U.S. ಫೆಂಟಾನಿಲ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ನಮ್ಮ ನಿರಂತರ ಕೆಲಸದ ಕುರಿತ ಅಪ್‌ಡೇಟ್

ಜೂನ್ 9, 2022

ಕಳೆದ ವರ್ಷ, ಫೆಂಟಾನಿಲ್‌ನ ಅಪಾಯಗಳ ಕುರಿತ ಯುವಜನರ ಜಾಗೃತಿಯನ್ನು ಮತ್ತು ವಿಸ್ತೃತವಾದ ನಕಲಿ ಔಷಧಗಳ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿ, ನಾವು ಯುವ ಅಮೆರಿಕನ್ನರ ಸಮೀಕ್ಷೆ ನಡೆಸಿದೆವು ಮತ್ತು ಸುಮಾರು ಅರ್ಧದಷ್ಟು ಮಂದಿ (46%) ತಮ್ಮ ಮಾನಸಿಕ ಒತ್ತಡದ ಮಟ್ಟವನ್ನು 10 ರಲ್ಲಿ 7 ಅಥವಾ ಅದಕ್ಕಿಂತ ಹೆಚ್ಚಿನದು ಎಂದು ರೇಟ್‌ ಮಾಡಿದ್ದಾರೆ ಎಂದು ಕಂಡುಕೊಂಡೆವು. 10 ರಲ್ಲಿ ಸುಮಾರು 9 (86%) ಪ್ರತಿಕ್ರಿಯೆದಾರರು ತಮ್ಮ ವಯಸ್ಸನ್ನು ಪರವಶರಾಗಿ ಒಪ್ಪಿಕೊಂಡರು.

ಈಗಿನ ಮಟ್ಟಿಗೆ, ಅಮೆರಿಕಾವು ಯುವ ಜನರಲ್ಲಿ ಒಂದು ಗಮನಾರ್ಹ ಮಾನಸಿಕ ಅಸ್ವಸ್ಥತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ ಮತ್ತು ದಾಖಲಿಸಲ್ಪಟ್ಟಿದೆ. 2021 ರಲ್ಲಿ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೊಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, 37% ರಷ್ಟು ಪ್ರೌಢ ಶಾಲಾ ಮಕ್ಕಳು ಕಳಪೆ ಮಾನಸಿಕ ಆರೋಗ್ಯ ಹೊಂದಿದ್ದಾರೆಂದು ವರದಿಯಾಗಿದ್ದು, ಅವರಲ್ಲಿ 44% ಮಕ್ಕಳು ಕಳೆದ ವರ್ಷದ ಅವಧಿಯಲ್ಲಿ ನಿರಂತರವಾಗಿ ಬೇಸರದ ಅಥವಾ ಹತಾಶೆಯ ಮನೋಭಾವ ಹೊಂದಿದ್ದರೆಂದು ವರದಿಯಾಗಿದೆ.

ಭಾವನಾತ್ಮಕ ಕ್ಷೇಮಕ್ಕಾಗಿ ಅಸಾಧಾರಣ ಸವಾಲುಗಳನ್ನು ಹೊಂದಿರುವ ಈ ಯುಗವು ಹದಿಹರೆಯದವರನ್ನು ಒಳಗೊಂಡು ಯುವ ಜನತೆಯ ಸಾಂಕ್ರಾಮಿಕತೆಗೆ ಕೊಡುಗೆ ನೀಡಿದ್ದು, ಅವರು ಸಮರ್ಥ ನಿರ್ವಹಣಾ ವಿಧಾನವಾಗಿ ಅಕ್ರಮ ಮಾದಕ-ದ್ರವ್ಯಗಳತ್ತ ತಿರುಗುತ್ತಿದ್ದಾರೆ. ದುರಂತವೇನೆಂದರೆ, ಮಾದಕ-ದ್ರವ್ಯಗಳ ಕಪಿಮುಷ್ಟಿಗಳು ನಿಭಾಯಿಸುವ ವಿಧಾನಗಳಿಗಾಗಿ ಹುಡುಕುತ್ತಿರುವ ಯುವ ಜನತೆಯ ಮೇಲೆ ಹಿಡಿತ ಸಾಧಿಸುತ್ತಿವೆ, ದೇಶದಾದ್ಯಂತ ಕಡಿಮೆ ಬೆಲೆಯಲ್ಲಿ ಪ್ರವಾಹದೋಪಾದಿಯಲ್ಲಿ ಹರಡುತ್ತಿವೆ, ನಕಲಿ ಪ್ರಿಸ್ಕ್ರಿಪ್ಷನ್ ಮಾತ್ರೆಗಳು ಫೆಂಟಾನೈ‌ಲ್ ಜೊತೆಗೆ ಹೆಚ್ಚು ವಿಷಕಾರಿಯಾಗಿವೆ, ಪರಿಣಾಮಕಾರಿಯಾದ ಸಿಂಥೆಟಿಕ್ ಒಪಿಯಾಯ್ಡ್ ಇದು ಮಾರ್ಫೈನ್ ಗಿಂತಲೂ 50-100 ಪಟ್ಟು ಹೆಚ್ಚು ಪ್ರಭಾವಪೂರ್ಣವಾಗಿದೆ. ಅಮೆರಿಕಾದ ಡ್ರಗ್ ಎನ್ಫೊರ್ಸ್‌ಮೆಂಟ್ ಏಜೆನ್ಸಿಯ ಪ್ರಕಾರ, ಪರೀಕ್ಷಿಸಲ್ಪಟ್ಟ 40% ಗಿಂತಲೂ ಹೆಚ್ಚು ಅಕ್ರಮ ಮಾತ್ರೆಗಳು ಫೆಂಟನೈಲ್‌ನ ಪ್ರಭಾವಪೂರ್ಣವಾದ ವಿಷಕಾರಿ ಪಮಾಣವ್ರನ್ನು ಒಳಗೊಂಡಿವೆ.

ಪ್ರಿಸ್ಕ್ರಿಪ್ಷನ್ ಔಷಧದ ದುರ್ಬಳಕೆಯು ತಮ್ಮ ಮನಃಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಅಥವಾ ಇತರೆ ಉದ್ದೇಶಗಳಿಗಾಗಿ ಪ್ರಿಸ್ಕ್ರಿಪ್ಷನ್ ಔಷಧಗಳನ್ನು ಬಳಸಿ ಆರರಲ್ಲಿ ಒಂದಕ್ಕಿಂತಲೂ ಹೆಚ್ಚು ಹದಿಹರೆಯದವರಲ್ಲಿ ಔಷಧ ದುರ್ಬಳಕೆಯ ವಿಧಾನವು ಅತ್ಯಂತ ವೇಗವಾಗಿ ಹರಡುತ್ತಿದೆ ಎಂಬುದನ್ನು ಅಧ್ಯಯನ ವರದಿಗಳು ತೋರಿಸುತ್ತವೆ. ಅಮೆರಿಕಾದಾದ್ಯಂತ ಫೆಂಟನೈಲ್ ತೆಗೆದುಕೊಳ್ಳುವುದರಿಂದ ಮರಣ ಹೊಂದುತ್ತಿರುವ ಯುವ ಅಮೆರಿಕನ್ನರ ಸಂಖ್ಯೆಯು ಗಣನೀಯವಾಗಿ ಬೆಳೆಯುತ್ತಿದ್ದು, ಈ ಮಾತ್ರೆಯನ್ನು ಸುರಕ್ಷಿತ, ನ್ಯಾಯಸಮ್ಮತ ಪ್ರಿಸ್ಕ್ರಿಪ್ಷನ್ ಮಾತ್ರೆ ಎಂದು ನಂಬಲಾಗಿತ್ತು.

ನಮ್ಮ ಸ್ವಂತ ಅಧ್ಯಯನದ ಪ್ರಕಾರ, 13-24ರ ವಯಸ್ಸಿನ ಸುಮಾರು 15% ರಷ್ಟು ಮಂದಿಯು ಪ್ರಿಸ್ಕ್ರಿಪ್ಷನ್ ಔಷಧಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ಐವರಲ್ಲಿ ಒಬ್ಬರು ಹಾಗೆ ಮಾಡುವ ಆಲೋಚನೆ ಹೊಂದಿದ್ದಾರೆ, ಮತ್ತು ಯಾರೋ ಒಬ್ಬರು ಹಾಗೆ ಮಾಡಿದ್ದಾರೆ ಎಂಬುದು 40% ಜನರಿಗೆ ತಿಳಿದಿದೆ. ಆತಂಕ ಮತ್ತು ಒತ್ತವವನ್ನು ನಿಭಾಯಿಸುವಿಕೆಯು ಅವರು ಮತ್ತು ಅವರ ಜೊತೆಗಾರರು ಮಾತ್ರೆಗಳತ್ತ ಆಕರ್ಷಿತರಾಗಲು ಕಾರಣವಾಗಿದೆ ಎಂದು ಶೇಕಡಾ ಎಂಭತ್ತನಾಲ್ಕು ಜನರು ಹೇಳುತ್ತಾರೆ.

Snap ನಲ್ಲಿ, ನಾವು ಅಕ್ರಮ ಮಾದಕ ದ್ರವ್ಯಗಳ ಮಾರಾಟಕ್ಕೆ ಸಂಬಂಧಿಸಿದಂತೆ ನಮ್ಮ ಪ್ಲಾಟ್‌ಫಾರ್ಮ್‌ ಅನ್ನು ಬಳಸುವುದರಲ್ಲಿ ಶೂನ್ಯ-ಸಹಿಷ್ಣುತೆಯ ನೀತಿಯನ್ನು ಹೊಂದಿದ್ದೇವೆ ಮತ್ತು ಮೂರು ಪ್ರಮುಖ ಮಾರ್ಗಗಳಲ್ಲಿ ಫೆಂಟೊನೈಲ್ ರೋಗದ ವಿರುದ್ಧ ಗಮನವನ್ನು ಕೇಂದ್ರೀಕರಿಸಿದ್ದೇವೆ: ಈ ಅಂಶವನ್ನು ಸಕ್ರಿಯವಾಗಿ ಪತ್ತೆಹಚ್ಚುವುದಕ್ಕಾಗಿ ಮತ್ತು ನಮ್ಮ ಪ್ಲಾಟ್‌ಫಾರ್ಮ್‌ ಅನ್ನು ದುರುಪಯೋಗಪಡಿಸಿಕೊಳ್ಳುವ ಔಷಧ ಡೀಲರ್ ಗಳನ್ನು ಮುಚ್ಚುವುದಕ್ಕಾಗಿ ನಮ್ಮ ತಂತ್ರಜ್ಞಾನಗಳನ್ನು ನಿರಂತವಾಗಿ ಸುಧಾರಿಸುವ ಮೂಲಕ; ಕಾನೂನು ಜಾರಿ ಸಂಸ್ಥೆಗಳಿಗೆ ನಮ್ಮ ಬೆಂಬಲವನ್ನು ಬಲಪಡಿಸುವ ಮೂಲಕ; ಮತ್ತು ಫೆಂಟನೈಲ್‌ನ ಭೀಕರ ಅಪಾಯಗಳ ಬಗ್ಗೆ ನೇರವಾಗಿ ನಮ್ಮ ಆ್ಯಪ್‌ನಲ್ಲಿ Snapchatter ಗಳಿಗೆ ತಿಳಿಸಿಹೇಳಲು ಪರಿಣಿತ ಸಂಸ್ಥೆಗಳೊಂದಿಗೆ ಪಾಲುದಾರಿಗೆ ಹೊಂದುವ ಮೂಲಕ. ನೀವು ಇಲ್ಲಿ ಮತ್ತು ಇಲ್ಲಿ ಈ ಹಿಂದಿನ ಸಾರ್ವಜನಿಕ ನವೀಕರಣಗಳಲ್ಲಿ ನಮ್ಮ ಕಾರ್ಯತಂತ್ರದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬಹುದು.

ನಾವು ನಮ್ಮ ಮುಂದುವರಿಯುತ್ತಿರುವ ಆ್ಯಪ್ ಸಾರ್ವಜನಿಕ ಅರಿವು ಪ್ರಚಾರದ ಮೊದಲ ಹೆಜ್ಜೆಯನ್ನು ಪ್ರಾರಂಭಿಸಿ ಮತ್ತು ಎಲ್ಲಾ ದೃಷ್ಟಿಕೋನಗಳಿಂದ ಈ ಬಿಕ್ಕಟ್ಟನ್ನು ಪರಿಹರಿಸುವ ಕಾರ್ಯವನ್ನು ಮುಂದುವರಿಸುವ ಒಂದು ಅವಲೋಕನವನ್ನು ಒದಗಿಸಲು ಬಯಸಿ ಒಂದು ವರ್ಷವಾಯಿತು.

  • ನಾವು ಈ ಪ್ರಯತ್ನಗಳ ಬಗ್ಗೆ ನಮಗೆ ಸಲಹೆ ನೀಡುವಂತೆ ಫೆಡರಲ್ ಡ್ರಗ್ ಎನ್‌ಫೊರ್ಸ್‌ಮೆಂಟ್ ಏಜೆನ್ಸಿಗಳ ನಿಕಟಪೂರ್ವ ಮುಖ್ಯಸ್ಥರನ್ನು ತೊಡಗಿಸಿಕೊಂಡಿದ್ದೇವೆ ಮತ್ತು ಪ್ರತಿ-ಮಾದಕದ್ರವ್ಯಗಳಲ್ಲಿ ಪರಿಣಿತರು, ಕಾನೂನು ಜಾರಿ ಸಮುದಾಯ, ಫೆಂಟನೈಲ್ ಮತ್ತು ನಕಲಿ ಮಾತ್ರೆಗಳ ಬಗ್ಗೆ ಅರಿವನ್ನು ಹೆಚ್ಚಿಸುವಲ್ಲಿ ಗಮನವನ್ನು ಕೇಂದ್ರೀಕರಿಸುವ ಸಂಸ್ಥೆಗಳು, ಮತ್ತು ಪೋಷಕರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತೇವೆ.

  • ಕಾನೂನು ಜಾರಿ ತನಿಖೆಗಳಿಗಾಗಿ ನಮ್ಮ ಬೆಂಬಲವನ್ನು ಮತ್ತಷ್ಟು ಬಲಪಡಿಸಲು, ನಾವು ಕಳೆದ ವರ್ಷ 74% ರಷ್ಟು ನಮ್ಮ ಸ್ವಂತ ಕಾನೂನು ಜಾರಿ ಕಾರ್ಯಾಚರಣಾ ತಂಡದಲ್ಲಿ ಹೂಡಿಕೆ ಮಾಡಿದ್ದೇವೆ, ಈ ಹೊಸ ತಂಡದಲ್ಲಿ ಹಲವು ಸದಸ್ಯರು ಯುವಜನರ ಸುರಕ್ಷತೆಯಲ್ಲಿ ಅನುಭವ ಹೊಂದಿರುವ ಪ್ರಾಸಿಕ್ಯೂಟರ್ ಗಳು ಮತ್ತು ಕಾನೂನು ಜಾರಿ ಅಧಿಕಾರಿ ವೃತ್ತಿಗಳಿಂದ ನಮ್ಮ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ, ನಾವು ಫೆಡರಲ್ ಸ್ಟೇಟ್ ಮತ್ತು ಸ್ಥಳೀಯ ಏಜೆನ್ಸಿಗಳಿಂದ 1,700 ಕ್ಕೂ ಹೆಚ್ಚು ಕಾನೂನು ಜಾರಿ ಅಧಿಕಾರಿಗಳು ಭಾಗವಹಿಸಿದ್ದ ನಮ್ಮ ಮೊದಲ ವಾರ್ಷಿಕ ಕಾನೂನು ಜಾರಿ ಸಮ್ಮೇಳವನ್ನು ಆಯೋಜಿಸಿದ್ದೆವು.

  • Snapchat ನಲ್ಲಿ ಅಪಾಯಕಾರಿ ಮಾದಕ ದ್ರವ್ಯಗಳ ಚಟುವಟಿಕೆಯನ್ನು ಸಕ್ರಿಯವಾಗಿ ಪತ್ತೆಹಚ್ಚಲು ನಾವು AI ಮತ್ತು ಮೆಷಿನ್ ಲರ್ನಿಂಗ್ ಟೂಲ್ ನಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದೇವೆ ಮತ್ತು ನಾವು ಡ್ರಗ್ ಡೀಲರ್ ಗಳ ಖಾತೆಗಳನ್ನು ಕಂಡುಕೊಳ್ಳಲು ಮತ್ತು ಅವುಗಳನ್ನು ಮುಚ್ಚುವುದಕ್ಕಾಗಿ ತ್ವರಿತ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ, Snapchat ಗೆ ಸಂಬಂಧಿಸಿದ ಇತರೆ ಪ್ಲಾಟ್‌ಫಾರ್ಮ್‌ಗಳಾದ್ಯಂತ ಅಕ್ರಮ ಮಾದಕ-ದ್ರವ್ಯ ಸಂಬಂಧಿತ ಅಂಶವನ್ನು ಕಂಡುಕೊಳ್ಳಲು ಪರಿಣಿತರೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಇದರ ಪರಿಣಾಮವಾಗಿ, ನಮ್ಮ ಪತ್ತೆಹಚ್ಚುವಿಕೆಯ ಪ್ರಮಾಣವು ಈ ವರ್ಷದ ಪ್ರಾರಂಭದಿಂದ 25% ಕ್ಕಿಂತ ಹೆಚ್ಚಾಗಿದೆ, ಮತ್ತು 90% ರಷ್ಟು ಗುರುತಿಸಲ್ಪಟ್ಟ ಅಕ್ರಮ ಮಾದಕ-ದ್ರವ್ಯಗಳ ಉಲ್ಲಂಘನೆಯ ಅಂಶವು ಅದನ್ನು ಯಾವುದೇ Snapchatter ವರದಿ ಮಾಡುವ ಅವಕಾಶವನ್ನು ಹೊಂದುವುದಕ್ಕಿಂತ ಮೊದಲೇ ಪತ್ತೆಹಚ್ಚಲಾಗಿದೆ.

  • ನಮ್ಮ ಪ್ಲಾಟ್‌ಫಾರ್ಮ್‌ ಬಳಸಿ ನಮ್ಮ ಅಕ್ರಮ ಮಾದಕ ದ್ರವ್ಯದ ಮಾರಾಟಗಾರರು ಪತ್ತೆಹಚ್ಚಲ್ಪಟ್ಟಾಗ, ನಾವು ತಕ್ಷಣವೇ ಅವರ ಖಾತೆಗಳನ್ನು ನಿಷೇಧಿಸುತ್ತೇವೆ ಮತ್ತು ಅವರು ಹೊಸ ಖಾತೆಯನ್ನು ರಚಿಸುವುದರಿಂದ ನಿರ್ಬಂಧಿಸಲು ಕ್ರಮ ಕೈಗೊಳ್ಳುತ್ತೇವೆ. ನಾವು ಕಾನೂನು ವಿನಂತಿಗಳನ್ನು ವಿದ್ಯುಕ್ತಗೊಳಿಸಲು ಪ್ರತಿಕ್ರಿಯೆಯಾಗಿ ಡೇಟಾವನ್ನು ಸಂರಕ್ಷಿಸುವ ಮತ್ತು ಬಹಿರಂಗಪಡಿಸುವಿಕೆಯನ್ನು ಒಳಗೊಂಡು ಕಾನೂನು ಜಾರಿ ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸುತ್ತೇವೆ.

  • ನಾವು ಮಾದಕ-ದ್ರವ್ಯ ಕೀವರ್ಡ್‌ಗಳು ಮತ್ತು ಸ್ಲ್ಯಾಂಗ್‌ಗಳಿಗಾಗಿ Snapchat ನಲ್ಲಿ ಹುಡುಕಾಟ ಫಲಿತಾಂಶಗಳನ್ನು ನಿಷೇಧಿಸುತ್ತೇವೆ, ಮತ್ತು ಬದಲಿಯಾಗಿ ಹೆಡ್ಸ್ ಅಪ್ ಎಂದು ಕರೆಯಲ್ಪಡುವ ಇನ್-ಆಪ್ ಮೂಲಕ ಫೆಂಟನೈಲ್ ನ ಅಪಾಯಗಳ ಬಗ್ಗೆ ಪರಿಣಿತರಿಂದ ಪಡೆದ ಶೈಕ್ಷಣಿಕ ವಿಷಯವನ್ನು ತೋರಿಸುತ್ತೇವೆ. ನಮ್ಮ ಪಾಲುದಾರರು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ), ಸಬ್‌ಸ್ಟಾನ್ಸ್ ಅಬ್ಯೂಸ್ ಅಂಡ್ ಮೆಂಟಲ್ ಹೆಲ್ತ್ ಸರ್ವಿಸಸ್ ಅಡ್ಮಿನಿಸ್ಟ್ರೇಶನ್ (ಎಸ್‌ಎ‌ಎಂಹೆಚ್‌ಎಸ್‌ಎ), ಕಮ್ಯುನಿಟಿ ಆಂಟಿ-ಡ್ರಗ್ ಕೊಯಲಿಶನ್ಸ್ ಆಫ್ ಅಮೆರಿಕಾ (ಸಿಎಡಿಸಿಎ), ಟ್ರೂತ್ ಇನಿಶಿಯೇಟಿವ್ ಮತ್ತು ದಿ ಸೇಫ್ ಪ್ರಾಜೆಕ್ಟ್ ಅನ್ನು ಒಳಗೊಂಡಿದೆ. ಹೆಡ್ಸ್ ಅಪ್ ಪ್ರಾರಂಭಗೊಂಡ ದಿನದಿಂದ, 2.5 ಮಿಲಿಯನ್‌ಗಿಂತಲೂ ಹೆಚ್ಚು Snapchatter ಗಳು ಈ ಸಂಸ್ಥೆಗಳಿಂದ ಸಕ್ರಿಯವಾಗಿ ಈ ವಿಷಯದಲ್ಲಿ ಕಾರ್ಯನಿರ್ವಹಿಸಿದ್ದಾರೆ.

  • ನಾವು ಹುಡುಕಾಟ ಫಲಿತಾಂಶದಲ್ಲಿ ತೋರಿಸುವುದಕ್ಕಾಗಿ ಅಥವಾ ಸಾಮಾನ್ಯವಾಗಿ ಅವರು ಸ್ನೇಹಿತರನ್ನು ಹೊಂದಿಲ್ಲದಿದ್ದರೆ ಯಾರೋ ಒಬ್ಬರಿಗೆ ಸ್ನೇಹಿತರಾಗಿ ಸಲಹೆ ಮಾಡುವುದಕ್ಕಾಗಿ 18 ವರ್ಷದೊಳಗಿನ Snapchatter ಗಳನ್ನು ಮಿತಗೊಳಿಸಲು ಹೊಸ ಮಾನದಂಡಗಳನ್ನೂ ಸೇರಿಸಿದ್ದೇವೆ. ಇದು ನೇರವಾಗಿ ಸಂವಹನ ಮಾಡುವುದಕ್ಕಾಗಿ ಮತ್ತೊಬ್ಬ Snapchatter ನೊಂದಿಗೆ ಸ್ನೇಹಿತರಾಗಲು ಹದಿಹರೆಯದವರನ್ನು ಅಗತ್ಯಪಡಿಸುವಲ್ಲಿ ನಾವು ಹೊಂದಿದ್ದ ರಚನೆಗೆ ರಕ್ಷಣೆಯನ್ನು ಒದಗಿಸುತ್ತದೆ.

  • ನಾವು ಫೆಂಟನೈಲ್ ಬಗ್ಗೆ Snapchatter ಗಳಿಗೆ ಶಿಕ್ಷಣ ನೀಡಲು ನಮ್ಮ ಆ್ಯಪ್‌ನಲ್ಲಿ ಹಲವು ಸರಣಿ ವೀಡಿಯೊ ಜಾಹೀರಾತು ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಚಾರ್ಲೀಗಾಗಿ ಹಾಡಿನೊಂದಿಗೆ ಸಹಭಾಗಿತ್ವದಲ್ಲಿ ಕಳೆದ ಬೇಸಿಗೆಯಲ್ಲಿ ನಮ್ಮ ಮೊದಲ Snapchat ನಲ್ಲಿ 260 ಮಿಲಿಯನ್ನಿಗೂ ಹೆಚ್ಚು ವೀಕ್ಷಣೆಗಳನ್ನು ಕಂಡಿತು. ಕಳೆದ ತಿಂಗಳು, ಫೆಂಟನೈಲ್ ದಿನದ ಭಾಗವಾಗಿ, ನಾವು ಸುಮಾರು 60 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟ ಮತೊಂದು ಸೆಟ್ ಆದ ಇನ್-ಆಪ್ ಸಾರ್ವಜನಿಕ ಸೇವಾ ಘೋಷಣೆಗಳು ರಾಷ್ಟ್ರೀಯ ಲೆನ್ಸ್‌ಗಳು ಮತ್ತು ಫಿಲ್ಟರ್ ಅನ್ನು ಚಾಲನೆ ಮಾಡಿದೆವು.

  • Snapchat ನಲ್ಲಿನ ನಮ್ಮ ಕಂಟೆಂಟ್ ಪ್ಲಾಟ್‌ಫಾರ್ಮ್‌ನಲ್ಲಿ ನಮ್ಮ ಇನ್-ಹೌಸ್ ಶೋ ಆದ, ಗುಡ್ ಲಕ್ ಅಮೆರಿಕಾವನ್ನು ಪ್ರಚಾರಗೊಳಿಸಲಾಯಿತು ಮತ್ತು ಇದು ಹೆಡ್ಸ್ ಅಪ್ ನಲ್ಲಿಯೂ ಲಭ್ಯವಿದ್ದು, ಇದರಲ್ಲಿ ಒಂದು ವಿಶೇಷ ಸಮರ್ಪಿತ ಸರಣಿಯ ಮೂಲಕ ಒಂದು ವರ್ಷಕ್ಕೂ ಹೆಚ್ಚು ಕಾಲ ಫೆಂಟನೈಲ್ ಬಿಕ್ಕಟ್ಟನ್ನು ಕವರ್ ಮಾಡಲಾಯಿತು, ಇದನ್ನು ಇಲ್ಲಿಯವರೆಗೆ 900,000 ಕ್ಕಿಂತಲೂ ಹೆಚ್ಚು Snapchatter ಗಳು ವೀಕ್ಷಣೆ ಮಾಡಿದ್ದಾರೆ.

  • ನಮ್ಮ ಬೃಹತ್ ಕಾರ್ಯತಂತ್ರದ ಭಾಗವಾಗಿ, ನಾವು ಇತರೆ ಪ್ಲಾಟ್‌ಫಾರ್ಮ್‌ಗಳೊಂದಿಗೆ ಕಾರ್ಯನಿರ್ವಹಿಸುವುದಕ್ಕೂ ಬದ್ಧರಾಗಿದ್ದೆವು. ನಾವು ಇತ್ತೀಚೆಗೆ ಮೆಟಾ ಜೊತೆ ಸೇರೆ ಪೈಲಟ್ ಪ್ರೊಗ್ರಾಂ ಒಂದನ್ನು ಪ್ರಾರಂಭಿಸಿದ್ದೇವೆ, ಇದರಲ್ಲಿ ನಾವು ಅಕ್ರಮ ಮಾದಕದ್ರವ್ಯ-ಸಂಬಂಧಿತ ವಿಷಯ ಮತ್ತು ಚಟುವಟಿಕೆಯ ಮಾದರಿಗಳು ಮತ್ತು ಸಂಕೇತಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಈ ಸಂಕೇತ-ಹಂಚಿಕೆಯ ಪ್ರೊಗ್ರಾಂ ಅಕ್ರಮ ಮಾದಕ-ದ್ರವ್ಯ ವಿಷಯ ಮತ್ತು ಡೀಲರ್ ಖಾತೆಗಳನ್ನು ಕಂಡುಹಿಡಿಯಲು ಮತ್ತು ತೆಗೆದುಹಾಕುವಲ್ಲಿ ನಮ್ಮ ಸಕ್ರಿಯ ಪತ್ತೆಹಚ್ಚುವಿಕೆಯ ಪ್ರಯತ್ನಗಳನ್ನು ಬೆಂಬಲಿಸಲು ಎರಡೂ ಪ್ಲಾಟ್‌ಫಾರಂಗಳಿಗೆ ಅನುಮತಿಸುತ್ತದೆ. ಬೆಳೆಯುತ್ತಿರುವ ಫೆಂಟನೈಲ್ ಸಾಂಕ್ರಾಮಿಕದ ವಿರುದ್ದ ಹೋರಾಡಲು ಸಹಾಯ ಮಾಡುವುದಕ್ಕಾಗಿ ಇಂಡಸ್ಟ್ರಿಯಾದ್ಯಂತ ನಾವು ಮಾಡುವ ಕೆಲಸದೊಂದಿಗೆ ಸೇರಿಕೊಳ್ಳಲು ಬೇರೆ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ಗುರಿಯೊಂದಿಗೆ ಈ ಸಹಯೋಗವನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ.

  • ಕಳೆದ ತಿಂಗಳು, ನಾವು ಫೆಂಟನೈಲ್ ಅಪಾಯಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಯುವ ಜನತೆ ಮತ್ತು ಪೋಷಕರು ಇಬ್ಬರಿಗೂ ಸಹಾಯ ಮಾಡಲು ಈ ಬೇಸಿಗೆಯ ಆರಂಭದಲ್ಲಿ ಪ್ರಾರಂಭಿಸಲಾಗುವ ಅಭೂತಪೂರ್ವವಾದ ಸಾರ್ವಜನಿಕ ಜಾಗೃತಿ ಅಭಿಯಾನದಲ್ಲಿ Google ಮತ್ತು ಮೆಟಾ ಸೇರಿದಂತೆ ಆಡ್ ಕೌನ್ಸಿಲ್ ಮತ್ತು ಇತರ ಟೆಕ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ತಂಡವನ್ನು ರಚಿಸುತ್ತಿದ್ದೇವೆ ಎಂದು ಘೋಷಿಸಿದ್ದೇವೆ. ಹೊಸ ಹೊಸ ಅಭಿಯಾನದ ಬಗ್ಗೆ ಇಲ್ಲಿ ಇನ್ನಷ್ಟು ತಿಳಿದುಕೊಳ್ಳಿ.

  • ಮಾನಸಿಕ ಆರೋಗ್ಯ ಸವಾಲುಗಳೊಂದಿಗೆ ವ್ಯವಹರಿಸುವಾಗ ಪರಸ್ಪರರಿಗಾಗಿ ನಿರ್ಣಾಯಕ ಬೆಂಬಲ ವ್ಯವಸ್ಥೆಯಾಗಿರುವ ನೈಜ ಸ್ನೇಹಿತರೊಂದಿಗೆ ಸಂವಹನ ನಡೆಸುವುದಕ್ಕಾಗಿ ಒಂದು ಆಪ್ ನಿರ್ಮಿತ ಆಗಿ, ನಾವು ನಮಗಾಗಿ ದೀರ್ಘಾವಧಿ ಮತ್ತು ಮುಂದುವರಿಯುತ್ತಿರುವ ಆದ್ಯತೆ - ಮಾನಸಿಕ ಆರೋಗ್ಯ ವಿಷಯಗಳ ಶ್ರೇಣಿಯ ಬಗ್ಗೆ ಇನ್-ಆಪ್ ಪರಿಕರಗಳು ಮತ್ತು ಸಂಪನ್ಮೂಲಗಳನ್ನು ವಿಸ್ತರಿಸುವುದನ್ನು ಮುಂದುವರಿಸುತ್ತೇವೆ. (ಇಲ್ಲಿ ಮತ್ತು ಇಲ್ಲಿ ಇನ್ನಷ್ಟು ಕಲಿಯಿರಿ).

  • ಹೆಚ್ಚುವರಿಯಾಗಿ, ನಾವು ಪೋಷಕರು ಮತ್ತು ಕಾಳಜಿ ಪೂರೈಕೆದಾರರಿಗೆ ಹೊಸ ಇನ್-ಆ್ಯಪ್ ಪರಿಕರಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಇದು Snapchatter ಗೌಪ್ಯತೆಯನ್ನು ಇನ್ನೂ ಗೌರವಿಸುತ್ತಿರುವಾಗ Snapchat ನಲ್ಲಿ ತಮ್ಮ ಹದಿಹರೆಯದ ಮಕ್ಕಳು ಮಾತನಾಡುತ್ತಿರುವ ಬಗ್ಗೆ ಅವರಿಗೆ ಹೆಚ್ಚಿನ ಒಳನೋಟವನ್ನು ನೀಡುತ್ತದೆ. ನಾವು ಮುಂಬರುವ ತಿಂಗಳುಗಳಲ್ಲಿ ಈ ಹೊಸ ವೈಶಿಷ್ಟ್ಯಗಳನ್ನು ಜಾರಿಗೊಳಿಸುವ ಯೋಜನೆ ಮಾಡಿದ್ದೇವೆ.

ಒಟ್ಟಾರೆಯಾಗಿ ತೆಗೆದುಕೊಂಡಾಗ, ಈ ಕ್ರಮಗಳು Snapchat ಅನ್ನು ಡ್ರಗ್ ಡೀಲರ್ ಗಳಿಗೆ ಪ್ರತಿಕೂಲ ಪರಿಸರವನ್ನು ಉಂಟುಮಾಡುತ್ತದೆ ಮತ್ತು ಡೀಲರ್ ಗಳು ಯಾವಾಗಲೂ ನಮ್ಮ ಸಿಸ್ಟಮ್ ದಾಳಿ ಮಾಡುವ ಮಾರ್ಗಗಳಿಗಾಗಿ ಕಾಯುತ್ತಿರುತ್ತಾರೆ ಎಂಬುದನ್ನು ತಿಳಿದು ನಾವು ಹೇಗೆ ನಮ್ಮ ಪ್ರಯತ್ನವನ್ನು ಅರ್ಥಪೂರ್ಣವಾಗಿ ಸುಧಾರಿಸಬಹುದು ಎಂಬುದರ ಪರಿಶೀಲನೆಯನ್ನು ನಾವು ಮುಂದುವರಿಸುತ್ತೇವೆ,

ಈ ವಿಷಯವು Snapchat ಅನ್ನು ಮೀರಿ ಮುಂದೆ ಸಾಗುತ್ತದೆ ಎಂಬುದನ್ನೂ ನಾವು ಗುರುತಿಸಿದ್ದೇವೆ. ಅಂತಿಮವಾಗಿ, ಈ ಸಾಂಕ್ರಾಮಿಕಕ್ಕೆ ಪರಿಹಾರವು ಯುವ ಜನರಿಗೆ ಇಂತಹ ಗಾಢವಾದ ಮಾನಸಿಕ ಆರೋಗ್ಯ ಸವಾಲುಗಳನ್ನು ಸೃಷ್ಟಿಸುವ ಷರತ್ತುಗಳನ್ನು ಒಳಗೊಂಡಂತೆ ಈ ಬಿಕ್ಕಟ್ಟಿನ ಮೂಲ ಕಾರಣಗಳನ್ನು ಕಂಡುಹಿಡಿಯುವ ರಾಷ್ಟ್ರವ್ಯಾಪಿ ಪ್ರಯತ್ನದಲ್ಲಿದೆ. ಈ ನಿರ್ಣಾಯಕ ವಿಷಯದ ಬಗ್ಗೆ ನಮ್ಮ ನಮ್ಮ ಸಮುದಾಯದೊಂದಿಗೆ ನಾವು ಕಾರ್ಯನಿರ್ವಹಿಸುತ್ತಿರುತ್ತೇವೆ ಮತ್ತು ಆಲಿಸುತ್ತಿರುತ್ತೇವೆ. ಒಂದು ಸಮಾಜವಾಗಿ ನಮ್ಮ ದೀರ್ಘಕಾಲದ ಗುರಿಯು ಅತ್ಯಂತ ಕಡಿಮೆ ಯುವ ಜನರು ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸುವ ಮತ್ತು ಅವರು ಅಕ್ರಮ ಮಾದಕದ್ರವ್ಯ ಜಾಲಕ್ಕೆ ಒಳಪಡುವುದಕ್ಕಿಂತಲೂ ಸಮುಚಿತವಾದ ಸೇವೆಗಳು ಮತ್ತು ಕಾಳಜಿಗೆ ಸಮಾನ ಪ್ರವೇಶ ಹೊಂದುವಿಕೆಗಿಂತಲೂ ಯಾವುದೂ ಕಡಿಮೆಯಾಗಬಾರದು. ಇದು ಸರ್ಕಾರ, ಕಾನೂನು ಜಾರಿ, ತಂತ್ರಜ್ಞಾನ ವಲಯ, ಆರೋಗ್ಯ ಕಾಳಜಿ, ಮತ್ತು ಹೆಚ್ಚಿನವುಗಳ ನಡುವೆ ಸಂಯೋಜಿತ ಪ್ರಯತ್ನವನ್ನು ಅಗತ್ಯಪಡಿಸುತ್ತದೆ ಮತ್ತು ನಾವು ಈ ಗುರಿಯನ್ನು ಬೆಂಬಲಿಸಿ ಸಹಾಯ ಮಾಡುವುದಕ್ಕಾಗಿ ನಾವು ಮಾಡಬಹುದಾದ ಎಲ್ಲವನ್ನೂ ಮಾಡಲು ಬದ್ದರಾಗಿದ್ದೇವೆ.

ಸುದ್ದಿಗಳಿಗೆ ಹಿಂತಿರುಗಿ