AI ತಜ್ಞರು Snap ನ ಸುರಕ್ಷತಾ ಸಲಹಾ ಮಂಡಳಿಗೆ ಸೇರಿದ್ದಾರೆ

ಜುಲೈ 31, 2023

ಈ ವರ್ಷದ ಆರಂಭದಲ್ಲಿ, Snap ನಮ್ಮ ಸುರಕ್ಷತಾ ಸಲಹಾ ಮಂಡಳಿಗೆ (SAB) ಸೇರಲು ಕೃತಕ ಬುದ್ಧಿಮತ್ತೆಯಲ್ಲಿ (AI) ಅರ್ಹ ತಜ್ಞರಿಂದ ಅರ್ಜಿಗಳನ್ನು ಕೋರುತ್ತಿದೆ ಎಂದು ಪ್ರಕಟಿಸಿತ್ತು, ಈಗ 16 ವೃತ್ತಿಪರರು ಮತ್ತು ಮೂವರು ಯುವ ಪ್ರತಿಪಾದಕರ ಗುಂಪು ಪ್ಲಾಟ್‌ಫಾರ್ಮ್ ಸುರಕ್ಷತಾ ಸಮಸ್ಯೆಗಳ ಕುರಿತು Snapನ ಸೌಂಡಿಂಗ್ ಬೋರ್ಡ್ ಆಗಿ ಕಾರ್ಯನಿರ್ವಹಿಸುತ್ತಿದೆ. ಇಬ್ಬರು AI ಪರಿಣಿತರು ನಮ್ಮ ಮಂಡಳಿಗೆ ಸೇರಿದ್ದಾರೆ ಮತ್ತು ನಮ್ಮ ಹೊಸ SAB ನ ಕಳೆದ ತಿಂಗಳ ಮೊದಲ ಮುಖಾಮುಖಿ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಲು ನಮಗೆ ಸಂತೋಷವಾಗುತ್ತಿದೆ.

Snap ನ SAB ನಲ್ಲಿನ AI-ತಜ್ಞರ ಎರಡು ಸ್ಥಾನಗಳಿಗಾಗಿ ಅರ್ಜಿ ಸಲ್ಲಿಸಿದ ಡಜನ್‌ಗಟ್ಟಲೆ ಜನರಲ್ಲಿ, ಫಿನ್‌ಲ್ಯಾಂಡ್ ಮೂಲದ Saidot ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೀರಿ ಹಾತ್‌ಜಾ ಮತ್ತು U.S. ನಲ್ಲಿ ನೆಲೆಸಿರುವ ವಕೀಲ ಹಾಗೂ Machine See, Machine Do ನ ಲೇಖಕ ಪ್ಯಾಟ್ರಿಕ್ ಕೆ. ಲಿನ್ ಅವರನ್ನು ಆಯ್ಕೆ ಮಾಡಲಾಗಿದೆ. ಮೀರಿ ಮತ್ತು ಪ್ಯಾಟ್ರಿಕ್ ಜ್ಞಾನ ಮತ್ತು ಅನುಭವದ ಸಂಪತ್ತನ್ನು ತರುತ್ತಾರೆ ಮತ್ತು AI ಹಾಗೂ ಆನ್‌ಲೈನ್ ಸುರಕ್ಷತೆಯ ನಡುವಿನ ಸಮಸ್ಯೆಗಳ ಕುರಿತ ನಮ್ಮ ತಿಳುವಳಿಕೆಗೆ ಮಾಹಿತಿ ಒದಗಿಸಲು ಸಹಾಯ ಮಾಡುತ್ತಿದ್ದಾರೆ. ಮೀರಿ ಮತ್ತು ಪ್ಯಾಟ್ರಿಕ್ ಅವರ ಮಾತುಗಳಲ್ಲೇ ಕೆಲವು ಟಿಪ್ಪಣಿಗಳು ಇಲ್ಲಿವೆ: 

ಮೀರಿ: "ಈ ಗುಂಪು ಸೇರಲು ಮತ್ತು AI ಪಯಣದಲ್ಲಿ Snap ನೊಂದಿಗೆ ಸಹಭಾಗಿತ್ವ ಮಾಡಲು ನಾನು ರೋಮಾಂಚಿತಳಾಗಿದ್ದೇನೆ. ಸಾಮಾಜಿಕ ಮಾಧ್ಯಮ ಕಂಪನಿಗಳು ತಮ್ಮ ಮೌಲ್ಯ ಮತ್ತು ಸೇವೆಗಳನ್ನು ಸುಧಾರಿಸಲು ಮತ್ತು ಪರಿಷ್ಕರಿಸಲು AI ತಂತ್ರಜ್ಞಾನಗಳು ಹೊಸ ಅವಕಾಶಗಳನ್ನು ರಚಿಸುವ ಪರಿವರ್ತನೆಯ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ಅಂತಹ ಅಸಾಧಾರಣ ಮಟ್ಟದ ಇಂಪ್ಯಾಕ್ಟ್ ಹೊಂದಿರುವುದರಿಂದ, ತನ್ನ ಯುವ ಬಳಕೆದಾರರ ಯೋಗಕ್ಷೇಮ ಮತ್ತು ಅವರನ್ನು ಸಂಭಾವ್ಯ ಅಪಾಯಗಳಿಂದ ರಕ್ಷಿಸುವುದನ್ನು ಆದ್ಯತೆಗೊಳಿಸುವುದರೊಂದಿಗೆ ಈ ಹೊಸ AI ಅವಕಾಶಗಳನ್ನು ಕಾಳಜಿಯೊಂದಿಗೆ ಅನ್ವೇಷಿಸುವ ಅಸಾಧಾರಣ ಪ್ರಾಮುಖ್ಯತೆಯ ಜವಾಬ್ದಾರಿಯನ್ನು Snap ಹೊತ್ತುಕೊಂಡಿದೆ. ಸುರಕ್ಷಿತ ಮತ್ತು ಜವಾಬ್ದಾರಿಯುತ AI ನಿಯೋಜನೆಗಳನ್ನು ಖಚಿತಪಡಿಸುವುದಕ್ಕೆ ಸಹಾಯ ಮಾಡಲು ಮತ್ತು ಆಶಾದಾಯಕವಾಗಿ, ಸಾಮಾಜಿಕ ಮಾಧ್ಯಮದಲ್ಲೂ ಕೂಡ AI ಗಾಗಿ ಜವಾಬ್ದಾರಿಯುತ ಉದ್ಯಮ ಅಭ್ಯಾಸಗಳ ರಚನೆಯತ್ತ ಕೊಡುಗೆ ನೀಡಲು ಬಹು ಆಯಾಮದ ಸುರಕ್ಷತಾ ಸಲಹಾ ಮಂಡಳಿಯ ಮೂಲಕ Snap ನೊಂದಿಗೆ ಸಹಭಾಗಿತ್ವ ಮಾಡುತ್ತಿರುವುದು ನನ್ನ ಸೌಭಾಗ್ಯವಾಗಿದೆ ಎಂದು ಭಾವಿಸುತ್ತೇನೆ."

ಪ್ಯಾಟ್ರಿಕ್: "ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸಂವಹನಗಳು ಮತ್ತು ವೈಶಿಷ್ಟ್ಯಗಳನ್ನು ಪರಿಚಯಿಸಲು AI ರೋಮಾಂಚಕ ಅವಕಾಶಗಳನ್ನು ಒದಗಿಸುತ್ತದೆ. ಆದಾಗ್ಯೂ, AI ತಂತ್ರಜ್ಞಾನದ ಅಪಾಯಗಳ ಬಗ್ಗೆ ಚಿಂತನಶೀಲ ಮತ್ತು ನಿರಂತರ ಚರ್ಚೆಗಳಿಲ್ಲದೆ AI ನ ಸಂಭಾವ್ಯ ಪ್ರಯೋಜನಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳಲಾಗುವುದಿಲ್ಲ. ವಿಶೇಷವಾಗಿ ಹದಿಹರೆಯದವರು ಮತ್ತು ಯುವ ಜನರಿಗಾಗಿ, ಸುರಕ್ಷಿತ ಡಿಜಿಟಲ್ ಸ್ಥಳವನ್ನು ಅಭಿವೃದ್ಧಿಪಡಿಸಲು ತಂತ್ರಜ್ಞಾನವನ್ನು ಬಳಸಬಹುದಾದ ವಿಧಾನಗಳನ್ನು ಪರಿಗಣಿಸುವ ಸಂದರ್ಭ Snap ಆ ಅಪಾಯಗಳನ್ನು ಗುರುತಿಸುತ್ತಿದೆ ಎನ್ನುವುದು ಭರವಸೆ ಮೂಡಿಸುತ್ತದೆ. Snap ನ ಸುರಕ್ಷತಾ ಸಲಹಾ ಮಂಡಳಿಯಲ್ಲಿ ಒಬ್ಬ AI ತಜ್ಞನಾಗಿ ಆ ಪ್ರಯತ್ನಗಳಿಗೆ ಕೊಡುಗೆ ನೀಡಲು ನಾನು ಎದುರು ನೋಡುತ್ತೇನೆ."

2022 ರಲ್ಲಿ, ಭಿನ್ನ ಭೌಗೋಳಿಕತೆಗಳು, ವಿಭಾಗಗಳು ಮತ್ತು ಸುರಕ್ಷತಾ-ಸಂಬಂಧಿತ ಪಾತ್ರಗಳಿಂದ ಇನ್ನೂ ಹೆಚ್ಚು ವೈವಿಧ್ಯಮಯ ವೃತ್ತಿಪರರ ಗುಂಪುಗಳನ್ನು ಒಳಗೊಳ್ಳಲು ನಾವು ನಮ್ಮ SAB ಅನ್ನು ವಿಸ್ತರಿಸಿದೆವು ಮತ್ತು ಮರುಪರಿಷ್ಕರಿಸಿದೆವು. ಅತ್ಯಂತ ಪ್ರಮುಖ ಯುವ ಧ್ವನಿಯ ಪ್ರಾತಿನಿಧ್ಯವನ್ನು - ಈ ಕಾರ್ಯತಂತ್ರದ ಮಟ್ಟದಲ್ಲಿ - ಖಚಿತಪಡಿಸಿಕೊಳ್ಳಲು ನಾವು Snapchat ಪವರ್ ಬಳಕೆದಾರರಾದ, ನವಪೀಳಿಗೆಯ ಮೂರು ಸದಸ್ಯರನ್ನು ಸಹ ಆಯ್ಕೆ ಮಾಡಿದ್ದೇವೆ. My AI ನ ಆಗಮನವು ಈ ವಿಶಿಷ್ಟ ಮತ್ತು ಬೆಳೆಯುತ್ತಿರುವ ಕ್ಷೇತ್ರದಲ್ಲಿನ ಪರಿಣಿತರನ್ನು ಒಳಗೊಳ್ಳಲು ನಮ್ಮ SAB ಅನ್ನು ಮತ್ತಷ್ಟು ವಿಸ್ತರಿಸಲು ನಮಗೆ ಪ್ರೇರೇಪಿಸಿತು.

Snap ನ ಪ್ರಧಾನ ಕಚೇರಿಯಲ್ಲಿ ಕಳೆದ ತಿಂಗಳ ಉದ್ಘಾಟನಾ ಮುಖಾಮುಖಿ ಸಭೆಯಲ್ಲಿ ಅವರು ಹಂಚಿಕೊಂಡ ಆಳವಾದ ಒಳನೋಟಗಳು ಮತ್ತು ದೃಷ್ಟಿಕೋನಗಳಿಗಾಗಿ ನಾವು ಮೀರಿ ಮತ್ತು ಪ್ಯಾಟ್ರಿಕ್ ಹಾಗೂ ನಮ್ಮ SAB ನ ಎಲ್ಲ ಸದಸ್ಯರಿಗೆ ಧನ್ಯವಾದ ಸಲ್ಲಿಸುತ್ತೇವೆ. ನಾವು ಹೊಸ ಮತ್ತು ಅಸ್ತಿತ್ವದಲ್ಲಿರುವ ಉತ್ಪನ್ನ ವೈಶಿಷ್ಟ್ಯಗಳು ಮತ್ತು ಕಾರ್ಯಶೀಲತೆ, ಸಂಕೀರ್ಣ ಜಾಗತಿಕ ಶಾಸನ ಮತ್ತು ನಿಯಂತ್ರಕ ಸಮಸ್ಯೆಗಳು ಹಾಗೂ ಸುರಕ್ಷಿತವಾಗಿರುವುದರ ಕುರಿತು ಪ್ರಮುಖ ಜಾಗೃತಿ ಮೂಡಿಸುವಿಕೆ ಹಾಗೂ ಮಾಹಿತಿಯುಕ್ತ ಸಲಹೆಗಳೊಂದಿಗೆ Snapchatter ಗಳು ಮತ್ತು ನಮ್ಮ ಅತಿ ಕಿರಿಯ ಬಳಕೆದಾರರ ಪೋಷಕರನ್ನು ತಲುಪುವ ವಿಚಾರಗಳ ಕುರಿತು ಸಮಗ್ರವಾಗಿ ಚರ್ಚಿಸಿದೆವು.

ಮುಂಬರುವ ಹಲವು ತಿಂಗಳುಗಳು ಮತ್ತು ವರ್ಷಗಳಲ್ಲಿ ನಮ್ಮ SAB ಜೊತೆ ಕೆಲಸ ಮಾಡುವುದನ್ನು ನಾವು ಎದುರು ನೋಡುತ್ತೇವೆ.

- ಜಾಕ್ವೆಲಿನ್ ಬ್ಯೂಚೆರ್, Snap ನ ವೇದಿಕೆ ಸುರಕ್ಷತೆಯ ಜಾಗತಿಕ ಮುಖ್ಯಸ್ಥೆ

ಸುದ್ದಿಗಳಿಗೆ ಹಿಂತಿರುಗಿ