Snap ನ ಸುರಕ್ಷತಾ ಸಲಹಾ ಮಂಡಳಿಗೆ AI ತಜ್ಞರನ್ನು ಹುಡುಕುತ್ತಿದ್ದೇವೆ

ಮಾರ್ಚ್ 31, 2023

ಕಳೆದ ವರ್ಷ ಈ ಸಮಯದಲ್ಲಿ, ನಮ್ಮ ಹೊಸ ಸುರಕ್ಷತಾ ಸಲಹಾ ಮಂಡಳಿಗೆ ಸೇರಲು ಅರ್ಜಿ ಸಲ್ಲಿಸುವಂತೆ Snap ಅರ್ಹ ತಜ್ಞರನ್ನು ಆಹ್ವಾನಿಸಿತು, ಇದೀಗ ಅದು "ಎಲ್ಲ ವಿಷಯಗಳ ಸುರಕ್ಷತೆ" ಕುರಿತು Snap ಗೆ ಸಲಹೆ ನೀಡುವ 14 ವೃತ್ತಿಪರರು ಮತ್ತು ಮೂರು ಯುವ ಪ್ರತಿಪಾದಕರನ್ನು ಒಳಗೊಂಡ ಗುಂಪಾಗಿದೆ. ಒಂದು ವರ್ಷದ ಬಳಿಕ, ನಮ್ಮ ಮಂಡಳಿಯಿಂದ ನಾವು ನಿಯಮಿತವಾಗಿ ಸ್ವೀಕರಿಸುತ್ತಿರುವ ಪ್ರತಿಕ್ರಿಯೆ ಮತ್ತು ವಿಚಾರಗಳ ಕುರಿತು ಹಾಗೂ ನಾವು ರಚಿಸುತ್ತಿರುವ ವಿಶ್ವಾಸಾರ್ಹ ಮತ್ತು ಸಮೂಹ ಜವಾಬ್ದಾರಿಯ ಸಮುದಾಯದ ಕುರಿತು ನಾವು ಅತ್ಯಂತ ಹರ್ಷಿತರಾಗಿದ್ದೇವೆ. 

ಕಳೆದ ವರ್ಷದಲ್ಲಿ SAB ಬೆಳೆದು ವಿಕಸನವಾಗಿದ್ದು ಇದೇ ವೇಳೆ Snapchat ಅನುಭವ ಕೂಡ — My AI ಆಗಮನದೊಂದಿಗೆ ಕೃತಕ ಬುದ್ಧಿಮತ್ತೆಯನ್ನು (AI) ಅಳವಡಿಸಿಕೊಳ್ಳುವ ಮೂಲಕ ವಿಕಸನವಾಗಿದೆ. ಹಾಗಾಗಿ ಇಂದಿನಿಂದ ಆರಂಭಿಸಿ, ನಮ್ಮ ಸುರಕ್ಷತಾ ಸಲಹಾ ಮಂಡಳಿಗೆ ಸೇರಿಸಿಕೊಳ್ಳಲು ಮತ್ತು AI ನಲ್ಲಿ ಅವರ ವಿಶೇಷ ಪರಿಣಿತಿಯ ಪ್ರಯೋಜನ ಪಡೆದುಕೊಳ್ಳಲು ಕೆಲವೇ ತಜ್ಞರಿಗಾಗಿ ನಾವು ಅರ್ಜಿಗಳನ್ನು ಸ್ವೀಕರಿಸುತ್ತಿದ್ದೇವೆ. 

ಆಸಕ್ತರು ದಯಮಾಡಿ ಏಪ್ರಿಲ್ 25, ಮಂಗಳವಾರದೊಳಗೆ ಸಣ್ಣ ಅರ್ಜಿಯನ್ನು ಭರ್ತಿಮಾಡಿ ಸಲ್ಲಿಸುವಂತೆ ನಾವು ಕೇಳಿಕೊಳ್ಳುತ್ತೇವೆ. ಮೇ ಮಧ್ಯಭಾಗದೊಳಗೆ ಆಯ್ದ AI ತಜ್ಞರನ್ನು ನಮ್ಮೊಂದಿಗೆ ಸೇರಲು ಆಹ್ವಾನಿಸುವುದು ನಮ್ಮ ಗುರಿಯಾಗಿದೆ. Snap ಸುರಕ್ಷತಾ ಸಲಹಾ ಮಂಡಳಿಯ ಸದಸ್ಯರಿಗೆ ಅವರು ನೀಡುವ ಸಮಯಕ್ಕಾಗಿ ಯಾವುದೇ ಗೌರವಧನ ನೀಡುವುದಿಲ್ಲ, ಆದರೆ Snap ನ ಧ್ಯೇಯಗಳೊಂದಿಗೆ ಹೊಂದಾಣಿಕೆಯಾಗುವ ಒಂದು ಸಂಸ್ಥೆಯ ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು Snap ಹೊಂದಿದೆ. ವಾರ್ಷಿಕ ಬಾಧ್ಯತೆಯು ಎರಡು ವಾಸ್ತವ, 90 ನಿಮಿಷದ ಆಡಳಿತ ಮಂಡಳಿ ಸಭೆಗಳು ಹಾಗೂ ಒಂದು ಬಹು-ದಿನದ ವೈಯಕ್ತಿಕ ಸಮಾವೇಶವನ್ನು ಒಳಗೊಂಡಿದೆ. ಇತರ ವಾಸ್ತವ ಅಧಿವೇಶನಗಳು ಐಚ್ಛಿಕವಾಗಿರುತ್ತವೆ ಮತ್ತು SAB ಸದಸ್ಯರಿಗೆ ಸಮಯಾವಕಾಶವಿದ್ದಲ್ಲಿ ಅದರಲ್ಲಿ ಪಾಲ್ಗೊಳ್ಳಬಹುದು. ಹೊಸ SAB ಸದಸ್ಯರಿಗೆ ಮಂಡಳಿಯ ಉಲ್ಲೇಖ ನಿಯಮಗಳನ್ನು ಒಪ್ಪಿಕೊಳ್ಳುವಂತೆ ಮತ್ತು ಈ ವರ್ಷದ ಆರಂಭದಲ್ಲಿ ರೂಪಿಸಲಾದ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವಂತೆಯೂ ಕೇಳಲಾಗುತ್ತದೆ.

2022 ರಲ್ಲಿ ನಾವು ನಮ್ಮ SAB ಅನ್ನು ವಿಸ್ತರಿಸಿದಾಗ, ವಿಷಯ ಪರಿಣಿತಿ ಹಾಗೂ ಪ್ರತಿನಿಧಿಸಿದ ಸುರಕ್ಷತಾ-ಸಂಬಂಧಿತ ವಿಭಾಗಗಳು ಹಾಗೂ ಭೌಗೋಳಿಕತೆಗಳ ಶ್ರೇಣಿಗೆ ಸಂಬಂಧಿಸಿದಂತೆ ಮಂಡಳಿಯನ್ನು ವಿಸ್ತರಿಸುವುದು ನಮ್ಮ ಗುರಿಯಾಗಿತ್ತು. ನಾವು ಅದನ್ನು ಮಾಡಿದ್ದೇವೆ ಎಂದು ನಮಗೆ ಅನ್ನಿಸುತ್ತದೆ, ಆದರೆ AI ಒಂದು ವಿಶಿಷ್ಟ ಮತ್ತು ಬೆಳೆಯುತ್ತಿರುವ ಕ್ಷೇತ್ರವಾಗಿರುವುದರಿಂದ ಹೆಚ್ಚುವರಿ ತಜ್ಞ ತಿಳುವಳಿಕೆಯು ಕೇವಲ Snap ಗೆ ಉಪಯುಕ್ತವಾಗುವುದಷ್ಟೇ ಅಲ್ಲ, ಮರುರಚಿಸಿದ ಮಂಡಳಿ ಮತ್ತು ಬಹಳ ಮುಖ್ಯವಾಗಿ, ನಮ್ಮ ಸಮುದಾಯಕ್ಕೂ ಕೂಡ ಪ್ರಯೋಜನಕಾರಿಯಾಗಬಲ್ಲದು. ದಯವಿಟ್ಟು ಅರ್ಜಿ ಸಲ್ಲಿಸಿ ಅಥವಾ ಇತರರೊಂದಿಗೆ ಈ ಅವಕಾಶದ ಕುರಿತು ಹಂಚಿಕೊಳ್ಳಿ. ಶೀಘ್ರ ಹೊಸ SAB ಸದಸ್ಯರನ್ನು ಸ್ವಾಗತಿಸಲು ನಾವು ಕಾತುರರಾಗಿದ್ದೇವೆ!

ಸುದ್ದಿಗಳಿಗೆ ಹಿಂತಿರುಗಿ