ಜಾಹೀರಾತು ನೀತಿಗಳು

ಸಾಮಾನ್ಯ ಅವಶ್ಯಕತೆಗಳು

ಗುರಿಯಾಗಿಸುವಿಕೆ ಮತ್ತು ಅನುಸರಣೆ

ಎಲ್ಲ ಜಾಹೀರಾತುಗಳು ಅವು ಚಲಾವಣೆಯಾಗುವ ಪ್ರತಿ ಭೌಗೋಳಿಕ ಪ್ರದೇಶದ ಅವರ ಆಯ್ಕೆ ಮಾಡಿದ ಪ್ರೇಕ್ಷಕರಿಗೆ ಸೂಕ್ತವಾಗಿರಬೇಕು. Snapchat, 13+ ಆ್ಯಪ್ ಆಗಿದೆ, ಆದ್ದರಿಂದ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಉದ್ದೇಶಿಸಿರುವ ಅಥವಾ ಅವರಿಗಾಗಿ ಉದ್ದೇಶಿಸಲಾಗಿದೆ ಎಂಬಂತೆ ಕಾಣುವ ಜಾಹೀರಾತುಗಳನ್ನು ನಾವು ತಿರಸ್ಕರಿಸುತ್ತೇವೆ. 

ಜಾಹೀರಾತುಗಳು ಎಲ್ಲ ಅನ್ವಯವಾಗುವ ಕಾನೂನುಗಳು, ಶಾಸನಗಳು, ಕಟ್ಟಳೆಗಳು, ಸಾರ್ವಜನಿಕ ಸುವ್ಯವಸ್ಥೆಯ ನಿಯಮಗಳು, ಉದ್ಯಮ ಸಂಹಿತೆಗಳು, ನಿಬಂಧನೆಗಳು ಮತ್ತು ಜಾಹೀರಾತುಗಳು ಚಲಾವಣೆಯಾಗುವ ಪ್ರತಿ ಭೌಗೋಳಿಕ ಪ್ರದೇಶದ ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ಕಡ್ಡಾಯವಾಗಿ ಅನುಸರಣೆ ಮಾಡಬೇಕು. ದಯವಿಟ್ಟು ಗಮನಿಸಿ:

  • ಕೆಲವು ಉತ್ಪನ್ನಗಳು ಅಥವಾ ಸೇವೆಗಳಿಗಾಗಿನ ಜಾಹೀರಾತುಗಳನ್ನು ಲಿಂಗ, ವಯಸ್ಸು, ಅಥವಾ ಸ್ಥಳ ಆಧರಿತವಾಗಿ ಗುರಿಯಾಗಿಸುವಂತಿಲ್ಲ.

  • ಕೆಲವು ಸ್ಥಳಗಳು ಭಾಷೆಯ ಅಗತ್ಯಗಳನ್ನು ಹೊಂದಿವೆ.

  • US ನಲ್ಲಿ ನೆಲೆಸಿರುವ ಕಂಪನಿಯಾಗಿ, U.S. ವ್ಯಾಪಾರ ನಿರ್ಬಂಧಗಳು ಅಥವಾ ಕೆಲವು ಇತರ U.S. ರಫ್ತು ನಿಯಂತ್ರಣ ಕಾನೂನುಗಳಿಗೆ ಒಳಗಾಗಿರುವ ದೇಶಗಳಿಗೆ ಗುರಿಯಾಗಿಸಿದ ಅಥವಾ ಆ ದೇಶಗಳ ಸಂಸ್ಥೆಗಳಿಂದ ಪಾವತಿಸಲ್ಪಟ್ಟಿರುವ ಜಾಹೀರಾತುಗಳನ್ನು Snap ಸ್ವೀಕರಿಸುವುದಿಲ್ಲ.

ಬಹಿರಂಗಪಡಿಸುವಿಕೆಗಳು

ಜಾಹೀರಾತುಗಳಲ್ಲಿನ ಎಲ್ಲಾ ಅಗತ್ಯ ಬಹಿರಂಗಪಡಿಸುವಿಕೆಗಳು, ಹಕ್ಕುನಿರಾಕರಣೆಗಳು ಮತ್ತು ಎಚ್ಚರಿಕೆಗಳು ಸ್ಪಷ್ಟ ಮತ್ತು ಸಂಯೋಜನೆಯಾಗಬೇಕು (ಹೆಚ್ಚಿನ ವಿವರಗಳಿಗಾಗಿ ಜಾಹೀರಾತು ನಿರ್ದಿಷ್ಟತೆಗಳು ಮತ್ತು ಮಾರ್ಗಸೂಚಿಗಳನ್ನು ನೋಡಿ) ಮತ್ತು ಜಾಹೀರಾತುಗಳನ್ನು ಜಾಹೀರಾತಿನಲ್ಲಿ ನಿಖರವಾಗಿ ಮತ್ತು ಸ್ಪಷ್ಟವಾಗಿ ಗುರುತಿಸಿರಬೇಕು.

ಗೌಪ್ಯತೆ: ಡೇಟಾ ಸಂಗ್ರಹ ಮತ್ತು ಬಳಕೆ

ಜಾಹೀರಾತುಗಳು ಈ ಮುಂದಿನವುಗಳ ಆಧಾರದ ಮೇಲೆ ಅಥವಾ ಅವುಗಳನ್ನು ಒಳಗೊಂಡಂತೆ, ಸೂಕ್ಷ್ಮ ಮಾಹಿತಿ ಅಥವಾ ವಿಶೇಷ ವರ್ಗದ ಡೇಟಾವನ್ನು ಸಂಗ್ರಹಿಸದಿರಬಹುದು: (i) ಒಂದು ಅಪರಾಧದ ಆರೋಪಿತ ಅಥವಾ ನೈಜ ಘಟಿಸುವಿಕೆ; (ii) ಆರೋಗ್ಯ ಮಾಹಿತಿ; ಅಥವಾ (iii) ಬಳಕೆದಾರರ ಹಣಕಾಸು ಸ್ಥಿತಿ, ಜನಾಂಗೀಯ ಅಥವಾ ಕುಲದ ಮೂಲ, ಧಾರ್ಮಿಕ ನಂಬಿಕೆಗಳು ಅಥವಾ ಆದ್ಯತೆಗಳು, ಲೈಂಗಿಕ ಜೀವನ ಅಥವಾ ಲೈಂಗಿಕ ಆದ್ಯತೆಗಳು, ರಾಜಕೀಯ ಅಭಿಪ್ರಾಯಗಳು ಅಥವಾ ಕಾರ್ಮಿಕ ಸಂಘಟನೆ ಸದಸ್ಯತ್ವ. ನಾವು ಕೇವಲ ದೃಢೀಕೃತ ಸಂಶೋಧನಾ ಸಂಸ್ಥೆಗಳು ಅಥವಾ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ಮಾತ್ರ ಆರೋಗ್ಯ ಸಂಬಂಧಿತ ಸಮೀಕ್ಷೆಗಳಿಗೆ ಅನುಮತಿ ನೀಡುತ್ತೇವೆ.

ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಸಂಧರ್ಭದಲ್ಲಿ ಜಾಹೀರಾತುದಾರರ ಗೌಪ್ಯತಾ ನೀತಿ ಸುಲಭವಾಗಿ ಸಿಗುವಂತಿರಬೇಕು.

ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿ ಸಂಗ್ರಹಿಸಿ ಪ್ರಕ್ರಿಯೆಗೊಳಿಸಬೇಕು. ಸುಳ್ಳು ನೆಪಗಳ ಅಡಿಯಲ್ಲಿ ವೈಯಕ್ತಿಕ ಮಾಹಿತಿ ಒದಗಿಸಲು ಬಳಕೆದಾರರನ್ನು ಮೋಸಗೊಳಿಸುವ ಜಾಹೀರಾತುಗಳನ್ನು ನಿಷೇಧಿಸಲಾಗಿದೆ.

ಜಾಹೀರಾತುಗಳು ವೈಯಕ್ತಿಕ ಡೇಟಾ, ಸೂಕ್ಷ್ಮ ಮಾಹಿತಿ, ಆನ್‌ಲೈನ್ ಚಟುವಟಿಕೆ ಅಥವಾ ಬಳಕೆದಾರರ ನಿಖರವಾದ ಇರುವಿಕೆಯ ಜ್ಞಾನವನ್ನು ತಿಳಿಸಬಾರದು ಅಥವಾ ಸೂಚಿಸಬಾರದು.

ಬೌದ್ಧಿಕ ಆಸ್ತಿ

ಉಲ್ಲಂಘಿಸುವ ಕಂಟೆಂಟ್

ಜಾಹೀರಾತುಗಳು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಬೌದ್ಧಿಕ ಆಸ್ತಿ, ಗೌಪ್ಯತೆ, ಪ್ರಚಾರ ಅಥವಾ ಇತರ ಕಾನೂನು ಹಕ್ಕುಗಳನ್ನು ಉಲ್ಲಂಘಿಸಬಾರದು. ಜಾಹೀರಾತುದಾರರು ತಮ್ಮ ಜಾಹೀರಾತುಗಳ ಎಲ್ಲ ಅಂಶಗಳಿಗೆ ಎಲ್ಲ ಅಗತ್ಯ ಹಕ್ಕುಗಳು ಮತ್ತು ಅನುಮತಿಗಳನ್ನು ಹೊಂದಿರಬೇಕು. ವ್ಯಕ್ತಿಯ ಸಮ್ಮತಿಯಿಲ್ಲದೆ ಒಬ್ಬ ವ್ಯಕ್ತಿಯ ಹೆಸರು, ಸಾಮ್ಯತೆ (ಅವರಂತೆ ಕಾಣುವವರನ್ನು ಸೇರಿದಂತೆ), ಧ್ವನಿ (ಅವರಂತೆ ಇರುವ ಧ್ವನಿ ಸೇರಿದಂತೆ) ಅಥವಾ ಇತರ ಗುರುತಿಸುವ ವೈಶಿಷ್ಟ್ಯಗಳನ್ನು ಜಾಹೀರಾತುಗಳು ಪ್ರದರ್ಶಿಸುವಂತಿಲ್ಲ.

ಕೆಳಗಿನವುಗಳನ್ನು ನಿಷೇಧಿಸಲಾಗಿದೆ:

  • ಇತರರ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ಉಲ್ಲಂಘಿಸಲು ಮುಖ್ಯವಾಗಿ ಬಳಸುವ ಉತ್ಪನ್ನಗಳು ಅಥವಾ ಸೇವೆಗಳ ಜಾಹೀರಾತುಗಳು, ಅಂದರೆ ಹಕ್ಕುಸ್ವಾಮ್ಯ ರಕ್ಷಣೆಯ ವ್ಯವಸ್ಥೆಯನ್ನು ಕಡೆಗಣಿಸಲು ವಿನ್ಯಾಸಗೊಳಿಸಲಾದವು (ಉದಾಹರಣೆಗೆ, ಸಾಫ್ಟ್‌ವೇರ್ ಅಥವಾ ಕೇಬಲ್ ಸಿಗ್ನಲ್ ಡಿಸ್ಕ್ರಾಂಬ್ಲರ್‌ಗಳು).

  • ಡಿಸೈನರ್ ಅಥವಾ ಅಧಿಕೃತವಾಗಿ ಪರವಾನಗಿ ಪಡೆದ ಉತ್ಪನ್ನಗಳ ಅನುಕರಣೆಗಳಂತಹ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಮುಖ್ಯವಾಗಿ ಮೀಸಲಾಗಿರುವ ಉತ್ಪನ್ನಗಳು ಅಥವಾ ಸೇವೆಗಳ ಜಾಹೀರಾತುಗಳು.

  • ಸೆಲೆಬ್ರಿಟಿಗಳ ನಕಲಿ ಹೇಳಿಕೆಗಳು ಅಥವಾ ಬಳಕೆಯೊಂದಿಗೆ ಉತ್ಪನ್ನಗಳು ಅಥವಾ ಸೇವೆಗಳಿಗಾಗಿ ಜಾಹೀರಾತುಗಳು.


Snapchat ನಲ್ಲಿ ಪ್ರಸಾರವಾದ ಒಂದು ಜಾಹೀರಾತಿನಿಂದ ನಿಮ್ಮ ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್ ಅಥವಾ ಪ್ರಚಾರ ಹಕ್ಕುಗಳು ಉಲ್ಲಂಘನೆಯಾಗಿವೆ ಎಂದು ಒಂದು ವೇಳೆ ನೀವು ಭಾವಿಸುವುದಾದರೆ, ಜಾಹೀರಾತುದಾರರನ್ನು ನೇರವಾಗಿ ಸಂಪರ್ಕಿಸಿ ನಿಮ್ಮ ಆತಂಕಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಬದಲಾಗಿ, ಹಕ್ಕುಹೊಂದಿರುವವರು ಮತ್ತು ಅವರ ಏಜೆಂಟರು ಆರೋಪಿತ ಬೌದ್ಧಿಕ ಸ್ವತ್ತು ಉಲ್ಲಂಘನೆಯನ್ನು Snap ಗೆ ಇಲ್ಲಿ ವರದಿ ಮಾಡಬಹುದು. ನಾವು ಅಂಥ ಎಲ್ಲ ವರದಿಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ.

Snap ಗೆ ಉಲ್ಲೇಖಗಳು

ಜಾಹೀರಾತುಗಳು Snap ಅಥವಾ ಅದರ ಉತ್ಪನ್ನಗಳೊಂದಿಗೆ ಸಂಬಂಧವನ್ನು ಅಥವಾ ಅವುಗಳಿಂದ ಪ್ರೋತ್ಸಾಹವನ್ನು ಬಿಂಬಿಸಬಾರದು. ಅಂದರೆ ಜಾಹೀರಾತುಗಳು, Snapchat ನ ಬ್ರ್ಯಾಂಡ್‌ ಮಾರ್ಗಸೂಚಿಗಳು ಅಥವಾ Bitmoji ಬ್ರ್ಯಾಂಡ್ ಮಾರ್ಗಸೂಚಿಗಳು ಇವುಗಳಲ್ಲಿ ಅನುಮತಿಸಲಾಗಿರುವುದನ್ನು ಹೊರತುಪಡಿಸಿ, ಯಾವುದೇ Snap-ಮಾಲೀಕತ್ವದ ಟ್ರೇಡ್‌ಮಾರ್ಕ್ ಅಥವಾ ಕೃತಿಸ್ವಾಮ್ಯ, Bitmoji ಆರ್ಟ್‌ವರ್ಕ್ ಅಥವಾ Snapchat ಬಳಕೆದಾರ ಇಂಟರ್‌ಫೇಸ್‌ನ ಪ್ರತಿನಿಧಿತ್ವಗಳನ್ನು ಬಳಸಬಾರದು ಎಂದು ಅರ್ಥ. ಅಥವಾ Snap ಮಾಲೀಕತ್ವದ ಟ್ರೇಡ್‌ಮಾರ್ಕ್‌ನ ತಿರುಚಿದ ಅಥವಾ ಗೊಂದಲ ಹುಟ್ಟಿಸುವ ರೀತಿ ಸಾಮ್ಯತೆ ಹೊಂದಿರುವ ವ್ಯತ್ಯಾಸಗಳನ್ನು ಜಾಹೀರಾತುಗಳು ಒಳಗೊಂಡಿರಬಾರದು.

ಕ್ರಿಯೇಟಿವ್ ಗುಣಮಟ್ಟ ಮತ್ತು ಲ್ಯಾಂಡಿಂಗ್ ಪುಟ

ಎಲ್ಲ ಜಾಹೀರಾತುಗಳು ಉನ್ನತ ಗುಣಮಟ್ಟ ಮತ್ತು ಸಂಪಾದಕೀಯ ಮಾನದಂಡಗಳನ್ನು ಪೂರೈಸಬೇಕು. ನಮ್ಮ ಪ್ರತಿಯೊಂದು ಜಾಹೀರಾತು ಉತ್ಪನ್ನಗಳ ತಾಂತ್ರಿಕ ಮತ್ತು ಕ್ರಿಯೇಟಿವ್‌ ನಿರ್ದಿಷ್ಟತೆಗಳಿಗಾಗಿ ದಯವಿಟ್ಟು ನಮ್ಮ ವ್ಯವಹಾರ ಸಹಾಯ ಕೇಂದ್ರಸ್ಪೆಕ್ಸ್ ಮತ್ತು ಕ್ರಿಯೇಟಿವ್‌ ಮಾರ್ಗಸೂಚಿಗಳ ವಿಭಾಗಕ್ಕೆ ಭೇಟಿ ನೀಡಿ. ಈ ಮಾರ್ಗಸೂಚಿಗಳನ್ನು ಪೂರೈಸದ ಜಾಹೀರಾತು ಕ್ರಿಯೇಟಿವ್‌ಗಳನ್ನು ತಿರಸ್ಕರಿಸಲಾಗುತ್ತದೆ.

ಜಾಹೀರಾತುಗಳನ್ನು ಪರಿಶೀಲಿಸಿದಾಗ, ಜಾಹೀರಾತು ಕ್ರಿಯೇಟಿವ್‌ಗಳಿಗೆ ಮಾತ್ರವಲ್ಲ (ಉದಾಹರಣೆಗೆ "ಟಾಪ್ Snap", ಫಿಲ್ಟರ್ ಅಥವಾ ಪ್ರಾಯೋಜಿತ ಲೆನ್ಸ್), ಜೊತೆಗೆ ಜಾಹೀರಾತಿನ ಲ್ಯಾಂಡಿಂಗ್ ಪುಟ ಅಥವಾ ಇತರ ಸಂಬಂಧಿತ ಅಂಶಗಳಿಗೂ ಕೂಡ ನಮ್ಮ ನೀತಿಗಳನ್ನು ಅನ್ವಯಿಸುತ್ತೇವೆ. ಈ ರೀತಿ ಇರುವ ಲ್ಯಾಂಡಿಂಗ್ ಪುಟಗಳೊಂದಿಗಿನ ಜಾಹೀರಾತುಗಳನ್ನು ನಾವು ತಿರಸ್ಕರಿಸುತ್ತೇವೆ:

  • ಕಳಪೆ ಗುಣಮಟ್ಟ (ಉದಾಹರಣೆಗೆ ನಿಷ್ಕ್ರಿಯ ಲಿಂಕ್‌ಗಳು, ಕಾರ್ಯನಿರ್ವಹಿಸದೆ ಇರುವ ಅಥವಾ ಮೊಬೈಲ್ ಫೋನ್‌ಗಳಿಗಾಗಿ ಫಾರ್ಮ್ಯಾಟ್‌ ಮಾಡಿಲ್ಲದಿರುವ ಪುಟಗಳು)

  • ಅಡ್ಡಿಪಡಿಸುವಂತಹವು (ಉದಾಹರಣೆಗೆ ಅನಿರೀಕ್ಷಿತ ಬಳಕೆದಾರರ ಅನುಭವಗಳು, ಇದ್ದಕ್ಕಿದ್ದಂತೆ ಜೋರಾದ ಗದ್ದಲ, ಅತಿಯಾದ ಫ್ಲ್ಯಾಶಿಂಗ್)

  • ಅಪ್ರಸ್ತುತವಾಗಿರುವಂತಹವು (ಉದಾಹರಣೆಗೆ ಜಾಹೀರಾತು ನೀಡಲಾದ ಉತ್ಪನ್ನ ಅಥವಾ ಸೇವೆಗಳಿಗೆ ಹೋಲಿಕೆಯಾಗದಿರುವ ಪುಟಗಳು ಅಥವಾ ಬಳಕೆದಾರರನ್ನು ಹೆಚ್ಚು ಜಾಹೀರಾತುಗಳಿಗೆ ಒಡ್ಡುವುದಕ್ಕಾಗಿ ಅನಗತ್ಯ ಖರೀದಿ ಪ್ರಕ್ರಿಯೆಯನ್ನು ತೋರಿಸುವಂತಹವು)

  • ಅಸುರಕ್ಷಿತವಾಗಿರುವಂತಹವು (ಉದಾಹರಣೆಗೆ ಸ್ವಯಂಚಾಲಿತವಾಗಿ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಅಥವಾ ಬಳಕೆದಾರರ ಡೇಟಾ ಫಿಶ್ ಮಾಡಲು ಪ್ರಯತ್ನಿಸುವಂತಹವು)

ಪ್ರಚಾರಗಳು

Snapchat ನಲ್ಲಿ ಪ್ರಚಾರಗಳು Snap ನ ಪ್ರಚಾರ ನಿಯಮಗಳಿಗೆ ಒಳಪಟ್ಟಿವೆ.

ಮುಂದೆ:

ಜಾಹೀರಾತು ವರ್ಗಗಳ ಅವಶ್ಯಕತೆಗಳು

Read Next