Snap Values

ಪರಿಚಯಿಸುತ್ತಿದ್ದೇವೆ ಡಿಜಿಟಲ್ ಯೋಗಕ್ಷೇಮಕ್ಕಾಗಿ Snap ನ ಆಸ್ಟ್ರೇಲಿಯನ್ ಪರಿಷತ್‌

ಆಗಸ್ಟ್ 29, 2025

ಈ ವರ್ಷದ ಆರಂಭದಲ್ಲಿ, U.S. ನಲ್ಲಿ ಯಶಸ್ವಿ ಪ್ರಾಯೋಗಿಕ ಕಾರ್ಯಕ್ರಮದ ಬಳಿಕ ನಾವು Snap ನ ಡಿಜಿಟಲ್ ಯೋಗಕ್ಷೇಮಕ್ಕಾಗಿನ ಪರಿಷತ್‌ನ (CDWB) ಆಸ್ಟ್ರೇಲಿಯಾಗಾಗಿನ ವಿಸ್ತರಣೆಯನ್ನು ಪ್ರಕಟಿಸಿದೆವು. ಡಿಜಿಟಲ್ ಜೀವನದ ಕುರಿತು ಮತ್ತು ಇನ್ನಷ್ಟು ಸುರಕ್ಷಿತ ಮತ್ತು ಹೆಚ್ಚು ಸಬಲಗೊಳಿಸುವ ಆನ್‌ಲೈನ್ ಅನುಭವಗಳನ್ನು ರಚಿಸುವುದಕ್ಕಾಗಿ ಹದಿಹರೆಯದವರ ಅಭಿಪ್ರಾಯಗಳನ್ನು ಆಲಿಸುವುದಕ್ಕಾಗಿ CDWB ಅನ್ನು ವಿನ್ಯಾಸಗೊಳಿಸಲಾಗಿದೆ. ಜೂನ್‌ನಲ್ಲಿ, ನಾವು ನಮ್ಮ ಆಸ್ಟ್ರೇಲಿಯನ್ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಿದೆವು ಮತ್ತು ಅವರನ್ನು ಇಂದು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ! 

ಡಿಜಿಟಲ್ ಯೋಗಕ್ಷೇಮಕ್ಕಾಗಿನ ಆಸ್ಟ್ರೇಲಿಯನ್ ಪರಿಷತ್‌ನಲ್ಲಿ ದೇಶದಾದ್ಯಂತದ ಎಂಟು ವಿಚಾರಪೂರ್ಣ ಮತ್ತು ತೊಡಗಿಸಿಕೊಳ್ಳುವ ಹದಿಹರೆಯದವರಿದ್ದಾರೆ: 

  • ಆದ್ಯಾ, 15 ವರ್ಷದವರು, ಕ್ವೀನ್ಸ್‌ಲ್ಯಾಂಡ್‌ನಿಂದ

  • ಅಮೆಲಿಯಾ, 16 ವರ್ಷದವರು, ವಿಕ್ಟೋರಿಯಾದಿಂದ

  • ಬೆಂಟ್ಲಿ, 14 ವರ್ಷದವರು, ವಿಕ್ಟೋರಿಯಾದಿಂದ

  • ಚಾರ್ಲೊಟ್, 15 ವರ್ಷದವರು, ವಿಕ್ಟೋರಿಯಾದಿಂದ

  • ಕೊರ್ಮ್ಯಾಕ್, 14 ವರ್ಷದವರು, ಪಶ್ಚಿಮ ಆಸ್ಟ್ರೇಲಿಯಾದಿಮದ

  • ಎಮ್ಮಾ, 15 ವರ್ಷದವರು, NSW ನಿಂದ

  • ಮಿಲೀ, 15 ವರ್ಷದವರು, ವಿಕ್ಟೋರಿಯಾದಿಂದ

  • ರಾಯಿಸ್, 16 ವರ್ಷದವರು, NSW ದಿಂದ

ಹಿಂದೆಂದಿಗಿಂತಲೂ ಹೆಚ್ಚಾಗಿ, ಯುವಜನರಿಗೆ ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ಯೋಗಕ್ಷೇಮದ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಮತ್ತು Snap ನಂತಹ ಪ್ಲ್ಯಾಟ್‌ಫಾರ್ಮ್‌ಗಳು ಅವರ ಅನುಭವಗಳನ್ನು ಸಕ್ರಿಯವಾಗಿ ಆಲಿಸಲು ಒಂದು ವೇದಿಕೆಯನ್ನು ಒದಗಿಸುವುದು ಅತ್ಯಗತ್ಯ.

ಕಾರ್ಯಕ್ರಮದ ಉದ್ದಕ್ಕೂ, ಸಹವರ್ತಿ ಕರೆಗಳಿಗೆ ಹದಿಹರೆಯದವರು ನಿಯಮಿತವಾಗಿ ಸಭೆ ಸೇರುತ್ತಾರೆ ಮತ್ತು ಆನ್‌ಲೈನ್ ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳಲ್ಲಿ ಕೆಲಸ ಮಾಡುತ್ತಾರೆ. ಈ ಜುಲೈನಲ್ಲಿ ಸಿಡ್ನಿಯಲ್ಲಿರುವ Snap ನ ಆಸ್ಟ್ರೇಲಿಯಾದ ಪ್ರಧಾನ ಕಚೇರಿಯಲ್ಲಿ ನಡೆದ ಮುಖತಃ ಶೃಂಗಸಭೆಗಾಗಿ ಹದಿಹರೆಯದವರು ತಮ್ಮ ಪೋಷಕರು ಮತ್ತು ಒಬ್ಬ ಅಜ್ಜ-ಅಜ್ಜಿಯರೊಂದಿಗೆ ಒಟ್ಟುಗೂಡಿದರು.

ಅವು ಫಲಪ್ರದ ದಿನಗಳಾಗಿದ್ದವು, ಬಹಳಷ್ಟು ಅಂತರ್‌-ಪೀಳಿಗೆ ಚರ್ಚೆಗಳು, ಬ್ರೇಕ್‌ಔಟ್ ಗುಂಪುಗಳು, ಅತಿಥಿ ಭಾಷಣಗಳು ಮತ್ತು ಬಹಳಷ್ಟು ಅಂತರ್‌-ಸಹವರ್ತಿ ಸಂಬಂಧಗಳು ಇಲ್ಲಿ ಸಂಭವಿಸಿದವು. ಎಂಜಿನಿಯರಿಂಗ್, ಮಾರ್ಕೆಟಿಂಗ್, ಸಂವಹನಗಳು, ಸುರಕ್ಷತೆ ಮತ್ತು ಸೇಲ್ಸ್ ಆದ್ಯಂತ Snap ತಂಡದ ಸದಸ್ಯರ ವೈವಿಧ್ಯಮಯ ಗುಂಪಿನೊಂದಿಗೆ "ಸ್ಪೀಡ್ ಮೆಂಟರಿಂಗ್" ಸೆಷನ್ ಮೂಲಕ ತಂತ್ರಜ್ಞಾನ ಕಂಪನಿಯಲ್ಲಿ ಕೆಲಸ ಮಾಡುವ ಅನುಭವ ಹೇಗಿರುತ್ತದೆ ಎನ್ನುವ ಕುರಿತು ಉತ್ತಮ ಪ್ರಜ್ಞೆಯನ್ನು ಕೂಡ ಹದಿಹರೆಯದವರು ಪಡೆದುಕೊಂಡರು.

ಈ ಶೃಂಗಸಭೆಯು ಇಂದು ಹದಿಹರೆಯದವರಾಗಿರುವುದು (ಅಥವಾ ಅವರ ಪೋಷಕರಾಗಿರುವುದು), ಆನ್‌ಲೈನ್ ಅಪಾಯಗಳು, ಹದಿಹರೆಯದವರ ಡಿಜಿಟಲ್ ಜೀವನದ ಬಗ್ಗೆ ತಪ್ಪುಗ್ರಹಿಕೆಗಳು ಮತ್ತು ಪೋಷಕರ ಪರಿಕರಗಳಂತಹ ವಿಷಯಗಳ ಕುರಿತು ಮುಕ್ತ ಮತ್ತು ವಿಚಾರಪೂರ್ಣ ಸಂಭಾಷಣೆಗಳನ್ನು ಒಳಗೊಂಡಿತ್ತು. ಆನ್‌ಲೈನ್ ಸುರಕ್ಷತೆ ಎಂಬುದು ಎಲ್ಲರ ಸಮಾನ ಜವಾಬ್ದಾರಿಯಾಗಿದೆ ಎಂದು ತಾವು ನಂಬಿದ್ದೇವೆ ಎಂದು ಒತ್ತಿಹೇಳಿದ ಹದಿದರೆಯದವರು, ವಯಸ್ಕರು ಕೆಲವೊಮ್ಮೆ ತಮ್ಮ ಆನ್‌ಲೈನ್ ಚಟುವಟಿಕೆಗಳನ್ನು ತಪ್ಪಾಗಿ ಅರ್ಥಮಾಡಿಕೊಂಡರು ಎಂದು ತಮಗೆ ಅನಿಸುವುದಾಗಿ ಹದಿಹರೆಯದವರು ಹೇಳಿದರು. ಪೋಷಕರು ಮತ್ತು ಅಜ್ಜ-ಅಜ್ಜಿಯವರೊಂದಿಗೆ, ಚರ್ಚೆಗಳು ಪೋಷಕರು ಹಾಗೂ ಹದಿಹರೆಯದವರ ನಡುವಿನ ವಿಶ್ವಾಸದ ಪ್ರಾಮುಖ್ಯತೆ, ಹಾಗೂ ಆನ್‌ಲೈನ್ ಸುರಕ್ಷತೆಯ ಶಿಕ್ಷಣದ ಸುತ್ತ ನಡೆದವು. ಸಾಮಾಜಿಕ ಮಾಧ್ಯಮದ ಕನಿಷ್ಠ ವಯಸ್ಸಿನ ಕಾನೂನು ಶೃಂಗಸಭೆಯ ಮುಖ್ಯ ಗಮನವಾಗಿರದಿದ್ದರೂ ಸಹ, ಸಾಮಾಜಿಕ ಮಾಧ್ಯಮದಿಂದ ಹದಿಹರೆಯದವರನ್ನು ನಿಷೇಧಿಸಿದರೆ ಅವರಿಗೆ ಸಾಮಾಜಿಕ ಮತ್ತು ಭಾವನಾತ್ಮಕ ಬೆಂಬಲದ ಸಂಭಾವ್ಯ ನಷ್ಟದ ಕುರಿತು ಹದಿಹರೆಯದವರು, ಅಜ್ಜ-ಅಜ್ಜಿಯರು ಮತ್ತು ಪೋಷಕರು ಎಲ್ಲರೂ ಕಳವಳ ವ್ಯಕ್ತಪಡಿಸಿದರು.  

ಆ ಶೃಂಗಸಭೆಯು Snap ಗೆ ಎಷ್ಟು ಅರ್ಥಪೂರ್ಣವಾಗಿತ್ತೋ, ಹದಿಹರೆಯದವರಿಗೆ ಅಷ್ಟೇ ಅರ್ಥಪೂರ್ಣವಾಗಿತ್ತು ಎಂದು ನಮಗೆ ತಿಳಿದಿದೆ. ಕೌನ್ಸಿಲ್ ಸದಸ್ಯರೊಬ್ಬರು ಹೇಳಿದ ಹಾಗೆ "ಡಿಜಿಟಲ್ ಜಗತ್ತಿನ ಪ್ರಮುಖ ವಿಷಯಗಳ ಕುರಿತು ಒಟ್ಟಾಗಿ ಕೆಲಸ ಮಾಡುವುದರಿಂದ ಹದಿಹರೆಯದವರು ಅನುಭವಿಸುವ ಸಮಸ್ಯೆಗಳಿಗೆ ವಿಭಿನ್ನ ಆಲೋಚನೆಗಳು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ದೃಷ್ಟಿಕೋನವನ್ನು ಪಡೆಯಲು ನನಗೆ ಅವಕಾಶ ಮಾಡಿಕೊಟ್ಟಿತು"

ಶೃಂಗಸಭೆಗೆ ಹೆಚ್ಚುವರಿಯಾಗಿ, ಪ್ರೋಗ್ರಾಂ ಹಾಗೂ ಅದಕ್ಕಾಗಿ ಪರಿಷತ್ ಸದಸ್ಯರ ಆಕಾಂಕ್ಷೆಗಳನ್ನು ಚರ್ಚಿಸಲು, ಗುಂಪಿನ ಮಾನದಂಡಗಳನ್ನು ಸ್ಥಾಪಿಸಲು ಮತ್ತು ಹದಿಹರೆಯದವರು ಆನ್‌ಲೈನ್‌ನಲ್ಲಿ ಏನು ಅನುಭವಿಸುತ್ತಿದ್ದಾರೆ, ಅವರು ಆನ್‌ಲೈನ್ ಕಂಟೆಂಟ್ ಅನ್ನು ಯಾಕೆ ವರದಿ ಮಾಡಬಹುದು (ಅಥವಾ ಮಾಡದೆ ಇರಬಹುದು) ಮತ್ತು ಆನ್‌ಲೈನ್ ವಾತಾವರಣಗಳಲ್ಲಿ ಮಕ್ಕಳ ಹಕ್ಕುಗಳು ಸೇರಿದಂತೆ ಆನ್‌ಲೈನ್ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ನಾವು ಮೂರು ಸಹವರ್ತಿ ಕರೆಗಳನ್ನು ಕೂಡ ನಡೆಸಿದ್ದೇವೆ.

ಪ್ರೋಗ್ರಾಂನ ಉಳಿದ ಭಾಗದುದ್ದಕ್ಕೂ ನಮ್ಮ ಅದ್ಭುತ ಪರಿಷತ್ ಸದಸ್ಯರೊಂದಿಗೆ ಕೆಲಸ ಮಾಡುವುದನ್ನು ನಾವು ನಿರೀಕ್ಷಿಸುತ್ತೇವೆ ಮತ್ತು ಅವರಿಂದ ಇನ್ನಷ್ಟು ಒಳನೋಟಗಳನ್ನು ಹಂಚಿಕೊಳ್ಳಲು ನಾವು ಕಾತರರಾಗಿದ್ದೇವೆ!

— ಬೆನ್ ಆವ್, ANZ ಸುರಕ್ಷತಾ ಮುಖ್ಯಸ್ಥ

ಸುದ್ದಿಗಳಿಗೆ ಹಿಂತಿರುಗಿ