Privacy, Safety, and Policy Hub
ಐರೋಪ್ಯ ಒಕ್ಕೂಟ
1 ಜನವರಿ 2024 – 30 ಜೂನ್ 2024

ಬಿಡುಗಡೆ ಮಾಡಲಾದ ದಿನಾಂಕ:

25 ಅಕ್ಟೋಬರ್ 2024

ನವೀಕರಿಸಲಾದ ದಿನಾಂಕ:

29 ನವೆಂಬರ್ 2024

ನಮ್ಮ ಐರೋಪ್ಯ ಒಕ್ಕೂಟದ (EU) ಪಾರದರ್ಶಕತೆಯ ಪುಟಕ್ಕೆ ಸ್ವಾಗತ, ಇಲ್ಲಿ ನಾವು ಡಿಜಿಟಲ್ ಸೇವೆಗಳ ಕಾಯ್ದೆ (DSA),
ಶ್ರವಣ ದೃಶ್ಯ ಮಾಧ್ಯಮ ಸೇವೆಗಳ ನಿರ್ದೇಶನ (AVMSD), ಡಚ್‌ ಮಾಧ್ಯಮ ಕಾಯ್ದೆ (DMA), ಮತ್ತು ಭಯೋತ್ಪಾದನಾ ವಿಷಯದ ಆನ್‌ಲೈನ್‌ ನಿಯಂತ್ರಣ (TCO) ಗಳಿಂದ ಅಗತ್ಯಪಡಿಸಲಾಗಿರುವ EU ನಿರ್ದಿಷ್ಟವಾದ ಮಾಹಿತಿಯನ್ನು ಪ್ರಕಟಿಸುತ್ತೇವೆ. ಈ ಪಾರದರ್ಶಕತೆ ವರದಿಗಳ ಅತ್ಯಂತ ನವೀಕೃತ ಆವೃತ್ತಿಗಳನ್ನು en-US ಸ್ಥಳೀಯ ಪ್ರತಿಯಲ್ಲಿ ಕಾಣಬಹುದಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.

ಕಾನೂನಾತ್ಮಕ ಪ್ರತಿನಿಧಿ 

Snap Group Limited, DSA ಯ ಉದ್ದೇಶಗಳಿಗಾಗಿ Snap B.V. ಅನ್ನು ತನ್ನ ಕಾನೂನಾತ್ಮಕ ಪ್ರತಿನಿಧಿಯನ್ನಾಗಿ ನೇಮಿಸಿದೆ. DSA ಗಾಗಿ ನೀವು ನಮ್ಮ ಪ್ರತಿನಿಧಿಯನ್ನು dsa-enquiries [at] snapchat.com ನಲ್ಲಿ, AVMSD ಮತ್ತು DMA ಗಾಗಿ vsp-enquiries [at] snapchat.com ನಲ್ಲಿ, TCO ಗಾಗಿ tco-enquiries [at] snapchat.com ನಲ್ಲಿ, ನಮ್ಮ ಬೆಂಬಲ ಜಾಲತಾಣದ ಮೂಲಕ [ಇಲ್ಲಿ] ಅಥವಾ ಇಲ್ಲಿ ಸಂಪರ್ಕಿಸಬಹುದು:

Snap B.V.
Keizersgracht 165, 1016 DP
Amsterdam, The Netherlands

ನೀವೊಂದು ಕಾನೂನು ಜಾರಿ ಸಂಸ್ಥೆ ಆಗಿದ್ದರೆ, ದಯವಿಟ್ಟು ಇಲ್ಲಿ ವಿವರಿಸಲಾಗಿರುವ ಹಂತಗಳನ್ನು ಅನುಸರಿಸಿ.

ನಮ್ಮನ್ನು ಸಂಪರ್ಕಿಸುವಾಗ, ದಯವಿಟ್ಟು ಆಂಗ್ಲ ಅಥವಾ ಡಚ್‌ ಭಾಷೆಗಳಲ್ಲಿ ಸಂವಹನ ಮಾಡಿ.

ನಿಯಂತ್ರಕ ಪ್ರಾಧಿಕಾರಗಳು

DSA ಗಾಗಿ, ನಾವು ಐರೋಪ್ಯ ಆಯೋಗದಿಂದ ಮತ್ತು ನೆದರ್ಲ್ಯಾಂಡ್ಸ್ ಗ್ರಾಹಕರ ಮತ್ತು ಮಾರುಕಟ್ಟೆಗಳ ಪ್ರಾಧಿಕಾರ (ACM) ದಿಂದ ನಿಯಂತ್ರಿಸಲ್ಪಡುತ್ತೇವೆ. AVMSD ಮತ್ತು DMA ಗಾಗಿ, ಡಚ್ ಮಾಧ್ಯಮ ಪ್ರಾಧಿಕಾರವು (CvdM) ನಮ್ಮನ್ನು ನಿಯಂತ್ರಿಸುತ್ತದೆ. TCO ಗಾಗಿ, ನಾವು ಆನ್‌ಲೈನ್ ಭಯೋತ್ಪಾದನಾ ವಿಷಯ ಮತ್ತು ಮಕ್ಕಳ ಲೈಂಗಿಕ ಶೋಷಣೆಯ ಸಾಮಗ್ರಿಯ ತಡೆಗಾಗಿ ನೆದರ್‌ಲ್ಯಾಂಡ್ಸ್ ಪ್ರಾಧಿಕಾರ (ATKM) ದಿಂದ ನಿಯಂತ್ರಿಸಲ್ಪಡುತ್ತೇವೆ.

DSA ಪಾರದರ್ಶಕತೆಯ ವರದಿ

ಕೊನೆಯ ಬಾರಿ ನವೀಕರಿಸಲಾದ ದಿನಾಂಕ: 25 ಅಕ್ಟೋಬರ್ 2024

Snapchat ನಲ್ಲಿ ನಮ್ಮ ವಿಷಯ ಮಾಡರೇಶನ್ ಪ್ರಯತ್ನಗಳ ಕುರಿತು ಈ ವರದಿಯನ್ನು ನಾವು ಐರೋಪ್ಯ ಒಕ್ಕೂಟದ (EU) ಡಿಜಿಟಲ್ ಸೇವೆಗಳ ಕಾಯ್ದೆ (EU ) 2022/2065) (“DSA”) ಯ ಅನುಚ್ಛೇದ 15, 24 ಮತ್ತು 42 ಗಳಲ್ಲಿ ಒದಗಿಸಲಾಗಿರುವ ಪಾರದರ್ಶಕತೆ ವರದಿ ಸಲ್ಲಿಕಾ ಅಗತ್ಯತೆಗಳಿಗೆ ಅನುಸಾರವಾಗಿ ಪ್ರಕಟಿಸುತ್ತೇವೆ. ಇತರ ರೀತಿಯಲ್ಲಿ ಸೂಚಿಸಲಾದ ಸಂದರ್ಭಗಳನ್ನು ಹೊರತುಪಡಿಸಿ, ಈ ವರದಿಯಲ್ಲಿನ ಮಾಹಿತಿಯು 1 ಜನವರಿ 2024 ರಿಂದ 30 ಜೂನ್ 2024 (H1 2024 ) ರವರೆಗಿನ (H1 2024 ) ವರದಿಯ ಅವಧಿಗಾಗಿ ಇರುವುದು, ಹಾಗೂ DSA ಇಂದ ನಿಯಂತ್ರಿಸಲ್ಪಡುವ Snapchat ನ ವೈಶಿಷ್ಟ್ಯಗಳ ಕುರಿತ ವಿಷಯ ಮಾಡರೇಶನ್ ಅನ್ನು ಒಳಗೊಂಡಿದೆ.

ನಾವು ನಮ್ಮ ವರದಿಯ ಗುಣಮಟ್ಟವನ್ನು ಸುಧಾರಿಸಲು ನಿರಂತರವಾಗಿ ಶ್ರಮಿಸುತ್ತೇವೆ. ಈ ವರದಿ ಮಾಡುವ ಅವಧಿಗಾಗಿ (H1 2024 ), ನಾವು ನಮ್ಮ ವಿಷಯ ಮಾಡರೇಶನ್ ಪ್ರಯತ್ನಗಳಲ್ಲಿ ಸುಧಾರಿತ ಒಳನೋಟಗಳನ್ನು ಒದಗಿಸುವುದಕ್ಕಾಗಿ ಹೊಸದಾದ ಮತ್ತು ಹೆಚ್ಚು ವಿಭಿನ್ನವಾದ ಕೋಷ್ಟಕಗಳೊಂದಿಗೆ ನಮ್ಮ ವರದಿಯ ರಚನೆಯಲ್ಲಿ ಬದಲಾವಣೆಗಳನ್ನು ಮಾಡಿದ್ದೇವೆ. 

1. ಸರಾಸರಿ ಮಾಸಿಕ ಸಕ್ರಿಯ ಸ್ವೀಕೃತದಾರರು 
(DSA ಅನುಚ್ಛೇದಗಳು 24.2 ಮತ್ತು 42.3)


1 ಅಕ್ಟೋಬರ್‌ 2024 ರಂತೆ, ನಾವು EU ನಲ್ಲಿ ನಮ್ಮ Snapchat ಆ್ಯಪ್‌ನ 9.29 ಕೋಟಿ ಸರಾಸರಿ ಮಾಸಿಕ ಸಕ್ರಿಯ ಸ್ವೀಕೃತದಾರರನ್ನು (“AMAR”) ಹೊಂದಿದ್ದೇವೆ. ಇದರ ಅರ್ಥ, 30 ಸೆಪ್ಟೆಂಬರ್‌ 2024 ರಂದು ಕೊನೆಗೊಳ್ಳುವ 6-ತಿಂಗಳುಗಳ ಅವಧಿಯಲ್ಲಿ, EU ನಲ್ಲಿ ಸರಾಸರಿ 9.29 ಕೋಟಿ ನೋಂದಾಯಿತ ಬಳಕೆದಾರರು ಯಾವುದೇ ನಿರ್ದಿಷ್ಟ ತಿಂಗಳಿನಲ್ಲಿ Snapchat ಆ್ಯಪ್‌ ಅನ್ನು ಕನಿಷ್ಠ ಒಂದು ಬಾರಿಯಾದರೂ ತೆರೆದಿದ್ದಾರೆ.

ಈ ಅನುಪಾತವು ಈ ಕೆಳಗಿನಂತೆ ಸದಸ್ಯ ರಾಷ್ಟ್ರವಾರು ವಿಂಗಡಣೆಯನ್ನು ಒದಗಿಸುತ್ತದೆ:

ಈ ಅಂಕಿಅಂಶಗಳನ್ನು ಪ್ರಸಕ್ತ DSA ‌ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಲೆಕ್ಕಾಚಾರ ಮಾಡಲಾಗಿತ್ತು ಹಾಗೂ DSA ಉದ್ದೇಶಗಳಿಗಾಗಿ ಮಾತ್ರ ಅವುಗಳನ್ನು ಅವಲಂಬಿಸಬೇಕು. ಕಾಲ ಕಳೆದಂತೆ, ನಾವು ಬದಲಾಗುವ ಆಂತರಿಕ ನೀತಿ, ನಿಯಂತ್ರಕರ ಮಾರ್ಗದರ್ಶನ ಮತ್ತು ತಂತ್ರಜ್ಞಾನಗಳ ಫಲವಾಗಿ, ಈ ಅನುಪಾತದ ಲೆಕ್ಕಾಚಾರ ಮಾಡುವ ವಿಧಾನವನ್ನು ಬದಲಾಯಿಸಿದ್ದೇವೆ, ಹಾಗೂ ಈ ಅಂಕಿಅಂಶಗಳನ್ನು ಸಮಯಾವಧಿಗಳ ನಡುವೆ ತುಲನೆ ಮಾಡಲೆಂದು ಉದ್ದೇಶಿಸಲಾಗಿಲ್ಲ. ಇದು ನಾವು ಇತರ ಉದ್ದೇಶಗಳಿಗಾಗಿ ಪ್ರಕಟಿಸುವ ಇತರ ಸಕ್ರಿಯ ಬಳಕೆದಾರರ ಅಂಕಿಅಂಶಗಳಿಗಾಗಿ ಬಳಸುವ ಲೆಕ್ಕಾಚಾರಗಳಿಗಿಂತ ಕೂಡ ಭಿನ್ನವಾಗಿರಬಹುದು.

2. ಸದಸ್ಯ ರಾಷ್ಟ್ರಗಳ ಪ್ರಾಧಿಕಾರಗಳ ವಿನಂತಿಗಳು
(DSA ಅನುಚ್ಛೇದ 15.1(a))
a) ಅಕ್ರಮ ವಿಷಯಗಳ ವಿರುದ್ಧ ಕಾರ್ಯನಿರ್ವಹಿಸಲು ಆದೇಶಗಳು


ಈ ವರದಿ ಮಾಡುವ ಅವಧಿಯಲ್ಲಿ (H1 2024), ನಾವು DSA ಅನುಚ್ಛೇದ 9 ರ ಅನ್ವಯ ನೀಡಲಾಗಿರುವಂತಹ ಆದೇಶಗಳೂ ಸೇರಿದಂತೆ, EU ಸದಸ್ಯ ರಾಷ್ಟ್ರಗಳ ಪ್ರಾಧಿಕಾರಗಳಿಂದ ನಿರ್ದಿಷ್ಟವಾಗಿ ಗುರುತಿಸಲಾದ ಅಕ್ರಮ ವಿಷಯಗಳ ತುಣುಕುಗಳ ವಿರುದ್ಧ ಕಾರ್ಯನಿರ್ವಹಿಸಲು ಶೂನ್ಯ (0) ಆದೇಶಗಳನ್ನು ಪಡೆದೆವು.

ಈ ಸಂಖ್ಯೆಯು ಶೂನ್ಯ (0) ಆಗಿರುವ ಕಾರಣದಿಂದ, ನಮಗೆ ಸಂಬಂಧಿತ ಅಕ್ರಮ ವಿಷಯಗಳ ವಿಧದ ಅಥವಾ ಆದೇಶ ಜಾರಿಗೊಳಿಸುವ ಸದಸ್ಯ ರಾಷ್ಟ್ರದ ಪ್ರಕಾರ, ಅಥವಾ ಆದೇಶಗಳನ್ನು ಪಡೆದಿರುವುದರ ಕುರಿತು ಅಂಗೀಕಾರ ಒದಗಿಸಲು ಅಥವಾ ಆ ಆದೇಶಗಳನ್ನು ಕಾರ್ಯರೂಪಕ್ಕೆ ತರಲು ತೆಗೆದುಕೊಳ್ಳಲಾದ ಸಮಯಗಳ ಮಧ್ಯಮ ಸಮಯದ ಕುರಿತು ವಿಂಗಡಣೆಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ.

b) ಮಾಹಿತಿಯನ್ನು ಒದಗಿಸಲು ಆದೇಶಗಳು 


ಈ ವರದಿ ಮಾಡುವ ಅವಧಿಯಲ್ಲಿ (H1 2024), ನಾವು DSA ಅನುಚ್ಛೇದ 10 ರ ಪ್ರಕಾರ ನೀಡಲಾದಂತಹ ಆದೇಶಗಳನ್ನು ಒಳಗೊಂಡಂತೆ, EU ರಾಷ್ಟ್ರಗಳ ಪ್ರಾಧಿಕಾರಗಳಿಂದ ಬಳಕೆದಾರರ ದತ್ತಾಂಶವನ್ನು ಬಹಿರಂಗಪಡಿಸಲು ಈ ಕೆಳಗಿನ ಆದೇಶಗಳನ್ನು ಪಡೆದೆವು:


ಮಾಹಿತಿಯನ್ನು ಒದಗಿಸಲು ಈ ಆದೇಶಗಳ ಸ್ವೀಕೃತಿಯ ಬಗ್ಗೆ ಸಂಬಂಧಿತ ಪ್ರಾಧಿಕಾರಗಳಿಗೆ ತಿಳಿಸಲು ಮಧ್ಯಸ್ಥ ಸಮಯವು 0 ನಿಮಿಷಗಳಾಗಿತ್ತು — ನಾವು ಸ್ವೀಕೃತಿಯನ್ನು ದೃಢೀಕರಿಸುವ ಸ್ವಯಂಚಾಲಿತ ಪ್ರತಿಕ್ರಿಯೆಯನ್ನು ಒದಗಿಸುತ್ತೇವೆ. 

ಮಾಹಿತಿಯನ್ನು ಒದಗಿಸುವುದಕ್ಕಾಗಿ ಈ ಆದೇಶಗಳನ್ನು ಜಾರಿಗೆ ತರಲು ಮಧ್ಯಸ್ಥ ಸಮಯವು ~7 ದಿನಗಳಾಗಿತ್ತು. ಈ ಮಾಪನಾಂಕವು ಯಾವುದೇ ಆದೇಶವನ್ನು ಪಡೆದಾಗಿನಿಂದ ಹಿಡಿದು ಆ ವಿಷಯವನ್ನು ಸಂಪೂರ್ಣವಾಗಿ ಪರಿಹರಿಸಲಾಗಿದೆಯೆಂದು Snap ನಿಂದ ಪರಿಗಣಿಸಲಾಗುವ ಸಮಯದವರೆಗಿನ ಅವಧಿಯನ್ನು ಪ್ರತಿನಿಧಿಸುತ್ತದೆ, ಹಾಗೂ ಇಂತಹ ಅವಧಿಯು ಪ್ರತ್ಯೇಕ ಸಂದರ್ಭಗಳಲ್ಲಿ ಅಂತಹ ಆದೇಶವನ್ನು ಪ್ರಕ್ರಿಯೆಗೊಳಿಸಲು ಅಗತ್ಯವಿರುವಂತಹ ಸ್ಪಷ್ಟೀಕರಣಕ್ಕಾಗಿ Snap ನಿಂದ ಪಡೆಯುವ ವಿನಂತಿಗಳಿಗೆ ಸಂಬಂಧಿತ ಸದಸ್ಯ ರಾಷ್ಟ್ರದ ಪ್ರಾಧಿಕಾರವು ಪ್ರತಿಕ್ರಿಯಿಸುವ ವೇಗವನ್ನು ಭಾಗಶಃ ಆಧರಿಸಬಹುದು.

ಗಮನಿಸಿ, ನಾವು ಮೇಲಿನ ಆದೇಶಗಳಿಗೆ ಸಂಬಂಧಿತ ಅಕ್ರಮ ವಿಷಯದ ವಿಧಗಳ ಆಧಾರದಲ್ಲಿ ವರ್ಗೀಕರಿಸಲ್ಪಟ್ಟ ಮಾಹಿತಿಯ ವಿಂಗಡಣೆಯನ್ನು ಒದಗಿಸುವುದಿಲ್ಲ, ಏಕೆಂದರೆ ಅಂತಹ ಮಾಹಿತಿಯು ನಮಗೆ ಸಾಮಾನ್ಯವಾಗಿ ಲಭ್ಯವಿರುವುದಿಲ್ಲ.

3. ವಿಷಯ ಮಾಡರೇಷನ್


Snapchat ನಲ್ಲಿನ ಎಲ್ಲ ವಿಷಯವೂ ನಮ್ಮ ಸಮುದಾಯದ ಮಾರ್ಗಸೂಚಿಗಳು ಮತ್ತು ಸೇವಾ ನಿಯಮಗಳನ್ನು ಪಾಲಿಸಬೇಕು. ಕೆಲವು ವಿಷಯಗಳು ಹೆಚ್ಚುವರಿ ಮಾರ್ಗಸೂಚಿಗಳು ಮತ್ತು ನೀತಿಗಳನ್ನೂ ಸಹ ಪಾಲಿಸಬೇಕು. ಉದಾಹರಣೆಗಾಗಿ, ನಮ್ಮ ಸಾರ್ವಜನಿಕ ಪ್ರಸಾರದ ಸಾಧನಗಳಲ್ಲಿ ಹೆಚ್ಚು ವ್ಯಾಪಕ ಪ್ರೇಕ್ಷಕ ಸಮೂಹಕ್ಕೆ ಕ್ರಮಾವಳಿಯಾಧಾರಿತ ಶಿಫಾರಸಿಗಾಗಿ ಸಲ್ಲಿಸಲ್ಪಡುವ ವಿಷಯವು ನಮ್ಮ ಶಿಫಾರಸಿಗಾಗಿ ಅರ್ಹತೆ ಪಡೆಯಲು ಅನುಸರಿಸಬೇಕಾದ ವಿಷಯದ ಮಾರ್ಗಸೂಚಿಗಳಲ್ಲಿ ಒದಗಿಸಲಾಗಿರುವ ಹೆಚ್ಚುವರಿ, ಉನ್ನತ ಮಾನದಂಡಗಳನ್ನು ಪೂರೈಸಬೇಕು, ಹಾಗೂ ಜಾಹೀರಾತುಗಳು ನಮ್ಮ ಜಾಹೀರಾತು ನೀತಿಗಳನ್ನು ಅನುಸರಿಸಬೇಕು.

ನಾವು ಈ ನೀತಿಗಳನ್ನು ತಂತ್ರಜ್ಞಾನ ಮತ್ತು ಮಾನವ ವಿಮರ್ಶೆಯನ್ನು ಬಳಸಿಕೊಂಡು ಜಾರಿಗೊಳಿಸುತ್ತೇವೆ. ನಾವು Snapchatter ಗಳಿಗೆ ನೇರವಾಗಿ ಆ್ಯಪ್‌ನ ಒಳಗೆಯೇ ಅಥವಾ ನಮ್ಮ ಅಂತರ್ಜಾಲ ತಾಣದ ಮೂಲಕ ಅಕ್ರಮ ವಿಷಯ ಮತ್ತು ಚಟುವಟಿಕೆಗಳೂ ಸೇರಿದಂತೆ ಯಾವುದೇ ಉಲ್ಲಂಘನೆಗಳ ಕುರಿತು ವರದಿ ಮಾಡುವುದಕ್ಕಾಗಿ ವ್ಯವಸ್ಥೆಗಳನ್ನು ಸಹ ಒದಗಿಸುತ್ತೇವೆ. ಸಕ್ರಿಯಾತ್ಮಕ ಪತ್ತೆಹಚ್ಚುವಿಕೆ ವ್ಯವಸ್ಥೆಗಳು ಮತ್ತು ವರದಿಗಳು ವಿಮರ್ಶೆಯನ್ನು ಪ್ರೇರೇಪಿಸುತ್ತವೆ, ಹಾಗೂ ಅದರ ಫಲವಾಗಿ ಅವುಗಳು ನಮ್ಮ ನೀತಿಗಳ ಪ್ರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಸ್ವಯಂಚಾಲಿತ ಸಾಧನಗಳು ಮತ್ತು ಮಾನವ ನಿಯಂತ್ರಕರ ಮಿಶ್ರಣವನ್ನು ಬಳಸಿಕೊಳ್ಳುತ್ತವೆ. 

ನಾವು H1 2024 ರಲ್ಲಿ ನಮ್ಮ ಕಂಟೆಂಟ್ ಮಾಡರೇಷನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ಒದಗಿಸುತ್ತೇವೆ.

a) DSA ಅನುಚ್ಛೇದ 16 ರ ಪ್ರಕಾರ ಸಲ್ಲಿಸಲ್ಪಟ್ಟ ಸೂಚನೆಗಳು
(DSA ಅನುಚ್ಛೇದ 15.1 (b))

DSA ಆರ್ಟಿಕಲ್ 16 ಗೆ ಅನುಗುಣವಾಗಿ, ಬಳಕೆದಾರರು ಮತ್ತು ಬಳಕೆದಾರರಲ್ಲದವರು ಕಾನೂನುಬಾಹಿರ ವಿಷಯವೆಂದು ಪರಿಗಣಿಸುವ ಮಾಹಿತಿಯ ನಿರ್ದಿಷ್ಟ ವಿಷಯಗಳು Snapchat ನಲ್ಲಿ ಇರುವುದರ ಕುರಿತಾಗಿ Snap ಗೆ ತಿಳಿಸಲು ಅನುವು ಮಾಡಿಕೊಡುವ ಕಾರ್ಯವಿಧಾನಗಳನ್ನು Snap ಜಾರಿಗೆ ತಂದಿದೆ. ಅವರು Snapchat ಆ್ಯಪ್‌ನ ಮೂಲಕ ನೇರವಾಗಿ ಅಥವಾ ನಮ್ಮ ಅಂತರ್ಜಾಲ ತಾಣದ ಮೂಲಕ ಅಂತಹ ನಿರ್ದಿಷ್ಟ ವಿಷಯಗಳ ತುಣುಕುಗಳು ಅಥವಾ ಖಾತೆಗಳ ಬಗ್ಗೆ ವರದಿ ಮಾಡಬಹುದು. 

ವರದಿ ಮಾಡುವ ಅವಧಿಯಲ್ಲಿ (H1 2024 ), ನಾವು EU ನಲ್ಲಿನ DSA ಅನುಚ್ಛೇದ 16 ರ ಪ್ರಕಾರ ಸಲ್ಲಿಸಲಾದ ಈ ಕೆಳಗಿನ ನೋಟೀಸ್‌ಗಳನ್ನು ಪಡೆದಿದ್ದೇವೆ:


ಈ ಕೆಳಗೆ, ನಾವು ಈ ಸೂಚನೆಗಳನ್ನು ಪ್ರಕ್ರಿಯೆಗೊಳಿಸಿದ ವಿಧಾನವನ್ನು ಪ್ರತಿಬಿಂಬಿಸುವ ವಿಂಗಡಣೆಯನ್ನು ಒದಗಿಸಿದ್ದೇವೆ – ಮಾನವ ಪರಿಶೀಲನೆಯನ್ನು ಒಳಗೊಂಡಂತಹ ಪ್ರಕ್ರಿಯೆಯ ಮೂಲಕ ಅಥವಾ ಕೇವಲ ಯಾಂತ್ರೀಕೃತ ವಿಧಾನದ ಮೂಲಕ :

ಆ್ಯಪ್‌ನಲ್ಲಿ ಅಥವಾ ನಮ್ಮ ಅಂತರ್ಜಾಲ ತಾಣದ ಮೂಲಕ ಸೂಚನೆಗಳನ್ನು ಸಲ್ಲಿಸುವಾಗ, ವರದಿಗಾರರು ನಮ್ಮ ಸಮುದಾಯದ ಮಾರ್ಗಸೂಚಿಗಳಲ್ಲಿ ಪಟ್ಟಿ ಮಾಡಲಾಗಿರುವ ಉಲ್ಲಂಘನೆಗಳ ವರ್ಗಗಳನ್ನು (ಉದಾ., ದ್ವೇಷಪೂರಿತ ಭಾಷಣ, ಮಾದಕ ದ್ರವ್ಯಗಳ ಬಳಕೆ ಅಥವಾ ಮಾರಾಟ) ಬಿಂಬಿಸುವ ಆಯ್ಕೆಗಳ ಪರಿವಿಡಿಯಿಂದ ನಿರ್ದಿಷ್ಟವಾದ ಒಂದು ವರದಿ ನೀಡುವ ಕಾರಣವನ್ನು ಆಯ್ಕೆ ಮಾಡಬಹುದು. ನಮ್ಮ ಸಮುದಾಯದ ಮಾರ್ಗಸೂಚಿಗಳು EU ನಲ್ಲಿ ಅಕ್ರಮವೆಂದು ಗುರುತಿಸಲಾಗಿರುವ ವಿಷಯ ಮತ್ತು ಚಟುವಟಿಕೆಗಳನ್ನು ನಿಷೇಧಿಸುತ್ತವೆ, ಹಾಗಾಗಿ ವರದಿ ಮಾಡುವ ಕಾರಣಗಳು ಬಹುತೇಕ EU ನಲ್ಲಿ ಅಕ್ರಮ ವಿಷಯಗಳ ನಿರ್ದಿಷ್ಟ ವರ್ಗಗಳನ್ನು ಪ್ರತಿಬಿಂಬಿಸುತ್ತವೆ. ಆದರೆ, EU ನಲ್ಲಿನ ಯಾವುದೇ ವರದಿಗಾರರು ತಾವು ವರದಿ ಮಾಡುವ ವಿಷಯವು ಅಥವಾ ಖಾತೆಯು ನಮ್ಮ ವರದಿ ಮಾಡುವ ಪರಿವಿಡಿಗಳಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿಲ್ಲದಿರುವ ಯಾವುದೇ ಇತರ ಕಾರಣಗಳಿಂದಾಗಿ ಅಕ್ರಮವೆಂದು ಅಭಿಪ್ರಾಯಪಟ್ಟರೆ, ಅವರು ಆ ವಿಷಯವನ್ನು ಅಥವಾ ಖಾತೆಯನ್ನು "ಇತರ ಅಕ್ರಮ ವಿಷಯ" ಎಂದು ವರದಿ ಮಾಡಬಹುದಾಗಿದೆ, ಹಾಗೂ ಅವರು ಅದು ಅಕ್ರಮ ಎಂದು ಅಭಿಪ್ರಾಯಪಡುವುದಕ್ಕಾಗಿ ಕಾರಣವನ್ನು ವಿವರಿಸಲು ಅವಕಾಶ ನೀಡಲಾಗುತ್ತದೆ.

ವಿಮರ್ಶೆಯ ನಂತರ, ವರದಿ ಮಾಡಲಾದ ವಿಷಯ ಅಥವಾ ಖಾತೆಯು ನಮ್ಮ ಸಮುದಾಯದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ ಎಂದು ನಾವು ನಿರ್ಧರಿಸಿದರೆ (ಕಾನೂನುಬಾಹಿರ ಕಾರಣಗಳೂ ಸೇರಿದಂತೆ), ನಾವು (i) ಆ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಬಹುದು, (ii) ಸಂಬಂಧಿತ ಖಾತೆದಾರರಿಗೆ ಎಚ್ಚರಿಕೆ ನೀಡಬಹುದು ಹಾಗೂ ಆ ಖಾತೆಯ ವಿರುದ್ಧ ಸ್ಟ್ರೈಕ್ ಅನ್ನು ಅನ್ವಯಿಸಬಹುದು, ಹಾಗೂ / ಅಥವಾ (iii) ಆ ಸಂಬಂಧಿತ ಖಾತೆಯನ್ನು ಮುಂದೆ ಒದಗಿಸಲಾಗಿರುವ ನಮ್ಮ Snapchat ನ ಮಧ್ಯಸ್ಥಿಕೆ, ಜಾರಿಗೊಳಿಸುವಿಕೆ ಮತ್ತು ಮೇಲ್ಮನವಿಗಳ ವಿವರಣೆಯಲ್ಲಿ ವಿವರಿಸಲಾಗಿರುವ ರೀತಿಯಲ್ಲಿ ನಿರ್ಬಂಧಿಸಬಹುದು.

2024 ರ H1 ನಲ್ಲಿ, ನಾವು EU ನಲ್ಲಿನ DSA ಅನುಚ್ಛೇದ 16 ರ ಪ್ರಕಾರ ಸಲ್ಲಿಸಲಾದ ನೋಟಿಸ್‌ಗಳನ್ನು ಸ್ವೀಕರಿಸಿದ ನಂತರ ನಾವು ಈ ಕೆಳಗಿನ ಜಾರಿ ಕ್ರಮಗಳನ್ನು ತೆಗೆದುಕೊಂಡೆವು:

H1 2024 ರಲ್ಲಿ, "ಇತರ ಅಕ್ರಮ ವಿಷಯ" ಗಳೆಂದು ಗುರುತಿಸಲಾದ ಎಲ್ಲಾ ವರದಿಗಳನ್ನೂ ಅಂತಿಮವಾಗಿ ನಮ್ಮ ಸಮುದಾಯದ ಮಾರ್ಗಸೂಚಿಗಳ ಅಡಿಯಲ್ಲಿ ಜಾರಿಗೊಳಿಸಲಾಗಿತ್ತು, ಏಕೆಂದರೆ ನಮ್ಮ ಸಮುದಾಯದ ಮಾರ್ಗಸೂಚಿಗಳು ಆಯಾ ವಿಷಯವನ್ನು ಅಥವಾ ಚಟುವಟಿಕೆಯನ್ನು ನಿರ್ಬಂಧಿಸಿದ್ದವು. ಆದ್ದರಿಂದ,ನಾವು ಈ ಜಾರಿಗಳನ್ನು ಮೇಲಿನ ಕೋಷ್ಟಕದಲ್ಲಿ ಸಮುದಾಯ ಮಾರ್ಗಸೂಚಿ ಉಲ್ಲಂಘನೆಯ ಸಂಬಂಧಿತ ವರ್ಗದ ಅಡಿಯಲ್ಲಿ ವರ್ಗೀಕರಿಸಿದ್ದೇವೆ.

ಮೇಲಿನ ಜಾರಿಗೊಳಿಸುವಿಕೆಗಳ ಜೊತೆಗೆ, ನಾವು ಅನ್ವಯವಾಗುವ Snap ನ ಇತರ ನೀತಿಗಳು ಮತ್ತು ಮಾರ್ಗಸೂಚಿಗಳ ಅನುಸಾರವಾಗಿ ನಮಗೆ ಸೂಚಿಲಾಗುವ ವಿಷಯದ ಮೇಲೆ ಕ್ರಮಗಳನ್ನು ಕೈಗೊಳ್ಳಬಹುದು: 

  • ನಮ್ಮ ಸಾರ್ವಜನಿಕ ಪ್ರಸಾರದ ಮೇಲ್ಮೈಗಳಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ, ವರದಿ ಮಾಡಲಾದ ವಿಷಯವು ಶಿಫಾರಸಿಗೆ ಅರ್ಹತೆ ಪಡೆಯಲು ಅನುಸರಿಸಬೇಕಾದ ವಿಷಯದ ಮಾರ್ಗಸೂಚಿಗಳ ಉನ್ನತ ಮಾನದಂಡಗಳನ್ನು ಪೂರೈಸುವುದಿಲ್ಲ ಎಂದು ನಾವು ನಿರ್ಧರಿಸಿದರೆ, ನಾವು ಅಲ್ಗಾರಿದಮಿಕ್ ಶಿಫಾರಸಿಗಾಗಿ ಆ ವಿಷಯವನ್ನು ತಿರಸ್ಕರಿಸಬಹುದು (ಆ ವಿಷಯವು ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸದೇ ಇದ್ದಲ್ಲಿ), ಅಥವಾ ನಾವು ಆ ವಿಷಯದ ವಿತರಣೆಯನ್ನು ಸಂವೇದನಾಶೀಲ ಪ್ರೇಕ್ಷಕರನ್ನು ಹೊರತುಪಡಿಸುವಂತೆ ಸೀಮಿತಗೊಳಿಸಬಹುದು (ಆ ವಿಷಯವು ಶಿಫಾರಸಿಗಾಗಿ ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸುವುದಾದರೂ ಅದು ಸಂವೇದನಾತ್ಮಕ ಅಥವಾ ಸೂಚಕವಾಗಿದ್ದಲ್ಲಿ).

H1 2024 ರಲ್ಲಿ, ನಮಗೆ EU ನಲ್ಲಿ ವರದಿ ಮಾಡಲಾದ Snapchat ನ ಸಾರ್ವಜನಿಕ ಪ್ರಸಾರ ಮೇಲ್ಮೈಗಳಲ್ಲಿನ ವಿಷಯದ ಕುರಿತು ನಾವು ಶಿಫಾರಸಿಗೆ ಅರ್ಹತೆ ಪಡೆಯಲು ಅನುಸರಿಸಬೇಕಾದ ವಿಷಯದ ಮಾರ್ಗಸೂಚಿಗಳಿಗೆ ಅನುಸಾರವಾಗಿ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡೆವು:

  • ಯಾವುದೇ ವರದಿಯಾದ ಜಾಹೀರಾತು ನಮ್ಮ ಜಾಹೀರಾತು ನೀತಿಗಳನ್ನು ಉಲ್ಲಂಘಿಸುತ್ತದೆ ಎಂದು ನಾವು ನಿರ್ಧರಿಸಿದರೆ, ನಾವು ಅದನ್ನು ವಿಮರ್ಶೆಯ ನಂತರ ತೆಗೆದುಹಾಕಬಹುದು. 


H1 2024 ರಲ್ಲಿ, ನಾವು EU ನಲ್ಲಿ ನಮಗೆ ವರದಿ ಮಾಡಲಾದ ಜಾಹೀರಾತುಗಳ ಬಗ್ಗೆ ಈ ಕೆಳಗಿನ ಕ್ರಮಗಳನ್ನು ಕೈಗೊಂಡೆವು:


b) Snap ನ ಸ್ವಂತ ಉಪಕ್ರಮದಿಂದ ತೊಡಗಿಸಲಾಗುವ ವಿಷಯ ಮಾಡರೇಶನ್
(ಅನುಚ್ಛೇದ 15.1 (c))


DSA ಅನುಚ್ಛೇದ 16 ರ ಅನುಸಾರವಾಗಿ ಸಲ್ಲಿಸಲಾಗುವ ನೋಟೀಸ್‌ಗಳನ್ನು ಪರಾಮರ್ಶಿಸುವುದರ ಜೊತೆಗೆ, Snap ತನ್ನ ಸ್ವಂತ ಉಪಕ್ರಮದಲ್ಲಿ ವಿಷಯದ ಮಾಡರೇಶನ್‌
ಕಾರ್ಯದಲ್ಲಿಯೂ ಸಹ ತೊಡಗಿಸಿಕೊಳ್ಳುತ್ತದೆ. ಸ್ವಯಂಚಾಲಿತ ಸಾಧನಗಳ ಬಳಕೆ, ವಿಷಯ ಮಾಡರೇಶನ್‌ ಉಸ್ತುವಾರಿ ಹೊತ್ತಿರುವ ವ್ಯಕ್ತಿಗಳಿಗೆ ತರಬೇತಿ ಮತ್ತು ಸಹಾಯವನ್ನು ಒದಗಿಸಲು ತೆಗೆದುಕೊಂಡ ಕ್ರಮಗಳು ಮತ್ತು ಅಂತಹ ಸಕ್ರಿಯಾತ್ಮಕ ವಿಷಯ ಮಾಡರೇಶನ್‌ ಪ್ರಯತ್ನಗಳ ಪರಿಣಾಮವಾಗಿ ವಿಧಿಸಲಾದ ನಿರ್ಬಂಧಗಳ ಸಂಖ್ಯೆ ಮತ್ತು ಪ್ರಕಾರಗಳು ಸೇರಿದಂತೆ Snap ನ ಸ್ವಂತ ಉಪಕ್ರಮದಲ್ಲಿ ತೊಡಗಿರುವ ವಿಷಯ ಮಾಡರೇಶನ್‌ ಬಗ್ಗೆ ನಾವು ಕೆಳಗೆ ಮಾಹಿತಿಯನ್ನು ಒದಗಿಸುತ್ತೇವೆ.


  • Snap ನ ಸ್ವಂತ-ಉಪಕ್ರಮದ ಮಾಡರೇಶನ್‌ನಲ್ಲಿ ಸ್ವಯಂಚಾಲಿತ ಸಾಧನಗಳ ಬಳಕೆ


ನಾವು ನಮ್ಮ ನಿಯಮಗಳು ಮತ್ತು ನೀತಿಗಳ ಉಲ್ಲಂಘನೆಗಳನ್ನು ಸಕ್ರಿಯಾತ್ಮಕತೆಯೊಂದಿಗೆ ಪತ್ತೆಹಚ್ಚಲು ಸ್ವಯಂಚಾಲಿತ ಸಾಧನಗಳನ್ನು ನಿಯೋಜಿಸುತ್ತೇವೆ, ಹಾಗೂ ಕೆಲವು ಸಂದರ್ಭಗಳಲ್ಲಿ ನಮ್ಮ ನಿಯಮಗಳು ಮತ್ತು ನೀತಿಗಳ ಉಲ್ಲಂಘನೆಗಳಿಗಾಗಿ ದಂಡನಾಕ್ರಮಗಳನ್ನು ಜಾರಿಗೊಳಿಸುತ್ತೇವೆ. ಇವುಗಳು ಹ್ಯಾಶ್‌-ಹೊಂದಿಕೆ ಸಾಧನಗಳು (PhotoDNA ಮತ್ತು Google CSAI ಹೊಂದಿಕೆಗಳೂ ಒಳಗೊಂಡಂತೆ), ನಿಂದನಾತ್ಮಕ ಭಾಷೆ ಪತ್ತೆಹಚ್ಚುವಿಕೆ ಮಾದರಿಗಳು (ಇವು ಗುರುತಿಸಲಾದ ಮತ್ತು ನಿಯಮಿತವಾಗಿ ನವೀಕರಿಸಲ್ಪಡುವ ನಿಂದನಾತ್ಮಕ ಪ್ರಮುಖಪದಗಳು ಮತ್ತು ಎಮೋಜಿಗಳ ಒಂದು ಪಟ್ಟಿಯನ್ನು ಆಧರಿಸಿ ಅಂತಹ ವಿಷಯವನ್ನು ಪತ್ತೆಹಚ್ಚುತ್ತವೆ ಮತ್ತು ತಿರಸ್ಕರಿಸುತ್ತವೆ), ಹಾಗೂ ಕೃತಕ ಬುದ್ಧಿಮತ್ತೆ/ಯಾಂತ್ರಿಕ ಕಲಿಕಾ ತಂತ್ರಜ್ಞಾನ, ಮುಂತಾದವುಗಳನ್ನು ಒಳಗೊಂಡಿರುತ್ತವೆ. ನಮ್ಮ ಸ್ವಯಂಚಾಲಿತ ಸಾಧನಗಳನ್ನು ನಮ್ಮ ಸಮುದಾಯ ಮಾರ್ಗಸೂಚಿಗಳು (ಇತರ ವಿಷಯಗಳೊಂದಿಗೆ, ಇವುಗಳು ಕಾನೂನುಬಾಹಿರ ವಿಷಯವನ್ನು ನಿಷೇಧಿಸುತ್ತದೆ), ಹಾಗೂ, ಅನ್ವಯವಾಗುವ ಸಂದರ್ಭಗಳಲ್ಲಿ, ನಮ್ಮ ಶಿಫಾರಸಿಗಾಗಿ ಅರ್ಹತೆ ಪಡೆಯಲು ಅನುಸರಿಸಬೇಕಾದ ವಿಷಯ ಮಾರ್ಗಸೂಚಿಗಳು ಮತ್ತು ಜಾಹೀರಾತು ನೀತಿಗಳ ಉಲ್ಲಂಘನೆಗಳನ್ನು ಪತ್ತೆಹಚ್ಚುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ.


H1 2024 ರಲ್ಲಿ, ನಮ್ಮ ಎಲ್ಲಾ ಸಕ್ರಿಯಾತ್ಮಕ ಪತ್ತೆಹಚ್ಚುವಿಕೆಗಳನ್ನು ಸ್ವಯಂಚಾಲಿತ ಸಾಧನಗಳನ್ನು ಬಳಸಿಕೊಂಡು ನಡೆಸಲಾಯಿತು. ನಮ್ಮ ಸ್ವಯಂಚಾಲಿತ ಸಾಧನಗಳು ನಮ್ಮ ನೀತಿಗಳ ಸಂಭಾವ್ಯ ಉಲ್ಲಂಘನೆಯನ್ನು ಪತ್ತೆಹಚ್ಚಿದಾಗ, ಅವು ನಮ್ಮ ನೀತಿಗಳ ಅನುಸಾರವಾಗಿ ಸ್ವಯಂಚಾಲಿತವಾಗಿ ಕ್ರಮ ತೆಗೆದುಕೊಳ್ಳುತ್ತವೆ, ಅಥವಾ ಮಾನವರ ಪರಿಶೀಲನೆಗಾಗಿ ಒಂದು ಕಾರ್ಯವನ್ನು ಸೃಷ್ಟಿಸುತ್ತವೆ. ಈ ಪ್ರಕ್ರಿಯೆಯ ಫಲವಾಗಿ ವಿಧಿಸಲಾಗಿರುವ ನಿರ್ಬಂಧಗಳ ಸಂಖ್ಯೆ ಮತ್ತು ವಿಧಗಳನ್ನು ಈ ಕೆಳಗೆ ವಿವರಿಸಲಾಗಿದೆ. 


  • Snap ನ ಸ್ವಂತ ಉಪಕ್ರಮದೊಂದಿಗೆ ವಿಧಿಸಲಾಗಿರುವ ನಿರ್ಬಂಧಗಳ ಸಂಖ್ಯೆ ಮತ್ತು ವಿಧಗಳು


H1 2024 ರಲ್ಲಿ, Snap ಸ್ವಯಂಚಾಲಿತ ಸಾಧನಗಳ ಬಳಕೆಯ ಮೂಲಕ ನಮ್ಮ ಸಮುದಾಯದ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು (EU ಮತ್ತು ಸದಸ್ಯ ರಾಷ್ಟ್ರಗಳ ಕಾನೂನುಗಳ ಅಡಿಯಲ್ಲಿ ಅಕ್ರಮ ವಿಷಯ ಮತ್ತು ಚಟುವಟಿಕೆಗಳೆಂದು ಪರಿಗಣಿಸಲ್ಪಡುವ ಉಲ್ಲಂಘನೆಗಳೂ ಸೇರಿದಂತೆ) ಸಕ್ರಿಯಾತ್ಮಕವಾಗಿ ಪತ್ತೆಹಚ್ಚಿದ ನಂತರ ಈ ಕೆಳಗಿನ ಜಾರಿ ಕ್ರಮಗಳನ್ನು ಕೈಗೊಂಡಿತು:

ಇದರ ಜೊತೆಗೆ, H1 2024 ರಲ್ಲಿ, ನಮ್ಮ ಸಾರ್ವಜನಿಕ ಪ್ರಸಾರದ ಸಾಧನಗಳಿಗೆ ಸಂಬಂಧಿಸಿದಂತೆ, ನಾವು ಸ್ವಯಂಚಾಲಿತ ಸಾಧನಗಳನ್ನು ಬಳಸುವ ಮೂಲಕ Snapchat ನಲ್ಲಿ ನಮ್ಮ ಶಿಫಾರಸುಗಳಿಗಾಗಿ ಅರ್ಹತೆಯನ್ನು ಸಾಧಿಸಲು ವಿಷಯದ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ಸಕ್ರಿಯಾತ್ಮಕವಾಗಿ ಪತ್ತೆಹಚ್ಚಿದಾಗ ನಾವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡೆವು:

* ಶಿಫಾರಸಿಗೆ ಅರ್ಹತೆ ಪಡೆಯಲು ಅನುಸರಿಸಬೇಕಾದ ವಿಷಯದ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿರುವಂತೆ, ನಮ್ಮ ಶಿಫಾರಸಿಗೆ ಅರ್ಹತೆ ಪಡೆಯಲು ಅನುಸರಿಸಬೇಕಾದ ವಿಷಯದ ಮಾರ್ಗಸೂಚಿಗಳನ್ನು ಪದೇ-ಪದೇ ಅಥವಾ ಘೋರವಾಗಿ ಉಲ್ಲಂಘಿಸುವ ಖಾತೆಗಳನ್ನು ನಮ್ಮ ಸಾರ್ವಜನಿಕ ಪ್ರಸಾರದ ಮೇಲ್ಮೈಗಳಲ್ಲಿ ಶಿಫಾರಸುಗಳನ್ನು ಪಡೆಯುವುದರಿಂದ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಅನರ್ಹಗೊಳಿಸಬಹುದು.. ಈ ಕ್ರಮವನ್ನು ನಾವು ನಮ್ಮ ಸಕ್ರಿಯಾತ್ಮಕ ಮಾಡರೇಶನ್ ಪ್ರಯತ್ನಗಳ ಸಂದರ್ಭದಲ್ಲಿ ಅನ್ವಯಿಸುತ್ತೇವೆ.

ಜೊತೆಗೆ, H1 2024 ರಲ್ಲಿ, ನಾವು ಸ್ವಯಂಚಾಲಿತ ಸಾಧನಗಳನ್ನು ಬಳಸುವ ಮೂಲಕ Snapchat ನಲ್ಲಿ ನಮ್ಮ ಜಾಹೀರಾತು ನೀತಿಗಳ ಉಲ್ಲಂಘನೆಗಳನ್ನು ಸಕ್ರಿಯಾತ್ಮಕವಾಗಿ ಪತ್ತೆಹಚ್ಚಿದಾಗ ಈ ಕೆಳಗಿನ ಕ್ರಮಗಳನ್ನು ಕೈಗೊಂಡೆವು:

  • ವಿಷಯದ ಮಾಡರೇಶನ್‌ನ ಹೊಣೆಗಾರಿಕೆಯನ್ನು ಹೊಂದಿರುವ ವ್ಯಕ್ತಿಗಳಿಗೆ ತರಬೇತಿ ಮತ್ತು ಸಹಾಯವನ್ನು ಒದಗಿಸುವುದಕ್ಕಾಗಿ ತೆಗೆದುಕೊಂಡಂತಹ ಕ್ರಮಗಳು


ನಮ್ಮ ವಿಷಯ ಮಾಡರೇಶನ್ ತಂಡಗಳು ನಮ್ಮ Snapchat ಸಮುದಾಯವನ್ನು ರಕ್ಷಿಸಲು ಸಹಾಯ ಮಾಡುವುದಕ್ಕಾಗಿ ನಮ್ಮ ವಿಷಯದ ಮಾಡರೇಶನ್ ನೀತಿಯನ್ನು ಅನ್ವಯಿಸುತ್ತವೆ. ಅವರಿಗೆ ಬಹು-ವಾರಗಳ ಅವಧಿ ತರಬೇತಿ ನೀಡಲಾಗುತ್ತದೆ, ಹಾಗೂ ಆ ಅವಧಿಯಲ್ಲಿ ತಂಡದ ಹೊಸ ಸದಸ್ಯರಿಗೆ Snap ನ ನೀತಿಗಳು, ಸಾಧನಗಳು, ಮತ್ತು ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಗಳ ಕುರಿತು ಶಿಕ್ಷಣ ನೀಡಲಾಗುತ್ತದೆ. ನಮ್ಮ ಮಾಡರೇಶನ್ ತಂಡಗಳು ಆಗಾಗ ತಮ್ಮ ಕಾರ್ಯಹರಿವುಗಳಿಗೆ ಸಂಬಂಧಿಸಿದ, ವಿಶೇಷವಾಗಿ ನಾವು ನೀತಿಯ ಅಂಚಿನ ಮತ್ತು ಸನ್ನಿವೇಶ-ಅವಲಂಬಿತ ಪ್ರಕರಣಗಳನ್ನು ಸಂಧಿಸಿದಾಗ, ಪುನಶ್ಚೇತನಾ ಅಭ್ಯಾಸಕ್ರಮಗಳಲ್ಲಿ ಭಾಗವಹಿಸುತ್ತಾರೆ. ಎಲ್ಲಾ ಮಾಡರೇಟರ್‌ಗಳು ಇತ್ತೀಚಿನ ಮಾಹಿತಿಯನ್ನು ಹೊಂದಿರುವುದಾಗಿ ಮತ್ತು ನವೀಕರಿಸಲ್ಪಟ್ಟ ಎಲ್ಲಾ ನೀತಿಗಳನ್ನು ಅನುಸರಿಸುವುದಾಗಿ ಖಚಿತಪಡಿಸುವುದಕ್ಕಾಗಿ ನಾವು ಕೌಶಲ್ಯವರ್ಧನಾ ಕಾರ್ಯಕ್ರಮಗಳು, ಪ್ರಮಾಣೀಕರಣ ತರಬೇತಿಗಳು ಮತ್ತು ರಸಪ್ರಶ್ನೆಗಳನ್ನು ಸಹ ಆಯೋಜಿಸುತ್ತೇವೆ. ಅಂತಿಮವಾಗಿ, ಪ್ರಸ್ತುತ ಘಟನೆಗಳ ಆಧಾರದ ಮೇಲೆ ತುರ್ತು ವಿಷಯ ಪ್ರವೃತ್ತಿಗಳು ಹೊರಹೊಮ್ಮಿದಾಗ, ನಾವು ನೀತಿ ಸ್ಪಷ್ಟೀಕರಣಗಳನ್ನು ತ್ವರಿತವಾಗಿ ಪ್ರಸಾರ ಮಾಡುತ್ತೇವೆ ಇದರಿಂದ ತಂಡಗಳು Snap ನ ನೀತಿಗಳ ಪ್ರಕಾರ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ.


ನಾವು ಕೆಲಸದ ಸಮಯದ ಯೋಗಕ್ಷೇಮಕ್ಕಾಗಿ ನೆರವು ಮತ್ತು ಮಾನಸಿಕ ಆರೋಗ್ಯದ ಸೇವೆಗಳ ಸುಲಭ ಲಭ್ಯತೆಯ ವಿಷಯಗಳನ್ನೂ ಒಳಗೊಂಡಂತೆ, ನಮ್ಮ ವಿಷಯ ಮಾಡರೇಶನ್ ತಂಡಗಳಿಗೆ ಗಣನೀಯ ನೆರವು ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತೇವೆ.

c) Snap ನ ಆಂತರಿಕ ದೂರು-ನಿರ್ವಹಣಾ (ಅಂದರೆ, ಮೇಲ್ಮನವಿಗಳು) ವ್ಯವಸ್ಥೆಗಳ ಮೂಲಕ ಪಡೆಯಲಾಗುವ ದೂರುಗಳು
(ಅನುಚ್ಛೇದ 15.1(d))


ಸಮುದಾಯದ ಮಾರ್ಗಸೂಚಿಗಳ ಉಲ್ಲಂಘನೆಗಳಿಗಾಗಿ (ಅಕ್ರಮ ವಿಷಯ ಮತ್ತು ಚಟುವಟಿಕೆಗಳಿಗಾಗಿಯೂ ಸೇರಿದಂತೆ) ನಮ್ಮ ಸುರಕ್ಷತಾ ತಂಡಗಳು ನಿರ್ಬಂಧಿಸುವ ಖಾತೆಗಳ ಬಳಕೆದಾರರು ನಿರ್ಬಂಧಿತ ಖಾತಾ ಮೇಲ್ಮನವಿ ಅನ್ನು ಸಲ್ಲಿಸಬಹುದಾಗಿದೆ. ಬಳಕೆದಾರರು ಕೆಲವು ವಿಷಯ ಮಾಡರೇಶನ್ ನಿರ್ಧಾರಗಳ ವಿರುದ್ಧವೂ ಸಹ ಮೇಲ್ಮನವಿಗಳನ್ನು ಸಲ್ಲಿಸಬಹುದಾಗಿದೆ.

ವರದಿ ಮಾಡುವ ಅವಧಿಯಲ್ಲಿ (H1 2024 ), Snap EU ನಲ್ಲಿರುವ ತನ್ನ ಆಂತರಿಕ ದೂರು-ನಿರ್ವಹಣಾ ವ್ಯವಸ್ಥೆಗಳ ಮೂಲಕ ಸಲ್ಲಿಸಲಾದಂತಹ (ಖಾತೆಗಳ ನಿರ್ಬಂಧಗಳು ಮತ್ತು ವಿಷಯದ-ಮಟ್ಟದ ಮಾಡರೇಶನ್ ನಿರ್ಧಾರಗಳ ವಿರುದ್ಧ ಮೇಲ್ಮನವಿಗಳು ಸೇರಿದಂತೆ) ಈ ಕೆಳಗಿನ ಮೇಲ್ಮನವಿಗಳನ್ನು ಪ್ರಕ್ರಿಯೆಗೊಳಿಸಿತು:

d) ಕಂಟೆಂಟ್ ಮಾಡರೇಷನ್ ಉದ್ದೇಶಕ್ಕಾಗಿ ಸ್ವಯಂಚಾಲಿತ ವಿಧಾನಗಳ ಬಳಕೆ 
(ಅನುಚ್ಛೇದಗಳು 15.1(e) ಮತ್ತು 42.2(c))

  • ಗುಣಾತ್ಮಕ ವಿವರಣೆ ಮತ್ತು ಉದ್ದೇಶಗಳು


ಮೇಲಿನ ವಿಭಾಗ 3 (b) ರಲ್ಲಿ ವಿವರಿಸಲಾಗಿರುವಂತೆ, ನಾವು ನಮ್ಮ ಸಾರ್ವಜನಿಕ ವಿಷಯದ ಸಾಧನಗಳಲ್ಲಿ ನಮ್ಮ ನಿಯಮಗಳು ಮತ್ತು ನೀತಿಗಳ ಉಲ್ಲಂಘನೆಗಳನ್ನು ಸಕ್ರಿಯಾತ್ಮಕವಾಗಿ ಪತ್ತೆಹಚ್ಚುವುದಕ್ಕಾಗಿ, ಹಾಗೂ, ಕೆಲವು ಸಂದರ್ಭಗಳಲ್ಲಿ ಪರಿಹಾರ ಕ್ರಮಗಳನ್ನು ಜಾರಿಗೊಳಿಸುವುದಕ್ಕಾಗಿ ಸ್ವಯಂಚಾಲಿತ ಸಾಧನಗಳನ್ನು ನಿಯೋಜಿಸುತ್ತೇವೆ. ಇವುಗಳು ಹ್ಯಾಶ್‌-ಹೊಂದಿಕೆ ಸಾಧನಗಳು (PhotoDNA ಮತ್ತು Google CSAI ಹೊಂದಿಕೆಗಳೂ ಒಳಗೊಂಡಂತೆ), ನಿಂದನಾತ್ಮಕ ಭಾಷೆ ಪತ್ತೆಹಚ್ಚುವಿಕೆ ಮಾದರಿಗಳು (ಇವು ಗುರುತಿಸಲಾದ ಮತ್ತು ನಿಯಮಿತವಾಗಿ ನವೀಕರಿಸಲ್ಪಡುವ ನಿಂದನಾತ್ಮಕ ಪ್ರಮುಖಪದಗಳು ಮತ್ತು ಇಮೋಜಿಗಳ ಒಂದು ಪಟ್ಟಿಯನ್ನು ಆಧರಿಸಿ ಅಂತಹ ಕಂಟೆಂಟ್ ಅನ್ನು ಪತ್ತೆಹಚ್ಚುತ್ತವೆ ಮತ್ತು ತಿರಸ್ಕರಿಸುತ್ತವೆ), ಹಾಗೂ ಕೃತಕ ಬುದ್ಧಿಮತ್ತೆ/ಯಾಂತ್ರಿಕ ಕಲಿಕಾ ತಂತ್ರಜ್ಞಾನ, ಮುಂತಾದವುಗಳನ್ನು ಒಳಗೊಂಡಿರುತ್ತವೆ. ನಮ್ಮ ಸ್ವಯಂಚಾಲಿತ ಸಾಧನಗಳನ್ನು ನಮ್ಮ ಸಮುದಾಯದ ಮಾರ್ಗಸೂಚಿಗಳ (ಇದು ಇತರ ಕಂಟೆಂಟ್ಗಳ ಜೊತೆಗೆ, ಕಾನೂನುಬಾಹಿರ ಕಂಟೆಂಟ್ ಅನ್ನು ನಿಷೇಧಿಸುತ್ತದೆ), ಹಾಗೂ, ಅನ್ವಯವಾಗುವ ಸಂದರ್ಭಗಳಲ್ಲಿ, ನಮ್ಮ ಶಿಫಾರಸಿಗೆ ಅರ್ಹತೆ ಪಡೆಯಲು ಅನುಸರಿಸಬೇಕಾದ ಕಂಟೆಂಟ್ ಮಾರ್ಗಸೂಚಿಗಳು ಮತ್ತು ಜಾಹೀರಾತು ನೀತಿಗಳ ಉಲ್ಲಂಘನೆಗಳನ್ನು ಪತ್ತೆಹಚ್ಚುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

ನಮ್ಮ ಸ್ವಯಂಚಾಲಿತ ಸಾಧನಗಳು ನಮ್ಮ ನೀತಿಗಳ ಸಂಭಾವ್ಯ ಉಲ್ಲಂಘನೆಯನ್ನು ಪತ್ತೆಹಚ್ಚಿದಾಗ, ಅವುಗಳು ನಮ್ಮ ನೀತಿಗಳ ಅನುಸಾರವಾಗಿ ಸ್ವಯಂಚಾಲಿತವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಅಥವಾ ಮಾನವರ ಪರಿಶೀಲನೆಗಾಗಿ ಒಂದು ಕಾರ್ಯವನ್ನು ಸೃಷ್ಟಿಸುತ್ತವೆ.

  • ಸದಸ್ಯ ರಾಷ್ಟ್ರದ ಪ್ರಕಾರ ವಿಂಗಡಿಸಲಾಗುವ ನಿಖರತೆಯ ಸೂಚಕಗಳು ಮತ್ತು ಸಂಭಾವ್ಯ ದೋಷಗಳ ದರ


ನಾವು ನಮ್ಮ ಸಾರ್ವಜನಿಕ ಸಾಧನಗಲ್ಲಿ ನಮ್ಮ ಸ್ವಯಂಚಾಲಿತ ಸಾಧನಗಳು ಪ್ರಕ್ರಿಯೆಗೊಳಿಸುವ ಕಾರ್ಯಗಳ ಯಾದೃಚ್ಛಿಕ ಮಾದರಿಗಳನ್ನು ಆಯ್ಕೆ ಮಾಡುವ ಹಾಗೂ ಅವುಗಳನ್ನು ನಮ್ಮ ಮಾನವ ಉದಾರ ಪರಿಷ್ಕರಣ ತಂಡಗಳಿಗೆ ಪುನರ್-ವಿಮರ್ಶೆಗಾಗಿ ಸಲ್ಲಿಸುವ ಮೂಲಕ ನಮ್ಮ ಸ್ವಯಂಚಾಲಿತ ಉದಾರ ಪರಿಷ್ಕರಣ ಸಾಧನಗಳ ನಿಖರತೆಯ ಮತ್ತು ಸಂಭಾವ್ಯ ದೋಷಗಳ ದರಗಳ ಸೂಚಕಗಳ ಮೇಲ್ವಿಚಾರಣೆ ನಡೆಸುತ್ತೇವೆ. ನಿಖರತೆಯ ದರವೆಂದರೆ ನಮ್ಮ ಮಾನವ ಉದಾರ ಪರಿಷ್ಕರಣದಾರರು ನಡೆಸುವ ಪುನರ್-ವಿಮರ್ಶೆಯ ನಂತರ ಅವರು ಈ ಯಾದೃಚ್ಛಿಕ ಮಾದರಿಗಳಲ್ಲಿ ಅನುಮೋದಿಸುವ ಕಾರ್ಯಗಳ ಶೇಕಡಾವಾರು ಆಗಿರುತ್ತದೆ. ದೋಷಗಳ ದರವೆಂದರೆ 100% ಮತ್ತು ಈ ಮೇಲಿನ ವಿವರಣೆಯಂತೆ ಲೆಕ್ಕ ಹಾಕಲಾಗುವ ನಿಖರತೆಯ ದರದ ನಡುವಿನ ವ್ಯವಕಲನ ಫಲವಾಗಿರುತ್ತದೆ.

ಮಾದರಿಗಳ ಪರಿಶೀಲನೆಯ ಆಧಾರದ ಮೇಲೆ, H1 2024 ರಲ್ಲಿ, ಉಲ್ಲಂಘನೆಗಳ ಎಲ್ಲಾ ವರ್ಗಗಳಾದ್ಯಂತ ಬಳಸಲಾದ ಸ್ವಯಂಚಾಲಿತ ವಿಧಾನಗಳ ನಿಖರತೆಯ ದರವು ಸುಮಾರು 93% ಆಗಿತ್ತು ಹಾಗೂ ದೋಷಗಳ ದರವು ಸುಮಾರು 7% ಆಗಿತ್ತು.

Snapchat ನಲ್ಲಿ ನಾವು ಮಾಡರೇಟ್ ಮಾಡುವ ಕಂಟೆಂಟ್ ನ ಭಾಷೆಯನ್ನು ನಾವು ಸಾಮಾನ್ಯವಾಗಿ ಟ್ರ್ಯಾಕ್ ಮಾಡುವುದಿಲ್ಲ, ಹಾಗೂ ಆ ಕಾರಣದಿಂದ ಸದಸ್ಯ ರಾಷ್ಟ್ರಗಳ ಪ್ರತಿಯೊಂದು ಅಧಿಕೃತ ಭಾಷೆಗಳಿಗಾಗಿ ನಮ್ಮ ಸ್ವಯಂಚಾಲಿತ ಮಾಡರೇಶನ್ ಸಾಧನಗಳ ನಿಖರತೆಯ ಮತ್ತು ದೋಷಗಳ ದರಗಳ ವಿಂಗಡಣೆಯನ್ನು ಒದಗಿಸಲಾಗುವುದಿಲ್ಲ.  ಈ ಮಾಹಿತಿಯ ಬದಲಾಗಿ, ನಾವು ಈ ಕೆಳಗೆ ಪ್ರತಿ ಸದಸ್ಯ ರಾಷ್ಟ್ರಗಳಿಂದ ಉದ್ಭವಿಸುವ ಸ್ವಯಂಚಾಲಿತವಾಗಿ ಮಾಡರೇಟ್ ಮಾಡಲಾದ ಕಂಟೆಂಟ್ಗಳ ನಿಖರತೆಯ ಮತ್ತು ದೋಷಗಳ ದರಗಳ ವಿಂಗಡಣೆಯನ್ನು ಒದಗಿಸಿದ್ದೇವೆ.

  • ಸುರಕ್ಷತಾಕ್ರಮಗಳು


ನಾವು ಯಾಂತ್ರೀಕೃತ ಉದಾರ ಪರಿಷ್ಕರಣ ಸಾಧನಗಳ ಬಳಕೆಯ ಕಾರಣದಿಂದ ಮೂಲಭೂತ ಹಕ್ಕುಗಳ ಮೇಲಿನ ಸಂಭಾವ್ಯ ಪರಿಣಾಮಗಳ ಬಗ್ಗೆ ಅರಿವು ಹೊಂದಿದ್ದೇವೆ, ಹಾಗೂ ಆ ಪರಿಣಾಮಗಳನ್ನು ಕಡಿಮೆ ಮಾಡುವುದಕ್ಕಾಗಿ ನಾವು ಸುರಕ್ಷತಾಕ್ರಮಗಳನ್ನು ಅಳವಡಿಸುತ್ತೇವೆ.

Snapchat ನಲ್ಲಿ ಯಾಂತ್ರೀಕೃತ ಕಂಟೆಂಟ್ ನ ಉದಾರ ಪರಿಷ್ಕರಣ ಸಾಧನಗಳನ್ನು ನಿಯೋಜಿಸಲಾಗುವ ಮೊದಲು ಅವುಗಳನ್ನು ಪರೀಕ್ಷಿಸಲಾಗುತ್ತದೆ. ಮಾದರಿಗಳನ್ನು ಉತ್ಪಾದನಾ ಪ್ರಕ್ರಿಯೆಗಳಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಳ್ಳುವ ಮೊದಲು ಅವುಗಳ ಸೂಕ್ತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಕಾರ್ಯಕ್ಷಮತೆಗಾಗಿ ಆಫ್‌ಲೈನ್‌ನಲ್ಲಿ ಪರೀಕ್ಷಿಸಲಾಗುತ್ತದೆ ಹಾಗೂ A/B ಪರೀಕ್ಷಾ ಪ್ರಕ್ರಿಯೆಯ ಮೂಲಕ ನಿಯೋಜಿಸಲಾಗುತ್ತದೆ. ನಾವು ಬಿಡುಗಡೆಯ-ಪೂರ್ವದ ಗುಣಮಟ್ಟದ ಭರವಸೆಯ (QA) ಪರಿಶೀಲನೆಗಳು, ಬಿಡುಗಡೆ ಸಮಯದ ಪರಿಶೀಲನೆಗಳು ಮತ್ತು ಭಾಗಶಃ (ಹಂತ-ಹಂತಗಳ) ಬಿಡುಗಡೆಗಳ ಸಮಯಗಳಲ್ಲಿ ನಿರಂತರ ಚಾಲ್ತಿಯಲ್ಲಿರುವ ನಿಖರ QA ಪರಿಶೀಲನೆಗಳನ್ನು ಕೈಗೊಳ್ಳುತ್ತೇವೆ.

ನಮ್ಮ ಯಾಂತ್ರೀಕೃತ‌ ಸಾಧನಗಳ ಬಿಡುಗಡೆಯ ನಂತರ, ನಾವು ಅವುಗಳ ಕಾರ್ಯನಿರ್ವಹಣೆ ಮತ್ತು ನಿಖರತೆಗಳನ್ನು ನಿರಂತರ ಚಾಲ್ತಿಯಲ್ಲಿ ಮೌಲ್ಯಮಾಪನ ಮಾಡುತ್ತೇವೆ ಹಾಗೂ ಅಗತ್ಯವಿರುವಂತೆ ಹೊಂದಾಣಿಕೆಗಳನ್ನು ಮಾಡುತ್ತೇವೆ. ಈ ಪ್ರಕ್ರಿಯೆಯಲ್ಲಿ ನಮ್ಮ ಮಾನವ ಉದಾರ ಪರಿಷ್ಕರಣದಾರರು ನಿಖರತೆಯನ್ನು ಸುಧಾರಿಸಲು ಹೊಂದಾಣಿಕೆಗಳ ಅಗತ್ಯವಿರುವ ಮಾದರಿಗಳನ್ನು ಗುರುತಿಸುವುದಕ್ಕಾಗಿ ಯಾಂತ್ರೀಕೃತ ಕಾರ್ಯಗಳ ಮಾದರಿಗಳ ಪುನರ್‌ ಪರಿಶೀಲನೆಯನ್ನು ನಡೆಸುತ್ತಾರೆ. ನಾವು ದಿನನಿತ್ಯವೂ ಸಾರ್ವಜನಿಕ ಕಥೆಗಳ ಮಾದರಿಗಳನ್ನು ಯಾದೃಚ್ಛಿಕವಾಗಿ ಪರೀಕ್ಷಿಸುವ ಮೂಲಕ Snapchat ನಲ್ಲಿ ನಿರ್ದಿಷ್ಟ ಹಾನಿಗಳ ಉಪಸ್ಥಿತಿಯನ್ನು ಸಹ ಅವಲೋಕಿಸುತ್ತೇವೆ, ಹಾಗೂ ಈ ಮಾಹಿತಿಯನ್ನು ಬಳಸಿ ನಮ್ಮ ಸೇವೆಗಳಲ್ಲಿ ಮತ್ತಷ್ಟು ಸುಧಾರಣೆಗಳಿಗಾಗಿ ಕ್ಷೇತ್ರಗಳನ್ನು ಗುರುತಿಸುತ್ತೇವೆ.

ನಮ್ಮ ನೀತಿಗಳು ಹಾಗೂ ನಮ್ಮ ಯಾಂತ್ರೀಕೃತ ಸಾಧನಗಳೂ ಸೇರಿದಂತೆ ನಮ್ಮ ವ್ಯವಸ್ಥೆಗಳು ಸ್ಥಿರವಾದ ಮತ್ತು ನ್ಯಾಯೋಚಿತವಾದ ಕ್ರಮ ಜಾರಿಗೊಳಿಸುವಿಕೆಯನ್ನು ಪ್ರೋತ್ಸಾಹಿಸುತ್ತವೆ, ಹಾಗೂ ಪ್ರತಿಯೊಬ್ಬ Snapchatter ನ ಹಕ್ಕುಗಳನ್ನು ರಕ್ಷಿಸುವ ಜೊತೆಗೆ ನಮ್ಮ ಸಮುದಾಯದ ಹಿತಾಸಕ್ತಿಗಳನ್ನು ಸುರಕ್ಷಿತವಾಗಿರಿಸುವ ಗುರಿ ಹೊಂದಿರುವ ಸೂಚನೆಗಳ ಮತ್ತು ಮೇಲ್ಮನವಿ ಪ್ರಕ್ರಿಯೆಗಳ ಮೂಲಕ ಕ್ರಮ ಜಾರಿಯ ಫಲಿತಾಂಶಗಳನ್ನು ಅರ್ಥಪೂರ್ಣವಾಗಿ ಪ್ರತಿವಾದಿಸಲು Snapchatter ಗಳಿಗೆ ಅವಕಾಶ ಒದಗಿಸುತ್ತವೆ.

ನಾವು ನಮ್ಮ ಯಾಂತ್ರೀಕೃತ ಕಂಟೆಂಟ್ ಮಾಡರೇಷನ್ ಸಾಧನಗಳ ನಿಖರತೆಯನ್ನು ಸುಧಾರಿಸಲು ಹಾಗೂ ನಮ್ಮ ನೀತಿಗಳ ಸುಸಂಗತ ಮತ್ತು ನ್ಯಾಯಯುತ ಜಾರಿಗೊಳಿಸುವಿಕೆಯ ಪ್ರಕ್ರಿಯೆಗಳನ್ನು ಬೆಂಬಲಿಸುವುದಕ್ಕಾಗಿ ಅವುಗಳನ್ನು ನಿರಂತರವಾಗಿ ಸುಧಾರಿಸಲು ಶ್ರಮಿಸುತ್ತೇವೆ.

e) ಅನುಚ್ಛೇದ 21 ನ್ಯಾಯಾಲಯದ ಹೊರಗಿನ ವಿವಾದ ಇತ್ಯರ್ಥ ಸಂಸ್ಥೆಗಳಿಗೆ ಸಲ್ಲಿಸಲಾದ ವಿವಾದಗಳು
(ಅನುಚ್ಛೇದ 24.1(a))

ವರದಿ ಮಾಡುವ ಅವಧಿಗಾಗಿ (H1 2024 ), DSA ಅನುಚ್ಛೇದ 21 ರ ಅನುಸಾರವಾಗಿ ಔಪಚಾರಿಕವಾಗಿ ಪ್ರಮಾಣೀಕೃತ ವಿವಾದ ಇತ್ಯರ್ಥ ಸಂಸ್ಥೆಗಳಿಗೆ ಸಲ್ಲಿಸಲಾದ ವಿವಾದಗಳ ಸಂಖ್ಯೆಯು ಶೂನ್ಯ (0) ಆಗಿತ್ತು, ಹಾಗೂ ನಾವು ಫಲಿತಾಂಶಗಳನ್ನು ಪ್ರತಿಬಿಂಬಿಸುವ ಪ್ರಕರಣಗಳ ವಿಂಗಡಣೆಯನ್ನು, ಸರಾಸರಿ ಪೂರ್ಣಗೊಳಿಸುವಿಕೆ ಸಮಯಗಳು ಅಥವಾ ಯಾವುದೇ ನ್ಯಾಯಾಲಯದ ಹೊರಗಿನ ವಿವಾದ ಇತ್ಯರ್ಥ ಸಂಸ್ಥೆಯ ನಿರ್ಧಾರಗಳನ್ನು Snap ಅನುಷ್ಠಾನಗೊಳಿಸಿರುವ ವಿವಾದಗಳ ಪಾಲುಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ.

ನಿಮ್ಮ ಗಮನಕ್ಕಾಗಿ, ನಾವು H1 2024 ರಲ್ಲಿ DSA ಅನುಚ್ಛೇದ 21 ರ ಅಡಿಯಲ್ಲಿ ನ್ಯಾಯಾಲಯದ ಹೊರಗಿನ ವಿವಾದ ಇತ್ಯರ್ಥ ಸಂಸ್ಥೆಯಾಗಿ ಪ್ರಮಾಣೀಕರಣವನ್ನು ಅರಸುತ್ತಿರುವ ಸಂಸ್ಥೆಗೆ ಸಲ್ಲಿಸಲಾದ ವಿವಾದಗಳ ಎರಡು (2) ಸೂಚನೆಗಳನ್ನು ಪಡೆದೆವು. ನಾವು ಈ ಎರಡು ವಿವಾದಗಳನ್ನು ಮೇಲಿನ ಲೆಕ್ಕಾಚಾರದಲ್ಲಿ ಸೇರಿಸಿಕೊಳ್ಳಲಿಲ್ಲ ಏಕೆಂದರೆ ಈ ಸೂಚನೆಗಳನ್ನು ಪ್ರಸಾರ ಮಾಡಿದ ಸಂಸ್ಥೆಯು ನಮ್ಮ ಮನವಿಯ ಮೇರೆಗೆ ಅವರ ಪ್ರಮಾಣೀಕರಣದ ಸ್ಥಿತಿಯನ್ನು ದೃಢೀಕರಿಸಲು ಸಾಧ್ಯವಾಗಿರಲಿಲ್ಲ.

f) ಅನುಚ್ಛೇದ 23 ರ ಅನುಸಾರವಾಗಿ ವಿಧಿಸಲಾದ ಅಮಾನತುಗಳು
(ಅನುಚ್ಛೇದ 24.1(b))
  • ಅನುಚ್ಛೇದ 23.1 ರ ಅನುಸಾರವಾಗಿ ವಿಧಿಸಲಾದ ಅಮಾನತುಗಳು: ಸ್ಪಷ್ಟವಾಗಿ ಕಾನೂನುಬಾಹಿರ ಕಂಟೆಂಟ್ ಅನ್ನು ಮೇಲಿ೦ದ ಮೇಲೆ ಒದಗಿಸುವ ಖಾತೆಗಳ ಅಮಾನತು 

ನಮ್ಮ Snapchat ಮಾಡರೇಷನ್, ಜಾರಿಗೊಳಿಸುವಿಕೆ ಮತ್ತು ಮೇಲ್ಮನವಿಗಳ ವಿವರಣೆಯಲ್ಲಿ ವಿವರಿಸಲಾಗಿರುವಂತೆ, ನಾವು ನಮ್ಮ ಸಮುದಾಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಲೆಂದು (ಸ್ಪಷ್ಟವಾಗಿ ಅಕ್ರಮ ವಿಷಯದ ಒದಗಿಸುವಿಕೆಯ ಮೂಲಕವೂ ಸೇರಿದಂತೆ) ಪ್ರಾಥಮಿಕವಾಗಿ ಬಳಸಲಾಗುತ್ತಿದೆ ಎಂದು ಹಾಗೂ ಗಂಭೀರವಾದ ಹಾನಿಗಳನ್ನು ಉಂಟುಮಾಡಲೆಂದು ಬಳಸಲಾಗುತ್ತಿದೆ ಎಂದು ನಾವು ನಿರ್ಧರಿಸುವ ಖಾತೆಗಳನ್ನು ಕೂಡಲೆಯೇ ನಿಷ್ಕ್ರಿಯಗೊಳಿಸಲಾಗುತ್ತದೆ. ನಮ್ಮ ಸಮುದಾಯದ ಮಾರ್ಗಸೂಚಿಗಳ ಇತರ ಉಲ್ಲಂಘನೆಗಳಿಗಾಗಿ, Snap ಸಾಮಾನ್ಯವಾಗಿ ಮೂರು ಭಾಗಗಳ ಜಾರಿಗೊಳಿಸುವಿಕೆ ಪ್ರಕ್ರಿಯೆಯೊಂದನ್ನು ಅನ್ವಯಿಸುತ್ತದೆ:

  • ಹಂತ ಒಂದು: ಉಲ್ಲಂಘಿಸುವ ಕಂಟೆಂಟ್ ಅನ್ನು ತೆಗೆದುಹಾಕಲಾಗುತ್ತದೆ.

  • ಹಂತ ಎರಡು: ಆ Snapchatter ಗೆ ಅವರು ಸಲ್ಲಿಸಿದ ಕಂಟೆಂಟ್ ನಮ್ಮ ಸಮುದಾಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು, ಅವರ ಕಂಟೆಂಟ್ ಅನ್ನು ತೆಗೆದುಹಾಕಲಾಗಿದೆ ಎಂದು ಮತ್ತು ಪುನರಾವರ್ತಿತ ಉಲ್ಲಂಘನೆಗಳು ಅವರ ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಸೇರಿದಂತೆ, ಹೆಚ್ಚುವರಿ ಜಾರಿ ಕ್ರಮಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಸೂಚಿಸುವ ಅಧಿಸೂಚನೆಯನ್ನು ರವಾನಿಸಲಾಗುತ್ತದೆ.

  • ಹಂತ ಮೂರು: ನಮ್ಮ ತಂಡವು ಆ Snapchatter ನ ಖಾತೆಯ ವಿರುದ್ಧ ಒಂದು ಸ್ಟ್ರೈಕ್‌ ಅನ್ನು ದಾಖಲಿಸುತ್ತದೆ.

H1 2024 ರಲ್ಲಿ EU ನಲ್ಲಿನ ಖಾತೆಗಳ ಮೇಲೆ ವಿಧಿಸಲಾದ ಸ್ಟ್ರೈಕ್‌ಗಳು (ಅಂದರೆ, ಎಚ್ಚರಿಕೆಗಳು) ಮತ್ತು ಪ್ರತಿಬಂಧಗಳ ಸಂಖ್ಯೆಗಳಿಗೆ ಸಂಬಂಧಿತ ಮಾಹಿತಿಯನ್ನು ಮೇಲಿನ ವಿಭಾಗಗಳು 3(a) ಮತ್ತು 3(b) ಗಳಲ್ಲಿ ಕಾಣಬಹುದಾಗಿದೆ.

  • ಅನುಚ್ಛೇದ 23.2 ರ ಅನುಸಾರವಾಗಿ ಮಾಡಲಾದ ಅಮಾನತುಗಳು: ಸ್ಪಷ್ಟವಾಗಿ ಆಧಾರರಹಿತವಾಗಿ ಪದೇ-ಪದೇ ಸೂಚನೆಗಳು ಅಥವಾ ದೂರುಗಳನ್ನು ಸಲ್ಲಿಸುವ ವ್ಯಕ್ತಿಗಳು, ಘಟಕಗಳು ಮತ್ತು ದೂರುದಾರರಿಂದ ಪಡೆಯಲಾಗುವ ಸೂಚನೆಗಳು ಮತ್ತು ದೂರುಗಳ ಪ್ರಕ್ರಿಯೆಗೊಳಿಸುವಿಕೆಗಳ ಮೇಲಿನ ಅಮಾನತುಗಳು

"ಸ್ಪಷ್ಟವಾಗಿ ಆಧಾರರಹಿತವಾದ" ಸೂಚನೆಗಳು ಮತ್ತು ದೂರುಗಳು ಎಂಬ ಪದಗಳ ನಮ್ಮ ಆಂತರಿಕ ವ್ಯಾಖ್ಯಾನಗಳನ್ನು, ಹಾಗೂ ಅಂತಹ ಸೂಚನೆಗಳು ಮತ್ತು ದೂರುಗಳು ಪದೇ-ಪದೇ ಸಲ್ಲಿಸಲ್ಪಟ್ಟಿವೆ ಎಂದು ನಾವು ಪರಿಗಣಿಸಲು ನಾವು ಬಳಸುವ ನಮ್ಮ ಆಂತರಿಕ ಮಿತಿಗಳನ್ನು ಅನ್ವಯಿಸುತ್ತ, DSA ಅನುಚ್ಛೇದ 23.2 ರ ಅನುಸಾರವಾಗಿ H1 2024 ರಲ್ಲಿ ಸೂಚನೆಗಳು ಮತ್ತು ದೂರುಗಳ ಪ್ರಕ್ರಿಯೆಗೊಳಿಸುವಿಕೆಯ ಮೇಲೆ ವಿಧಿಸಲಾದ ಅಮಾನತುಗಳ ಸಂಖ್ಯೆಯು ಈ ಕೆಳಗಿನಂತಿದೆ:

  • ಸುರಕ್ಷತಾಕ್ರಮಗಳು


ನಾವು ಯಾಂತ್ರೀಕೃತ ಉದಾರ ಪರಿಷ್ಕರಣ ಸಾಧನಗಳ ಬಳಕೆಯ ಕಾರಣದಿಂದ ಮೂಲಭೂತ ಹಕ್ಕುಗಳ ಮೇಲಿನ ಸಂಭಾವ್ಯ ಪರಿಣಾಮಗಳ ಬಗ್ಗೆ ಅರಿವು ಹೊಂದಿದ್ದೇವೆ, ಹಾಗೂ ಆ ಪರಿಣಾಮಗಳನ್ನು ಕಡಿಮೆ ಮಾಡುವುದಕ್ಕಾಗಿ ನಾವು ಸುರಕ್ಷತಾಕ್ರಮಗಳನ್ನು ಅಳವಡಿಸುತ್ತೇವೆ.

Snapchat ನಲ್ಲಿ ಯಾಂತ್ರೀಕೃತ ಕಂಟೆಂಟ್ ನ ಉದಾರ ಪರಿಷ್ಕರಣ ಸಾಧನಗಳನ್ನು ನಿಯೋಜಿಸಲಾಗುವ ಮೊದಲು ಅವುಗಳನ್ನು ಪರೀಕ್ಷಿಸಲಾಗುತ್ತದೆ. ಮಾದರಿಗಳನ್ನು ಉತ್ಪಾದನಾ ಪ್ರಕ್ರಿಯೆಗಳಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಳ್ಳುವ ಮೊದಲು ಅವುಗಳ ಸೂಕ್ತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಕಾರ್ಯಕ್ಷಮತೆಗಾಗಿ ಆಫ್‌ಲೈನ್‌ನಲ್ಲಿ ಪರೀಕ್ಷಿಸಲಾಗುತ್ತದೆ ಹಾಗೂ A/B ಪರೀಕ್ಷಾ ಪ್ರಕ್ರಿಯೆಯ ಮೂಲಕ ನಿಯೋಜಿಸಲಾಗುತ್ತದೆ. ನಾವು ಬಿಡುಗಡೆಯ-ಪೂರ್ವದ ಗುಣಮಟ್ಟದ ಭರವಸೆಯ (QA) ಪರಿಶೀಲನೆಗಳು, ಬಿಡುಗಡೆ ಸಮಯದ ಪರಿಶೀಲನೆಗಳು ಮತ್ತು ಭಾಗಶಃ (ಹಂತ-ಹಂತಗಳ) ಬಿಡುಗಡೆಗಳ ಸಮಯಗಳಲ್ಲಿ ನಿರಂತರ ಚಾಲ್ತಿಯಲ್ಲಿರುವ ನಿಖರ QA ಪರಿಶೀಲನೆಗಳನ್ನು ಕೈಗೊಳ್ಳುತ್ತೇವೆ.

ನಮ್ಮ ಯಾಂತ್ರೀಕೃತ‌ ಸಾಧನಗಳ ಬಿಡುಗಡೆಯ ನಂತರ, ನಾವು ಅವುಗಳ ಕಾರ್ಯನಿರ್ವಹಣೆ ಮತ್ತು ನಿಖರತೆಗಳನ್ನು ನಿರಂತರ ಚಾಲ್ತಿಯಲ್ಲಿ ಮೌಲ್ಯಮಾಪನ ಮಾಡುತ್ತೇವೆ ಹಾಗೂ ಅಗತ್ಯವಿರುವಂತೆ ಹೊಂದಾಣಿಕೆಗಳನ್ನು ಮಾಡುತ್ತೇವೆ. ಈ ಪ್ರಕ್ರಿಯೆಯಲ್ಲಿ ನಮ್ಮ ಮಾನವ ಉದಾರ ಪರಿಷ್ಕರಣದಾರರು ನಿಖರತೆಯನ್ನು ಸುಧಾರಿಸಲು ಹೊಂದಾಣಿಕೆಗಳ ಅಗತ್ಯವಿರುವ ಮಾದರಿಗಳನ್ನು ಗುರುತಿಸುವುದಕ್ಕಾಗಿ ಯಾಂತ್ರೀಕೃತ ಕಾರ್ಯಗಳ ಮಾದರಿಗಳ ಪುನರ್‌ ಪರಿಶೀಲನೆಯನ್ನು ನಡೆಸುತ್ತಾರೆ. ನಾವು ದಿನನಿತ್ಯವೂ ಸಾರ್ವಜನಿಕ ಕಥೆಗಳ ಮಾದರಿಗಳನ್ನು ಯಾದೃಚ್ಛಿಕವಾಗಿ ಪರೀಕ್ಷಿಸುವ ಮೂಲಕ Snapchat ನಲ್ಲಿ ನಿರ್ದಿಷ್ಟ ಹಾನಿಗಳ ಉಪಸ್ಥಿತಿಯನ್ನು ಸಹ ಅವಲೋಕಿಸುತ್ತೇವೆ, ಹಾಗೂ ಈ ಮಾಹಿತಿಯನ್ನು ಬಳಸಿ ನಮ್ಮ ಸೇವೆಗಳಲ್ಲಿ ಮತ್ತಷ್ಟು ಸುಧಾರಣೆಗಳಿಗಾಗಿ ಕ್ಷೇತ್ರಗಳನ್ನು ಗುರುತಿಸುತ್ತೇವೆ.

ನಮ್ಮ ನೀತಿಗಳು ಹಾಗೂ ನಮ್ಮ ಯಾಂತ್ರೀಕೃತ ಸಾಧನಗಳೂ ಸೇರಿದಂತೆ ನಮ್ಮ ವ್ಯವಸ್ಥೆಗಳು ಸ್ಥಿರವಾದ ಮತ್ತು ನ್ಯಾಯೋಚಿತವಾದ ಕ್ರಮ ಜಾರಿಗೊಳಿಸುವಿಕೆಯನ್ನು ಪ್ರೋತ್ಸಾಹಿಸುತ್ತವೆ, ಹಾಗೂ ಪ್ರತಿಯೊಬ್ಬ Snapchatter ನ ಹಕ್ಕುಗಳನ್ನು ರಕ್ಷಿಸುವ ಜೊತೆಗೆ ನಮ್ಮ ಸಮುದಾಯದ ಹಿತಾಸಕ್ತಿಗಳನ್ನು ಸುರಕ್ಷಿತವಾಗಿರಿಸುವ ಗುರಿ ಹೊಂದಿರುವ ಸೂಚನೆಗಳ ಮತ್ತು ಮೇಲ್ಮನವಿ ಪ್ರಕ್ರಿಯೆಗಳ ಮೂಲಕ ಕ್ರಮ ಜಾರಿಯ ಫಲಿತಾಂಶಗಳನ್ನು ಅರ್ಥಪೂರ್ಣವಾಗಿ ಪ್ರತಿವಾದಿಸಲು Snapchatter ಗಳಿಗೆ ಅವಕಾಶ ಒದಗಿಸುತ್ತವೆ.

ನಾವು ನಮ್ಮ ಯಾಂತ್ರೀಕೃತ ಕಂಟೆಂಟ್ ಮಾಡರೇಷನ್ ಸಾಧನಗಳ ನಿಖರತೆಯನ್ನು ಸುಧಾರಿಸಲು ಹಾಗೂ ನಮ್ಮ ನೀತಿಗಳ ಸುಸಂಗತ ಮತ್ತು ನ್ಯಾಯಯುತ ಜಾರಿಗೊಳಿಸುವಿಕೆಯ ಪ್ರಕ್ರಿಯೆಗಳನ್ನು ಬೆಂಬಲಿಸುವುದಕ್ಕಾಗಿ ಅವುಗಳನ್ನು ನಿರಂತರವಾಗಿ ಸುಧಾರಿಸಲು ಶ್ರಮಿಸುತ್ತೇವೆ.

e) ಅನುಚ್ಛೇದ 21 ನ್ಯಾಯಾಲಯದ ಹೊರಗಿನ ವಿವಾದ ಇತ್ಯರ್ಥ ಸಂಸ್ಥೆಗಳಿಗೆ ಸಲ್ಲಿಸಲಾದ ವಿವಾದಗಳು
(ಅನುಚ್ಛೇದ 24.1(a))

ವರದಿ ಮಾಡುವ ಅವಧಿಗಾಗಿ (H1 2024 ), DSA ಅನುಚ್ಛೇದ 21 ರ ಅನುಸಾರವಾಗಿ ಔಪಚಾರಿಕವಾಗಿ ಪ್ರಮಾಣೀಕೃತ ವಿವಾದ ಇತ್ಯರ್ಥ ಸಂಸ್ಥೆಗಳಿಗೆ ಸಲ್ಲಿಸಲಾದ ವಿವಾದಗಳ ಸಂಖ್ಯೆಯು ಶೂನ್ಯ (0) ಆಗಿತ್ತು, ಹಾಗೂ ನಾವು ಫಲಿತಾಂಶಗಳನ್ನು ಪ್ರತಿಬಿಂಬಿಸುವ ಪ್ರಕರಣಗಳ ವಿಂಗಡಣೆಯನ್ನು, ಸರಾಸರಿ ಪೂರ್ಣಗೊಳಿಸುವಿಕೆ ಸಮಯಗಳು ಅಥವಾ ಯಾವುದೇ ನ್ಯಾಯಾಲಯದ ಹೊರಗಿನ ವಿವಾದ ಇತ್ಯರ್ಥ ಸಂಸ್ಥೆಯ ನಿರ್ಧಾರಗಳನ್ನು Snap ಅನುಷ್ಠಾನಗೊಳಿಸಿರುವ ವಿವಾದಗಳ ಪಾಲುಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ.

ನಿಮ್ಮ ಗಮನಕ್ಕಾಗಿ, ನಾವು H1 2024 ರಲ್ಲಿ DSA ಅನುಚ್ಛೇದ 21 ರ ಅಡಿಯಲ್ಲಿ ನ್ಯಾಯಾಲಯದ ಹೊರಗಿನ ವಿವಾದ ಇತ್ಯರ್ಥ ಸಂಸ್ಥೆಯಾಗಿ ಪ್ರಮಾಣೀಕರಣವನ್ನು ಅರಸುತ್ತಿರುವ ಸಂಸ್ಥೆಗೆ ಸಲ್ಲಿಸಲಾದ ವಿವಾದಗಳ ಎರಡು (2) ಸೂಚನೆಗಳನ್ನು ಪಡೆದೆವು. ನಾವು ಈ ಎರಡು ವಿವಾದಗಳನ್ನು ಮೇಲಿನ ಲೆಕ್ಕಾಚಾರದಲ್ಲಿ ಸೇರಿಸಿಕೊಳ್ಳಲಿಲ್ಲ ಏಕೆಂದರೆ ಈ ಸೂಚನೆಗಳನ್ನು ಪ್ರಸಾರ ಮಾಡಿದ ಸಂಸ್ಥೆಯು ನಮ್ಮ ಮನವಿಯ ಮೇರೆಗೆ ಅವರ ಪ್ರಮಾಣೀಕರಣದ ಸ್ಥಿತಿಯನ್ನು ದೃಢೀಕರಿಸಲು ಸಾಧ್ಯವಾಗಿರಲಿಲ್ಲ.

f) ಅನುಚ್ಛೇದ 23 ರ ಅನುಸಾರವಾಗಿ ವಿಧಿಸಲಾದ ಅಮಾನತುಗಳು
(ಅನುಚ್ಛೇದ 24.1(b))
  • ಅನುಚ್ಛೇದ 23.1 ರ ಅನುಸಾರವಾಗಿ ವಿಧಿಸಲಾದ ಅಮಾನತುಗಳು: ಸ್ಪಷ್ಟವಾಗಿ ಕಾನೂನುಬಾಹಿರ ಕಂಟೆಂಟ್ ಅನ್ನು ಮೇಲಿ೦ದ ಮೇಲೆ ಒದಗಿಸುವ ಖಾತೆಗಳ ಅಮಾನತು 

ನಮ್ಮ Snapchat ಮಾಡರೇಷನ್, ಜಾರಿಗೊಳಿಸುವಿಕೆ ಮತ್ತು ಮೇಲ್ಮನವಿಗಳ ವಿವರಣೆಯಲ್ಲಿ ವಿವರಿಸಲಾಗಿರುವಂತೆ, ನಾವು ನಮ್ಮ ಸಮುದಾಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಲೆಂದು (ಸ್ಪಷ್ಟವಾಗಿ ಅಕ್ರಮ ವಿಷಯದ ಒದಗಿಸುವಿಕೆಯ ಮೂಲಕವೂ ಸೇರಿದಂತೆ) ಪ್ರಾಥಮಿಕವಾಗಿ ಬಳಸಲಾಗುತ್ತಿದೆ ಎಂದು ಹಾಗೂ ಗಂಭೀರವಾದ ಹಾನಿಗಳನ್ನು ಉಂಟುಮಾಡಲೆಂದು ಬಳಸಲಾಗುತ್ತಿದೆ ಎಂದು ನಾವು ನಿರ್ಧರಿಸುವ ಖಾತೆಗಳನ್ನು ಕೂಡಲೆಯೇ ನಿಷ್ಕ್ರಿಯಗೊಳಿಸಲಾಗುತ್ತದೆ. ನಮ್ಮ ಸಮುದಾಯದ ಮಾರ್ಗಸೂಚಿಗಳ ಇತರ ಉಲ್ಲಂಘನೆಗಳಿಗಾಗಿ, Snap ಸಾಮಾನ್ಯವಾಗಿ ಮೂರು ಭಾಗಗಳ ಜಾರಿಗೊಳಿಸುವಿಕೆ ಪ್ರಕ್ರಿಯೆಯೊಂದನ್ನು ಅನ್ವಯಿಸುತ್ತದೆ:

  • ಹಂತ ಒಂದು: ಉಲ್ಲಂಘಿಸುವ ಕಂಟೆಂಟ್ ಅನ್ನು ತೆಗೆದುಹಾಕಲಾಗುತ್ತದೆ.

  • ಹಂತ ಎರಡು: ಆ Snapchatter ಗೆ ಅವರು ಸಲ್ಲಿಸಿದ ಕಂಟೆಂಟ್ ನಮ್ಮ ಸಮುದಾಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು, ಅವರ ಕಂಟೆಂಟ್ ಅನ್ನು ತೆಗೆದುಹಾಕಲಾಗಿದೆ ಎಂದು ಮತ್ತು ಪುನರಾವರ್ತಿತ ಉಲ್ಲಂಘನೆಗಳು ಅವರ ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಸೇರಿದಂತೆ, ಹೆಚ್ಚುವರಿ ಜಾರಿ ಕ್ರಮಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಸೂಚಿಸುವ ಅಧಿಸೂಚನೆಯನ್ನು ರವಾನಿಸಲಾಗುತ್ತದೆ.

  • ಹಂತ ಮೂರು: ನಮ್ಮ ತಂಡವು ಆ Snapchatter ನ ಖಾತೆಯ ವಿರುದ್ಧ ಒಂದು ಸ್ಟ್ರೈಕ್‌ ಅನ್ನು ದಾಖಲಿಸುತ್ತದೆ.

H1 2024 ರಲ್ಲಿ EU ನಲ್ಲಿನ ಖಾತೆಗಳ ಮೇಲೆ ವಿಧಿಸಲಾದ ಸ್ಟ್ರೈಕ್‌ಗಳು (ಅಂದರೆ, ಎಚ್ಚರಿಕೆಗಳು) ಮತ್ತು ಪ್ರತಿಬಂಧಗಳ ಸಂಖ್ಯೆಗಳಿಗೆ ಸಂಬಂಧಿತ ಮಾಹಿತಿಯನ್ನು ಮೇಲಿನ ವಿಭಾಗಗಳು 3(a) ಮತ್ತು 3(b) ಗಳಲ್ಲಿ ಕಾಣಬಹುದಾಗಿದೆ.

  • ಅನುಚ್ಛೇದ 23.2 ರ ಅನುಸಾರವಾಗಿ ಮಾಡಲಾದ ಅಮಾನತುಗಳು: ಸ್ಪಷ್ಟವಾಗಿ ಆಧಾರರಹಿತವಾಗಿ ಪದೇ-ಪದೇ ಸೂಚನೆಗಳು ಅಥವಾ ದೂರುಗಳನ್ನು ಸಲ್ಲಿಸುವ ವ್ಯಕ್ತಿಗಳು, ಘಟಕಗಳು ಮತ್ತು ದೂರುದಾರರಿಂದ ಪಡೆಯಲಾಗುವ ಸೂಚನೆಗಳು ಮತ್ತು ದೂರುಗಳ ಪ್ರಕ್ರಿಯೆಗೊಳಿಸುವಿಕೆಗಳ ಮೇಲಿನ ಅಮಾನತುಗಳು

"ಸ್ಪಷ್ಟವಾಗಿ ಆಧಾರರಹಿತವಾದ" ಸೂಚನೆಗಳು ಮತ್ತು ದೂರುಗಳು ಎಂಬ ಪದಗಳ ನಮ್ಮ ಆಂತರಿಕ ವ್ಯಾಖ್ಯಾನಗಳನ್ನು, ಹಾಗೂ ಅಂತಹ ಸೂಚನೆಗಳು ಮತ್ತು ದೂರುಗಳು ಪದೇ-ಪದೇ ಸಲ್ಲಿಸಲ್ಪಟ್ಟಿವೆ ಎಂದು ನಾವು ಪರಿಗಣಿಸಲು ನಾವು ಬಳಸುವ ನಮ್ಮ ಆಂತರಿಕ ಮಿತಿಗಳನ್ನು ಅನ್ವಯಿಸುತ್ತ, DSA ಅನುಚ್ಛೇದ 23.2 ರ ಅನುಸಾರವಾಗಿ H1 2024 ರಲ್ಲಿ ಸೂಚನೆಗಳು ಮತ್ತು ದೂರುಗಳ ಪ್ರಕ್ರಿಯೆಗೊಳಿಸುವಿಕೆಯ ಮೇಲೆ ವಿಧಿಸಲಾದ ಅಮಾನತುಗಳ ಸಂಖ್ಯೆಯು ಈ ಕೆಳಗಿನಂತಿದೆ:

4. ನಮ್ಮ ವಿಷಯದ ಮಾಡರೇಶನ್ ತಂಡಗಳ ಬಗ್ಗೆ ಮಾಹಿತಿ 
a) DSA ಅನುಚ್ಛೇದ 16, 20 ಮತ್ತು 22 ಗಳ ಅನುಸರಣೆಗಾಗಿಯೂ ಸೇರಿದಂತೆ, ಸದಸ್ಯ ರಾಷ್ಟ್ರಗಳ ಅಧಿಕೃತ ಭಾಷೆಗಳವಾರು ವಿಂಗಡಿಸಲ್ಪಟ್ಟ ವಿಷಯ ಮಾಡರೇಶನ್‌ಗೆ ಮೀಸಲಾಗಿಡಲಾಗಿರುವ ಮಾನವ ಸಂಪನ್ಮೂಲಗಳು
(ಅನುಚ್ಛೇದ 42.2(a))


ನಮ್ಮ ವಿಷಯ ಮಾಡರೇಶನ್ ತಂಡಗಳು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತವೆ, ಹಾಗೂ ಆ ಮೂಲಕ 24/7 Snapchatter ಗಳನ್ನು ಸುರಕ್ಷಿತವಾಗಿ ಇರಿಸಲು ನಮಗೆ ಸಹಾಯ ಮಾಡುತ್ತವೆ. ಕೆಳಗೆ, ನೀವು 30 ಜೂನ್‌ 2024 ರಂದು ನಾವು ಹೊಂದಿರುವ ಮಾಡರೇಟರ್‌ಗಳ ಭಾಷಾ ಪರಿಣತಿಗಳ ಪ್ರಕಾರ ನಮ್ಮ ಮಾನವ ಮಾಡರೇಶನ್ ಸಂಪನ್ಮೂಲಗಳವಾರು ವಿಂಗಡಿಸಲಾದ (ಕೆಲವು ಮಾಡರೇಟರ್‌ಗಳು ಹಲವು ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದಾರೆ ಎನ್ನುವುದನ್ನು ಗಮನದಲ್ಲಿಡಿ) ವಿವರಗಳನ್ನು ಕಾಣುವಿರಿ:

ಮೇಲಿನ ಕೋಷ್ಟಕವು 30 ಜೂನ್ 2024 ರಂತೆ EU ಸದಸ್ಯ ರಾಷ್ಟ್ರಗಳ ಅಧಿಕೃತ ಭಾಷೆಗಳನ್ನು ಬೆಂಬಲಿಸುವ ವಿಷಯ ಮಾಡರೇಶನ್‌ಗೆ ಮೀಸಲಾಗಿರುವ ಎಲ್ಲಾ ಮಾನವ ಸಂಪನ್ಮೂಲಗಳನ್ನು ಒಳಗೊಂಡಿದೆ. ನಮಗೆ ಹೆಚ್ಚುವರಿ ಭಾಷಾ ಸೇವೆಗಳ ನೆರವಿನ ಅಗತ್ಯವಿರುವಂತಹ ಸಂದರ್ಭಗಳಲ್ಲಿ, ನಾವು ಅನುವಾದ ಸೇವೆಗಳನ್ನು ಬಳಸುತ್ತೇವೆ.

b) ವಿಷಯ ಮಾಡರೇಟರ್‌ಗಳ ಅರ್ಹತೆಗಳು ಮತ್ತು ಭಾಷಾ ಪರಿಣತಿ; ಅವರಿಗೆ ಒದಗಿಸಲಾದ ತರಬೇತಿ ಮತ್ತು ಬೆಂಬಲಗಳು
(ಅನುಚ್ಛೇದ 42.2(b))


ಮಾಡರೇಟರ್‌ಗಳನ್ನು ಪ್ರಮಾಣಿತ ಉದ್ಯೋಗ ವಿವರಣೆಯನ್ನು ಬಳಸಿಕೊಂಡು ನೇಮಕ ಮಾಡಲಾಗುತ್ತದೆ, ಅದು ಭಾಷೆಯ ಅಗತ್ಯವನ್ನು ಒಳಗೊಂಡಿರುತ್ತದೆ (ಅಗತ್ಯವನ್ನು ಅವಲಂಬಿಸಿ). ಪ್ರವೇಶ-ಮಟ್ಟದ ಹುದ್ದೆಗಳಿಗಾಗಿ ಭಾಷಾ ಪರಿಣತಿಯ ಅಗತ್ಯತೆಯ ಪ್ರಕಾರ ಅಭ್ಯರ್ಥಿಯು ಸಂಬಂಧಿತ ಭಾಷೆಯಲ್ಲಿ ಸ್ಫುಟವಾಗಿ ಬರೆಯುವ ಮತ್ತು ಮಾತನಾಡುವ ಕೌಶಲ್ಯಗಳನ್ನು ಪ್ರದರ್ಶಿಸಲು ಸಾಧ್ಯವಾಗಬೇಕು ಹಾಗೂ ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು. ಅಭ್ಯರ್ಥಿಗಳನ್ನು ಪರಿಗಣಿಸಬೇಕಾದಲ್ಲಿ ಅವರು ಶೈಕ್ಷಣಿಕ ಮತ್ತು ಹಿನ್ನೆಲೆಯ ಅಗತ್ಯಗಳನ್ನು ಪೂರೈಸಬೇಕು. ಅಭ್ಯರ್ಥಿಗಳು ತಾವು ವಿಷಯ ಮಾಡರೇಶನ್‌ನ ನಿರ್ವಹಿಸುವಂತಹ ದೇಶ ಅಥವಾ ಪ್ರದೇಶದ ಪ್ರಸಕ್ತ ವಿದ್ಯಮಾನಗಳ ಅರಿವನ್ನು ಕೂಡ ಪ್ರದರ್ಶಿಸಬೇಕಾಗುತ್ತದೆ.

ವಿಷಯ ಮಾಡರೇಟರ್‌ಗಳಿಗೆ Snap ಒದಗಿಸುವ ತರಬೇತಿ ಮತ್ತು ಬೆಂಬಲದ ಮಾಹಿತಿಗಾಗಿ ಮೇಲೆ ನೋಡಿ, ಇದು DSA ಆರ್ಟಿಕಲ್ 15(1)(c) ಅಡಿಯಲ್ಲಿ ಪ್ರತ್ಯೇಕವಾಗಿ ಅಗತ್ಯವಿದೆ ಮತ್ತು ಹೀಗೆ ವಿಭಾಗ 3(b) ನಲ್ಲಿ ಅಂತಿಮ ಉಪವಿಭಾಗದಲ್ಲಿ ಈ ಶೀರ್ಷಿಕೆಯೊಂದಿಗೆ ಒಳಗೊಂಡಿದೆ: “ವಿಷಯ ಮಾಡರೇಶೇನ್ ಜವಾಬ್ದಾರಿಯನ್ನು ಹೊಂದಿರುವ ವ್ಯಕ್ತಿಗಳಿಗೆ ತರಬೇತಿ ಮತ್ತು ನೆರವನ್ನು ಒದಗಿಸಲು ತೆಗೆದುಕೊಳ್ಳಲಾದ ಕ್ರಮಗಳು"

ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ (CSEA) ಮಾಧ್ಯಮ ಸ್ಕ್ಯಾನಿಂಗ್ ವರದಿ

ಬಿಡುಗಡೆಯಾಗಿರುವುದು: 31 ಜನವರಿ 2025

ಕೊನೆಯದಾಗಿ ನವೀಕರಿಸಲಾಗಿರುವುದು: 31 ಜನವರಿ 2025

ಈ ವರದಿಯು ಜನವರಿ 1, 2024 ರಿಂದ ಪ್ರಾರಂಭವಾಗಿ ಡಿಸೆಂಬರ್ 31, 2024 ರಂದು ಕೊನೆಗೊಳ್ಳುವ ಅವಧಿಯನ್ನು ಒಳಗೊಂಡಿದೆ.

ಹಿನ್ನೆಲೆ

ನಮ್ಮ ಕಮ್ಯುನಿಟಿಯ ಯಾವುದೇ ಸದಸ್ಯರ, ವಿಶೇಷವಾಗಿ ಅಪ್ರಾಪ್ತ ವಯಸ್ಕರ ಲೈಂಗಿಕ ಶೋಷಣೆಯು ಕಾನೂನುಬಾಹಿರವಾಗಿದೆ, ಅಸಹ್ಯಕರವಾಗಿದೆ ಮತ್ತು ನಮ್ಮ ಕಮ್ಯುನಿಟಿಯ ಮಾರ್ಗಸೂಚಿಗಳಿಂದ ನಿಷೇಧಿಸಲಾಗಿದೆ. ನಮ್ಮ ವೇದಿಕೆಯಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯವನ್ನು (CSEA) ತಡೆಗಟ್ಟುವುದು, ಪತ್ತೆಹಚ್ಚುವುದು ಮತ್ತು ನಿರ್ಮೂಲನೆ ಮಾಡುವುದು ನಮಗೆ ಪ್ರಮುಖ ಆದ್ಯತೆಯಾಗಿದೆ, ಹಾಗೂ ಇವುಗಳನ್ನು ಮತ್ತು ಇತರ ರೀತಿಯ ಅಪರಾಧಗಳನ್ನು ಎದುರಿಸಲು ನಾವು ನಮ್ಮ ಸಾಮರ್ಥ್ಯಗಳನ್ನು ನಿರಂತರವಾಗಿ ವಿಕಸನಗೊಳಿಸುತ್ತೇವೆ.


ನಾವು ಬಳಸುವ ತಂತ್ರಜ್ಞಾನಗಳಲ್ಲಿ (ಅ) PhotoDNAಯ ದೃಢವಾದ ಹ್ಯಾಶ್-ಮ್ಯಾಚಿಂಗ್ ಮತ್ತು ಗೂಗಲ್‌ನ ಮಕ್ಕಳ ಲೈಂಗಿಕ ದೌರ್ಜನ್ಯ ಚಿತ್ರಣ (CSAI) ಹೊಂದಾಣಿಕೆಯು ಕ್ರಮವಾಗಿ CSEA ನ ಕಾನೂನುಬಾಹಿರ ಚಿತ್ರಗಳು ಮತ್ತು ವೀಡಿಯೊಗಳನ್ನು ಗುರುತಿಸುವುದು; ಮತ್ತು (ಆ) "ಎಂದಿಗೂ-ಹಿಂದೆ-ಹ್ಯಾಶ್ ಮಾಡದ" CSEA ಚಿತ್ರಣವನ್ನು ಗುರುತಿಸುವ ಗೂಗಲ್‌ನ ವಿಷಯ ಸುರಕ್ಷತಾ API ಸೇರಿವೆ. ಕಾನೂನಿನ ಪ್ರಕಾರ, ನಾವು CSEA ಚಿತ್ರಣವನ್ನು U.S. ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ (NCMEC) ವರದಿ ಮಾಡುತ್ತೇವೆ. ಪ್ರತಿಯಾಗಿ, NCMEC, ಅಗತ್ಯವಿರುವಂತೆ, U.S ಮತ್ತು ಇತರ ದೇಶಗಳಲ್ಲಿ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತದೆ.


ವರದಿ

ಕೆಳಗಿನ ನಕಾಶೆ / ಪಟ್ಟಿ 2024 ರಲ್ಲಿ CSEA ಚಿತ್ರಣಕ್ಕಾಗಿ EU ಬಳಕೆದಾರರ ವಿರುದ್ಧ ಪೂರ್ವಭಾವಿ ಪತ್ತೆ ಮತ್ತು ಅದರ ಪರಿಣಾಮವಾಗಿ ಜಾರಿಗೊಳಿಸುವಿಕೆಗಳ ಕುರಿತು ಡೇಟಾವನ್ನು ಒಳಗೊಂಡಿದೆ. (ಗಮನಿಸಿ, 2024 ರಲ್ಲಿ ಹೇಳಲಾದ ಪೂರ್ವಭಾವಿ ಸ್ಕ್ಯಾನಿಂಗ್‌ನಿಂದ ಉಂಟಾದ ಕೆಲವು ಜಾರಿಗೊಳಿಸುವಿಕೆಗಳು ಈ ವರದಿಯನ್ನು ಸಂಕಲಿಸಿದಾಗ ಮೇಲ್ಮನವಿಗೆ ಒಳಪಟ್ಟಿರಬಹುದು ಮತ್ತು ಆದ್ದರಿಂದ ಕೆಳಗಿನ ಮೇಲ್ಮನವಿಗಳು ಮತ್ತು ಮರುಸ್ಥಾಪನೆಗಳ ಡೇಟಾದಲ್ಲಿ ಅವು ಪ್ರತಿಫಲಿಸುವುದಿಲ್ಲ.)

*ಈ ವರ್ಗವು ಮಕ್ಕಳ ಲೈಂಗಿಕ ಶೋಷಣೆಯನ್ನು ನಿಷೇಧಿಸುವ Snap ನ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ಜಾರಿಗೊಳಿಸುವಿಕೆಗಳನ್ನು ವರದಿ ಮಾಡುತ್ತದೆ. Snap ನ ಸಮುದಾಯ ಮಾರ್ಗಸೂಚಿಗಳ ಇತರ ಉಲ್ಲಂಘನೆಗಳಿಗಾಗಿ ಜಾರಿಗೊಳಿಸಲಾದ ಪೂರ್ವಭಾವಿ ಪತ್ತೆಗಳನ್ನು ಇಲ್ಲಿ ವರದಿ ಮಾಡಲಾಗುವುದಿಲ್ಲ.

**ಜಾರಿಗೊಳಿಸುವ ಸಮಯದಲ್ಲಿ ಜಾರಿಯಲ್ಲಿದ್ದ ನಮ್ಮ ನೀತಿಗಳ ಆಧಾರದ ಮೇಲೆ ಅದು ತಪ್ಪಾಗಿದೆ ಎಂದು ನಾವು ನಿರ್ಧರಿಸಿದರೆ ಅಥವಾ ಅದನ್ನು ಮೂಲತಃ ಸರಿಯಾಗಿ ಜಾರಿಗೊಳಿಸಲಾಗಿದೆ ಆದರೆ ಮೇಲ್ಮನವಿಯನ್ನು ಪರಿಶೀಲಿಸುವ ಸಮಯದಲ್ಲಿ ನಮ್ಮ ಅನ್ವಯವಾಗುವ ನೀತಿ ಬದಲಾಗಿದೆ ಎಂದು ನಾವು ನಿರ್ಧರಿಸಿದರೆ, ಜಾರಿಗೊಳಿಸುವಿಕೆಯನ್ನು ರದ್ದುಗೊಳಿಸಬಹುದು.

ವಿಷಯ ನಿಯಂತ್ರಣಕ್ಕೆ ಸಂಬಂಧಿಸಿದ ಸುರಕ್ಷತಾ ಕ್ರಮಗಳು

CSEA ಮಾಧ್ಯಮ ಸ್ಕ್ಯಾನಿಂಗ್‌ಗೆ ಅನ್ವಯಿಸಲಾದ ಸುರಕ್ಷತಾ ಕ್ರಮಗಳನ್ನು ಮೇಲಿನ EU DSAಯ ಪಾರದರ್ಶಕತೆಯ ವರದಿಯಲ್ಲಿ ನಿಗದಿಪಡಿಸಲಾಗಿದೆ.

ಐರೋಪ್ಯ ಒಕ್ಕೂಟದ ಭಯೋತ್ಪಾದಕ ವಿಷಯದ ಆನ್‌ಲೈನ್‌ ಪಾರದರ್ಶಕತೆಯ ವರದಿ

ಪ್ರಕಟಣೆ: 17 ಜೂನ್ 2024

ಕೊನೆಯ ಬಾರಿ ನವೀಕರಿಸಲಾದ ದಿನಾಂಕ: 17 ಜೂನ್ 2024

ಈ ಪಾರದರ್ಶಕತೆಯ ವರದಿಯನ್ನು ಐರೋಪ್ಯ ಸಂಸತ್ತಿನ ಮತ್ತು EU ನ ಮಂತ್ರಿ ಮಂಡಲದ ನಿಯಂತ್ರಣ 2021/784 ರ ಅನುಚ್ಛೇದಗಳು 7(2) ಮತ್ತು 7(3) ಗಳಿಗೆ ಅನುಸಾರವಾಗಿ ಪ್ರಕಟಿಸಲಾಗಿದೆ, ಇದು ಆನ್‌ಲೈನ್‌ನಲ್ಲಿ ಭಯೋತ್ಪಾದಕ ವಿಷಯದ ಪ್ರಸಾರವನ್ನು ಉದ್ದೇಶಿಸುತ್ತದೆ (ನಿಯಂತ್ರಣ). ಇದು 1 ಜನವರಿ - 31 ಡಿಸೆಂಬರ್ 2023 ರ ವರದಿಯ ಅವಧಿಯನ್ನು ಒಳಗೊಂಡಿರುತ್ತದೆ. 


ಸಾಮಾನ್ಯ ಮಾಹಿತಿ
  • ಅನುಚ್ಛೇದ 7(3)(a): ಭಯೋತ್ಪಾದಕ ವಿಷಯದ ಗುರುತಿಸುವಿಕೆ ಮತ್ತು ತೆಗೆದುಹಾಕುವಿಕೆಗೆ ಸಂಬಂಧಿಸಿದ ಅಥವಾ ಭಯೋತ್ಪಾದಕ ವಿಷಯಕ್ಕೆ ಪ್ರವೇಶವನ್ನು ನಿಷ್ಕ್ರಿಯಗೊಳಿಸುವಿಕೆಗೆ ಸಂಬಂಧಿಸಿದಂತೆ ಹೋಸ್ಟಿಂಗ್‌ ಸೇವಾ ಪೂರೈಕೆದಾರರ ಕ್ರಮಗಳ ಕುರಿತಾದ ಮಾಹಿತಿ

  • ಅನುಚ್ಛೇದ 7(3)(b): ಈ ಹಿಂದೆ ಭಯೋತ್ಪಾದಕ ವಿಷಯವೆಂದು ಪರಿಗಣಿಸಲ್ಪಟ್ಟ ಕಾರಣದಿಂದ ತೆಗೆದುಹಾಕಲಾದ ಅಥವಾ ಪ್ರವೇಶವನ್ನು ನಿಷ್ಕ್ರಿಯಗೊಳಿಸಲಾದ ವಿಷಯವು ಆನ್‌ಲೈನ್‌ನಲ್ಲಿ ಮರು ಪ್ರಕಟಗೊಳ್ಳುವುದಕ್ಕೆ, ವಿಶೇಷವಾಗಿ ಸ್ವಯಂಚಾಲಿತ ಸಾಧನಗಳನ್ನು ಬಳಸಲ್ಪಟ್ಟಿರುವ ಸನ್ನಿವೇಶಗಳಿಗೆ ಸಂಬಂಧಿಸಿದ ಹೋಸ್ಟಿಂಗ್‌ ಸೇವಾ ಪೂರೈಕೆದಾರರ ಕ್ರಮಗಳ ಕುರಿತಾದ ಮಾಹಿತಿ


ಭಯೋತ್ಪಾದಕರು, ಭಯೋತ್ಪಾದಕ ಸಂಘಟನೆಗಳು ಮತ್ತು ಹಿಂಸಾತ್ಮಕ ವಿಧ್ವಂಸಕರು Snapchat ಅನ್ನು ಬಳಸದಿರುವಂತೆ ನಿಷೇಧಿಸಲಾಗಿದೆ. ಭಯೋತ್ಪಾದನೆ ಅಥವಾ ಇತರ ಹಿಂಸಾತ್ಮಕ, ಅಪರಾಧೀ ಕೃತ್ಯಗಳನ್ನು ಪ್ರತಿಪಾದಿಸುವ, ಉತ್ತೇಜಿಸುವ, ವೈಭವೀಕರಿಸುವ ಅಥವಾ ಮುನ್ನಡೆಸುವ ವಿಷಯವನ್ನು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಅಡಿಯಲ್ಲಿ ನಿಷೇಧಿಸಲಾಗಿದೆ. ಬಳಕೆದಾರರು ನಮ್ಮ ಆ್ಯಪ್‌ನಲ್ಲಿರುವ ವರದಿ ಮಾಡುವ ಪರಿವಿಡಿ ಮತ್ತು ನಮ್ಮ ನೆರವು ಜಾಲತಾಣದ ಮೂಲಕ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿಷಯದ ಬಗ್ಗೆ ವರದಿ ಮಾಡಲು ಸಾಧ್ಯವಾಗುತ್ತದೆ. ನಾವು ಸ್ಪಾಟ್‌ಲೈಟ್‌ ಮತ್ತು Discover ಗಳಂತಹ ಸಾರ್ವಜನಿಕ ಮೇಲ್ಮೈಗಳಲ್ಲಿ ಉಲ್ಲಂಘನಾ ವಿಷಯಗಳನ್ನು ಗುರುತಿಸಲು ಪ್ರಯತ್ನಿಸುವುದಕ್ಕಾಗಿ ಸಕ್ರಿಯಾತ್ಮಕ ಪತ್ತೆಹಚ್ಚುವಿಕೆಯನ್ನು ಸಹ ಬಳಸುತ್ತೇವೆ. 


ನಾವು ಉಲ್ಲಂಘನಾತ್ಮಕ ವಿಷಯದ ಬಗ್ಗೆ ಯಾವುದೇ ವಿಧಾನದಲ್ಲಿ ತಿಳಿದುಕೊಂಡರೂ , ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡಗಳು ಯಾಂತ್ರೀಕೃತ ಮತ್ತು ಮಾನವ ನಿಯಂತ್ರಿತ ಉಪಕ್ರಮಗಳ ಸಂಯೋಜನೆಯ ಮೂಲಕ ಗುರುತಿಸಲಾದ ವಿಷಯವನ್ನು ತ್ವರಿತವಾಗಿ ಪರಿಶೀಲಿಸುತ್ತವೆ ಹಾಗೂ ಜಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಜಾರಿ ಕ್ರಮಗಳಲ್ಲಿ ಆ ವಿಷಯದ ತೆಗೆದುಹಾಕುವಿಕೆ, ಎಚ್ಚರಿಕೆ ನೀಡುವಿಕೆ ಅಥವಾ ಉಲ್ಲಂಘಿಸುವ ಖಾತೆಯನ್ನು ನಿರ್ಬಂಧಿಸುವುದು, ಹಾಗೂ, ಅಗತ್ಯವಿದ್ದಲ್ಲಿ, ಆ ಖಾತೆಯ ಕುರಿತು ಮಾಹಿತಿಯನ್ನು ಕಾನೂನು ಜಾರಿ ಪ್ರಾಧಿಕಾರಗಳಿಗೆ ನೀಡುವಂತಹ ಕ್ರಮಗಳು ಒಳಗೊಂಡಿರಬಹುದು. Snapchat ನಲ್ಲಿ ಭಯೋತ್ಪಾದಕ ಅಥವಾ ಇತರ ಹಿಂಸಾತ್ಮಕ ವಿಧ್ವಂಸಕ ವಿಷಯ ಮರು ಪ್ರಕಟಗೊಳ್ಳುವುದನ್ನು ತಡೆಗಟ್ಟಲು, ಕಾನೂನು ಜಾರಿಗೊಳಿಸುವ ಪ್ರಾಧಿಕಾರಗಳೊಂದಿಗೆ ಕಾರ್ಯನಿರ್ವಹಿಸುವ ಜೊತೆಗೆ, ನಾವು ಉಲ್ಲಂಘಿಸುವ ಖಾತೆಯೊಂದಿಗೆ ಸಂಬಂಧಿಸಿದ ಸಾಧನವನ್ನು ನಿರ್ಬಂಧಿಸಲು ಮತ್ತು ಆ ಬಳಕೆದಾರರು ಮತ್ತೊಂದು Snapchat ಖಾತೆಯನ್ನು ರಚಿಸುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.


ಭಯೋತ್ಪಾದಕ ವಿಷಯಗಳನ್ನು ಗುರುತಿಸಲು ಮತ್ತು ತೆಗೆದುಹಾಕಲು ನಾವು ತೆಗೆದುಕೊಳ್ಳುವ ಕ್ರಮಗಳ ಕುರಿತಾದ ಹೆಚ್ಚುವರಿ ವಿವರಗಳು ನಮ್ಮ ದ್ವೇಷಪೂರಿತ ವಿಷಯ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದದ ಕುರಿತು ವಿವರಣಾ ಮಾಹಿತಿ ಹಾಗೂ ಮಿತಗೊಳಿಸುವಿಕೆ, ಜಾರಿಗೊಳಿಸುವಿಕೆ ಮತ್ತು ಮೇಲ್ಮನವಿಗಳ ಕುರಿತು ವಿವರಣಾ ಮಾಹಿತಿ ಗಳಲ್ಲಿ ಕಾಣಬಹುದಾಗಿದೆ.



ವರದಿಗಳು ಮತ್ತು ಜಾರಿಗೊಳಿಸುವಿಕೆಗಳು
  • ಅನುಚ್ಛೇದ 7(3)(c): ಅನುಚ್ಛೇದ 3(7) ರ ಮೊದಲ ಉಪಕಂಡಿಕೆಗೆ ಅನುಸಾರವಾಗಿ ಮತ್ತು ಅನುಚ್ಛೇದ 3(8) ರ ಮೊದಲ ಉಪಕಂಡಿಕೆಗೆ ಅನುಸಾರವಾಗಿ, ತೆಗೆದುಹಾಕುವುದಕ್ಕಾಗಿ ಆದೇಶಗಳನ್ನು ನೀಡಲಾದ ನಂತರ ಅಥವಾ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲಾದ ನಂತರ ತೆಗೆದುಹಾಕಲಾಗಿರುವ ಭಯೋತ್ಪಾದಕ ವಿಷಯಗಳ ಸಂಖ್ಯೆ ಅಥವಾ ಪ್ರವೇಶವನ್ನು ತೆಗೆದುಹಾಕಲಾಗಿರುವ ಅಂತಹ ಭಯೋತ್ಪಾದಕ ವಿಷಯಗಳ ಸಂಖ್ಯೆ, ಹಾಗೂ ತೆಗೆದುಹಾಕುವುದಕ್ಕಾಗಿ ಆದೇಶಗಳನ್ನು ನೀಡಲಾದ ನಂತರ ಅಥವಾ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲಾದ ನಂತರ ತೆಗೆದುಹಾಕಲಾಗಿಲ್ಲದ ಭಯೋತ್ಪಾದಕ ವಿಷಯಗಳ ಸಂಖ್ಯೆ ಅಥವಾ ಪ್ರವೇಶವನ್ನು ತೆಗೆದುಹಾಕಲಾಗಿಲ್ಲದ ಅಂತಹ ಭಯೋತ್ಪಾದಕ ವಿಷಯಗಳ ಸಂಖ್ಯೆ, ಹಾಗೂ ಜೊತೆಗೆ ಅದಕ್ಕಾಗಿ ಕಾರಣಗಳು


ವರದಿ ಮಾಡುವ ಅವಧಿಯಲ್ಲಿ Snap ಯಾವುದೇ ವಿಷಯದ ತೆಗೆದುಹಾಕುವಿಕೆ ಆದೇಶಗಳನ್ನು ಪಡೆಯಲಿಲ್ಲ, ಹಾಗೂ ಅದರೊಂದಿಗೆ, ನಮಗೆ ನಿಯಂತ್ರಣದ ಅನುಚ್ಛೇದ 5 ರ ಅನುಸಾರವಾಗಿ ಯಾವುದೇ ನಿರ್ದಿಷ್ಟ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿರಲಿಲ್ಲ. ಅಂತೆಯೇ, ನಾವು ನಿಯಂತ್ರಣದ ಅಡಿಯಲ್ಲಿ ಯಾವುದೇ ಜಾರಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿರಲಿಲ್ಲ.


ಈ ಕೆಳಗಿನ ಕೋಷ್ಟಕವು ಬಳಕೆದಾರರ ವರದಿಗಳ ಆಧಾರದ ಮೇಲೆ ಹಾಗೂ ಸಕ್ರಿಯಾತ್ಮಕ ಪತ್ತೆಹಚ್ಚುವಿಕೆಯ ಆಧಾರದ ಮೇಲೆ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದದ ವಿಷಯಕ್ಕೆ ಸಂಬಂಧಿಸಿದ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ವಿಷಯ ಮತ್ತು ಖಾತೆಗಳ ವಿರುದ್ಧ EU ನಲ್ಲಿ ಮತ್ತು ವಿಶ್ವದ ಬೇರೆಡೆಗಳಲ್ಲಿಯೂ ತೆಗೆದುಕೊಳ್ಳಲ್ಪಟ್ಟ ಜಾರಿಗೊಳಿಸುವ ಕ್ರಮಗಳನ್ನು ವಿವರಿಸುತ್ತದೆ

ಜಾರಿ ಮೇಲ್ಮನವಿಗಳು
  • ಅನುಚ್ಛೇದ 7(3)(d): ಅನುಚ್ಛೇದ 10 ಪ್ರಕಾರ ಹೋಸ್ಟಿಂಗ್‌ ಸೇವಾ ಪೂರೈಕೆದಾರರಿಂದ ನಿರ್ವಹಿಸಲ್ಪಡುವ ದೂರುಗಳ ಸಂಖ್ಯೆ ಮತ್ತು ಫಲಿತಾಂಶಗಳು

  • ಅನುಚ್ಛೇದ 7(3)(g): ವಿಷಯದ ಪೂರೈಕೆದಾರರು ನೀಡಿದ ದೂರಿನ ನಂತರ ಹೋಸ್ಟಿಂಗ್‌ ಸೇವಾ ಪೂರೈಕೆದಾರರು ಮರುಸ್ಥಾಪಿಸಿದ ವಿಷಯದ ಅಥವಾ ಆ ವಿಷಯಕ್ಕೆ ಪ್ರವೇಶವನ್ನು ಮರುಸ್ಥಾಪಿಸಿದ ಪ್ರಕರಣಗಳ ಸಂಖ್ಯೆ


ವರದಿ ಮಾಡುವ ಅವಧಿಯಲ್ಲಿ ಮೇಲೆ ತಿಳಿಸಲಾದಂತೆ ನಾವು ಯಾವುದೇ ಜಾರಿ ಕ್ರಮಗಳನ್ನು ಹೊಂದಿರಲಿಲ್ಲವಾದ್ದರಿಂದ, ನಾವು ನಿಬಂಧನೆಯ ಅನುಚ್ಛೇದ 10 ರ ಅನುಸಾರವಾಗಿ ಯಾವುದೇ ದೂರುಗಳನ್ನು ನಿರ್ವಹಿಸಲಿಲ್ಲ ಹಾಗೂ ಯಾವುದೇ ಸಂಬಂಧಿತ ಮರುಸ್ಥಾಪನೆಗಳನ್ನು ಹೊಂದಿರಲಿಲ್ಲ.


ಈ ಕೆಳಗಿನ ಕೋಷ್ಟಕವು ನಮ್ಮ ಸಮುದಾಯದ ಮಾರ್ಗಸೂಚಿಗಳ ಅಡಿಯಲ್ಲಿ ಜಾರಿಗೊಳಿಸಲಾದ ಭಯೋತ್ಪಾದಕ ಮತ್ತು ಹಿಂಸಾತ್ಮಕ ಉಗ್ರವಾದದ ವಿಷಯಗಳಿಗೆ ಸಂಬಂಧಿಸಿದಂತೆ EU ನಲ್ಲಿ ಮತ್ತು ವಿಶ್ವದಾದ್ಯಂತವೂ ಸೇರಿ ಮಾಡಲ್ಪಟ್ಟಂತಹ ಮೇಲ್ಮನವಿಗಳು ಮತ್ತು ಮರುಸ್ಥಾಪನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿರುತ್ತದೆ.

ನ್ಯಾಯಾಂಗ ನಡವಳಿಗಳು ಮತ್ತು ಮೇಲ್ಮನವಿಗಳು
  • ಅನುಚ್ಛೇದ 7(3)(e): ಹೋಸ್ಟಿಂಗ್‌ ಸೇವಾ ಪೂರೈಕೆದಾರರು ತಂದಿರುವ ಆಡಳಿತಾತ್ಮಕ ಅಥವಾ ನ್ಯಾಯಾಂಗ ಪರಾಮರ್ಶೆಯ ಪ್ರಕ್ರಿಯೆಗಳ ಸಂಖ್ಯೆ ಮತ್ತು ಫಲಿತಾಂಶಗಳು

  • ಅನುಚ್ಛೇದ 7(3)(f): ಆಡಳಿತಾತ್ಮಕ ಅಥವಾ ನ್ಯಾಯಾಂಗ ಪರಾಮರ್ಶೆಯ ಪ್ರಕ್ರಿಯೆಗಳ ಪರಿಣಾಮವಾಗಿ ಹೋಸ್ಟಿಂಗ್‌ ಸೇವಾ ಪೂರೈಕೆದಾರರು ಯಾವುದೇ ವಿಷಯವನ್ನು ಅಥವಾ ಅದಕ್ಕೆ ಪ್ರವೇಶವನ್ನು ಪುನಃಸ್ಥಾಪಿಸಬೇಕಾದ ಸಂದರ್ಭಗಳ ಸಂಖ್ಯೆ


ವರದಿ ಮಾಡುವ ಅವಧಿಯಲ್ಲಿ ನಾವು ಯಾವುದೇ ಜಾರಿ ಕ್ರಮಗಳನ್ನು ಹೊಂದಿಲ್ಲದಿದ್ದ ಕಾರಣದಿಂದ, ಮೇಲೆ ತಿಳಿಸಿರುವಂತೆ, ನಾವು ಯಾವುದೇ ಪೂರಕ ಆಡಳಿತಾತ್ಮಕ ಅಥವಾ ನ್ಯಾಯಾಂಗ ಪರಾಮರ್ಶೆಯ ವಿಚಾರಣೆಗಳನ್ನು ಹೊಂದಿರಲಿಲ್ಲ, ಹಾಗೂ ಅಂತಹ ಯಾವುದೇ ಪ್ರಕ್ರಿಯೆಗಳ ಪರಿಣಾಮವಾಗಿ ನಾವು ಯಾವುದೇ ವಿಷಯವನ್ನು ಪುನಃಸ್ಥಾಪಿಸುವ ಅಗತ್ಯವಿರಲಿಲ್ಲ.

DSA ಅಪಾಯದ ಮೌಲ್ಯಮಾಪನ

ಈ ವರದಿಯನ್ನು ನಿಬಂಧನೆ (EU) 2022/2065 ರ ಅನುಚ್ಛೇದಗಳು 34 ಮತ್ತು 35 ಗಳ ಅಡಿಯಲ್ಲಿ Snap ನ ಬಾಧ್ಯತೆಗಳನ್ನು ಅನುಸರಿಸಲು ಸಿದ್ಧಪಡಿಸಲಾಗಿದೆ, ಹಾಗೂ Snapchat ನ ಆನ್‌ಲೈನ್‌ ಪ್ಲ್ಯಾಟ್‌ಫಾರ್ಮ್‌ಗಳ ವಿನ್ಯಾಸ, ಕಾರ್ಯ ಮತ್ತು ಬಳಕೆಗಳಿಂದ ಹೊಮ್ಮುವ ನಮ್ಮ ವ್ಯವಸ್ಥೆಯ ಅಪಾಯಗಳ ಮೌಲ್ಯಮಾಪನದ ಫಲಿತಾಂಶಗಳನ್ನು ಒದಗಿಸುತ್ತದೆ, ಹಾಗೂ ಜೊತೆಗೆ ಆ ಅಪಾಯಗಳನ್ನು ಮೌಲ್ಯಮಾಪನ ಮಾಡಲು ಬಳಸಲಾದ ಕಾರ್ಯವಿಧಾನದ ಕುರಿತು ಹಾಗೂ ಆ ಅಪಾಯಗಳನ್ನು ಪರಿಹರಿಸಲು ಬಳಸಲಾದ ಪರಿಹಾರ ಕ್ರಮಗಳ ಕುರಿತು ಮಾಹಿತಿ ಒದಗಿಸುತ್ತದೆ.


DSA ಅಪಾಯಗಳು ಹಾಗೂ ಪರಿಹಾರಗಳ ಮೌಲ್ಯಮಾಪನದ ವರದಿ | Snapchat | ಆಗಸ್ಟ್ 2023 (PDF)


DSA ಪರಿಶೋಧನೆ ಹಾಗೂ ಪರಿಶೋಧನಾ ಅನುಷ್ಠಾನ

ಈ ವರದಿಗಳನ್ನು ನಿಬಂಧನೆ (EU) 2022/2065 ರ ಅನುಚ್ಛೇದ 37 ರ ಅಡಿಯಲ್ಲಿ Snap ನ ಬಾಧ್ಯತೆಗಳನ್ನು ಅನುಸರಿಸಲು ಸಿದ್ಧಪಡಿಸಲಾಗಿದೆ, ಹಾಗೂ ಈ ಮುಂದಿನವುಗಳನ್ನು ಒಳಗೊಂಡಿದೆ: (i) (EU) 2022/2065 ರ ಅಧ್ಯಾಯ III ರಲ್ಲಿ ಸೂಚಿಸಲಾಗಿರುವ ಬಾಧ್ಯತೆಗಳ Snap ನ ಅನುಸರಣೆಯ ಕುರಿತು ನಡೆಸಲಾದ ಸ್ವತಂತ್ರ ಪರಿಶೋಧನೆಯ ಫಲಿತಾಂಶಗಳು, ಹಾಗೂ (ii) ಆ ಸ್ವತಂತ್ರ ಪರಿಶೋಧನೆಯಿಂದ ಪಡೆಯಲಾದ ಕಾರ್ಯಾಚರಣಾ ಶಿಫಾರಸುಗಳ ಅನುಷ್ಠಾನಕ್ಕಾಗಿ ಕೈಗೊಳ್ಳಲಾದ ಕ್ರಮಗಳು.

DSA ಸ್ವತಂತ್ರ ಪರಿಶೋಧನಾ ವರದಿ | Snapchat | ಆಗಸ್ಟ್ 2024 (PDF)

DSA ಪರಿಶೋಧನಾ ಅನುಷ್ಟಾನದ ವರದಿ | Snapchat | ಸೆಪ್ಟೆಂಬರ್ 2024 (PDF)



EU VSP ಅಭ್ಯಾಸ ಸಂಹಿತೆ

Snap ಸಂಸ್ಥೆಯು AVMSD ವಿಧಿ 1(1)(aa) ಗೆ ಅನುಸರಣೆ ಹೊಂದಿರುವ ಒಂದು "ವೀಡಿಯೊ ಹಂಚಿಕೊಳ್ಳುವ ವೇದಿಕೆ ಸೇವೆ ("VSP") ಪೂರೈಕೆದಾರನಾಗಿದೆ. ಡಚ್ ಮೀಡಿಯಾ ಕಾಯ್ದೆ (“DMA”) ಮತ್ತು ಆದೇಶ (EU) 2010/13 (ಆದೇಶ (EU) 2018/1808 ನಿಂದ ತಿದ್ದುಪಡಿ ಮಾಡಲಾಗಿರುವಂತೆ ("ಆಡಿಯೊ ವಿಷುವಲ್ ಮೀಡಿಯಾ ಸರ್ವೀಸಸ್ ಡೈರೆಕ್ಟಿವ್" ಅಥವಾ “AVMSD”)) ಅಡಿಯಲ್ಲಿ VSP ಆಗಿ ತನ್ನ ಬಾಧ್ಯತೆಗಳನ್ನು Snap ಹೇಗೆ ಅನುಸರಣೆ ಮಾಡುತ್ತದೆ ಎಂಬುದನ್ನು ವಿವರಿಸಲು ಅಭ್ಯಾಸ ಸಂಹಿತೆ ("ಸಂಹಿತೆ") ಅನ್ನು ಸಿದ್ಧಪಡಿಸಲಾಗಿದೆ. ಸಂಹಿತೆಯು ಯುರೋಪಿಯನ್ ಒಕ್ಕೂಟ ಹಾಗೂ ಯುರೋಪಿಯನ್ ಆರ್ಥಿಕ ಪ್ರದೇಶದಾದ್ಯಂತ ಅನ್ವಯಿಸುತ್ತದೆ.

EU VSP ಅಭ್ಯಾಸ ಸಂಹಿತೆ | Snapchat | ಡಿಸೆಂಬರ್ 2024 (PDF)