ನಮ್ಮ ಡಿಜಿಟಲ್ ಯೋಗಕ್ಷೇಮಕ್ಕಾಗಿನ ಕಾರ್ಯಕ್ರಮದ ಉದ್ಘಾಟನಾ ಪರಿಷತ್ತಿನ ಸಮಾರೋಪ
ಅಕ್ಟೋಬರ್ 9, 2025
ನಮ್ಮ ಉದ್ಘಾಟನಾ U.S. ಒಕ್ಕೂಟದೊಂದಿಗೆ ನಮ್ಮ ಪ್ರಾಯೋಗಿಕ ಡಿಜಿಟಲ್ ಯೋಗಕ್ಷೇಮಕ್ಕಾಗಿನ ಪರಿಷತ್ (CDWB) ಕಾರ್ಯಕ್ರಮವನ್ನು Snap ಇತ್ತೀಚೆಗೆ ಸಮಾರೋಪಗೊಳಿಸಿತು. 2024 ರಲ್ಲಿ ಆರಂಭಿಸಲಾದ ಈ ಕ್ರಮವು, ಇಂದಿನ ಡಿಜಿಟಲ್ ಜೀವನದ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ದೇಶದಾದ್ಯಂತದ 18 ಹದಿಹರೆಯದವರನ್ನು ಜೊತೆಗೂಡಿಸಿತು. ಕಳೆದ ವರ್ಷದಲ್ಲಿ, ಈ ಹದಿಹರೆಯದವರು - ಮತ್ತು ಅವರ ಕುಟುಂಬಗಳು - ಅಮೂಲ್ಯವಾದ ಒಳನೋಟಗಳನ್ನು ಒದಗಿಸಿದ್ದಾರೆ ಮತ್ತು ಇನ್ನಷ್ಟು ಪರಿಣಾಮಕಾರಿ ಆನ್‌ಲೈನ್ ಸುರಕ್ಷತೆ ಮತ್ತು ಯೋಗಕ್ಷೇಮದ ರಾಯಭಾರಿಗಳಾಗಿ ಬೆಳೆದಿದ್ದಾರೆ.
ವರ್ಷದ ಅವಧಿಯ ಕಾರ್ಯಕ್ರಮದ ಸಮಾಪ್ತಿಯ ಗುರುತಾಗಿ, ನಮ್ಮ ವಾಷಿಂಗ್ಟನ್, D.C. ಕಚೇರಿಯಲ್ಲಿ ಹದಿಹರೆಯದವರು ವಿನ್ಯಾಸಗೊಳಿಸಿದ ಸಮಾರೋಪ ಕಾರ್ಯಕ್ರಮವನ್ನು ನಾವು ಆಯೋಜಿಸಿದೆವು. ಆನ್‌ಲೈನ್ ಸುರಕ್ಷತಾ ಸಮುದಾಯದಲ್ಲಿ ಪ್ರಮುಖ ಪಾಲುದಾರರೊಂದಿಗೆ ನೇರವಾಗಿ ತಮ್ಮ ಅನುಭವಗಳನ್ನು ಮತ್ತು ಕಲಿಕೆಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಪರಿಷತ್ ಸದಸ್ಯರು ಹೊಂದಿದ್ದರು. ಭಾಗಿಗಳಲ್ಲಿ ಯುವಕರ ತೊಡಗಿಸಿಕೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಚರ್ಚಿಸಿದ ಕೊಲಂಬಿಯಾ ಜಿಲ್ಲೆಯ ಅಟಾರ್ನಿ ಜನರಲ್ ಬ್ರಿಯಾನ್ ಶ್ವಾಲ್ಬ್; ಟೆಕ್ನಾಲಜಿ ಕೊಯಲಿಷನ್, ConnectSafely ಮತ್ತು ಫ್ಯಾಮಿಲಿ ಆನ್‌ಲೈನ್ ಸೇಫ್ಟಿ ಇನ್ಸ್ಟಿಟ್ಯೂಟ್ ಸೇರಿದಂತೆ ಆನ್‌ಲೈನ್ ಸುರಕ್ಷತಾ ಸಂಸ್ಥೆಗಳಿಂದ ಪ್ರತಿನಿಧಿಗಳು; ಮತ್ತು U.S. ನ್ಯಾಯಾಂಗ ಇಲಾಖೆ ಹಾಗೂ U.S. ಹೋಮ್‌ಲ್ಯಾಂಡ್ ಭದ್ರತಾ ಇಲಾಖೆಯ ಅಧಿಕಾರಿಗಳು ಸೇರಿದ್ದರು. ಇದರ ಜೊತೆಗೆ, ಶ್ವೇತ ಭವನದ ಪಶ್ಚಿಮ ವಿಭಾಗದಲ್ಲಿ ಪ್ರವಾಸ ಕೈಗೊಳ್ಳುವ ಮತ್ತು ಆನ್‌ಲೈನ್ ಸುರಕ್ಷತೆ ಮತ್ತು ಯೋಗಕ್ಷೇಮದ ಆದ್ಯತೆಗಳ ಕುರಿತು ಯುನೈಟೆಡ್ ಸ್ಟೇಟ್ಸ್‌ನ ಅಧ್ಯಕ್ಷರ ಪತ್ನಿಯ ಶಾಖೆಯ ಜೊತೆಗೆ ಮಾತನಾಡುವ ಅವಕಾಶವನ್ನು ಪರಿಷತ್ ಸದಸ್ಯರು ಹೊಂದಿದ್ದರು.

ಚಿತ್ರ ಕೃಪೆ: ಅಧಿಕೃತ ಶ್ವೇತ ಭವನದ ಚಿತ್ರ
D.C. ಕಾರ್ಯಕ್ರಮದಲ್ಲಿ, ಆನ್‌ಲೈನ್ ವರದಿ ಮಾಡುವಿಕೆ ಮತ್ತು ಲೈಂಗಿಕ ಸುಲಿಗೆ ಕುರಿತ ಕಳಂಕಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಹದಿಹರೆಯದವರು ಪ್ರಸ್ತುತಿಗಳನ್ನು ಹಂಚಿಕೊಂಡರು. ಹದಿಹರೆಯದವರ ನೇತೃತ್ವದ ಮಂಡಳಿಗಳು ಮತ್ತು ಚರ್ಚೆಗಳು ಆನ್‌ಲೈನ್ ಸುರಕ್ಷತೆಯನ್ನು ಹೆಚ್ಚಿಸಲು ಯಾವುದೇ ಕೆಲಸಕ್ಕೆ ಯುವಜನರ ದೃಷ್ಟಿಕೋನಗಳನ್ನು ಸೇರಿಸುವುದರ ಗಮನಾರ್ಹ ಮೌಲ್ಯವನ್ನು ಪ್ರದರ್ಶಿಸಿದವು. ಉದಾಹರಣೆಗೆ:
ಓರ್ವ ಪರಿಷತ್ ಸದಸ್ಯರು ಲೈಂಗಿಕ ಸುಲಿಗೆ ಕುರಿತು ಪ್ರಸ್ತುತಿ ನೀಡಿ, ಗುರಿಯಾದ ಹದಿಹರೆಯದವರು ಹೇಗೆ ಮುಜುಗರ ಮತ್ತು ಬಂಧನಕ್ಕೆ ಒಳಗಾದ ಭಾವನೆ ಅನುಭವಿಸುತ್ತಾರೆ ಎಂದು ವಿವರಿಸಿದರು. ಪೋಷಕರು ಅತಿಯಾದ ಪ್ರತಿಕ್ರಿಯೆ ತೋರಿದರೆ, ಸಂತ್ರಸ್ತೆಯನ್ನು ದೂಷಿಸಿದರೆ ಅಥವಾ ಆನ್‌ಲೈನ್ ಸಂವಹನಗಳನ್ನು ತಪ್ಪಾಗಿ ಅರ್ಥಮಾಡಿಕೊಂಡರೆ ಈ ಭಾವನೆಗಳು ತೀವ್ರಗೊಳ್ಳಬಹುದು ಎಂದು ಆಕೆ ಒತ್ತಿ ಹೇಳಿದರು. ತಮ್ಮ ಹದಿಹರೆಯದ ಮಕ್ಕಳನ್ನು ಪೂರ್ವಭಾವಿಯಾಗಿ ಬೆಂಬಲಿಸಲು ಆಕೆ ಸಮರ್ಥ ಕಾರ್ಯತಂತ್ರಗಳನ್ನು ಒದಗಿಸಿದರು.
ಈ ಪ್ರಸ್ತುತಿಯು ಕುಟುಂಬವಾಗಿ ಆನ್‌ಲೈನ್ ಸುರಕ್ಷತೆಯನ್ನು ಚರ್ಚಿಸುವಾಗ ಕುತೂಹಲ ಮತ್ತು ಮುಕ್ತತೆಯ ಪ್ರಾಮುಖ್ಯತೆಯ ಕುರಿತು ಹದಿಹರೆಯದವರು ಮತ್ತು ಅವರ ಪೋಷಕರ ದೊಡ್ಡ ಗುಂಪಿನ ಚರ್ಚಾ ಮಂಡಳಿಗೆ ಪೂರಕವಾಗಿತ್ತು. ಮುಜುಗರದ ಮತ್ತು ಕಷ್ಟಕರ ಸಂಭಾಷಣೆಗಳನ್ನು ನಡೆಸುವುದರಿಂದ ಸಂವಹನದ ಸ್ಪಷ್ಟತೆಯನ್ನು ಕಂಡುಕೊಳ್ಳಲು ಹೇಗೆ ನೆರವಾಯಿತು ಎಂಬ ಕುರಿತು ಗುಂಪು ವೈಯಕ್ತಿಕ ಉದಾಹರಣೆಗಳನ್ನು ಹಂಚಿಕೊಂಡಿತು.

ಇನ್ನೊಂದು ಹದಿಹರೆಯದವರ ಮಂಡಳಿ ಯುವ ಪೀಳಿಗೆಯಲ್ಲಿ ಆನ್‌ಲೈನ್ ವರದಿ ಮಾಡುವಿಕೆಗೆ ಸಂಬಂಧಿಸಿದ ಕಳಂಕಗಳನ್ನು ಪರಿಶೋಧಿಸಿತು, ನಿರ್ಣಯದ ಭಯ ಅಥವಾ ನಂಬದಿರುವ ಕಾರಣದಿಂದ ಆನ್‌ಲೈನ್ ದೌರ್ಜನ್ಯವನ್ನು ವರದಿ ಮಾಡಲು ಹಲವು ಹದಿಹರೆಯದವರು ಹಿಂಜರಿಯುತ್ತಾರೆ ಎಂಬುದನ್ನು ಒತ್ತಿ ಹೇಳಿತು. ಹಿಂದೇಟಿಲ್ಲದೆ ಮಾತನಾಡಲು ಯುವಜನರು ಸುರಕ್ಷಿತ ಮತ್ತು ಸಬಲೀಕರಣಗೊಂಡ ಭಾವನೆಯನ್ನು ಹೊಂದಿರುವ ಮತ್ತು ಬೆಂಬಲಿಸುವ ವಾತಾವರಣವನ್ನು ರಚಿಸುವುದರ ಮಹತ್ವವನ್ನು ಅವರು ಒತ್ತಿ ಹೇಳಿದರು. ಅವರು ಅಂತರ್ಬೋಧೆಯ, ಸುಲಭವಾಗಿ ಕಂಡುಕೊಳ್ಳಬಹುದಾದ ವರದಿ ಮಾಡುವಿಕೆ ಸಾಧನಗಳ ಅಗತ್ಯದ ಕುರಿತು ಪ್ರತಿಪಾದಿಸಿದರು ಮತ್ತು Snapchat ನಂತಹ ವೇದಿಕೆಗಳಲ್ಲಿ ವರದಿ ಮಾಡುವುದು ಗೌಪ್ಯವಾಗಿರುತ್ತದೆ ಮತ್ತು ವಿಶಾಲ ಸಮುದಾಯಕ್ಕೆ ಸಹಾಯ ಮಾಡಬಲ್ಲದು ಎಂಬ ಕುರಿತು ಹದಿಹರೆಯದವರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಅವರು ಕಂಪನಿಗಳು, NGO ಗಳು ಮತ್ತು ಸುರಕ್ಷತಾ ಸಂಸ್ಥೆಗಳಿಗೆ ಕರೆ ನೀಡಿದರು.
ಹದಿಹರೆಯದವರಿಗೆ ಗುರಿಯಾಗಿಸಿದ ಸಾರ್ವಜನಿಕ ಸೇವೆಯ ಪ್ರಕಟಣೆಗಳು (PSA ಗಳು) ಮತ್ತು ಇತರ ವಿಧದ ಸುರಕ್ಷತಾ ಸಂದೇಶಗಳು ಪ್ರತಿಧ್ವನಿಸಲು ಏಕೆ ವಿಫಲವಾಗುತ್ತವೆ ಎಂಬುದನ್ನು ಕೂಡ ಒಂದು ಗುಂಪು ಪರಿಶೀಲಿಸಿತು. ಪರಿಷತ್ ಸದಸ್ಯರು ಗಮನವನ್ನು ತ್ವರಿತವಾಗಿ ಸೆಳೆಯುವ; ನೈಜ-ಬದುಕಿನ ಕಥೆಗಳು ಮತ್ತು ಪ್ರಬಲ ಸಲಹೆಯೊಂದಿಗೆ ಹದಿಹರೆಯದವರ ಧ್ವನಿಗಳನ್ನು ಎತ್ತಿ ತೋರಿಸಿವ; ಮತ್ತು ಮೇಲ್ನೋಟಕ್ಕೆ ವಯಸ್ಕರಿಂದ ಅತಿಯಾಗಿ ನಿರ್ಮಿಸಿದನ್ನು ಅಥವಾ ರೂಪಿಸಿದನ್ನು ತಪ್ಪಿಸುವ ನೈಜ, ಹದಿಹರೆಯದವರಿಂದ ಸಂಚಾಲಿತವಾಗಿರುವ ವಿಷಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ಅಂತಿಮವಾಗಿ, ಹಲವು ಪರಿಷತ್ ಸದಸ್ಯರು ತಾವು ಆರಂಭಿಸಿದ ಆನ್‌ಲೈನ್ ಸುರಕ್ಷತೆ ಮತ್ತು ಯೋಗಕ್ಷೇಮದ ಉಪಕ್ರಮಗಳ ಕುರಿತು ಮಾತನಾಡಿದರು. ಉದಾಹರಣೆಗೆ, ಒಬ್ಬ ಹದಿಹರೆಯದವರು ಭಾವನಾತ್ಮಕ ಸ್ಥಿತಿಸ್ಥಾಪಕತ್ವವನ್ನು ಬೆಳೆಸಲು ಮತ್ತು ಮಾನಸಿಕ ಆರೋಗ್ಯದ ಸವಾಲುಗಳಿಗೆ ಪ್ರತಿಕ್ರಿಯಿಸಲು ಸಹಾಯ ಮಾಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿರುವ AI-ಸಂಚಾಲಿತ ಮೃದುವಾದ ಆಟಿಕೆಯನ್ನು ತಯಾರಿಸುತ್ತಿದ್ದಾರೆ. ಇನ್ನೊಬ್ಬ ಹದಿಹರೆಯದವರು ಆನ್‌ಲೈನ್‌ನಲ್ಲಿ ಲಿಂಗ ಆಧಾರಿತ ಹಿಂಸೆಯನ್ನು ನಿಲ್ಲಿಸುವುದಕ್ಕಾಗಿ ಪ್ರತಿಪಾದಿಸಲು ಲಾಭರಹಿತ ಸಂಸ್ಥೆಯ ನೇತೃತ್ವ ವಹಿಸಿದ್ದಾರೆ.
ಕಾರ್ಯಕ್ರಮ ಉದ್ದಕ್ಕೂ ಹದಿಹರೆಯದವರು ಮಾಡಿದ ಕೆಲಸವನ್ನು ಆಧರಿಸಿ ಸಮಾರೋಪ ಕಾರ್ಯಕ್ರಮವನ್ನು ನಿರ್ಮಿಸಲಾಗಿದೆ. ಉದಾಹರಣೆಗೆ:
ಗುಂಪು ನನ್ನ ವರದಿಗಳು ಹಾಗೂ ಬೀಗದ ಕೈಗಳು : ಡಿಜಿಟಲ್ ಸುರಕ್ಷತೆಗೆ ಒಂದು ಮಾರ್ಗದರ್ಶಿ ಎಂಬ ಹೆಸರಿನ ಹದಿಹರೆಯದವರು ಮತ್ತು ಕುಟುಂಬಗಳಿಗಾಗಿ ನಮ್ಮ ಹೊಸ ಪ್ರತಿಕ್ರಿಯಾಶೀಲ ಆನ್‌ಲೈನ್ ಸುರಕ್ಷತೆಯ ಕಾರ್ಯಕ್ರಮ ಸೇರಿದಂತೆ ಸುರಕ್ಷತಾ ಸಂಪನ್ಮೂಲಗಳು ಮತ್ತು ಸಾಧನಗಳ ಕುರಿತು Snapchat ಗೆ ಪ್ರತಿಕ್ರಿಯೆಗಳನ್ನು ನೀಡಿತು.
ಬಹು ವರ್ಗದ ಪ್ರೇಕ್ಷಕರೊಂದಿಗೆ ಆನ್‌ಲೈನ್ ಸುರಕ್ಷತೆ ಸಮಸ್ಯೆಗಳ ಕುರಿತು ಚರ್ಚಿಸುವ ಅವಕಾಶವನ್ನು ಕೂಡ ಹದಿಹರೆಯದವರು ಹೊಂದಿದ್ದರು. ಉದಾಹರಣೆಗೆ, ಸುರಕ್ಷಿತ ಅಂತರ್ಜಾಲ ದಿನದಂದು, ಆನ್‌ಲೈನ್ ಸುರಕ್ಷತಾ ಸಮಸ್ಯೆಗಳು ಮತ್ತು ಅತ್ಯುತ್ತಮ ಅಭ್ಯಾಸಗಳ ಬಗ್ಗೆ ಬೆಳಕು ಚೆಲ್ಲಲು ಪರಿಷತ್ ಸದಸ್ಯರು ಸ್ಥಳೀಯ ಕಾರ್ಯಕ್ರಮಗಳನ್ನು ಆಯೊಜಿಸಿದರು ಮತ್ತು ಸುರಕ್ಷತಾ ಸಂಘಟನೆಗಳೊಂದಿಗೆ ಕೆಲಸ ಮಾಡಿದರು.
ಮುಂದುವರಿದು, ತಮಗೆ ಅರ್ಥಪೂರ್ಣವಾಗಿರುವ ವಿಷಯದ ಕುರಿತು ಪ್ರತಿ ಪರಿಷತ್ ಸದಸ್ಯರು ಆನ್‌ಲೈನ್ ಸುರಕ್ಷತಾ ಸಂಪನ್ಮೂಲವನ್ನು ರಚಿಸಿದರು, ಉದಾಹರಣೆಗೆ ವರದಿ ಮಾಡುವಿಕೆಯ ಪ್ರಾಮುಖ್ಯತೆಯ ಕುರಿತು ಈ ಕೆಳಗಿನ ವೀಡಿಯೊ.
ಪ್ರಾಯೋಗಿಕ U.S. ಉಪಕ್ರಮದ ಯಶಸ್ಸನ್ನು ಆಧರಿಸಿ, Snap ಹೊಸ CDWB ಕಾರ್ಯಕ್ರಮವನ್ನು ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಆರಂಭಿಸಿದೆ. ಎಲ್ಲ ಪ್ರದೇಶಗಳಾದ್ಯಂತ, CDWB ಸಹವರ್ತಿ ಸಂಸ್ಥೆಗಳು ಹೆಚ್ಚು ಸಕಾರಾತ್ಮಕ ಆನ್‌ಲೈನ್ ಪರಿಸರ ವ್ಯವಸ್ಥೆಯನ್ನು ರೂಪಿಸಲು ಬಯಸುವ ಸೃಜನಶೀಲ, ದಯಾಳು ಮತ್ತು ಹುಮ್ಮಸ್ಸಿನ ಹದಿಹರೆಯದವರಿಂದ ಕೂಡಿವೆ. ಈ ಗುಂಪುಗಳಿಂದ ಇನ್ನಷ್ಟು ಒಳನೋಟಗಳನ್ನು ಹಂಚಿಕೊಳ್ಳಲು ಮತ್ತು 2026 ರಲ್ಲಿ ನಮ್ಮ ಹೊಸ U.S. ಪರಿಷತ್ ಅನ್ನು ಪರಿಚಯಿಸಲು ನಾವು ಎದುರು ನೋಡುತ್ತಿದ್ದೇವೆ.
- ವಿರಾಜ್ ದೋಷಿ, ವೇದಿಕೆಯ ಸುರಕ್ಷತಾ ಮುಖ್ಯಸ್ಥೆ