ ಕಾಣಿಸುವಂತಹ, ನಗ್ನವಲ್ಲದ ದೇಹದ ಚಿತ್ರಣ

ಇದು ಸಾಮಾನ್ಯವಾಗಿ ಲೈಂಗಿಕಗೊಳಿಸಿದ ದೇಹದ ಭಾಗಗಳಿಗೆ ಪ್ರಾಸಂಗಿಕವಾಗಿ ಗಮನ ಸೆಳೆಯುವ ಚಿತ್ರಣವಾಗಿದೆ, ಆದರೆ ಅಲ್ಲಿ ಬಹಿರಂಗವಾದ ಲೈಂಗಿಕ ಸೂಚನೆಯ ಉದ್ದೇಶವಿರುವುದಿಲ್ಲ (ಉದಾಹರಣೆಗೆ, ಈಜುಡುಗೆ, ಫಿಟ್‌ನೆಸ್ ಉಡುಪು, ರೆಡ್ ಕಾರ್ಪೆಟ್ ಈವೆಂಟ್‌ಗಳು, ರನ್‌ವೇ ಫ್ಯಾಷನ್‌ನಂತಹ ಚಟುವಟಿಕೆ-ಸೂಕ್ತವಾಗಿರುವ ಸನ್ನಿವೇಶದಲ್ಲಿ ಕಡಿಮೆ ಅಥವಾ ಬಿಗಿಯಾದ ಬಟ್ಟೆ ಧರಿಸಿರುವುದು).

ಮಧ್ಯಮ ಪ್ರಮಾಣದಲ್ಲಿ ಸೂಚ್ಯವಾಗಿರುವ ಭಾಷೆ

ಇದು ನಿರ್ದಿಷ್ಟ ಲೈಂಗಿಕ ಕ್ರಿಯೆಗಳು ಅಥವಾ ನಿರ್ದಿಷ್ಟ ದೇಹದ ಭಾಗಗಳನ್ನು ಸೂಚಿಸದೆ ಲೈಂಗಿಕ ಆಸಕ್ತಿಯನ್ನು ಸೂಚಿಸುವ ಅಸ್ಪಷ್ಟ ಸುಳಿವುಗಳನ್ನು ಒಳಗೊಳ್ಳುತ್ತದೆ.

ಲೈಂಗಿಕ ಆರೋಗ್ಯದ ವಿಷಯ

ಇದು ಶೈಕ್ಷಣಿಕವಾಗಿದೆ, ಸುರಕ್ಷತೆಯ ಕುರಿತು ಗಮನ ಹರಿಸುತ್ತದೆ, ಅಪಾಯಕಾರಿ ನಡವಳಿಕೆಯನ್ನು ಪ್ರಚಾರ ಮಾಡುವುದಿಲ್ಲ ಮತ್ತು 13 ವರ್ಷದಷ್ಟು ಕಿರಿಯ Snapchatter ಗಳಿಗೂ ಸೂಕ್ತವಾಗಿದೆ.

ಸೂಚ್ಯವಲ್ಲದ ಲೈಂಗಿಕ ವಿಷಯ

ಸುದ್ದಿ, ಸಾರ್ವಜನಿಕ ಹಿತಾಸಕ್ತಿಯ ವ್ಯಾಖ್ಯಾನ ಅಥವಾ ಶಿಕ್ಷಣದ ಸನ್ನಿವೇಶದಲ್ಲಿ (ಉದಾಹರಣೆಗೆ, ಕಲೆಯ ಇತಿಹಾಸ).

ವಯಸ್ಕರ ಮನರಂಜನೆ

ವಯಸ್ಕರ ಮನರಂಜನೆಯಲ್ಲಿ ತಮ್ಮ ಕೆಲಸಕ್ಕಾಗಿ ಮೂಲತಃ ಪ್ರಸಿದ್ಧರಾಗಿರುವ ವ್ಯಕ್ತಿಗಳನ್ನು ಪ್ರದರ್ಶಿಸುವ ವಿಷಯ.

ಮುಂದೆ:

ಕಿರುಕುಳ ಮತ್ತು ಬೆದರಿಸುವಿಕೆ

Read Next