Privacy, Safety, and Policy Hub

ಕೊರಿಯಾ ಗಣರಾಜ್ಯದ ಗೌಪ್ಯತಾ ಸೂಚನೆ

ಜಾರಿ: 20 ಫೆಬ್ರವರಿ 2025

ನಾವು ಈ ಸೂಚನೆಯನ್ನು ನಿರ್ದಿಷ್ಟವಾಗಿ ಕೊರಿಯಾ ಗಣರಾಜ್ಯದಲ್ಲಿನ ಬಳಕೆದಾರರಿಗಾಗಿ ರಚಿಸಿದ್ದೇವೆ. ಕೊರಿಯಾ ಗಣರಾಜ್ಯದಲ್ಲಿನ ಬಳಕೆದಾರರು ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆ ಸೇರಿದಂತೆ, ಕೊರಿಯಾ ಗಣರಾಜ್ಯದ ಕಾನೂನುಗಳ ಅಡಿಯಲ್ಲಿ ಕೆಲವು ಗೌಪ್ಯತಾ ಹಕ್ಕುಗಳನ್ನು ಹೊಂದಿದ್ದಾರೆ.  ನಮ್ಮ ಗೌಪ್ಯತಾ ತತ್ವಗಳು ಹಾಗೂ ನಾವು ಎಲ್ಲ ಬಳಕೆದಾರರಿಗೆ ಒದಗಿಸುವ ಗೌಪ್ಯತಾ ನಿಯಂತ್ರಣಗಳು ಈ ಕಾನೂನುಗಳ ಅನುಸಾರವಾಗಿವೆ—ಈ ಸೂಚನೆಯು ನಾವು ಕೊರಿಯಾ ಗಣರಾಜ್ಯಕ್ಕೆ ನಿರ್ದಿಷ್ಟವಾದ ಅಗತ್ಯಗಳನ್ನು ಒಳಗೊಳ್ಳುತ್ತೇವೆ ಎನ್ನುವುದನ್ನು ಖಚಿತಪಡಿಸುತ್ತದೆ. ಉದಾಹರಣೆಗಾಗಿ, ಎಲ್ಲ ಬಳಕೆದಾರರು ತಮ್ಮ ಡೇಟಾದ ಪ್ರತಿಗಾಗಿ ವಿನಂತಿಸಬಹುದು, ಅದರ ಅಳಿಸುವಿಕೆಯನ್ನು ವಿನಂತಿಸಬಹುದು ಮತ್ತು ಆ್ಯಪ್‌ನಲ್ಲಿ ತಮ್ಮ ಗೌಪ್ಯತಾ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಬಹುದು. ಪೂರ್ಣ ಚಿತ್ರಣಕ್ಕಾಗಿ, ನಮ್ಮ ಗೌಪ್ಯತಾ ನೀತಿಯನ್ನು ಪರಿಶೀಲಿಸಿ.

ಡೇಟಾ ನಿಯಂತ್ರಕ

ಒಂದು ವೇಳೆ ನೀವು ರಿಪಬ್ಲಿಕ್ ಆಫ್ ಕೊರಿಯಾದಲ್ಲಿನ ಬಳಕೆದಾರರಾಗಿದ್ದರೆ, Snap Inc. ನಿಮ್ಮ ವೈಯಕ್ತಿಕ ಮಾಹಿತಿಯ ನಿಯಂತ್ರಕನಾಗಿದೆ ಎನ್ನುವುದನ್ನು ನೀವು ತಿಳಿದಿರಬೇಕು.

ತೃತೀಯ ಪಕ್ಷಗಳಿಗೆ ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆ

ಇಲ್ಲಿ ವಿವರಿಸಿರುವಂತಹ ಕೆಲವು ತೃತೀಯ-ಪಕ್ಷದ ಸೇವಾ ಪೂರೈಕೆದಾರರು ಮತ್ತು/ಅಥವಾ Snap Inc. ಸಮೂಹ ಸಂಸ್ಥೆಯೊಳಗಿನ Snap ನ ಅಂಗಸಂಸ್ಥೆಗಳು, Snap ಕಾರ್ಯಗಳನ್ನು ಮಾಡಬಹುದು ಮತ್ತು ಆ ಕಾರ್ಯಗಳನ್ನು ಮಾಡಲು ಅಗತ್ಯವಿರುವಂತೆ ನಿಮ್ಮ ವೈಯಕ್ತಿಕ ಮಾಹಿತಿಗೆ ಪ್ರವೇಶ ಹೊಂದಿರಬಹುದು.

Snapchat ಗೆ ವಿನೋದಮಯ ಹೊಸ ವೈಶಿಷ್ಟ್ಯಗಳನ್ನು ಸೇರಿಸುವುದಕ್ಕಾಗಿ ನಾವು ಕೆಲಸ ಮಾಡುವ ಪಾಲುದಾರರು ಮತ್ತು ಕ್ರಿಯೇಟರ್‌ಗಳೊಂದಿಗೂ ನಾವು ನಿಮ್ಮ ಕುರಿತ ಮಾಹಿತಿಯನ್ನು ಹಂಚಿಕೊಳ್ಳಬಹುದು. ನಮ್ಮ ಸೇವೆಗಳ ಕುರಿತು ತೃತೀಯ ಪಕ್ಷಗಳಿಂದ ಸಂಗ್ರಹಿಸಲಾಗುವ ಮಾಹಿತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮ ಗ್ರಾಹಕ ಸೇವಾ ಸೈಟ್‌ಗೆ ಭೇಟಿ ನೀಡಿ. ಅನ್ವಯಿಸುವ ಉಳಿಸಿಕೊಳ್ಳುವಿಕೆ ಅವಧಿಗಳಿಗಾಗಿ ದಯವಿಟ್ಟು ಪ್ರತಿ ಪಾಲುದಾರರ ಗೌಪ್ಯತಾ ನೀತಿಯನ್ನು ಪರಿಶೀಲಿಸಿ.

ಕಾನೂನಿನಿಂದ ಬೇರೆ ರೀತಿ ಅನುಮತಿಸದ ಹೊರತು, ನಿಮ್ಮ ಸಮ್ಮತಿಯಿಲ್ಲದೆ ನಿಮ್ಮ ಕುರಿತ ವೈಯಕ್ತಿಕ ಮಾಹಿತಿಯನ್ನು ನಾವು ತೃತೀಯ ಪಕ್ಷಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ.

ವೈಯಕ್ತಿಕ ಮಾಹಿತಿಯ ನಾಶಪಡಿಸುವಿಕೆಯ ಕಾರ್ಯವಿಧಾನಗಳು ಮತ್ತು ವಿಧಾನಗಳು

ನೀವು ಸಮ್ಮತಿಸಿದ ಸಮಯಾವಧಿ ಮುಗಿದಾಗ ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದ ಉದ್ದೇಶಕ್ಕಾಗಿ ಅದು ಇನ್ನುಮುಂದೆ ಅಗತ್ಯವಿಲ್ಲ ಎಂದು ಪರಿಗಣಿಸಿದಾಗ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾಶಮಾಡುತ್ತೇವೆ. ನಮ್ಮ ಗೌಪ್ಯತಾ ನೀತಿಯಲ್ಲಿ ವಿವರಿಸಿರುವಂತೆ, ಒಂದು ವೇಳೆ ನೀವು ಎಂದಾದರೂ Snapchat ಬಳಸುವುದನ್ನು ನಿಲ್ಲಿಸಲು ನಿರ್ಧರಿಸಿದರೆ, ನೀವು ನಿಮ್ಮ ಖಾತೆ ಅಳಿಸುವಂತೆ ನಮ್ಮನ್ನು ಕೇಳಬಹುದು. ನೀವು ಒಂದಿಷ್ಟು ಸಮಯ ನಿಷ್ಕ್ರಿಯರಾಗಿದ್ದ ಬಳಿಕ ಕೂಡ ನಿಮ್ಮ ಕುರಿತು ನಾವು ಸಂಗ್ರಹಿಸಿದ ಬಹುತೇಕ ಮಾಹಿತಿಯನ್ನು ನಾವು ಅಳಿಸುತ್ತೇವೆ—ಆದರೆ ಚಿಂತಿಸಬೇಡಿ, ನಾವು ಮೊದಲು ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತೇವೆ! ನಾವು ನಿಮ್ಮ ಡೇಟಾವನ್ನು ನಾಶಪಡಿಸಿದಾಗ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಶಾಶ್ವತವಾಗಿ ನಾಶಪಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ವಾಣಿಜ್ಯಿಕವಾಗಿ ಸಮಂಜಸವಾದ ಮತ್ತು ತಾಂತ್ರಿಕವಾಗಿ ಕಾರ್ಯಸಾಧುವಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

ನಿಮ್ಮ ಹಕ್ಕುಗಳು

ನಿಮ್ಮ ಮಾಹಿತಿಯ ಮೇಲೆ ನೀವು ನಿಯಂತ್ರಣ ಹೊಂದಿರಬೇಕು ಎಂದು ನಾವು ಬಯಸುತ್ತೇವೆ, ಆದ್ದರಿಂದ ನಿಮ್ಮ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿ ನಾವು ನಿಮಗೆ ಹಲವು ಹಕ್ಕುಗಳನ್ನು ನೀಡುತ್ತೇವೆ. ದಯವಿಟ್ಟು ಗೌಪ್ಯತಾ ನೀತಿಯ ನಿಮ್ಮ ಮಾಹಿತಿಯ ಮೇಲೆ ನಿಯಂತ್ರಣ ವಿಭಾಗವನ್ನು ಪರಿಶೀಲಿಸಿ.

ಅಂತಾರಾಷ್ಟ್ರೀಯ ಡೇಟಾ ವರ್ಗಾವಣೆಗಳು

ಸಾಗರೋತ್ತರ Snap Inc. ಸಮೂಹ ಸಂಸ್ಥೆಗಳು ಮತ್ತು ಸೇವಾ ಪೂರೈಕೆದಾರರು.  ನಿಮಗೆ ಸೇವೆಗಳನ್ನು ಒದಗಿಸಲು, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮತ್ತು ನೀವು ವಾಸಿಸುತ್ತಿರುವ ದೇಶದ ಹೊರಗಿನ ಇತರ ದೇಶಗಳಲ್ಲಿ ಇಲ್ಲಿ ವಿವರಿಸಿರುವಂತೆ Snap ಪರವಾಗಿ ಕಾರ್ಯಗಳನ್ನು ಮಾಡಲು Snap Inc. ಸಮೂಹ ಸಂಸ್ಥೆಗಳು ಮತ್ತು ಕೆಲವು ತೃತೀಯ-ಪಕ್ಷದ ಸೇವಾ ಪೂರೈಕೆದಾರರಿಂದ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು, ಅದಕ್ಕೆ ವರ್ಗಾಯಿಸಬಹುದು ಮತ್ತು ಅದನ್ನು ಶೇಖರಣೆ ಮಾಡಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು. ನೀವು ವಾಸಿಸಿರುವ ಸ್ಥಳದಿಂದ ಹೊರಗೆ ನಾವು ಮಾಹಿತಿಯನ್ನು ಹಂಚಿಕೊಂಡಾಗಲೆಲ್ಲ, ನಿಮ್ಮ ಸ್ಥಳೀಯ ಕಾನೂನಿನೊಂದಿಗೆ ನಮ್ಮ ವರ್ಗಾವಣೆ ಅನುಸರಣೆ ಹೊಂದಿದೆ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ, ಇದರಿಂದಾಗಿ ನಿಮ್ಮ ವೈಯಕ್ತಿಕ ಮಾಹಿತಿ ಸೂಕ್ತ ಮಟ್ಟದಲ್ಲಿ ಸುರಕ್ಷಿತವಾಗಿರುತ್ತದೆ. 

ಸಾಗರೋತ್ತರ ಪಾಲುದಾರರು.  Snapchat ಗೆ ವಿನೋದಮಯ ಹೊಸ ವೈಶಿಷ್ಟ್ಯಗಳನ್ನು ಸೇರಿಸಲು ಕೊರಿಯಾ ಗಣರಾಜ್ಯದ ಹೊರಗೆ ನೆಲೆಸಿರುವ ಜನರೊಂದಿಗೆ ಕೆಲಸ ಮಾಡುವ ಪಾಲುದಾರರು ಮತ್ತು ಕ್ರಿಯೇಟರ್‌ಗಳೊಂದಿಗೆ ನಾವು ನಿಮ್ಮ ಕುರಿತ ಮಾಹಿತಿಯನ್ನು ಹಂಚಿಕೊಳ್ಳಬಹುದು. ನಮ್ಮ ಪಾಲುದಾರರ ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮ ಗ್ರಾಹಕ ಸೇವಾ ಸೈಟ್‌ಗೆ ಭೇಟಿ ನೀಡಿ.

  • ವೈಯಕ್ತಿಕ ಮಾಹಿತಿಯನ್ನು ವರ್ಗಾಯಿಸಲಾಗುವ ದೇಶ: ದಯವಿಟ್ಟು ಇಲ್ಲಿ ಪ್ರವೇಶಿಸಬಹುದಾದ ಪಾಲುದಾರರ ಗೌಪ್ಯತಾ ನೀತಿಯನ್ನು ಪರಿಶೀಲಿಸಿ ಗ್ರಾಹಕ ಸೇವಾ ಸೈಟ್‌

  • ವರ್ಗಾವಣೆಯ ದಿನಾಂಕ ಮತ್ತು ವಿಧಾನ: ಶೇಖರಣೆ ಮತ್ತು ಪ್ರಕ್ರಿಯೆಗೊಳಿಸುವಿಕೆಗಾಗಿ ಸಲ್ಲಿಸಿದಾಗ ವರ್ಗಾಯಿಸಲಾಗುತ್ತದೆ

  • ವರ್ಗಾಯಿಸಿದ ವೈಯಕ್ತಿಕ ಮಾಹಿತಿ: ದಯವಿಟ್ಟು ಗೌಪ್ಯತಾ ನೀತಿಯ ನಾವು ಸಂಗ್ರಹಿಸುವ ಮಾಹಿತಿ ವಿಭಾಗವನ್ನು ನೋಡಿ

  • ವೈಯಕ್ತಿಕ ಮಾಹಿತಿಯ ಉಳಿಸಿಕೊಳ್ಳುವಿಕೆ: ದಯವಿಟ್ಟು ಇಲ್ಲಿ ಪ್ರವೇಶಿಸಬಹುದಾದ ಪಾಲುದಾರರ ಗೌಪ್ಯತಾ ನೀತಿಯನ್ನು ಪರಿಶೀಲಿಸಿ ಗ್ರಾಹಕ ಸೇವಾ ಸೈಟ್

ವೈಯಕ್ತಿಕ ಮಾಹಿತಿಯ ರಕ್ಷಣೆ ಮತ್ತು ದೂರುಗಳ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿರುವ ಇಲಾಖೆ

Snap ನ ಗೌಪ್ಯತೆ ಅಧಿಕಾರಿಯನ್ನು Snap ನ ಸ್ಥಳೀಯ ಏಜೆಂಟ್ ಮೂಲಕ ಸಂಪರ್ಕಿಸಬಹುದು: General Agent Co. Ltd (ಪ್ರತಿನಿಧಿ: ಕು. ಯುನ್-ಮಿ ಕಿಮ್)
ವಿಳಾಸ: Rm. 1216, 28, Saemunan-ro 5ga-gil, Jongno-gu, Seoul
ದೂರವಾಣಿ: 02 735 6118
ಇಮೇಲ್: snap @ generalagent.co.kr
Snap ನ ಸ್ಥಳೀಯ ಏಜೆಂಟ್‌ಗಳನ್ನು ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆಯ ಆರ್ಟಿಕಲ್ 31-2 ಮತ್ತು ಮಾಹಿತಿ ಮತ್ತು ಸಂವಹನ ನೆಟ್‌ವರ್ಕ್ ಬಳಕೆ ಮತ್ತು ಮಾಹಿತಿ ರಕ್ಷಣೆ ಇತ್ಯಾದಿಗಳ ಪ್ರಚಾರದ ಕಾಯ್ದೆಯ ಆರ್ಟಿಕಲ್ 32-5 ರ ಪ್ರಕಾರ ನೇಮಿಸಲಾಗಿದೆ.

ಜೊತೆಗೆ , ನೀವು ಕೆಳಗೆ ವಿವರಿಸಿರುವಂತೆ Snap ನ ಗೌಪ್ಯತಾ ಅಧಿಕಾರಿಯನ್ನು ಸಂಪರ್ಕಿಸಬಹುದು. 

Snap Inc.
Attn: Legal Dept. (Korean member query)
3000 31st Street
Santa Monica, CA 90405,
USA
ದೂರವಾಣಿ: 02 735 6118
ಇ-ಮೇಲ್: koreaprivacy@snap.com