Snap Values

ತೀವ್ರ ಹಾನಿ

ಸಮುದಾಯದ ಮಾರ್ಗಸೂಚಿಗಳ ವಿವರಣಾ ಸರಣಿ

ಪರಿಷ್ಕರಿಸಿರುವುದು: ಮಾರ್ಚ್ 2026

Snapchatter ಗಳ ಸುರಕ್ಷತೆಯು ಒಂದು ಅಗ್ರ ಆದ್ಯತೆಯಾಗಿದೆ. ನಮ್ಮ ಸಮುದಾಯದ ಸುರಕ್ಷತೆಗೆ ಬೆದರಿಕೆಯೊಡ್ಡುವ ನಡವಳಿಕೆಯನ್ನು, ನಿರ್ದಿಷ್ಟವಾಗಿ ಹಾನಿಯ ಬೆದರಿಕೆ ತೀವ್ರವಾಗಿದ್ದಾಗ ನಾವು ತುಂಬ ಗಂಭೀರವಾಗಿ ಪರಿಗಣಿಸುತ್ತೇವೆ. ನಾವು ತೀವ್ರ ಹಾನಿಯು (1) Snapchatter ಗಳ ದೈಹಿಕ ಅಥವಾ ಭಾವನಾತ್ಮಕ ಯೋಗಕ್ಷೇಮಕ್ಕೆ ಗಮನಾರ್ಹ ಅಪಾಯ ಒಡ್ಡುವ ಹಾನಿಗಳು, ಮತ್ತು (2) ಮಾನವರ ಜೀವ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಬೆದರಿಕೆಗಳು ಸೇರಿದಂತೆ, ತೀವ್ರ ಹಾನಿಯ ಸನ್ನಿಹಿತ, ನಂಬಲರ್ಹ ಅಪಾಯ ಎರಡೂ ಒಳಗೊಂಡಿದೆ ಎಂದು ಪರಿಗಣಿಸುತ್ತೇವೆ. ನಮಗೆ ಹಾಗೂ ನಮ್ಮ ಸಮುದಾಯಕ್ಕೆ ಉತ್ತಮ ತಿಳುವಳಿಕೆ ನೀಡಲು ಹಾಗೂ ನಮ್ಮ ವೇದಿಕೆಯಲ್ಲಿ ಈ ಬೆದರಿಕೆಗಳು ಉದ್ಭವಿಸುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು, ಈ ವಿಷಯಗಳ ಕುರಿತಾಗಿ ನಾವು ತಜ್ಞರು, ಸುರಕ್ಷತಾ ಗುಂಪುಗಳು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಮಾಡುತ್ತೇವೆ.

ಒಳಗೊಂಡಿರುವ ಅಪಾಯಗಳ ತೀವ್ರತೆ ಮತ್ತು ಕ್ಷಿಪ್ರತೆಯ ಕಾರಣದಿಂದ, ಕೆಲವು ವರ್ಗಗಳ ವಿಷಯ ಮತ್ತು ನಡವಳಿಕೆ—ಉದಾಹರಣೆಗೆ ಮಕ್ಕಳ ಲೈಂಗಿಕ ಶೋಷಣೆ, ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆ, ಅಪಾಯಕಾರಿ ಮತ್ತು ಕಾನೂನುಬಾಹಿರ ಮಾದಕಪದಾರ್ಥಗಳು ಅಥವಾ ಶಸ್ತ್ರಾಸ್ತ್ರಗಳ ಪ್ರಚಾರ, ಮಾನವ ಕಳ್ಳಸಾಗಣೆ ಮತ್ತು ಇತರ ಗಂಭೀರ ಅಪರಾಧ ನಡವಳಿಕೆ—ಆಗಾಗ್ಗೆ ಈ ಮೇಲ್ಮಿತಿಯನ್ನು ಪೂರೈಸುತ್ತವೆ. ಈ ವಿಧದ ಹಾನಿಗಳು ಗರಿಷ್ಠ ಮಟ್ಟದ ಪರಿಶೀಲನೆಗೆ ಹಾಗೂ ಉಲ್ಲಂಘಿಸಿದ ಖಾತೆಗಳು ತ್ವರಿತ, ಕಟ್ಟುನಿಟ್ಟಿನ ಮತ್ತು ಶಾಶ್ವತ ಪರಿಣಾಮಗಳಿಗೆ ಅರ್ಹವಾಗಿವೆ ಎಂದು ನಾವು ಪರಿಗಣಿಸುತ್ತೇವೆ. 


ಈ ಕೆಳಗಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ Snapchatter ಗಳನ್ನು ನಾವು ಗುರುತಿಸಿದಾಗ, ನಾವು ತಕ್ಷಣವೇ ಸಂಬಂಧಿತ ವಿಷಯವನ್ನು ತೆಗೆದುಹಾಕುತ್ತೇವೆ, ಅವರ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತೇವೆ ಮತ್ತು ಕೆಲವು ಸಂದರ್ಭಗಳಲ್ಲಿ ನಡವಳಿಕೆಯನ್ನು ಕಾನೂನು ಜಾರಿ ಸಂಸ್ಥೆಯ ಗಮನಕ್ಕೆ ತರುತ್ತೇವೆ:

  • ಲೈಂಗಿಕ ತೃಪ್ತಿಗಾಗಿ ಮಕ್ಕಳ ಲೈಂಗಿಕ ಶೋಷಣೆಯನ್ನು ಚಿತ್ರಿಸುವ ಚಿತ್ರಣವನ್ನು ಹಂಚಿಕೊಳ್ಳುವುದು, ಲೈಂಗಿಕ ಉದ್ದೇಶಗಳಿಗಾಗಿ ಮರುಳು ಮಾಡುವುದು, ಮಕ್ಕಳು ಅಥವಾ ವಯಸ್ಕರ ಲೈಂಗಿಕ ಕಳ್ಳಸಾಗಣೆ ಅಥವಾ ಲೈಂಗಿಕ ಸುಲಿಗೆ ಸೇರಿದಂತೆ, ಲೈಂಗಿಕ ಶೋಷಣೆ ಅಥವಾ ನಿಂದನೆಯನ್ನು ಒಳಗೊಂಡಿರುವ ಚಟುವಟಿಕೆ

  • ಅಪಾಯಕಾರಿ ಮತ್ತು ಅಕ್ರಮ ಮಾದಕಪದಾರ್ಥಗಳ ಮಾರಾಟ, ವಿನಿಮಿಯ ಅಥವಾ ಮಾರಾಟಕ್ಕೆ ಸೌಲಭ್ಯ ಕಲ್ಪಿಸುವ ಪ್ರಯತ್ನ

  • ಹಿಂಸಾತ್ಮಕ ತೀವ್ರವಾದ ಅಥವಾ ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳು, ಮಾನವ ಕಳ್ಳಸಾಗಣೆ, ಹಿಂಸೆಯ ನಿರ್ದಿಷ್ಟ ಬೆದರಿಕೆಗಳು (ಉದಾಹರಣೆಗೆ ಬಾಂಬ್ ಬೆದರಿಕೆ) ಅಥವಾ ಇತರ ಗಂಭೀರ ಅಪರಾಧ ಚಟುವಟಿಕೆಗಳನ್ನು ಒಳಗೊಳ್ಳಬಹುದಾದ, ಮಾನವರ ಜೀವ, ಸುರಕ್ಷತೆ ಅಥವಾ ಯೋಗಕ್ಷೇಮಕ್ಕೆ ನಂಬಲರ್ಹ, ಸನ್ನಿಹಿತ ಬೆದರಿಕೆಗಳು 

ಈ ಉಲ್ಲಂಘನೆಗಳಿಗಾಗಿ ಕಠಿಣ ಪರಿಣಾಮಗಳನ್ನು ಜಾರಿಗೊಳಿಸುವುದರ ಜೊತೆಗೆ, ಅನ್ವಯವಾಗುವ ಗೌಪ್ಯತೆ ನಿರ್ಬಂಧಗಳನ್ನು ಗೌರವಿಸುವುದರೊಂದಿಗೆ, ನಾವು ತೀವ್ರ ಮತ್ತು ಗಂಭೀರ ಉಲ್ಲಂಘನೆಯ ವಿಷಯವನ್ನು ಹೆಚ್ಚು ತ್ವರಿತವಾಗಿ ಗುರುತಿಸಲು ಮತ್ತು ತೆಗೆದುಹಾಕಲು ಪೂರ್ವಭಾವಿ ಪತ್ತೆಮಾಡುವಿಕೆಯ ಕ್ರಮಗಳನ್ನು ಬಳಸಬಹುದು. ನಾವು ಹೇಗೆ ಬೆದರಿಕೆಗಳನ್ನು ಪತ್ತೆಮಾಡಬಹುದು ಮತ್ತು ಮಿತಿಗೊಳಿಸಬಹುದು, ಹಾನಿಯನ್ನು ತಡೆಯಬಹುದು ಮತ್ತು ಸಂಭಾವ್ಯ ಹಾನಿಕಾರಕ ಪ್ರವೃತ್ತಿಗಳ ಕುರಿತು ತಿಳಿದಿರಬಹುದು ಎಂಬುದನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಮ್ಮ ಆಂತರಿಕ ತಂಡಗಳು ತಜ್ಞರ ಜೊತೆಗೆ ಸತತವಾಗಿ ಕೆಲಸ ಮಾಡುತ್ತವೆ. ಈ ವಿಷಯಕ್ಕೆ ಸಂಬಂಧಿಸಿ ನಮ್ಮ ಕೆಲಸ ಎಂದಿಗೂ ಮುಗಿಯುವುದಿಲ್ಲ ಮತ್ತು ನಮ್ಮ ಸಮುದಾಯದ ಅಗತ್ಯಗಳೊಂದಿಗೆ ಅದು ವಿಕನಸವಾಗುತ್ತ ಹೋಗುತ್ತದೆ. ಒಂದು ಸುರಕ್ಷತಾ ಕಳವಳವನ್ನು ವರದಿ ಮಾಡಲು, ನಮ್ಮ ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಲು ಅಥವಾ ಹಾನಿಕಾರಕ ಕಂಟೆಂಟ್ ಬಗೆಹರಿಸಲು ಮತ್ತು ಯೋಗಕ್ಷೇಮವನ್ನು ಪ್ರೋತ್ಸಾಹಿಸಲು ಮಾಡುತ್ತಿರುವ ನಮ್ಮ ಪ್ರಯತ್ನಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.