Snap Values

ಡಿಜಿಟಲ್ ಯೋಗಕ್ಷೇಮಕ್ಕಾಗಿ Snap ನ ಐರೋಪ್ಯ ಮಂಡಳಿಯನ್ನು ಪರಿಚಯಿಸುತ್ತಿದ್ದೇವೆ

18 ಆಗಸ್ಟ್ 2025

Snap ನ ಪ್ರಥಮ ಡಿಜಿಟಲ್‌ ಯೋಗಕ್ಷೇಮಕ್ಕಾಗಿ ಯೂರೋಪಿಯನ್ ಮಂಡಳಿಯ (ಐರೋಪ್ಯ CDWB) ಸದಸ್ಯರನ್ನು* ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ; ಈ ಕಾರ್ಯಕ್ರಮವು ಯೂರೋಪ್‌ನಾದ್ಯಂತದ ಹದಿಹರೆಯದವರನ್ನು ಒಟ್ಟುಗೂಡಿಸುತ್ತದೆ ಹಾಗೂ ಅವರು ಆನಂದಿಸುವ ವಿಷಯಗಳು ಮತ್ತು ಅವರು ಎದುರಿಸುತ್ತಿರಬಹುದಾದ ಸವಾಲುಗಳ ವಿಧಗಳೂ ಸೇರಿದಂತೆ ಅವರ ಆನ್‌ಲೈನ್ ಜೀವನಗಳ ಕುರಿತು ಅವರಿಂದ ನೇರವಾಗಿ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಯೂರೋಪಿಯನ್ CDWB ಯು U.S ನಲ್ಲಿ ನಮ್ಮ ಉದ್ಘಾಟನಾ ಮಂಡಳಿಯ ಯಶಸ್ಸನ್ನು ಆಧಾರವನ್ನಾಗಿ ಬಳಸಿ ತನ್ನ ಕಾರ್ಯಗಳನ್ನು ಮನ್ನಡೆಸುತ್ತದೆ. 

ನಮ್ಮ ಪ್ರಥಮ ಯೂರೋಪಿಯನ್ CDWB ಅನ್ನು ರಚಿಸಲು 10 ದೇಶಗಳಿಂದ 14 ಹದಿಹರೆಯದವರನ್ನು ಆಯ್ಕೆ ಮಾಡಿದ ನಂತರ, ನಾವು ಆ ಸಹವರ್ತಿ ಗುಂಪಿನೊಂದಿಗೆ ಎರಡು ಆನ್‌ಲೈನ್ ಮಾಸಿಕ ಕರೆಗಳನ್ನು ಆಯೋಜಿಸಿದ್ದೇವೆ, ಹಾಗೂ ಇತ್ತೀಚೆಗೆ ನಮ್ಮ ಆಮ್‌ಸ್ಟರ್‌ಡ್ಯಾಮ್‌ ಕಛೇರಿಯಲ್ಲಿನ ಮುಖಾಮುಖಿ ಶೃಂಗಸಭೆಯ ಸಂದರ್ಭದಲ್ಲಿ ಆ ಮಂಡಳಿಯ ಸದಸ್ಯರು ಮತ್ತು ಅವರ ವಿಶ್ವಾಸಾರ್ಹ ವಯಸ್ಕರ ಆತಿಥ್ಯ ವಹಿಸಿದ್ದೇವೆ.  

ಈ ಕಾರ್ಯಕ್ರಮವು ಈಗಷ್ಟೇ ಪ್ರಾರಂಭವಾಗಿದ್ದರೂ ಸಹ, ನಾವು ಈಗಾಗಲೇ ಅದ್ಭುತವಾದ ಒಳನೋಟಗಳನ್ನು ಗಳಿಸಿದ್ದೇವೆ. ಅವಲೋಕನಗಳಿಂದ ತಿಳಿದುಬಂದ ಕೆಲವು ಆರಂಭಿಕ ಅಭಿಪ್ರಾಯಗಳು ಇಂತಿವೆ:

  • ಸಂಪರ್ಕಗಳು ಪ್ರಮುಖ ಪಾತ್ರ ವಹಿಸುತ್ತವೆ: ಹದಿಹರೆಯದವರು ಆನ್‌ಲೈನ್‌ನಲ್ಲಿ ಸ್ನೇಹಿತರೊಂದಿಗೆ ಸಮಯ ಕಳೆಯುವಾಗ ಬಾಂಧವ್ಯದ ಅನುಭವವನ್ನು ಪಡೆಯುತ್ತಾರೆ, ಹಾಗೂ ಅವರು ಸಮಾನ ವ್ಯಕ್ತಿತ್ವದವರೊಂದಿಗೆ ತಮ್ಮ ಡಿಜಿಟಲ್‌ ಅನುಭವಗಳ ಕುರಿತು ಚರ್ಚಿಸಲು ಪ್ರಾಶಸ್ತ್ಯ ನೀಡುತ್ತಾರೆ.

  • ಸಂಪನ್ಮೂಲಗಳ ಮೂಲಕ ಸಬಲೀಕರಣ: ಹದಿಹರೆಯದವರು ಸಶಕ್ತತೆಯ ಅನುಭವವನ್ನು ಪಡೆಯಲು ಬಯಸುತ್ತಾರೆ, ಏಕೆಂದರೆ ವಿನೋದಮಯ, ಆರೋಗ್ಯಕರ ಮತ್ತು ಸುರಕ್ಷಿತ ಆನ್‌ಲೈನ್‌ ಅನುಭವಗಳು ಸಶಕ್ತರಾಗಿರುವುದರಿಂದ ಆರಂಭವಾಗುತ್ತವೆ ಎಂದು ಅವರ ಅಭಿಪ್ರಾಯವಾಗಿದೆ. ಅವರು, ವಿಶೇಷವಾಗಿ, ತಾವು ಬಳಸುವ ವೇದಿಕೆಗಳಲ್ಲಿ ಸುಲಭವಾಗಿ ಲಭ್ಯವಿರುವ ಸಂಪನ್ಮೂಲಗಳಿಗಾಗಿ ಕಾತುರರಾಗಿರುತ್ತಾರೆ.

  • ಪೋಷಕರೇ, ಸಿದ್ಧರಾಗಿರಿ ಮತ್ತು ಸನ್ನದ್ಧರಾಗಿರಿ: ಹದಿಹರೆಯದವರು ಪೋಷಕರ ಕುರಿತು ಸ್ಪಷ್ಟವಾದ ಪಾತ್ರವನ್ನು ಎದುರುನೋಡುತ್ತಾರೆ, ಹಾಗೂ ತಮ್ಮ ಪೋಷಕರು ಹದಿಹರೆಯದವರ ಆನ್‌ಲೈನ್‌ ಜೀವನಗಳ ಕುರಿತು ನಿಜವಾದ ಆಸಕ್ತಿಯನ್ನು ತೋರಬೇಕೆಂದು ಹಾಗೂ ಸಂಭಾಷಣೆಗಳಿಗೆ ಬರುವಾಗ ವಾಸ್ತವಿಕ ಅನುಭವಗಳನ್ನಾಧರಿತ ಸಿದ್ಧತೆಯೊಂದಿಗೆ ಬರಬೇಕೆಂದು ನಿರೀಕ್ಷಿಸುತ್ತಾರೆ. ವಿಶ್ವಾಸವನ್ನು ನಿರ್ಮಿಸಲಾದಾಗ, ಹದಿಹರೆಯದವರಿಗೆ ನೆರವು ಕೋರಲು ಮತ್ತು ತಂತ್ರಜ್ಞಾನವನ್ನು ವಿವರಿಸಲು ಹೆಚ್ಚು ಆರಾಮದಾಯಕವೆನಿಸುತ್ತದೆ.

  • "ಆಲಸ್ಯತನ" ಇಂದಾಚೆಗೆ: ವಯಸ್ಕರು ತಮ್ಮ ದೂರವಾಣಿಗಳ ಬಳಕೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತಾರೆ. ಅವರ ಪ್ರಕಾರ, ಆನ್‌ಲೈನ್ ವೇದಿಕೆಗಳು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕ ಸಾಧಿಸುವುದರಲ್ಲಿ, ಹೊಸ ಸಂಬಂಧಗಳನ್ನು ಬೆಳೆಸುವುದರಲ್ಲಿ, ಮಾಹಿತಿಯನ್ನು ಪಡೆಯುವುದರಲ್ಲಿ, ಪ್ರಪಂಚವನ್ನು ಅನ್ವೇಷಿಸುವುದರಲ್ಲಿ ಹಾಗೂ ಮನೆಕೆಲಸಗಳಿಗಾಗಿ ಸಹಕಾರ ಪಡೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಬಲ್ಲವು. ಮಂಡಳಿಯ ಓರ್ವ ಸದಸ್ಯರು ಈ ರೀತಿ ಹೇಳಿದರು, "ನಾವು ನಮ್ಮ ದೂರವಾಣಿಗಳನ್ನು ಬಳಸುವಾಗ ಆಲಸ್ಯಕರವಾಗಿ ಕಾಲ ಕಳೆಯುವುದಿಲ್ಲ.”

ಈ ಶೃಂಗಸಭೆಯು ಆನ್‌ಲೈನ್‌ ಅಪಾಯಗಳು ಮತ್ತು ಪೋಷಕರ ಸಾಧನಗಳಿಂದ ಹಿಡಿದು, ಡಿಜಿಟಲ್‌ ಮತ್ತು ವ್ಯಕ್ತಿಗತ ಸಾಮಾಜಿಕ ಕ್ರಿಯಾತ್ಮಕತೆಗಳ ನಡುವಿನ ವ್ಯತ್ಯಾಸಗಳು ಮತು ಹೋಲಿಕೆಗಳವರೆಗಿನ ವಿಷಯಗಳ ಕುರಿತು ಆಸಕ್ತಿದಾಯಕ ಮತ್ತು ರಚನಾತ್ಮಕ ಸಂಭಾಷಣೆಗಳನ್ನು ಉತ್ತೇಜಿಸಿತು. ಮಂಡಳಿಯ ಸದಸ್ಯರು ಮಾನಸಿಕ ಆರೋಗ್ಯದ ಪ್ರಾಮುಖ್ಯತೆ ಮತ್ತು ತಮಗಾಗಿ ತಾವು ರಚಿಸಿಕೊಂಡಿರುವ ಸಂಬಂಧಿತ ದಿನಚರಿಗಳ ಕುರಿತು ಕಾತುರದಿಂದ ಚರ್ಚಿಸಿದರು. ಜೊತೆಗೆ, ಅವರು ಪೀಡಿಸುವಿಕೆ ಅಥವಾ ದ್ವೇಷ ಭಾಷಣಗಳಂತಹ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತವಾದ ಸಾಮಾಜಿಕ ಮಾನದಂಡಗಳನ್ನು ಸ್ಥಾಪಿಸುವುದರ ಮತ್ತು ಪಾಲಿಸುವುದರ ಮಹತ್ವಗಳ ಕುರಿತಾಗಿ ಒತ್ತಿ ಹೇಳಿದರು. ಈ ಪ್ರಮುಖ ಚರ್ಚೆಗಳಲ್ಲದೆಯೇ, ಈ ಶೃಂಗಸಭೆಯು ಅತಿಥಿ ಭಾಷಣಕಾರರು, ಹದಿಹರೆಯದವರು ಮತ್ತು ಹೆಚ್ಚು ವಿಸ್ತೃತ Snap ತಂಡದವರ ನಡುವೆ ಒಂದು "ತ್ವರಿತ-ಮಾರ್ಗದರ್ಶನ" ಅಧಿವೇಶನ, ಹಾಗೂ ಕೆಲವು ವಿನೋದಮಯ ತಂಡ-ನಿರ್ಮಾಣ ಚಟುವಟಿಕೆಗಳನ್ನು ಸಹ ಒಳಗೊಂಡಿತ್ತು.

ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಾವು ಜೊತೆಯಾಗಿ ಕಳೆದ ಸಮಯಾವಧಿಯ ಅಂತ್ಯದ ವೇಳೆಗೆ, ಈ ಹದಿಹರೆಯದವರು (ಮತ್ತು ಅವರ ಸಹಾಯಕರು) ತಮ್ಮ ಸ್ವಂತ ಸ್ಥಳೀಯ ಸಮುದಾಯಗಳಲ್ಲಿ ಆನ್‌ಲೈನ್‌ ಸುರಕ್ಷತಾ ರಾಯಭಾರಿಗಳಾಗಲು ಪ್ರಬಲ ಪ್ರೇರಣೆ ಹೊಂದಿದ್ದರು.

ನಾವು ಈ ತೊಡಗಿರುವ ಗುಂಪಿನೊಂದಿಗೆ ಸುರಕ್ಷತೆ ಮತ್ತು ಯೋಗಕ್ಷೇಮದ ಕುರಿತು ನಮ್ಮ ಸಂಭಾಷಣೆಗಳನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ. ನಮ್ಮ ಕರುಣಾಮಯಿ, ಬುದ್ಧಿವಂತ ಮತ್ತು ಸೃಜನಶೀಲ ಯುರೋಪಿಯನ್ CDWB ಸದಸ್ಯರಿಂದ ಇನ್ನಷ್ಟು ಒಳನೋಟಗಳನ್ನು ಪಡೆಯುವುದಕ್ಕಾಗಿ ಸಂಪರ್ಕದಲ್ಲಿರಿ!

— ಸೀಸ್ ವ್ಯಾನ್ ಕೊಪ್ಪೆನ್, Snap Inc. EMEA ಸುರಕ್ಷತಾ ನೀತಿಯ ಮುಖ್ಯಸ್ಥ


* Snap ನ ಯುರೋಪಿಯನ್ CDWB-ಸದಸ್ಯರು:

  • ಬೆನ್, 13 ವರ್ಷ ವಯಸ್ಸಿನ UK ಯ ಪ್ರಜೆ

  • ಕೋಯೆನ್‌, 16 ವರ್ಷ ವಯಸ್ಸಿನ ಇಟಲಿಯ ಪ್ರಜೆ

  • ಎಬ್ಬಾ, 14 ವರ್ಷ ವಯಸ್ಸಿನ ಸ್ವೀಡನ್‌ನ ಪ್ರಜೆ

  • ಎಲ್ಲಾ, 14 ವರ್ಷ ವಯಸ್ಸಿನ UK‌ ಯ ಪ್ರಜೆ

  • ಎಲ್ಲಾ, 16 ವರ್ಷ ವಯಸ್ಸಿನ ಫ್ರಾನ್ಸ್‌ನ ಪ್ರಜೆ

  • ಎಲಿಯಾಸ್‌, 15 ವರ್ಷ ವಯಸ್ಸಿನ ನೊರ್ವೆಯ ಪ್ರಜೆ

  • ಎಮಿಲಿ, 14 ವರ್ಷ ವಯಸ್ಸಿನ UK‌ ಯ ಪ್ರಜೆ

  • ಹಾಕೋನ್, 14 ವರ್ಷ ವಯಸ್ಸಿನ ನೊರ್ವೆಯ ಪ್ರಜೆ

  • ಇಸಬೆಲ್ಲಾ, 16 ವರ್ಷ ವಯಸ್ಸಿನ ಜರ್ಮನಿಯ ಪ್ರಜೆ

  • ಲಿಯೊನ್‌, 15 ವರ್ಷ ವಯಸ್ಸಿನ ಪೋಲ್ಯಾಂಡ್‌ನ ಪ್ರಜೆ

  • ಮೆಡೀನಾ, 14 ವರ್ಷ ವಯಸ್ಸಿನ ಡೆನ್ಮಾರ್ಕ್‌ನ ಪ್ರಜೆ

  • ಮರ್ವೇಯ್ಲ್‌, 16 ವರ್ಷ ವಯಸ್ಸಿನ ಫ್ರಾನ್ಸ್‌ನ ಪ್ರಜೆ

  • ಸಾರಾ, 13 ವರ್ಷ ವಯಸ್ಸಿನ ನೆದರ್‌ಲ್ಯಾಂಡ್‌ನ ಪ್ರಜೆ

  • ತಾರಾ, 14 ವರ್ಷ ವಯಸ್ಸಿನ ಕ್ರೊಯೇಷಿಯಾದ ಪ್ರಜೆ

ಸುದ್ದಿಗಳಿಗೆ ಹಿಂತಿರುಗಿ