Privacy, Safety, and Policy Hub
ಸಮುದಾಯ ಮಾರ್ಗಸೂಚಿಗಳು

ಕಿರುಕುಳ ಮತ್ತು ಬೆದರಿಸುವಿಕೆ

ಸಮುದಾಯದ ಮಾರ್ಗಸೂಚಿಗಳ ವಿವರಣಾ ಸರಣಿ

ನವೀಕರಿಸಲಾದ ದಿನಾಂಕ: ಫೆಬ್ರವರಿ 2025

ಮೇಲ್ನೋಟ

ಬೆದರಿಸುವಿಕೆ ಮತ್ತು ಕಿರುಕುಳಗಳು Snapchat ನ ಮೌಲ್ಯಗಳಿಗೆ ವಿರುದ್ಧವಾಗಿವೆ. ಈ ಹಾನಿಗಳು ಅನೇಕ ರೂಪಗಳನ್ನು ಪಡೆದುಕೊಳ್ಳಬಹುದು, ಆದ್ದರಿಂದ ಅವುಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದಕ್ಕಾಗಿ ನಾವು ಬಹುಮುಖಿ ವಿಧಾನಗಳನ್ನು ಬಳಸುತ್ತೇವೆ. ನಮ್ಮ ನೀತಿ ಮತ್ತು ಜಾರಿಗೊಳಿಸುವಿಕೆಯ ಜೊತೆಗೆ, ನಾವು ಉತ್ಪನ್ನ ಸುರಕ್ಷತಾ ಪರಿಹಾರಗಳನ್ನು ಬಳಸುತ್ತೇವೆ ಹಾಗೂ ಬಳಕೆದಾರರಿಗೆ ಸಂಪನ್ಮೂಲಗಳನ್ನು ಒದಗಿಸುತ್ತೇವೆ.

ಮೂಲಭೂತವಾಗಿ, ನಮ್ಮ ನೀತಿಗಳು ಕೀಳಾಗಿ ಕಾಣಿಸುವ, ಮಾನಹಾನಿಕಾರಕ ಅಥವಾ ತಾರತಮ್ಯದ ಕಂಟೆಂಟ್‌ ಮತ್ತು ನಡವಳಿಕೆಗಳನ್ನು ನಿಷೇಧಿಸುತ್ತವೆ. ನಾವು ಜನರ ಅರಿವು ಅಥವಾ ಸಮ್ಮತಿಯಿಲ್ಲದೆಯೇ--ವಿಶೇಷವಾಗಿ ಅಪ್ರಾಪ್ತರು, ಹಿರಿಯ ವಯಸ್ಕರು ಅಥವಾ ವೈದ್ಯಕೀಯ ಅಥವಾ ನೆರವಿನ ವಸತಿ ಸೌಲಭ್ಯಗಳಲ್ಲಿರುವವರು ಸೇರಿದಂತೆ ದುರ್ಬಲ ಜನಸಂಖ್ಯೆಗಳ ಸದಸ್ಯರ--ಖಾಸಗಿ ಮಾಹಿತಿ ಅಥವಾ Snap ಗಳನ್ನು ಖಾಸಗಿ ಸಂಯೋಜನೆಗಳಲ್ಲಿ ಹಂಚಿಕೊಳ್ಳುವುದನ್ನು ಕೂಡ ನಿಷೇಧಿಸುತ್ತೇವೆ.

ಈ ನೀತಿಗಳನ್ನು ನಿರಂತರವಾಗಿ ಜಾರಿ ಮಾಡುವುದರ ಜೊತೆಗೆ, ಈ ನಿಯಮಗಳನ್ನು ಉಲ್ಲಂಘಿಸಬಹುದಾದ ಹಾನಿಕಾರಕ ನಡವಳಿಕೆಗಳನ್ನು ಮಿತಿಗೊಳಿಸಲು ಸಹಾಯ ಮಾಡುವುದಕ್ಕಾಗಿ ನಾವು ನಮ್ಮ ಉತ್ಪನ್ನಗಳ ವಿನ್ಯಾಸವನ್ನು ಬಳಸುತ್ತೇವೆ. ಉದಾಹರಣೆಗಾಗಿ, ಸ್ನೇಹಿತರು ಇಬ್ಬರೂ ಪರಸ್ಪರ ಸಂದೇಶ ಕಳುಹಿಸುವುದಕ್ಕೆ ಮುನ್ನ ಆ ಸಂಪರ್ಕವನ್ನು ಸಂಬಂಧಿತ ಇಬ್ಬರೂ ಅಂಗೀಕರಿಸಬೇಕಾಗುವ ಪೂರ್ವನಿಯೋಜಿತ ಸೆಟ್ಟಿಂಗ್‌ಗಳನ್ನು ನಾವು ಬಳಸುತ್ತೇವೆ.

ನೀವು ಏನನ್ನು ನಿರೀಕ್ಷಿಸಬೇಕು

ನಮ್ಮ ಕಿರುಕುಳ ಮತ್ತು ಬೆದರಿಸುವಿಕೆಯ ನೀತಿಗಳ ಉಲ್ಲಂಘನೆಗಳು ಒಬ್ಬ ಸಾಮಾನ್ಯ ವ್ಯಕ್ತಿಯು ಭಾವನಾತ್ಮಕ ಒತ್ತಡವನ್ನು ಅನುಭವಿಸುವಂತಹ ಯಾವುದೇ ಅನಪೇಕ್ಷಿತ ವರ್ತನೆಯನ್ನು ಒಳಗೊಂಡಿರುತ್ತವೆ. ಈ ನಿಯಮಗಳು ಬಳಕೆದಾರರು ಪರಸ್ಪರರ ವೈಯಕ್ತಿಕ ಗೌಪ್ಯತೆಯನ್ನು ಗೌರವಿಸುವುದನ್ನೂ ಸಹ ಅಗತ್ಯವಾಗಿಸುತ್ತವೆ. ಈ ನಿಯಮಗಳ ಉಲ್ಲಂಘನೆಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:

  • ಮೌಖಿಕ ನಿಂದನೆ, ಬೆದರಿಕೆಗಳು ಅಥವಾ ಗುರಿಯಾಗಿಸಿದಂತಹ ವ್ಯಕ್ತಿಯನ್ನು ಅವಮಾನಿಸುವುದಕ್ಕೆ, ಮುಜುಗರಗೊಳಿಸುವುದಕ್ಕೆ ಅಥವಾ ಅವಮಾನಿಸುವುದಕ್ಕಾಗಿ ಬಳಸಲ್ಪಡುವ ಯಾವುದೇ ನಡವಳಿಕೆ.  

  • ಬೇರೊಬ್ಬ ವ್ಯಕ್ತಿಯ ಖಾಸಗಿ ಮಾಹಿತಿ ಮತ್ತು — ಸ್ನಾನದ ಮನೆ, ಮಲಗುವ ಕೋಣೆ, ಲಾಕರ್ ಕೋಣೆ, ವೈದ್ಯಕೀಯ ಸೌಲಭ್ಯ ಅಥವಾ ನೆರವಿನ ವಸತಿ ಸೌಲಭ್ಯಗಳಂತಹ — ಖಾಸಗಿ ಸ್ಥಳಗಳಲ್ಲಿನ ಅವರ Snap ಗಳನ್ನು ಅವರ ಅರಿವು ಅಥವಾ ಸಮ್ಮತಿಯಿಲ್ಲದೆಯೇ ಹಂಚಿಕೊಳ್ಳುವುದು.  

ಉಲ್ಲಂಘನೆಗಳನ್ನು ತಪ್ಪಿಸಲು ಸಹಾಯ ಮಾಡುವುದಕ್ಕಾಗಿ, Snapchatter ಜನರ ಅನುಮತಿಯಿಲ್ಲದೆಯೇ ಅವರ ಛಾಯಾಚಿತ್ರಗಳು ಅಥವಾ ವೀಡಿಯೋಗಳನ್ನು ತೆಗೆಯದಿರುವಂತೆ, ಹಾಗೂ ಇತರ ಜನರ ಬಗ್ಗೆ ಖಾಸಗಿ ಮಾಹಿತಿಯನ್ನು, ಉದಾಹರಣೆಗಾಗಿ, ಅವರ ಗೃಹ ವಿಳಾಸ, ಜನ್ಮದಿನಾಂಕ, ದೂರವಾಣಿ ಸಂಖ್ಯೆಗಳು, ಇತ್ಯಾದಿಗಳ ಹಂಚಿಕೊಳ್ಳುವಿಕೆಯನ್ನು ತಪ್ಪಿಸಲು ಪ್ರೋತ್ಸಾಹಿಸುತ್ತೇವೆ. ಒಂದು ವೇಳೆ ಯಾರಾದರೂ ನಿಮ್ಮನ್ನು Snapchat ನಲ್ಲಿ ನಿರ್ಬಂಧಿಸಿದರೆ, ನೀವು ಅವರನ್ನು ಮತ್ತೊಂದು ಖಾತೆಯಿಂದ ಸಂಪರ್ಕಿಸುವಂತಿಲ್ಲ. ಒಂದು ವೇಳೆ ನಿಮ್ಮ Snap ನಲ್ಲಿ ಯಾವುದೇ ವ್ಯಕ್ತಿಯು ಕಾಣಿಸಿಕೊಂಡಿದ್ದು, ಅವರು ಅದನ್ನು ತೆಗೆದುಹಾಕುವಂತೆ ನಿಮ್ಮನ್ನು ಕೇಳಿದರೆ, ದಯವಿಟ್ಟು ಹಾಗೆ ಮಾಡಿ! ಇತರರ ಗೌಪ್ಯತೆ ಹಕ್ಕುಗಳನ್ನು ಗೌರವಿಸಿ. 

ಬಳಕೆದಾರರು ಈ ನಿಯಮಗಳ ಉಲ್ಲಂಘನೆಗಳನ್ನು ಅನುಭವಿಸಿದಾಗ ಅಥವಾ ಗಮನಿಸಿದಾಗ ಅವಗಳನ್ನು ವರದಿ ಮಾಡುವಂತೆ ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ. Snapchat ಅನ್ನು ಬಳಸಲು ಪ್ರತಿ ಬಳಕೆದಾರರಿಗೆ ಸುರಕ್ಷಿತ ಮತ್ತು ಆರಾಮದಾಯಕವೆನಿಸುವುದೆಂದು ಖಚಿತಪಡಿಸುವ ಗುರಿಯನ್ನು ನಮ್ಮ ಉದಾರ ಪರಿಷ್ಕರಣಾ ತಂಡಗಳು ಹೊಂದಿವೆ, ಹಾಗೂ ಕೆಟ್ಟ ನಡವಳಿಕೆಯನ್ನು ವರದಿ ಮಾಡುವ ಮೂಲಕ, ಬಳಕೆದಾರರು ಆ ಗುರಿಯನ್ನು ಸಾಧಿಸಲು ನಮಗೆ ನೆರವಾಗಬಹುದಾಗಿದೆ.

ಪ್ರಮುಖ ಸಂಗತಿ

ನಾವು ಯಾವುದೇ ರೀತಿಯ ಕಿರುಕುಳ ಅಥವಾ ಬೆದರಿಸುವಿಕೆಗಳನ್ನು ಸಹಿಸುವುದಿಲ್ಲ. ನಾವು ನಮ್ಮ ಬಳಕೆದಾರರು Snapchat ಅನ್ನು ಬಳಸುವಾಗ ಸುರಕ್ಷಿತ ಭಾವನೆಯನ್ನು ಅನುಭವಿಸಬೇಕೆಂದು ಬಯಸುತ್ತೇವೆ. ನಿಮಗೆ ಎಂದಾದರೂ ಅಹಿತಕರ ಅನ್ನಿಸಿದರೆ, ನಮಗೆ ವರದಿ ಕಳುಹಿಸಲು ಮತ್ತು ಆ ಬಳಕೆದಾರನನ್ನು ನಿರ್ಬಂಧಿಸಲು ಹಿಂಜರಿಯಬೇಡಿ--ಈ ವೈಶಿಷ್ಟ್ಯಗಳನ್ನು ನಿಮ್ಮ ಸುರಕ್ಷತೆಗಾಗಿ ಒದಗಿಸಲಾಗಿದೆ. ನಮ್ಮ Here for You ಪೋರ್ಟಲ್‌ನ ಮೂಲಕ, ಬೆದರಿಸುವಿಕೆ ಮತ್ತು ಕಿರುಕುಳಗಳನ್ನು ಗುರುತಿಸಲು ಹಾಗೂ ತಕ್ಕ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುವುದಕ್ಕಾಗಿ ಬಳಕೆದಾರರು ಆ್ಯಪ್‌ನಲ್ಲಿನ ಸಂಪನ್ಮೂಲಗಳಿಗೆ ಮತ್ತು ಮಾಹಿತಿಗೆ ಪ್ರವೇಶ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಹಾಯ ಮಾಡುತ್ತೇವೆ. ನಾವು Snapchat ನಲ್ಲಿ ಯಾವುದೇ ಉಲ್ಲಂಘನಾತ್ಮಕ ನಡವಳಿಕೆಯ ಕುರಿತು ಸುಲಭವಾಗಿ ವರದಿ ಮಾಡಲು ಅನುಕೂಲ ಕಲ್ಪಿಸುವ ಸಾಧನಗಳನ್ನು ಸಹ ಒದಗಿಸುತ್ತೇವೆ.

ದಯವಿಟ್ಟು ಜನರ ಘನತೆ ಮತ್ತು ಗೌಪ್ಯತೆಗಳನ್ನು ಗೌರವಿಸಿ--ಒಂದು ವೇಳೆ ಅವರು ಯಾವುದೇ ಅನುಭವವು ಅಹಿತಕರವಾಗಿರುವುದಾಗಿ ವ್ಯಕ್ತಪಡಿಸಿದರೆ, ಅವರ ಎಲ್ಲೆಗಳನ್ನು ಮೀರಬೇಡಿ. ಒಂದು ವೇಳೆ ಯಾವುದೇ ವ್ಯಕ್ತಿಗಳು ತಮ್ಮ ಕುರಿತಾದ ಯಾವುದೇ ಕಂಟೆಂಟ್‌ಗಳನ್ನು ತೆಗೆದುಹಾಕುವಂತೆ ಕೇಳಿಕೊಂಡರೆ, ದಯವಿಟ್ಟು ಹಾಗೆ ಮಾಡಿ, ಹಾಗೂ ಯಾರದೇ ಅನುಮತಿಯನ್ನು ಪಡೆಯದೆಯೇ ಅವರ ಚಿತ್ರಗಳು ಅಥವಾ ಮಾಹಿತಿಗಳ ಹಂಚಿಕೊಳ್ಳುವಿಕೆಯನ್ನು ತಪ್ಪಿಸಿ.