ಕಾನೂನುಬಾಹಿರ ಅಥವಾ ನಿರ್ಬಂಧಿತ ಚಟುವಟಿಕೆಗಳು
ಸಮುದಾಯ ಮಾರ್ಗಸೂಚಿಗಳ ವಿವರಣಾ ಸರಣಿ
ನವೀಕರಿಸಲಾದ ದಿನಾಂಕ: ಫೆಬ್ರವರಿ 2025
ಮೇಲ್ನೋಟ
ಕಾನೂನುಬಾಹಿರ ಮತ್ತು ನಿರ್ಬಂಧಿತ ಚಟುವಟಿಕೆಗಳ ವಿರುದ್ಧ ನಮ್ಮ ನಿಷೇಧವು Snapchat ನಾದ್ಯಂತ ಸುರಕ್ಷತೆಗೆ ನಮ್ಮ ಧೀಮಂತ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ನಿಯಮಗಳನ್ನು ಎತ್ತಿಹಿಡಿಯುವುದರಿಂದ ಕಾನೂನುಬಾಹಿರ ಉದ್ದೇಶಗಳಿಗಾಗಿ ನಮ್ಮ ವೇದಿಕೆಯನ್ನು ದುರ್ಬಳಕೆ ಮಾಡಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವುದರೊಂದಿಗೆ, Snapchatter ಗಳನ್ನು ಗಂಭೀರ ಹಾನಿಯ ಅಪಾಯಗಳಿಂದ ರಕ್ಷಿಸುವುದಕ್ಕೂ ಕೂಡ ಸಹಾಯವಾಗುತ್ತದೆ. ಈ ಗುರಿಗಳನ್ನು ಮುನ್ನಡೆಸುವುದಕ್ಕೆ ಸಹಾಯ ಮಾಡುವುದಕ್ಕಾಗಿ, ನಮ್ಮ ಸಮುದಾಯಕ್ಕೆ ಶೈಕ್ಷಣಿಕ ಸಂಪನ್ಮೂಲಗಳನ್ನು ಒದಗಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಸಾಮಾನ್ಯತಃ ಪ್ರಚಾರ ಮಾಡಲು ನಾವು ಸುರಕ್ಷತಾ ಪಾಲುದಾರರು, ಸರ್ಕಾರೇತರ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ವಿಸ್ತೃತವಾಗಿ ಕೈಜೋಡಿಸುತ್ತೇವೆ.
ವಿಶ್ವಾದ್ಯಂತದ ನ್ಯಾಯವ್ಯಾಪ್ತಿಗಳಲ್ಲಿ ಕಾನೂನುಗಳು ಮತ್ತು ನಿಬಂಧನೆಗಳು ಬದಲಾಗುತ್ತವೆಯಾದರೂ--ಹಾಗೂ Snapchat ಜಾಗತಿಕ ಸಮುದಾಯವಾದ್ದರಿಂದ--ನಮ್ಮ ನೀತಿಗಳು ಸಾರ್ವಜನಿಕ ಸುರಕ್ಷತೆಯನ್ನು ನಿರ್ಲಕ್ಷಿಸುವ, ಅಥವಾ, ಮಾನವ ಹಕ್ಕುಗಳು, ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಕಾನೂನುಗಳು ಅಥವಾ ಬಳಕೆದಾರರು ನೆಲೆಸಿರುವ ದೇಶದಲ್ಲಿನ ಕಾನೂನುಗಳನ್ನು ಉಲ್ಲಂಘಿಸುವ ಯಾವುದೇ ಚಟುವಟಿಕೆಗಳನ್ನು ಸಾಮಾನ್ಯತಃ ನಿಷೇಧಿಸುತ್ತವೆ.
ಎಲ್ಲ ಪ್ರಕರಣಗಳಲ್ಲಿ, ಅಪರಾಧೀ ಚಟುವಟಿಕೆಗಳ ಪ್ರಚಾರ; ಸೈಬರ್ ಅಪರಾಧಗಳಿಗೆ ಸೌಲಭ್ಯ ಕಲ್ಪಿಸುವುದು ಅಥವಾ ಅವುಗಳಲ್ಲಿ ಭಾಗವಹಿಸುವುದು; ಹಾಗೂ ಕಾನೂನು ಬಾಹಿರ ಅಥವಾ ನಿರ್ಬಂಧಿತ ಮಾದಕಪದಾರ್ಥಗಳು, ಕಳ್ಳಸಾಗಣೆ ಸರಕುಗಳು, ಶಸ್ತ್ರಾಸ್ತ್ರಗಳು ಮತ್ತು ನಕಲಿ ಸರಕುಗಳು, ಅಥವಾ ಖೋಟಾ ಸರಕುಗಳು ಅಥವಾ ದಾಖಲೆಗಳು, ಇತ್ಯಾದಿಗಳ ಖರೀದಿ, ಮಾರಾಟ ಅಥವಾ ಮಾರಾಟಕ್ಕಾಗಿ ಸೌಲಭ್ಯ ಕಲ್ಪಿಸುವುದು ನಿಷೇಧಿತ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಸೇರಿವೆ.
ನೀವು ಏನನ್ನು ನಿರೀಕ್ಷಿಸಬೇಕು
ನಮ್ಮ ನಿಯಮಗಳು ಈ ಕೆಳಗಿನವುಗಳನ್ನು ನಿಷೇಧಿಸುತ್ತವೆ:
ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗಾಗಿ Snapchat ಅನ್ನು ಬಳಸುವುದು. ಇದು ಕಾನೂನುಬಾಹಿರ ಅಥವಾ ನಿಷೇಧಿತ ಮಾದಕಪದಾರ್ಥಗಳು ಅಥವಾ ನಿಯಂತ್ರಿತ ಔಷಧಗಳು, ಕಳ್ಳ ವಹಿವಾಟು (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಥವಾ ಶೋಷಣೆಯ ಚಿತ್ರಗಳಂತಹವು), ಅಳಿವಿನಂಚಿನಲ್ಲಿರುವ ಪ್ರಾಣಿಗಳು, ಶಸ್ತ್ರಾಸ್ತ್ರಗಳು ಅಥವಾ ಖೋಟಾ ಸರಕುಗಳು ಅಥವಾ ದಾಖಲೆಗಳ ಖರೀದಿಸುವಿಕೆ, ಮಾರಾಟ, ವಿನಿಮಯ ಅಥವಾ ಅವುಗಳಿಗಾಗಿ ಸೌಕರ್ಯ ಕಲ್ಪಿಸುವಿಕೆಯಂತಹ ಅಪರಾಧೀ ಚಟುವಟಿಕೆಗಳಿಗೆ ಪ್ರಚಾರ ನೀಡುವಿಕೆ, ಸೌಲಭ್ಯ ಕಲ್ಪಿಸುವಿಕೆ ಅಥವಾ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ. ಇದು ಮಾನವ ಕಳ್ಳಸಾಗಾಟ ಅಥವಾ ಲೈಂಗಿಕ ಕಾರ್ಯಕರ್ತೆಯರ ಕಳ್ಳಸಾಗಾಟ ಸೇರಿದಂತೆ, ಯಾವುದೇ ರೀತಿಯ ಶೋಷಣೆಗಳ ಪ್ರಚಾರ ಮಾಡುವುದು ಅಥವಾ ಅವುಗಳಿಗೆ ಸೌಲಭ್ಯ ಕಲ್ಪಿಸುವುದನ್ನು ಕೂಡ ಒಳಗೊಂಡಿರುತ್ತದೆ.
ನಿಯಂತ್ರಿತ ಸರಕುಗಳು ಅಥವಾ ಉದ್ಯಮಗಳ ಕಾನೂನುಬಾಹಿರ ಪ್ರಚಾರ. Snap ನಿಂದ ಪೂರ್ವಾನುಮೋದನೆಯ ಅಗತ್ಯವಿರುವ ನಿಯಂತ್ರಿತ ಚಟುವಟಿಕೆಗಳ ಉದಾಹರಣೆಗಳಲ್ಲಿ ಆನ್‌ಲೈನ್ ಜೂಜಿನ ಚಟುವಟಿಕೆಗಳಿಗೆ ಸೌಕರ್ಯ ಕಲ್ಪಿಸುವುದು; ಮದ್ಯಸಾರಯುಕ್ತ ಪಾನೀಯಗಳು, ತಂಬಾಕು ಅಥವಾ ವೇಪ್ ಪದಾರ್ಥಗಳ ಮಾರಾಟ; ಮತ್ತು THC ವ್ಯವಹಾರಗಳ ಪ್ರಚಾರಗಳು ಸೇರಿವೆ. Snapchat ನಲ್ಲಿ ಸೂಕ್ತ ವಾಣಿಜ್ಯ ಮತ್ತು ಜಾಹೀರಾತು ಚಟುವಟಿಕೆಗಳಿಗೆ ಸಂಬಂಧಿಸಿದ ಮಾರ್ಗದರ್ಶನಕ್ಕಾಗಿ ಈ ಸಂಪನ್ಮೂಲವನ್ನು ಸಂಪರ್ಕಿಸುವಂತೆ ವ್ಯವಹಾರಗಳಿಗೆ ಪ್ರೋತ್ಸಾಹ ನೀಡುತ್ತೇವೆ.
ಕಾನೂನನ್ನು ಉಲ್ಲಂಘಿಸಬಹುದಾದ ಮತ್ತು Snapchatter ಗಳ ಸುರಕ್ಷತೆಗೆ ಗಂಭೀರ ಅಪಾಯವನ್ನು ಒಡ್ಡಬಹುದಾದ ಆನ್‌ಲೈನ್ ನಡವಳಿಕೆ ಮತ್ತು ಚಟುವಟಿಕೆಗಳ ವಿಧಗಳಿಗೆ ಸಂಬಂಧಿಸಿ ಸಾಧ್ಯವಾದಷ್ಟು ಹೆಚ್ಚು ಮಾಹಿತಿಯನ್ನು ಅವರು ಹೊಂದಿರುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಲಾಭರಹಿತ ಸಂಸ್ಥೆಗಳೊಂದಿಗೆ ಪಾಲುದಾರಿಕೆಗಳು ಮತ್ತು ವೈವಿಧ್ಯಮಯ ಸುರಕ್ಷತಾ ಪಾಲುದಾರರೊಂದಿಗೆ ಸಹಭಾಗಿತ್ವಗಳ ಮೂಲಕ, ಅಧಿಕ ಅಪಾಯದ ಚಟುವಟಿಕೆಗಳು ಮತ್ತು Snapchatter ಗಳು ಸುರಕ್ಷಿತವಾಗಿ ಉಳಿಯಬಹುದಾದ ವಿಧಾನಗಳ ಕುರಿತು ಜಾಗೃತಿ ಮೂಡಿಸಲು ನಾವು ಗುರಿ ಹೊಂದಿದ್ದೇವೆ. ಇದರಲ್ಲಿ Here for You ಮತ್ತು ಹೆಡ್ಸ್ ಅಪ್ ನಂತಹ ಆ್ಯಪ್‌ನಲ್ಲಿನ ಸಂಪನ್ಮೂಲಗಳು ಹಾಗೂ ಸುರಕ್ಷತಾ ಪಾಲುದಾರರೊಂದಿಗೆ ಸಹಭಾಗಿತ್ವಗಳು ಕೂಡ ಸೇರಿವೆ. ಯಾವುದೇ ಅಪರಾಧದ ಸಾಕ್ಷ್ಯವನ್ನು ಒದಗಿಸಬಹುದಾದ Snapchat ನಲ್ಲಿನ ಚಟುವಟಿಕೆಗಳಿಗೆ ಸಂಬಂಧಿಸಿದ ಮಾನ್ಯವಾದ ಕಾನೂನಾತ್ಮಕ ಪ್ರಕ್ರಿಯೆಗಳಿಗೆ ಪ್ರತಿಕ್ರಿಯೆಯಾಗಿ ನಾವು ಕಾನೂನು ಜಾರಿ ಸಂಸ್ಥೆಗಳಿಗೆ ಸಹಕಾರ ಕೂಡ ನೀಡುತ್ತೇವೆ.
ಪ್ರಮುಖ ಸಂಗತಿ
ಸಾರ್ವಜನಿಕ ಸುರಕ್ಷತೆಯನ್ನು ಪ್ರಚಾರ ಮಾಡಲು ಮತ್ತು Snapchatter ಗಳನ್ನು ಹಾನಿಕಾರಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಂದ ರಕ್ಷಿಸಲು ನಾವು ಕೈಗೊಳ್ಳಬೇಕಾಗುವ ಕ್ರಮಗಳ ನಮ್ಮ ಜವಾಬ್ದಾರಿಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ.
ನಾವು ಈ ಪ್ರಯತ್ನಗಳನ್ನು ಮುಂದುವರಿಸುತ್ತಿರುವಂತೆಯೇ, ನಮ್ಮ ವಿಧಾನದ ಪರಿಣಾಮಕಾರಿತ್ವದ ಕುರಿತು ಪಾರದರ್ಶಕ ಒಳನೋಟಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಪಾರದರ್ಶಕತೆಯ ವರದಿಗಳ ಮೂಲಕ, ಕಾನೂನುಬಾಹಿರ ಅಥವಾ ನಿಯಂತ್ರಿತ ಚಟುವಟಿಕೆಗಳ ವಿರುದ್ಧ ನಾವು ಜಾರಿಗೊಳಿಸುವ ಕ್ರಮಗಳಿಗೆ ಸಂಬಂಧಿಸಿದಂತೆ ನಾವು ದೇಶಗಳ ರಾಷ್ಟ್ರೀಯ-ಮಟ್ಟದ ಮಾಹಿತಿಯನ್ನು ಒದಗಿಸುತ್ತೇವೆ. ಹೆಚ್ಚುವರಿ ವಿವರಗಳನ್ನು ಒದಗಿಸಲು, ನಾವು ನಮ್ಮ ಪಾರದರ್ಶಕತೆಯ ವರದಿಯಲ್ಲಿ ಅಕ್ರಮ ಮಾದಕಪದಾರ್ಥಗಳು ಮತ್ತು ಶಸ್ತ್ರಾಸ್ತ್ರ-ಸಂಬಂಧಿತ ಉಲ್ಲಂಘನೆಗಳಿಗಾಗಿ ನಮ್ಮ ವರದಿ ನೀಡುವಿಕೆ ಮತ್ತು ಜಾರಿಗೊಳಿಸುವಿಕೆಗಳಿಗೆ ಕುರಿತಾದ ಡೇಟಾವನ್ನು ವಿಂಗಡಿಸಿದ್ದೇವೆ, ಹಾಗೂ ನಾವು ನಮ್ಮ ಭವಿಷ್ಯದ ವರದಿಗಳಲ್ಲಿ ಈ ಉಲ್ಲಂಘನೆಗಳ ಕುರಿತು ಇನ್ನೂ ಹೆಚ್ಚು ವಿವರಣಾತ್ಮಕ ವಿಂಗಡಣೆಗಳನ್ನು ಒದಗಿಸಬೇಕೆಂದು ಯೋಜಿಸಿದ್ದೇವೆ.
Snapchat ಅನ್ನು ಸುರಕ್ಷಿತ ಮತ್ತು ಆರೋಗ್ಯಕರವಾಗಿ ಇರಿಸಲು ಸಹಾಯ ಮಾಡುವುದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ ಘಟನೆಗಳನ್ನು ವರದಿ ಮಾಡುವಂತೆ ನಾವು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ. ಹಾನಿಕಾರಕ ವಿಷಯಗಳು ಅಥವಾ ನಡವಳಿಕೆಗಳನ್ನು ಎದುರಿಸುವುದಕ್ಕಾಗಿ ನಮ್ಮ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳುವ ಅವಕಾಶಗಳಿಗಾಗಿ ನಾವು ಸದಾ ಎದುರು ನೋಡುತ್ತೇವೆ, ಹಾಗೂ ಈ ಉದ್ದೇಶಗಳನ್ನು ನಾವು ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದ್ದೇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸುರಕ್ಷತಾ ಸಮುದಾಯದಾದ್ಯಂತದ ವೈವಿಧ್ಯಮಯ ನಾಯಕರ ಜೊತೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ. ನಮ್ಮ ಪ್ರಯತ್ನಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಗೌಪ್ಯತೆ, ಸುರಕ್ಷತೆ ಮತ್ತು ನೀತಿಗಳ ಕೇಂದ್ರಕ್ಕೆ ಭೇಟಿ ನೀಡಿ.
ದ್ವೇಷಮಯ ವಿಷಯ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರಗಾಮಿತ್ವ