ಆಸ್ಟ್ರೇಲಿಯಾ ಗೌಪ್ಯತಾ ಸೂಚನೆ
ಜಾರಿ ದಿನಾಂಕ: 31 ಮಾರ್ಚ್ 2025
ನಾವು ಈ ಸೂಚನೆಯನ್ನು ನಿರ್ದಿಷ್ಟವಾಗಿ ಆಸ್ಟ್ರೇಲಿಯಾದಲ್ಲಿನ ಬಳಕೆದಾರರಿಗಾಗಿ ರಚಿಸಿದ್ದೇವೆ. ಆಸ್ಟ್ರೇಲಿಯಾದಲ್ಲಿನ ಬಳಕೆದಾರರು ಗೌಪ್ಯತಾ ಕಾಯ್ದೆ 1988 ಸೇರಿದಂತೆ, ಆಸ್ಟ್ರೇಲಿಯಾದ ಕಾನೂನುಗಳ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವಂತೆ ಕೆಲವು ಗೌಪ್ಯತಾ ಹಕ್ಕುಗಳನ್ನು ಹೊಂದಿರುತ್ತಾರೆ. ನಮ್ಮ ಗೌಪ್ಯತೆಯ ತತ್ವಗಳು ಹಾಗೂ ನಾವು ಎಲ್ಲಾ ಬಳಕೆದಾರರಿಗೆ ನೀಡುವ ಗೌಪ್ಯತಾ ನಿಯಂತ್ರಣಗಳು ಈ ಕಾನೂನುಗಳಿಗೆ ಅನುಸಾರವಾಗಿವೆ—ಈ ಸೂಚನೆಯು ನಾವು ಆಸ್ಟ್ರೇಲಯಾಗೆ ನಿರ್ದಿಷ್ಟವಾದ ಅಗತ್ಯಗಳನ್ನು ಸೇರಿಸಿಕೊಂಡಿದ್ದೇವೆ ಎನ್ನುವುದನ್ನು ಖಚಿತಪಡಿಸುತ್ತದೆ. ಉದಾಹರಣೆಗಾಗಿ, ಎಲ್ಲ ಬಳಕೆದಾರರು ತಮ್ಮ ಡೇಟಾದ ಪ್ರತಿಗಾಗಿ ವಿನಂತಿಸಬಹುದು, ಅಳಿಸುವಿಕೆಯನ್ನು ವಿನಂತಿಸಬಹುದು ಮತ್ತು ಆ್ಯಪ್‌ನಲ್ಲಿ ತಮ್ಮ ಗೌಪ್ಯತಾ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಬಹುದು. ಪೂರ್ಣ ಚಿತ್ರಣಕ್ಕಾಗಿ, ನಮ್ಮ ಗೌಪ್ಯತಾ ನೀತಿಯನ್ನು ಪರಿಶೀಲಿಸಿ.
ಪ್ರವೇಶಿಸುವಿಕೆ, ಅಳಿಸುವಿಕೆ, ತಿದ್ದುಪಡಿ ಮಾಡುವಿಕೆ ಮತ್ತು ವರ್ಗಾಯಿಸುವಿಕೆಯ ಹಕ್ಕುಗಳು
ನೀವು ಗೌಪ್ಯತಾ ನೀತಿಯ ನಿಮ್ಮ ಮಾಹಿತಿಯ ಮೇಲಿನ ನಿಯಂತ್ರಣ ವಿಭಾಗದಲ್ಲಿ ವಿವರಿಸಲಾಗಿರುವಂತೆ ನಿಮ್ಮ ಪ್ರವೇಶ, ತಿದ್ದುಪಡಿ ಮತ್ತು ರದ್ದುಮಾಡುವಿಕೆಯ ಹಕ್ಕುಗಳನ್ನು ಚಲಾಯಿಸಬಹುದು.
ಅಂತಾರಾಷ್ಟ್ರೀಯ ಡೇಟಾ ವರ್ಗಾವಣೆಗಳು
ಯುನೈಟೆಡ್ ಸ್ಟೇಟ್ಸ್ ಮತ್ತು ನೀವು ವಾಸಿಸುವ ಸ್ಥಳದಿಂದ ಹೊರಗೆ ಇತರ ದೇಶಗಳಿಂದ ನಿಮ್ಮ ವೈಯಕಿಕ್ತ ಮಾಹಿತಿಯನ್ನು ನಾವು ಸಂಗ್ರಹಿಸಬಹುದು, ವರ್ಗಾಯಿಸಬಹುದು ಮತ್ತು ಶೇಖರಿಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು. ಮಾಹಿತಿಯನ್ನು ಮೂರನೇ ಪಕ್ಷಕಾರರೊಂದಿಗೆ ಹಂಚಿಕೊಳ್ಳುವ ವರ್ಗಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಇಲ್ಲಿಕಂಡುಕೊಳ್ಳಬಹುದು.
ದೂರುಗಳು ಅಥವಾ ಪ್ರಶ್ನೆಗಳಿವೆಯೇ?
ನಿಮ್ಮ ಯಾವುದೇ ಪ್ರಶ್ನೆಗಳನ್ನು ನಮ್ಮ ಗೌಪ್ಯತೆ ಬೆಂಬಲ ತಂಡಕ್ಕೆ ಅಥವಾ ಡೇಟಾ ಸಂರಕ್ಷಣಾ ಅಧಿಕಾರಿಯವರಿಗೆ ಸಲ್ಲಿಸಲು dpo [at] snap [dot] com ಗೆ ಇಮೇಲ್ ಕಳುಹಿಸಬಹುದು ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ.