ವಿಸ್ತಾರವಾಗುತ್ತಿರುವ ನಮ್ಮ ಸುರಕ್ಷತಾ ಸಲಹಾ ಮಂಡಳಿಗೆ ಸೇರಲು ಅರ್ಜಿ ಸಲ್ಲಿಸಿ!

ಏಪ್ರಿಲ್ 20, 2022

2018 ರಿಂದ, Snap ನ ಸುರಕ್ಷತಾ ಸಲಹಾ ಮಂಡಳಿಯ (SAB) ಸದಸ್ಯರು ನಮ್ಮ Snapchat ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ನಿರ್ಣಾಯಕ ಪ್ರತಿಕ್ರಿಯೆಯನ್ನು ಒದಗಿಸಿದ್ದಾರೆ ಮತ್ತು ಕೆಲವು ಸಂಕೀರ್ಣ ಸುರಕ್ಷತಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಅವು ನಮಗೆ ನೆರವಾಗಿವೆ. ನಮ್ಮ SAB ಸದಸ್ಯರ ತಜ್ಞ ಸಲಹೆ ಮತ್ತು ಮಾರ್ಗದರ್ಶನ ಹಾಗೂ ಅವರ ಪಾಲುದಾರಿಕೆಯಿಂದ ಇದು ಸಾಧ್ಯವಾಗಿದೆ, ಕಳೆದ ನಾಲ್ಕು ವರ್ಷಗಳಲ್ಲಿ ಪ್ರಮುಖ ಜಾಗೃತಿ ಮೂಡಿಸುವ ಮತ್ತು ಶೈಕ್ಷಣಿಕ ಪ್ರಯತ್ನಗಳನ್ನು ಅನುಷ್ಠಾನಗೊಳಿಸುವ ಮೂಲಕ ನಾವು ಪ್ರಗತಿ ಸಾಧಿಸಿದ್ದೇವೆ.

ನಮ್ಮ ವೇದಿಕೆಯನ್ನು ಯುವಜನರು ಹೇಗೆ ಅನುಭವಿಸುತ್ತಾರೆ ಮತ್ತು ಸುರಕ್ಷತೆ ಮತ್ತು ವಿಶ್ವಾಸದ ಮೇಲೆ ಪ್ರಭಾವ ಬೀರುವ ಪ್ರಮುಖ ವಿಷಯಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವ ಕುರಿತು ಪೋಷಕರು, ಆರೈಕೆ ಮಾಡುವವರು, ಸುರಕ್ಷತಾ ಪ್ರತಿಪಾದಕರು ಮತ್ತು ಇತರರಿಗೆ ಇನ್ನಷ್ಟು ಉತ್ತಮ ಅರಿವು ಮೂಡಿಸಲು ಸಹಾಯ ಮಾಡುವುದಕ್ಕೆ Snap ಬದ್ಧವಾಗಿದೆ. ಅದಾಗ್ಯೂ, ನಿರಂತರ ಬದಲಾಗುತ್ತಿರುವ ಆನ್‌ಲೈನ್ ಸುರಕ್ಷತೆಯನ್ನು ಪರಿಗಣಿಸಿ, ನಮ್ಮ ಜಾಗತಿಕ ಸಮುದಾಯವನ್ನು ಮತ್ತು ವರ್ಧಿತ ವಾಸ್ತವ ಮತ್ತು ಹಾರ್ಡ್‌ವೇರ್ ಸೇರಿದಂತೆ ಉತ್ಪನ್ನಗಳಾದ್ಯಂತ ನಮ್ಮ ಬೆಳವಣಿಗೆಯನ್ನು ಬಿಂಬಿಸುವ ಹಾಗೂ ಯುವಜನರು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಹೊಸ ಆನ್‌ಲೈನ್ ಅಪಾಯಗಳಿಗೆ ಸಂಬಂಧಿಸಿ ನೈಪುಣ್ಯ ಹೊಂದಿರುವ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲು SAB ಅನ್ನು "ಮರುಶೋಧಿಸಲು" ಮತ್ತು ಮರುಆರಂಭಿಸಲು ನಾವು ಅವಕಾಶ ಹೊಂದಿದ್ದೇವೆ ಎಂದು ನಾವು ಭಾವಿಸುತ್ತೇವೆ. 

ಆ ಗುರಿಗಳನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಹೊಸ ಮತ್ತು ವಿಸ್ತರಿತ SAB ಸೇರಲು ನಾವು ಅರ್ಜಿಗಳನ್ನು ಆಹ್ವಾನಿಸುತ್ತಿದ್ದೇವೆ, ಇದು ಸಂಶೋಧನೆ, ಶಿಕ್ಷಣ, ತಂತ್ರಜ್ಞಾನ ಮತ್ತು ಸಂಬಂಧಿತ ಕ್ಷೇತ್ರಗಳು ಒಳಗೊಂಡಂತೆ ವೈವಿಧ್ಯಮಯ ಭೌಗೋಳಿಕತೆಗಳು ಮತ್ತು ಸುರಕ್ಷತಾ ವಿಭಾಗಗಳಿಂದ ಸದಸ್ಯರನ್ನು ಒಳಗೊಳ್ಳಲಿದೆ ಎಂದು ನಾವು ಆಶಿಸುತ್ತೇವೆ. ಸುರಕ್ಷತೆ ವಿಷಯಗಳಲ್ಲಿ ಸಂತ್ರಸ್ತ- ಮತ್ತು ಸಂರಕ್ಷಿತ-ರಿಗೆ ಮಾಹಿತಿ ನೀಡುವ Snap ನ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ಆನ್‌ಲೈನ್ ಸಂವಹನಗಳಿಗೆ ಸಂಬಂಧಿಸಿ ಕಷ್ಟ ಮತ್ತು ದುರಂತವನ್ನು ಅನುಭವಿಸಿರಬಹುದಾದವರಿಂದಲೂ ಸಹ ನಾವು ಅರ್ಜಿಗಳನ್ನು ಸ್ವಾಗತಿಸುತ್ತೇವೆ. ನಿಜಕ್ಕೂ, ಹಂಚಿಕೊಳ್ಳಲು ವಿಶಿಷ್ಟ ದೃಷ್ಟಿಕೋನ ಹೊಂದಿರುವ ಮತ್ತು ನಮ್ಮ ನಿರಂತರ ಸುರಕ್ಷತಾ ಕೆಲಸದಲ್ಲಿ ರಚನಾತ್ಮಕವಾಗಿ ಸಲಹೆ ನೀಡಲು ಆಸಕ್ತರಾಗಿರುವ ಎಲ್ಲ ಅರ್ಜಿದಾರರಿಗೂ ನಾವು ಮುಕ್ತರಾಗಿದ್ದೇವೆ.     

ಒಂದು SAB ರಚಿಸುವ ಈ ವಿಧಾನವು ತಂತ್ರಜ್ಞಾನ ವೇದಿಕೆಗಳಲ್ಲಿ ವಿಶಿಷ್ಟವಾಗಿದೆ ಎಂದು ನಾವು ನಂಬಿದ್ದೇವೆ ಮತ್ತು ಜಗತ್ತಿನ ಎಲ್ಲ ಮೂಲೆಗಳಿಂದಲೂ ಅರ್ಜಿಗಳನ್ನು ಸ್ವೀಕರಿಸಲು ಉತ್ಸುಕರಾಗಿದ್ದೇವೆ. ಈ ಅರ್ಜಿ ಪ್ರಕ್ರಿಯೆ ಸುಮಾರು ಎರಡು ತಿಂಗಳುಗಳ ಕಾಲ ತೆರೆದಿರುತ್ತದೆ, ಆ ಬಳಿಕ ನಮ್ಮ ಮಂಡಳಿ ಸೇರುವಂತೆ ಕೆಲವು ತಜ್ಞರನ್ನು ನಾವು ಆಹ್ವಾನಿಸುತ್ತೇವೆ.

ಹಿಂದಿನ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ನಮ್ಮ SAB ಯ ಸ್ವಾತಂತ್ರ್ಯವನ್ನು ಖಚಿತಪಡಿಸಲು ನೆರವಾಗುವುದಕ್ಕಾಗಿ, ತಮ್ಮ ಭಾಗವಹಿಸುವಿಕೆಗಾಗಿ ಸದಸ್ಯರು ಭತ್ಯೆ ಪಡೆಯುವುದಿಲ್ಲ. ಬದ್ಧತೆಗಳಲ್ಲಿ ವರ್ಷಕ್ಕೆ ಮೂರು, ಪ್ರತಿಯೊಂದೂ ಅಂದಾಜು ಎರಡು ಗಂಟೆಗಳ ಅವಧಿಯ ಬೋರ್ಡ್‌ ಮೀಟಿಂಗ್‌ಗಳಿರಲಿವೆ, ಇದರ ಜೊತೆಗೆ ಒಮ್ಮೊಮ್ಮೆ ಇಮೇಲ್ ಸಂವಹನ ಇರಲಿದೆ. SAB ಸೇರಲು ಆಹ್ವಾನಿಸಿರುವವರಿಗೆ, ಮಂಡಳಿ ಸದಸ್ಯರ ನಿರೀಕ್ಷೆಗಳು ಹಾಗೂ SAB ಗೆ Snap ನ ಬದ್ಧತೆಯನ್ನು ವಿವರಿಸುವ, ಉಲ್ಲೇಖದ ನಿಯಮಗಳಿಗೆ ಒಪ್ಪುವಂತೆ ಕೇಳಲಾಗುತ್ತದೆ.    

ಒಂದು ವೇಳೆ ನೀವು ಅರ್ಜಿ ಸಲ್ಲಿಸಲು ಆಸಕ್ತರಾಗಿದ್ದರೆ ಅಥವಾ ಯಾರನ್ನಾದರೂ ಶಿಫಾರಸು ಮಾಡಲು ಬಯಸಿದರೆ, ದಯವಿಟ್ಟು ಈ ಸಣ್ಣ ಅರ್ಜಿ ನಮೂನೆಯನ್ನು ಶುಕ್ರವಾರ, ಜುಲೈ 22 ರೊಳಗೆ ಭರ್ತಿಮಾಡಿ. ಆನ್‌ಲೈನ್ ಸುರಕ್ಷತೆಯ ಪ್ರತಿಪಾದಕರಾಗಿ, ನಮ್ಮ ಸಲಹೆಗಾರರು ಮತ್ತು ವಿಶ್ವಾಸಾರ್ಹ ಪಾಲುದಾರರ ಜಾಲವನ್ನು ನಾವು ವಿಸ್ತರಿಸುತ್ತಿರುವಂತೆ ನಮ್ಮ ಹೊಸ ಅಧ್ಯಾಯದ ಕುರಿತು ನಾವು ರೋಮಾಂಚಿತರಾಗಿದ್ದೇವೆ. ಇಲ್ಲಿ ಇನ್ನಷ್ಟು ತಿಳಿಯಿರಿ ಮತ್ತು ಅರ್ಜಿ ಸಲ್ಲಿಸಿ!

- ಜಾಕ್ವೆಲಿನ್ ಬೌಚೆರೆ, Snap ಸುರಕ್ಷತಾ ವೇದಿಕೆಯ ಜಾಗತಿಕ ಮುಖ್ಯಸ್ಥೆ

ಸುದ್ದಿಗಳಿಗೆ ಹಿಂತಿರುಗಿ