ಫೆಂಟಾನಿಲ್ ಬಿಕ್ಕಟ್ಟಿಗೆ Snap ಹೇಗೆ ಪ್ರತಿಕ್ರಿಯಿಸುತ್ತಿದೆ

ಅಕ್ಟೋಬರ್ 7, 2021

ಇತ್ತೀಚಿನ ವರ್ಷಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅತಿಯಾದ ಮಾದಕಪದಾರ್ಥ ಸೇವನೆಯಿಂದ ಉಂಟಾಗುವ ಸಾವುಗಳಲ್ಲಿ ಭಾರೀ ಪ್ರಮಾಣದ ಏರಿಕೆಗೆ ಫೆಂಟಾನಿಲ್ ಸವರಿದ ಮಾದಕಪದಾರ್ಥಗಳು ಕೊಡುಗೆ ನೀಡುತ್ತಿವೆ. ಫೆಂಟಾನಿಲ್ ಒಂದು ಸಂಭಾವ್ಯ ಅಫೀಮು ಆಗಿದ್ದು, ಒಂದು ಗ್ರಾಂ ಮರಳಿನಷ್ಟೂ ಸಣ್ಣ ಪ್ರಮಾಣದಲ್ಲೂ ಮಾರಣಾಂತಿಕವಾಗಿರುತ್ತದೆ. ಸೇವಿಸಿದಾಗ ಮರಣಕ್ಕೂ ಕಾರಣವಾಗುವಂತಹ ವಿಕೊಡಿನ್ ಅಥವಾ ಕ್ಸೋನಕ್ಸ್ ನಂತಹ ನಕಲಿ ಪ್ರಿಸ್ಕ್ರಿಪ್ಷನ್ ಮಾತ್ರೆಗಳನ್ನು ಮಾಡಲು ಡ್ರಗ್ ಡೀಲರ್‌ಗಳು ಪದೇ ಪದೇ ಫೆಂಟಾನಿಲ್ ಅನ್ನು ಬಳಸುತ್ತಾರೆ.

ಈ ಬಿಕ್ಕಟ್ಟಿನ ಮೂಲಕ ಪರಿಣಮಿತವಾದ ಕುಟುಂಬಗಳ ವಿಧ್ವಂಸಕ ಕಥೆಗಳನ್ನು ನಾವು ಕೇಳಿದ್ದೇವೆ, ಅದು Snapchat ಬಗ್ಗೆ ಡ್ರಗ್ ಡೀಲರ್‌ಗಳಿಂದ ಖರೀದಿಸಲ್ಪಟ್ಟ ಫೆಂಟನೈಲ್-ಲೇಸ್ಡ್ ನಕಲಿ ಮಾತ್ರೆಗಳ ಪ್ರಕರಣಗಳನ್ನು ಒಳಗೊಂಡಿದೆ. ನಾವು ನಮ್ಮ ಪ್ಲಾಟ್‌ಫಾರ್ಮ್‌ನಿಂದ ಅಕ್ರಮವಾದ ಮಾದಕ ದ್ರವ್ಯ ಮಾರಾಟವನ್ನು ತೆಗೆದುಹಾಕಲು ನಾವು ನಿರ್ಧರಿಸಿದ್ದೇವೆ ಮತ್ತು ನಾವು ಡ್ರಗ್ ಡೀಲರ್‌ಗಳು ನಮ್ಮ ಸಮುದಾಯಕ್ಕೆ ಉಂಟುಮಾಡುತ್ತಿರುವ ಹಾನಿಗಾಗಿ ಅವರನ್ನು ಜವಾಬ್ದಾರರನ್ನಾಗಿಸಲು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಕ್ರಿಯ ಪತ್ತೆಹಚ್ಚುವಿಕೆ ಮತ್ತು ಸಹಯೋಗದಲ್ಲಿ ಹೂಡಿಕೆ ಮಾಡುತ್ತಿದ್ದೇವೆ.

ನಮ್ಮ ಸಮುದಾಯವನ್ನು Snapchat ನಲ್ಲಿ ಸುರಕ್ಷಿತವಾಗಿರಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ನಾವು ನಂಬಿದ್ದೇವೆ ಮತ್ತು ನಾವು ನಮ್ಮ ಪ್ಲಾಟ್‌ಫಾರ್ಮ್‌ನಿಂದ ಮಾದಕ ದ್ರವ್ಯ ಮಾರಾಟವನ್ನು ನಿರ್ಮೂಲನೆಗೊಳಿಸಲು ಕಳೆದ ವರ್ಷವಿಡೀ ಗಣನೀಯವಾದ ಕಾರ್ಯಾಚರಣೆಯ ಸುಧಾರಣೆಗಳನ್ನು ಮಾಡಿದ್ದೇವೆ ಮತ್ತು ನಾವು ನಿರಂತರವಾಗಿ ಸುಧಾರಣೆಗಾಗಿ ಶ್ರಮಿಸುತ್ತಿದ್ದೇವೆ. ನಮ್ಮ ಕೆಲಸವು ಇಲ್ಲಿಗೇ ಮುಗಿದಿಲ್ಲ, ಆದರೆ ನಮ್ಮ ಸಮುದಾಯವು ನಮ್ಮ ಪ್ರಗತಿಯ ಮೇಲ್ವಿಚಾರಣೆ ಮಾಡಲು ಮತ್ತು ನಮ್ಮನ್ನು ಜವಾಬ್ದಾರರನ್ನಾಗಿಸಲು ಸಾಧ್ಯವಾಗುವಂತೆ ನಾವು ಪ್ರಗತಿ ಸಾಧಿಸುವುದರಿಂದ ನಾವು ಪರಿಷ್ಕರಣೆಗಳನ್ನು ಸಂವಹನ ಮಾಡಲು ಬಯಸುತ್ತೇವೆ.

ಕಳೆದ ವರ್ಷವಿಡೀ ನಮ್ಮ ಅತಿ ಮಹತ್ವದ ಹೂಡಿಕೆಯು ನಮ್ಮ ಕಾನೂನು ಜಾರಿ ಕಾರ್ಯಾಚರಣೆಗಳಲ್ಲಿ ಪ್ರಧಾನ ಹೂಡಿಕೆಗಳು, ನಾವು ಎಷ್ಟು ಬೇಗನೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಅರ್ಥಪೂರ್ಣವಾಗಿ ಸುಧಾರಿಸಲು ಮಾನ್ಯ ಕಾನೂನು ಜಾರಿ ಕೋರಿಕೆಗಳನ್ನು ಬೆಂಬಲಿಸುವ ನಮ್ಮ ತಂಡದ ಬೆಳವಣಿಗೆಯನ್ನು ಒಳಗೊಂಡಿದೆ. ನಾವು ಸೀಕರಿಸುವ ಎ್ವಲ್ಲಾ ವಿಧವಾದ ಕಾನೂನು ಜಾರಿ ವಿನಂತಿಗಳಾದ್ಯಂತ ನಾವು ಮಾಡಬೇಕಾಗಿರುವ ಕೆಲಸವು ಇನ್ನೂ ಇರುವಾಗ, ನಮ್ಮ ಪ್ರತಿಕ್ರಿಯೆ ಸಮಯವು ವರ್ಷದಿಂದ ವರ್ಷಕ್ಕೆ 85% ರಷ್ಟು ಸುಧಾರಿಸಿದೆ ಮತ್ತು ತುರ್ತು ಬಹಿರಂಗಪಡಿಸುವಿಕೆ ಪ್ರಕರಣದಲ್ಲಿ, ನಮ್ಮ 24/7 ತಂಡವು ಸಾಮಾನ್ಯವಾಗಿ 30 ನಿಮಿಷಗಳಲ್ಲಿ ಪ್ರತಿಕ್ರಿಯಿಸುತ್ತದೆ.

ನಾವು ನಮ್ಮ ಸಮುದಾಯಕ್ಕೆ ಅವರು ಹಾನಿಯುಂಟುಮಾಡಲು ಶಕ್ತರಾಗುವ ಮುಂಚಿತವಾಗಿಯೇ ನಮ್ಮ ಪ್ಲಾಟ್‌ಫಾರ್ಮ್‌ನಿಂದ ಮಾದಕ ದ್ರವ್ಯ ಡೀಲರ್‌ಗಳನ್ನು ತೆಗೆದುಹಾಕಲು ನಮ್ಮ ಸಕ್ರಿಯ ಪತ್ತೆಹಚ್ಚುವ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದ್ದೇವೆ. ನಮ್ಮ ಜಾರಿ ದರಗಳು 2021 ರ ಮೊದಲಾರ್ಧದ ವೇಳೆಯಲ್ಲಿ 112% ರಷ್ಟು ವೃದ್ಧಿಸಿದೆ, ಮತ್ತು ನಾವು 260% ರಷ್ಟು ಸಕ್ರಿಯ ಪತ್ತೆಹಚ್ಚುವಿಕೆಯ ದರವನ್ನು ಹೆಚ್ಚಿಸಿದ್ದೇವೆ. ಸುಮಾರು ಮೂರನೇ ಎರಡರಷ್ಟು ಮಾದಕ ದ್ರವ್ಯ ಸಂಬಂಧಿತ ವಿಷಯವು ನಮ್ಮ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಿಸ್ಟಮ್ಸ್ ನಿಂದ ಸಕ್ರಿಯವಾಗಿ ಪತ್ತೆಹಚ್ಚಲ್ಪಡುತ್ತದೆ, ಮತ್ತು ಉಳಿದುದು ನಮ್ಮ ಸಮುದಾಯದಿಂದ ವರದಿ ಮಾಡಲ್ಪಡುತ್ತದೆ ಮತ್ತು ನಮ್ಮ ತಂಡದಿಂದ ಜಾರಿಗೊಳಿಸಲ್ಪಡುತ್ತದೆ. ನಾವು ಮಾದಕ ದ್ರವ್ಯ ಸಂಬಂಧಿತ ವಿಷಯವನ್ನು ವರದಿ ಮಾಡುವುದಕ್ಕಾಗಿ ಸುಲಭ ಮತ್ತು ತ್ವರಿತವನ್ನಾಗಿ ಮಾಡಲು ನಮ್ಮ ಇನ್-ಆಪ್ ರಿಪೊರ್ಟಿಂಗ್ ಪರಿಕರಗಳನ್ನು ಸುಧಾರಿಸುವ ನಿಟ್ಟಿನಲ್ಲಿಯೂ ಕಾರ್ಯನಿರ್ವಹಿಸಿದ್ದೇವೆ.

ನಾವು ಹಾನಿಯ ಯಾವುದೇ ಭಯವಿಲ್ಲದೆ ತಮ್ಮನ್ನು ವ್ಯಕ್ತಪಡಿಸಿಕೊಳ್ಳಲು ನಮ್ಮ ಸಮುದಾಯವನ್ನು ನಾವು ಸಬಲೀಕರಿಸಲು ಸಾಧ್ಯವಾಗುವಂತೆ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯ ನಡುವಿನ ಸರಿಯಾದ ಸಮತೋಲನವನ್ನು ಅಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ. ವಿನ್ಯಾಸದ ಮೂಲಕ, Snapchatter ಗಳು ಅವರನ್ನು ಯಾರು ಸಂಪರ್ಕಿಸಬಹುದು ಮತ್ತು ಸ್ನೇಹಿತರೊಂದಿಗೆ ಹೊಸ ಸಂಭಾಷಣೆಗಳಿಗೆ ಆಪ್ಟ್-ಇನ್ ಮಾಡಬೇಕು ಎಂಬುದನ್ನು ನಿಯಂತ್ರಿಸುತ್ತಾರೆ. ನಮ್ಮ ಸಮುದಾಯದ ಒಬ್ಬ ಸದಸ್ಯನು ಸಮುಚಿತವಲ್ಲದ ವಿಷಯವನ್ನು ವರದಿ ಮಾಡಿದರೆ, ನಾವು ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ನಮ್ಮ ನಂಬಿಕೆ ಮತ್ತು ಸುರಕ್ಷತೆಯ ತಂಡಕ್ಕೆ ಇದನ್ನು ವರ್ಗಾಯಿಸಲಾಗುತ್ತದೆ. ನಾವು Snapchat ನಲ್ಲಿ ಸುರಕ್ಷಿತವಾಗಿ ಉಳಿಯಲು ಅವರ ಹದಿಹರೆಯದವರೊಂದಿಗೆ ಒಟ್ಟಿಗೆ ಸಂಗಾತಿಗಳಾಗಲು ಪೋಷಕರಿಗಾಗಿ ಹೆಚ್ಚಿನ ಮಾರ್ಗಗಳನ್ನು ಒದಗಿಸಲು ಹೊಸ ಕೌಟುಂಬಿಕ ಸುರಕ್ಷತೆಯ ಪರಿಕರಗಳ ಕುರಿತು ಕೂಡ ಕಾರ್ಯನಿರ್ವಹಿಸುತ್ತಿದ್ದೇವೆ.

ಫೆಂಟಾನಿಲ್ ಅಪಾಯಗಳ ಕುರಿತು ನಮ್ಮ ಸಮುದಾಯವನ್ನು ಶಿಕ್ಷಿತರನ್ನಾಗಿಸುವಲ್ಲಿಯೂ ಸಹ ನಾವು ಪಾತ್ರ ವಹಿಸಲು ಬಯಸುತ್ತೇವೆ. ನಮ್ಮ ಪ್ರಯತ್ನಗಳನ್ನು ತಿಳಿಸಲು, ಯುವಜನರು ಹೇಗೆ ಪ್ರಿಸ್ಕ್ರಿಪ್ಷನ್ ಔಷಧಗಳು ಮತ್ತು ಫೆಂಟನೈಲ್ ಅನ್ನು ಗ್ರಹಿಸುತ್ತಾರೆ ಮತ್ತು ಅವುಗಳನ್ನು ಇಲ್ಲಿ ಫಲಿತಾಂಶಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ನಾವು ಮಾರ್ನಿಂಗ್ ಕನ್ಸಲ್ಟ್ ನಿಂದ ಸಂಶೋಧನೆ ನಡೆಸಲು ವಹಿಸಿದ್ದೇವೆ. ಹದಿಹರೆಯದವರು ಉನ್ನತ ಮಟ್ಟದಲ್ಲಿ ಒತ್ತಡ ಮತ್ತು ಆತಂಕವನ್ನು ಅನುಭವಿಸುತ್ತಿದ್ದಾರೆ ಮತ್ತು ನಿಭಾಯಿಸುವ ಕಾರ್ಯತಂತ್ರವಾಗಿ ಒಂದು ಪ್ರಿಸ್ಕ್ರಿಪ್ಷನ್ ಇಲ್ಲದೆ ಪ್ರಿಸ್ಕ್ರಿಪ್ಷನ್ ಔಷಧಗಳ ಬಳಕೆಯೊಂದಿಗೆ ಪ್ರಯೋಗ ಮಾಡುತ್ತಿದ್ದಾರೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಅಪಾಯವನ್ನು ನಿರ್ಧರಿಸಲು ಫೆಂಟಾನಿಲ್ ಕುರಿತು ಸಾಕಷ್ಟು ತಿಳಿದಿರದ ಅಥವಾ ಫೆಂಟಾನಿಲ್ ಎಂಬುದು ಹೆರಾಯಿನ್ ಅಥವಾ ಕೊಕೇನ್ ಗಿಂತಲೂ ಕಡಿಮೆ ಅಪಾಯಕಾರಿಯಾಗಿದೆ ಎಂದು ನಂಬುವ ಹಲವಾರು ಜನರಿದ್ದಾರೆ ಎಂಬುದೂ ಸಂಶೋಧನೆಯಿಂದ ಸ್ಪಷ್ಟವಾಗಿದೆ. ಕೇವಲ ಫೆಂಟನೈಲ್ ಹೊಂದಿರುವ ಒಂದು ನಕಲಿ ಮಾತ್ರೆಯು ಮಾರಣಾಂತಿಕವಾಗಿರುವ ಈ ಅರಿವಿನ ಕೊರತೆಯು ವಿಧ್ವಂಸಕ ಪರಿಣಾಮಗಳನ್ನು ಹೊಂದಿರಬಹುದು.

Song for Charlie, Shatterproof ಮತ್ತು ಮಾದಕಪದಾರ್ಥದ ವ್ಯಸನ ಮತ್ತು ಮಾನಸಿಕ ಆರೋಗ್ಯ ಸೇವೆಗಳ ಆಡಳಿತಗಳಂತಹ (SAMHA) ತಜ್ಞ ಸಂಘಟನೆಗಳ ಕಂಟೆಂಟ್ ವಿತರಿಸುವ ಹೆಡ್ಸ್‌ ಅಪ್ ಎನ್ನುವ ಹೊಸ ಆ್ಯಪ್‌ನಲ್ಲಿನ ಶೈಕ್ಷಣಿಕ ಪೋರ್ಟಲ್ ಅನ್ನು ನಾವು ಅಭಿವೃದ್ಧಿಪಡಿಸಿದ್ದೇವೆ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿನ ಕೇಂದ್ರದಿಂದ ಹೆಚ್ಚುವರಿ ಸಂಪನ್ಮೂಲಗಳನ್ನು ಮುಂಬರುವ ವಾರಗಳಲ್ಲಿ ಸೇರಿಸಲಿದ್ದೇವೆ. ಇದರ ಅರ್ಥವೇನೆಂದರೆ, ಯಾರಾದರೂ Snapchat ನಲ್ಲಿ ಮಾದಕಪದಾರ್ತಕ್ಕೆ ಸಂಬಂಧಿಸಿದ ಕೀವರ್ಡ್‌ಗಳನ್ನು ಹುಡುಕಿದರೆ, ನಮ್ಮ ಸಮುದಾಯಕ್ಕೆ ಹಾನಿಯನ್ನು ತಡೆಯಲು ವಿನ್ಯಾಸಗೊಳಿಸಲಾಗಿರುವ ಸಂಬಂಧಿತ ಶೈಕ್ಷಣಿಕ ಕಂಟೆಂಟ್ ಅನ್ನು ಹೆಡ್ಸ್ ಅಪ್ ತೋರಿಸುತ್ತದೆ.

Song for Charlie ಯೊಂದಿಗೆ ಪಾಲುದಾರಿಕೆಯಲ್ಲಿ, Snapchat ನಲ್ಲಿ ಈಗಾಗಲೇ 260 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆ ಪಡೆದಿರುವ ವೀಡಿಯೊ ಜಾಹೀರಾತು ಅಭಿಯಾನವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ ಮತ್ತು ಫೆಂಟಾನಿಲ್ ಮತ್ತು ನಕಲಿ ಮಾತ್ರೆಗಳ ಅಪಾಯಗಳ ಕುರಿತು ಜಾಗೃತಿ ಮೂಡಿಸುವ ಮತ್ತು Snapchatter ಗಳನ್ನು ಹೊಸ ಹೆಡ್ಸ್ ಅಪ್ ಶೈಕ್ಷಣಿಕ ಪೋರ್ಟಲ್‌ಗೆ ನಿರ್ದೇಶಿಸುವ ಹೊಸ ರಾಷ್ಟ್ರೀಯ ಫಿಲ್ಟರ್ ಅನ್ನು ನಾವು ಬಿಡುಗಡೆ ಮಾಡಲಿದ್ದೇವೆ. Snap ಒರಿಜಿನಲ್ಸ್ ನ್ಯೂಸ್ ಶೋ, ಗುಡ್ ಲಕ್ ಅಮೆರಿಕಾದ ಹೊಸ ಸಂಚಿಕೆ ಸದ್ಯದಲ್ಲೇ ಪ್ರದರ್ಶನಗೊಳ್ಳಲಿದ್ದು, ಫೆಂಟಾನಿಲ್ ಬಿಕ್ಕಟ್ಟಿನ ಕುರಿತು ನಮ್ಮ ಸಮುದಾಯಕ್ಕೆ ಅರಿವು ಮೂಡಿಸಲು ಸಮರ್ಪಿತವಾಗಿರುವ ಸಂಚಿಕೆಗಳ ಸರಣಿಯ ವಿಶೇಷ ಆವೃತ್ತಿ ಮುಂದುವರಿಯಲಿದೆ.

ನಮ್ಮ ನಿರಂತರ ಕಾರ್ಯಾಚರಣೆಯ ಸುಧಾರಣೆಗಳು ಮತ್ತು ಶೈಕ್ಷಣಿಕ ಪ್ರಯತ್ನಗಳು ಫೆಂಟಾನಿಲ್ ಬಿಕ್ಕಟ್ಟಿನ ವಿನಾಶಕಾರಿ ಪರಿಣಾಮಗಳಿಂದ ನಮ್ಮ ಸಮುದಾಯವನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತವೆ ಎಂದು ನಾವು ಆಶಿಸುತ್ತೇವೆ. ನಮ್ಮ ಸಮುದಾಯದಲ್ಲಿ ಮಾದಕಪದಾರ್ಥಗಳು ಜನರ ಬಲಿಪಡೆದಿರುವುದನ್ನು ತಿಳಿದು ನಾವು ದುಃಖಿತರಾಗಿದ್ದೇವೆ. ತಮ್ಮ ಕಥೆಗಳನ್ನು ಹಂಚಿಕೊಳ್ಳಲು, ಸಹಭಾಗಿತ್ವ ಮಾಡಲು ಮತ್ತು ಪ್ರಗತಿ ಸಾಧಿಸಲು ನಮ್ಮನ್ನು ಉತ್ತರದಾಯಿಗಳಾಗಿಸಲು ಮುಂದೆ ಬಂದಿರುವ ಕುಟುಂಬಗಳ ಔದಾರ್ಯ ಮತ್ತು ದಯಾಶೀಲತೆಯನ್ನು ನಾವು ಬಹುವಾಗಿ ಮೆಚ್ಚುತ್ತೇವೆ. ನಮ್ಮ ಸಮುದಾಯವನ್ನು ಸುರಕ್ಷಿಯವಾಗಿ ಇರಿಸಲು ಇನ್ನಷ್ಟು ಉತ್ತಮ ಮತ್ತು ಇನ್ನಷ್ಟು ಹೆಚ್ಚು ಕೆಲಸ ಮಾಡಲು ನಾವು ಅವಿಶ್ರಾಂತವಾಗಿ ಪ್ರಯತ್ನಿಸಲಿದ್ದೇವೆ.


- Team Snap

ಸುದ್ದಿಗಳಿಗೆ ಹಿಂತಿರುಗಿ