ಶಾಲೆಗೆ ಮರಳುವುದು ಮತ್ತು ಆನ್‌ಲೈನ್ ಸುರಕ್ಷತೆಯನ್ನು ಆದ್ಯತೆಗೊಳಿಸುವುದು
ಸೆಪ್ಟೆಂಬರ್ 13, 2022
ಶಾಲೆಗೆ ಮರಳುವುದು ಮತ್ತು ಆನ್‌ಲೈನ್ ಸುರಕ್ಷತೆಯನ್ನು ಆದ್ಯತೆಗೊಳಿಸುವುದು
ಸೆಪ್ಟೆಂಬರ್ 13, 2022
ಬಹುತೇಕ ಜಗತ್ತಿನಾದ್ಯಂತ ಹದಿಹರೆಯದವರು ಮತ್ತು ಯುವಜನರು ಶಾಲೆಗೆ ಮರಳುತ್ತಿದ್ದಾರೆ ಮತ್ತು ಜಾಗತಿಕ ಸಾಂಕ್ರಾಮಿಕ ಪಿಡುಗು ನಮ್ಮ ಬೆನ್ನ ಹಿಂದಿರುವುದರಿಂದ, ಅವರು ತರಗತಿಗೆ ಮರಳುತ್ತಾರೆ ಮತ್ತು ಮುಖಾಮುಖಿಯಾಗಿ ಮತ್ತು ಆನ್‌ಲೈನ್‌ನಲ್ಲಿ — ಒಂದಿಷ್ಟು ಸ್ಥಿರತೆಯೊಂದಿಗೆ ಸ್ನೇಹಿತರು ಮತ್ತು ಸಹಪಾಠಿಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂಬಂತೆ ಕಾಣುತ್ತಿದೆ. ಹಾಗಾಗಿ, ಆನ್‌ಲೈನ್ ಅಪಾಯಗಳ ಕುರಿತು ಎಚ್ಚರದಿಂದಿರುವಂತೆ ಮತ್ತು ಉತ್ತಮ ಆನ್‌ಲೈನ್ ಹವ್ಯಾಸಗಳು ಮತ್ತು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಹಾಗೂ Snapchat ನಲ್ಲಿರುವ ಯಾವುದಾದರೂ ನಿಮಗೆ ಅಸುರಕ್ಷಿತ ಅಥವಾ ಅಹಿತಕರ ಭಾವನೆ ಉಂಟುಮಾಡಿದರೆ ನಮ್ಮನ್ನು ಸಂಪರ್ಕಿಸುವಂತೆ ಕುಟುಂಬಗಳು ಮತ್ತು ಹದಿಹರೆಯದವರಿಗೆ ನೆನಪಿಸಲು ಇದು ಸೂಕ್ತ ಸಮಯವಾಗಿರುವಂತೆ ಕಾಣುತ್ತಿದೆ.
Snapchat ನಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಅನುಭವಗಳನ್ನು ಪ್ರೋತ್ಸಾಹಿಸುವುದು Snap ನಲ್ಲಿ ನಮಗೆ ಮೊದಲ ಆದ್ಯತೆಯಾಗಿದೆ, ಮತ್ತು ನಮ್ಮ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ. Snapchatter ಗಳು ಮತ್ತು ಇನ್ನಷ್ಟು ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವವರ ವರ್ತನೆಗಳು ಮತ್ತು ನಡವಳಿಕೆಗಳನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳುವುದು ಇದರ ನಿರ್ಣಾಯಕ ಭಾಗವಾಗಿದೆ.
ಈ ವರ್ಷದ ಆರಂಭದಲ್ಲಿ, ಒಟ್ಟಾರೆ ಡಿಜಿಟಲ್ ಯೋಗಕ್ಷೇಮಕ್ಕೆ ಕೊಡುಗೆ ನೀಡುವ ಆನ್‌ಲೈನ್ ಬದುಕಿನ ವಿವಿಧ ಆಯಾಮಗಳಲ್ಲಿ ನಾವು ಹೊಸ ಸಂಶೋಧನೆಯನ್ನು ನಡೆಸಿದೆವು. ಡಿಜಿಟಲ್ ಯೋಗಕ್ಷೇಮದ ಸುಮಾರು ಐದು ಆಯಾಮಗಳಿಗೆ ಸಂಬಂಧಿಸಿ ನಾವು ಆರು ರಾಷ್ಟ್ರಗಳಲ್ಲಿ (ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, UK ಮತ್ತು U.S.) ಒಟ್ಟು 9,003 ವ್ಯಕ್ತಿಗಳ, ನಿರ್ದಿಷ್ಟವಾಗಿ ಹದಿಹರೆಯದವರು (13-17 ವಯಸ್ಸಿನವರು), ಯುವಜನರು (18-24 ವಯಸ್ಸಿನವರು) ಮತ್ತು 13-19 ವಯಸ್ಸಿನ ಹದಿಹರೆಯದ ಮಕ್ಕಳ ಪೋಷಕರ ಅಭಿಪ್ರಾಯವನ್ನು ನಾವು ಸಂಗ್ರಹಿಸಿದೆವು. ಪ್ರತಿ ದೇಶಕ್ಕಾಗಿ ಮತ್ತು ಎಲ್ಲ ಆರು ದೇಶಗಳಿಗಾಗಿ ಸಮಗ್ರವಾಗಿ ನಮ್ಮ ಮೊದಲ ಡಿಜಿಟಲ್ ಯೋಗಕ್ಷೇಮದ ಸೂಚ್ಯಂಕ ಒಳಗೊಂಡಂತೆ, ವಿವರಗಳು* ಮತ್ತು ಪೂರ್ಣ ಫಲಿತಾಂಶಗಳನ್ನು, ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಸುರಕ್ಷಿತ ಇಂಟರ್‌ನೆಟ್ ದಿನ 2023 ರಂದು ಬಿಡುಗಡೆ ಮಾಡಲಾಗುತ್ತದೆ. ಅದಾಗ್ಯೂ, ಶಾಲೆಗೆ ಮರಳುವಿಕೆ ಅವಧಿಯಲ್ಲಿನ ಹಾಗೂ ಸುರಕ್ಷಿತವಾಗಿ ಇರುವುದರ ಮಹತ್ವವನ್ನು ಕುಟುಂಬಗಳಿಗೆ ನೆನಪಿಸುವ ಪ್ರಯತ್ನವಾದ - ಪೋಷಕರು ಮತ್ತು ಆರೈಕೆ ಮಾಡುವವರಿಗಾಗಿನ ನಮ್ಮ ಹೊಸ ಕೌಟುಂಬಿಕ ಕೇಂದ್ರ ಟೂಲ್‌ಗಳು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿರುವಂತೆ, ಸಮೀಕ್ಷೆಯಲ್ಲಿ ಕಂಡುಬಂದ ಕೆಲವು ಪ್ರಾಥಮಿಕ ಅಂಶಗಳನ್ನು ನಾವು ಹಂಚಿಕೊಳ್ಳುತ್ತಿದ್ದೇವೆ.
ಆನ್‌ಲೈನ್ ಅಪಾಯಗಳನ್ನು ಮೌಲ್ಯಮಾಪನ ಮಾಡುವುದು
ಹದಿಹರೆಯದವರು ಆನ್‌ಲೈನ್‌ನಲ್ಲಿ ಹರ್ಷದಿಂದಿದ್ದಾರೆಯೇ, ನರಳುತ್ತಿದ್ದಾರೆಯೇ ಅಥವಾ ಎರಡರ ನಡುವೆ ಇದ್ದಾರೆಯೇ ಎಂದು ನಿರ್ಧರಿಸುವುದಕ್ಕೆ ನೆರವಾಗಲು, ಅವರ ಅಪಾಯಕ್ಕೆ ಒಡ್ಡಿಕೊಳ್ಳುವ ಪ್ರಮಾಣವನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕವಾಗಿದೆ. ಆನ್‌ಲೈನ್ ಅಪಾಯಗಳು ಹೆಚ್ಚು ವೈಯಕ್ತಿಕವಾದಾಗ, ಒಡ್ಡಿಕೊಳ್ಳುವಿಕೆಯು ಡಿಜಿಟಲ್ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಹೊಂದಿರುತ್ತದೆ ಎಂದು ನಮ್ಮ ಸಂಶೋಧನೆ ದೃಢಪಡಿಸಿರುವುದು ಆಶ್ಚರ್ಯವೇನಲ್ಲ.
ನಮ್ಮ ಅಧ್ಯಯನದ ಪ್ರಕಾರ, ಅವಹೇಳನ ಮಾಡುವುದು, ನಿಂದಿಸುವುದು, ಉದ್ದೇಶಪೂರ್ವಕ ಮುಜುಗರ ಉಂಟುಮಾಡುವಿಕೆ ಮತ್ತು "ಫ್ಲೇಮಿಂಗ್" ಸೇರಿದಂತೆ ಆನ್‌ಲೈನ್ ಬೈಗುಳ ಮತ್ತು ಕಿರುಕುಳದ ವಿವಿಧ ಸ್ವರೂಪಗಳು ಯುವ ಜನರ ಡಿಜಿಟಲ್ ಯೋಗಕ್ಷೇಮದ ಮೇಲೆ ಪರಿಣಾಮ ಬೀರಿವೆ. ಲೈಂಗಿಕ ಅಪೇಕ್ಷೆ ಅಥವಾ ಆತ್ಮಹತ್ಯೆ ಅಥವಾ ಸ್ವಯಂ ಹಾನಿಯ ಆಲೋಚನೆಗಳನ್ನು ಹೊಂದುವುದು ಮುಂತಾದ ಲೈಂಗಿಕ ಅಥವಾ ಸ್ವಯಂ-ಹಾನಿ ಸಂಬಂಧಿತ ಆನ್‌ಲೈನ್ ಅಪಾಯಗಳಿಗೆ ಎದುರಾಗುವುದಕ್ಕೂ ಇದನ್ನೇ ಹೇಳಬಹುದು.
ಅದಾಗ್ಯೂ, ಆಶ್ಚರ್ಯಕರ ಸಂಗತಿ ಏನೆಂದರೆ, ಹದಿಹರೆಯದವರು ಮತ್ತು ಯುವಜನರಲ್ಲಿ ಇತರ ಆನ್‌ಲೈನ್ ಅಪಾಯಗಳ ಸ್ಪಷ್ಟವಾಗಿ ಕಾಣುವ "ಸಾಮಾನ್ಯೀಕರಣ". ಸಂಶೋಧನೆಯ ಅನುಸಾರ, ಆನ್‌ಲೈನ್‌ನಲ್ಲಿ ಬೇರೆಯವರ ಸೋಗು ಹಾಕುವುದು, ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ಹರಡುವುದು ಮತ್ತು ಅನಪೇಕ್ಷಿತ ಅಥವಾ ಸ್ವಾಗತಾರ್ಹವಲ್ಲದ ಸಂಪರ್ಕಕ್ಕೆ ಒಡ್ಡಿಕೊಳ್ಳುವುದು ಡಿಜಿಟಲ್ ಯೋಗಕ್ಷೇಮಕ್ಕೆ ಸಂಬಂಧಿಸಿ ದುರ್ಬಲ ಪಾರಸ್ಪರಿಕ ಸಂಬಂಧಗಳನ್ನು ಹೊಂದಿರುವ ಕೆಲವು ಅಪಾಯದ ವಿಧಗಳಾಗಿವೆ. ಬಹುಶಃ ಇನ್ನೂ ಹೆಚ್ಚಿನ ಕಳವಳದ ವಿಷಯವೆಂದರೆ ಯುವ ಜನರ ಪ್ರತಿಕ್ರಿಯೆಗಳು. ಸುಮಾರು ಮೂರನೇ ಎರಡರಷ್ಟು ಪ್ರತಿಕ್ರಿಯೆದಾರರು (64%) ಸಂಬಂಧಿತ ವೇದಿಕೆ ಅಥವಾ ಸೇವೆಗ ವರದಿ ಮಾಡುವ ಬದಲಾಗಿ – ಆನ್‌ಲೈನ್ ಕೆಟ್ಟ ನಡವಳಿಕೆಯನ್ನು ಕಡೆಗಣಿಸುವುದಾಗಿ ಅಥವಾ ಮರೆತುಬಿಡುವುದಾಗಿ ಹೇಳಿದರು. ಅಂತಹ ನಡವಳಿಕೆ "ದೊಡ್ಡ ಸಂಗತಿಯೇನಲ್ಲ" ಎಂದು ಅವರು ಹೇಳುತ್ತಾರೆ ಮತ್ತು "ಯಾರೋ ಒಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರಷ್ಟೇ" ಎಂದು ಭಾವಿಸುತ್ತಾರೆ. ಇದರೊಂದಿಗೆ ಸರಾಸರಿ ಇನ್ನೊಂದು ಕಾಲು ಭಾಗ (27%) ಕೆಟ್ಟ ಜನರು ಗಂಭೀರ ಪರಿಣಾಮಗಳನ್ನು ಎದುರಿಸುವ ಸಾಧ್ಯತೆ ಕಡಿಮೆ ಎಂದರು, ಮತ್ತು ಈ ಸಂಶೋಧನೆಯಲ್ಲಿ ಭಾಗವಹಿಸಿದ 10 ರಲ್ಲಿ 9 ಜನರು, ನೀತಿ ಉಲ್ಲಂಘಿಸುವ ಘಟನೆಗಳನ್ನು ಆನ್‌ಲೈನ್ ವೇದಿಕೆಗಳು ಮತ್ತು ಸೇವೆಗಳಿಗೆ ವರದಿ ಮಾಡದೆ ಇರುವುದಕ್ಕಾಗಿ ಕೆಲವು ನಿರಾಸಕ್ತಿಯ ಕಾರಣಗಳನ್ನು ಹೇಳಿದರು.
ವರದಿ ಮಾಡುವಿಕೆಯ ಪ್ರಾಮುಖ್ಯತೆ
ವರದಿ ಮಾಡುವಿಕೆಯ ಕುರಿತ ನಿರ್ಲಕ್ಷ್ಯವು ತಂತ್ರಜ್ಞಾನ ವೇದಿಕೆಗಳಾದ್ಯಂತ ಮರುಕಳಿಸುವ ಥೀಮ್ ಆಗಿದೆ, ಆದರೆ ನಾವು ಆ ಪ್ರವೃತ್ತಿಯನ್ನು ಬದಲಾಯಿಸಬೇಕಿದೆ ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಜನರು ಕಂಟೆಂಟ್ ಹಂಚಿಕೊಂಡಾಗ ಅಥವಾ ವರ್ತಿಸಿದಾಗ ನಮಗೆ ತಿಳಿಸುವಂತೆ ನಾವು ಹದಿಹರೆಯದವರು ಮತ್ತು ಕುಟುಂಬಗಳನ್ನು ಪ್ರೋತ್ಸಾಹಿಸಬೇಕು. ಇದು ಮಾಡಬೇಕಾದ ಸರಿಯಾದ ಕೆಲಸವಷ್ಟೇ ಅಲ್ಲ, ಜೊತೆಗೆ ಸಹ Snapchatter ಗಳನ್ನು ರಕ್ಷಿಸಲು ನೆರವಾಗುವುದಕ್ಕೆ ಸಕ್ರಿಯ ನಿಲುವು ತೆಗೆದುಕೊಳ್ಳುವ ವಿಧಾನವೂ ಆಗಿದೆ. ನಿಜಕ್ಕೂ, ನಿಂದನೆ ಅಥವಾ ಹಾನಿಕಾರಕ ಕಂಟೆಂಟ್ ಮತ್ತು ನಡವಳಿಕೆಯನ್ನು ವರದಿ ಮಾಡುವುದು – ಇದರಿಂದಾಗಿ ನಾವದನ್ನು ಪರಿಹರಿಸಬಹುದು – ಎಲ್ಲರಿಗೂ ಸಮುದಾಯದ ಅನುಭವವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಒಂದು ಕಂಟೆಂಟ್ ತುಣುಕನ್ನು ಒತ್ತಿ ಹಿಡಿಯುವ ಮೂಲಕ ಆ್ಯಪ್‌ನಲ್ಲಿ ಅಥವಾ ನಮ್ಮ ಬೆಂಬಲ ಸೈಟ್‌ನಲ್ಲಿ ಈ ವೆಬ್‌ಫಾರ್ಮ್ ಭರ್ತಿ ಮಾಡುವ ಮೂಲಕ Snapchatter ಗಳು ವರದಿ ಮಾಡಬಹುದು. (ಇನ್ನಷ್ಟು ತಿಳಿದುಕೊಳ್ಳಲು ಈ ವರದಿ ಮಾಡುವಿಕೆಯ ವಾಸ್ತವಾಂಶ ಹಾಳೆ ಪರಿಶೀಲಿಸಿ.) ಪ್ರಸ್ತುತ ಆಸ್ಟ್ರೇಲಿಯಾ, ಕೆನಡಾ, ನ್ಯೂ ಜೀಲ್ಯಾಂಡ್, UK ಮತ್ತು U.S. ನಲ್ಲಿ ಲಭ್ಯವಿರುವ ನಮ್ಮ ಹೊಸ ಕೌಟುಂಬಿಕ ಕೇಂದ್ರ ಟೂಲ್‌ಗಳನ್ನು ಬಳಸುತ್ತಿರುವ ಪೋಷಕರು ಮತ್ತು ಆರೈಕೆ ಮಾಡುವವರು, ಕಳವಳ ಉಂಟುಮಾಡುವ ಖಾತೆಗಳನ್ನು ವರದಿ ಕೂಡ ಮಾಡಬಹುದು – ಮತ್ತು ಅದನ್ನು ಅವರು ನೇರವಾಗಿ ಆ್ಯಪ್‌ನಲ್ಲಿ ಮಾಡಬಹುದು. ಮುಂಬರುವ ವಾರಗಳಲ್ಲಿ ಕೌಟುಂಬಿಕ ಕೇಂದ್ರವು ಇತರ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಲಭ್ಯವಿರಲಿದೆ ಮತ್ತು ಕೌಟುಂಬಿಕ ಕೇಂದ್ರಕ್ಕೆ ಹೆಚ್ಚುವರಿ ಅಪ್‌ಡೇಟ್‌ಗಳನ್ನು ಈ ವರ್ಷಾಂತ್ಯಕ್ಕೆ ಪ್ಲ್ಯಾನ್ ಮಾಡಲಾಗಿದೆ. ಇದು Snapchat ಗೆ ನಾವು ಒಂದು ವರದಿ ಮಾಡಿದ್ದೇವೆ ಎಂದು ಹದಿಹರೆಯದವರು ತಮ್ಮ ಪೋಷಕರು ಅಥವಾ ಆರೈಕೆ ಮಾಡುವವರಿಗೆ ಹೇಳುವ ಸಾಮರ್ಥ್ಯವನ್ನೂ ಒಳಗೊಂಡಿರಲಿದೆ.
ಫೆಬ್ರವರಿ 7, 2023 ರ ಸುರಕ್ಷಿತ ಇಂಟರ್‌ನೆಟ್ ದಿನದ – ವರೆಗಿನ ತಿಂಗಳುಗಳವರೆಗೆ ಮತ್ತು – ದಿನದಂದು ನಮ್ಮ ಡಿಜಿಟಲ್ ಯೋಗಕ್ಷೇಮ ಸಂಶೋಧನೆಯಿಂದ ಇನ್ನಷ್ಟು ಫಲಿತಾಂಶಗಳನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತೇವೆ. ಅಲ್ಲಿಯವರೆಗೆ, ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ಯೋಗಕ್ಷೇಮವನ್ನು ಅತ್ಯಂತ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಶಾಲೆಗೆ ಮರಳಿ!
- ಜಾಕ್ವೆಲಿನ್ ಬೌಚೆರೆ, Snap ಸುರಕ್ಷತಾ ವೇದಿಕೆಯ ಜಾಗತಿಕ ಮುಖ್ಯಸ್ಥೆ
*ಹದಿಹರೆಯದವರು ಮತ್ತು ಯುವಜನರ ಸ್ಯಾಂಪಲ್ ಗಾತ್ರ 6,002, ಇದರಲ್ಲಿ Snapchat ಬಳಸುತ್ತಿದ್ದೇವೆ ಎಂದು ಗುರುತಿಸಿಕೊಂಡ 4,654 ಜನರು ಸೇರಿದ್ದಾರೆ. ಒಟ್ಟು 6,087 ಪ್ರತಿಕ್ರಿಯೆದಾರರು Snapchat ಬಳಕೆದಾರ ಎಂದು ಗುರುತಿಸಿಕೊಂಡರು (ಪೋಷಕರು ಸೇರಿದಂತೆ). ಪ್ರಶ್ನೆಗಳು ನಿರ್ದಿಷ್ಟವಾಗಿ ಯಾವುದೇ ಒಂದು ಸಾಮಾಜಿಕ ಮಾಧ್ಯಮದ ಮೇಲೆ ಗಮನ ಕೇಂದ್ರೀಕರಿಸಲಿಲ್ಲ ಬದಲಾಗಿ ಸಾಮಾನ್ಯವಾಗಿ ಆನ್‌ಲೈನ್ ಸಂವಹನಗಳ ಕುರಿತು ಕೇಳಿದವು.