Snap ನ ಹೊಸ ಸುರಕ್ಷತಾ ಸಲಹಾ ಮಂಡಳಿಯನ್ನು ಭೇಟಿಯಾಗಿ!
ಅಕ್ಟೋಬರ್ 11, 2022
Snap ನ ಹೊಸ ಸುರಕ್ಷತಾ ಸಲಹಾ ಮಂಡಳಿಯನ್ನು ಭೇಟಿಯಾಗಿ!
ಅಕ್ಟೋಬರ್ 11, 2022
ಈ ವರ್ಷದ ಆರಂಭದಲ್ಲಿ, ಭೌಗೋಳಿಕತೆ, ಸುರಕ್ಷತಾ ಸಂಬಂಧಿತ ಪ್ರಕಾರಗಳ ವೈವಿಧ್ಯತೆಯನ್ನು ಒಳಗೊಳ್ಳಲು ಸದಸ್ಯತ್ವವನ್ನು ಹೆಚ್ಚಿಸುವ ಮತ್ತು ವಿಸ್ತರಿಸುವ ಗುರಿಯೊಂದಿಗೆ ನಮ್ಮ ಸುರಕ್ಷತಾ ಸಲಹಾ ಮಂಡಳಿ (SAB) ಅನ್ನು ಮರುನಿರ್ಮಿಸುವುದಾಗಿ Snap ಪ್ರಕಟಿಸಿತು. ಹಾಗೆ ಮಾಡಲು, ಸುರಕ್ಷತೆಯ ಎಲ್ಲ ಸಂಗತಿಗಳಿಗಾಗಿ Snap ಗೆ ಮಾರ್ಗದರ್ಶನ ಮತ್ತು ನಿರ್ದೇಶನ ಒದಗಿಸುವುದಕ್ಕಾಗಿ ತಮ್ಮ ಆಸಕ್ತಿಯನ್ನು ಔಪಚಾರಿಕವಾಗಿ ವ್ಯಕ್ತಪಡಿಸಲು ಜಗತ್ತಿನಾದ್ಯಂತದ ತಜ್ಞರು ಮತ್ತು ವ್ಯಕ್ತಿಗಳನ್ನು ಆಹ್ವಾನಿಸುವ ಒಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನಾವು ಆರಂಭಿಸಿದೆವು.
ನಾವು ಜಗತ್ತಿನಾದ್ಯಂತದ ವ್ಯಕ್ತಿಗಳು ಮತ್ತು ತಜ್ಞರಿಂದ ಡಜನ್‌ಗಟ್ಟಲೆ ಅರ್ಜಿಗಳನ್ನು ಸ್ವೀಕರಿಸಿದೆವು ಮತ್ತು ಒಂದು ವಸ್ತುನಿಷ್ಠ, ಬಹುಹಂತದ ಪ್ರಕ್ರಿಯೆಯ ಮೂಲಕ ಅವುಗಳನ್ನು ಮೌಲ್ಯಮಾಪನ ಮಾಡಿದೆವು, ಇದು ನಮ್ಮ ಆಯ್ಕೆ ಸಮಿತಿಯ ಶಿಫಾರಿತ ಮಟ್ಟವನ್ನು ಕಾರ್ಯನಿರ್ವಾಹಕ ಮಟ್ಟದಲ್ಲಿ ಅತ್ಯುನ್ನತ ಸ್ಥಿತಿ ತಲುಪಿತು. ಈ ನಿರ್ಣಾಯಕ ವಿಷಯಗಳಿಗೆ ಸಂಬಂಧಿಸಿ ಬೆಂಬಲ ನೀಡಲು ಮತ್ತು Snap ಜೊತೆಗೆ ಕೆಲಸ ಮಾಡಲು ತಮ್ಮ ಅಪೇಕ್ಷೆಯನ್ನು ತಿಳಿಸಲು ಅರ್ಜಿ ಸಲ್ಲಿಸಿದ ಎಲ್ಲರಿಗೂ ನಾವು ಧನ್ಯವಾದ ಸಲ್ಲಿಸುತ್ತೇವೆ ಮತ್ತು ಆ ಭಾರೀ ಆಸಕ್ತಿ ಮತ್ತು ಬದ್ಧತೆಯನ್ನು ಕಂಡು ನಾವು ವಿನೀತರಾಗಿದ್ದೇವೆ.
ಇಂದು, ನಮ್ಮ ಸಲಹಾ ಮಂಡಳಿ 9 ದೇಶಗಳಲ್ಲಿ ನೆಲೆಸಿರುವ ಮತ್ತು 11 ಭಿನ್ನ ಭೌಗೋಳಿಕತೆಗಳು ಮತ್ತು ಪ್ರದೇಶಗಳನ್ನು ಪ್ರತಿನಿಧಿಸುವ 18 ಸದಸ್ಯರಿಗೆ ವಿಸ್ತರಿಸಿದೆ ಎಂದು ಪ್ರಕಟಿಸಲು ನಾವು ಸಂತೋಷಪಡುತ್ತೇವೆ. ಹೊಸ ಮಂಡಳಿಯು ಸಾಂಪ್ರದಾಯಿಕ ಆನ್‌ಲೈನ್ ಸುರಕ್ಷತೆಯ ಮೇಲೆ ಗಮನಕೇಂದ್ರಿತ ಲಾಭರಹಿತ ಮತ್ತು ಸಂಬಂಧಿತ ಸಂಘಟನೆಗಳು ಹಾಗೂ ತಂತ್ರಜ್ಞರು, ಶಿಕ್ಷಣತಜ್ಞರು, ಸಂಶೋಧಕರು ಮತ್ತು ಆನ್‌ಲೈನ್ ಹಾನಿಯನ್ನು ಎದುರಿಸಿದ ಸಂತ್ರಸ್ತರು ಸೇರಿದಂತೆ 15 ವೃತ್ತಿಪರರನ್ನು ಒಳಗೊಂಡಿದೆ. ಸದಸ್ಯರು ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ ಹಾಗೂ ಮಾರಣಾಂತಿಕ ಮಾದಕಪದಾರ್ಥಗಳಂತಹ ಆನ್‌ಲೈನ್ ಸುರಕ್ಷತಾ ಅಪಾಯಗಳ ವಿರುದ್ಧ ಹೋರಾಡುವಲ್ಲಿ ಗಮನಾರ್ಹ ತಜ್ಞರಾಗಿದ್ದಾರೆ ಮತ್ತು ಸುರಕ್ಷತಾ ಸಂಬಂಧಿತ ವಿಭಾಗಗಳಾದ್ಯಂತ ವಿಸ್ತಾರವಾದ ಅನುಭವವನ್ನು ಹೊಂದಿದ್ದಾರೆ. ಇದರ ಜೊತೆಗೆ, ಯುವಕರು ಮತ್ತು ಯುವ ಪ್ರತಿಪಾದಕರಾಗಿರುವ 3 ಮಂಡಳಿ ಸದಸ್ಯರು ನಮ್ಮನ್ನು ಸೇರಿಕೊಳ್ಳಲಿದ್ದಾರೆ. ಮಂಡಳಿಯ ಒಂದು ಭಾಗವು, ಬದ್ಧತೆಯುಳ್ಳ Snapchat ಬಳಕೆದಾರರನ್ನು ಹೊಂದಿದೆ ಎನ್ನುವುದನ್ನು ಖಚಿತಪಡಿಸಲು; ಮತ್ತು ವೃತ್ತಿಪರ ದೃಷ್ಟಿಕೋನಗಳನ್ನು Snapchat ಸಮುದಾಯದ ಮೂಲ ಜನಸಮುದಾಯದ ವಾಸ್ತವಿಕ ದೃಷ್ಟಿಕೋನದೊಂದಿಗೆ ಸಮತೋಲನಗೊಳಿಸಲು; ಎಲ್ಲ ಪ್ರಮುಖ "ಯುವ ಧ್ವನಿ" ಮತ್ತು ದೃಷ್ಟಿಕೋನಗಳಿಗೆ ಮಂಡಳಿಯು ಸಿದ್ಧ-ಪ್ರವೇಶ ಹೊಂದಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಈ ಅರ್ಜಿದಾರರನ್ನು ಆಯ್ಕೆ ಮಾಡಿದೆವು.
ಈ ಕೆಳಗಿನ ವ್ಯಕ್ತಿಗಳು Snap ನ ಹೊಸ ಸುರಕ್ಷತಾ ಸಲಹಾ ಮಂಡಳಿಯಲ್ಲಿ ಇದ್ದಾರೆ:
ಅಲೆಕ್ಸ್ ಹೋಮ್ಸ್, ಉಪ CEO, ದಿ ಡಯಾನಾ ಅವಾರ್ಡ್, UK
ಅಮಂಡಾ ಥರ್ಡ್, ವೃತ್ತಿಪರ ರೀಸರ್ಚ್ ಫೆಲೋ, ಇನ್‌ಸ್ಟಿಟ್ಯೂಟ್ ಆಫ್ ಕಲ್ಚರ್ ಆ್ಯಂಡ್ ಸೊಸೈಟಿ, ವೆಸ್ಟರ್ನ್ ಸಿಡ್ನಿ ಯುನಿವರ್ಸಿಟಿ, ಆಸ್ಟ್ರೇಲಿಯಾ
ಕಾಸ್ಟ್ರಾ ಪಿಯರೆ, ಯುವಕರು, USAID ಯ ಡಿಜಿಟಲ್ ಯೂತ್ ಕೌನ್ಸಿಲ್ ಸದಸ್ಯ, ಹೈಟಿ
ಎಡ್ ಟರ್ನಾನ್, ಅಧ್ಯಕ್ಷರು, ಸಾಂಗ್ ಫಾರ್ ಚಾರ್ಲಿ, U.S.
ಹನಿ ಫರೀದ್, ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್, ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್‌ಲಿ, U.S.
ಜೇಕಬ್ ಸೆಡೆಸ್ಸಿ, ಯುವಕರು, ವಿದ್ಯಾರ್ಥಿ ಮತ್ತು ಅರೆಕಾಲಿಕ ಟೆಕ್ ಪತ್ರಕರ್ತ, U.S.
ಜೇಮ್ಸ್ ಕ್ಯಾರೊಲ್, ಜೂನಿಯರ್., ನ್ಯಾಷನಲ್ ಡ್ರಗ್ ಕಂಟ್ರೋಲ್ ಪಾಲಿಸಿಯ ಮಾಜಿ ನಿರ್ದೇಶಕ, U.S.
ಜೆನಿಸ್ ರಿಚರ್ಡ್ಸ್‌ಸನ್, ನೆದರ್‌ಲ್ಯಾಂಡ್ಸ್‌ನಲ್ಲಿ ಇರುವ ಮತ್ತು ಯುರೋಪ್ ಮತ್ತು ಉತ್ತರ ಆಫ್ರಿಕಾದ ಮೇಲೆ ಗಮನ ಕೇಂದ್ರೀಕರಿಸಿರುವ ಮಕ್ಕಳ ಹಕ್ಕುಗಳು ಮತ್ತು ಡಿಜಿಟಲ್ ನಾಗರಿಕತ್ವ ಕುರಿತ, Insight2Act, ಅಂತಾರಾಷ್ಟ್ರೀಯ ಸಲಹೆಗಾರ
ಜಸ್ಟಿಸ್ ಅಟ್ಲನ್, ಪ್ರಧಾನ ನಿರ್ದೇಶಕ, eEnfance, ಫ್ರಾನ್ಸ್
ಜಟ್ಟಾ ಕ್ರಾಲ್, ಮಂಡಳಿ ಅಧ್ಯಕ್ಷರು, Stiftung Digitale Chancen (ಡಿಜಿಟಲ್ ಅವಕಾಶಗಳ ವೇದಿಕೆ), ಜರ್ಮನಿ
ಲಿನಾ ನೀಲಾನ್, ಕಾರ್ಪೊರೇಟ್ ಮತ್ತು ಕಾರ್ಯತಂತ್ರದ ಉಪಕ್ರಮಗಳ ನಿರ್ದೇಶಕರು, ಲೈಂಗಿಕ ಶೋಷಣೆ ಕುರಿತ ರಾಷ್ಟ್ರಿಯ ಕೇಂದ್ರ (NCOSE), U.S.
ಲೂಸಿ ಥಾಮಸ್, CEO ಮತ್ತು ಸಹಸ್ಥಾಪಕರು, PROJECT ROCKIT, ಆಸ್ಟ್ರೇಲಿಯಾ
ಮರಿಯಾ ಲೂಡ್‌ಬರ್ಗ್, ತಜ್ಞ ಸಲಹೆಗಾರರು, ಫ್ರೆಂಡ್ಸ್/ವರ್ಲ್ಡ್ ಆ್ಯಂಟಿ ಬುಲ್ಲಿಯಿಂಗ್ ಫೋರಮ್, ಸ್ವೀಡನ್
ಮೈಕೆಲ್ ರಿಚ್, ಮಕ್ಕಳ ತಜ್ಞರು, ಡಿಜಿಟಲ್ ವೆಲ್‌ನೆಸ್ ಲ್ಯಾಬ್ & ಕ್ಲಿನಿಕ್ ಫಾರ್ ಇಂಟರ‍್ಯಾಕ್ಟಿವ್ ಮೀಡಿಯಾ ಆ್ಯಂಡ್ ಇಂಟರ್‌ನೆಟ್ ಡಿಸಾರ್ಡರ್ ಸ್ಥಾಪಕ ಮತ್ತು ನಿರ್ದೇಶಕ, ಬೋಸ್ಟನ್ ಮಕ್ಕಳ ಆಸ್ಪತ್ರೆ, ಹಾರ್ವರ್ಡ್ ಮೆಡಿಕಲ್ ಸ್ಕೂಲ್, U.S.
ಒಕುಲಜಾ, ರ‍್ಯಾಪರ್, ಕಂಟೆಂಟ್ ಕ್ರಿಯೇಟರ್, ಯುವ ಪ್ರತಿಪಾದಕ, UK
ಸುಧೀರ್ ವೆಂಕಟೇಶ್, ಪ್ರೊಫೆಸರ್, ಕೊಲಂಬಿಯಾ ವಿಶ್ವವಿದ್ಯಾಲಯ, U.S.
ವಿಕ್ಟೋರಿಯಾ ಬೇನ್ಸ್, IT ಪ್ರೊಫೆಸರ್, ಗ್ರೀಶಂ ಕಾಲೇಜ್, UK
ಯುಹ್ಯುನ್ ಪಾರ್ಕ್, ಸ್ಥಾಪಕ ಮತ್ತು CEO, DQ ಇನ್ಸ್‌ಟಿಟ್ಯೂಟ್, ಸಿಂಗಾಪುರ
"ತಂತ್ರಜ್ಞಾನದಿಂದಾಗಿ ನಾವು ಹಿಂದೆಂದಿಗಿಂತಲೂ ಹೆಚ್ಚು ಸಂಪರ್ಕಿತರಾಗಿದ್ದೇವೆ ಮತ್ತು ಸಾಮಾಜಿಕ ಸಂವಹನವನ್ನು ಪೋಷಿಸುವಲ್ಲಿ Snap ಪ್ರಧಾನ ಪಾತ್ರ ವಹಿಸಿದೆ" ಎಂದು ಶ್ವೇತಭವನದ ಮಾಜಿ "ಡ್ರಗ್ ಝಾರ್" ಮತ್ತು ಪ್ರಸ್ತುತ ಮೈಕೆಲ್ ಬೆಸ್ಟ್ ಅಡ್ವೈಸರ್‌ನಲ್ಲಿ ಮುಖ್ಯಸ್ಥರಾಗಿರುವ ಜಿಲ್ ಕ್ಯಾರೋಲ್ ಹೇಳಿದರು. “ಸಲಹಾ ಮಂಡಳಿಯ ಸದಸ್ಯನಾಗಿ Snap ಗೆ ಅದರ ಕೆಲಸದಲ್ಲಿ ಸಹಾಯ ಮಾಡಲು ಸಿಕ್ಕ ಅವಕಾಶದಿಂದ ನಾವು ಗೌರವಿತನಾಗಿದ್ದೇನೆ, ಬೆಳವಣಿಗೆಯನ್ನು ಮುಂದುವರಿಸಲು ಅವರ ಜಾಗತಿಕ ಸಮುದಾಯಕ್ಕೆ ಈ ಎಂದೆಂದಿಗೂ ವಿಕಸನಗೊಳ್ಳುವ ಡಿಜಿಟಲ್ ತಾಣವನ್ನು ಸಕಾರಾತ್ಮಕ ಮತ್ತು ಸುರಕ್ಷಿತ ಸ್ಥಳವಾಗಿಸಲು ಕೆಲಸ ಮಾಡಲಿದ್ದೇನೆ.”
ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಹನಿ ಫರೀದ್ ಅವರಿಂದ: "U.S. ನಲ್ಲಿ ಒಂದು ಮಗು ಸಾಮಾಜಿಕ ಮಾಧ್ಯಮಕ್ಕೆ ಸೇರುವ ಸರಾಸರಿ ವಯಸ್ಸು 13 ಆಗಿದೆ. ಮಗುವಿನ ಮಿದುಳಿನ ಮುಂಭಾಗ ಪೂರ್ಣ ಬೆಳವಣಿಗೆಯಾಗಲು ಇನ್ನೂ ಹತ್ತು ವರ್ಷಗಳು ಬೇಕಾಗುತ್ತದೆ. ನಾವು ಆಫ್‌ಲೈನ್ ಜಗತ್ತಿನಲ್ಲಿ ಮಾಡುವಂತೆ, ಈ ಬೃಹತ್ ಆನ್‌ಲೈನ್ ಪ್ರಯೋಗದಲ್ಲಿ ಭಾಗವಹಿಸುವ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ. ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಒಡ್ಡುವ ಅಪಾಯಗಳನ್ನು Snap ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಿದೆ ಎನ್ನುವ ಕುರಿತು ನಾನು ಪ್ರೇರೇಪಿತನಾಗಿದ್ದಾನೆ ಮತ್ತು ಅವರ (ಮತ್ತು ಪ್ರತಿಯೊಬ್ಬರ) ಸೇವೆಯು ಅತಿಕಿರಿಯ ಮತ್ತು ಅತ್ಯಂತ ದುರ್ಬಲ ನಾಗರಿಕರಿಗೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಲು ಅವರ ಗಮನಾರ್ಹ ತಂಡದೊಂದಿಗೆ ಸೇರಲು ನಾನು ರೋಮಾಂಚಿತನಾಗಿದ್ದೇನೆ."
"Snapchat ಅನ್ನವುದು ಹದಿಹರೆಯದ ರೋಗಿಗಳು ಪರಸ್ಪರ ಮಾತನಾಡುವ ವೇದಿಕೆಯಾಗಿದೆ; ಇದು ಅವರ ಭಾಷೆ," ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್, ಬೋಸ್ಟನ್ ಮಕ್ಕಳ ಆಸ್ಪತ್ರೆಯ ಡಿಜಿಟಲ್ ವೆಲ್‌ನೆಸ್ ಲ್ಯಾಬ್ & ಕ್ಲಿನಿಕ್ ಫಾರ್ ಇಂಟರ‍್ಯಾಕ್ಟಿವ್ ಮೀಡಿಯಾ ಆ್ಯಂಡ್ ಇಂಟರ್‌ನೆಟ್ ಡಿಸಾರ್ಡರ್ಸ್‌ನ ಸ್ಥಾಪಕ ಮತ್ತು ನಿರ್ದೇಶಕ, ಮಕ್ಕಳ ತಜ್ಞ ಮೈಕೆಲ್ ರಿಚ್ ಹೇಳಿದರು. "ದೃಶ್ಯರೂಪದ ಸಾಮಾಜಿಕ ಮಾಧ್ಯಮಗಳಲ್ಲಿ ಯುವಜನರು ಹೇಗೆ ಸಂವಹನ ನಡೆಸುತ್ತಾರೆ ಎನ್ನುವುದು ಅವರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ಹೇಗೆ ಸಕಾರಾತ್ಮಕ ಮತ್ತು ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ ಎನ್ನುವ ಕುರಿತ ಸಾಕ್ಷ್ಯ ಆಧರಿತ Snap ನ ಮುನ್ನೋಟದಿಂದ ನಾನು ಉತ್ತೇಜಿತನಾಗಿದ್ದೇನೆ."
ಹೊಸ ಮಂಡಳಿಯು ಈ ತಿಂಗಳಿನಲ್ಲಿ ಮೊದಲ ಬಾರಿಗೆ ಸಭೆ ಸೇರಲಿದೆ ಮತ್ತು ಆಬಳಿಕ ಒಂದು ಕ್ಯಾಲೆಂಡರ್ ವರ್ಷದಲ್ಲಿ ಮುರು ಬಾರಿ ಸಭೆ ನಡೆಸಲಿದೆ. ನಮ್ಮ ಉದ್ಘಾಟನಾ ಸಭೆಯು Snapchat ನ ಹೊಸ ಕೌಟುಂಬಿಕ ಕೇಂದ್ರದ ಅವಲೋಕನ, ಹಾಗೂ ಫೆಬ್ರವರಿ 7 ರಂದು ಅಂತಾರಾಷ್ಟ್ರೀಯ ಇಂಟರ್‌ನೆಟ್ ಸುರಕ್ಷತಾ ದಿನ 2023 ಕ್ಕೆ ನಮ್ಮ ಕೊಡುಗೆಯ ಮುನ್ನೋಟವನ್ನು ಒಳಗೊಂಡಿರಲಿದೆ. ಮಂಡಳಿ ಸದಸ್ಯರು ವ್ಯಯಿಸಿದ ಸಮಯಕ್ಕಾಗಿ ಅವರಿಗೆ ಭತ್ಯೆ ನೀಡುವುದಿಲ್ಲ, ಆದರೆ Snap ನ ಗುರಿಗಳೊಂದಿಗೆ ಹೋಲಿಕೆಯಾಗುವ ಒಂದು ಸಂಘಟನೆಯ ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು Snap ಹೊಂದಿದೆ.
Snap ನ ಸುರಕ್ಷತಾ ಮಂಡಳಿಯ ಭಾಗವಾಗಿರುವುದು ಯಾವುದೇ ರೀತಿಯಲ್ಲೂ ಸುರಕ್ಷತಾ ವಿಷಯಗಳಿಗೆ ಸಂಬಂಧಿಸಿ ನಮ್ಮೊಂದಿಗೆ ತೊಡಗಕೊಳ್ಳುವ ಏಕೈಕ ಮಾರ್ಗವಾಗಿರುವುದಿಲ್ಲ ಎಂದು ಅರ್ಜಿ ಸಲ್ಲಿಸಿದ ಎಲ್ಲರಿಗೂ ನಾವು ತಿಳಿಸಬಯಸುತ್ತೇವೆ. ನಮ್ಮ ಹೊಸ ಪೋಷಕರ ಮತ್ತು ಆರೈಕೆ ಮಾಡುವವರ ಟೂಲ್, ಕೌಟುಂಬಿಕ ಕೇಂದ್ರವನ್ನು ನಾವು ಅಭಿವೃದ್ಧಿಪಡಿಸಿದ ರೀತಿಯಲ್ಲೇ, ಸುರಕ್ಷತಾ ಸಂಬಂಧಿತ ನೀತಿಗಳು, ಉತ್ಪನ್ನ ವೈಶಿಷ್ಟ್ಯಗಳು ಮತ್ತು ಇತರ ಉಪಕ್ರಮಗಳ ಕುರಿತು ನಮ್ಮ ಸಲಹಾ ಮಂಡಳಿ ಸದಸ್ಯರು ಹಾಗೂ ಜಗತ್ತಿನಾದ್ಯಂತದ ಇತರ ತಜ್ಞರು ಮತ್ತು ಪ್ರತಿಪಾಧಕರ ಅಭಿಪ್ರಾಯ ಮತ್ತು ದೃಷ್ಟಿಕೋನಗಳನ್ನು ಪಡೆಯಲು ನಾವು ಯೋಜನೆ ಮಾಡಿದ್ದೇವೆ. Snapchat ನಲ್ಲಿ ಸುರಕ್ಷತೆಯನ್ನು ಪೋಷಿಸುವುದನ್ನು ಮುಂದುವರಿಸುತ್ತ ಮತ್ತು ತಮ್ಮ ಸ್ನೇಹಿತರೊಂದಿಗೆ ಸಂಪರ್ಕಿಸಲು, ಕ್ರಿಯೇಟ್ ಮಾಡಲು ಮತ್ತು ವಿನೋದ ಹೊಂದಲು ಬಯಸುವ ಹದಿಹರೆಯದವರು ಮತ್ತು ಯುವಜನರನ್ನು ಬೆಂಬಲಿಸುತ್ತ, ಈ ಪ್ರಗತಿಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲು ನಾವು ಎದುರು ನೋಡುತ್ತಿದ್ದೇವೆ!
- ಜಾಕ್ವೆಲಿನ್ ಬೌಚೆರೆ, Snap ಸುರಕ್ಷತಾ ವೇದಿಕೆಯ ಜಾಗತಿಕ ಮುಖ್ಯಸ್ಥೆ