ಈ ವಿಭಾಗವು ನಾವು ಸಂಗ್ರಹಿಸುವ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ ಎಂದು ವಿವರಿಸುತ್ತದೆ. ಇತರ ಸಂಗತಿಗಳ ಜೊತೆಗೆ, ನಾವು ಸಂಗ್ರಹಿಸಿದ ಮಾಹಿತಿಯನ್ನು, ನಾವು ಕಠಿಣ ಪರಿಶ್ರಮದೊಂದಿಗೆ ಸಿದ್ಧಪಡಿಸುವ ಮತ್ತು ಸುಧಾರಿಸುವ ವೈಯಕ್ತಿಕಗೊಳಿಸಿದ ಉತ್ಪನ್ನಗಳು ಮತ್ತು ಸೇವೆಗಳನ್ನು ನಿಮಗೆ ಒದಗಿಸಲು ನಾವು ಬಳಸುತ್ತೇವೆ. ಕೆಳಗೆ, ನಾವು ಮಾಹಿತಿಯನ್ನು ಬಳಸುವ ಪ್ರತಿ ಉದ್ದೇಶವನ್ನು ವಿವರವಾಗಿ ತಿಳಿಸಿದ್ದೇವೆ. ಒಂದು ವೇಳೆ ನಾವು ಸಂಗ್ರಹಿಸಿದ ಡೇಟಾವನ್ನು ಅದನ್ನು ಸಂಗ್ರಹಿಸಿದ ಉದ್ದೇಶಗಳ ಜೊತೆಗೆ ಮಾಡಿದ ಮ್ಯಾಪಿಂಗ್ ನೋಡಲು ನೀವು ಬಯಸಿದರೆ, ಇಲ್ಲಿ ಒಂದು ಕೋಷ್ಟಕ ಇದೆ.
ಸಂಗತಿಗಳನ್ನು ವ್ಯವಸ್ಥಿತವಾಗಿ ಇರಿಸಿಕೊಳ್ಳುವುದು ಮತ್ತು ಚಲಾಯಿಸುವುದು (ಅಂದರೆ, ನಮ್ಮ ಸೇವೆಗಳನ್ನು ಕಾರ್ಯಾಚರಿಸುವುದು, ತಲುಪಿಸುವುದು ಮತ್ತು ನಿರ್ವಹಿಸುವುದು)
ನಮ್ಮ ಸೇವೆಗಳನ್ನು ಕಾರ್ಯಾಚರಿಸುವ, ತಲುಪಿಸುವ ಮತ್ತು ನಿರ್ವಹಿಸುವ ಸಲುವಾಗಿ ನಾವು ಸಂಗ್ರಹಿಸುವ ಮಾಹಿತಿಯನ್ನು ನಾವು ಬಳಸುತ್ತೇವೆ. ಉದಾಹರಣೆಗೆ, ನೀವು ಒಬ್ಬ ಸ್ನೇಹಿತರಿಗೆ ಕಳುಹಿಸಲು ಬಯಸುವ Snap ಅನ್ನು ತಲುಪಿಸುವ ಮೂಲಕ ಅಥವಾ ಒಂದು ವೇಳೆ ನೀವು Snap ಮ್ಯಾಪ್‌ನಲ್ಲಿ ನಿಮ್ಮ ಸ್ಥಳ ಹಂಚಿಕೊಂಡರೆ, ನಿಮ್ಮ ನೆರೆಹೊರೆಯಲ್ಲಿ ನೀವು ಇಷ್ಟಪಡಬಹುದಾದ ಸ್ಥಳಗಳು, ಇತರರು ಮ್ಯಾಪ್‌ನಲ್ಲಿ ಪೋಸ್ಟ್ ಮಾಡಿರುವ ವಿಷಯ ಅಥವಾ ನಿಮ್ಮ ಸ್ನೇಹಿತರು ನಿಮ್ಮೊಂದಿಗೆ ಅವರ ಸ್ಥಳ ಹಂಚಿಕೊಳ್ಳುತ್ತಿದ್ದರೆ ಆ ಸ್ನೇಹಿತರು ಮುಂತಾದ ಸಲಹೆಗಳನ್ನು ನಿಮಗೆ ತೋರಿಸಲು. ನಮ್ಮ ಉತ್ಪನ್ನಗಳನ್ನು ನವೀಕೃತವಾಗಿರಿಸಲು ಸಹಾಯ ಪಡೆದುಕೊಳ್ಳುವುದಕ್ಕೆ ಕೂಡ ನಾವು ನಿಮ್ಮ ಕೆಲವು ಮಾಹಿತಿಯನ್ನು ಬಳಸುತ್ತೇವೆ, ಉದಾಹರಣೆಗೆ ನಮ್ಮ ಸೇವೆಗಳು ಇತ್ತೀಚಿನ ಆಪರೇಟಿಂಗ್ ಸಿಸ್ಟಂಗಳು ಮತ್ತು ಸಾಧನಗಳ ಜೊತೆಗೆ ಕಾರ್ಯನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು.
ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸುವುದು ಮತ್ತು ಸನ್ನಿವೇಶವನ್ನು ಒದಗಿಸುವುದು
Snapchatter ಗಳಿಗೆ ನಾವು ವೈಯಕ್ತಿಕಗೊಳಿಸಿದ ಸೇವೆಗಳನ್ನು ಒದಗಿಸುತ್ತೇವೆ. ಇ
ದು ನಾವು ಮಾಡುವ ವಿಧಾನಗಳಲ್ಲಿ, ನಿಮಗೆ ಪ್ರಸ್ತುತವಾಗಿರುವ ಅಥವಾ ನೀವು ನಮ್ಮೊಂದಿಗೆ ಹಂಚಿಕೊಂಡಿರುವ ಮಾಹಿತಿಯನ್ನು ಆಧರಿಸಿ ನೀವು ಆನಂದಿಸಬಹುದು ಎಂದು ನಾವು ಭಾವಿಸುವ ವಿಷಯವನ್ನು ನಿಮಗೆ ತೋರಿಸುವುದು ಒಂದಾಗಿದೆ. ಹಾಗೆ ಮಾಡಲು, ನಿಮ್ಮ Snapchat ಅನುಭವಕ್ಕೆ ಸನ್ನಿವೇಶವನ್ನು ಸೇರಿಸುವ ಸಲುವಾಗಿ ಸೇವೆಗಳ ವಿವಿಧ ಪ್ರದೇಶಗಳಾದ್ಯಂತ ನಿಮ್ಮ ಕುರಿತ ಮಾಹಿತಿಯನ್ನು ನಾವು ಬಳಸುತ್ತೇವೆ. ಉದಾಹರಣೆಗೆ, ನಾವು ವಿಷಯ, ನಿಮ್ಮ ಸ್ಥಳ ಅಥವಾ ದಿನದ ಸಮಯವನ್ನು ಆಧರಿಸಿ ಲೇಬಲ್‌ಗಳೊಂದಿಗೆ ವಿಷಯವನ್ನು ನಾವು ಸ್ವಯಂಚಾಲಿತವಾಗಿ ಟ್ಯಾಗ್ ಮಾಡುತ್ತೇವೆ. ಆದ್ದರಿಂದ ಒಂದು ವೇಳೆ ಫೋಟೋದಲ್ಲಿ ನಾಯಿ ಇದ್ದರೆ, "ನಾಯಿ" ಎನ್ನುವ ಪದದ ಮೂಲಕ ನೆನಪುಗಳಲ್ಲಿ ಅದನ್ನು ಹುಡುಕಬಹುದು, ನೀವು ನೆನಪನ್ನು ರಚಿಸಿದ ಸ್ಥಳದಲ್ಲಿ ಮ್ಯಾಪ್‌ನಲ್ಲಿ ಕಾಣಿಸಿಕೊಳ್ಳಬಹುದು ಮತ್ತು ನಾಯಿಗಳ ಕುರಿತು ನೀವು ಆಸಕ್ತರಿದ್ದೀರಿ ಎಂದು ನಮಗೆ ತಿಳಿಸಬಹುದು ಇದರಿಂದಾಗಿ ನಾವು ನಿಮಗೆ ಸ್ಪಾಟ್‌ಲೈಟ್‌ನಂತಹ ನಮ್ಮ ಸೇವೆಗಳ ಇತರ ಭಾಗಗಳಲ್ಲಿ ವಿನೋದದ ನಾಯಿ ವೀಡಿಯೊಗಳು ಮತ್ತು ನಾಯಿ ಆಹಾರದ ಜಾಹೀರಾತುಗಳನ್ನು ತೋರಿಸಬಹುದು.
ನೀವು ಯಾರೊಂದಿಗೆ ಅತಿಹೆಚ್ಚು Snap ಮಾಡುತ್ತೀರಿ ಎನ್ನುವುದನ್ನು ಆಧರಿಸಿ ಸ್ನೇಹಿತರನ್ನು ಸಲಹೆ ಮಾಡಲು ಅಥವಾ ಒಂದು Snap ಕಳುಹಿಸುವಂತೆ ಹೊಸ ಸ್ನೇಹಿತನಿಗೆ ಶಿಫಾರಸು ಮಾಡಲು ಕೂಡ ವೈಯಕ್ತಿಕಗೊಳಿಸುವಿಕೆ ಸಹಾಯ ಮಾಡಬಲ್ಲದು. ನಾವು ನಿಮಗೆ Snap ಮ್ಯಾಪ್‌ನಲ್ಲಿ ಶಿಫಾರಿತ ಸ್ಥಳಗಳನ್ನು ತೋರಿಸಬಹುದು, ಸ್ಟಿಕ್ಕರ್‌ಗಳನ್ನು ರಚಿಸಬಹುದು ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಲು AI ಬಳಸಿಕೊಂಡು Snap ಗಳು ಮತ್ತು ಇತರ ವಿಷಯವನ್ನು ರಚಿಸಬಹುದು, ನಿಮ್ಮ ವಿಷಯ ಮತ್ತು ಚಟುವಟಿಕೆಯನ್ನು ಆಧರಿಸಿ ನಿಮ್ಮ ಆಸಕ್ತಿಗಳನ್ನು ಊಹಿಸಬಹುದು ಅಥವಾ ಜಾಹೀರಾತುಗಳು ಸೇರಿದಂತೆ ನಾವು ನಿಮಗೆ ತೋರಿಸುವ ವಿಷಯವನ್ನು ಕಸ್ಟಮೈಸ್ ಮಾಡಬಹುದು. ಉದಾಹರಣೆಗೆ, ಸ್ಪಾಟ್‌ಲೈಟ್‌ನಲ್ಲಿ ನೀವು ಬರಿಸ್ಟಾ ವಿಷಯವನ್ನು ವೀಕ್ಷಿಸಿದರೆ, ನಿಮ್ಮ ಮೆಚ್ಚಿನ ಎಸ್ಪ್ರೆಸೊ ಯಂತ್ರದ ಕುರಿತು My AI ಜೊತೆಗೆ ಮಾತನಾಡಿದರೆ ಅಥವಾ ನಿಮ್ಮ ನೆನಪುಗಳಲ್ಲಿ ಸಾಕಷ್ಟು ಕಾಫೀ ಸಂಬಂಧಿತ Snap ಗಳನ್ನು ಉಳಿಸಿದರೆ, ನೀವು ಹೊಸ ನಗರಕ್ಕೆ ಭೇಟಿ ನೀಡಿದಾಗ Snap ಮ್ಯಾಪ್‌ನಲ್ಲಿ ನಾವು ಕಾಫೀ ಶಾಪ್‌ಗಳನ್ನು ಹೈಲೈಟ್ ಮಾಡಬಹುದು ಅಥವಾ ನಿಮಗೆ ಆಸಕ್ತಿಕರ ಅಥವಾ ಪ್ರಸ್ತುತ ಅನ್ನಿಸಬಹುದಾದ ಕಾಫಿ ಕುರಿತ ವಿಷಯವನ್ನು ತೋರಿಸಬಹುದು. ಅಥವಾ ಒಂದು ವೇಳೆ ನೀವು ಸಾಕಷ್ಟು ಸಂಗೀತ ಸ್ಥಳಗಳೊಂದಿಗೆ ಸಂವಹನ ನಡೆಸಿದರೆ ನಗರದಲ್ಲಿ ಮುಂಬರುವ ಶೋಗಳ ಕುರಿತು ನಿಮಗೆ ಜಾಹೀರಾತುಗಳನ್ನು ತೋರಿಸಲು ನಾವು ಅದನ್ನು ಬಳಸಬಹುದು. ಸ್ಪಾಟ್‌ಲೈಟ್‌ನಲ್ಲಿ ನಿಮ್ಮ ಸ್ನೇಹಿತರು ಯಾವ ವಿಷಯವನ್ನು ರಚಿಸುತ್ತಾರೆ, ಇಷ್ಟಪಡುತ್ತಾರೆ ಅಥವಾ ಆನಂದಿಸುತ್ತಾರೆ ಎನ್ನುವುದನ್ನು ಅಥವಾ ನಿಮ್ಮ ಸ್ನೇಹಿತರೊಂದಿಗೆ ಜನಪ್ರಿಯವಾಗಿರುವ ಸ್ಥಳ ಶಿಫಾರಸುಗಳನ್ನು ನಿಮಗೆ ತೋರಿಸುವುದು ಸೇರಿದಂತೆ, ನಿಮ್ಮ ಸ್ನೇಹಿತರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಆಧರಿಸಿ ನಿಮ್ಮ ಅನುಭವಗಳನ್ನು ಹೊಂದಿಕೆಯಾಗಿಸುವುದು ಕೂಡ ವೈಯಕ್ತಿಕಗೊಳಿಸುವಿಕೆಯಲ್ಲಿ ಸೇರಿದೆ.
ನಿಮಗೆ ಇನ್ನಷ್ಟು ಪ್ರಸ್ತುತ ಮತ್ತು ಆಸಕ್ತಿಕರವಾದ ವಿಷಯವನ್ನು ನಿರಂತರವಾಗಿ ಒದಗಿಸುವುದು ನಮ್ಮ ಗುರಿಯಾಗಿದೆ.
ಉದಾಹರಣೆಗೆ, ನೀವು ಬಹಳಷ್ಟು ಕ್ರೀಡಾ ವಿಷಯವನ್ನು ವೀಕ್ಷಿಸುತ್ತಿದ್ದು ಆದರೆ ಕೂದಲು ಮತ್ತು ಮೇಕಪ್ ಸಲಹೆಗಳನ್ನು ಸ್ಕಿಪ್ ಮಾಡುತ್ತಿದ್ದರೆ, ನಮ್ಮ ಆಲ್ಗಾರಿದಂಗಳು ಕ್ರೀಡೆಗಳನ್ನು ಆದ್ಯತೆಗೊಳಿಸುತ್ತದೆ ಆದರೆ ಮೇಕಪ್ ಸಲಹೆಗಳನ್ನು ಆದ್ಯತೆಗೊಳಿಸುವುದಿಲ್ಲ. Snapchatter ಆದ್ಯತೆಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಮತ್ತು ವಿಷಯಗಳಿಗೆ
ಹೇಗೆ ಶ್ರೇಯಾಂಕ ನೀಡುತ್ತೇವೆ ಮತ್ತು ಮಾಡರೇಟ್ ಮಾಡುತ್ತೇವೆ ಎನ್ನುವ ಕುರಿತು ನೀವು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.
ನಮ್ಮ Snapchatter ಗಳ ಗೌಪ್ಯತೆಯ ನಿರೀಕ್ಷೆಗಳೊಂದಿಗೆ ವೈಯಕ್ತಿಕಗೊಳಿಸುವಿಕೆಯ ಪ್ರಯೋಜನಗಳನ್ನು ಸಮತೋಲನ ಮಾಡುವುದು ಕೂಡ ನಿರ್ಣಾಯಕವಾಗಿದೆ ಎಂದು ನಾವು ನಂಬಿದ್ದೇವೆ. ಉದಾಹರಣೆಗೆ, ನೆನಪುಗಳ ಒಳಗಿರುವ ವಿಷಯವನ್ನು ಆಧರಿಸಿ ನೆನಪುಗಳಿಗೆ ನೀವು ಉಳಿಸುವ Snap ಗಳನ್ನು ನಾವು ಸ್ವಯಂಚಾಲಿತವಾಗಿ ಟ್ಯಾಗ್ ಮಾಡಬಹುದು (ಉದಾ., Snap ನಲ್ಲಿ ನಾಯಿ ಇರುವುದು) ಮತ್ತು ನಂತರ ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಲು, ಶಿಫಾರಸುಗಳನ್ನು ಮಾಡಲು ಅಥವಾ ನಿಮಗೆ ಜಾಹೀರಾತುಗಳನ್ನು ತೋರಿಸಲು ಆ ಟ್ಯಾಗ್ ಅನ್ನು ಬಳಸಬಹುದು (ಉದಾಹರಣೆಗೆ ನಾಯಿಗಳನ್ನು ಒಳಗೊಂಡಿರುವ ಸ್ಪಾಟ್‌ಲೈಟ್ Snap ಗಳನ್ನು ನಿಮಗೆ ತೋರಿಸುವುದು). ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಲು, ಶಿಫಾರಸುಗಳನ್ನು ಮಾಡಲು ಅಥವಾ ನಿಮಗೆ ಜಾಹೀರಾತುಗಳನ್ನು ತೋರಿಸಲು ನಿಮ್ಮ ಸ್ನೇಹಿತರಿಗೆ ನೀವು ಕಳುಹಿಸುವ ಖಾಸಗಿ ವಿಷಯ ಮತ್ತು ಸಂವಹನಗಳನ್ನು ನಾವು ಬಳಸುವುದಿಲ್ಲ.
ಸೂಕ್ತ ಜಾಹೀರಾತುಗಳನ್ನು ಒದಗಿಸುವುದು
ವೈಯಕ್ತಿಕಗೊಳಿಸಿದ ಸೇವೆಗಳನ್ನು ಒದಗಿಸುವ ಇನ್ನೊಂದು ವಿಧಾನವೆಂದರೆ ನಾವು ತೋರಿಸುವ ಜಾಹೀರಾತುಗಳ ಮೂಲಕ. ಜಾಹೀರಾತುಗಳನ್ನು ವೈಯಕ್ತಿಕಗೊಳಿಸಲು, ಗುರಿಯಾಗಿಸಲು ಮತ್ತು ಅಳೆಯಲು ನಾವು ಸಂಗ್ರಹಿಸಿದ ಮಾಹಿತಿಯಿಂದ ನಿಮ್ಮ ಆಸಕ್ತಿಗಳು ಮತ್ತು ಆದ್ಯತೆಗಳನ್ನು ನಾವು ಬಳಸುತ್ತೇವೆ. ಜಾಹೀರಾತುಗಳು ಪ್ರಸ್ತುತವಾಗಿರುವಾಗ ಅತ್ಯುತ್ತಮವಾಗಿರುತ್ತವೆ ಎಂದು ನಾವು ಭಾವಿಸುತ್ತೇವೆ. ಆದಕಾರಣ ನಾವು ಸರಿಯಾದ ಜಾಹೀರಾತುಗಳನ್ನು ಆಯ್ಕೆ ಮಾಡುತ್ತೇವೆ ಮತ್ತು ಅವುಗಳನ್ನು ನಿಮಗೆ ಸರಿಯಾದ ಸಮಯದಲ್ಲಿ ತೋರಿಸುತ್ತೇವೆ. ಉದಾಹರಣೆಗೆ, ವೀಡಿಯೊ ಗೇಮ್‌ಗಳಿಗಾಗಿ ನೀವು ಜಾಹೀರಾತುಗಳೊಂದಿಗೆ ಸಂವಹನ ನಡೆಸಿದ್ದರೆ, ನೀವು ವೀಡಿಯೊ ಗೇಮ್‌ಗಳನ್ನು ಇಷ್ಟಪಡುತ್ತೀರಿ ಎಂದು ನಾವು ಊಹಿಸುತ್ತೇವೆ ಮತ್ತು ಅದೇ ರೀತಿಯ ಜಾಹೀರಾತುಗಳನ್ನು ನಿಮಗೆ ತೋರಿಸುತ್ತೇವೆ ಆದರೆ ನೀವು ನೋಡುವ ಜಾಹೀರಾತುಗಳು ಕೇವಲ ಅವುಗಳಷ್ಟೇ ಆಗಿರುವುದಿಲ್ಲ. ನಮ್ಮ ವಿಷಯ ಕಾರ್ಯತಂತ್ರದ ರೀತಿಯಲ್ಲೇ, ನೀವು ವಿಭಿನ್ನ ಜಾಹೀರಾತುಗಳನ್ನು ಸ್ವೀಕರಿಸುತ್ತೀರಿ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ನೀವು ಸಂಭಾವ್ಯತಃ ಆಸಕ್ತರಾಗಿಲ್ಲದ ಜಾಹೀರಾತುಗಳನ್ನು ನಿಮಗೆ ತೋರಿಸುವುದನ್ನು ತಪ್ಪಿಸಲು ಕೂಡ ನಾವು ನಿಮ್ಮ ಮಾಹಿತಿಯನ್ನು ಬಳಸುತ್ತೇವೆ. ಉದಾಹರಣೆಗೆ, ಒಂದು ಟಿಕೆಟಿಂಗ್ ಸೈಟ್ ಈ ಹಿಂದೆ ನೀವು ಒಂದು ಸಿನಿಮಾಗಾಗಿ ಟಿಕೆಟ್ ಖರೀದಿಸಿದ್ದೀರಿ ಎಂದು ನಮಗೆ ತಿಳಿಸಿದರೆ — ಅದಕ್ಕಾಗಿ ಜಾಹೀರಾತುಗಳನ್ನು ತೋರಿಸುವುದನ್ನು ನಾವು ನಿಲ್ಲಿಸಬಹುದು. ವಿವಿಧ ರೀತಿಯ ಜಾಹೀರಾತು ನೀಡುವಿಕೆ ಮತ್ತು ನೀವು ಯಾವ ಜಾಹೀರಾತುಗಳನ್ನು ಸ್ವೀಕರಿಸುತ್ತೀರಿ ಎನ್ನುವ ಕುರಿತ ನಿಮ್ಮ ಆಯ್ಕೆಗಳ ಬಗ್ಗೆ ನೀವು ಇಲ್ಲಿ ತಿಳಿದುಕೊಳ್ಳಬಹುದು.
ಜಾಹೀರಾತು ನೀಡುವಿಕೆ ಉದ್ದೇಶಗಳಿಗಾಗಿ ನಾವು ನಿಮ್ಮ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತೇವೆ, ಬಳಸುತ್ತೇವೆ ಮತ್ತು ಹಂಚಿಕೊಳ್ಳುತ್ತೇವೆ ಎನ್ನುವ ಕುರಿತು ನೀವು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.
ಕುಕೀಗಳು ಮತ್ತು ಇತರ ತಂತ್ರಜ್ಞಾನಗಳ ಮೂಲಕ ಸಂಗ್ರಹಿಸಿದ ಮಾಹಿತಿಯ ಕುರಿತು ಒಂದು ಟಿಪ್ಪಣಿ: ನಮ್ಮ ಒಬ್ಬ ಪಾಲುದಾರರ ಮೂಲಕ ನಾವು ನೀಡುವ ಸೇವೆಗಳೊಂದಿಗೆ ನೀವು ಸಂವಹನ ನಡೆಸಿದಾಗ ಮಾಹಿತಿಯನ್ನು ಸಂಗ್ರಹಿಸಲು ಈ ತಂತ್ರಜ್ಞಾನಗಳನ್ನು ನಾವು ಬಳಸಬಹುದು. ಉದಾಹರಣೆಗೆ, ನಿಮಗೆ ಇನ್ನಷ್ಟು ಪ್ರಸ್ತುತವಾದ ಜಾಹೀರಾತುಗಳನ್ನು ತೋರಿಸಲು ಒಬ್ಬ ಜಾಹೀರಾತುದಾರರ ವೆಬ್‌ಸೈಟ್‌ನಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ನಾವು ಬಳಸಬಹುದು. ಹೆಚ್ಚಿನ ವೆಬ್ ಬ್ರೌಸರ್‌ಗಳನ್ನು ಪೂರ್ವನಿಯೋಜಿತವಾಗಿ ಕುಕೀಗಳನ್ನು ಸ್ವೀಕರಿಸಲು ಹೊಂದಿಸಲಾಗಿದೆ. ನೀವು ಬಯಸಿದರೆ, ನಿಮ್ಮ ಬ್ರೌಸರ್ ಅಥವಾ ಸಾಧನದಲ್ಲಿನ ಸೆಟ್ಟಿಂಗ್‌ಗಳ ಮೂಲಕ ನೀವು ಸಾಮಾನ್ಯವಾಗಿ ಬ್ರೌಸರ್ ಕುಕೀಗಳನ್ನು ತೆಗೆದುಹಾಕಬಹುದು ಅಥವಾ ತಿರಸ್ಕರಿಸಬಹುದು. ಅದಾಗ್ಯೂ, ಕುಕೀಗಳನ್ನು ತೆಗೆದುಹಾಕುವುದು ಅಥವಾ ತಿರಸ್ಕರಿಸುವುದರಿಂದ ನಮ್ಮ ಸೇವೆಗಳ ಲಭ್ಯತೆ ಮತ್ತು ಕ್ರಿಯಾತ್ಮಕತೆಯ ಮೇಲೆ ಪರಿಣಾಮ ಬೀರಬಹುದು ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಿ. ನಮ್ಮ ಸೇವೆಗಳಲ್ಲಿ ಕುಕೀಗಳನ್ನು ನಾವು ಮತ್ತು ನಮ್ಮ ಪಾಲುದಾರರು ಹೇಗೆ ಬಳಸುತ್ತೇವೆ ಎನ್ನುವ ಕುರಿತು ಹಾಗೂ ನಿಮ್ಮ ಆಯ್ಕೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಮ್ಮ ಕುಕೀ ನೀತಿ ಪರಿಶೀಲಿಸಿ.
ವೈಶಿಷ್ಟ್ಯಗಳು, ಆಲ್ಗಾರಿದಂಗಳು ಮತ್ತು ಮೆಷಿನ್ ಲರ್ನಿಂಗ್ ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸುಧಾರಿಸುವುದು
ವೈಶಿಷ್ಟ್ಯಗಳು ಮತ್ತು ನಮ್ಮ ಸೇವೆಗಳನ್ನು ಸುಧಾರಿಸುವ ವಿಧಾನಗಳಿಗಾಗಿ ನಮ್ಮ ತಂಡಗಳು ನಿರಂತರವಾಗಿ ಹೊಸ ವಿಚಾರಗಳನ್ನು ಅನ್ವೇಷಿಸುತ್ತವೆ. ಇದನ್ನು ಮಾಡುವ ಸಲುವಾಗಿ, ಜನರೇಟಿವ್ AI ವೈಶಿಷ್ಟ್ಯಗಳ ಮೂಲಕ ಸೇರಿದಂತೆ, (ಜನರೇಟಿವ್ ಮಾಡೆಲ್‌ಗಳನ್ನು ಬಳಸಿಕೊಂಡು ಪಠ್ಯ, ಚಿತ್ರಗಳು ಅಥವಾ ಇತರ ಮಾಧ್ಯಮವನ್ನು ಸೃಷ್ಟಿಸುವ ಸಾಮರ್ಥ್ಯವಿರುವ ಕೃತಕ ಬುದ್ಧಿಮತ್ತೆ. ಜನರೇಟಿವ್ AI ಮಾಡೆಲ್‌ಗಳು ತಮ್ಮ ಇನ್‌ಪುಟ್ ತರಬೇತಿ ಡೇಟಾದ ಮಾದರಿಗಳು ಮತ್ತು ಸಂರಚನೆಯನ್ನು ಕಲಿಯುತ್ತವೆ ಮತ್ತು ಅದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಹೊಸ ಡೇಟಾವನ್ನು ರಚಿಸುತ್ತವೆ) ನಮ್ಮ ವೈಶಿಷ್ಟ್ಯಗಳು ಮತ್ತು ಸೇವೆಗಳನ್ನು ಕಾರ್ಯನಿರ್ವಹಿಸುವಂತೆ ಮಾಡುವ ಆಲ್ಗಾರಿದಂಗಳು ಮತ್ತು ಮೆಷಿನ್ ಲರ್ನಿಂಗ್ ಮಾಡೆಲ್‌ಗಳನ್ನು (ಮಾದರಿಗಳನ್ನು ಹುಡುಕಲು ಮತ್ತು ಊಹೆಗಳನ್ನು ಮಾಡಲು ಗಮನಾರ್ಹ ಪ್ರಮಾಣದ ಡೇಟಾದ ಮೂಲಕ ಜಾಲಾಡುವ ಆಲ್ಗಾರಿದಂನ ಒಂದು ಎಕ್ಸ್‌ಪ್ರೆಷನ್) ಕೂಡ ನಾವು ಅಭಿವೃದ್ಧಿಪಡಿಸುತ್ತೇವೆ ಮತ್ತು ಸುಧಾರಿಸುತ್ತೇವೆ. ವೈಯಕ್ತಿಕಗೊಳಿಸುವಿಕೆ, ಜಾಹೀರಾತು ನೀಡುವಿಕೆ, ಸುರಕ್ಷತೆ ಮತ್ತು ಭದ್ರತೆ, ನ್ಯಾಯಸಮ್ಮತತೆ ಮತ್ತು ಒಳಗೊಳ್ಳುವಿಕೆ, ವರ್ಧಿತ ವಾಸ್ತವಕ್ಕಾಗಿ ಮತ್ತು ದುರ್ಬಳಕೆ ಅಥವಾ ಸೇವೆಯ ಇತರ ನಿಯಮಗಳ ಉಲ್ಲಂಘನೆಯನ್ನು ತಡೆಯುವುದಕ್ಕಾಗಿ ನಾವು ಆಲ್ಗಾರಿದಂಗಳು ಮತ್ತು ಮೆಷಿನ್ ಲರ್ನಿಂಗ್ ಮಾಡೆಲ್‌ಗಳನ್ನು ಬಳಸುತ್ತೇವೆ. ಉದಾಹರಣೆಗೆ, ನಮ್ಮ ಆಲ್ಗಾರಿದಂಗಳು ಮತ್ತು ಮೆಷಿನ್ ಲರ್ನಿಂಗ್ ಮಾಡೆಲ್‌ಗಳು My AI ನಿಂದ ಪ್ರತಿಕ್ರಿಯೆಗಳನ್ನು ಸುಧಾರಿಸುವ ಸಲುವಾಗಿ My AI ಜೊತೆಗೆ Snapchatter ಗಳು ನಡೆಸುವ ಸಂಭಾಷಣೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತವೆ.
ನಾವು ಯಾವ ರೀತಿಯ ಸುಧಾರಣೆಗಳನ್ನು ಮಾಡಬೇಕು ಎಂದು ನಿರ್ಧರಿಸಲು ನಿಮ್ಮ ಮಾಹಿತಿಯು ನಮಗೆ ಸಹಾಯ ಮಾಡಬಲ್ಲದು, ಆದರೆ ನಾವು ಯಾವಾಗಲೂ ಗೌಪ್ಯತೆ ಕುರಿತು ಗಮನ ಕೇಂದ್ರೀಕರಿಸಿರುತ್ತೇವೆ — ಮತ್ತು ನಮ್ಮ ವೈಶಿಷ್ಟ್ಯಗಳು ಮತ್ತು ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸಲು ಅವಶ್ಯಕವಿರುವುದಕ್ಕಿಂತ ಹೆಚ್ಚು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಲು ನಾವು ಬಯಸುವುದಿಲ್ಲ.
ವಿಶ್ಲೇಷಕಗಳು
ಏನನ್ನು ರೂಪಿಸಬೇಕು ಅಥವಾ ನಮ್ಮ ಸೇವೆಗಳನ್ನು ಸುಧಾರಿಸುವುದು ಹೇಗೆ ಎಂದು ಅರ್ಥಮಾಡಿಕೊಳ್ಳುವ ಸಲುವಾಗಿ, ನಮ್ಮ ವೈಶಿಷ್ಟ್ಯಗಳಿಗೆ ನಾವು ಟ್ರೆಂಡ್‌ಗಳು ಮತ್ತು ಬೇಡಿಕೆಗಳನ್ನು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ, ಒಂದು ಗುಂಪಿನ ಗರಿಷ್ಠ ಗಾತ್ರದಂತಹ, ಗುಂಪು ಚಾಟ್ ವೈಶಿಷ್ಟ್ಯದ ಭಾಗಗಳಲ್ಲಿ ನಾವು ಬದಲಾವಣೆ ಮಾಡಬೇಕೇ ಎಂದು ನಿರ್ಧರಿಸಲು ಸಹಾಯ ಪಡೆದುಕೊಳ್ಳುವುದಕ್ಕೆ ಗುಂಪು ಚಾಟ್ ಬಳಕೆಯ ಕುರಿತ ಮೆಟಾಡೇಟಾ ಮತ್ತು ಪ್ರವೃತ್ತಿಗಳ ಮೇಲೆ ನಾವು ನಿಗಾ ವಹಿಸುತ್ತೇವೆ. Snapchatter ಗಳಿಂದ ಡೇಟಾ ಅಧ್ಯಯನ ಮಾಡುವುದು ಸೇವೆಗಳನ್ನು ಜನರು ಬಳಸುತ್ತಿರುವ ವಿಧಾನಗಳಲ್ಲಿನ ಪ್ರವೃತ್ತಿಗಳನ್ನು ನೋಡಲು ನಮಗೆ ಸಹಾಯ ಮಾಡಬಹುದು. ಇದು Snapchat ಅನ್ನು ಬೃಹತ್ ಪ್ರಮಾಣದಲ್ಲಿ ಸುಧಾರಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಟ್ರೆಂಡ್‌ಗಳು ಮತ್ತು ಬಳಕೆಯನ್ನು ಗುರುತಿಸಲು, ನಿಗಾವಹಿಸಲು ಮತ್ತು ವಿಶ್ಲೇಷಿಸಲು ನಾವು ವಿಶ್ಲೇಷಣೆಗಳನ್ನು ಮಾಡುತ್ತೇವೆ. ಈ ಮಾಹಿತಿಯನ್ನು ಆಧರಿಸಿ, ಇತರ ವಿಷಯಗಳ ಜೊತೆಗೆ ಬೇಡಿಕೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಪಡೆದುಕೊಳ್ಳುವುದಕ್ಕಾಗಿ ನಾವು ನಮ್ಮ ಬಳಕೆದಾರರ ಕುರಿತ ಮಾಹಿತಿಯನ್ನು ರಚಿಸುತ್ತೇವೆ.
ಸಂಶೋಧನೆ
ಸಾಮಾನ್ಯ ಗ್ರಾಹಕ ಹಿತಾಸಕ್ತಿಗಳು, ಪ್ರವೃತ್ತಿಗಳನ್ನು ಮತ್ತು ನೀವು ಮತ್ತು ನಿಮ್ಮ ಸಮುದಾಯದಲ್ಲಿನ ಇತರರು ಸೇವೆಗಳನ್ನು ಹೇಗೆ ಬಳಸುತ್ತಿದ್ದೀರಿ ಎಂದು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಾವು ಸಂಶೋಧನೆಯನ್ನು ನಡೆಸುತ್ತೇವೆ. ವಿಶ್ಲೇಷಕಗಳ (ನಾವು ಮೇಲೆ ವಿವರಿಸಿರುವಂತೆ) ಜೊತೆಗೆ ಈ ಮಾಹಿತಿಯು, ನಮ್ಮ ಸಮುದಾಯದ ಕುರಿತು ಮತ್ತು ನಮ್ಮ ನಮ್ಮ ಸಮುದಾಯದಲ್ಲಿ ಇರುವವರ ಬದುಕಿನಲ್ಲಿ ನಮ್ಮ ಸೇವೆಗಳು ಹೇಗೆ ಹೊಂದಿಕೊಳ್ಳುತ್ತವೆ ಎನ್ನುವ ಕುರಿತು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಹೊಸ ತಂತ್ರಗಳು ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ನಾವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿಯೂ ತೊಡಗಿಕೊಳ್ಳುತ್ತೇವೆ (ಉದಾ., ಹೊಸ ಮೆಷಿನ್ ಲರ್ನಿಂಗ್ ಮಾಡೆಲ್‌ಗಳು ಅಥವಾ Spectacles ರೀತಿಯ ಹಾರ್ಡ್‌ವೇರ್). ನಮ್ಮ ಸಂಶೋಧನೆಯ ಫಲಿತಾಂಶಗಳನ್ನು ಕೆಲವೊಮ್ಮೆ Snapchat ನಲ್ಲಿನ ವೈಶಿಷ್ಟ್ಯಗಳಲ್ಲಿ ಬಳಸಲಾಗುತ್ತದೆ ಮತ್ತು ಒಟ್ಟಾರೆ ನಡವಳಿಕೆಗಳು ಮತ್ತು ಗ್ರಾಹಕ ಪ್ರವೃತ್ತಿಗಳಂತಹ ಸಂಗತಿಗಳ ಕುರಿತು ನಾವು ಕೆಲವೊಮ್ಮೆ ವರದಿಗಳನ್ನು ಪ್ರಕಟಿಸುತ್ತೇವೆ (ಇದು ನಮ್ಮ ಬಳಕೆದಾರ ನೆಲೆಯಾದ್ಯಂತ ಒಟ್ಟುಗೂಡಿಸಿದ ಡೇಟಾವನ್ನು ಮಾತ್ರ ಹೊಂದಿರುತ್ತದೆ ಮತ್ತು ನಿರ್ದಿಷ್ಟವಾಗಿ ನಿಮ್ಮ ಕುರಿತ ಯಾವುದೇ ಖಾಸಗಿ ಮಾಹಿತಿಯನ್ನು ಒಳಗೊಂಡಿರುವುದಿಲ್ಲ).
ನಮ್ಮ ಸೇವೆಗಳ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸುವುದು
ನಮ್ಮ ಸೇವೆಗಳ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು, Snapchatter ಗುರುತನ್ನು ಪರಿಶೀಲಿಸಲು ಮತ್ತು ವಂಚನೆ ಮತ್ತು ಇತರ ಅನಧಿಕೃತ ಅಥವಾ ಅಕ್ರಮ ಚಟುವಟಿಕೆಯನ್ನು ತಡೆಯಲು ನಾವು ನಿಮ್ಮ ಮಾಹಿತಿಯನ್ನು ಬಳಸುತ್ತೇವೆ. ಉದಾಹರಣೆಗೆ, ನಿಮ್ಮ ಖಾತೆಯನ್ನು ರಕ್ಷಿಸಲು ಸಹಾಯ ಮಾಡುವುದಕ್ಕಾಗಿ ನಾವು ಎರಡು-ಅಂಶಗಳ ದೃಢೀಕರಣವನ್ನು ಒದಗಿಸುತ್ತೇವೆ ಮತ್ತು ಯಾವುದೇ ಸಂದೇಹಾಸ್ಪದ ಚಟುವಟಿಕೆಯನ್ನು ನಾವು ಗಮನಿಸಿದರೆ ನಿಮಗೆ ಇಮೇಲ್ ಅಥವಾ ಪಠ್ಯ ಸಂದೇಶಗಳನ್ನು ಕಳುಹಿಸಬಹುದು. Snapchat ನಲ್ಲಿ ಕಳುಹಿಸಿದ URL ಗಳನ್ನು ಸಹ ಸ್ಕ್ಯಾನ್ ಮಾಡುತ್ತೇವೆ ಮತ್ತು ಒಂದುವೇಳೆ ಆ ವೆಬ್‌ಪುಟವು ಹಾನಿಕಾರಕವಾಗಿದ್ದಲ್ಲಿ, ನಾವು ಅದರ ಬಗ್ಗೆ ನಿಮಗೆ ಎಚ್ಚರಿಕೆ ನೀಡಬಹುದು.
ನಿಮ್ಮನ್ನು ಸಂಪರ್ಕಿಸುವುದು
ಕೆಲವೊಮ್ಮೆ ಹೊಸ ಅಥವಾ ಅಸ್ತಿತ್ವದಲ್ಲಿರುವ ವೈಶಿಷ್ಟ್ಯಗಳನ್ನು ಪ್ರಚಾರ ಮಾಡುವುದಕ್ಕಾಗಿ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ. ಇದು Snapchat, ಇಮೇಲ್, SMS ಅಥವಾ ಅನುಮತಿಸಿರುವಲ್ಲಿ, ಇತರ ಮೆಸೇಜಿಂಗ್ ಪ್ಲಾಟ್‌ಫಾರ್ಮ್ಸ್ ಮೂಲಕ Snapchatter ಗಳಿಗೆ ಸಂವಹನಗಳನ್ನು ಕಳುಹಿಸುವುದನ್ನು ಒಳಗೊಂಡಿದೆ. ಉದಾಹರಣೆಗೆ, ನಿಮಗೆ ಆಸಕ್ತಿಕರವಾಗಿರಬಹುದು ಎಂದು ನಾವು ಭಾವಿಸುವ ನಮ್ಮ ಸೇವೆಗಳು ಮತ್ತು ಪ್ರಚಾರ ಆಫರ್‌ಗಳ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲು ನಾವು Snapchat ಆ್ಯಪ್, ಇಮೇಲ್, SMS ಅಥವಾ ಇತರ ಮೆಸೇಜಿಂಗ್ ಪ್ಲ್ಯಾಟ್‌ಫಾರ್ಮ್ಸ್ ಅನ್ನು ಬಳಸಬಹುದು.
ಬೇರೆ ಸಮಯಗಳಲ್ಲಿ, ಮಾಹಿತಿ, ಅಲರ್ಟ್‌ಗಳನ್ನು ನೀಡಲು ಅಥವಾ ನಮ್ಮ ಬಳಕೆದಾರರ ವಿನಂತಿ ಮೇರೆಗೆ ಅವರಿಗೆ ಸಂದೇಶಗಳನ್ನು ತಲುಪಿಸಲು ನಾವು ನಿಮ್ಮೊಂದಿಗೆ ಸಂವಹನ ನಡೆಸಬೇಕಾಗುತ್ತದೆ. ಖಾತೆ ಸ್ಥಿತಿ ಅಪ್‌ಡೇಟ್‌ಗಳು, ಭದ್ರತಾ ಎಚ್ಚರಿಕೆಗಳು ಮತ್ತು ಚಾಟ್ ಅಥವಾ ಫ್ರೆಂಡ್ ಕೋರಿಕೆ ಜ್ಞಾಪನೆಗಳನ್ನು ತಲುಪಿಸಲು, Snapchat, ಇಮೇಲ್, SMS ಅಥವಾ ಅನುಮತಿಸಿರುವಲ್ಲಿ ಇತರ ಮೆಸೇಜಿಂಗ್ ಪ್ಲ್ಯಾಟ್‌ಫಾರ್ಮ್ಸ್ ಮೂಲಕ ಸಂವಹನಗಳನ್ನು ಕಳುಹಿಸುವುದನ್ನು ಇದು ಒಳಗೊಂಡಿರಬಹುದು; Snapchatter ಗಳಲ್ಲದವರಿಗೆ ಆಹ್ವಾನಗಳನ್ನು ಅಥವಾ Snapchat ವಿಷಯವನ್ನು ಕಳುಹಿಸುವಂತೆ ನಮ್ಮ ಬಳಕೆದಾರರು ಮಾಡಿದ ವಿನಂತಿಗಳನ್ನು ಪೂರೈಸುವುದನ್ನು ಸಹ ಇದು ಒಳಗೊಂಡಿರಬಹುದು.
ಬೆಂಬಲ
ನೀವು ಸಹಾಯಕ್ಕಾಗಿ ಕೇಳಿದಾಗ, ಸಾಧ್ಯವಿರುವಷ್ಟು ಬೇಗ ನಿಮಗೆ ಬೆಂಬಲ ಒದಗಿಸಲು ನಾವು ಬಯಸುತ್ತೇವೆ. ನಿಮಗೆ, Snapchatter ಸಮುದಾಯಕ್ಕೆ ಮತ್ತು ನಮ್ಮ ವ್ಯವಹಾರ ಪಾಲುದಾರರಿಗೆ ನಮ್ಮ ಸೇವೆಗಳೊಂದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯವಿರುವ ಸಹಾಯ ಒದಗಿಸುವ ಸಲುವಾಗಿ, ಪ್ರತಿಕ್ರಿಯಿಸಲು ಸಾಮಾನ್ಯವಾಗಿ ನಾವು ಸಂಗ್ರಹಿಸಿದ ಮಾಹಿತಿಯನ್ನು ನಾವು ಬಳಸಬೇಕಾಗುತ್ತದೆ.
ನಮ್ಮ ನಿಯಮಗಳು ಮತ್ತು ನೀತಿಗಳನ್ನು ಜಾರಿಗೊಳಿಸುವುದು
ನಮ್ಮ ನಿಯಮಗಳು ಮತ್ತು ಕಾನೂನನ್ನು ಜಾರಿಗೊಳಿಸಲು ನಾವು ಸಂಗ್ರಹಿಸಿದ ಡೇಟಾವನ್ನು ನಾವು ಬಳಸುತ್ತೇವೆ. ಇದು ನಮ್ಮ ನಿಯಮಗಳು, ನೀತಿಗಳು ಅಥವಾ ಕಾನೂನನ್ನು ಉಲ್ಲಂಘಿಸುವ ನಡವಳಿಕೆಯ ವಿರುದ್ಧ ಕ್ರಮ ಜಾರಿಗೊಳಿಸುವುದು, ತನಿಖೆ ಮಾಡುವುದು ಮತ್ತು ವರದಿ ಮಾಡುವುದು, ಕಾನೂನು ಜಾರಿ ಸಂಸ್ಥೆಗಳ ವಿನಂತಿಗಳಿಗೆ ಪ್ರತಿಸ್ಪಂದಿಸುವುದು ಮತ್ತು ಕಾನೂನು ಅಗತ್ಯಗಳ ಅನುಸರಣೆ ಮಾಡುವುದನ್ನು ಒಳಗೊಂಡಿದೆ. ಉದಾಹರಣೆಗೆ, ನಮ್ಮ ಸೇವೆಗಳಲ್ಲಿ ಕಾನೂನುಬಾಹಿರ ವಿಷಯವನ್ನು ಪೋಸ್ಟ್ ಮಾಡಿದಾಗ, ನಾವು ನಮ್ಮ ನಿಯಮಗಳು ಮತ್ತು ಇತರ ನೀತಿಗಳನ್ನು ಜಾರಿಗೊಳಿಸಬೇಕಾಗಬಹುದು. ಕೆಲವು ಪ್ರಕರಣಗಳಲ್ಲಿ, ಕಾನೂನು ಜಾರಿ ಸಂಸ್ಥೆಗಳ ವಿನಂತಿಗಳೊಂದಿಗೆ ಸಹಕರಿಸಲು, ಕಾನೂನು ಜಾರಿ ಸಂಸ್ಥೆಗಳು, ಉದ್ಯಮ ಪಾಲುದಾರರು ಅಥವಾ ಇತರರಿಗೆ ಸುರಕ್ಷತಾ ವಿಷಯಗಳ ಕುರಿತು ದೂರು ಸಲ್ಲಿಸಲು ಅಥವಾ ನಮ್ಮ ಕಾನೂನು ಬಾಧ್ಯತೆಗಳ ಅನುಸರಣೆ ಮಾಡಲು ಕೂಡ ನಾವು ನಿಮ್ಮ ಮಾಹಿತಿಯನ್ನು ಬಳಸಬಹುದು ಅಥವಾ ಹಂಚಿಕೊಳ್ಳಬಹುದು. ಇನ್ನಷ್ಟು ತಿಳಿದುಕೊಳ್ಳಲು ನಮ್ಮ ಪಾರದರ್ಶಕತೆಯ ವರದಿ ಪರಿಶೀಲಿಸಿ.