ಹೊಸ Snap ಸಂಶೋಧನೆ: Gen Z ಆನ್‌ಲೈನ್ ಲೈಂಗಿಕ ದೌರ್ಜನ್ಯಕ್ಕೆ ಸುಲಭವಾಗಿ ತುತ್ತಾಗುವುದು ಮುಂದುವರಿದಿದೆ, ಆದರೆ ಪ್ರಗತಿಯ ಸಂಕೇತಗಳು ಕಾಣುತ್ತಿವೆ
29 ಅಕ್ಟೋಬರ್ 2024
ಕಳೆದ ಮೂರು ವರ್ಷಗಳಲ್ಲಿ, ಆನ್‌ಲೈನ್ ಅಪಾಯದ ಭೂದೃಶ್ಯವು ಬೆಚ್ಚಿಬೀಳಿಸುವ ಪ್ರಮಾಣದ "ಲೈಂಗಿಕ ದೌರ್ಜನ್ಯದ" ಪ್ರಕರಣಗಳನ್ನು ಕಂಡಿದೆ – ಈ ಹಗರಣಗಳಲ್ಲಿ ಬಹುತೇಕ ವಿಶೇಷವಾಗಿ ಹದಿಹರೆಯದವರು ಮತ್ತು ಯುವ ವಯಸ್ಕರನ್ನು ಕಪಟದ ಮೂಲಕ ತಮ್ಮ ಲೈಂಗಿಕ ದೃಶ್ಯಾವಳಿಗಳನ್ನು ಹಂಚಿಕೊಳ್ಳುವಂತೆ ವಂಚಿಸಲಾಗುತ್ತದೆ, ಹಾಗೂ ಅಂತಿಮವಾಗಿ ಬಹು ಬೇಗನೆ ಬೆದರಿಕೆಯ ವಸೂಲಿಗಳಾಗಿ ಮಾರ್ಪಾಡಾಗುತ್ತವೆ. ಹೊಸ ಉದ್ಯಮ-ವ್ಯಾಪಕ ಸಂಶೋಧನೆಯು ಅಪಾಯಗಳು ಮುಂದುವರಿಯುವುದನ್ನು ತೋರಿಸುತ್ತದೆಯಾದರೂ, ಅಪರಾಧಿಗಳನ್ನು ತಡೆಯುವ ಮತ್ತು ಸಂಭಾವ್ಯ ಬಲಿಪಶುಗಳಿಗೆ ಶಿಕ್ಷಣ ನೀಡುವ ಪ್ರಯತ್ನಗಳು ಫಲಶ್ರುತಿ ನೀಡುತ್ತಿವೆ ಎಂಬ ಉತ್ತೇಜಕ ಚಿಹ್ನೆಗಳು ದೊರೆಯುತ್ತಿವೆ. (Snap Inc. ಈ ಸಂಶೋಧನೆಯನ್ನು ಕಾರ್ಯಾರಂಭ ಮಾಡಿತು, ಹಾಗೂ ಅದು ಪ್ರಸ್ತುತ ಎರಡನೇ ವರ್ಷದಲ್ಲಿದೆ, ಆದರೆ ಅದು Snapchat ನ ಮೇಲೆ ಯಾವುದೇ ರೀತಿಯಲ್ಲಿ ನಿರ್ದಿಷ್ಟವಾಗಿ ಕೇಂದ್ರೀಕರಿಸದೆಯೇ ಸಾಮಾನ್ಯವಾಗಿ ಆನ್‌ಲೈನ್ ಪ್ಲ್ಯಾಟ್‌ಫೊರ್ಮ್‌ಗಳಾದ್ಯಂತದ Z ಪೀಳಿಗೆಯ ಹದಿಹರೆಯವರು ಮತ್ತು ಯುವ ವಯಸ್ಕರ ಅನುಭವಗಳನ್ನು ಒಳಗೊಂಡಿದೆ.)
ಸರಿಸುಮಾರು ಕಾಲುಭಾಗ (23%) 1 ಆರು ದೇಶಗಳಲ್ಲಿ ಸಮೀಕ್ಷೆ ಮಾಡಲಾದ 13 ರಿಂದ 24 ವರ್ಷದವರಲ್ಲಿನ 6,004 ಜನರ ಪೈಕಿ 2ಪ್ಲ್ಯಾಟ್‌ಫೊರ್ಮ್‌ಗಳಾದ್ಯಂತದ ಮತ್ತು ಎಲ್ಲಾ ಸೇವೆಗಳಾದ್ಯಂತದವರು ತಾವು ಲೈಂಗಿಕ ದೌರ್ಜನ್ಯದ ಸಂತ್ರಸ್ತರಾಗಿದ್ದರೆಂದು ತಿಳಿಸಿದರು. ಏತನ್ಮಧ್ಯೆ, ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗಬಹುದಾದ ಕೆಲವು ಆನ್‌ಲೈನ್ ಸನ್ನಿವೇಶಗಳಿಗೆ ತಮ್ಮನ್ನು ಸೆಳೆಯಲಾಗಿತ್ತು ಅಥವಾ ಅಪಾಯಕಾರಿ ಡಿಜಿಟಲ್ ಅಭ್ಯಾಸಗಳಲ್ಲಿ ತಾವು ತೊಡಗಿರುವುದಾಗಿ ಪ್ರತಿಸ್ಪಂದಕರಲ್ಲಿನ ಅರ್ಧಕ್ಕಿಂತಲೂ ಹೆಚ್ಚು (51%) ಜನರು ವರದಿ ಮಾಡಿದರು. ಅವುಗಳೆಂದರೆ "ಬಲಿಪಶುವಾಗಿಸುವಿಕೆ" 3(37%), "ವ್ಯಕ್ತಿತ್ವದ ನಕಲುಗೊಳಿಸುವಿಕೆ" ("ಕ್ಯಾಟ್‌ಫಿಶಿಂಗ್") (30%), ಹ್ಯಾಕಿಂಗ್‌ಗೆ ಒಳಗಾಗುಗವಿಕೆ (26%) ಅಥವಾ ಆನ್‌ಲೈನ್‌ನಲ್ಲಿ ಲೈಂಗಿಕ ದೃಶ್ಯಾವಳಿಗಳ ವಿತರಿಸುವಿಕೆ (17%). ಮುಖ್ಯವಾಗಿ, ಬಹಳಷ್ಟು ಗುಂಪುಗಳಿಂದ ಜಾರಿಯಲ್ಲಿರುವ ಜಾಗೃತಿ ಮೂಡಿಸುವ ಕ್ರಮಗಳು ಮತ್ತು ಶೈಕ್ಷಣಿಕ ಅಭಿಯಾನಗಳು ಫಲ ನೀಡುತ್ತಿರುವಂತೆ ತೋರುತ್ತದೆ ಹಾಗೂ ಆ ಕಾರಣದಿಂದ ಇಂತಹ ಕಪಟ ಯೋಜನೆಗಳಿಗೆ "ಗುರಿಯಾದವರಲ್ಲಿ" ಕಡಿಮೆ ಸಂಖ್ಯೆಯ ಯುವಜನರು ಬಲಿಪಶು ಆಗುತ್ತಿದ್ದಾರೆ.
ಆನ್‌ಲೈನ್‌ನಲ್ಲಿ ವ್ಯಕ್ತಿತ್ವದ ನಕಲುಗೊಳಿಸುವಿಕೆಯು ನಡೆಯುವ ವಿಧಾನವೆಂದರೆ ದುಷ್ಕರ್ಮಿಗಳು ಯಾರೋ ಬೇರೊಬ್ಬರ ಮಾರುವೇಶವನ್ನು ಬಳಸಿಕೊಂಡು ತಾವು ಗುರಿಯಾಗಿಸಿದ ವ್ಯಕ್ತಿಯು ತನ್ನ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಂತೆ ಅಥವಾ ಲೈಂಗಿಕ ದೃಶ್ಯಾವಳಿಗಳನ್ನು ಹಂಚಿಕೊಳ್ಳುವಂತೆ ಪ್ರಚೋದಿಸುತ್ತಾರೆ. ಸಾಮಾನ್ಯವಾಗಿ ಹ್ಯಾಕಿಂಗ್ ಪ್ರಕ್ರಿಯೆಯಲ್ಲಿ ದುಷ್ಕರ್ಮಿಯು ತಾನು ಗುರಿಯಾಗಿಸುವ ವ್ಯಕ್ತಿಗಳ ಲೈಂಗಿಕ ದೃಶ್ಯಾವಳಿಗಳು ಅಥವಾ ವ್ಯೆಯಕ್ತಿಕ ಮಾಹಿತಿಯನ್ನು ಕದಿಯುವುದಕ್ಕಾಗಿ ಅವರ ಸಾಧನಗಳು ಅಥವಾ ಆನ್‌ಲೈನ್ ಖಾತೆಗಳಿಗೆ ಅನಧಿಕೃತವಾಗಿ ಪ್ರವೇಶ ಪಡೆಯುತ್ತಾನೆ. ಬಹುತೇಕ ಸಂದರ್ಭಗಳಲ್ಲಿ, ಮೇಲಿನ ಎರಡೂ ಸನ್ನಿವೇಶಗಳಲ್ಲಿ, ದುಷ್ಕರ್ಮಿಯು ತಾನು ಕದ್ದ ವೀಡಿಯೋಗಳು, ಭಾವಚಿತ್ರಗಳು ಅಥವಾ ಇತರ ಖಾಸಗಿ ಮಾಹಿತಿಗಳನ್ನು ಬಳಸಿ ಮುಂದಿನ ದಿನಗಳಲ್ಲಿ ಬಲಿಪಶುವನ್ನು ಬೆದರಿಸಿ ಅಶ್ಲೀಲ ದೃಶ್ಯಾವಳಿಗಳನ್ನು ಬಲಿಪಶುವಾದ ವ್ಯಕ್ತಿಯ ಕುಟುಂಬ ಮತ್ತು ಸ್ನೇಹಿತರಿಗೆ ಬಿಡುಗಡೆ ಮಾಡದೆ ಇರಬೇಕಾದಲ್ಲಿ ತನಗೆ ಅಗತ್ಯವಿರುವ ಬೇಡಿಕೆಗಳಿಗೆ ಒಪ್ಪಿಕೊಳ್ಳುವಂತೆ ಮಾಡುತ್ತಾನೆ.
ಯುವಕರಲ್ಲಿ ಲೈಂಗಿಕ ದೃಶ್ಯಾವಳಿಗಳ ಡಿಜಿಟಲ್ ಚಿತ್ರಗಳ ಹಂಚಿಕೊಳ್ಳುವಿಕೆಯು ಸಾಮಾನ್ಯವಾಗಿ ಲೈಂಗಿಕ ಶೋಧನೆ ಎಂದು 21 ನೇ ಶತಮಾನದಲ್ಲಿ ಭಾವಿಸಲಾಗುತ್ತದೆ ಹಾಗೂ ಆ ಸ್ವಭಾವದ ನಿರೂಪಣೆಗೆ ಸಂಶೋಧನೆಯ ಆಧಾರ ನೀಡಲಾಗುತ್ತದೆ. ಆದರೆ ಇಂತಹ ಅಭ್ಯಾಸಗಳು ಸುಳ್ಳು ನಿರೂಪಣೆ ಮತ್ತು ಹುಸಿ ಪದ್ಧತಿಗಳ ಬಳಕೆಯ ಮೂಲಕ ಲೈಂಗಿಕ ದೌರ್ಜನ್ಯದ ಮತ್ತು ಇತರ ಸಂಭಾವ್ಯ ಹಾನಿಕರ ಫಲಿತಾಂಶಗಳ ಪ್ರಮುಖ ಅಪಾಯದ ಕಾರಕಗಳಾಗಿ ಮುಂದುವರಿದಿವೆ. ಸಂಶೋಧನೆಗಳಿಂದ ದೊರೆತ ಇತ್ತೀಚಿನ ಫಲಿತಾಂಶಗಳ ಪ್ರಕಾರ ಲೈಂಗಿಕ ದೃಶ್ಯಾವಳಿಗಳನ್ನು ಹಂಚಿಕೊಂಡಿರುವುದಾಗಿ ಅಥವಾ ವಿತರಿಸಿರುವುದಾಗಿ ಒಪ್ಪಿಕೊಂಡಂತಹ 17% ಪ್ರತಿಸ್ಪಂದಕರಲ್ಲಿನ 63% ಜನರು ತಮಗೆ ದುಷ್ಕರ್ಮಿಯು ಸುಳ್ಳು ಹೇಳಿದ್ದರು ಎಂದು ಹಾಗೂ 58% ಜನರು ತಾವು ಚಿತ್ರಗಳನ್ನು ರವಾನಿಸಿದ ನಂತರ ಅವುಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಂಡರು ಎಂದು ತಿಳಿಸಿದರು. ಲೈಂಗಿಕ ದೃಶ್ಯಾವಳಿಗಳನ್ನು ಹಂಚಿಕೊಂಡ 18 ಕ್ಕಿಂತಲೂ ಕಡಿಮೆ ವಯಸ್ಸಿನವರು ವಿಶೇಷವಾಗಿ ದುರ್ಬಲ ಅವಸ್ಥೆಯಲ್ಲಿದ್ದರು: 76% ಜನರು ತಮಗೆ ದುಷ್ಕರ್ಮಿಯು ಸುಳ್ಳು ಹೇಳಿದ್ದರು ಎಂದು ಹಾಗೂ 66% ಜನರು ತಾವು ಚಿತ್ರಗಳನ್ನು ರವಾನಿಸಿದ ನಂತರ ಅವುಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಂಡರು ಎಂದು ತಿಳಿಸಿದರು.
"ಹದಿಹರೆಯದವರು ಆನ್‌ಲೈನ್‌ನಲ್ಲಿ ತಮ್ಮ ಸುರಕ್ಷತೆಯನ್ನು ವರ್ಧಿಸುವುದಕ್ಕಾಗಿ ಹೆಚ್ಚು ಪ್ರಬಲ ನಿಯಂತ್ರಣಗಳು ಮತ್ತು ವ್ಯವಸ್ಥೆಗಳನ್ನು ಬಯಸುತ್ತಾರೆ," ಎಂದು ಸಮಾನಾಂತರ ಅಧ್ಯಯನವೊಂದನ್ನು ಮುನ್ನಡೆಸಿದ್ದ ಪಾಶ್ಚಾತ್ಯ ಸಿಡ್ನಿ ವಿಶ್ವವಿದ್ಯಾಲಯದಲ್ಲಿನ ಯುವ ವಯಸ್ಕರು ಮತ್ತು ಚೇತರಿಕಾ ಸಂಶೋಧನಾ ಕೇಂದ್ರದ ಸಹ-ನಿರ್ದೇಶಕರಾಗಿರುವ ಪ್ರಾಧ್ಯಾಪಕ ಅಮಾಂಡಾ ಥರ್ಡ್ ಹೇಳಿದರು 4 Save the Children ನೊಂದಿಗಿನ ಪಾಲುದಾರಿಕೆಯಲ್ಲಿ, Tech Coalition ದಿಂದ ಧನಸಹಾಯದೊಂದಿಗೆ. "ಅವರು ಮಕ್ಕಳು ಮತ್ತು ವಯಸ್ಕರು ಹೆಚ್ಚು ಉತ್ತಮವಾಗಿ ಶಿಕ್ಷಿತರಾಗಬೇಕೆಂದು ಬಯಸುತ್ತಾರೆ. ಹಾಗೂ ಈ ಮೇಲಿನವರು ಸಾಮಾನ್ಯವಾಗಿ ಭೇಟಿ ನೀಡುವ ಡಿಜಿಟಲ್ ಆವರಣಗಳನ್ನು ದುಷ್ಕೃತ್ಯವೆಸಗುವವರು, ಸೂಕ್ತವಲ್ಲದ ವಿಷಯಗಳು, ಮುಂತಾದವುಗಳಿಂದ ಮುಕ್ತವಾಗಿರಿಸುವುದಕ್ಕಾಗಿ, ಹಾಗೂ ಅವುಗಳನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲದೆ, ಮೇಲಿನವರಿಗಾಗಿ ಅತ್ಯಂತ ಸಮರ್ಪಕವಾಗಿರುವುದಾಗಿ ಖಚಿತಪಡಿಸುವುದಕ್ಕಾಗಿ ಆ ಪ್ಲ್ಯಾಟ್‌ಫೊರ್ಮ್‌ಗಳು ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಾಂತ್ರಿಕ ಸಾಮರ್ಥ್ಯಗಳ ಶಕ್ತಿಯನ್ನು ಬಳಸಿಕೊಳ್ಳುವಂತೆ ಅವರು ಕರೆನೀಡುತ್ತಿದ್ದಾರೆ."
"ಆನ್‌ಲೈನ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿತ ಸುಲಿಗೆಯಂತಹ ಅಪರಾಧೀ ಕೃತ್ಯಗಳ ವಿಪರೀತ ಹೆಚ್ಚಳವನ್ನು ಎದುರಿಸಲು ಸಹಾಯ ಮಾಡುವುದಕ್ಕಾಗಿ ದುಷ್ಕೃತ್ಯವೆಸಗುವವರನ್ನು ಗುರತಿಸಲು ಮಕ್ಕಳಿಗೆ ಸಹಾಯ ಮಾಡುವಂತಹ, ಅನುಚಿತ ಸಂವಹನಗಳಿಗೆ ಪ್ರತಿಕ್ರಿಯಿಸುವ ರೀತಿಗಳೊಂದಿಗೆ ನೈಜ-ಸಮಯದ ಸಲಹೆಗಳನ್ನು ಒದಗಿಸುವಂತಹ, ಅತ್ಯುತ್ತಮ ಗುಣಮಟ್ಟದ ಮಾಹಿತಿಯನ್ನು ಮತ್ತು ಸಹಾಯ-ಹುಡುಕುವ ಮಾರ್ಗಗಳನ್ನು ಒದಗಿಸುವಂತಹ ಮೂಲಗಳೊಂದಿಗೆ ಸಂಪರ್ಕ ಒದಗಿಸುವಂತಹ ವಯಸ್ಸುಗಳಿಗೆ-ಸೂಕ್ತವಿರುವಂತೆ ಸೂಕ್ತವಾಗಿ ಯೋಜಿಸಿ ನಿರ್ಮಿಸಲ್ಪಟ್ಟಂತಹ ವಿನ್ಯಾಸಗಳು ತುರ್ತಾಗಿ ಅಗತ್ಯವಿರುವವು," ಎಂದು ಆಕೆ ಹೇಳಿದರು. ಪ್ರೊ. ಥರ್ಡ್ ಅವರು Snap ನ ಸುರಕ್ಷತಾ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ.
ಇತರೆ ಮುಖ್ಯ ಫಲಿತಾಂಶಗಳು
Gen Z ಪ್ರತಿಸ್ಪಂದಕರಲ್ಲಿ ಬಹುತೇಕ ಅರ್ಧದಷ್ಟು (47%) ಜನರು ತಾವು ಯಾವುದಾದರೊಂದು ಸಂದರ್ಭದಲ್ಲಿ ಲೈಂಗಿಕ ಭಾವಚಿತ್ರಗಳ ವಿಷಯದಲ್ಲಿ ತೊಡಗಿರುವುದಾಗಿ ಹೇಳಿದರು: 35% ಪ್ರತಿಸ್ಪಂದಕರಿಗೆ ಲೈಂಗಿಕ ಭಾವಚಿತ್ರಗಳನ್ನು ಹಂಚಿಕೊಳ್ಳಲು ಕೇಳಲಾಗಿತ್ತು, ಹಾಗೂ 39% ಜನರು ತಾವು ಅಂತಹ ಚಿತ್ರಗಳನ್ನು ಪಡೆದಿರುವುದಾಗಿ ಹೇಳಿದರು.
Gen Z ನವರ ವಯಸ್ಸಿಗೆ ಅನುಗುಣವಾಗಿ ಲೈಂಗಿಕ ಚಿತ್ರಗಳೊಂದಿಗೆ ತೊಡಗಿಸಿಕೊಳ್ಳುವಿಕೆಯು ಹೆಚ್ಚಿತು.
13 ರಿಂದ 15 ವರ್ಷದವರಲ್ಲಿ, ಸಮಾರು ಕಾಲುಭಾಗದಷ್ಟು (23%) ಪ್ರತಿಸ್ಪಂದಕರಿಗೆ ಲೈಂಗಿಕ ಚಿತ್ರಗಳನ್ನು ಹಂಚಿಕೊಳ್ಳಲು ಕೇಳಲಾಗಿತ್ತು ಅಥವಾ (26%) ಪಡೆದಿದ್ದರು. ಕೇವಲ 13% ಜನರು ಅದನ್ನು ಹಂಚಿಕೊಂಡಿರುವುದಾಗಿ ಒಪ್ಪಿಕೊಂಡರು.
16 ಮತ್ತು 17 ವರ್ಷದವರಲ್ಲಿ, ಆ ಶೇಕಡಾವಾರುಗಳು 31% (ಕೇಳಲ್ಪಟ್ಟವರು) ಮತ್ತು 35% (ಪಡೆದವರು) ಗಳಿಗೆ ಜಿಗಿದಿದ್ದವು, ಆದರೆ ಇವರಲ್ಲೂ ಸಹ ಕೇವಲ 13% ಲೈಂಗಿಕ ಚಿತ್ರಗಳನ್ನು ಹಂಚಿಕೊಂಡಿರುವುದಾಗಿ ಒಪ್ಪಿಕೊಂಡರು.
ಈ ಶೇಕಡಾವಾರುಗಳು 18 ಮತ್ತು 19 ವರ್ಷದವರಲ್ಲಿ ಪುನಃ ಏರಿಕೆ ಕಂಡವು, ಅತ್ಯಂತ ಹಿರಿಯರ ಈ ಸಮೂಹದವರಲ್ಲಿ ಈ ಶೇಕಡಾವಾರುಗಳು 43% (ಕೇಳಲ್ಪಟ್ಟವರು) ಮತ್ತು 49% (ಪಡೆದವರು) ಆಗಿದ್ದವು. (ವಿವರಗಳಿಗಾಗಿ ನಕ್ಷೆಯನ್ನು ನೋಡಿ).

ಈ ಸಂಶೋಧನೆಯು Snap ನ ಚಾಲ್ತಿಯಲ್ಲಿರುವ ಡಿಜಿಟಲ್ ಯೋಗಕ್ಷೇಮದ ಕುರಿತಾದ ಅಧ್ಯಯನದ ಭಾಗವಾಗಿದೆ - ಅದು Gen Z ರ ಆನ್‌ಲೈನ್ ಮಾನಸಿಕ ಆರೋಗ್ಯದ ಒಂದು ಅಳತೆಯಾಗಿದೆ. Snap ಈ ಸಂಶೋಧನೆಯನ್ನು ಪ್ರಾಯೋಜಿಸುವಾಗ, ಅದು Snapchat ನ ಮೇಲೆ ಯಾವುದೇ ರೀತಿಯಲ್ಲಿ ನಿರ್ದಿಷ್ಟವಾಗಿ ಕೇಂದ್ರೀಕರಿಸದೆ ಎಲ್ಲಾ ಪ್ಲ್ಯಾಟ್‌ಫೊರ್ಮ್‌ಗಳನ್ನು ಪರಿಗಣಿಸುತ್ತದೆ. ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, ಯು.ಕೆ. ಮತ್ತು ಅಮೇರಿಕಾ ದೇಶಗಳಲ್ಲಿ ಜೂನ್ 3 ರಿಂದ ಜೂನ್ 19 ರವರೆಗೆ ನಡೆಸಲಾದ ಅಧ್ಯಯನದಲ್ಲಿ ಒಟ್ಟು 9,007 ಜನರು ಭಾಗವಹಿಸಿದ್ದರು, ಹಾಗೂ ಅವರಲ್ಲಿ 13 ರಿಂದ 19 ವರ್ಷದ ಮಕ್ಕಳ 3,003 ಪೋಷಕರು ಸೇರಿದ್ದರು, ಅವರಿಗೆ ಆನ್‌ಲೈನ್ ಅಪಾಯಗಳಿಗೆ ತಮ್ಮ ಮಕ್ಕಳ ಒಡ್ಡುವಿಕೆಯ ಕುರಿತು ಕೇಳಲಾಗಿತ್ತು. ಫೆಬ್ರವರಿಯಲ್ಲಿನ 2025 ರ ಅಂತರರಾಷ್ಟ್ರೀಯ ಸುರಕ್ಷಿತ ಇಂಟರ್ನೆಟ್ ದಿನದ ಆಚರಣೆಯೊಂದಿಗೆ ಹೊಂದುವಂತೆ ಈ ಸಂಶೋಧನೆಯ ಪೂರ್ಣ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಮೊದಲು ನಾವು ಇದರ ಇನ್ನಷ್ಟು ಫಲಿತಾಂಶಗಳನ್ನು ಇಂದಿನಿಂದ ಬಿಡುಗಡೆ ಮಾಡುತ್ತ ಬರುತ್ತೇವೆ. ಆ ಸಂದರ್ಭದಲ್ಲಿ, ನಾವು Snap ನ ಡಿಜಿಟಲ್ ಯೋಗಕ್ಷೇಮದ ಸೂಚ್ಯಂಕದ ತೃತೀಯ ವರ್ಷದ ಮಾಪನವನ್ನು ಕೂಡ ಘೋಷಿಸುತ್ತೇವೆ.
ಅಪ್ರಾಪ್ತ ವಯಸ್ಕರ ಮೇಲೆ ಪರಿಣಾಮ ಬೀರುವ ಲೈಂಗಿಕ ದೌರ್ಜನ್ಯದ ಮೂಲಕ ನಡೆಸಲಾಗುವ ಹಣಕಾಸಿನ ಸುಲಿಗೆಯ ಕುರಿತು ತಾಂತ್ರಿಕ ಒಕ್ಕೂಟದ ವಾಸ್ತವ ಬಹು-ಪಾಲುದಾರರ ವೇದಿಕೆಯಲ್ಲಿ ನಮ್ಮ ಭಾಗವಹಿಸುವಿಕೆಯೊಂದಿಗೆ ಹೊಂದುವಂತೆ ನಾವು ಈ ಇತ್ತೀಚಿನ ಲೈಂಗಿಕ ದೌರ್ಜನ್ಯದ ಪೂರ್ಣ-ಪ್ರಮಾಣದ ಫಲಿತಾಂಶಗಳನ್ನು ಇಂದು ಲಭ್ಯವಾಗುವಂತೆ ಮಾಡುತ್ತಿದ್ದೇವೆ. ಈ ಕೆಳಗೆ ವಿವರಿಸಲಾಗಿರುವಂತೆ, Snap 2022 ರಿಂದ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತಿದೆ. ಈ ಪ್ಲ್ಯಾಟ್‌ಫೊರ್ಮ್‌ಗಳಾದ್ಯಂತದ ಸಂಶೋಧನೆಯನ್ನು ಕೈಗೊಳ್ಳುವುದರಿಂದ ಸಂಭಾವ್ಯ ಅಪಾಯಗಳನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವ ಮತ್ತು ಕಾರ್ಯಸಾಧಿಸುವ ಒಂದು ವಿಧಾನವಾಗಿದೆ.
"ಈ ವಿಧಗಳ ಸಂಶೋಧನೆಯು ಯುವಜನರ ಮೇಲೆ ಆನ್‌ಲೈನ್‌ನಲ್ಲಿ ಎದುರಾಗುವ ಅಪಾಯದ ಕುರಿತು ಒಂದು ಮಹತ್ವದ ಬೆಳಕನ್ನು ಚೆಲ್ಲುತ್ತದೆ, ಆದರೆ ಇದು ಈ ಸವಾಲುಗಳನ್ನು ನಿಭಾಯಿಸಲು ಉದ್ಯಮ, ಸರ್ಕಾರಗಳು ಮತ್ತು ನಾಗರಿಕ ಸಮಾಜದ ನಡುವಿನ ಸಹಯೋಗದ ಶಕ್ತಿಯ ಕುರಿತು ಅರಿವು ಮೂಡಿಸುತ್ತದೆ," ಎಂದು Tech Coalition ಅಧ್ಯಕ್ಷ ಮತ್ತು CEO ಆಗಿರುವ ಸೋನ್ ಲಿಟ್ಟನ್ ಅವರು ಹೇಳಿದರು. "ಲೈಂಗಿಕ ದೌರ್ಜನ್ಯದ ಮೂಲಕ ಹಣಕಾಸಿನ ಸುಲಿಗೆಯ ಕುರಿತಾದ Tech Coalition ನ ಜಾಗತಿಕ ಬಹು-ಪಾಲುದಾರರ ವೇದಿಕೆಯಲ್ಲಿ ಈ ಹೊಸ ಸಂಶೋಧನೆಯನ್ನು ಪ್ರಸ್ತುತಪಡಿಸಲು Snap ನಮ್ಮೊಂದಿಗೆ ಇರುವುದರ ಕುರಿತು ನಮಗೆ ಹೆಮ್ಮೆಯಾಗುತ್ತಿದೆ. ಜಾಗೃತಿ ಮೂಡಿಸುವ ಮತ್ತು ಸಾಮೂಹಿಕ ಕ್ರಮಗಳನ್ನು ಕೈಗೊಳ್ಳುವ ಮೂಲಕ, ನಾವು ವಿಶ್ವದಾದ್ಯಂತದ ಮಕ್ಕಳಿಗಾಗಿ ಸುರಕ್ಷಿತ ಡಿಜಿಟಲ್ ಸ್ಥಳಗಳನ್ನು ಸೃಷ್ಟಿಸಬಹುದು."
ದುಷ್ಕರ್ಮಿಗಳ ಬೇಡಿಕೆಗಳು ಮತ್ತು ಸಂತ್ರಸ್ತರು ಕೈಗೊಳ್ಳುವ ಕ್ರಮಗಳು
ಲೈಂಗಿಕ ದೌರ್ಜನ್ಯದ ಮೂಲಕ ಸುಲಿಗೆಗೆ ಬಲಿಪಶುವಾದ Gen Z ಅಪ್ರಾಪ್ತ ವಯಸ್ಕರು ಮತ್ತು ಯುವ ವಯಸ್ಕರಲ್ಲಿ (23%), ಸುಲಿಗೆಕೋರರ ಅತಿ ದೊಡ್ಡ ಬೇಡಿಕೆಗಳೆಂದರೆ ಲೈಂಗಿಕ ಭಾವಚಿತ್ರಗಳು / ವೀಡಿಯೋಗಳು ಮತ್ತು ಹಣವಾಗಿತ್ತು, ಹಾಗೂ ಅವರಲ್ಲಿನ ಅರ್ಧದಷ್ಟು ಸುಲಿಗೆಕೋರರು ಇನ್ನಷ್ಟು ಲೈಂಗಿಕ ಚಿತ್ರಗಳು, ಹಣ ಮತ್ತು ಉಡುಗೊರೆ ಕಾರ್ಡ್‌ಗಳಿಗಾಗಿ ಬೇಡಿಕೆ ಇರಿಸಿದ್ದರು. ಕಳೆದ ವರ್ಷದ ಫಲಿತಾಂಶಗಳೊಂದಿಗೆ ಹೊಂದುವಂತೆ, ಸುಲಿಗೆಕೋರರ ಇತರ ಬೇಡಿಕೆಗಳಲ್ಲಿ ಖುದ್ದಾಗಿ ಭೇಟಿಯಾಗಬೇಕಾಗಿ ಬೇಡಿಕೆಗಳು (39%), ಲೈಂಗಿಕ ಸಂಬಂಧಗಳಲ್ಲಿ ತೊಡಗಿಕೊಳ್ಳಲು ಬೇಡಿಕೆಗಳು (39%), ವೈಯಕ್ತಿಕ ಮಾಹಿತಿಗೆ ಪ್ರವೇಶ ನೀಡಲು ಬೇಡಿಕೆಗಳು (36%) ಅಥವಾ ಸಂತ್ರಸ್ತರ ಖಾತೆಗಳಿಗೆ ಪ್ರವೇಶ ನೀಡಲು ಬೇಡಿಕೆಗಳು (35%) ಹಾಗೂ ಸಂತ್ರಸ್ತರ ಸ್ನೇಹಿತರು ಮತ್ತು ಸಂಪರ್ಕ ಪಟ್ಟಿಗಳಿಗೆ ಪ್ರವೇಶ ನೀಡಲು ಬೇಡಿಕೆಗಳು (25%) ಸೇರಿವೆ. ಸುಮಾರು ಮೂರರಲ್ಲಿ ಒಂದರಷ್ಟು ಸಂದರ್ಭಗಳಲ್ಲಿ, ದುಷ್ಕರ್ಮಿಗಳು ಪ್ರತಿಸ್ಪಂದಕರ ಲೈಂಗಿಕ ಚಿತ್ರಗಳನ್ನು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಬಿಡುಗಡೆ ಮಾಡುವುದಾಗಿ ಬೆದರಿಸಿದರು, ಹಾಗೂ ಮತ್ತೊಂದು ಮೂರರಲ್ಲಿ ಒಂದರಷ್ಟು ಸಂದರ್ಭಗಳಲ್ಲಿ, ದುಷ್ಕರ್ಮಿಗಳು ವ್ಯೆಯಕ್ತಿಕ ಮಾಹಿತಿಯನ್ನು ಹೆಚ್ಚು ವ್ಯಾಪಕವಾಗಿ ಬಿಡುಗಡೆ ಮಾಡುವುದಾಗಿ ಬೆರಿಸಿದರು. ಎಲ್ಲಾ ಪ್ರಕರಣಗಳಲ್ಲಿ, ಅಪ್ರಾಪ್ತ ವಯಸ್ಸಿನ ಹದಿಹರೆಯದವರ ಬೇಡಿಕೆಗಳು Gen Z ಯುವ ವಯಸ್ಕರ ಬೇಡಿಕೆಗಳಿಗಿಂತ ಹೆಚ್ಚಾಗಿರುತ್ತದೆ. (ವಿವರಗಳಿಗಾಗಿ ನಕ್ಷೆಯನ್ನು ನೋಡಿ).

ಉತ್ತಮ ಸುದ್ದಿಗಳ ವಿಷಯದಲ್ಲಿ, ಲೈಂಗಿಕ ದೌರ್ಜನ್ಯದ ಸುಲಿಗೆಗಳಿಗೆ ಪ್ರತಿಕ್ರಿಯೆಯಾಗಿ ಸಂತ್ರಸ್ತರ 85% ರಷ್ಟು ಜನರು ತಾವು ಯಾವುದದರೂ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರು, ಇದು ಕಳೆದ ವರ್ಷ
5 56% ರಷ್ಟಿತ್ತು. ವಿಸ್ತಾರ ಪ್ರಮಾಣದಲ್ಲಿ ತೆಗೆದುಕೊಳ್ಳಲಾದ ನಿವ್ವಳ ಕ್ರಮಗಳಲ್ಲಿ ಪೋಷಕರು, ಹದಿಹರೆಯದವರು ಅಥವಾ ಇತರ ನಂಬಿಕಸ್ಥ ವಯಸ್ಕರಲ್ಲಿ ಸಹಾಯಕ್ಕಾಗಿ ಕೇಳುವುದು (70%); ಘಟನೆಯನ್ನು ವರದಿ ಮಾಡುವುದು (67%); ದುಷ್ಕರ್ಮಿಯನ್ನು ನಿರ್ಬಂಧಿಸುವಂತಹ ಇತರ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದು (64%) - ಅತ್ಯಂತ ಸಾಮಾನ್ಯವಾಗಿ ತೆಗೆದುಕೊಳ್ಳಲಾಗುವ ಏಕೈಕ ಕ್ರಮ; ಖಾತೆಗಳಲ್ಲಿ ಭದ್ರತಾ ಕ್ರಮಗಳನ್ನು ನವೀಕರಿಸುವುದು; ಹಾಗೂ ಖಾತೆಗಳನ್ನು ಮುಚ್ಚುವುದು ಕೂಡ ಸೇರಿವೆ. ಆದಾಗ್ಯೂ, 18% ಜನರು ತಾವು ಆ ಘಟನೆಯನ್ನು ತಮ್ಮಷ್ಟಕ್ಕೆ ಇರಿಸಿಕೊಂಡರು ಅಥವಾ ಅದರ ಬಗ್ಗೆ ಏನೂ ಕ್ರಮ ಕೈಗೊಳ್ಳಲಿಲ್ಲ (8%) ಎಂದು ಹೇಳಿದರು,
Snap ನಲ್ಲಿ ನಾವು ವರದಿಮಾಡುವುದರ ಕುರಿತಾಗಿ ಅಭ್ಯಾಸಗಳನ್ನು ಬದಲಾಯಿಸಲು ಪ್ರಯತ್ನಿಸುತ್ತೇವೆ ಹಾಗೂ ಹದಿಹರೆಯದವರು, ಯುವಕರು ಹಾಗೂ ನಮ್ಮ ಸಮುದಾಯದ ಎಲ್ಲಾ ಸದಸ್ಯರ ನಡುವೆ ತೊಡಗಿಸಿಕೊಳ್ಳುವಿಕೆಯನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇವೆ, ಹಾಗೂ ಆ ಕಾರಣದಿಂದ ವಿವಿಧ ವೇದಿಕೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಇಂತಹ ಪ್ರಕರಣಗಳ ಕುರಿತು ವರದಿ ಮಾಡಿರುವ ಸಂತ್ರಸ್ತರಿಗೆ ಸಂಬಂಧಿಸಿದ ಡೇಟಾದಲ್ಲಿ ನಾವು ತುಂಬಾ ಆಸಕ್ತಿ ಹೊಂದಿದ್ದೇವೆ. ನಮ್ಮ ಇತ್ತೀಚಿನ ಅಧ್ಯಯನದ ಮೂಲಕ Gen Zers ಅಲ್ಲಿ 36% ಜನರು ಇಂತಹ ಸನ್ನಿವೇಶಗಳ ಕುರಿತು ಸಂಬಂಧಿತ ವೇದಿಕೆಗೆ ವರದಿ ಮಾಡಿರುವುದಾಗಿ, 30% ಜನರು ನೇರ ಸಂಪರ್ಕ ದೂರವಾಣಿಗೆ ವರದಿ ಮಾಡಿರುವುದಾಗಿ, ಹಾಗೂ 27% ಜನರು ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಿರುವುದಾಗಿ ಕಂಡುಬಂದಿದೆ. ವರದಿ ಮಾಡಲಾಗುವ ಈ ಎಲ್ಲಾ ಶೇಕಡಾವಾರುಗಳು 2023 ರಿಂದ ಏರಿಕೆ ಕಂಡಿವೆ.
Snap ನ ನಿರಂತರ ಬದ್ಧತೆ
Snap ನಮ್ಮ ವೇದಿಕೆಯಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಕಳೆದ ಎರಡು ವರ್ಷಗಳಿಂದ ಹೋರಾಡುತ್ತ ಬಂದಿದೆ. ನಾವು ಪ್ರಮುಖವಾಗಿ ಅಗತ್ಯವಿರುವ ನಿರ್ಬಂಧನಾ ಮತ್ತು ವರದಿ ಮಾಡುವ ಸಾಧನಗಳನ್ನು ಎಂದಿಗೂ ಲಭ್ಯಗೊಳಿಸಿದ್ದೇವೆ. ಕಳೆದ ವರ್ಷ, ನಾವು ಒಂದು ಮೀಸಲು ಲೈಂಗಿಕ ದೌರ್ಜನ್ಯದ ವರದಿ ಮಾಡುವ ಕಾರಣವನ್ನು, ಹಾಗೂ ಅದರೊಂದಿಗೆ ಹೊಸದಾದ ಆ್ಯಪ್‌ನಲ್ಲಿನ ಜಾಗೃತಿ ಮೂಡಿಸುವ ಮತ್ತು ಶೈಕ್ಷಣಿಕ ಸಂಪನ್ಮೂಲಗಳನ್ನು ಸೇರಿಸಿದೆವು. ಈ ವರ್ಷ, ನಾವು ಹದಿಹರೆಯದವರಿಗಾಗಿ ಮತ್ತು ಯುವ ಜನರಿಗಾಗಿ ಅನುಮಾನಿತ ಸ್ನೇಹದ ವಿನಂತಿಗಳ ಕುರಿತು ಎಚ್ಚರಿಕೆಗಳನ್ನು ನೀಡಲು ನವೀಕೃತ ಆ್ಯಪ್‌ನಲ್ಲಿನ ಎಚ್ಚರಿಕೆಗಳನ್ನು ನೀಡುವ ಮೂಲಕ ಈ ಪ್ರಯತ್ನವನ್ನು ಮುಂದುವರಿಸಿದ್ದೇವೆ. ನಾವು ನಿಯತಕ್ರಮದ ಅನುಸಾರವಾಗಿ ನಮ್ಮ ಪೋಷಕರ ಮೇಲ್ವಿಚಾರಣಾ ಸಾಧನಗಳ ಗುಚ್ಛವಾಗಿರುವ ಕೌಟುಂಬಿಕ ಕೇಂದ್ರಕ್ಕೆ ಹೊಸ ಕ್ರಿಯಾತ್ಮಕತೆಗಳನ್ನು ಸೇರಿಸುತ್ತಿರುತ್ತೇವೆ, ಈ ಸಾಧನಗಳ ಗುಚ್ಛವನ್ನು ಹದಿಹರೆಯದವರು, ಪೋಷಕರು, ಆರೈಕೆ ನೀಡುವವರು ಮತ್ತು ಇತರ ನಂಬಿಕಸ್ಥ ವಯಸ್ಕರ ನಡುವೆ Snapchat ನಲ್ಲಿ ಮತ್ತು ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಉಳಿಯುವುದರ ಕುರಿತಾಗಿ ಸಂಭಾಷಣೆಗಳನ್ನು ಪ್ರಾರಂಭಿಸುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ.
ಯುವಜನರು ಲೈಂಗಿಕ ದೌರ್ಜನ್ಯದ ಅಪಾಯದ ಬಗ್ಗೆ ಹೆಚ್ಚು ತಿಳಿದಿರುತ್ತಾರೆಂದು ಹಾಗೂ ನಮ್ಮ ಆ್ಯಪ್‌ನಲ್ಲಿನ ಎಚ್ಚರಿಕೆಗಳು ಸಹಾಯ ಮಾಡುತ್ತಿವೆ ಎಂದು ಉಪಾಖ್ಯಾನದ ಪ್ರತಿಕ್ರಿಯೆಯು ಸೂಚಿಸುತ್ತದೆ. "ಕೇವಲ ಯೋಚಿಸಲು ಬಳಸುವ ಆ ಒಂದು ಕ್ಷಣದ ವಿರಾಮವು ನಿಜಕ್ಕೂ ದೊಡ್ಡ ವ್ಯತ್ಯಾಸವನ್ನು ಮಾಡಬಲ್ಲದು," ಎಂದು ಹದಿಹರೆಯದವರನ್ನು ಉಲ್ಲೇಖಿಸಿ ಐರೋಪ್ಯ ಸರ್ಕಾರೇತರ ಸಂಸ್ಥೆಯ ನಾಯಕರೊಬ್ಬರು ಗಮನಿಸಿದರು.
ಲೈಂಗಿಕ ದೌರ್ಜನ್ಯದ ಅಪಾಯವನ್ನು ಅದು ಹಿಡಿತ ಸಾಧಿಸುವ ಮೊದಲೇ ಅಳಿಸಿ ಹಾಕುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿ ಮುಂದುವರಿದಿದೆ, ಆದರೆ ಇವುಗಳು ಸಂಪೂರ್ಣ ಸಮಾಜದ ಸಮಸ್ಯೆಗಳಾಗಿವೆ ಹಾಗೂ ವ್ಯಾಪಕ ಶ್ರೇಣಿಯ ಪಾಲುದಾರರು ಮತ್ತು ಕ್ಷೇತ್ರಗಳ - ತಂತ್ರಜ್ಞಾನ ವೇದಿಕೆಗಳು ಮತ್ತು ಸೇವೆಗಳು, ಕಾನೂನು ಜಾರಿ ಸಂಸ್ಥೆಗಳು, ಪೋಷಕರು, ಆರೈಕೆದಾರರು, ಶಿಕ್ಷಕರು ಮತ್ತು ಯುವ ಜನರ - ಸಕ್ರಿಯ ತೊಡಗಿಸಿಕೊಳ್ಳುವಿಕೆಯ ಅಗತ್ಯವಿರುತ್ತದೆ. ನಾವು Tech Coalition ಮತ್ತು ಅದರ ಸದಸ್ಯರಾದ ಕಾಣೆಯಾದ ಮತ್ತು ಶೋಷಿತ ಮಕ್ಕಳಿಗಾಗಿ ರಾಷ್ಟ್ರೀಯ ಕೇಂದ್ರ, Thorn, ನಮ್ಮ ಸುರಕ್ಷತಾ ಸಲಹಾ ಮಂಡಳಿಯ ಸದಸ್ಯರು ಮತ್ತು ಇತರರಿಂದ ಮುಂದುವರಿಯುತ್ತಿರುವ ಸಹಯೋಗ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಶ್ಲಾಘಿಸುತ್ತೇವೆ, ಹಾಗೂ ವಿವಿಧ ಪ್ಲ್ಯಾಟ್‌ಫೊರ್ಮ್‌ಗಳಾದ್ಯಂತದ ಸಂಶೋಧನೆಯ ಇತ್ತೀಚಿನ ಕಂತು ಬಹಳಷ್ಟು ಜನರಿಗೆ ತಾಜಾ ಒಳನೋಟಗಳನ್ನು ಒದಗಿಸುತ್ತದೆ ಎಂದು ಆಶಿಸುತ್ತೇವೆ. ಲೈಂಗಿಕ ದೌರ್ಜನ್ಯದ ಮತ್ತು ಇತರ ಸಂಭಾವ್ಯ ಆನ್‌ಲೈನ್ ಅಪಾಯಗಳಿಂದ ಜನರನ್ನು ರಕ್ಷಿಸುವ ಸಲುವಾಗಿ ನಾವೆಲ್ಲಾ ಪ್ರಯತ್ನಿಸುವ ನಿಟ್ಟಿನಲ್ಲಿ ನಾವು ಸಂಶೋಧನೆ, ಕಲಿಕೆ ಮತ್ತು ಹೂಡಿಕೆಗಳಿಗಾಗಿ ಹೆಚ್ಚುವರಿ ಅವಕಾಶಗಳಿಗಾಗಿ ಎದುರುನೋಡುತ್ತಿರುತ್ತೇವೆ.