Snap Values
ಸಮುದಾಯ ಮಾರ್ಗಸೂಚಿಗಳು

ದ್ವೇಷಮಯ ವಿಷಯ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ

ಸಮುದಾಯದ ಮಾರ್ಗಸೂಚಿಗಳ ವಿವರಣಾ ಸರಣಿ

ನವೀಕರಿಸಲಾದ ದಿನಾಂಕ: ಫೆಬ್ರವರಿ 2025

ಮೇಲ್ನೋಟ

ಭಯೋತ್ಪಾದನೆ ಅಥವಾ ಹಿಂಸಾತ್ಮಕ ಉಗ್ರವಾದವನ್ನು ಬೆಂಬಲಿಸುವ ದ್ವೇಷಮಯ ಕಂಟೆಂಟ್‌ ಮತ್ತು ಚಟುವಟಿಕೆಗಳಿಗೆ Snapchat ನಲ್ಲಿ ಜಾಗವಿಲ್ಲ. Snapchatter ಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಬೆಂಬಲಿಸುವ ಮತ್ತು ಆದ್ಯತೆ ನೀಡುವ ವಾತಾವರಣವನ್ನು ರಚಿಸಲು ಹಾಗೂ ಹಿಂಸೆ ಮತ್ತು ತಾರತಮ್ಯದಿಂದ ಸಮುದಾಯಗಳನ್ನು ರಕ್ಷಿಸಲು ಸಹಾಯ ಮಾಡುವುದಕ್ಕಾಗಿ ನಮ್ಮ ನೀತಿಗಳು ಕಾರ್ಯನಿರ್ವಹಿಸುತ್ತವೆ.


ದ್ವೇಷಮಯ ಭಾಷಣ ಅಥವಾ ದ್ವೇಷದ ಸಂಕೇತಗಳು ಸೇರಿದಂತೆ, ದ್ವೇಷಮಯ ನಡವಳಿಕೆಗಳಲ್ಲಿ ತೊಡಗುವುದು ಎಂದಿಗೂ ಸ್ವೀಕಾರಾರ್ಹವಲ್ಲ. ಅದೇ ರೀತಿಯಲ್ಲಿ, ಭಯೋತ್ಪಾದನೆ ಅಥವಾ ಹಿಂಸಾತ್ಮಕ ತೀವ್ರವಾದವನ್ನು ಬೆಂಬಲಿಸುವ ಅಥವಾ ಅವುಗಳನ್ನು ಪ್ರತಿಪಾದಿಸುವ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಹಾಗೂ ಅವಶ್ಯಕ ಎನಿಸಿದಲ್ಲಿ, ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಲಾಗಬಹುದು.


ಈ ನೀತಿಗಳನ್ನು ಜವಾಬ್ದಾರಿಯುತವಾಗಿ ಜಾರಿಗೊಳಿಸಲಾಗುವುದೆಂದು ಖಚಿತಪಡಿಸಿಕೊಳ್ಳುವುದಕ್ಕೆ ನೆರವಾಗಲು, ನಮ್ಮ ತಂಡಗಳು ನಾಗರಿಕ ಹಕ್ಕುಗಳ ಸಂಘಟನೆಗಳು, ಮಾನವ ಹಕ್ಕುಗಳ ತಜ್ಞರು, ಕಾನೂನು ಜಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಸುರಕ್ಷತಾ ಪ್ರತಿಪಾದಕರ ಪರಿಣತಿ ಮತ್ತು ಕಾರ್ಯಗಳ ಸಹಾಯವನ್ನು ಪಡೆಯುತ್ತವೆ. ನಾವು ನಿಯಮಿತವಾಗಿ ಕಲಿಯುತ್ತಿದ್ದೇವೆ ಮತ್ತು Snapchatter ಗಳನ್ನು ಸುರಕ್ಷಿತವಾಗಿರಿಸಲು ನಮ್ಮ ಉತ್ಪನ್ನಗಳು ಮತ್ತು ನೀತಿಗಳು ಕಾರ್ಯನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವಲ್ಲೆಲ್ಲಾ ಕ್ಯಾಲಿಬ್ರೇಟ್ ಮಾಡುತ್ತೇವೆ. ನಮಗೆ ಸಹಾಯ ಮಾಡಲು, ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದದ ವಿರುದ್ಧ ನಮ್ಮ ನೀತಿಗಳನ್ನು ಉಲ್ಲಂಘಿಸುವ ಯಾವುದೇ ದ್ವೇಷಪೂರಿತ ಕಂಟೆಂಟ್ ಅಥವಾ ಚಟುವಟಿಕೆಯನ್ನು ತಕ್ಷಣವೇ ವರದಿ ಮಾಡಲು ನಾವು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ.


ನಿಷೇಧಿತ ನಡವಳಿಕೆ

ನಾವು ಈ ಕೆಳಗಿನವುಗಳನ್ನು ನಿಷೇಧಿಸುತ್ತೇವೆ: 

  • ಭಯೋತ್ಪಾದಕ ಸಂಘಟನೆಗಳು, ಹಿಂಸಾತ್ಮಕ ತೀವ್ರವಾದಗಳು ಅಥವಾ ದ್ವೇಷ ಗುಂಪುಗಳ ಉದ್ದೇಶಗಳನ್ನು ಮುನ್ನಡೆಸಲು Snapchat ನ ಬಳಕೆ.

  • ಹಿಂಸಾತ್ಮಕ ತೀವ್ರವಾದ, ಭಯೋತ್ಪಾದನೆ ಅಥವಾ ದ್ವೇಷವನ್ನು ವೈಭವೀಕರಿಸುವ, ಹೊಗಳುವ, ಬೆಂಬಲಿಸುವ ಅಥವಾ ಪ್ರತಿಪಾದಿಸುವ ಕಂಟೆಂಟ್.

  • ವ್ಯಕ್ತಿಗಳು ಅಥವಾ ಗುಂಪುಗಳು ಸೈದ್ಧಾಂತಿಕ ಗುರಿಗಳನ್ನು ಪ್ರತಿಪಾದಿಸುವುದಕ್ಕಾಗಿ ಭಯೋತ್ಪಾದನೆ ಅಥವಾ ಇತರ ಹಿಂಸಾತ್ಮಕ, ಅಪರಾಧೀ ಕೃತ್ಯಗಳನ್ನು ಉತ್ತೇಜಿಸುವ ಎಲ್ಲಾ ಕಂಟೆಂಟ್‌ಗಳು. ವಿಶ್ವಾಸಾರ್ಹ, ತೃತೀಯ-ಪಕ್ಷಗಳ ತಜ್ಞರು ಉಲ್ಲೇಖಿಸುವಂತಹ--ವಿದೇಶಿ ಭಯೋತ್ಪಾದನಾ ಸಂಘಟನೆಗಳು ಅಥವಾ ತೀವ್ರವಾದ ದ್ವೇಷ ಬಿತ್ತುವ ಗುಂಪುಗಳನ್ನು, ಹಾಗೂ ಅಂತಹ ಸಂಘಟನೆಗಳು ಅಥವಾ ಹಿಂಸಾತ್ಮಕ ಉಗ್ರವಾದಿ ಚಟುವಟಿಕೆಗಳಿಗಾಗಿ ನೇಮಕಾತಿಯನ್ನು ಪ್ರಚಾರ ಮಾಡುವ ಅಥವಾ ಬೆಂಬಲಿಸುವ ಯಾವುದೇ ಕಂಟೆಂಟ್‌ಗಳನ್ನು ಸಹ ಈ ನಿಯಮಗಳು ನಿಷೇಧಿಸುತ್ತವೆ.

  • ನಿಂದಿಸುವ, ಅವಹೇಳನ ಮಾಡುವ, ಅವಮಾನಿಸುವ, ತಾರತಮ್ಯ ಅಥವಾ ಹಿಂಸೆಯನ್ನು ಪ್ರಚೋದಿಸುವ ಅಥವಾ ಜನಾಂಗ, ಬಣ್ಣ, ಜಾತಿ, ಕುಲ, ರಾಷ್ಟ್ರೀಯ ಮೂಲ, ಧರ್ಮ, ಲೈಂಗಿಕ ಒಲವು, ಲಿಂಗ ಗುರುತು ಅಥವಾ ಮರುನಿಯೋಜನೆ, ಅಂಗವೈಕಲ್ಯ ಅಥವಾ ಸೇನಾ ನಿವೃತ್ತರ ಸ್ಥಾನಮಾನ, ವಲಸೆ ಸ್ಥಾನಮಾನ, ವಯಸ್ಸು ಅಥವಾ ಗರ್ಭಾವಸ್ಥೆಯ ಸ್ಥಾನಮಾನದ ಆಧಾರದಲ್ಲಿ ದ್ವೇಷವನ್ನು ಪ್ರಚೋದಿಸುವ ದ್ವೇಷ ಭಾಷಣ ಅಥವಾ ಕಂಟೆಂಟ್. ಈ ನಿಯಮಗಳು ಉದಾಹರಣೆಗಾಗಿ ಕುಲದ, ಜನಾಂಗೀಯ, ಸ್ತ್ರೀದ್ವೇಷದ ಅಥವಾ ಸಲಿಂಗ ದ್ವೇಷದ ನಿಂದನೆಗಳನ್ನು ನಿಷೇಧಿಸುತ್ತವೆ. ಅವುಗಳು ಯಾವುದೇ ಸಂರಕ್ಷಿತ ಗುಂಪನ್ನು ಅಪಹಾಸ್ಯ ಮಾಡುವ ಅಥವಾ ತಾರತಮ್ಯ ಎಸಗಲು ಕರೆ ನೀಡುವಂತಹ ಮೀಮ್‌ಗಳನ್ನು ಹಾಗೂ ಉದ್ದೇಶಪೂರ್ವಕವಾಗಿ ಅವರ ಪೂರ್ವಜನ್ಮಾಂತರ ಹೆಸರನ್ನು ಬಳಸುವುದನ್ನು ಅಥವಾ ಅನ್ಯ ಲಿಂಗದ ಉಲ್ಲೇಖದೊಂದಿಗೆ ಹೀಯಾಳಿಸುವುದನ್ನು ಕೂಡ ನಿಷೇಧಿಸುತ್ತವೆ. ಮಾನವ ದುರಂತಗಳನ್ನು (ನರಮೇಧ, ವರ್ಣಭೇದ ನೀತಿ ಅಥವಾ ಗುಲಾಮಗಿರಿಯಂತಹವು) ಎಸಗಿದವರನ್ನು ಸಮರ್ಥಿಸುವುದು--ಅಥವಾ ಅವುಗಳ ಸಂತ್ರಸ್ತರನ್ನು ಅವಮಾನಿಸುವುದು--ಕೂಡ ದ್ವೇಷದ ಭಾಷಣವೆಂದು ಪರಿಗಣಿಸಲ್ಪಡುತ್ತದೆ. ಇತರ ನಿಷೇಧಿತ ದ್ವೇಷಮಯ ಕಂಟೆಂಟ್‌ಗಳಲ್ಲಿ ದ್ವೇಷದ ಸಂಕೇತಗಳ ಬಳಕೆ, ಅಂದರೆ ಇತರರ ವಿರುದ್ಧ ದ್ವೇಷ ಅಥವಾ ತಾರತಮ್ಯವನ್ನು ಪ್ರತಿನಿಧಿಸುವ ಉದ್ದೇಶ ಹೊಂದಿರುವ ಯಾವುದೇ ಚಿತ್ರಣಗಳೂ ಸೇರಿವೆ.

ಬಳಕೆದಾರರನ್ನು ರಕ್ಷಿಸಲು ನಮ್ಮ ಪ್ರಯತ್ನಗಳು


ಬಳಕೆದಾರರನ್ನು ರಕ್ಷಿಸುವ ನಮ್ಮ ವಿಧಾನದಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯನ್ನು ಸಮತೋಲನಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಬಳಕೆದಾರರು ಸಾರ್ವಜನಿಕ ವೇದಿಕೆಗಳಲ್ಲಿ (ಉದಾಹರಣೆಗೆ ಸ್ಪಾಟ್‌ಲೈಟ್, ಸಾರ್ವಜನಿಕ ಕಥೆಗಳು ಮತ್ತು ಮ್ಯಾಪ್‌ಗಳು) ದ್ವೇಷ, ಭಯೋತ್ಪಾದನೆ ಅಥವಾ ಹಿಂಸಾತ್ಮಕ ತೀವ್ರವಾದಕ್ಕೆ ಒಡ್ಡಿಕೊಳ್ಳುವುದನ್ನು ತಡೆಯಲು ನಾವು ಸ್ವಯಂಚಾಲಿತಗೊಳಿಸಿದ ಪರಿಕರಗಳು ಮತ್ತು ಮಾನವರ ವಿಮರ್ಶೆಯ ಸಂಯೋಜನೆಯನ್ನು ಬಳಸುತ್ತೇವೆ.


ಭಯೋತ್ಪಾದಕ ಅಥವಾ ಹಿಂಸಾತ್ಮಕ ತೀವ್ರವಾದದ ಘಟಕಗಳ ಉದ್ದೇಶಗಳನ್ನು ಬೆಂಬಲಿಸುತ್ತದೆ, ವೈಭವೀಕರಿಸುತ್ತದೆ ಅಥವಾ ಹೆಚ್ಚಿಸುತ್ತದೆ ಎಂದು ನಾವು ಭಾವಿಸಲು ಕಾರಣವಿರುವ ವಿಷಯವನ್ನು ಗುರುತಿಸಲು Snap ಸ್ವಯಂಚಾಲಿತಗೊಳಿಸಿದ ಪರಿಕರಗಳನ್ನು ಬಳಸುತ್ತದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಜಾಗತಿಕ ಜಾಲತಾಣ ವೇದಿಕೆಯ (GIFCT) ಸದಸ್ಯರಾಗಿ, ನಾವು ತಿಳಿದಿರುವ ಭಯೋತ್ಪಾದಕ ಮತ್ತು ಹಿಂಸಾತ್ಮಕ ತೀವ್ರವಾದದ ವಿಷಯವನ್ನು ಗುರುತಿಸಲು ಮತ್ತು ತೆಗೆದುಹಾಕಲು ಸಹಾಯ ಮಾಡುವುದಕ್ಕಾಗಿ GIFCT ಸಂಪನ್ಮೂಲಗಳನ್ನು ಬಳಸುತ್ತೇವೆ. ಉದಯೋನ್ಮುಖ ಪ್ರವೃತ್ತಿಗಳ ಕುರಿತು ತಿಳಿದುಕೊಂಡಿರಲು ಮತ್ತು ಅಂತಹ ವಿಷಯಗಳನ್ನು ನಿಖರವಾಗಿ ಗುರುತಿಸಿ ಕ್ರಮ ಕೈಗೊಳ್ಳಲು, ನಾವು ತೃತೀಯ ಪಕ್ಷದ ಮಾರಾಟಗಾರರು ಮತ್ತು ತಜ್ಞರೊಂದಿಗೆ ಸಹ ಕೆಲಸ ಮಾಡುತ್ತೇವೆ. ಹಿಂಸಾತ್ಮಕ ತೀವ್ರವಾದದ ಜಾಲಗಳನ್ನು ಗುರುತಿಸಲು ಮತ್ತು ಅಡ್ಡಿಪಡಿಸಲು ನಾವು ಸಂಕೇತ ಆಧಾರಿತ ಪತ್ತೆಮಾಡುವಿಕೆಯ ವಿಧಾನಗಳನ್ನು ಕೂಡ ಬಳಸುತ್ತೇವೆ.


ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದಕ್ಕೆ ಸಂಬಂಧಿಸಿದ ವಿಷಯ ಹರಡುವುದನ್ನು ತಡೆಯಲು ನಾವು ಅಗತ್ಯಕ್ಕೆ ಅನುಗುಣವಾಗಿ ಕಾನೂನು ಜಾರಿ ಸಂಸ್ಥೆಗಳ ಜೊತೆಗೆ ಕೆಲಸ ಮಾಡುತ್ತೇವೆ. ಕಠಿಣ ಕಾನೂನು ಸುರಕ್ಷತೆಗಳಿಗೆ ಒಳಪಟ್ಟು ಸಂಭಾವ್ಯ ಸನ್ನಿವೇಶಗಳಿಗೆ ಪ್ರತಿಕ್ರಿಯಿಸಲು ಮೀಸಲಾದ ಮಾರ್ಗಗಳು ಸೇರಿದಂತೆ, ಜಾಗತಿಕವಾಗಿ ಕಾನೂನು ಜಾರಿ ಅಧಿಕಾರಿಗಳಿಗೆ ಸಹಾಯ ಮಾಡುವುದಕ್ಕಾಗಿ ಸ್ಥಾಪಿತ ನಿಯಮಾವಳಿಗಳನ್ನು ನಿರ್ವಹಿಸುವುದು Snap ನ ವಿಧಾನವಾಗಿದೆ. ಕಾನೂನು ಜಾರಿಗೊಳಿಸುವಿಕೆಗಾಗಿ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಬಹುದು.

ಪ್ರಮುಖ ಸಂಗತಿ

ನಾವು Snapchat ನಲ್ಲಿ ದ್ವೇಷಮಯ ಕಂಟೆಂಟ್‌, ಭಯೋತ್ಪಾದನೆ ಅಥವಾ ಹಿಂಸಾತ್ಮಕ ತೀವ್ರವಾದವನ್ನು ಸಹಿಸುವುದಿಲ್ಲ. ನಮ್ಮ ನೀತಿಗಳು, ಶಿಸ್ತುಕ್ರಮ ಜಾರಿಗೊಳಿಸುವ ಕಾರ್ಯತಂತ್ರ ಮತ್ತು ಉತ್ಪನ್ನ ವಿನ್ಯಾಸದ ಮೂಲಕ, Snapchatter ಗಳ ಸುರಕ್ಷತೆಯನ್ನು ಬೆಂಬಲಿಸುವ ಮತ್ತು ಆದ್ಯತೆ ನೀಡುವ ವಾತಾವರಣವನ್ನು ನಿರ್ವಹಿಸಲು ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ.

ನಮ್ಮ ನೀತಿಗಳನ್ನು ಉಲ್ಲಂಘಿಸುವ ಯಾವುದೇ ಕಂಟೆಂಟ್‌ಗಳನ್ನು ವರದಿ ಮಾಡುವ ಮೂಲಕ ನಮ್ಮ ಸಮುದಾಯವನ್ನು ರಕ್ಷಿಸಲು ಬಳಕೆದಾರರು ನಮಗೆ ಸಹಾಯ ಮಾಡಬಹುದು. ನಮ್ಮ ಸುರಕ್ಷತಾ ಗುರಿಗಳನ್ನು ಜವಾಬ್ದಾರಿಯುತವಾಗಿ ಮುನ್ನಡೆಸುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ಸುರಕ್ಷತಾ ಸಮುದಾಯದಾದ್ಯಂತದ ವೈವಿಧ್ಯಮಯ ನಾಯಕರೊಂದಿಗೆ ಕಾರ್ಯನಿರ್ವಹಿಸಲು ಕೂಡ ನಾವು ಬದ್ಧರಾಗಿದ್ದೇವೆ. ನಮ್ಮ ಸುರಕ್ಷತಾ ಪ್ರಯತ್ನಗಳ ಕುರಿತು ಇನ್ನಷ್ಟು ಮಾಹಿತಿಗಾಗಿ, ದಯವಿಟ್ಟು ನಮ್ಮ ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಿ.