Spectacles 2024 ಪೂರಕ ಗೌಪ್ಯತೆ ನೀತಿ
ಜಾರಿ ದಿನಾಂಕ: ಸೆಪ್ಟೆಂಬರ್ 20, 2024
Spectacles 2024 ಕ್ಕಾಗಿ Snap Inc. ನ ಪೂರಕ ಗೌಪ್ಯತೆ ನೀತಿಗೆ ಸ್ವಾಗತ. Spectacles 2024 ಸಾಧನ ಮತ್ತು ಅದರ ಜೊತೆಗಿನ Spectacles ಆ್ಯಪ್ (ಜೊತೆಯಾಗಿ "Spectacles") ಬಳಸುತ್ತಿರುವ ವ್ಯಕ್ತಿಗಳಿಗಾಗಿ ಹೆಚ್ಚುವರಿ ಮಾಹಿತಿಯನ್ನು ಒದಗಿಸಲು ನಾವು ಈ ನೀತಿಯನ್ನು ರಚಿಸಿದ್ದೇವೆ. ಈ ನೀತಿಯು ನಮ್ಮ ಗೌಪ್ಯತೆ ನೀತಿ ಮತ್ತು ಪ್ರದೇಶ ನಿರ್ದಿಷ್ಟ ಸೂಚನೆಗಳಿಗೆ ಪೂರಕವಾಗಿದೆ ಮತ್ತು ಅದಕ್ಕೆ ಹೆಚ್ಚುವರಿಯಾಗಿದೆ ಹಾಗೂ Spectacles ನಲ್ಲಿ ನಿಮ್ಮ ಡೇಟಾವನ್ನು Snap ಹೇಗೆ ಸಂಗ್ರಹಿಸುತ್ತದೆ, ಬಳಸುತ್ತದೆ ಮತ್ತು ಹಂಚಿಕೊಳ್ಳುತ್ತದೆ ಎನ್ನುವುದನ್ನು ಅದು ವಿವರಿಸುತ್ತದೆ.
ನಿಮ್ಮ ಮಾಹಿತಿಯ ಮೇಲೆ ನಿಯಂತ್ರಣ
ನಿಮ್ಮ ಮಾಹಿತಿಯ ಮೇಲೆ ನೀವು ನಿಯಂತ್ರಣ ಹೊಂದಿರಬೇಕು ಎಂದು ನಾವು ಬಯಸುತ್ತೇವೆ, ಹಾಗಾಗಿ ಈ ಕೆಳಗಿನವು ಸೇರಿದಂತೆ ನಾವು ಹಲವು ಟೂಲ್‌ಗಳನ್ನು ನಿಮಗೆ ಒದಗಿಸುತ್ತೇವೆ:
ಸ್ಥಳ ಅನುಮತಿ. ನಿಮ್ಮ ಸ್ಥಳದ ಮಾಹಿತಿಯನ್ನು (GPS ಸಿಗ್ನಲ್‌ಗಳಂತಹ ವಿಧಾನಗಳ ಮೂಲಕ ನಿಖರವಾದ ಸ್ಥಳ) ನೀವು Spectacles ನಲ್ಲಿ ಸಕ್ರಿಯಗೊಳಿಸದ ಹೊರತು, ಡಿಫಾಲ್ಟ್ ಆಗಿ ಅದನ್ನು ಸಂಗ್ರಹಿಸುವುದಿಲ್ಲ. ನಿಮ್ಮ Spectacles ಆ್ಯಪ್‌ನಲ್ಲಿ ನೀವು ಯಾವುದೇ ಸಮಯದಲ್ಲಿ ಈ ವೈಶಿಷ್ಟ್ಯವನ್ನು ಯಾವಾಗಲೂ ನಿಷ್ಕ್ರಿಯಗೊಳಿಸಬಹುದು.
ಕ್ಯಾಮೆರಾ ಮತ್ತು ಮೈಕ್ರೋಫೋನ್. ನಿಮ್ಮ Spectacles ಸಾಧನವನ್ನು ನೀವು ನಿಮ್ಮ Spectacles ಆ್ಯಪ್‌ನೊಂದಿಗೆ ಪೇರ್ ಮಾಡಿದಾಗ, ಅದು ಕಾರ್ಯನಿರ್ವಹಿಸಲು ನಿಮ್ಮ Spectacles ಸಾಧನದಲ್ಲಿ ಕ್ಯಾಮೆರಾ ಮತ್ತು ಮೈಕ್ರೊಫೋನ್‌ಗೆ ಪ್ರವೇಶದ ಅಗತ್ಯವಿರುತ್ತದೆ. ನಿಮ್ಮ Spectacles ಸಾಧನದ ಬಳಕೆಯನ್ನು ನಿಲ್ಲಿಸುವ ಮೂಲಕ ನಿಮ್ಮ Spectacles ಸಾಧನದಲ್ಲಿ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗೆ Spectacles ಆ್ಯಪ್‌ನ ಪ್ರವೇಶವನ್ನು ನೀವು ತೆಗೆದುಹಾಕಬಹುದು.
ನೀವು ಚಿತ್ರೀಕರಿಸಿರುವುದನ್ನು ಅಳಿಸಿ. Spectacles ಆ್ಯಪ್ ಬಳಸಿ ನೀವು ಚಿತ್ರೀಕರಿಸಿರುವುದನ್ನು ಡೌನ್‌ಲೋಡ್ ಮಾಡಿದಾಗ, ನಿಮ್ಮ Spectacles ಸಾಧನದಲ್ಲಿ ನೀವು ಸೆರೆಹಿಡಿದಿರುವ ಚಿತ್ರಗಳು ಮತ್ತು ವೀಡಿಯೊ ರೆಕಾರ್ಡಿಂಗ್‌ಗಳನ್ನು ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ.
ನಾವು ಸಂಗ್ರಹಿಸುವ ಮಾಹಿತಿ
ನೀವು Spectacles ಬಳಸಿದಾಗ ನೀವು ನಮಗೆ ಒದಗಿಸುವ ಮಾಹಿತಿ, ನೀವು Spectacles ಬಳಸಿದಾಗ ನಾವು ರಚಿಸುವ ಮಾಹಿತಿ ಅಥವಾ ಈ ಕೆಳಗಿನವು ಸೇರಿದಂತೆ, ನಿಮ್ಮ ಅನುಮತಿಯೊಂದಿಗೆ ನಾವು ಸ್ವೀಕರಿಸುವ ಇತರ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ:
ಕ್ಯಾಮೆರಾ ಮತ್ತು ಆಡಿಯೋ ಮಾಹಿತಿ. ನಿಮಗೆ Spectacles ಅನುಭವವನ್ನು ಒದಗಿಸಲು, ನಾವು ಕ್ಯಾಮೆರಾ ಮತ್ತು ಮೈಕ್ರೋಫೋನ್‌ನಿಂದ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ:
ನಿಮ್ಮ ಕೈಗಳ ಕುರಿತ ಮಾಹಿತಿ. Spectacles ನಲ್ಲಿ ನ್ಯಾವಿಗೇಟ್ ಮಾಡಲು ನೀವು ನಿಮ್ಮ ಕೈಗಳೊಂದಿಗೆ ತೊಡಗಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಅಂಗೈಯನ್ನು ನೋಡುವ ಮೂಲಕ ನೀವು ಇನ್-ಲೆನ್ಸ್ ಮೆನುವನ್ನು ಪ್ರವೇಶಿಸುತ್ತೀರಿ ಮತ್ತು ನಿಮ್ಮ ಬೆರಳ ತುದಿಯಿಂದ ಲೆನ್ಸ್ ಅನುಭವದಲ್ಲಿ AR ವಸ್ತುಗಳನ್ನು ಪಿಂಚ್ ಮಾಡುತ್ತೀರಿ ಮತ್ತು ಎಳೆಯುತ್ತೀರಿ. ನಿಮ್ಮ ಕೈಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸದೆ ಇದು ಸಾಧ್ಯವಾಗುವುದಿಲ್ಲ. AR ಅನಿಮೇಟೆಡ್ ಕೈಗಳನ್ನು ರೆಂಡರ್ ಮಾಡಲು ಮತ್ತು ಕೈ ಸ್ಥಾನ ಮತ್ತು ಚಲನೆಯನ್ನು ಆಧರಿಸಿ ವಸ್ತುಗಳನ್ನು ಇರಿಸಲು ನಿಮ್ಮ ಕೈಬೆರಳಿನ ಕೀಲುಗಳ ನಡುವಿನ ಅಂದಾಜು ದೂರ, ಸ್ಥಾನ ಮತ್ತು ನಿಮ್ಮ ಕೈಗಳ ಚಲನೆ ಸೇರಿದಂತೆ ನಿಮ್ಮ ಕೈಗಳ ಗಾತ್ರವನ್ನು ನಾವು ನೋಡುತ್ತೇವೆ.
ನಿಮ್ಮ ಧ್ವನಿಯ ಕುರಿತ ಮಾಹಿತಿ. Spectacles ನಲ್ಲಿ — My AI — ರೀತಿಯ ವೈಶಿಷ್ಟ್ಯಗಳೊಂದಿಗೆ ಸಂವಹನ ನಡೆಸಲು ನೀವು ನಿಮ್ಮ ಧ್ವನಿ ಆಜ್ಞೆಗಳನ್ನು ಬಳಸುತ್ತೀರಿ ಅಂದರೆ ಪಠ್ಯ ಪ್ರತಿಲಿಪಿಗಳನ್ನು ರಚಿಸಲು ನಾವು ನಿಮ್ಮ ಆಡಿಯೊವನ್ನು ಪ್ರಕ್ರಿಯೆಗೊಳಿಸುತ್ತೇವೆ. ನೀವು Spectacles ಬಳಸಿದಾಗ ಮೈಕ್ರೊಫೋನ್ ನಿಮ್ಮ ಸುತ್ತಲಿನ ಶಬ್ದಗಳನ್ನು ಕೇಳಬಹುದು.
ನಿಮ್ಮ ಸುತ್ತಮುತ್ತಲ ಕುರಿತ ಮಾಹಿತಿ: ನೀವು ಇರುವ ಭೌತಿಕ ಸ್ಥಳದ ಕುರಿತ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ಉದಾಹರಣೆಗೆ, ಗೋಡೆಗಳು, ಕಿಟಕಿಗಳು ಮತ್ತು ಪೀಠೋಪಕರಣದಂತಹ ನಿಮ್ಮ ವಾತಾವರಣದಲ್ಲಿನ ವಸ್ತುಗಳನ್ನು ನಾವು ಗುರುತಿಸಬಹುದು ಮತ್ತು ಆ ವಸ್ತುಗಳ ಗಾತ್ರ, ಆಕಾರ ಮತ್ತು ದೂರವನ್ನು ನಾವು ಅಂದಾಜು ಮಾಡುತ್ತೇವೆ. ಈ ಮಾಹಿತಿಯು ತಲ್ಲೀನಗೊಳಿಸುವ AR ಅನುಭವವನ್ನು ನಿಮಗೆ ಒದಗಿಸಲು ನಮಗೆ ಸಹಾಯ ಮಾಡುತ್ತದೆ.
ಫಿಟ್ ಹೊಂದಾಣಿಕೆಗಳು. Spectacles ನಿಮಗೆ ಸೂಕ್ತವಾಗಿ ಹೊಂದಿಕೆಯಾಗುತ್ತವೆ ಎಂದು ಖಚಿತಪಡಿಸಿಕೊಳ್ಳಲು ಫಿಟ್ ಮತ್ತು ಆದ್ಯತೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ:
ಕಣ್ಣಿನ ದೂರ. ನಿಮ್ಮ ಕಣ್ಣುಗಳ ನಡುವಿನ ದೂರದ ಕುರಿತ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ಇದು ನಿಮಗೆ ಆರಾಮ, ದೃಷ್ಟಿಯ ಸ್ಪಷ್ಟತೆ ಮತ್ತು ಉತ್ತಮ AR ಅನುಭವವನ್ನು ಒದಗಿಸಲು ಸಹಾಯ ಮಾಡುತ್ತದೆ. ಈ ಮಾಹಿತಿಯನ್ನು ಒಂದೋ Spectacles ಆ್ಯಪ್ ಮೂಲಕ ನಮಗೆ ಸ್ವತಃ ನೀವೇ ಒದಗಿಸಬಹುದು ಅಥವಾ ನೀವು ಮೊದಲ ಬಾರಿ Spectacles ಬಳಸಿದಾಗ ಕ್ಯಾಮೆರಾದ ಮೂಲಕ ನಿಮಗಾಗಿ ಅದನ್ನು ನಾವು ಅಂದಾಜು ಮಾಡುತ್ತೇವೆ ಮತ್ತು ಸಂಗ್ರಹಿಸುತ್ತೇವೆ. ಸಂಗ್ರಹಿಸಿದ ಕಣ್ಣಿನ ದೂರದ ಮಾಹಿತಿಯು ನಿಮ್ಮ Spectacles ಸಾಧನದಲ್ಲಿ ನಿರಂತರವಾಗಿ ಇರುತ್ತದೆ. Spectacles ಆ್ಯಪ್‌ನಲ್ಲಿ ನೀವು ಯಾವುದೇ ಸಮಯದಲ್ಲಿ ನಿಮ್ಮ ಫಿಟ್ ಹೊಂದಾಣಿಕೆಯನ್ನು ಬದಲಾಯಿಸಬಹುದು.
ನಿಮ್ಮ ಕಣ್ಣಿನ ದೂರವನ್ನು ಅಂದಾಜು ಮಾಡಲು Spectacles iOS ಆ್ಯಪ್ ಬಳಸುವಾಗ, ನಿಖರ ಕಣ್ಣಿನ ದೂರ ಮುಖದ ಡೇಟಾವನ್ನು ಸೆರೆಹಿಡಿಯಲು ನಾವು ನಿಮ್ಮ ಫೋನ್‌ನಲ್ಲಿ TrueDepth ಕ್ಯಾಮೆರಾವನ್ನು ಬಳಸುತ್ತೇವೆ. ಅದಾಗ್ಯೂ, ಈ ಮಾಹಿತಿಯನ್ನು ನೈಜ ಸಮಯದಲ್ಲಿ ಬಳಸಲಾಗುತ್ತದೆ — ನಮ್ಮ ಸರ್ವರ್‌ಗಳಲ್ಲಿ ನಾವು ಈ ಮಾಹಿತಿಯನ್ನು ಶೇಖರಿಸುವುದಿಲ್ಲ ಅಥವಾ ತೃತೀಯ ಪಕ್ಷಗಳೊಂದಿಗೆ ಅದನ್ನು ಹಂಚಿಕೊಳ್ಳುವುದಿಲ್ಲ ಎನ್ನುವುದನ್ನು ಗಮನಿಸಿ.
ಸ್ಥಳ ಮಾಹಿತಿ. ನಿಮ್ಮ ಸ್ಥಳವನ್ನು ಸಕ್ರಿಯಗೊಳಿಸುವುದರಿಂದ ಸ್ಥಳ ನಿರ್ದಿಷ್ಟವಾದ ಲೆನ್ಸ್‌ಗಳು, ಸ್ಟಿಕ್ಕರ್‌ಗಳು, ಫಿಲ್ಟರ್‌ಗಳನ್ನು ಸೇರಿಸಲು ಮತ್ತು ನೀವು ಚಿತ್ರೀಕರಿಸಿದ ಫೋಟೋಗಳು ಮತ್ತು ವೀಡಿಯೊಗಳನ್ನು ಈ ಮಾಹಿತಿಯೊಂದಿಗೆ ಉಳಿಸಲು ನಿಮಗೆ ಅವಕಾಶ ಕಲ್ಪಿಸುತ್ತದೆ.
ಸೆರೆಹಿಡಿದ ಫೋಟೋಗಳು ಮತ್ತು ವೀಡಿಯೊಗಳು. Spectacles ಜೊತೆಗೆ ಫೋಟೋಗಳನ್ನು ತೆಗೆಯುವುದನ್ನು ಅಥವಾ ವೀಡಿಯೊ ಚಿತ್ರೀಕರಿಸುವುದನ್ನು ನೀವು ಆಯ್ಕೆ ಮಾಡಬಹುದು. ನೀವು ಚಿತ್ರೀಕರಿಸಿದ ವಿಷಯವನ್ನು Spectacles ಆ್ಯಪ್ ಬಳಸಿಕೊಂಡು ನೀವು ಡೌನ್‌ಲೋಡ್ ಮಾಡುವವರೆಗೆ ಅದು ಸಾಧನದಲ್ಲಿ ಉಳಿದಿರುತ್ತದೆ.
ನಾವು ಮಾಹಿತಿಯನ್ನು ಹೇಗೆ ಬಳಸುತ್ತೇವೆ
ನಮ್ಮ ಗೌಪ್ಯತೆ ನೀತಿಯಲ್ಲಿ ವಿವರಿಸಿರುವಂತೆ, Spectacles ಅನ್ನು ಕಾರ್ಯಾಚರಿಸುವುದು, ತಲುಪಿಸುವುದು ಮತ್ತು ನಿರ್ವಹಿಸುವುದರ ಆಚೆಗೆ ವಿವಿಧ ಉದ್ದೇಶಗಳಿಗಾಗಿ ನಾವು ನಿಮ್ಮ ಮಾಹಿತಿಯನ್ನು ಬಳಸುತ್ತೇವೆ. ಉದಾಹರಣೆಗೆ, ಇವುಗಳಿಗಾಗಿ ನಾವು ನಿಮ್ಮ ಮಾಹಿತಿಯನ್ನು ಬಳಸುತ್ತೇವೆ:
ಫಿಟ್ ಹೊಂದಾಣಿಕೆಗಳಂತಹ ನಿಮ್ಮ ಮಾಹಿತಿಯನ್ನು ಬಳಸಿಕೊಂಡು, ನಿಮ್ಮ Spectacles ವೈಯಕ್ತಿಕಗೊಳಿಸಲು.
ವರ್ಧಿತ ವಾಸ್ತವಕ್ಕಾಗಿ ನಮ್ಮ ಮೆಷಿನ್ ಲರ್ನಿಂಗ್ ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು.
ಬೇಡಿಕೆಯನ್ನು ಅರ್ಥಮಾಡಿಕೊಳ್ಳಲು ನೆರವು ಪಡೆದುಕೊಳ್ಳುವುದಕ್ಕಾಗಿ, ಪ್ರವೃತ್ತಿಗಳು ಮತ್ತು ಬಳಕೆಯ ಮಾದರಿಗಳನ್ನು ಕಂಡುಹಿಡಿಯಲು ಲೆನ್ಸ್‌ಗಳೊಂದಿಗೆ ತೊಡಗಿಸಿಕೊಳ್ಳುವುದು ಮತ್ತು ಮೆಟಾಡೇಟಾದಂತಹ ನಿಮ್ಮ ಮಾಹಿತಿಯನ್ನು ವಿಶ್ಲೇಷಿಸಲು.
ನಾವು ಮಾಹಿತಿಯನ್ನು ಹೇಗೆ ಹಂಚಿಕೊಳ್ಳುತ್ತೇವೆ
ನಮ್ಮ ಗೌಪ್ಯತೆ ನೀತಿಯಲ್ಲಿ ವಿವರಿಸಿರುವಂತೆ, ವಿವಿಧ ಕಾರಣಗಳಿಗಾಗಿ ಇತರರೊಂದಿಗೆ ನಿಮ್ಮ ಕುರಿತ ಮಾಹಿತಿಯನ್ನು ನಾವು ಹಂಚಿಕೊಳ್ಳುತ್ತೇವೆ. ಉದಾಹರಣೆಗೆ, ಜೋಡಿಸಲಾಗಿರುವ ಲೆನ್ಸ್‌ಗಳು ನಿಮ್ಮ ಪ್ರದರ್ಶನದ ಹೆಸರು, ಸಾಧನದ ಮಾಹಿತಿ, Bitmoji, ನಿರ್ದಿಷ್ಟ ಕ್ಯಾಮೆರಾ ಡೇಟಾ ಮತ್ತು ಜೋಡಿಸಲಾಗಿರುವ ಲೆನ್ಸ್‌ಗಳಲ್ಲಿ ಇತರ ಭಾಗಿಗಳೊಂದಿಗೆ ನೀವು ಕೈಗೊಳ್ಳುವ ಕ್ರಮಗಳನ್ನು ಹಂಚಿಕೊಳ್ಳಬಹುದು. ನಮ್ಮ ಲೆನ್ಸ್ ಡೆವಲಪರ್‌ಗಳು ಸೇರಿದಂತೆ, ಸೇವಾ ಪೂರೈಕೆದಾರರೊಂದಿಗೆ ಕೂಡ ನಿಮ್ಮ ಮಾಹಿತಿಯನ್ನು ನಾವು ಹಂಚಿಕೊಳ್ಳಬಹುದು.
ನೀವು Spectacles ನಲ್ಲಿ My AI ಅನ್ನು ಬಳಸಲು ಆಯ್ಕೆ ಮಾಡಿದರೆ, ನೀವು My AI ಗೆ ಕೇಳಬಹುದಾದ ಪ್ರಶ್ನೆಗಳಿಗೆ ಉತ್ತಮ ಹುಡುಕಾಟ ಫಲಿತಾಂಶಗಳು ಅಥವಾ ಉತ್ತರಗಳನ್ನು ಒದಗಿಸುವ ಸಲುವಾಗಿ — YouTube ನ API ಸೇವೆಗಳ ಬಳಕೆಯ ಮೂಲಕ ಅದರಂತಹ — ತೃತೀಯ ಪಕ್ಷದ ಪೂರೈಕೆದಾರರೊಂದಿಗೆ, ನಿಮ್ಮ ನಿರ್ದೇಶನದ ಮೇರೆಗೆ, ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಬಹುದು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅವರು ಹೇಗೆ ಪ್ರಕ್ರಿಯೆಗೊಳಿಸುತ್ತಾರೆ ಎಂದು ತಿಳಿದುಕೊಳ್ಳಲು ದಯವಿಟ್ಟು Google ನ ಗೌಪ್ಯತೆ ನೀತಿ ಓದಲು ಬಿಡುವು ಮಾಡಿಕೊಳ್ಳಿ.
ನಮ್ಮನ್ನು ಸಂಪರ್ಕಿಸಿ
ಈ ಗೌಪ್ಯತೆ ನೀತಿ ಅಥವಾ ನಮ್ಮ ಗೌಪ್ಯತೆ ಅಭ್ಯಾಸಗಳ ಕುರಿತು ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದರೆ, ನೀವು ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು.