Privacy, Safety, and Policy Hub
Recommendation Eligibility

Illegal or Regulated Activities

Not Eligible for Recommendation:

Illegal or regulated activities, products or services that are prohibited in our Community Guidelines are prohibited anywhere on Snapchat. For content to be eligible for recommendation to a wider audience, it must not:

ಅಕ್ರಮ ಚಟುವಟಿಕೆಗಳಿಗೆ ಸೌಕರ್ಯ ಕಲ್ಪಿಸುವುದು ಅಥವಾ ಪ್ರಚಾರ ಮಾಡುವುದು

ಅಂತಹ ಕಂಟೆಂಟ್ ಅನ್ನು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಲ್ಲಿ ನಿಷೇಧಿಸಲಾಗಿದೆ, ಇದರರ್ಥ ಈ ಕಂಟೆಂಟ್ ಮಾರ್ಗಸೂಚಿಗಳಲ್ಲಿಯೂ ಅದನ್ನು ನಿಷೇಧಿಸಲಾಗಿದೆ.

ತಂಬಾಕು, ನಿಕೋಟಿನ್ ಅಥವಾ ಗಾಂಜಾ ಉತ್ಪನ್ನಗಳು ಅಥವಾ ಸಂಬಂಧಿತ ಪರಿಕರಗಳನ್ನು ಬಿಂಬಿಸುವುದು.

ಕಾನೂನುಬದ್ಧವಾಗಿರುವ ಸ್ಥಳಗಳಲ್ಲಿ ವಯಸ್ಕರು ಈ ಉತ್ಪನ್ನಗಳನ್ನು ಬಳಸುವ Snap ಗಳನ್ನು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ನಿಷೇಧಿಸುವುದಿಲ್ಲವಾದರೂ ಸಹ, ಈ ಕಂಟೆಂಟ್ ಮಾರ್ಗಸೂಚಿಗಳು ಅಂತಹ ಕಂಟೆಂಟ್‌ ಅನ್ನು ವರ್ಧಿಸುವುದಕ್ಕೆ ಅವಕಾಶ ನೀಡುವುದಿಲ್ಲ.

ಅಪಾಯಕಾರಿ ಮದ್ಯ ಬಳಕೆಯನ್ನು ಬಿಂಬಿಸುವುದು

ವಯಸ್ಕರು ಮದ್ಯ ಸೇವಿಸುವ Snap ಗಳನ್ನು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ನಿಷೇಧಿಸುವುದಿಲ್ಲವಾದರೂ ಸಹ, ಭಾರೀ ಪ್ರಮಾಣದಲ್ಲಿ ಮದ್ಯವನ್ನು ಅತಿವೇಗವಾಗಿ ಸೇವಿಸುವುದು ಅಥವಾ ಮದ್ಯದ ಅಮಲಿನಲ್ಲಿ ಅಥವಾ ಮದ್ಯವನ್ನು ಇರಿಸಿಕೊಂಡು ಭಾರೀ ಯಂತ್ರವನ್ನು ಕಾರ್ಯಾಚರಿಸುವುದು ಅಥವಾ ಮಾತು ತೊದಲಾಗುವ ತನಕ ಅಥವಾ ಪ್ರಜ್ಞೆ ತಪ್ಪುವ ತನಕ ಮದ್ಯ ಸೇವಿಸುವುದು ಮುಂತಾದ ವಯಸ್ಕರಿಂದ ಅತಿಯಾದ ಅಥವಾ ಅಪಾಯಕಾರಿ ಮಟ್ಟದ ಮದ್ಯ ಸೇವನೆಯನ್ನು ತೋರಿಸುವ ಕಂಟೆಂಟ್‌ನ ವರ್ಧನೆಗೆ ಅವಕಾಶ ನೀಡುವುದಿಲ್ಲ.

ನೈಜ ಆಧುನಿಕ ಮಾರಕ ಆಯುಧಗಳನ್ನು ಬಿಂಬಿಸುವುದು

ಸುದ್ದಿ, ಶಿಕ್ಷಣ ಅಥವಾ ಕ್ರೀಡೆಯ ಸನ್ನಿವೇಶದ ಹೊರಗೆ - ಬಂದೂಕುಗಳು, ದಾಳಿಯ ಚಾಕುಗಳು, ಸ್ಫೋಟಕಗಳು ಇತ್ಯಾದಿ.

  • ಐತಿಹಾಸಿಕ ಶಸ್ತ್ರಗಳನ್ನು (ಕವಣೆ, ಸಣ್ಣ ಬಂದೂಕು, ಖಡ್ಗ ಇತ್ಯಾದಿ) ಅನುಮತಿಸಲಾಗುತ್ತದೆ.

  • ಕಾಲ್ಪನಿಕ ಆಯುಧಗಳನ್ನು (ನಾಟಕೀಯ ಪರಿಕರಗಳು, ವೀಡಿಯೊ ಗೇಮ್ ಆಯುಧಗಳು ಇತ್ಯಾದಿ) ಅನುಮತಿಸಲಾಗುತ್ತದೆ.

ಕೆಲವು ನಿರ್ಬಂಧಿತ ಸರಕುಗಳು ಅಥವಾ ಸೇವೆಗಳನ್ನು ಪ್ರಚಾರ ಮಾಡುವುದು

ನಮ್ಮ ವಾಣಿಜ್ಯ ಕಂಟೆಂಟ್ ನೀತಿಯು ವಯಸ್ಸು ಅಥವಾ ಸ್ಥಳವನ್ನು ಆಧರಿಸಿ ಗುರಿಯಾಗಿಸಬೇಕಾದ ಕಂಟೆಂಟ್ ಒಳಗೊಂಡಂತೆ, ತಮ್ಮ ಸ್ನೇಹಿತರು ಅಥವಾ ಫಾಲೋವರ್‌ಗಳೊಂದಿಗೆ Snapchatter ಗಳು ವಾಣಿಜ್ಯ ಕಂಟೆಂಟ್ ಅನ್ನು ಹೇಗೆ ಹಂಚಿಕೊಳ್ಳಬಹುದು ಎನ್ನುವುದನ್ನು ವಿವರಿಸುತ್ತದೆ. ಆದರೆ ಶಿಫಾರಸು ಮಾಡುವುದಕ್ಕಾಗಿ ಅರ್ಹವಾಗಲು, ಕಂಟೆಂಟ್ ಈ ನಿರ್ಬಂಧಿತ ವಿಷಯಗಳನ್ನು ಪ್ರಚಾರ ಮಾಡಬಾರದು:

  • ವಸತಿ ರಿಯಲ್ ಎಸ್ಟೇಟ್

  • ಉದ್ಯೋಗದ ಅವಕಾಶಗಳು

  • ಜೂಜು, ನೈಜ ಹಣದ ಗೇಮಿಂಗ್/ಬೆಟ್ಟಿಂಗ್, ಲಾಟರಿಗಳು, ಸ್ವೀಪ್‌ಸ್ಟೇಕ್‌ಗಳು

  • ಒಂದು ಉತ್ಪನ್ನ ಅಥವಾ ಸೇವೆಯ ಆರೋಗ್ಯ ಪ್ರಯೋಜನಗಳ ಕುರಿತು ಅವಾಸ್ತವಿಕ ದಾವೆಗಳು; ಸಪ್ಲಿಮೆಂಟ್‌ಗಳು, ಔಷಧಗಳು ಅಥವಾ ತೂಕ ಇಳಿಕೆ ಉತ್ಪನ್ನಗಳ ಯಾವುದೇ ಪ್ರಚಾರ

  • ಸಾಲಗಳು, ಹೂಡಿಕೆಗಳು, ಕ್ರೆಡಿಟ್, ಕ್ರಿಪ್ಟೋಕರೆನ್ಸಿಗಳು, NFTS ಅಥವಾ ಯಾವುದೇ ಇತರ ಹಣಕಾಸು ಉತ್ಪನ್ನಗಳು ಅಥವಾ ಸೇವೆಗಳು

  • ಮದ್ಯ

  • ತಂಬಾಕು, ಗಾಂಜಾ ಮತ್ತು ಅವುಗಳ ವ್ಯುತ್ಪನ್ನಗಳು (ನಿಕೋಟಿನ್, THC/CBD ಉತ್ಪನ್ನಗಳು) ಅಥವಾ ಪರಿಕರಗಳು (ವೇಪ್ಸ್ ಇತ್ಯಾದಿ)

  • ಸ್ಫೋಟಕಗಳು, ಪಟಾಕಿಗಳು, ಪೈರೋಟೆಕ್ನಿಕ್‌ಗಳು, ಧ್ವಂಸ ಸಾಧನಗಳು

  • ಡೇಟಿಂಗ್ ಆ್ಯಪ್‌ಗಳು, ಸೈಟ್‌ಗಳು ಅಥವಾ ಸೇವೆಗಳು

Sensitive:

The following is eligible for recommendation, but we may choose to limit its visibility to certain Snapchatters based on their age, location, preferences, or other criteria.

ವಯಸ್ಕರಿಂದ ಮಿತವಾದ ಪ್ರಮಾಣದಲ್ಲಿ ಮದ್ಯ ಸೇವನೆ

ವಯಸ್ಕರಿಂದ ಮಿತವಾದ ಪ್ರಮಾಣದಲ್ಲಿ ಮದ್ಯ ಸೇವನೆ

ತೂಕ ಇಳಿಸುವ ಕಾರ್ಯಕ್ರಮಗಳು ಅಥವಾ ತಂತ್ರಗಳು

ತೂಕ ಇಳಿಕೆಯ ಬದಲಾಗಿ ಸಾಮರ್ಥ್ಯ, ಕಂಡೀಶನಿಂಗ್ ಅಥವಾ ಮೊಬಿಲಿಟಿಯ ಮೇಲೆ ಗಮನ ಕೇಂದ್ರೀಕರಿಸಿದಾಗ ಫಿಟ್‌ನೆಸ್ ಕಂಟೆಂಟ್ ಅನ್ನು ಎಲ್ಲ ಪ್ರೇಕ್ಷಕರಿಗೆ ಅನುಮತಿಸಲಾಗುತ್ತದೆ.

ಅಕ್ರಮ ಅಥವಾ ನಿರ್ಬಂಧಿತ ಚಟುವಟಿಕೆಗಳಿಗೆ ಕಾಲ್ಪನಿಕ ಉಲ್ಲೇಖಗಳು

ಉದಾಹರಣೆಗೆ, ಸಿನಿಮಾಗಳು ಅಥವಾ ವೀಡಿಯೊ ಗೇಮ್‌ಗಳಿಂದ ಜೋಕ್‌ಗಳು, ವಿಡಂಬನೆಗಳು, ದೃಶ್ಯಗಳು.

Up Next:

Hateful Content, Terrorism, and Violent Extremism

Read Next