ಫೆಂಟಾನಿಲ್‌ನ ಅಪಾಯಗಳ ಕುರಿತು Snapchatter ಗಳಿಗೆ ಅರಿವು ಮೂಡಿಸುವುದು

ಜುಲೈ 19, 2021

ಕಳೆದ ವಾರ, ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಪ್ರಿವೆನ್ಷನ್ (ಸಿಡಿಸಿ) ಹೊಸ ಡೇಟಾ ಪ್ರಕಟಿಸಿದವು. ಇದು ಯುಎಸ್ ನಲ್ಲಿ ಔಷಧಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸುವ ಮೂಲಕ ಉಂಟಾದ ಸಾವಿನ ಪ್ರಮಾಣವು ದಾಖಲೆಯ ಮಟ್ಟದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿರುವುದನ್ನು ಸೂಚಿಸುತ್ತದೆ. 2020ರಲ್ಲಿ 30% ಕ್ಕಿಂತ ಹೆಚ್ಚಳವನ್ನು ಇದು ಕಂಡಿದೆ. ಈ ಹೆಚ್ಚಳಕ್ಕೆ ಮೂಲ ಕಾರಣ ಫೆಂಟಾನಿಲ್ ಎನ್ನುವ ಮಾರಕ ವಸ್ತುವಿನ ಬಳಕೆ ಹಾಗೂ ಕೋವಿಡ್-19 ಪಿಡುಗಿನ ಹಿನ್ನೆಲೆಯ ಒತ್ತಡ ಕೂಡಾ ಆಗಿತ್ತು ಎಂದು ತಿಳಿಸಿದೆ.

ಫೆಂಟನಿಲ್‌ನ ಅಪಾಯಗಳ ಬಗ್ಗೆ ಯುವಜನರಿಗೆ ಶಿಕ್ಷಣ ನೀಡುವುದರ ಮೇಲೆ ಕೇಂದ್ರೀಕರಿಸಿದ ರಾಷ್ಟ್ರೀಯ ಸಂಸ್ಥೆಯಾದ ಸಾಂಗ್ ಫಾರ್ ಚಾರ್ಲಿಪ್ರಕಾರ, ಈ ಸಾವುಗಳಲ್ಲಿ ಹೆಚ್ಚಿನವುಗಳು ಕಾನೂನುಬದ್ಧ ಔಷಧಿಗಳ ರೂಪದಲ್ಲಿ ಮಾರಾಟವಾಗುತ್ತಿರುವ ಮಾತ್ರೆಯನ್ನು ತೆಗೆದುಕೊಳ್ಳುವ ಮೂಲಕ ಉಂಟಾಗುತ್ತಿದೆ. ಆದರೆ ಈ ಔಷಧವು ನಕಲಿಯಾಗಿದ್ದು ಇದು ಫೆಂಟಾನಿಲ್ ಹೊಂದಿದೆ. ಮತ್ತು ಕ್ಸಾನಾಕ್ಸ್ ಮತ್ತು ಪರ್ಕೊಸೆಟ್ ನಂತಹ ವೈದ್ಯರು ಶಿಫಾರಸ್ಸು ಮಾಡುವ ಮಾತ್ರೆಗಳನ್ನು ಹೆಚ್ಚಾಗಿ ಉಪಯೋಗಿಸುವ ಯುವಜನರು ಇದರ ಅಪಾಯಕ್ಕೆ ಒಳಗಾಗುವವರಾಗಿದ್ದಾರೆ.

ಫೆಂಟಾನಿಲ್ ಪಿಡುಗನ್ನು ಅರ್ಥೈಸಿಕೊಳ್ಳಲು ಹಾಗು ನಾವು ಯಾವ ರೀತಿ ಇದನ್ನು ಬದಲಾಯಿಸಲು ಪ್ರಯತ್ನಿಸಬಹುದು ಎನ್ನುವುದನ್ನು ಅರ್ಥೈಸಿಕೊಳ್ಳಲು ನಾವು ಮತ್ತು ಇತರ ಟೆಕ್ ಕಂಪೆನಿಗಳು ಸಾಂಗ್ ಆಪ್ ಚಾರ್ಲಿ ಜೊತೆಗೆ ಕಾರ್ಯನಿರ್ವಹಿಸಲು ಪ್ರಾರಂಬಿಸಿದೆವು. ಇಂದು ಅವರು ಹೊಸತಾದ ರಾಷ್ಟ್ರವ್ಯಾಪಿ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ಯುವಜನತೆಯನ್ನು--ಟೆಕ್ ಪ್ಲಾಟ್ ಫಾರ್ಮ್ಗಳಲ್ಲಿ- ತಲುಪುವ ಪ್ರಯತ್ನದಲ್ಲಿದ್ದಾರೆ. ಮತ್ತು ಈ ಮೂಲಕ ಈ ಫೆಂಟಾನಿಲ್ ಹೊಂದಿರುವ ನಕಲಿ ಔಷಧಿಗಳು ಉಂಟುಮಾಡುವ ಅಪಾಯಗಳ ಕುರಿತು ಅವರಿಗೆ ತಿಳುವಳಿಕೆ ಮೂಡಿಸುವ ಪ್ರಯತ್ನದಲ್ಲಿದ್ದಾರೆ. Snapchat ಸಮುದಾಯವು ತಮ್ಮನ್ನು ಮತ್ತು ತಮ್ಮ ಪ್ರೀತಿಪಾತ್ರರನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸಲು ಸಹಾಯ ಮಾಡಲು ನಾವು ಸಾಂಗ್ ಫಾರ್ ಚಾರ್ಲಿ ಸಂಸ್ಥೆಯೊಂದಿಗೆ ಭಾಗಿದಾರಿಯಾಗಲು ಹೆಮ್ಮೆಯೆನಿಸುತ್ತದೆ.

ಈ ಪ್ರಯತ್ನದ ಭಾಗವಾಗಿ, ನಮ್ಮ ಆಂತರಿಕ ಸುದ್ದಿ ಕಾರ್ಯಕ್ರಮ, ಗುಡ್ ಲಕ್ ಅಮೇರಿಕಾ, ಫೆಂಟನಿಲ್ ಸಾಂಕ್ರಾಮಿಕ ರೋಗಕ್ಕೆ ವಿಶೇಷ ಸಂಚಿಕೆಯನ್ನು ಮೀಸಲಿಟ್ಟಿದ್ದು, ಸಾಂಗ್ ಫಾರ್ ಚಾರ್ಲಿ ಸಂಸ್ಥಾಪಕ ಎಡ್ ಟೆರ್ನಾನ್ ಅವರ ಸಂದರ್ಶನವನ್ನು ಒಳಗೊಂಡಿತ್ತು, ಅವರು ತಮ್ಮ 22 ವರ್ಷದ ಮಗ ಚಾರ್ಲಿಯನ್ನು ಈ ನಕಲಿ ಪ್ರಿಸ್ಕ್ರಿಪ್ಷನ್ ಮಾತ್ರೆ ದುರಂತದಲ್ಲಿ ಕಳೆದುಕೊಂಡಿರುವುದನ್ನು ಸಂದರ್ಶನವು ಪ್ರಕಟಿಸುತ್ತದೆ. ನೀವು ಸಂಪೂರ್ಣ ಸಂಚಿಕೆಯನ್ನು ಕೆಳಗಿನ ಅಥವಾ ನಮ್ಮ ಡಿಸ್ಕವರ್ ಕಂಟೆಂಟ್ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಬಹುದು.

ಇದಲ್ಲದೆ, ಸ್ನಾಪ್ ಚಾಟರ್ಗಳು ನಮ್ಮ ಡಿಸ್ಕವರ್ ಪ್ಲಾಟ್ ಫಾರ್ಮ್ ನಲ್ಲಿ ಸಾಂಗ್ ಆಫ್ ಚಾರ್ಲಿ ನಿರ್ಮಾಣ ಮಾಡಿರುವ ಪಿಎಸ್ ಎ ಅನ್ನು ವೀಕ್ಷಿಸಬಹುದು. ಅಲ್ಲದೆ ಫೆಂಟನಿಲ್ ಅಪಾಯದ ಕುರಿತು ಪ್ರಮುಖ ಅಂಶಗಳನ್ನು ನಮ್ಮ ಹೊಸ ವರ್ಧಿತ ವಾಸ್ತವ (ಎಆರ್) ಲೆನ್ಸ್ ಮೂಲಕ ತಿಳಿದುಕೊಳ್ಳಬಹುದು. ಅಲ್ಲದೆ ಈ ಲೆನ್ಸ್ ಹೆಚ್ಚಿನ ಮಾಹಿತಿಯನ್ನು ತಿಳಿಸುವ ಮೂಲಕ ಅವರುಗಳು ತಮ್ಮ ಸನಿಹದ ಸ್ನೇಹಿತರುಗಳಿಗೆ ಇದರ ಕುರಿತು ತಿಳುವಳಿಕೆ ಮೂಡಿಸಲು ಸಹಾಯ ಮಾಡುತ್ತದೆ. ಅಲ್ಲದೆ “ಸರಿಯಾದ ಶಿಫಾರಸ್ಸು ಇಲ್ಲದೆ ಮಾತ್ರೆ ತೆಗೆದುಕೊಳ್ಳದೇ ಇರುವುದು” ಕುರಿತಂತೆ ನಿರ್ಧಾರ ಮಾಡುವಂತೆ ಪ್ರೇರೇಪಿಸುತ್ತದೆ. ಈ ಆರಂಭಿಕ ಪ್ರಾರಂಭವು ಸಾಂಗ್ ಆಪ್ ಚಾರ್ಲಿ ಮತ್ತು Snap ನ ನಿರಂತರ ಸಹಭಾಗಿತ್ವದಲ್ಲಿ ಮೊದಲನೆಯದಾಗಿದೆ, ಇದರಲ್ಲಿ ಹೆಚ್ಚುವರಿ ಇನ್-ಆ್ಯಪ್ ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿ ಉಪಕ್ರಮಗಳು ಸೇರಿವೆ.

ಜಾಗೃತಿ ಮೂಡಿಸಲು ನಾವು ಕೆಲಸ ಮಾಡುತ್ತಿರುವಂತೆ, Snapchat ನಲ್ಲಿ ಮಾದಕ ದ್ರವ್ಯ-ಸಂಬಂಧಿತ ಚಟುವಟಿಕೆಯನ್ನು ಪತ್ತೆ ಹಚ್ಚಲು, ನಾವು ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಮಾರ್ಗಸೂಚಿಗಳು ಅಕ್ರಮ ಔಷಧಿಗಳ ಮಾರಾಟ ಅಥವಾ ಪ್ರಚಾರವನ್ನು ನಿಷೇಧಿಸುತ್ತದೆ ಮತ್ತು ಈ ಬಗೆಯ ಕಂಟೆಂಟ್ ಅನ್ನು ನಾವು ಪತ್ತೆ ಹಚ್ಚುತ್ತವೆ ಅಥವಾ ಇದರ ಕುರಿತು ನಮಗೆ ವರದಿ ಬಂದಾಗ, ನಮ್ಮ ಟ್ರಸ್ಟ್ ಮತ್ತು ಸುರಕ್ಷತಾ ತಂಡಗಳು ತ್ವರಿತ ಕ್ರಮ ಕೈಗೊಳ್ಳುತ್ತವೆ.

ನಾವು ಡ್ರಗ್-ಕುರಿತ ಶಬ್ದಗಳು, ಅಲ್ಲದೆ ಸ್ಥಳೀಯ ಶಬ್ದಗಳನ್ನು ಬಳಕೆದಾರರ ಹೆಸರಿನಿಂದ ಬ್ಲಾಕ್ ಮಾಡುತ್ತೇವೆ ಅಲ್ಲದೆ Snapchatನಲ್ಲಿ ಹುಡುಕುವುದು ಕೂಡಾ ಸಾಧ್ಯವಿರುವುದಿಲ್ಲ. ನಾವು ನಿಯಮಿತವಾಗಿ ಇದನ್ನು ಗಮನಿಸುತ್ತಿದ್ದು ಥರ್ಡ್ ಪಾರ್ಟಿ ಎಕ್ಸ್ ಪರ್ಟ್ಗಳ ಜೊತೆಗೆ ಹೊಸ ಭಾಷೆಯ ಬಳಕೆಯ ಜೊತೆಗೆ ಅಪ್ಡೇಟ್ ಮಾಡುತ್ತಿರುತ್ತೇವೆ. ನಾವು ನಮ್ಮ ಯಂತ್ರ ಕಲಿಕೆ ಪರಿಕರಗಳು ಮಾದಕವಸ್ತು ವಹಿವಾಟುಗಳನ್ನು ಕಂಡುಹಿಡಿಯುವ ಮತ್ತು ನಿಲ್ಲಿಸುವ ಇತರ ಸಾಮರ್ಥ್ಯಗಳ ಜೊತೆಗೆ, ಚಿತ್ರಗಳು, ಪದಗಳು, ಎಮೋಜಿಗಳು ಮತ್ತು ಔಷಧ-ಸಂಬಂಧಿತ ಖಾತೆಗಳ ಇತರ ಸಂಭಾವ್ಯ ಸೂಚಕಗಳನ್ನು ಪೂರ್ವಭಾವಿಯಾಗಿ ಗುರುತಿಸುವಂತೆ ನಿರಂತರವಾಗಿ ನವೀಕರಿಸುತ್ತಿದ್ದೇವೆ.

ಆನ್‌ಲೈನ್‌ನಲ್ಲಿ ಡ್ರಗ್ ಡೀಲರ್‌ಗಳು ಮತ್ತು ಡ್ರಗ್-ಸಂಬಂಧಿತ ವಿಷಯಗಳ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯಗಳನ್ನು ನಾವು ಸುಧಾರಿಸಿಕೊಳ್ಳುತ್ತ ನಮ್ಮ ಸಮುದಾಯವು ತಮ್ಮನ್ನು ಮತ್ತು ಅವರ ಸ್ನೇಹಿತರನ್ನು ಇದರಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡಲು ನಮ್ಮ ಪಾಲಿನ ಕೆಲಸವನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ.

ಸುದ್ದಿಗಳಿಗೆ ಹಿಂತಿರುಗಿ