Prohibited Content

Deceptive Content

ಮೋಸದ ಜಾಹೀರಾತುಗಳ ವಿರುದ್ಧ ನಮ್ಮ ಕ್ರಮ ಜಾರಿಯಲ್ಲಿ ನಾವು ಜಾಗೃತರಾಗಿದ್ದೇವೆ. ಮೋಸವು, ಸಮುದಾಯದ ವಿಶ್ವಾಸಕ್ಕೆ ಧಕ್ಕೆ ತರುವ ಅಥವಾ ಇಲ್ಲದಿದ್ದಲ್ಲಿ ದಾರಿತಪ್ಪಿಸುವ ಸೋಗಿನಡಿಯಲ್ಲಿ ಖರೀದಿಗಳನ್ನು ಮಾಡುವಂತೆ ಅಥವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಬಳಕೆದಾರರಿಗೆ ಪ್ರಲೋಭನೆ ಒಡ್ಡುವ ವಿವಿಧ ಸ್ಕ್ಯಾಮ್‌ಗಳು ಮತ್ತು ವಂಚಿಸುವ ಮಾರ್ಕೆಟಿಂಗ್ ಅಭ್ಯಾಸಗಳನ್ನು ಒಳಗೊಂಡಿದೆ.

ನಾವು ನಿಷೇಧಿಸುತ್ತೇವೆ:

  • ಮೋಸಗೊಳಿಸುವ ಕ್ಲೈಮ್‌ಗಳು, ಕೊಡುಗೆಗಳು, ಕಾರ್ಯಕ್ಷಮತೆ ಅಥವಾ ವ್ಯವಹಾರ ಅಭ್ಯಾಸಗಳು ಸೇರಿದಂತೆ, ಸುಳ್ಳು ಅಥವಾ ದಾರಿತಪ್ಪಿಸುವ ಜಾಹೀರಾತುಗಳು.

  • ಅನಧಿಕೃತ ಅಥವಾ ಬಹಿರಂಗಪಡಿಸದೆ ಇರುವ ಪ್ರಾಯೋಜಿತ ವಿಷಯ
    ನಕಲು ದಾಖಲೆಗಳು ಅಥವಾ ಪ್ರಮಾಣಪತ್ರಗಳು ಅಥವಾ ನಕಲು ಉತ್ಪನ್ನಗಳು ಸೇರಿದಂತೆ, ವಂಚನೆಯ ಸರಕುಗಳು ಅಥವಾ ಸೇವೆಗಳ ಪ್ರಚಾರ.

  • Snapchat ವೈಶಿಷ್ಟ್ಯಗಳು ಅಥವಾ ಸ್ವರೂಪಗಳ ಮೇಲ್ನೋಟ ಅಥವಾ ಕಾರ್ಯವನ್ನು ನಕಲು ಮಾಡುವ ವಿಷಯವನ್ನು ಸೃಷ್ಟಿಸುವುದು ಅಥವಾ ಹಂಚಿಕೊಳ್ಳುವುದು.

  • ಒಂದು ಕೆಲಸ ಮಾಡಿಸಲು ವಂಚನೆಯ ಕರೆ ಮಾಡುವುದನ್ನು ಒಳಗೊಂಡಿರುವ ಅಥವಾ ಜಾಹೀರಾತು ನೀಡಿರುವ ಬ್ರಾಂಡ್ ಅಥವಾ ವಿಷಯಕ್ಕೆ ಸಂಬಂಧಿಸದೇ ಇರುವ ಪುಟಕ್ಕೆ ಕರೆದೊಯ್ಯುವ ಜಾಹೀರಾತುಗಳು.

  • ಕ್ಲೋಕಿಂಗ್ ಅಥವಾ ಆರಂಭಿಕ ಪುಟವನ್ನು ನಿರ್ಬಂಧಿಸುವುದು ಅಥವಾ ವಿಮರ್ಶೆ ತಪ್ಪಿಸುವ ಪ್ರಯತ್ನವಾಗಿ ಸಲ್ಲಿಕೆಯ ನಂತರ URL ಗೆ ತಿದ್ದುಪಡಿ ಮಾಡುವುದು.

  • ಅಪ್ರಾಮಾಣಿಕ ನಡವಳಿಕೆಗೆ ಪ್ರೋತ್ಸಾಹಿಸುವ ಜಾಹೀರಾತುಗಳು. (ಉದಾಹರಣೆಗೆ ನಕಲಿ ಗುರುತಿನ ದಾಖಲೆಗಳು, ಕೃತಿಚೌರ್ಯ, ಪ್ರಬಂಧ ಬರೆದುಕೊಡುವ ಸೇವೆಗಳ ಕುರಿತ ಜಾಹೀರಾತುಗಳು).

  • ಸರಕುಗಳನ್ನು ತಲುಪಿಸದಿರುವುದು ಅಥವಾ ತಪ್ಪಾಗಿ ಪ್ರತಿನಿಧಿಸಿದ ರವಾನೆ ವಿಳಂಬಗಳು ಅಥವಾ ದಾಸ್ತಾನು ಅಡೆತಡೆಗಳು

  • ಉತ್ಕೃಷ್ಟ ತಂತ್ರಗಳ ಬಳಕೆ

  • ಉದ್ಯಮ ನಿರ್ದಿಷ್ಟತೆಗಳನ್ನು ಸಹ ನೋಡಿ: ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳು

Up Next:

Hate, Terrorism and Extremism

Read Next