ನೀತಿ ಕೇಂದ್ರ

ಕಮ್ಯುನಿಟಿ ಮಾರ್ಗಸೂಚಿಗಳು

Snap ನಲ್ಲಿ, ಜನರು ತಮ್ಮನ್ನು ವ್ಯಕ್ತಪಡಿಸಲು, ಆ ಕ್ಷಣದಲ್ಲಿ ಬದುಕಲು, ಜಗತ್ತಿನ ಕುರಿತು ತಿಳಿದುಕೊಳ್ಳಲು ಮತ್ತು ಜೊತೆಯಾಗಿ ಆನಂದಿಸಲು ಅವರನ್ನು ಸಬಲಗೊಳಿಸುವ ಮೂಲಕ ನಾವು ಮಾನವರ ಪ್ರಗತಿಗೆ ಕೊಡುಗೆ ನೀಡುತ್ತೇವೆ. ನಮ್ಮ ಸೇವೆಗಳನ್ನು Snapchatter ಗಳು ಪ್ರತಿದಿನ ಸುರಕ್ಷಿತವಾಗಿ ಬಳಸಬಹುದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪರಿಶ್ರಮ ಪಡುವ ಜೊತೆಗೆ, ಸ್ವಯಂ ಅಭಿವ್ಯಕ್ತಿಯ ವಿಶಾಲವಾದ ಶ್ರೇಣಿಯನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಧ್ಯೇಯವನ್ನು ಬೆಂಬಲಿಸಲು ನಾವು ಈ ಕಮ್ಯುನಿಟಿ ಮಾರ್ಗಸೂಚಿಗಳನ್ನು ರಚಿಸಿದ್ದೇವೆ. ನಮ್ಮ ಸಮುದಾಯದ ಎಲ್ಲ ಸದಸ್ಯರಿಗೆ ಈ ಮಾರ್ಗಸೂಚಿಗಳು ಸ್ಪಷ್ಟ ಮತ್ತು ಅರ್ಥವಾಗುವಂತಿರಬೇಕು ಎಂದು ನಾವು ಬಯಸುತ್ತೇವೆ. ನಮ್ಮ ಸಮುದಾಯವನ್ನು ಸೇರಲು, ನೀವು ಕನಿಷ್ಟ 13 ವರ್ಷ ವಯಸ್ಸಿನವರಾಗಿರಬೇಕು ಎನ್ನುವುದನ್ನು ದಯವಿಟ್ಟು ಗಮನಿಸಿ.

ಗಂಭೀರ ಹಾನಿಯ ಕುರಿತ ಟಿಪ್ಪಣಿ

Snapchatter ಗಳಿಗೆ ಗಂಭೀರ ಹಾನಿಯ ಅಪಾಯವನ್ನು ಒಡ್ಡುವ ವಿಷಯ ಅಥವಾ ನಡವಳಿಕೆಯ ಕುರಿತು ನಾವು ನಿರ್ದಿಷ್ಟವಾಗಿ ಸಂವೇದನಾಶೀಲರಾಗಿದ್ದೇವೆ ಮತ್ತು ಅಂತಹ ನಡವಳಿಕೆಯಲ್ಲಿ ತೊಡಗುವ ಬಳಕೆದಾರರ ವಿರುದ್ಧ ತಕ್ಷಣದ, ಶಾಶ್ವತ ಕ್ರಮ ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಿದ್ದೇವೆ. ನಾವು ಯಾವುದನ್ನು ಗಂಭೀರ ಹಾನಿ ಎಂದು ಪರಿಗಣಿಸುತ್ತೇವೆ ಮತ್ತು ಅದರ ವಿರುದ್ಧ ನಾವು ಹೇಗೆ ಕ್ರಮ ಕೈಗೊಳ್ಳುತ್ತೇವೆ ಎನ್ನುವುದರ ಕುರಿತು ಹೆಚ್ಚುವರಿ ಮಾರ್ಗದರ್ಶನ ಲಭ್ಯವಿದೆ.

ಕಮ್ಯುನಿಟಿ ಮಾರ್ಗಸೂಚಿಗಳು ಎಲ್ಲ ಬಳಕೆದಾರರು ಮತ್ತು ಎಲ್ಲ ವಿಷಯಗಳಿಗೆ ಅನ್ವಯಿಸುತ್ತದೆ

ಈ ಮಾರ್ಗಸೂಚಿಗಳು Snapchat ನಲ್ಲಿನ ಎಲ್ಲ ವಿಷಯಕ್ಕೆ (ಇದು ನಿಮ್ಮ ಬಳಕೆದಾರರ ಹೆಸರು ಮತ್ತು ಪ್ರದರ್ಶನ ಹೆಸರು, ಪಠ್ಯ, ಚಿತ್ರಗಳು, ಜನರೇಟಿವ್ AI, ಲಿಂಕ್‌ಗಳು ಅಥವಾ ಲಗತ್ತುಗಳು, ಇಮೋಜಿಗಳು, ಲೆನ್ಸ್‌ಗಳು ಮತ್ತು ಇತರ ಯೇಟಿವ್ ಟೂಲ್ಸ್‌ನಂತಹ ಎಲ್ಲ ಸ್ವರೂಪದ ಸಂವಹನವನ್ನು ಒಳಗೊಂಡಿದೆ) ಅಥವಾ ನಡವಳಿಕೆಗೆ — ಮತ್ತು ಎಲ್ಲ Snapchatter ಗಳಿಗೆ ಅನ್ವಯಿಸುತ್ತವೆ. Snapchatter ಗಳಿಗೆ ಗಂಭೀರ ಹಾನಿಯ ಅಪಾಯವನ್ನು ಒಡ್ಡುವ ವಿಷಯ ಅಥವಾ ನಡವಳಿಕೆಯ ಕುರಿತು ನಾವು ನಿರ್ದಿಷ್ಟವಾಗಿ ಸಂವೇದನಾಶೀಲರಾಗಿದ್ದೇವೆ ಮತ್ತು ಅಂತಹ ನಡವಳಿಕೆಯಲ್ಲಿ ತೊಡಗುವ ಬಳಕೆದಾರರ ವಿರುದ್ಧ ತಕ್ಷಣದ, ಶಾಶ್ವತ ಕ್ರಮ ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಿದ್ದೇವೆ. ನಾವು ಯಾವುದನ್ನು ಗಂಭೀರ ಹಾನಿ ಎಂದು ಪರಿಗಣಿಸುತ್ತೇವೆ ಮತ್ತು ಅದರ ವಿರುದ್ಧ ನಾವು ಹೇಗೆ ಕ್ರಮ ಕೈಗೊಳ್ಳುತ್ತೇವೆ ಎನ್ನುವುದರ ಕುರಿತು ಹೆಚ್ಚುವರಿ ಮಾರ್ಗದರ್ಶನ ಇಲ್ಲಿ ಲಭ್ಯವಿದೆ.

ನಮ್ಮ ಸೇವೆಗಳ ಮೂಲಕ Snap ಜನರೇಟಿವ್ AI ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಕಮ್ಯುನಿಟಿ ಮಾರ್ಗಸೂಚಿಗಳ ಅನುಸಾರವಾಗಿ ಜನರೇಟಿವ್ AI ವಿಷಯವನ್ನು ನಿರ್ವಹಿಸಲು ನಾವು ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸಿದ್ದೇವೆ. Snapchatter ಗಳು ಜವಾಬ್ದಾರಿಯುತವಾಗಿ AI ಬಳಸುವುದನ್ನು ನಾವು ನಿರೀಕ್ಷಿಸುತ್ತೇವೆ. ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ, ಖಾತೆಗಳ ವಿರುದ್ಧ ಸೂಕ್ತ ಜಾರಿ ಕ್ರಮ ಕೈಗೊಳ್ಳುವ ಹಕ್ಕನ್ನು ನಾವು ಹೊಂದಿರುತ್ತೇವೆ. ಎಲ್ಲಿಯವರೆಗೆ ಎಂದರೆ ನಾವು ಆ ರೀತಿಯ ಖಾತೆಗಳನ್ನು ತೆಗೆದು ಹಾಕುವ ನಿರ್ಧಾರವನ್ನು ಕೂಡ ಕೈಗೊಳ್ಳಬಹುದು.

ತಮ್ಮ ವಿಷಯವು ನಿಖರವಾಗಿದೆ ಮತ್ತು ಸೂಕ್ತವಾಗಿರುವಲ್ಲಿ ವಾಸ್ತವ ಪರೀಕ್ಷೆ ಮಾಡಲಾಗಿದೆ ಎನ್ನುವುದರ ಅಗತ್ಯ ಸೇರಿದಂತೆ, ಹೆಚ್ಚುವರಿ ಮಾರ್ಗಸೂಚಿಗಳಿಗೆ ಜಾಹೀರಾತುದಾರರು ಮತ್ತು Discover ನಲ್ಲಿನ ನಮ್ಮ ಮಾಧ್ಯಮ ಪಾಲುದಾರರು ಒಪ್ಪುತ್ತಾರೆ. ಡೆವಲಪರ್‌ಗಳು ಕೂಡ ಹೆಚ್ಚುವರಿ ನಿಯಮಗಳಿಗೆ ಒಳಪಡುತ್ತಾರೆ.

Snapchat ನಲ್ಲಿ ನಿಷೇಧಿಸಲ್ಪಟ್ಟಿರುವ ವಿಷಯಕ್ಕಾಗಿನ ನಿರ್ದಿಷ್ಟ ನಿಯಮಗಳನ್ನು ನಾವು ಇಲ್ಲಿ ಮತ್ತು ನಮ್ಮ ಸೇವೆಯ ನಿಯಮಗಳಲ್ಲಿ ವಿವರಿಸಿದ್ದೇವೆ ಮತ್ತು ಈ ನಿಯಮಗಳು ನಿರಂತರವಾಗಿ ಅನ್ವಯಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ಕಾರ್ಯನಿರ್ವಹಿಸುತ್ತೇವೆ. ಈ ನಿಯಮಗಳನ್ನು ಅನ್ವಯಿಸುವಾಗ, ವಿಷಯ ಸುದ್ದಿಯೋಗ್ಯ, ವಾಸ್ತವಿಕವಾಗಿದೆಯೇ ಮತ್ತು ರಾಜಕೀಯ, ಸಾಮಾಜಿಕ ಅಥವಾ ನಮ್ಮ ಸಮುದಾದಯ ಇತರ ಸಾಮಾನ್ಯ ಕಳವಳಗಳಿಗೆ ಸಂಬಂಧಿಸಿದೆಯೇ ಎನ್ನುವುದು ಸೇರಿದಂತೆ, ವಿಷಯದ ಸ್ವರೂಪವನ್ನು ನಾವು ಪರಿಗಣನೆಗೆ ತೆಗದುಕೊಳ್ಳುತ್ತೇವೆ. ನಾವು ವಿಷಯವನ್ನು ಹೇಗೆ ಮಾಡರೇಟ್ ಮಾಡುತ್ತೇವೆ ಮತ್ತು ನಮ್ಮ ನೀತಿಗಳನ್ನು ಹೇಗೆ ಜಾರಿಗೊಳಿಸುತ್ತೇವೆ ಎನ್ನುವ ಕುರಿತು ಹೆಚ್ಚುವರಿ ಸನ್ನಿವೇಶವು ಇಲ್ಲಿ ಲಭ್ಯವಿದೆ. ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಕುರಿತು ಇನ್ನಷ್ಟು ವಿವರವಾದ ಮಾಹಿತಿಗಾಗಿ ಕೆಳಗಿನ ಪ್ರತಿ ವಿಭಾಗಗಳಾದ್ಯಂತ ನಾವು ಲಿಂಕ್‌ಗಳನ್ನು ಕೂಡ ಒದಗಿಸುತ್ತೇವೆ.

Snapchat ಎಲ್ಲರಿಗೂ ಸುರಕ್ಷಿತ ಮತ್ತು ಸಕಾರಾತ್ಮಕ ಅನುಭವವಾಗಬೇಕೆಂದು ನಾವು ಬಯಸುತ್ತೇವೆ. ನಮ್ಮ ಸ್ವಂತ ವಿವೇಚನೆ ಮೇರೆಗೆ, ಯಾವ ವಿಷಯ ಅಥವಾ ನಡವಳಿಕೆ ನಮ್ಮ ನಿಯಮಗಳ ಸ್ಫೂರ್ತಿಯನ್ನು ಉಲ್ಲಂಘಿಸುತ್ತದೆ ಎಂದು ನಿರ್ಧರಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.

ಕಮ್ಯುನಿಟಿ ಮಾರ್ಗಸೂಚಿಗಳು

Snapchat ನ ಪ್ಲ್ಯಾಟ್‌ಫಾರ್ಮ್‌ನಲ್ಲಿ ಹಾಗೂ ಉತ್ಪನ್ನಗಳಲ್ಲಿನ ಎಲ್ಲ ವಿಷಯ ಮತ್ತು ವರ್ತನೆಗಳಿಗೆ ಅನ್ವಯಿಸುತ್ತದೆ ಮತ್ತು ಈ ಕೆಳಗಿನ ವಿಷಯಗಳನ್ನು ಒಳಗೊಳ್ಳುತ್ತದೆ:

ಲೈಂಗಿಕ ವಿಷಯ
  • ಮಕ್ಕಳ ಲೈಂಗಿಕ ಶೋಷಣೆ ಅಥವಾ ದೌರ್ಜನ್ಯದ ಚಿತ್ರಗಳು, ಲೈಂಗಿಕವಾಗಿ ಅಲಂಕರಿಸಿಕೊಳ್ಳುವಿಕೆ ಅಥವಾ ಲೈಂಗಿಕ ಸುಲಿಗೆ (ಸೆಕ್ಸ್‌ಟಾರ್ಶನ್) ಅಥವಾ ಮಕ್ಕಳ ಲೈಂಗಿಕಗೊಳಿಸುವಿಕೆ ಸೇರಿದಂತೆ, ಅಪ್ರಾಪ್ತ ವಯಸ್ಕರ ಲೈಂಗಿಕ ಶೋಷಣೆ ಅಥವಾ ದೌರ್ಜನ್ಯವನ್ನು ಒಳಗೊಂಡ ಯಾವುದೇ ಚಟುವಟಿಕೆಯನ್ನು ನಾವು ನಿಷೇಧಿಸುತ್ತೇವೆ. ಅಂತಹ ನಡವಳಿಕೆಯಲ್ಲಿ ತೊಡಗಿಕೊಳ್ಳುವ ಪ್ರಯತ್ನಗಳು ಸೇರಿದಂತೆ, ಮಕ್ಕಳ ಲೈಂಗಿಕ ಶೋಷಣೆಯ ಎಲ್ಲ ಗುರುತಿಸಿದ ಘಟನೆಗಳನ್ನು ನಾವು ಅಧಿಕಾರಿಗಳಿಗೆ ವರದಿ ಮಾಡುತ್ತೇವೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರಾದರೂ ಇರುವ ನಗ್ನ ಅಥವಾ ಅಶ್ಲೀಲ ವಿಷಯವನ್ನು ಎಂದಿಗೂ ಪೋಸ್ಟ್ ಮಾಡಬೇಡಿ, ಉಳಿಸಬೇಡಿ, ಕಳುಹಿಸಬೇಡಿ, ಫಾರ್ವರ್ಡ್ ಮಾಡಬೇಡಿ, ವಿತರಿಸಬೇಡಿ ಅಥವಾ ಅಂತಹ ವಿಷಯವನ್ನು ಕೇಳಬೇಡಿ (ಇದು ನಿಮ್ಮದೇ ಆದ ಅಂತಹ ಚಿತ್ರಗಳನ್ನು ಕಳುಹಿಸುವುದು ಅಥವಾ ಉಳಿಸುವುದನ್ನು ಒಳಗೊಂಡಿದೆ). 

  • ಕಾಮಪ್ರಚೋದಕ ವಿಷಯವನ್ನು ಪ್ರಚಾರ ಮಾಡುವುದು, ವಿತರಿಸುವುದು ಅಥವಾ ಹಂಚಿಕೊಳ್ಳುವುದು ಹಾಗೂ ಕಾಮಪ್ರಚೋದಕ ಅಥವಾ ಲೈಂಗಿಕ ಸಂಭೋಗಗಳಿಗೆ ಸಂಬಂಧಿಸಿದ ವಾಣಿಜ್ಯ ಚಟುವಟಿಕೆಗಳನ್ನು ನಾವು ನಿಷೇಧಿಸುತ್ತೇವೆ (ಅದು ಆನ್‌ಲೈನ್ ಅಥವಾ ಆಫ್‌ಲೈನ್ ಆಗಿರಬಹುದು). 

  • ಎದೆಹಾಲುಣಿಸುವಿಕೆ ಮತ್ತು ಲೈಂಗಿಕವಲ್ಲದ ಸನ್ನಿವೇಶಗಳಲ್ಲಿ ನಗ್ನತೆಯ ಇತರ ಚಿತ್ರಗಳಿಗೆ ಸಾಮಾನ್ಯವಾಗಿ ಅನುಮತಿಸಲಾಗುತ್ತದೆ.

ಕಿರುಕುಳ ಮತ್ತು ಬೆದರಿಕೆ
  • ಯಾವುದೇ ಬಗೆಯ ಬೆದರಿಸುವ ಅಥವಾ ಕಿರುಕುಳ ನೀಡುವ ಕೃತ್ಯವನ್ನು ನಾವು ನಿಷೇಧಿಸುತ್ತೇವೆ. ಇದು ಲೈಂಗಿಕವಾಗಿ ಸುಸ್ಪಷ್ಟವಾದ, ಸೂಚಕವಾದ ಅಥವಾ ನಗ್ನ ಚಿತ್ರಗಳನ್ನು ಇತರ ಬಳಕೆದಾರರಿಗೆ ಕಳುಹಿಸುವುದು ಸೇರಿದಂತೆ, ಎಲ್ಲ ಸ್ವರೂಪದ ಲೈಂಗಿಕ ಕಿರುಕುಳಗಳನ್ನು ಒಳಗೊಳ್ಳುತ್ತದೆ. ಒಂದು ವೇಳೆ ಯಾರಾದರೂ ನಿಮ್ಮನ್ನು ನಿರ್ಬಂಧಿಸಿದರೆ, ನೀವು ಬೇರೊಂದು Snapchat ಖಾತೆಯಿಂದ ಅವರನ್ನು ಸಂಪರ್ಕಿಸುವಂತಿಲ್ಲ.

  • ಒಬ್ಬ ವ್ಯಕ್ತಿಯ ಅರಿವಿಗೆ ಬಾರದಂತೆ ಮತ್ತು ಅವರ ಸಮ್ಮತಿಯಿಲ್ಲದೆ — ಸ್ನಾನದ ಕೋಣೆ, ಮಲಗುವ ಕೋಣೆ, ಲಾಕರ್ ರೂಮ್ ಅಥವಾ ಆಸ್ಪತ್ರೆಯಂತಹ — ಖಾಸಗಿ ಸ್ಥಳಗಳಲ್ಲಿ ಅವರು ಇರುವಾಗಿನ ಚಿತ್ರಗಳನ್ನು ಹಂಚಿಕೊಳ್ಳುವುದನ್ನು, ಅದೇ ರೀತಿ ಇನ್ನೊಬ್ಬ ವ್ಯಕ್ತಿಯ ಅರಿವಿಗೆ ಬಾರದಂತೆ ಮತ್ತು ಅವರ ಸಮ್ಮತಿಯಿಲ್ಲದೆ ಅಥವಾ ಕಿರುಕುಳ ನೀಡುವ ಉದ್ದೇಶಕ್ಕಾಗಿ (ಅಂದರೆ "ಡಾಕ್ಸಿಂಗ್") ಅವರ ಖಾಸಗಿ ಮಾಹಿತಿ ಹಂಚಿಕೊಳ್ಳುವುದನ್ನು ನಿಷೇಧಿಸಲಾಗಿದೆ.

  • ಒಂದು ವೇಳೆ ನಿಮ್ಮ Snap ನಲ್ಲಿ ಒಬ್ಬರು ಕಾಣಿಸಿಕೊಂಡಿದ್ದು ಮತ್ತು ಅದನ್ನು ತೆಗೆದುಹಾಕುವಂತೆ ನಿಮ್ಮನ್ನು ಕೇಳಿದರೆ, ದಯವಿಟ್ಟು ಹಾಗೆ ಮಾಡಿ! ಇತರರ ಗೌಪ್ಯತೆ ಹಕ್ಕುಗಳನ್ನು ಗೌರವಿಸಿ. 

  • ಜೊತೆಗೆ ದಯವಿಟ್ಟು ನಮ್ಮ ವರದಿ ಮಾಡುವಿಕೆ ಕಾರ್ಯವಿಧಾನಗಳ ದುರ್ಬಳಕೆ ಮಾಡಿಕೊಂಡು ಇನ್ನೊಬ್ಬ Snapchatter ಗೆ ಕಿರುಕುಳ ನೀಡಬೇಡಿ, ಉದಾಹರಣೆಗೆ ಅನುಮತಿಸಬಹುದಾದ ವಿಷಯವನ್ನು ಉದ್ದೇಶಪೂರ್ವಕವಾಗಿ ವರದಿ ಮಾಡುವುದು.

ಬೆದರಿಕೆಗಳು, ಹಿಂಸೆ ಮತ್ತು ಹಾನಿ
  • ಹಿಂಸಾತ್ಮಕ ಅಥವಾ ಅಪಾಯಕಾರಿ ನಡವಳಿಕೆಯನ್ನು ಪ್ರೋತ್ಸಾಹಿಸುವುದು ಅಥವಾ ತೊಡಗಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಒಬ್ಬ ವ್ಯಕ್ತಿ, ಜನರ ಗುಂಪು ಅಥವಾ ಒಬ್ಬರ ಸ್ವತ್ತನ್ನು ಹಾನಿ ಮಾಡುವುದಾಗಿ ಎಂದಿಗೂ ಬೆದರಿಕೆ ಹಾಕಬೇಡಿ.

  • ಪ್ರಾಣಿ ಹಿಂಸೆ ಸೇರಿದಂತೆ, ಅನಪೇಕ್ಷಿತ ಅಥವಾ ಹಿಂಸೆಯ ಚಿತ್ರಣವಿರುವ Snap ಗಳಿಗೆ ಅವಕಾಶವಿಲ್ಲ.

  • ಸ್ವಯಂ-ಗಾಯ ಮಾಡಿಕೊಳ್ಳುವಿಕೆ, ಆತ್ಮಹತ್ಯೆ ಅಥವಾ ತಿನ್ನುವ ಕಾಯಿಲೆಗಳ ಪ್ರಚಾರ ಸೇರಿದಂತೆ, ಸ್ವಯಂ-ಹಾನಿಯ ವೈಭವೀಕರಣಕ್ಕೆ ನಾವು ಅವಕಾಶ ನೀಡುವುದಿಲ್ಲ.

ಹಾನಿಕಾರಕ ಸುಳ್ಳು ಅಥವಾ ವಂಚನೆಯ ಮಾಹಿತಿ
  • ದುರಂತ ಘಟನೆಗಳ ಅಸ್ತಿತ್ವವನ್ನು ನಿರಾಕರಿಸುವುದು, ಆಧಾರರಹಿತ ವೈದ್ಯಕೀಯ ದಾವೆಗಳು, ನಾಗರಿಕ ಪ್ರಕ್ರಿಯೆಗಳ ಸಮಗ್ರತೆಯನ್ನು ಕಡೆಗಣಿಸುವುದು ಅಥವಾ ಸುಳ್ಳು ಅಥವಾ ದಾರಿತಪ್ಪಿಸುವ ಉದ್ದೇಶಗಳಿಗಾಗಿ ವಿಷಯವನ್ನು ತಿರುಚುವುದು (ಜನರೇಟಿವ್ AI ಮೂಲಕ ಅಥವಾ ವಂಚನೆಯ ಎಡಿಟಿಂಗ್ ಮೂಲಕ) ಮುಂತಾದ ಹಾನಿ ಉಂಟುಮಾಡುವ ಅಥವಾ ದುರುದ್ದೇಶಪೂರಿತವಾದ ಸುಳ್ಳು ಮಾಹಿತಿ ಹರಡುವುದನ್ನು ನಾವು ನಿಷೇಧಿಸುತ್ತೇವೆ.

  • ನೀವಲ್ಲದ ಬೇರೊಬ್ಬರಂತೆ (ಅಥವಾ ಬೇರೆ ವಿಷಯದಂತೆ) ಸೋಗು ಹಾಕುವುದನ್ನು ಅಥವಾ ನೀವು ಯಾರೆನ್ನುವುದನ್ನು ಜನರಿಂದ ಮರೆಮಾಚುವುದನ್ನು ನಾವು ನಿಷೇಧಿಸುತ್ತೇವೆ. ಇದು ಹಾನಿಕಾರಕ, ವಿಡಂಬನಾತ್ಮಕವಲ್ಲದ ಉದ್ದೇಶಗಳಿಗಾಗಿ ನಿಮ್ಮ ಸ್ನೇಹಿತರು, ಸೆಲೆಬ್ರಿಟಿಗಳು, ಪ್ರಖ್ಯಾತರು, ಬ್ರ್ಯಾಂಡ್‌ಗಳು ಅಥವಾ ಇತರ ಜನರ ಅಥವಾ ಸಂಸ್ಥೆಗಳ ಸೋಗುಹಾಕುವುದನ್ನು ಒಳಗೊಂಡಿದೆ.

  • ಬಹಿರಂಗಪಡಿಸದ ಪಾವತಿಸಿದ ಅಥವಾ ಪ್ರಾಯೋಜಿತ ವಿಷಯ, ಫಾಲೋವರ್ ಗಳಿಗಾಗಿ ಪಾವತಿಸುವ ಪ್ರಚಾರಗಳು ಅಥವಾ ಇತರ ಫಾಲೋವರ್-ಬೆಳವಣಿಗೆ ಯೋಜನೆಗಳು, ಸ್ಪ್ಯಾಮ್ ಅಪ್ಲಿಕೇಶನ್‌ಗಳ ಪ್ರಚಾರ ಅಥವಾ ಬಹುಮಟ್ಟದ ಮಾರ್ಕೆಟಿಂಗ್ ಅಥವಾ ಪಿರಮಿಡ್ ಸ್ಕೀಮ್‌ಗಳ ಪ್ರಚಾರವನ್ನು ಒಳಗೊಂಡಂತೆ ನಾವು ಸ್ಪ್ಯಾಮ್ ಅನ್ನು ನಿಷೇಧಿಸುತ್ತೇವೆ.

  • ವಂಚನೆಯ ಸರಕುಗಳು ಅಥವಾ ಸೇವೆಗಳ ಪ್ರಚಾರ ಅಥವಾ ಶೀಘ್ರದಲ್ಲಿ ಶ್ರೀಮಂತರಾಗಿ ಸ್ಕೀಮ್‌ಗಳು ಅಥವಾ Snapchat ಅಥವಾ Snap Inc. ನಕಲು ಮಾಡುವುದು ಸೇರಿದಂತೆ, ವಂಚನೆ ಮತ್ತು ಇತರ ಮೋಸಗೊಳಿಸುವ ಅಭ್ಯಾಸಗಳನ್ನು ನಾವು ನಿಷೇಧಿಸುತ್ತೇವೆ.

ಕಾನೂನುಬಾಹಿರ ಅಥವಾ ನಿರ್ಬಂಧಿತ ಚಟುವಟಿಕೆಗಳು
  • ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾದ ವಿಷಯವನ್ನು ಕಳುಹಿಸಲು ಅಥವಾ ಪೋಸ್ಟ್ ಮಾಡಲು ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗಾಗಿ Snapchat ಅನ್ನು ಬಳಸಬೇಡಿ. ಇದು ಕಾನೂನುಬಾಹಿರ ಅಥವಾ ನಿಯಂತ್ರಿತ ಮಾದಕಪದಾರ್ಥಗಳು, ನಿಷೇಧಿತ ಸರಕುಗಳ (ಉದಾಹರಣೆಗೆ ಮಕ್ಕಳ ಲೈಂಗಿಕ ಶೋಷಣೆ ಅಥವಾ ದೌರ್ಜನ್ಯದ ಚಿತ್ರಣ), ಶಸ್ತ್ರಾಸ್ತ್ರಗಳು ಅಥವಾ ಖೋಟಾ ಸರಕುಗಳು ಅಥವಾ ದಾಖಲೆಗಳ ಖರೀದಿ, ಮಾರಾಟ, ವಿನಿಮಯ ಅಥವಾ ಮಾರಾಟಕ್ಕೆ ಸೌಲಭ್ಯ ಕಲ್ಪಿಸುವಂತಹ, ಅಪರಾಧ ಚಟುವಟಿಕೆಗಳನ್ನು ಪ್ರಚಾರ ಮಾಡುವುದು, ಅದಕ್ಕೆ ಸೌಲಭ್ಯ ಕಲ್ಪಿಸುವುದು ಅಥವಾ ಅದರಲ್ಲಿ ಪಾಲ್ಗೊಳ್ಳುವುದನ್ನು ಒಳಗೊಂಡಿದೆ. ಲೈಂಗಿಕ ಕಳ್ಳಸಾಗಣೆ, ಕಾರ್ಮಿಕರ ಕಳ್ಳಸಾಗಣೆ ಅಥವಾ ಇತರ ಮಾನವ ಕಳ್ಳಸಾಗಣೆ ಸೇರಿದಂತೆ, ಯಾವುದೇ ಸ್ವರೂಪದ ಶೋಷಣೆಯ ಪ್ರಚಾರ ಮಾಡುವುದು ಅಥವಾ ಅದಕ್ಕೆ ಸೌಲಭ್ಯ ಕಲ್ಪಿಸುವುದನ್ನು ಕೂಡ ಇದು ಒಳಗೊಳ್ಳುತ್ತದೆ.

  • ಜೂಜು, ತಂಬಾಕು ಅಥವಾ ಭಾಷ್ಪ (ವೇಪ್) ಉತ್ಪನ್ನಗಳು ಮತ್ತು ಮದ್ಯದ ಅನಧಿಕೃತ ಪ್ರಚಾರ ಸೇರಿದಂತೆ ನಿರ್ಬಂಧಿತ ಸರಕುಗಳು ಅಥವಾ ಉದ್ಯಮಗಳ ಕಾನೂನುಬಾಹಿರ ಪ್ರಚಾರವನ್ನು ನಾವು ನಿಷೇಧಿಸುತ್ತೇವೆ.

ದ್ವೇಷಮಯ ವಿಷಯ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರಗಾಮಿತ್ವ
  • ಭಯೋತ್ಪಾದನಾ ಸಂಘಟನೆಗಳು, ಹಿಂಸಾತ್ಮಕ ಉಗ್ರಗಾಮಿಗಳು ಮತ್ತು ದ್ವೇಷದ ಗುಂಪುಗಳು ನಮ್ಮ ವೇದಿಕೆಯನ್ನು ಬಳಸದಂತೆ ನಿಷೇಧಿಸಲಾಗಿದೆ. ಭಯೋತ್ಪಾದನೆ ಅಥವಾ ಹಿಂಸಾತ್ಮಕ ಉಗ್ರವಾದವನ್ನು ಪ್ರತಿಪಾದಿಸುವ ಅಥವಾ ಪ್ರಚೋದಿಸುವ ವಿಷಯಕ್ಕೆ ನಾವು ಸಹಿಷ್ಣುತೆಯನ್ನು ಹೊಂದಿಲ್ಲ.

  • ದ್ವೇಷ ಭಾಷಣ ಅಥವಾ ಜನಾಂಗ, ಬಣ್ಣ, ಜಾತಿ, ಕುಲ, ರಾಷ್ಟ್ರೀಯ ಮೂಲ, ಧರ್ಮ, ಲೈಂಗಿಕ ಒಲವು, ಲಿಂಗ, ಲಿಂಗ ಗುರುತು, ವೈಕಲ್ಯ ಅಥವಾ ಪರಿಣಿತ ಸ್ಥಿತಿ, ವಲಸೆ ಸ್ಥಿತಿ, ಸಾಮಾಜಿಕ-ಆರ್ಥಿಕ ಸ್ಥಿತಿ, ವಯಸ್ಸು, ತೂಕ ಅಥವಾ ಗರ್ಭಾವಸ್ಥೆ ಸ್ಥಿತಿ ಆಧಾರದಲ್ಲಿ ಕೀಳಾಗಿ ಕಾಣುವ, ಅವಮಾನಿಸುವ ಅಥವಾ ತಾರತಮ್ಯ ಅಥವಾ ಹಿಂಸೆಯನ್ನು ಪ್ರಚೋದಿಸುವ ವಿಷಯವನ್ನು ನಿಷೇಧಿಸಲಾಗಿದೆ.

ಮಾಹಿತಿ ಮತ್ತು Q&A

Question mark
ನಾನು ಒಂದು ವಿಷಯವನ್ನು ಹೇಗೆ ವರದಿ ಮಾಡಬಹುದು?

ನಮ್ಮ ಆ್ಯಪ್‌ನಲ್ಲಿನ ವರದಿ ಮಾಡುವಿಕೆ ವೈಶಿಷ್ಟ್ಯಗಳನ್ನು ಬಳಸಿಕೊಂಡು ಅಥವಾ ಈ ನಮೂನೆಯನ್ನು ಭರ್ತಿ ಮಾಡುವ ಮೂಲಕ ನೀವು ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡಕ್ಕೆ ಯಾವಾಗಲೂ ಒಂದು ವರದಿಯನ್ನು ಸಲ್ಲಿಸಬಹುದು (ಇದು ನೀವು Snapchat ಖಾತೆಯನ್ನು ಹೊಂದಿದ್ದೀರೇ ಇಲ್ಲವೇ ಎನ್ನುವುದನ್ನು ಪರಿಗಣಿಸದೆ ಒಂದು ಕಳವಳವನ್ನು ವರದಿ ಮಾಡಲು ನಿಮಗೆ ಅವಕಾಶ ನೀಡುತ್ತದೆ). ಈ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ನಿರ್ಧರಿಸಲು ಈ ವರದಿಗಳನ್ನು ನಾವು ಪರಿಶೀಲಿಸುತ್ತೇವೆ.

ನಾನು ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಏನಾಗುತ್ತದೆ?

ಒಂದು ವೇಳೆ ನೀವು ಈ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ನಾವು ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಬಹುದು, ನಿಮ್ಮ ಖಾತೆಯ ಗೋಚರತೆಯನ್ನು ಮುಕ್ತಾಯಗೊಳಿಸಬಹುದು ಅಥವಾ ಸೀಮಿತಗೊಳಿಸಬಹುದು ಮತ್ತು/ಅಥವಾ ಕಾನೂನು ಜಾರಿಯ ಸೂಚನೆ ನೀಡಬಹುದು. ಚಟುವಟಿಕೆಯು ಮಾನವರ ಬದುಕಿಗೆ ಸನ್ನಿಹಿತ ಬೆದರಿಕೆಯನ್ನು ಒಡ್ಡಿದಾಗ ನಾವು ಕಾನೂನು ಜಾರಿ ಸಂಸ್ಥೆಗೆ ಕೂಡ ಮಾಹಿತಿಯನ್ನು ನೀಡುತ್ತೇವೆ. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ಖಾತೆಯನ್ನು ಅಂತ್ಯಗೊಳಿಸಿದ್ದರೆ, ಮತ್ತೊಮ್ಮೆ Snapchat ಬಳಸಲು ಅಥವಾ ಯಾವುದೇ ರೀತಿಯಲ್ಲಿ ಈ ಅಂತ್ಯಗೊಳಿಸುವಿಕೆಯನ್ನು ತಪ್ಪಿಸಲು ನಿಮಗೆ ಅನುಮತಿಸಲಾಗುವುದಿಲ್ಲ.

ನೀವು ಪ್ಲ್ಯಾಟ್‌ಫಾರ್ಮ್ ಹೊರಗಿನ ವರ್ತನೆಯನ್ನು ಪರಿಗಣಿಸುತ್ತೀರಾ?

ನಮ್ಮ ಸ್ವಂತ ವಿವೇಚನೆ ಮೇರೆಗೆ, Snapchat ನಲ್ಲಿ ಅಥವಾ ಹೊರಗೆ ಅಪಾಯ ಒಡ್ಡುತ್ತಾರೆ ಎಂದು ಭಾವಿಸಲು ನಾವು ಕಾರಣಗಳನ್ನು ಹೊಂದಿರುವ ಬಳಕೆದಾರರಿಗೆ ಖಾತೆ ಪ್ರವೇಶವನ್ನು ತೆಗೆದುಹಾಕುವ ಅಥವಾ ನಿರ್ಬಂಧಿಸುವ ಹಕ್ಕನ್ನು Snap ಕಾಯ್ದಿರಿಸಿದೆ. ಇವುಗಳಲ್ಲಿ ದ್ವೇಷದ ಗುಂಪುಗಳು ಮತ್ತು ಭಯೋತ್ಪಾದನಾ ಸಂಘಟನೆಗಳ ನಾಯಕರು, ಇತರರ ವಿರುದ್ಧ ಹಿಂಸೆಯನ್ನು ಪ್ರಚೋದಿಸುವ ಅಥವಾ ಗಂಭೀರ ಹಾನಿಗೆ ಸಂಚು ನಡೆಸುವ ಖ್ಯಾತಿ ಹೊಂದಿರುವ ವ್ಯಕ್ತಿಗಳು ಅಥವಾ ಮಾನವರ ಬದುಕಿಗೆ ಅಪಾಯ ಒಡ್ಡುತ್ತದೆ ಎಂದು ನಾವು ನಂಬುವ ನಡವಳಿಕೆಗಳು ಸೇರಿವೆ. ಅಂತಹ ನಡವಳಿಕೆಯ ಮೌಲ್ಯಮಾಪನ ಮಾಡುವಾಗ, ಖಾತೆ ಪ್ರವೇಶವನ್ನು ತೆಗೆದುಹಾಕಬೇಕೇ ಅಥವಾ ನಿರ್ಬಂಧಿಸಬೇಕೇ ಎಂದು ನಿರ್ಧರಿಸಲು ವಿಷಯ ತಜ್ಞರು ಅಥವಾ ಕಾನೂನು ಜಾರಿ ಸಂಸ್ಥೆಗಳಂತಹ ಇತರ ಮೂಲಗಳಿಂದ ನಾವು ಮಾರ್ಗದರ್ಶನವನ್ನು ಪರಿಗಣಿಸಬಹುದು.

ನಾನು ಹೆಚ್ಚಿನ ಮಾಹಿತಿಯನ್ನು ಎಲ್ಲಿ ನೋಡಬಹುದು?

Snapchat ನಲ್ಲಿ ಸುರಕ್ಷತೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ನಮ್ಮ ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿ, ನೀವು ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಅಪ್‌ಡೇಟ್ ಮಾಡುವುದು, ನಿಮ್ಮ ವಿಷಯವನ್ನು ಯಾರು ನೋಡಬಹುದು ಎಂದು ಆಯ್ಕೆ ಮಾಡುವುದು ಮತ್ತು ಇತರ ಬಳಕೆದಾರರನ್ನು ನಿರ್ಬಂಧಿಸುವುದು ಮುಂತಾದ ಕ್ರಮ ಕೈಗೊಳ್ಳುವುದು ಸೇರಿದಂತೆ, ನಿಮ್ಮ Snapchat ಅನುಭವವನ್ನು ನಿರ್ವಹಿಸಲು ವಿವರವಾದ ಸೂಚನೆಗಳನ್ನು ಕಾಣುತ್ತೀರಿ.

ಮುಂದೆ:

ಲೈಂಗಿಕ ವಿಷಯ

Read Next